Tag: Rayan Sarja

  • ನನ್ನ ಪಾಲಿಗೆ ಇಂದು, ಭವಿಷ್ಯವೂ ನೀನೇ : ಚಿರು ನೆನೆದ ಮೇಘನಾ ರಾಜ್

    ನನ್ನ ಪಾಲಿಗೆ ಇಂದು, ಭವಿಷ್ಯವೂ ನೀನೇ : ಚಿರು ನೆನೆದ ಮೇಘನಾ ರಾಜ್

    ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ (Chiranjeevi Sarja) ನಿಧನರಾಗಿ ಇಂದಿಗೆ ಮೂರು ವರ್ಷ. ಹೃದಯಾಘಾತದಿಂದ ಹಠಾತ್ತಾಗಿ ನಿಧನ ಹೊಂದಿದ ಚಿರು ಆಗಷ್ಟೇ ಮದುವೆಯಾಗಿದ್ದರು. ಅಸಂಖ್ಯಾತ ಅಭಿಮಾನಿಗಳ ಜೊತೆ ಪ್ರೀತಿಯ ಮಡದಿಯನ್ನೂ ಅವರು ಬಿಟ್ಟು ಹೋದರು. ಈ ನೋವಿನಲ್ಲೇ ಬದುಕುತ್ತಿರುವ ಪತ್ನಿ, ನಟಿ ಮೇಘನಾ ರಾಜ್, ಇಂದು ಪತಿಗಾಗಿ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ಚಿರು ಜೊತೆಗಿನ ಆತ್ಮೀಯ ಫೋಟೋವನ್ನು ಹಂಚಿಕೊಂಡಿರುವ ಮೇಘನಾ ರಾಜ್, ‘ನನಗೆ ನಿನ್ನೆ, ನಾಳೆ, ಭವಿಷ್ಯವೂ ನೀನೇʼ ಎಂದು ಭಾವುಕರಾಗಿ ಸಾಲುಗಳನ್ನು ಬರೆದಿದ್ದಾರೆ. ಚಿರುವನ್ನು ಹಿಂದಿನಿಂದ ತಬ್ಬಿಕೊಂಡ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋ ಮತ್ತು ಮೇಘನಾ ರಾಜ್ ಬರೆದ ಸಾಲುಗಳು ನಿಜಕ್ಕೂ ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತವೆ. ಇದನ್ನೂ ಓದಿ:ಪ್ರಣಿತಾ ಹಾಟ್‌ನೆಸ್‌ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು

    ಚಿರಂಜೀವಿ ಸರ್ಜಾ ಅವರನ್ನು ಪುತ್ರನಲ್ಲಿ ಕಾಣುತ್ತಿರುವ ಮೇಘನಾ ರಾಜ್ (Meghana Raj) ಮೊನ್ನೆಯಷ್ಟೇ ರಾಯನ್ ರಾಜ್ ಸರ್ಜಾ (Rayaan Raj Sarja) ರನ್ನು ಶಾಲೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಮೇಘನಾ ರಾಜ್, ಪೋಸ್ಟ್ ಹಂಚಿಕೊಂಡು ಭಾವುಕರಾಗಿದ್ದರು. ಅವರ ಆ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.

    ಸರ್ಜಾ ಕುಟುಂಬದ ಖುಷಿ ರಾಯನ್, ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ಮಗನ ಆರೈಕೆಯಲ್ಲಿ ತನ್ನ ನೋವನ್ನೆಲ್ಲ ಮರೆಯಲು ನಟಿ ಮೇಘನಾ ಪ್ರಯತ್ನಿಸುತ್ತಿದ್ದಾರೆ. ಮಗನ ಖುಷಿಯಲ್ಲಿ ತನ್ನ ಖುಷಿಯನ್ನ ಕಾಣುತ್ತಿದ್ದಾರೆ. ಹೀಗಿರುವಾಗ ಪುತ್ರ ರಾಯನ್ ಶಾಲೆಗೆ ಕಾಲಿಟ್ಟಿರುವ ಬಗ್ಗೆ ನಟಿ ಪೋಸ್ಟ್ ಶೇರ್ ಮಾಡಿದ್ದರು.

    ನಾವು ಪೋಷಕರಾದ ಮೇಲೆ ಮಕ್ಕಳು ಮಾತ್ರವಲ್ಲ ನಾವು ಕೂಡ ಜೀವನ ಪ್ರತಿಯೊಂದು ಮೈಲಿಗಲ್ಲು ದಾಟುತ್ತೀವಿ ಎಂದು ಮೇಘನಾ ಬರೆದುಕೊಂಡಿದ್ದು. ಇಂದು ನಮ್ಮ ಜೀವನದ ತುಂಬಾ ಸ್ಪೆಷಲ್ ದಿನವಾಗಿದೆ. ರಾಯನ್ ರಾಜ್ ಸರ್ಜಾ ಸ್ಕೂಲ್‌ನ ಮೊದಲ ದಿನ ಇಂದು. ನನ್ನ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ವಿದ್ಯಾಭ್ಯಾಸ, ಜ್ಞಾನ ಹಾಗೂ ಜೀವನದ ಅತಿ ಅಮೂಲ್ಯವಾದ ಪಾಠಗಳನ್ನು ಕಲಿಯುವುದ್ದಕ್ಕೆ ರಾಯನ್ ಮೊದಲ ಹೆಜ್ಜೆ ಇಡುತ್ತಿದ್ದಾನೆ. ನಿಮ್ಮ ಹಾರೈಕೆ ಮತ್ತು ಪ್ರೀತಿ ಅವನ ಮೇಲಿರಲಿ ಎಂದು ಮೇಘನಾ ರಾಜ್ ಹೇಳಿದ್ದರು.

     

    ಇನ್ನೂ ಮೇಘನಾ ರಾಜ್ ಅವರು ‘ತತ್ಸಮ ತದ್ಭವ’ (Tatsama Tadbhava) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಆಗಿದ್ದಾರೆ. ಫೀಮೇಲ್ ಓರಿಯೆಂಟೆಡ್ ಚಿತ್ರದಲ್ಲಿ ಮೇಘನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  • ನಾನು  ನಗುತ್ತಿರುವುದು ನಿನಗಾಗಿ ಮಾತ್ರ : ಚಿರು ಹುಟ್ಟು ಹಬ್ಬಕ್ಕೆ ಮೇಘನಾ ಭಾವುಕ ಸಾಲು

    ನಾನು ನಗುತ್ತಿರುವುದು ನಿನಗಾಗಿ ಮಾತ್ರ : ಚಿರು ಹುಟ್ಟು ಹಬ್ಬಕ್ಕೆ ಮೇಘನಾ ಭಾವುಕ ಸಾಲು

    ಇಂದು ನಟ ಚಿರಂಜೀವಿ ಸರ್ಜಾ ಅವರ ಹುಟ್ಟು ಹಬ್ಬ (Birthday). ಈ ಹುಟ್ಟು ಹಬ್ಬಕ್ಕೆ ಚಿರು ಪತ್ನಿ ಮೇಘನಾ ರಾಜ್ (Meghana Raj) ಭಾವುಕ ಸಾಲುಗಳನ್ನು ಬರೆದಿದ್ದಾರೆ. ಜೊತೆಗೆ ಇಬ್ಬರೂ ನಗುತ್ತಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಫೋಟೋ ಜೊತೆ ಕೆಲ ಸಾಲುಗಳನ್ನು ಬರೆದಿರುವ ಮೇಘನಾ, ‘ನನ್ನ ಖುಷಿಗೆ ಹುಟ್ಟು ಹಬ್ಬದ ಶುಭಾಶಯಗಳು. ಇಂದು ನಾನು ನಗುತ್ತಿದ್ದೇನೆ ಅಂದರೆ, ಅದು ನಿನಗಾಗಿ ಮಾತ್ರ. ನನ್ನ ಆತ್ಮೀಯ ಪತಿ ಚಿರು.. ಐ ಲವ್ ಯೂ’ ಎಂದು ಬರೆದಿದ್ದಾರೆ.

    ಚಿರು (Chiranjeevi Sarja) ಮತ್ತು ಮೇಘನಾ ರಾಜ್ ಮೊದ ಮೊದಲು ಕಲಾವಿದರಾಗಿ ಪರಿಚಯವಾದವರು. ಆನಂತರ ಇಬ್ಬರಲ್ಲೂ ಸ್ನೇಹ ಚಿಗುರಿತು. ಸ್ನೇಹ ಪ್ರೀತಿಯಾಗಿ ಬದಲಾಯಿತು. ಹೀಗಾಗಿ ಇಬ್ಬರೂ ಪರಸ್ಪರ ಆ ಪ್ರೀತಿಯನ್ನು ಒಪ್ಪಿಕೊಂಡು, ಮನೆಯವರ ಅನುಮತಿ ಪಡೆದುಕೊಂಡೇ ಮದುವೆಯಾದರು. ಈ ಮದುವೆ ಸಿನಿಮಾ ರಂಗದ ಅನೇಕರು ಸಾಕ್ಷಿಯಾದರು. ಇದನ್ನೂ ಓದಿ:ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ: ಗುರೂಜಿ ಮೇಲೆ ಕಿಚ್ಚ ಕೆಂಡಾಮಂಡಲ

    ಮೇಘನಾ ಮತ್ತು ಚಿರು ಅವರದ್ದು ವಿಶೇಷ ರೀತಿಯ ಮದುವೆ. ಮೇಘನಾ ರಾಜ್ ಕುಟುಂಬ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ಮದುವೆ ಮಾಡಿದರೆ, ಚಿರು ಕುಟುಂಬ ಹಿಂದೂ ಸಂಪ್ರದಾಯದಂತೆ ಇಬ್ಬರನ್ನೂ ಸತಿಪತಿಯಾಗಿಸಿದರು. ಎರಡೂ ಕುಟುಂಬಗಳು ಒಪ್ಪಿಕೊಂಡು ಅದ್ದೂರಿಯಾಗಿಯೇ ಮದುವೆ ಮಾಡಿದರು. ಆದರೆ, ಎರಡೂ ಕುಟುಂಬಕ್ಕೂ ಈ ಆನಂದ ಹೆಚ್ಚು ಕಾಲ ಉಳಿಯಲಿಲ್ಲ.

    ಚಿರಂಜೀವಿ ಸರ್ಜಾ ಅತೀ ಚಿಕ್ಕ ವಯಸ್ಸಿನಲ್ಲೇ 2020ರ ಜೂನ್ 7 ರಂದು ಹೃದಯಾಘಾತದಿಂದ ನಿಧನರಾದರು. ಜೊತೆಗೆ ಮೇಘನಾಗೆ ಉಡುಗೊರೆ ಎನ್ನುವಂತೆ ಪುತ್ರ ರಾಯನ್ ರಾಜ್ ಸರ್ಜಾ (Rayan Sarja)  ಮಗುವನ್ನು ಕೊಟ್ಟು ಹೋಗಿದ್ದಾರೆ. ಮಗುವಲ್ಲೇ ಪತಿಯನ್ನೂ ಕಾಣುತ್ತ ದಿನಗಳನ್ನು ದೂಡುತ್ತಿದ್ದಾರೆ ಮೇಘನಾ ರಾಜ್.

    Live Tv
    [brid partner=56869869 player=32851 video=960834 autoplay=true]