Tag: raw banana dosa

  • ಬೆಳಗ್ಗಿನ ತಿಂಡಿಗೆ ಫಟಾಫಟ್ ಅಂತ ಮಾಡಿ ಬಾಳೆಕಾಯಿ ದೋಸೆ

    ಬೆಳಗ್ಗಿನ ತಿಂಡಿಗೆ ಫಟಾಫಟ್ ಅಂತ ಮಾಡಿ ಬಾಳೆಕಾಯಿ ದೋಸೆ

    ಬೆಳಗ್ಗಿನ ತಿಂಡಿಗೆ ಆರೋಗ್ಯಕರ ಹಾಗೂ ಅಷ್ಟೇ ರುಚಿಕರವಾಗಿ ಅಡುಗೆ ಮಾಡುವುದು ಪ್ರತಿಯೊಬ್ಬರಿಗೂ ಸವಾಲು. ಮನೆ ಮಂದಿಯೂ ಪ್ರತಿ ದಿನ ಹೊಸ ರುಚಿಯನ್ನೇ ಬಯಸುತ್ತಾರೆ. ಈ ಸಮಯದಲ್ಲಿ ನೀವು ಫಟಾಫಟ್ ಅಂತ ತಯಾರಿಸಬಹುದಾದ ಸಿಂಪಲ್ ಆದ ಒಂದು ತಿಂಡಿಯನ್ನು ಹೇಳಿಕೊಡುತ್ತೇವೆ. ಬಾಳೆಕಾಯಿ ದೋಸೆ (Raw Banana Dosa) ರುಚಿಕರವೂ, ಆರೋಗ್ಯಕರವೂ ಮಾಡುವುದೂ ಸುಲಭವಾಗಿದೆ.

    ಬೇಕಾಗುವ ಪದಾರ್ಥಗಳು:
    ದೋಸೆ ಅಕ್ಕಿ – 1 ಕಪ್
    ಬಳೆಕಾಯಿ – 2
    ತೆಂಗಿನ ತುರಿ – ಕಾಲು ಕಪ್
    ಹಸಿರು ಮೆಣಸಿನಕಾಯಿ – 2
    ಜೀರಿಗೆ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ನೀರು – ಅಗತ್ಯಕ್ಕೆ ತಕ್ಕಂತೆ ಇದನ್ನೂ ಓದಿ: ಉಳಿದ ಬ್ರೆಡ್‌ನಿಂದ ಫಟಾಫಟ್ ಅಂತ ಮಾಡಿ ಉಪ್ಪಿಟ್ಟು

    ಮಾಡುವ ವಿಧಾನ:
    * ಮೊದಲಿಗೆ ಅಕ್ಕಿಯನ್ನು ತೊಳೆದು 3-4 ಗಂಟೆಗಳ ಕಾಲ ನೆನೆಸಿಡಿ (ರಾತ್ರಿಯಿಡೀ ನೆನೆಸಬಹುದು).
    * ಈಗ ಬಾಳೆಕಾಯಿಗಳನ್ನು ತೆಗೆದುಕೊಂಡು, ಅದರ ಸಿಪ್ಪೆ ಸುಲಿದು ದೊಡ್ಡ ಡೊಡ್ಡ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಅದರ ಬಣ್ಣ ಬದಲಾಗದಂತೆ ತಡೆಯಲು ನೀರಿನ ಪಾತ್ರೆಯಲ್ಲಿ ಹಾಕಿಡಿ.
    * ಈಗ ಮಿಕ್ಸರ್ ಜಾರ್‌ಗೆ ಬಾಳೆಕಾಯಿ, ಅಕ್ಕಿ, ಹಸಿ ಮೆಣಸಿನಕಾಯಿ, ಜೀರಿಗೆ, ತೆಂಗಿನ ತುರಿ ಹಾಗೂ ಉಪ್ಪು ಹಾಕಿ ನಯವಾಗಿ ರುಬ್ಬಿಕೊಳ್ಳಿ.
    * ದೋಸೆ ಹಿಟ್ಟಿನ ಹದಕ್ಕೆ ಬರುವಂತೆ ನೀರು ಸೇರಿಸಿ ಮಿಶ್ರಣ ಮಾಡಿ.
    * ಈಗ ದೋಸೆಯ ಕಾವಲಿಯನ್ನು ಬಿಸಿ ಮಾಡಿ, ಒಂದು ಸೌಟು ಹಿಟ್ಟನ್ನು ಸುರಿದು ತೆಳ್ಳನೆಯ ದೋಸೆಯನ್ನು ಹರಡಿ.
    * ದೋಸೆ ಸುತ್ತಲೂ 1 ಟೀಸ್ಪೂನ್ ಎಣ್ಣೆ ಹಾಕಿ, ಗರಿಗರಿಯಾಗುವವರೆಗೆ ದೋಸೆಯನ್ನು ಕಾಯಿಸಿ.
    * 1-2 ನಿಮಿಷ ಮಧ್ಯಮ ಉರಿಯಲ್ಲಿ ಮುಚ್ಚಿ ಬೇಯಿಸಿ. ದೋಸೆಯನ್ನು ತಿರುವಿ ಹಾಕುವ ಅಗತ್ಯವಿಲ್ಲ. ಬಳಿಕ ನಿಧಾನವಾಗಿ ಕಾವಲಿಯಿಂದ ದೋಸೆಯನ್ನು ತೆಗೆಯಿರಿ.
    * ಇದೀಗ ಬಾಳೆಕಾಯಿ ದೋಸೆ ತಯಾರಾಗಿದ್ದು, ಸಾಂಬಾರ್ ಅಥವಾ ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ರುಚಿಯಾದ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕ್ ನೀವೊಮ್ಮೆ ಮಾಡಿ ಸವಿಯಿರಿ

    Live Tv
    [brid partner=56869869 player=32851 video=960834 autoplay=true]