Tag: Rawalpindi

  • Pakistan | ಹಳಿತಪ್ಪಿದ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ – 30 ಪ್ರಯಾಣಿಕರಿಗೆ ಗಾಯ, ಮೂವರು ಗಂಭೀರ

    Pakistan | ಹಳಿತಪ್ಪಿದ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ – 30 ಪ್ರಯಾಣಿಕರಿಗೆ ಗಾಯ, ಮೂವರು ಗಂಭೀರ

    ಇಸ್ಲಾಮಾಬಾದ್: ಲಾಹೋರ್‌ನಿಂದ (Lahore) ರಾವಲ್ಪಿಂಡಿಗೆ (Rawalpindi) ಹೊರಟಿದ್ದ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ನ 10 ಭೋಗಿಗಳು ಹಳಿತಪ್ಪಿರುವ ಘಟನೆ ಶೇಖುಪುರ ಜಿಲ್ಲೆಯ ಕಲಾ ಶಾ ಕಾಕು ಎಂಬಲ್ಲಿ ನಡೆದಿದೆ.

    ಶುಕ್ರವಾರ ಸಂಜೆ ಲಾಹೋರ್ ರೈಲು ನಿಲ್ದಾಣದಿಂದ ಹೊರಟ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ ಸುಮಾರು ಅರ್ಧ ಗಂಟೆಯ ಬಳಿಕ ಹಳಿತಪ್ಪಿದೆ. ಪರಿಣಾಮ ರೈಲಿನಲ್ಲಿದ್ದ 30 ಪ್ರಯಾಣಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸಲ್ಲ, ಇದು ಒಳ್ಳೆಯ ಹೆಜ್ಜೆ – ಡೊನಾಲ್ಡ್‌ ಟ್ರಂಪ್‌

    ಈ ಕುರಿತು ಪಾಕಿಸ್ತಾನ ರೈಲ್ವೆ ಮಾಹಿತಿ ಹಂಚಿಕೊಂಡಿದ್ದು, ಅವಘಡ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಕಾರ್ಯಾಚರಣೆ ನಡೆಸಿವೆ. ಇನ್ನೂ ಭೋಗಿಗಳ ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ಸಿಬ್ಬಂದಿ ರಾತ್ರಿಯಿಡಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದೆ.

    ಅವಘಡದಲ್ಲಿ 1,000ಕ್ಕೂ ಅಧಿಕ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾದವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿ ಮಾಡಿದೆ.

    ಈ ಕುರಿತು ರೈಲ್ವೆ ಸಚಿವ ಮುಹಮ್ಮದ್ ಹನೀಫ್ ಅಬ್ಬಾಸಿ (Muhammad Hanif Abbasi) ಮಾತನಾಡಿ, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಭವಿಷ್ಯದಲ್ಲಿ ಈ ರೀತಿಯ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ರೈಲ್ವೆ ಸೌಕರ್ಯವನ್ನು ಸುಧಾರಿಸುತ್ತೇವೆ. ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಜೊತೆಗೆ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ ಹಳಿತಪ್ಪಿದ ಘಟನೆ ಸಂಬಂಧ ತನಿಖೆ ನಡೆಸಿ 7 ದಿನಗಳ ಒಳಗೆ ಸಮಗ್ರ ವರದಿ ಸಲ್ಲಿಸಲು ಸೂಚಿಸಿದ್ದಾರೆ.ಇದನ್ನೂ ಓದಿ: ಕಿಡ್ನ್ಯಾಪ್‌ & ಮರ್ಡರ್ ಕೇಸ್‌ – ಬಾಲಕನ ಮನೆಯಲ್ಲಿ ಚಾಲಕನಾಗಿದ್ದವನಿಂದಲೇ ಕೃತ್ಯ

  • ಭಾರತದ ದಾಳಿಗೆ ಬೆದರಿ ರಾವಲ್ಪಿಂಡಿಯಿಂದ ಪಾಕ್‌ ಸೇನಾ ಪ್ರಧಾನ ಕಚೇರಿ ಇಸ್ಲಾಮಾಬಾದ್‌ಗೆ ಶಿಫ್ಟ್‌!

    ಭಾರತದ ದಾಳಿಗೆ ಬೆದರಿ ರಾವಲ್ಪಿಂಡಿಯಿಂದ ಪಾಕ್‌ ಸೇನಾ ಪ್ರಧಾನ ಕಚೇರಿ ಇಸ್ಲಾಮಾಬಾದ್‌ಗೆ ಶಿಫ್ಟ್‌!

    – ಚಕ್ಲಾಲಾದ ವಾಯುನೆಲೆಯ ಮೇಲೆ ಭಾರತ ದಾಳಿ

    ಇಸ್ಲಾಮಾಬಾದ್‌: ಭಾರತದ (India) ದಾಳಿಗೆ ಬೆದರಿರುವ ಪಾಕಿಸ್ತಾನ (Pakistan) ಸೇನೆ ರಾವಲ್ಪಿಂಡಿಯಲ್ಲಿರುವ ತನ್ನ ಪ್ರಧಾನ ಕಚೇರಿಯನ್ನು (GHQ) ರಾಜಧಾನಿ ಇಸ್ಲಾಮಾಬಾದ್‌ಗೆ (Islamabad) ಶಿಫ್ಟ್‌ ಮಾಡಲು ಮುಂದಾಗುತ್ತಿದೆ.

    ಸದ್ಯ ಪಾಕಿಸ್ತಾನದ ಸೇನಾ ಜನರಲ್ ಪ್ರಧಾನ ಕಚೇರಿ(GHQ) ರಾವಲ್ಪಿಂಡಿಯ ಚಕ್ಲಾಲಾದ ನೂರ್‌ ಖಾನ್‌ ವಾಯು ನೆಲೆಯ ಬಳಿಯಿದೆ. ಮೇ 10 ರಂದು ಭಾರತ ಪಾಕ್‌ ವಾಯುನೆಲೆಯಗಳ ಮೇಲೆ ಭೀಕರ ವಾಯುದಾಳಿ ನಡೆಸಿತು. ಚಕ್ಲಾಲಾ ವಾಯು ನೆಲೆ ಮೇಲೆಯೂ ದಾಳಿ ನಡೆಸಿ ಧ್ವಂಸ ಮಾಡಿತ್ತು.

    ಭವಿಷ್ಯದಲ್ಲಿ ಭಾರತ ದಾಳಿ ಮಾಡಬಹುದು ಎಂಬ ಭೀತಿ ಎದುರಿಸುತ್ತಿರುವ ಪಾಕಿಸ್ತಾನ ಸೇನೆ ತನ್ನ ಪ್ರಧಾನ ಕಚೇರಿಯನ್ನು ಇಸ್ಲಾಮಾಬಾದ್‌ಗೆ ಸ್ಥಳಾಂತರಿಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.

    ಇಸ್ಲಾಮಾಬಾದ್‌ನಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ರಾವಲ್ಪಿಂಡಿಯ (Rawalpindi) ಚಕ್ಲಾಲಾ ನೂರ್ ಖಾನ್ ವಾಯುನೆಲೆಯು ಪಾಕಿಸ್ತಾನದ GHQ ಪಕ್ಕದಲ್ಲಿದೆ ಮತ್ತು ಪ್ರಮುಖ ಸಾರಿಗೆ ವಿಮಾನಗಳು, ಕಣ್ಗಾವಲು ವ್ಯವಸ್ಥೆಗಳು ಮತ್ತು ಇಂಧನ ತುಂಬುವ ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್‌ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?

    ತನ್ನ ಸೇನಾ ಜನರಲ್ ಪ್ರಧಾನ ಕಚೇರಿಯ ಜೊತೆ ಸೇನಾ ಮುಖ್ಯಸ್ಥರ ನಿವಾಸವನ್ನು ಸಹ ಸ್ಥಳಾಂತರಿಸಲಾಗುತ್ತದೆ ಎಂದು ವರದಿಯಾಗಿದೆ.

    ಭಾರತದ ದಾಳಿಗೆ ಬೆದರಿದ ಪಾಕ್‌ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ (Asim Munir) ಜೀವಭಯದಿಂದ ಸೇನಾ ಬಂಕರ್‌ (Bunker) ಒಳಗಡೆ ಅಡಗಿದ್ದ ವಿಚಾರ 4 ದಿನ ಹಿಂದೆ ಬೆಳಕಿಗೆ ಬಂದಿತ್ತು.  ಇದನ್ನೂ ಓದಿ: IMF ಸಾಲವನ್ನು ಪಾಕ್ ಪರೋಕ್ಷವಾಗಿ ಭಯೋತ್ಪಾದನೆಗೆ ಬಳಸ್ತಿದೆ – ರಾಜನಾಥ್ ಸಿಂಗ್

    ರಾವಲ್ಪಿಂಡಿಯಲ್ಲಿರುವ ನೂರ್‌ ಖಾನ್‌ ನೆಲೆಯ ಮೇಲೆ ದಾಳಿ ನಡೆಸಿದ ನಂತರ ಮುಂದೆ ಭಾರತ ತನ್ನ ಮೇಲೂ ದಾಳಿ ನಡೆಸಬಹುದು ಎಂದು ಭಾವಿಸಿ ಮುನೀರ್‌ ಜನರಲ್ ಹೆಡ್‌ಕ್ವಾರ್ಟರ್ಸ್ (ಜಿಎಚ್‌ಕ್ಯು) ನಲ್ಲಿರುವ ಕೋಟೆಯ ಬಂಕರ್‌ ಒಳಗಡೆ ಅಡಗಿದ್ದರು ಎಂಬ ಮಾಹಿತಿ ಸರ್ಕಾರಿ ಮೂಲಗಳಿಂದ ಬಂದಿದೆ. ಸುಮಾರು 2 ರಿಂದ 3 ಗಂಟೆಗಳ ಕಾಲ ಮುನೀರ್‌ ಬಂಕರ್‌ ಒಳಗಡೆಯೇ ಇದ್ದರು. ಪರಿಸ್ಥಿತಿ ಸುಧಾರಿಸಿದ ಬಳಿಕ ಮುನೀರ್‌ ಹೊರಗಡೆ ಬಂದು ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು.

  • ವಾಯುನೆಲೆಯ ಮೇಲೆ ಭಾರತ ದಾಳಿ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಅಲ್ಲೋಲ ಕಲ್ಲೋಲ

    ವಾಯುನೆಲೆಯ ಮೇಲೆ ಭಾರತ ದಾಳಿ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಅಲ್ಲೋಲ ಕಲ್ಲೋಲ

    ನವದೆಹಲಿ/ಇಸ್ಲಾಮಾಬಾದ್‌: ಭಾರತ ನಡೆಸಿದ ವಾಯು ದಾಳಿಗೆ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಭಾರತ ಪಾಕಿಸ್ತಾನದ ಹಲವು ವಾಯು ನೆಲೆಗಳ (Air Base) ಮೇಲೆ ದಾಳಿ ಮಾಡಿದೆ.

    ರಾಜಧಾನಿ ಇಸ್ಲಾಮಾಬಾದ್ (Islamabad), ದೇಶದ ಮಿಲಿಟರಿ ಪ್ರಧಾನ ಕಚೇರಿಗೆ ಹೊಂದಿಕೊಂಡಿರುವ ರಾವಲ್ಪಿಂಡಿಯಲ್ಲಿರುವ (Rawalpindi) ನೂರ್ ಖಾನ್ ವಾಯುನೆಲೆ ಸೇರಿದಂತೆ ಮೂರು ವಾಯುನೆಲೆಯ ಮೇಲೆ ಭಾರತ ದಾಳಿ ಮಾಡಿದ ಎಂದು ಪಾಕ್‌ ಸೇನೆ ಅಧಿಕೃತವಾಗಿ ತಿಳಿಸಿದೆ.

    ಇಸ್ಲಾಮಾಬಾದ್‌ನಿಂದ 10 ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿರುವ ವಾಯು ನೆಲೆಯ ಮೇಲೆಯೇ ಭಾರತ ದಾಳಿ ನಡೆಸಿದೆ. ಭೀಕರ ದಾಳಿಗೆ ತತ್ತರಿಸಿದ ಪಾಕಿಸ್ತಾನ ಸರ್ಕಾರವು ಎಲ್ಲಾ ನಾಗರಿಕ ಮತ್ತು ವಾಣಿಜ್ಯ ವಿಮಾನ ಸಂಚಾರವನ್ನು ಬಂದ್‌ ಮಾಡಿದೆ.

    ರಾವಲ್ಪಿಂಡಿಯ ವಾಯುನೆಲೆಯಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಳ್ಳುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಹಿಂದೆ ಚಕ್ಲಾಲಾ ವಾಯುನೆಲೆ ಎಂದು ಕರೆಯಲಾಗುತ್ತಿದ್ದ ನೂರ್ ಖಾನ್ ನೆಲೆ ಪಾಕಿಸ್ತಾನದ ಅತ್ಯಂತ ಸೂಕ್ಷ್ಮ ಮಿಲಿಟರಿ ವಾಯುನೆಲೆಯಾಗಿದೆ.

  • Champions Trophy: ಮೈದಾನಕ್ಕೆ ನುಗ್ಗಿ ರಚಿನ್ ರವೀಂದ್ರನನ್ನು ತಬ್ಬಿಕೊಂಡ ಉಗ್ರ ಸಂಘಟನೆಯ ಬೆಂಬಲಿಗ!

    Champions Trophy: ಮೈದಾನಕ್ಕೆ ನುಗ್ಗಿ ರಚಿನ್ ರವೀಂದ್ರನನ್ನು ತಬ್ಬಿಕೊಂಡ ಉಗ್ರ ಸಂಘಟನೆಯ ಬೆಂಬಲಿಗ!

    ರಾವಲ್ಪಿಂಡಿ: ಇಲ್ಲಿ (Rawalpindi) ನಡೆದ ನ್ಯೂಜಿಲೆಂಡ್-ಬಾಂಗ್ಲಾದೇಶ ನಡುವಿನ ಪಂದ್ಯದ ಸಂದರ್ಭದಲ್ಲಿ ನಿಷೇಧಿತ ಉಗ್ರ ಸಂಘಟನೆ ಇಸ್ಲಾಮಿಸ್ಟ್ ಪಕ್ಷ ತೆಹ್ರೀಕ್-ಎ-ಲಬೈಕ್ ಪಾಕಿಸ್ತಾನ್ (TLP) ಬೆಂಬಲಿಗನೊಬ್ಬ ಮೈದಾನಕ್ಕೆ ನುಗ್ಗಿ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ (Rachin Ravindra) ಅವರನ್ನು ಅಪ್ಪಿಕೊಂಡಿದ್ದಾನೆ. ಈ ಘಟನೆ ಪಾಕಿಸ್ತಾನದ ಭದ್ರತಾ ಪಡೆಗಳ ಕಾರ್ಯ ಹಾಗೂ ಭದ್ರತಾ ವೈಫಲ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

    ರಾವಲ್ಪಿಂಡಿ ಮೈದಾನದಲ್ಲಿ ರಚಿನ್ ರವೀಂದ್ರ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಮೈದಾನಕ್ಕೆ ನುಗ್ಗಿ, ಅವರನ್ನು ಹಿಂದಿನಿಂದ ತಬ್ಬಿಕೊಂಡಿದ್ದಾನೆ. ಆಗ ರಚಿನ್ ಒಂದು ಕ್ಷಣ ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿ ಕ್ರೀಡಾಂಗಣದಿಂದ ಹೊರಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

    ವಿಚಾರಣೆಗೆ ನಡೆಸಿದಾಗ ಆತ 2021ರಲ್ಲಿ ನಿಷೇಧಕ್ಕೊಳಗಾದ ಟಿಎಲ್‌ಪಿ ಬೆಂಬಲಿಗ ಎಂಬುದು ಗೊತ್ತಾಗಿದೆ. ಈ ವ್ಯಕ್ತಿ ರಚಿನ್ ರವೀಂದ್ರ ಅವರನ್ನು ಹಿಂದಿನಿಂದ ತಬ್ಬಿಕೊಂಡು ಟಿಎಲ್‌ಪಿ ನಾಯಕ ಸಾದ್ ರಿಜ್ವಿ ಅವರ ಚಿತ್ರವನ್ನು ಪ್ರದರ್ಶಿಸಿದ್ದಾನೆ.

    ಚಾಂಪಿಯನ್ಸ್ ಟ್ರೋಫಿ ವೇಳೆ ಪಾಕಿಸ್ತಾನದಲ್ಲಿ ಭಯೋತ್ಪಾದಕ ಬೆದರಿಕೆಗಳ ವರದಿಗಳ ನಡುವೆ ಈ ಘಟನೆ ಅನೇಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

  • 450 ಎಸೆತಕ್ಕೆ 506 ರನ್‌ – ಇಂಗ್ಲೆಂಡ್‌ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್‌

    450 ಎಸೆತಕ್ಕೆ 506 ರನ್‌ – ಇಂಗ್ಲೆಂಡ್‌ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್‌

    ರಾವಲ್ಪಿಂಡಿ: ಪಾಕಿಸ್ತಾನದ(Pakistan) ವಿರುದ್ಧ ರಾವಲ್ಪಿಂಡಿಯಲ್ಲಿ ಇಂದಿನಿಂದ ಶುರುವಾದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್(England) ಬ್ಯಾಟರ್‌ಗಳು ವಿಶ್ವದಾಖಲೆ(World Record) ನಿರ್ಮಿಸಿದ್ದಾರೆ. ಮೊದಲ ದಿನವೇ ರನ್ ಸುನಾಮಿ ಎದ್ದಿದ್ದು ಟಾಸ್ ಗೆದ್ದು ಬ್ಯಾಟ್ ಮಾಡಲು ಇಳಿದ ಇಂಗ್ಲೆಂಡ್, ಟಿ-20 ಮಾದರಿಯಲ್ಲಿ ರನ್ ಹೊಳೆ ಹರಿಸಿದೆ.

    ನಾಲ್ವರು ಟಾಪ್ ಆರ್ಡರ್ ಬ್ಯಾಟರ್‌ಗಳು ಶತಕ(Century) ಗಳಿಸಿದ ಕಾರಣ ಮೊದಲ ದಿನದ ಅಂತ್ಯಕ್ಕೆ 75 ಓವರ್‌ಗೆ (450 ಎಸೆತ) ನಾಲ್ಕು ವಿಕೆಟ್ ಕಳೆದುಕೊಂಡು ಬರೋಬ್ಬರಿ 506 ರನ್ ಗಳಿಸಿದೆ. ಓವರಿಗೆ 6.75 ರನ್‍ರೇಟ್‌ನಲ್ಲಿ  ಬ್ಯಾಟ್‌ ಬೀಸಿದ್ದಾರೆ.

    ಝಾಕ್ ಕ್ರಾಲಿ 122 ರನ್‌(111 ಎಸೆತ, 21 ಬೌಂಡರಿ), ಬೆನ್ ಡಕೆಟ್ 107 ರನ್‌(110 ಎಸೆತ, 15 ಬೌಂಡರಿ), ಆಲಿ ಪೋಪ್ 108 ರನ್‌(104 ಎಸೆತ, 14 ಬೌಂಡರಿ), ಹ್ಯಾರಿ ಬ್ರೂಕ್ ಔಟಾಗದೇ 101 ರನ್‌(81 ಎಸೆತ, 14 ಬೌಂಡರಿ, 2 ಸಿಕ್ಸರ್) ಹೊಡೆದಿದ್ದಾರೆ.

    ಕೊನೆಯಲ್ಲಿ ನಾಯಕ ಬೆನ್‌ಸ್ಟೋಕ್ಸ್‌ 226.6 ಸ್ಟ್ರೈಕ್‌ ರೇಟ್‌ನಲ್ಲಿ ಔಟಾಗದೇ 34 ರನ್‌(15 ಎಸೆತ, 6 ಬೌಂಡರಿ, 1 ಸಿಕ್ಸ್‌) ಹೊಡೆದಿದ್ದರಿಂದ 506 ರನ್‌ ಗಳಿಸಿದೆ. ಇತರೇ ರೂಪದಲ್ಲಿ 11 ರನ್‌(2 ಬೈ, 6 ಲೆಗ್‌ಬೈ, 2 ನೋಬಾಲ್‌, 1 ವೈಡ್‌) ಬಂದಿದೆ. ಜಾಹಿದ್ ಮಹಮೂದ್ 23 ಓವರ್‌ ಎಸೆದು 160 ರನ್‌ ನೀಡಿ 2 ವಿಕೆಟ್‌ ಪಡೆದಿದ್ದಾರೆ.  ಇದನ್ನೂ ಓದಿ: ವಿರಾಟ್‌ಕೊಹ್ಲಿ ಅಲ್ಲ, ಎಬಿಡಿ ನನ್ನ ರೋಲ್ ಮಾಡೆಲ್ – ಬಾಬರ್ ಅಜಮ್‌

    ಮೊದಲ ದಿನ ಅತಿ ಹೆಚ್ಚು ರನ್‌
    ಮೊದಲ ದಿನವೇ  506 ರನ್‌ಗಳಿಸಿದ್ದು ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲೆ. ಈ ಹಿಂದೆ ಸಿಡ್ನಿ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1910 ರಲ್ಲಿ ಆಸ್ಟ್ರೇಲಿಯಾದ 494 ರನ್‌ ಹೊಡೆದಿತ್ತು.

    2012ರ ಟೆಸ್ಟ್‌ನಲ್ಲಿ ಮತ್ತೆ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಅಡಿಲೇಡ್‌ನಲ್ಲಿ 5 ವಿಕೆಟ್‌ ನಷ್ಟಕ್ಕೆ 482 ರನ್‌ ಹೊಡೆದಿತ್ತು. ಈ ಮೊತ್ತ 86.5 ಓವರ್‌ನಲ್ಲಿ ದಾಖಲಾಗಿತ್ತು. ಟೆಸ್ಟ್‌ ಪಂದ್ಯದಲ್ಲಿ ದಿನ ಒಂದಕ್ಕೆ 90 ಓವರ್‌ ಎಸೆಯಲಾಗುತ್ತದೆ. ಆದರೆ ಇಂಗ್ಲೆಂಡ್‌ ಕೇವಲ 75 ಓವರ್‌ನಲ್ಲಿ 506 ರನ್‌ ಗಳಿಸಿರುವುದು ವಿಶೇಷ.

    4 ಶತಕ:
    ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೊದಲ ದಿನ 4 ಆಟಗಾರರು ಶತಕ ಸಿಡಿಸಿದ್ದು ಇದೇ ಮೊದಲು. ಅದರಲ್ಲೂ ಮೂವರು ಬ್ಯಾಟರ್‌ಗಳ ಸ್ಟ್ರೈಕ್‌ ರೇಟ್‌ 100ಕ್ಕಿಂತಲೂ ಅಧಿಕ ಇರುವುದು ಮತ್ತೊಂದು ದಾಖಲೆ. ಝಾಕ್ ಕ್ರಾಲಿ(109.90) ಆಲಿ ಪೋಪ್(103.84), ಹ್ಯಾರಿ ಬ್ರೂಕ್(124.69) ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ.

    ದಾಖಲೆಯ ಆರಂಭಿಕ ಜೊತೆಯಾಟ:
    ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ 35.4 ಓವರ್‌ನಲ್ಲಿ(214 ಎಸೆತ) 6.53 ಸ್ಕೋರಿಂಗ್‌ ರೇಟಿಂಗ್‌ನಲ್ಲಿ ಮೊದಲ ವಿಕೆಟಿಗೆ 233 ರನ್‌ ಚಚ್ಚಿದ್ದಾರೆ.‌ ಇದು 200 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಆರಂಭಿಕ ಜೊತೆಯಾಟದಲ್ಲಿ ದಾಖಲಾದ  ಅತ್ಯಧಿಕ ಸ್ಕೋರಿಂಗ್‌ ರೇಟ್.

    ಈ ಹಿಂದೆ ಜೋ ಬರ್ನ್ಸ್ ಮತ್ತು ಡೇವಿಡ್ ವಾರ್ನರ್ (2015 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಪ್ರತಿ ಓವರ್‌ಗೆ 6.29 ರನ್) ಮತ್ತು ಗ್ರೇಮ್ ಸ್ಮಿತ್ ಮತ್ತು ಎಬಿ ಡಿವಿಲಿಯರ್ಸ್ (2005 ರಲ್ಲಿ ಜಿಂಬಾಬ್ವೆ ವಿರುದ್ಧ ಪ್ರತಿ ಓವರ್‌ಗೆ 6.22 ರನ್) ದ್ವಿಶತಕದ ಜೊತೆಯಾಟವಾಡಿದ್ದರು.

    ಒಂದು ಓವರ್‌ನಲ್ಲಿ ಸತತ ಆರು ಬೌಂಡರಿ
    ಹ್ಯಾರಿ ಬ್ರೂಕ್ ಅವರು ಇಂದು ಟೆಸ್ಟ್‌ ಕ್ಯಾಪ್‌ ಧರಿಸಿದ್ದ ಸೌದ್ ಶಕೀಲ್‌ ಅವರ ಎರಡನೇ ಓವರ್‌ನಲ್ಲಿ ಆರು ಬೌಂಡರಿ ಚಚ್ಚಿದ್ದಾರೆ. ಈ ಮೂಲಕ ಟೆಸ್ಟ್ ಪಂದ್ಯದ ಓವರ್‌ ಒಂದರಲ್ಲಿ ಸತತ ಆರು ಬೌಂಡರಿಗಳನ್ನು ಹೊಡೆದ ಐದನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಬ್ರೂಕ್‌ ಪಾತ್ರರಾಗಿದ್ದಾರೆ.

    1982ರಲ್ಲಿ ಬಾಬ್ ವಿಲ್ಲಿಸ್ ವಿರುದ್ಧ ಸಂದೀಪ್ ಪಾಟೀಲ್, 2004ರಲ್ಲಿ ಮ್ಯಾಥ್ಯೂ ಹೊಗಾರ್ಡ್ ವಿರುದ್ಧ ಕ್ರಿಸ್‌ ಗೇಲ್‌, 2006ರಲ್ಲಿ ಮುನಾಫ್ ಪಟೇಲ್ ವಿರುದ್ಧ ರಾಮ್‌ನರೇಶ್ ಸರ್ವನ್‌, 2007ರಲ್ಲಿ ಜೇಮ್ಸ್ ಆಂಡರ್ಸನ್ ಬೌಲಿಂಗ್‌ಗೆ ಸನತ್‌ ಜಯಸೂರ್ಯ 6 ಬೌಂಡರಿ ಹೊಡೆದಿದ್ದರು.

    Live Tv
    [brid partner=56869869 player=32851 video=960834 autoplay=true]