Tag: Raymo

  • ಇಂದಿನಿಂದ ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಒಟಿಟಿಗೆ

    ಇಂದಿನಿಂದ ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಒಟಿಟಿಗೆ

    ವನ್ ಒಡೆಯರ್ (Pawan Wodeyar) ನಿರ್ದೇಶನದ ಇಶಾನ್ (Ishan) ಹಾಗೂ ಆಶಿಕಾ ರಂಗನಾಥ್ (Ashika Ranganath) ನಟನೆಯ ‘ರೇಮೊ’ (Raymo)ಸಿನಿಮಾ ಒಟಿಟಿ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದೆ. ಬಿಗ್ ಬಜೆಟ್, ಅದ್ದೂರಿ ಮೇಕಿಂಗ್, ಇಶಾನ್ ಸ್ಟೈಲಿಶ್ ಅವತಾರ ಹೀಗೆ ಸಾಕಷ್ಟು ಕಾರಣಗಳಿಂದ ‘ರೇಮೊ’ ನಿರೀಕ್ಷೆ ಹುಟ್ಟಿಸಿತ್ತು. ನವೆಂಬರ್ 25ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡು ಉತ್ತಮ ವಿಮರ್ಶೆ ಪಡೆದುಕೊಂಡ ಸಿನಿಮಾ ಇದೀಗ ZEE5 ಮೂಲಕ ಒಟಿಟಿ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದೆ.

    ಮಾರ್ಚ್ 10ರಂದು ‘ರೇಮೊ’ ಸಿನಿಮಾ ZEE5 ನಲ್ಲಿ ಬಿಡುಗಡೆಯಾಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಮತ್ತೊಂದು ಹಿಟ್ ಸಿನಿಮಾವನ್ನು ತನ್ನ ಪ್ರೇಕ್ಷಕರಿಗೆ ನೀಡುತ್ತಿದೆ ZEE5. ‘ವೇದ’ ಸಿನಿಮಾ ಬಿಡುಗಡೆಯಾಗಿ ಅತಿ ಕಡಿಮೆ ಅವಧಿಯಲ್ಲೇ 125 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ವೀವ್ಸ್ ಪಡೆದುಕೊಂಡಿತ್ತು. ಆ ಖುಷಿಯನ್ನು ZEE5 ಸೆಲೆಬ್ರೆಟ್ ಕೂಡ ಮಾಡಿತ್ತು. ಇದೀಗ ಅದರ ಬೆನ್ನಲ್ಲೇ ಅದ್ದೂರಿ ಮೇಕಿಂಗ್, ಮ್ಯೂಸಿಕಲ್ ಲವ್ ಸ್ಟೋರಿ ಮೂಲಕ ಗಮನ ಸೆಳೆದ ‘ರೇಮೊ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ. ಇದನ್ನೂ ಓದಿಮತ್ತೆಂದೂ ಮದುವೆಯಾಗಲಾರೆ ಎಂದು ಘೋಷಿಸಿದ ನಟಿ ರಾಖಿ ಸಾವಂತ್

    ‘ರೇಮೊ’ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ. ‘ರೋಗ್’ ಸಿನಿಮಾ ನಂತರ ಬ್ರೇಕ್ ಪಡೆದುಕೊಂಡಿದ್ದ ನಟ ಇಶಾನ್ ಸಾಕಷ್ಟು ತಯಾರಿಯೊಂದಿಗೆ, ನಯಾ ಲುಕ್ ನೊಂದಿಗೆ ಈ ಚಿತ್ರದಲ್ಲಿ ಕಂ ಬ್ಯಾಕ್ ಮಾಡಿದ್ದಾರೆ. ಶರತ್ ಕುಮಾರ್, ರಾಜೇಶ್ ನಟರಂಗ, ಅಚ್ಯುತ್ ಕುಮಾರ್, ಮಧು, ಶರಣ್ಯ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಜಯಾದಿತ್ಯ ಬ್ಯಾನರ್ ನಡಿ ಸಿ. ಆರ್. ಮನೋಹರ್ ಅದ್ದೂರಿಯಾಗಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸಿ. ಆರ್ ಗೋಪಿ ಸಹ ನಿರ್ಮಾಣವಿದೆ. ವೈದಿ ಕ್ಯಾಮೆರಾ ವರ್ಕ್, ಕೆ.ಎಂ. ಪ್ರಕಾಶ್ ಸಂಕಲನ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

  • ಆಶಿಕಾ ರಂಗನಾಥ್ ಕುಡಿದು ರಂಪಾಟ: ಚಿತ್ರದ ಮಾರ್ಕೆಟಿಂಗ್ ಟೀಮ್ ತಪ್ಪು ಎಂದ ಡೈರೆಕ್ಟರ್

    ಆಶಿಕಾ ರಂಗನಾಥ್ ಕುಡಿದು ರಂಪಾಟ: ಚಿತ್ರದ ಮಾರ್ಕೆಟಿಂಗ್ ಟೀಮ್ ತಪ್ಪು ಎಂದ ಡೈರೆಕ್ಟರ್

    ನಿನ್ನೆಯಷ್ಟೇ ನಟಿ ಆಶಿಕಾ ರಂಗನಾಥ್ ಕುಡಿದು ತೂರಾಡುತ್ತಿರುವ ಮತ್ತು ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸುವಂತಹ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ಸಿನಿಮಾದ ದೃಶ್ಯವಾ? ಅಥವಾ ನಿಜವಾಗಿಯೂ ಅವರು ಕುಡಿದು ತೂರಾಡಿದ್ದಾರಾ ಎಂಬ ಚರ್ಚೆ ಕೂಡ ಮೂಡಿತ್ತು. ಇದೀಗ ರೇಮೋ ಸಿನಿಮಾದ ನಿರ್ದೇಶಕರಿಂದಲೇ ಸ್ಪಷ್ಟನೆ ಬಂದಿದ್ದು, ಅದು ಆಶಿಕಾ ರಂಗನಾಥ್ ಕುಡಿದು ತೂರಾಡಿದ ದೃಶ್ಯವಲ್ಲ. ಸಿನಿಮಾದ ದೃಶ್ಯ. ನಮ್ಮ ಮಾರ್ಕೆಟಿಂಗ್ ಟೀಮ್ ತಪ್ಪಿನಿಂದಾಗಿ ಅದು ಲೀಕ್ ಆಗಿದೆ ಎಂದಿದ್ದಾರೆ.

    ಚುಟುಚುಟು ಖ್ಯಾತಿಯ ನಟಿ ಆಶಿಕಾ ರಂಗನಾಥ್ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಶೂಟಿಂಗ್ ಸ್ಪಾಟ್ ನಲ್ಲಿ ಕುಡಿದು, ಮಧ್ಯೆ ಬೆರಳು ತೋರಿಸುವಂತಹ ವಿಡಿಯೋ ಅದಾಗಿದ್ದು, ಈ ವಿಡಿಯೋಗೆ ನೆಗೆಟಿವ್ ಕಾಮೆಂಟ್ಸ್ ಹೆಚ್ಚಾಗಿ ಬಂದವು. ಇದು ಸಿನಿಮಾವೊಂದರ ದೃಶ್ಯವಾ ಅಥವಾ ಅವರ ನಟನೆಯ ಸಿನಿಮಾವೊಂದು ಮುಂದಿನ ವಾರ ಬಿಡುಗಡೆ ಆಗುತ್ತಿದ್ದು, ಆ ಸಿನಿಮಾದ ಪ್ರಮೋಷನ್ನಾ ಎನ್ನುವ ಅನುಮಾನ ಕೂಡ ಮೂಡಿತ್ತು.

    ಮೇಲ್ನೋಟಕ್ಕೆ ಈ ದೃಶ್ಯವು ಪವನ್ ಒಡೆಯರ್ ನಿರ್ದೇಶನದ ರೇಮೋ ಸಿನಿಮಾದ್ದು ಎಂದು ಹಲವರು ಹೇಳಿದ್ದರೆ, ಇನ್ನೂ ಕೆಲವರು ತಮಾಷೆಯಾಗಿ ಸೆಟ್ ನಲ್ಲಿ ಈ ರೀತಿ ಆಶಿಕಾ ನಡೆದುಕೊಂಡಿದ್ದಾರೆ ಎಂದೂ ಹೇಳಲಾಗಿತ್ತು. ಶೂಟಿಂಗ್ ಸ್ಪಾಟ್ ನಲ್ಲಿ ಗಲಾಟೆ ಮಾಡಿಕೊಂಡು ಈ ರೀತಿ ಅಸಭ್ಯವಾಗಿ ನಡೆದುಕೊಳ್ಳುವಂತಹ ಪ್ಲ್ಯಾನ್ ಸಿನಿಮಾ ಪ್ರಮೋಷನ್ ಗಾಗಿ ಮಾಡಿದ್ದು ಎಂದೂ ಊಹೆ ಮಾಡಲಾಗಿತ್ತು. ಇದನ್ನೂ ಓದಿ:ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್

    ಈವರೆಗೂ ಯಾವತ್ತೂ ವಿವಾದಕ್ಕೆ ಗುರಿಯಾದವರಲ್ಲ ಆಶಿಕಾ. ತಮ್ಮ ಪಾಡಿಗೆ ತಾವು ಇದ್ದವರು. ಪಬ್, ಗಲಾಟೆ, ಬಾಯ್ ಫ್ರೆಂಡ್ ಅಂತ ಹೆಸರು ಕೆಡಿಸಿಕೊಂಡವರಲ್ಲ. ಹಾಗಾಗಿ ಇದು ಸಿನಿಮಾದ ದೃಶ್ಯ ಅಥವಾ ಸಿನಿಮಾ ಪ್ರಮೋಷನ್ ಗಾಗಿ ಚಿತ್ರೀಕರಿಸಿರುವ ವಿಡಿಯೋ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ಸಿನಿಮಾದ ದೃಶ್ಯವೇ ಆಗಿದ್ದರೆ, ಆಶಿಕಾ ರೇಮೋ ಸಿನಿಮಾದಲ್ಲಿ ಯಾವ ರೀತಿಯ ಪಾತ್ರವನ್ನು ಮಾಡಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ.

    ಆಶಿಕಾ ಪ್ರತಿಭಾವಂತ ನಟಿ. ಎಂತಹ ಪಾತ್ರ ಕೊಟ್ಟರೂ ಮಾಡುವಂತಹ ಕಲಾವಿದೆ. ಹಾಗಾಗಿ ರೇಮೋ ಸಿನಿಮಾದಲ್ಲಿ ಅವರು ವಿಶೇಷ ಪಾತ್ರವನ್ನು ನಿರ್ವಹಿಸಿದ್ದಾರೆ. ಈವರೆಗೂ ಮಾಡದೇ ಇರುವಂತಹ ಪಾತ್ರ ಅದಾಗಿದೆ ಎಂದು ಹೇಳಿದ್ದಾರೆ. ಈ ಸಿನಿಮಾದಲ್ಲಿ ನಾಯಕನಷ್ಟೇ ನಾಯಕಿಗೂ ಮಹತ್ವ ನೀಡಲಾಗಿದೆ ಎನ್ನುವುದು ನಿರ್ದೇಶಕ ಪವನ್ ಒಡೆಯರ್ ಅವರು ಮಾತು.

    Live Tv
    [brid partner=56869869 player=32851 video=960834 autoplay=true]

  • ‘ರೇಮೊ’  ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ ಹಾರೈಸಿದ ಶಿವರಾಜ್ ಕುಮಾರ್

    ‘ರೇಮೊ’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ ಹಾರೈಸಿದ ಶಿವರಾಜ್ ಕುಮಾರ್

    ಸಿ.ಆರ್.ಮನೋಹರ್ ನಿರ್ಮಿಸಿರುವ, ಖ್ಯಾತ ನಿರ್ದೇಶಕ ಪವನ್ ಒಡೆಯರ್ (Pawan Wodeyar) ನಿರ್ದೇಶನದ ‘ರೇಮೊ’ (Raymo) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.  ಕರುನಾಡ ಚಕ್ರವರ್ತಿ ಶಿವರಾಜಕುಮಾರ್  ‘ರೇಮೊ’ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.  ಇಶಾನ್ ಮತ್ತು ಆಶಿಕಾ ರಂಗನಾಥ್ ಈ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ‘ಕನ್ನಡ ಚಿತ್ರರಂಗ ಯಾರಿಗೂ ಕಡಿಮೆ ಇಲ್ಲ. “ಕಾಂತಾರ” ಚಿತ್ರ ನಮಗೆಲ್ಲ ಒಂದು ಹೆಮ್ಮೆ. ಆ ಚಿತ್ರದ ಟ್ರೇಲರ್ ಮತ್ತು ಸಾಂಗ್ ನೋಡಿ ನಾನು ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿದ್ದೆ. ‘ರೇಮೊ’ ಕೂಡ ಅದೇ ರೀತಿ ಸೂಪರ್ ಹಿಟ್ ಆಗಲಿ ಅಂತ ದೇವರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಇಶಾನ್ ಹಾಗೂ ಆಶಿಕಾ ಮುದ್ದಾಗಿ ಕಾಣುತ್ತಿದ್ದಾರೆ.  ನಿರ್ದೇಶಕ ಪವನ್ ಒಡೆಯರ್ ಬಗ್ಗೆ ಹೇಳುವಂತೆಯೇ ಇಲ್ಲ. ಸಿ.ಆರ್. ಮನೋಹರ್ ಅವರಂತಹ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಬೇಕು’ ಎಂದು ಶಿವರಾಜಕುಮಾರ್ (Shivraj Kumar) ಹೇಳಿದರು.

    ‘ರೇಮೊ’ ಚಿತ್ರದ ಕೆಲಸ ಶುರುವಾಗಿ 3 ವರ್ಷ ಆಯಿತು. ಈಗ ಬಿಡುಗಡೆ ಹಂತಕ್ಕೆ ಬಂದಿದೆ. ನನ್ನನ್ನು ಚಿತ್ರರಂಗಕ್ಕೆ ಬರಲು ಹೇಳಿದ್ದು ಶಿವಣ್ಣ. ಇವತ್ತು ಅವರಿಂದಲೇ ನಮ್ಮ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಖುಷಿಯಾಗಿದೆ. ನವೆಂಬರ್ 25 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಅಂದೇ ನಮ್ಮ ಚಿತ್ರವನ್ನು ನೋಡುವುದಾಗಿ ಶಿವಣ್ಣ ಹೇಳಿದ್ದಾರೆ.  ಅವರೇ ನನಗೆ ಸ್ಫೂರ್ತಿ. ನಾನು ಎಷ್ಟೇ ಸಿನಿಮಾ ಮಾಡಬಹುದು. ಆದರೆ ‘ರೇಮೊ’ ಚಿತ್ರ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ ಎನ್ನುತ್ತಾರೆ ನಾಯಕ ಇಶಾನ್. ಇದನ್ನೂ ಓದಿ:ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಶೋಕ್ ಕಶ್ಯಪ್

    ನಟಿ ಆಶಿಕಾ ರಂಗನಾಥ್ ಅವರಿಗೂ ‘ರೇಮೊ’ ಚಿತ್ರ ವಿಶೇಷ ಅಂತೆ. ‘ಇಷ್ಟು ದಿನ ನನ್ನನ್ನು ಕ್ಯೂಟ್ ಹುಡುಗಿಯ ಪಾತ್ರದಲ್ಲಿ ನೋಡಿದ್ದೀರಿ. ಆದರೆ ಈ ಸಿನಿಮಾದಲ್ಲಿನ ಪಾತ್ರ ಭಿನ್ನವಾಗಿದೆ.  ಈವರೆಗೆ ನಾನು ಮಾಡಿದ ಪಾತ್ರಗಳಲ್ಲಿ ಇದೇ ಬೆಸ್ಟ್. ಹೀರೋಗೆ ಸಮನಾಗಿ ಇರುವಂತಹ ಪಾತ್ರ ನನಗೆ ಸಿಕ್ಕಿದೆ. ಅದಕ್ಕೆ ನನ್ನನ್ನು ಆಯ್ಕೆ ಮಾಡಿದ ಪವನ್ ಒಡೆಯರ್   ಅವರಿಗೆ ಧನ್ಯವಾದಗಳು’ ಎನ್ನುತ್ತಾರೆ (Ashika Ranganath) ಆಶಿಕಾ ರಂಗನಾಥ್.

    ಪ್ರೀತಿಯಲ್ಲಿ ಹಲವು ವಿಧಗಳಿದೆ. ಅದರಲ್ಲಿ ನಾನು ಮ್ಯೂಸಿಕಲ್ ಲವ್ ಸ್ಟೋರಿ ಆಯ್ಕೆ ಮಾಡಿಕೊಂಡಿದ್ದೀನಿ. ಈ ಚಿತ್ರದಲ್ಲಿ ಎಮೋಷನ್ ಸಹ ಇದೆ. ವೈದಿ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರವನ್ನು ಮತ್ತಷ್ಟು ಸುಂದರವಾಗಿಸಿದೆ. ಇಶಾನ್ ಹಾಗೂ ಆಶಿಕಾ ರಂಗನಾಥ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ಪವನ್ ಒಡೆಯರ್.

    ನಿರ್ಮಾಪಕ ಸಿ.ಆರ್.ಮನೋಹರ್  ಶಿವರಾಜಕುಮಾರ್ ಅವರನ್ನು ಸನ್ಮಾನಿಸಿದರು. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು. ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಅವರು ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ,  ವೈದಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಪಿ. ಗುಣಶೇಖರನ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ರಾಜೇಶ್ ನಟರಂಗ, ಶರಣ್ಯ ಸೇರಿದಂತೆ ಹಲವು ನಟ ನಟಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಇಶಾನ್- ಆಶಿಕಾ ರಂಗನಾಥ್ ಜೋಡಿಯ ‘ರೇಮೊ’ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

    ಇಶಾನ್- ಆಶಿಕಾ ರಂಗನಾಥ್ ಜೋಡಿಯ ‘ರೇಮೊ’ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

    ನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನೀಡಿರುವ ಸಿ.ಆರ್. ಮನೋಹರ್ ಅವರ ನಿರ್ಮಾಣದ , ಉತ್ತಮ ಪ್ರೇಮಕಥೆಯುಳ್ಳ ಚಿತ್ರಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್ (Pawan Wodeyar) ನಿರ್ದೇಶನದ ಹಾಗೂ ಸ್ಪುರದ್ರೂಪಿ ನಟ ಇಶಾನ್ – ಚೆಲುವೆ ಆಶಿಕಾ ರಂಗನಾಥ್ ನಾಯಕ-ನಾಯಕಿಯಾಗಿ  ನಟಿಸಿರುವ, ಬ್ಯೂಟಿಫುಲ್‌ ಮ್ಯೂಸಿಕಲ್ ಲವ್ ಸ್ಟೋರಿ “ರೇಮೊ” (Raymo) ನವೆಂಬರ್ 25 ರಂದು ಬಿಡುಗಡೆಯಾಗಲಿದೆ. ಸಿ.ಆರ್.ಗೋಪಿ ಈ ಚಿತ್ರದ ಸಹ ನಿರ್ಮಾಪಕರು.

    ನಾನು ಮೊದಲ ಬಾರಿ ಇಶಾನ್ (Ishaan) ಅವರನ್ನು ಭೇಟಿ ಮಾಡಿದ್ದು ದುಬೈನಲ್ಲಿ.  ಇಷ್ಟು ಚೆನ್ನಾಗಿದ್ದಾರೆ. ಇವರನ್ನು ಹೀರೋ ಮಾಡಬೇಕು ಅಂದು ಕೊಂಡೆ. ನಂತರ “ರೇಮೊ” ಚಿತ್ರದ ಕಥೆ ಬರೆದೆ. 2019ರಲ್ಲಿ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಯಿತು. ಆನಂತರ ಹೈದರಾಬಾದ್, ಜಮ್ಮು-ಕಾಶ್ಮೀರ, ಸೌತ್ ಆಫ್ರಿಕಾ, ಸಿಂಗಾಪುರ ಮುಂತಾದ ಕಡೆ ಚಿತ್ರೀಕರಣ ನಡೆಸಲಾಯಿತು. ಇದನ್ನೂ ಓದಿ:ಸಿಮ್ ಖರೀದಿಸಲು ಬಂದ ನಟಿಯನ್ನು ಕೂಡಿ ಹಾಕಿದ ಕಚೇರಿ ಸಿಬ್ಬಂದಿ

    ಇದೊಂದು ಮ್ಯೂಸಿಕಲ್  ಲವ್ ಸ್ಟೋರಿ. ಮ್ಯಾಜಿಕಲ್‌ ಕಂಪೋಸರ್  ಅರ್ಜುನ್ ಜನ್ಯ ಅವರು ಸಂಗೀತ ನೀಡಿರುವ ಆರು ಅದ್ಭುತ ಹಾಡುಗಳು ಈ ಚಿತ್ರದಲ್ಲಿದೆ.   ಇಶಾನ್ – ಆಶಿಕಾ ರಂಗನಾಥ್  (Ashika Ranganath) ಅವರ  ಸುಂದರ ಜೋಡಿಯನ್ನು ತೆರೆ ಮೇಲೆ ನೋಡಿದವರು ಫಿದಾ ಆಗುವುದು ಖಂಡಿತಾ. ವೈದಿ ಅವರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ರೇಮೊ” ಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು.

    ಸದ್ಯದಲ್ಲೇ ಲಿರಿಕಲ್ ಸಾಂಗ್, ಒಂದು ವಿಡಿಯೋ ಸಾಂಗ್ ಮತ್ತು ಟ್ರೇಲರ್ ಬಿಡುಗಡೆ (release) ಮಾಡುತ್ತೇವೆ. “ರೇಮೊ” ಚಿತ್ರದಲ್ಲಿ ಪರಿಶುದ್ಧ ಪ್ರೇಮಕಥೆಯೊಂದಿಗೆ ಭಾವನಾತ್ಮಕ ಸನ್ನಿವೇಶಗಳು ನೋಡುಗರ ಮನಸ್ಸಿಗೆ ಹತ್ತಿರವಾಗಲಿದೆ. ನವೆಂಬರ್ 25 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರವನ್ನು ತೆರೆಯ ಮೇಲೆ ನೋಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ. ನೀವೆಲ್ಲರು ನೋಡಿ ಹರಿಸಿ ಎನ್ನುತ್ತಾರೆ ನಿರ್ದೇಶಕ ಪವನ್ ಒಡೆಯರ್.

    Live Tv
    [brid partner=56869869 player=32851 video=960834 autoplay=true]