Tag: Ravishastri

  • ಗೆಲುವಿನ ಮತ್ತಲ್ಲಿ ಬಿಯರ್ ಕುಡಿಯುತ್ತಾ ಎಂಟ್ರಿ ಕೊಟ್ಟ ರವಿಶಾಸ್ತ್ರಿ – ವೈರಲ್ ವಿಡಿಯೋ

    ಗೆಲುವಿನ ಮತ್ತಲ್ಲಿ ಬಿಯರ್ ಕುಡಿಯುತ್ತಾ ಎಂಟ್ರಿ ಕೊಟ್ಟ ರವಿಶಾಸ್ತ್ರಿ – ವೈರಲ್ ವಿಡಿಯೋ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದ ಟೀಂ ಇಂಡಿಯಾ ಸಂಭ್ರಮದಲ್ಲಿ ತೊಡಗಿದ್ದು, ಈ ವೇಳೆ ಕೋಚ್ ರವಿಶಾಸ್ತ್ರಿ ಬಿಯರ್ ಕುಡಿಯುತ್ತಾ ಬಸ್ಸಿನಿಂದ ಕೆಳಗಿಳಿದು ತೆರಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರವಿಶಾಸ್ತ್ರಿ ಬಿಯರ್ ಕೂಡಿಯುತ್ತಿರುವ ಫೋಟೋ ಹಾಗೂ ವಿಡಿಯೋಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ.

    ಗೆಲುವಿನ ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು ಮೆಲ್ಬರ್ನ್ ಕ್ರೀಡಾಂಗಣದ ಕೊಠಡಿಯಲ್ಲಿ ಫೋಟೋಗೆ ಪೋಸ್ ನೀಡಿದ ಸಂದರ್ಭದಲ್ಲೂ ಕೋಚ್ ರವಿಶಾಸ್ತ್ರಿ ಬಿಯರ್ ಬಾಟಲಿಯೊಂದಿಗೆ ಗೆಲುವಿನ ನಗೆ ತೋರಿದ್ದಾರೆ. ಬಳಿಕ ಹೋಟೆಲ್ ಕೊಠಡಿಗೆ ತೆರಳುವ ವೇಳೆ ಬಸ್ಸಿನಿಂದ ಕೆಳಗಿಳಿದ ರವಿಶಾಸ್ತ್ರಿ ಮಾಧ್ಯಮಗಳು ಇರುವುದನ್ನು ಲೆಕ್ಕಿಸದೇ ಬಿಯರ್ ಕುಡಿಯುತ್ತಾ ಮುಂದೇ ಸಾಗಿದ್ದಾರೆ. ಈ ದೃಶ್ಯ ತಮ್ಮ ವಿರುದ್ಧ ಟೀಕೆ ಮಾಡಿದ್ದ ವ್ಯಕ್ತಿಗಳಿಗೆ ಟಾಂಗ್ ಕೊಟ್ಟಂತೆ ಕಂಡು ಬಂದಿತ್ತು.

    ರವಿಶಾಸ್ತ್ರಿ ಅವರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ಕೋಚ್ ಟೀಂ ಇಂಡಿಯಾಗೆ ಅಗತ್ಯವಿಲ್ಲ. ರವಿಶಾಸ್ತ್ರಿಗಿಂತ ಅತ್ಯುತ್ತಮ ಕೋಚ್ ಆಯ್ಕೆಗಳು ನಮ್ಮ ಮುಂದಿದೆ. ನೀವು ಗ್ರೇಟ್ ಟೀಂ ಇಂಡಿಯಾದ ಕೋಚ್ ಎಂಬುವುದನ್ನು ಮರೆಯಬಾರದು ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

    https://twitter.com/msd_junior/status/1079408029089509376?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೀಂ ಇಂಡಿಯಾಗೆ ತಲೆನೋವಾದ ಗಾಯದ ಸಮಸ್ಯೆ – ಮೆಲ್ಬರ್ನ್ ಟೆಸ್ಟ್‌ಗೆ ಅಶ್ವಿನ್ ಡೌಟ್

    ಟೀಂ ಇಂಡಿಯಾಗೆ ತಲೆನೋವಾದ ಗಾಯದ ಸಮಸ್ಯೆ – ಮೆಲ್ಬರ್ನ್ ಟೆಸ್ಟ್‌ಗೆ ಅಶ್ವಿನ್ ಡೌಟ್

    ಮೆಲ್ಬರ್ನ್: ಬಹು ನಿರೀಕ್ಷೆಯ ಆಸೀಸ್ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಆಟಗಾರರ ಗಾಯದ ಸಮಸ್ಯೆ ತಲೆನೋವಾಗಿದ್ದು, ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯವುದು ಅನುಮಾನವಾಗಿದೆ.

    ಟೀಂ ಇಂಡಿಯಾ ಆಟಗಾರರ ಗಾಯದ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ ಕೋಚ್ ರವಿಶಾಸ್ತ್ರಿ, ಅಶ್ವಿನ್ ತಮ್ಮ ಗಾಯದ ಸಮಸ್ಯೆ ಚೇತರಿಸಿಕೊಳ್ಳುತ್ತಿದ್ದು, ಮುಂದಿನ 48 ಗಂಟೆಗಳ ಕಾಲ ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ತಂಡದ ಮತ್ತೊಬ್ಬ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

    ಟೆಸ್ಟ್ ಸರಣಿಯಲ್ಲಿ ಆಸೀಸ್ ತಂಡ ಸಮಬಲದ ಹೋರಾಟ ನೀಡಿದ್ದು, ಸರಣಿಯಲ್ಲಿ ಮುನ್ನಡೆ ಪಡೆಯಲು ಮೆಲ್ಬರ್ನ್ ಪಂದ್ಯದ ಗೆಲುವು ಅನಿವಾರ್ಯವಾಗಿದೆ. ಆದರೆ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಕೊರತೆಯನ್ನು ಎದುರಿಸಿದ್ದು, ಆಸೀಸ್ ಪರ ಏಕೈಕ ಸ್ಪಿನ್ನರ್ ಆಗಿ ಕಣಕ್ಕೆ ಇಳಿದಿದ್ದ ಲಯನ್ 8 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾಗಿದ್ದರು.

    ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಉತ್ತಮ ಬೌಲಿಂಗ್ ಪಡೆಯನ್ನು ಹೊಂದಿದ್ದರೂ ಕೂಡ ಅನುಭವಿ ಸಿನ್ನರ್ ಕೊರತೆಯಿಂದ ಈ ಹಿಂದಿನ ಪಂದ್ಯದಲ್ಲಿ ಸಮಸ್ಯೆ ಎದುರಿಸಿತ್ತು. ಉಳಿದಂತೆ ತಂಡಕ್ಕೆ ಆರಂಭಿಕರ ವೈಫಲ್ಯ ಕೂಡ ಬ್ಯಾಟಿಂಗ್ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಇತ್ತ ಮೊದಲ ಟೆಸ್ಟ್‍ಗೆ ಕಮ್ ಬ್ಯಾಕ್ ಮಾಡಿದ್ದ ರೋಹಿತ್ ಶರ್ಮಾ ಕೂಡ ಇನ್ನು ಗಾಯದ ಸಮಸ್ಯೆಯಿಂದ ಚೇತರಿಕೆ ಪಡೆಯುತ್ತಿದ್ದಾರೆ.

    ಉಳಿದಂತೆ ಆಸೀಸ್ ಟೆಸ್ಟ್ ಸರಣಿಗೆ ಆಯ್ಕೆ ಆಗಿರುವ ಹಾರ್ದಿಕ್ ಪಾಂಡ್ಯ ಗಾಯದಿಂದ ಚೇತರಿಕೆಯಾದ ಬಳಿಕ ಕೇವಲ ಒಂದು ರಣಜಿ ಪಂದ್ಯವನ್ನು ಆಡಿದ್ದು, ಆಸೀಸ್ ಟೆಸ್ಟ್ ತಂಡದ ಆಡುವ 11 ಬಳಗದಲ್ಲಿ ಸ್ಥಾನ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ. ಒಂದೊಮ್ಮೆ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದರೆ ಯುವ ಆಟಗಾರ ಹನುಮವಿಹಾರಿ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ.

    ಆರಂಭಿಕ ವೈಫಲ್ಯದ ಕಾರಣ ಕರ್ನಾಟಕ ಮಯಾಂಕ್ ಅಗರ್ವಾಲ್ ತಂಡ ಸೇರಿಕೊಳ್ಳುವ ನಿರೀಕ್ಷೆ ಇದ್ದು, ಆರಂಭಿಕ ಸಮಸ್ಯೆಗೆ ಮಯಾಂಕ್ ಸೂಕ್ತ ಆಯ್ಕೆ ಆಗಲಿದ್ದಾರೆ. ಮಯಾಂಕ್ ಆಯ್ಕೆಯಾದರೆ ಕೆಎಲ್ ರಾಹುಲ್ ಅಥವಾ ಮುರಳಿ ವಿಜಯ್ ಅವಕಾಶ ವಂಚಿತರಾಗುವುದು ನಿಶ್ಚಿತವಾಗಿದೆ. ಡಿಸೆಂಬರ್ 26 ರಿಂದ 3ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುದ್ದಿಗೋಷ್ಠಿಯಲ್ಲಿ ರವಿಶಾಸ್ತ್ರಿ ಹೇಳಿಕೆಯನ್ನು ಉದಾಹರಿಸಿ ಕೇಳಿದ ಪ್ರಶ್ನೆಗೆ ಸಿಟ್ಟಾದ ಕೊಹ್ಲಿ!

    ಸುದ್ದಿಗೋಷ್ಠಿಯಲ್ಲಿ ರವಿಶಾಸ್ತ್ರಿ ಹೇಳಿಕೆಯನ್ನು ಉದಾಹರಿಸಿ ಕೇಳಿದ ಪ್ರಶ್ನೆಗೆ ಸಿಟ್ಟಾದ ಕೊಹ್ಲಿ!

    ಲಂಡನ್: ಇಂಗ್ಲೆಂಡ್ ವಿರುದ್ಧದ ಬಹು ನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಟೂರ್ನಿಯಲ್ಲಿ ಟೀಂ ಇಂಡಿಯಾ 4-1 ಅಂತರದಲ್ಲಿ ಮುಗ್ಗರಿಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಪತ್ರಕರ್ತರ ಪ್ರಶ್ನೆಗೆ ಖಾರವಾಗಿ ಪತ್ರಿಕ್ರಿಯೆ ನೀಡಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಮಾತನಾಡಿದ್ದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಇಂದಿನ ತಂಡ 15-20 ವರ್ಷಗಳ ಹಿಂದಿದ್ದ ಎಲ್ಲ ತಂಡಗಳಿಗಿಂತ ಉತ್ತಮ ತಂಡ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಉದಾಹರಿಸಿ ಕೊಹ್ಲಿಗೆ ಪ್ರಶ್ನೆ ಮಾಡಿದ ಪತ್ರಕರ್ತರೊಬ್ಬರು, “ರವಿಶಾಸ್ತ್ರಿ ಹೇಳಿಕೆಯನ್ನು ಹೇಗೆ ಸಮರ್ಥಿಸುತ್ತಿರಿ” ಎಂದು ಪ್ರಶ್ನಿಸಿದರು.

    ಈ ವೇಳೆ ಕೊಹ್ಲಿ,”ನಮ್ಮದು ಉತ್ತಮ ತಂಡ ಎಂದು ನಂಬುತ್ತೇವೆ. ಏಕೆ ಆಗಬಾರದು” ಎಂದು ಪ್ರಶ್ನಿಸುವ ತಾಳ್ಮೆಯಿಂದಲೇ ಉತ್ತರಿಸಿದರು. ಈ ವೇಳೆ ಪತ್ರಕರ್ತ,”ಕಳೆದ 15 ವರ್ಷಗಳಲ್ಲಿ ಭಾರತ ಕಂಡ ಅತ್ಯುತ್ತಮ ತಂಡವಾಗಿದೆಯೇ” ಎಂದು ಮರು ಪ್ರಶ್ನೆ ಕೇಳಿದರು.

    ಈ ಪ್ರಶ್ನೆಗೆ ಗರಂ ಆದ ಕೊಹ್ಲಿ,”ನಿಮಗೆ ಏನು ಅನಿಸುತ್ತದೆ” ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪತ್ರಕರ್ತ,”ನನಗೆ ಅನಿಸುವುದಿಲ್ಲ” ಎಂದು ಉತ್ತರಿಸಿದರು. ಈ ಉತ್ತರಕ್ಕೆ ಮತ್ತಷ್ಟು ಖಾರವಾಗಿ ಪತ್ರಿಕ್ರಿಯೆ ನೀಡಿದ ಕೊಹ್ಲಿ,”ಅದು ನಿಮ್ಮ ನಂಬಿಕೆ. ನಾನೇನು ಮಾಡಲಾಗದು” ಎಂದು ಉತ್ತರಿಸಿ ಕಿಡಿಕಾರಿದರು.

    ಅಂತಿಮ ಓವೆಲ್ ಪಂದ್ಯ ನಡೆಯುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೋಚ್ ರವಿಶಾಸ್ತ್ರಿ, ಇಂಗ್ಲೆಂಡ್ ಟೂರ್ನಿಯ ವೇಳೆ ತಂಡದ ಉತ್ತಮ ಪ್ರದರ್ಶನ ನೀಡಿದೆ. ಅಲ್ಲದೇ ಈ ಹಿಂದಿನ 3 ವರ್ಷಗಳ ತಂಡದ ಪ್ರದರ್ಶನವನ್ನು ಗಮನಿಸಿದರೆ ನಾವು ವಿದೇಶಿ ನೆಲದಲ್ಲಿ 9 ಪಂದ್ಯಗಳನ್ನು ಗೆದ್ದಿದ್ದು, 3 ಸರಣಿ ಜಯಪಡೆದಿದ್ದೇವೆ. ಈ ಹಿಂದಿನ ಭಾರತದ ತಂಡಗಳು ಕಳೆದ 15-20 ವರ್ಷದಲ್ಲಿ ಕಡಿಮೆ ಅವಧಿಯಲ್ಲಿ ಇಂತಹ ಪ್ರದರ್ಶನ ನೀಡಿರುವುದನ್ನು ನಾನು ಕಂಡಿಲ್ಲ. ಅಂದು ಹಲವು ಸ್ಟಾರ್ ಆಟಗಾರರು ತಂಡದಲ್ಲಿ ಇದ್ದರು. ಸದ್ಯ ಯಂಗ್ ಟೀಮ್ ಸರಣಿಯಲ್ಲಿ ಭಾಗವಹಿಸಿದೆ ಎಂದು ಶಾಸ್ತ್ರಿ ತಂಡದ ಸಾಧನೆಯನ್ನು ಹೊಗಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಧೋನಿ ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರವನ್ನು ಅವರಿಗೆ ಬಿಡಿ – ಸಚಿನ್

    ಧೋನಿ ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರವನ್ನು ಅವರಿಗೆ ಬಿಡಿ – ಸಚಿನ್

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಧೋನಿ ನಿವೃತ್ತಿಯ ಕುರಿತು ಟೀಕೆಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಚಿನ್ ತೆಂಡೂಲ್ಕರ್ ಸದ್ಯ ಧೋನಿ ಬೆಂಬಲಕ್ಕೆ ನಿಂತಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದ್ದ ಧೋನಿ ವಿರುದ್ಧ ಹಲವು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿ ಟೀಕೆ ಮಾಡಿದ್ದರು. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿನ್, ಯಾವುದೇ ಒಬ್ಬ ಆಟಗಾರ ತನ್ನ ವೃತ್ತಿ ಜೀವನದ ನಿವೃತ್ತಿಯ ಬಗ್ಗೆ ಆತನೇ ನಿರ್ಣಯಕೈಗೊಳ್ಳಬೇಕು. ನಿರಂತರವಾಗಿ ತಂಡದ ಶಕ್ತಿಯಾಗಿದ್ದ ಆಟಗಾರನಿಗೆ ಆ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯ ವಿರುತ್ತದೆ. ಅದ್ದರಿಂದ ಈ ನಿರ್ಧಾರವನ್ನು ಅವರಿಗೆ ಬಿಟ್ಟರೆ ಒಳ್ಳೆಯದು ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

    ಆಟಗಾರರ ಕೆಲವೇ ಪ್ರದರ್ಶನಗಳಿಂದ ಅವರ ಸಾಮರ್ಥ್ಯ ಕುರಿತು ಟೀಕೆ ಮಾಡುವುದು ಉತ್ತಮವಲ್ಲ. ಧೋನಿ ಹಲವು ಭಿನ್ನ ಸಮಯದಲ್ಲಿ ಟೀಂ ಇಂಡಿಯಾ ತಂಡದ ಭಾಗವಾಗಿದ್ದರು. ಅವರು ತಮ್ಮ ಆಟವನ್ನು ವಿಮರ್ಶಿಸಿಕೊಳ್ಳುವ ಸಾಮಥ್ರ್ಯ ಹೊಂದಿದ್ದಾರೆ. ಅದರಂತೆ ಅವರು ನಿವೃತ್ತಿ ತೀರ್ಮಾನ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ಎಲ್ಲರು ಅವರು ನಿರ್ಣಯ ತೆಗೆದುಕೊಳ್ಳಲು ಬಿಡಬೇಕು ಎಂದರು.

    ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯದ ಬಳಿಕ ಧೋನಿ ನಿವೃತ್ತಿ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಅಲ್ಲದೇ ಭಾರತದ ಮಾಜಿ ಆಟಗಾರರಾದ ಸುನಿಲ್ ಗವಸ್ಕರ್ ಹಾಗೂ ಸೌರವ್ ಗಂಗೂಲಿ ಸಹ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ, ಧೋನಿ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋ ಕುರಿತು ಸ್ಪಷ್ಟನೆ ನೀಡಿ, ಧೋನಿ ಎಲ್ಲಿಯೂ ಹೋಗುವುದಿಲ್ಲ ಎಂದು ತಿಳಿಸಿದ್ದರು.

  • ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ಧೋನಿ ನಿವೃತ್ತಿ ವದಂತಿ: ಕೋಚ್ ರವಿಶಾಸ್ತ್ರಿ ಸ್ಪಷ್ಟನೆ!

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು ಎಲ್ಲಿಯೂ ಹೋಗುವುದಿಲ್ಲ, ಅವರು ತಂಡದಲ್ಲಿಯೇ ಇರುತ್ತಾರೆ ಎಂದು ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರೀಯವರು ಸ್ಪಷ್ಟನೆ ನೀಡಿದ್ದಾರೆ.

    ಧೋನಿ ನಿವೃತ್ತಿ ವದಂತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಧೋನಿಯವರು ಕೇವಲ ಬಾಲನ್ನು ಪರೀಕ್ಷೆಗೆ ಒಳಪಡಿಸುವುದಕ್ಕೋಸ್ಕರ ತೆಗೆದುಕೊಂಡಿದ್ದಾರೆ. ಧೋನಿಯವರು ಬಾಲ್ ತೆಗೆದುಕೊಂಡಿದ್ದಕ್ಕೆ ಅವರು ನಿವೃತ್ತಿ ಹೊಂದುತ್ತಾರೆ ಎನ್ನುವ ವಂದತಿ ಹಬ್ಬಿರುವುದು ದುರದೃಷ್ಟಕರ ಸಂಗತಿ. ಧೋನಿಯವರು ಎಲ್ಲಿಯೂ ಹೋಗಲ್ಲ, ಅವರು ಭಾರತ ಕ್ರಿಕೆಟ್ ತಂಡದಲ್ಲಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬೌಲಿಂಗ್ ಮಾಡುವಾಗ 45 ಓವರ್ ಗಳ ಬಳಿಕವು ಬಾಲ್ ವೇಗಿಗಳಿಗೆ ಕೈಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಧೋನಿ ಬಾಲನ್ನು ಪಡೆದು ತಂಡದ ಭಾರತ್ ಅರುಣ್ ಎಂಬ ಬಾಲ್ ತಜ್ಞರಿಗೆ ತೋರಿಸಿ, ಬಾಲ್ ನ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ಅಂಪೈರ್ ನಿಂದ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ ವಿದಾಯದ ಮುನ್ಸೂಚನೆ ನೀಡಿದ್ರಾ ಧೋನಿ?

    ಏನಿದು ವದಂತಿ?
    ಇಂಗ್ಲೆಂಡಿನಲ್ಲಿ ನಡೆದ ಅಂತಿಮ ಪಂದ್ಯದ ವೇಳೆ ಧೋನಿಯವರು ಅಂಪೈರ್ ನಿಂದ ಬಾಲನ್ನು ಪಡೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಜಾಲತಾಣಿಗರು ವಿಡಿಯೋವನ್ನು ನೋಡಿ ಧೋನಿಯವರು ನಿವೃತ್ತಿಗಾಗಿ ಬಾಲನ್ನು ಪಡೆದುಕೊಂಡಿದ್ದಾರೆ ಎಂದು ವದಂತಿ ಹರಿಬಿಟ್ಟಿದ್ದರು. ಧೋನಿಯವರು ಬಾಲ್ ಪಡೆದ ಬಗ್ಗೆ ಸಾಕಷ್ಟು ಉಹಾಪೋಹಗಳು ಕೇಳಿಬಂದಿದ್ದವು.