Tag: ravishankar prasad

  • ಯಾವುದೇ ಮಸೀದಿ, ಕಬ್ರಸ್ತಾನ್‌ ಮುಟ್ಟಲ್ಲ: ವಕ್ಫ್‌ ಮಸೂದೆ ಬಗ್ಗೆ ಬಿಜೆಪಿ ಸಂಸದ ಪ್ರತಿಕ್ರಿಯೆ

    ಯಾವುದೇ ಮಸೀದಿ, ಕಬ್ರಸ್ತಾನ್‌ ಮುಟ್ಟಲ್ಲ: ವಕ್ಫ್‌ ಮಸೂದೆ ಬಗ್ಗೆ ಬಿಜೆಪಿ ಸಂಸದ ಪ್ರತಿಕ್ರಿಯೆ

    – ವಕ್ಫ್‌ ಭೂಮಿಗಳಲ್ಲಿ 5 ಸ್ಟಾರ್‌ ಹೋಟೆಲ್‌, ಶೋ ರೂಂಗಳು ತಲೆಯೆತ್ತಿವೆ: ರವಿಶಂಕರ್‌ ಪ್ರಸಾದ್‌

    ನವದೆಹಲಿ: ವಕ್ಫ್‌ ತಿದ್ದುಪಡಿ ಮಸೂದೆಗೆ (Waqf Amendment Bill) ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಬಿಜೆಪಿ ಸಂಸದ ರವಿಶಂಕರ್‌ ಪ್ರಸಾದ್‌ (Ravi Shankar Prasad) ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ಮಸೀದಿ, ಪೂಜಾ ಸ್ಥಳ ಅಥವಾ ‘ಕಬ್ರಸ್ತಾನ್’ (ಸ್ಮಶಾನ) ಮುಟ್ಟುವುದಿಲ್ಲ ಎಂದು ಮಸೂದೆ ಕುರಿತು ಸ್ಪಷ್ಟಪಡಿಸಿದ್ದಾರೆ.

    ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುವ ವಕ್ಫ್ (ತಿದ್ದುಪಡಿ) ಮಸೂದೆಯು ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಪ್ರಯೋಜನವನ್ನು ನೀಡುತ್ತದೆ. ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ ಎಂದು ಪ್ರಸಾದ್‌ ತಿಳಿಸಿದ್ದಾರೆ.

    ವಿಷಯವು ತುಂಬಾ ಸರಳ ಮತ್ತು ನೇರವಾಗಿದೆ. ವಕ್ಫ್ ಅನ್ನು ರಚಿಸಿದ ‘ವಖಿಫ್’ನ ಉದ್ದೇಶವನ್ನು ವ್ಯವಸ್ಥಾಪಕರಾಗಿರುವ ‘ಮುತ್ತವಲಿ’ ಸರಿಯಾಗಿ ಕಾರ್ಯಗತಗೊಳಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದಷ್ಟೇ ಇದರ ಉದಾತ್ತ ಉದ್ದೇಶವಾಗಿದೆ. ವಕ್ಫ್ ಧಾರ್ಮಿಕ ಸಂಸ್ಥೆಯಲ್ಲ. ಅದು ಕಾನೂನುಬದ್ಧ ಅಥವಾ ಶಾಸನಬದ್ಧ ಸಂಸ್ಥೆಯಾಗಿದೆ. ‘ಮುತ್ತವಲಿ’ ಕೇವಲ ಸೂಪರಿಂಟೆಂಡೆಂಟ್ ಅಥವಾ ವ್ಯವಸ್ಥಾಪಕ. ಆಸ್ತಿಯ ಮೇಲೆ ಅವರಿಗೆ ಯಾವುದೇ ಹಕ್ಕುಗಳಿಲ್ಲ. ಏಕೆಂದರೆ ವಕ್ಫ್ ಅನ್ನು ರಚಿಸಿದ ನಂತರ, ಆಸ್ತಿ ಅಲ್ಲಾಹನದ್ದಾಗಿರುತ್ತದೆ. ಮಸೂದೆ ಮುಸ್ಲಿಂ ಮಹಿಳೆಯರಿಗೆ ಸಬಲೀಕರಣ ನೀಡುತ್ತದೆ. ವಿಧವೆಯರು ಮತ್ತು ಶೋಷಣೆಗೆ ಒಳಗಾದ ಜನತೆಗೆ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.

    ನಾನು ಹುಟ್ಟಿದ ನಗರವಾದ ಪಾಟ್ನಾದ ಡಾಕ್ ಬಂಗಲೋ ಬಳಿಯ ಪ್ರದೇಶಗಳಲ್ಲಿ ಸಾಕಷ್ಟು ವಕ್ಫ್ ಭೂಮಿ ಇದೆ. ಆದರೆ ಅಲ್ಲಿ ಪಂಚತಾರಾ ಹೋಟೆಲ್‌ಗಳು ಮತ್ತು ಶೋ ರೂಂಗಳು ತಲೆ ಎತ್ತಿವೆ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಕ್ಫ್ ಆಸ್ತಿಗಳನ್ನು ಹೊಂದಿದೆ. ಅಲ್ಲಿ ಎಷ್ಟು ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ತರಬೇತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.

  • ಸ್ಟಾರ್ಟ್ ಅಪ್‍ಗಳಿಗೆ ನಾಲ್ಕು ತಿಂಗಳ ಬಾಡಿಗೆ ಇಲ್ಲ

    ಸ್ಟಾರ್ಟ್ ಅಪ್‍ಗಳಿಗೆ ನಾಲ್ಕು ತಿಂಗಳ ಬಾಡಿಗೆ ಇಲ್ಲ

    ನವದೆಹಲಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಎಡರನೇ ಬಾರಿ ಲಾಕ್‍ಡೌನ್ ಆಗಿದೆ. ಈಗಾಗಲೇ ಅನೇಕ ಬ್ಯಾಂಕ್, ಕಂಪನಿಗಳು ಕೆಲಸಗಾರರಿಗೆ ವಿನಾಯಿತಿ ನೀಡಿದೆ. ಇದೀಗ ಸ್ಟಾರ್ಟ್ ಅಪ್‍ಗಳಿಗೂ ಬಾಡಿಗೆ ವಿನಾಯಿತಿ ನೀಡಲಾಗಿದೆ.

    ಸ್ಟಾರ್ಟ್ ಅಪ್‍ಗಳು ಮಾರ್ಚ್ ತಿಂಗಳಿಂದ ಜೂನ್‍ವರೆಗೆ ಬಾಡಿಗೆ ಕಟ್ಟುವ ಅಗತ್ಯವಿಲ್ಲ. ಸುಮಾರು 200 ಸಣ್ಣ ಪ್ರಮಾಣದ ಘಟಕಗಳಿಗೆ ಬಾಡಿಗೆ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಸ್ವತಃ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡುವ ಮೂಲಕ ಆದೇಶ ಹೊರಡಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ.?
    “ಭಾರತದಾದ್ಯಂತ 60 ಎಸ್‍ಟಿಪಿಐ ಕೇಂದ್ರಗಳಿಂದ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್‍ಗಳಿಗೆ ಮಾಚ್ 1 ರಿಂಂದ ಜೂನ್ 30ರ ವರೆಗೆ ಬಾಡಿಗೆ ಪಾವತಿಸುವುದನ್ನು ಮನ್ನಾ ಮಾಡಲಾಗಿದೆ. ಇದರಿಂದ 3000 ಜನರಿಗೆ ಉದ್ಯೋಗ ನೀಡಿರುವ ಸುಮಾರು 200 ಸಣ್ಣ ಮತ್ತು ಮಧ್ಯಮ ಐಟಿ/ಐಟಿಇಎಸ್ ಘಟಕಗಳಿಗೆ ಪ್ರಯೋಜನವಾಗಲಿದೆ” ಎಂದು ರವಿಶಂಕರ್ ಪ್ರಸಾದ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

  • ಮೋದಿ ಸಂಪುಟದಲ್ಲಿ ಯಾರಿದ್ದಾರೆ? ಹೊಸ ಮಂತ್ರಿಗಳು ಯಾರು – ಪಟ್ಟಿ ಓದಿ

    ಮೋದಿ ಸಂಪುಟದಲ್ಲಿ ಯಾರಿದ್ದಾರೆ? ಹೊಸ ಮಂತ್ರಿಗಳು ಯಾರು – ಪಟ್ಟಿ ಓದಿ

    ನವದೆಹಲಿ: ಇಂದು ಸಂಜೆ ಪ್ರಧಾನಿ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಈ ಬಾರಿ ಮಂತ್ರಿ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಬಾರಿ ಹಳಬರ ಜೊತೆಗೆ ಹೊಸ ಮುಖಗಳಿಗೆ ಮೋದಿ ಮಣೆ ಹಾಕಿದ್ದಾರೆ.

    ಯಾರೆಗೆಲ್ಲ ಸ್ಥಾನ?
    ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್, ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್, ಕಿರಣ್ ರಿಜಿಜು, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ರಾವ್ ಇಂದರ್ಜಿತ್ ಸಿಂಗ್, ಅರ್ಜುನ್ ರಾಮ್ ಮೇಘವಾಲ್, ಕೃಷನ್ ಪಾಲ್ ಗುರ್ಜರ್, ಹರ್ಸಿಮ್ರತ್ ಕೌರ್, ಡಿ.ವಿ. ಸದಾನಂದ ಗೌಡ, ಬಾಬುಲ್ ಸುಪ್ರಿಯೊ, ಪ್ರಕಾಶ್ ಜಾವಡೇಕರ್, ರಾಮದಾಸ್ ಅಠವಾಲೆ, ಜಿತೇಂದರ್ ಸಿಂಗ್, ತವಾರ್ ಚಂದ್ ಗೆಹ್ಲೋಟ್

    ಮೊದಲ ಬಾರಿ ಮಂತ್ರಿ ಸ್ಥಾನ
    ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ರತನ್ ಲಾಲ್ ಕಟಾರಿಯಾ, ರಮೇಶ್ ಪೆಖ್ರಿಯಾಲ್ ನಿಶಾಂಕ್, ಆರ್‍ಸಿಪಿ ಸಿಂಗ್, ಕಿಶನ್ ರೆಡ್ಡಿ, ರವೀಂದ್ರನಾಥ್, ಕೈಲಾಶ್ ಚೌಧರಿ, ಸೋಮ್ ಪ್ರಕಾಶ್, ರಾಮೇಶ್ವರ್ ತೇಲಿ, ಸುಬ್ರತ್ ಪಾಠಕ್, ದೇಬೋಶ್ರೀ ಚೌಧರಿ

  • ಖಾಸಗಿತನ ಏನಾದ್ರೂ ಉಳಿದಿದೆಯೇ: ಧೋನಿ ವೈಯಕ್ತಿಕ ದಾಖಲೆ ಲೀಕ್ ಕುರಿತು ಸಚಿವರಿಗೆ ಸಾಕ್ಷಿ ಪ್ರಶ್ನೆ

    ಖಾಸಗಿತನ ಏನಾದ್ರೂ ಉಳಿದಿದೆಯೇ: ಧೋನಿ ವೈಯಕ್ತಿಕ ದಾಖಲೆ ಲೀಕ್ ಕುರಿತು ಸಚಿವರಿಗೆ ಸಾಕ್ಷಿ ಪ್ರಶ್ನೆ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ವೈಯಕ್ತಿಕ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿರುವ ಕುರಿತು ಪತ್ನಿ ಸಾಕ್ಷಿ ಸಿಂಗ್ ಕಿಡಿಕಾರಿದ್ದಾರೆ.

    ಮಂಗಳವಾರ ಆಧಾರ್ ಕಾರ್ಡಿನ ನೋಂದಣಿ ಸೇವೆ ಒದಗಿಸುವ ಸಂಸ್ಥೆ ಸಿಎಸ್ ಸಿ ಇ-ಆಡಳಿತ ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ ಧೋನಿಯವರ ಆಧಾರ್ ಕಾರ್ಡಿನ ಅರ್ಜಿಯ ಚಿತ್ರವನ್ನು ಪೋಸ್ಟ್ ಮಾಡಿತ್ತು. ಇದನ್ನು ಗಮನಿಸಿದ ಸಾಕ್ಷಿ ಧೋನಿ ತಕ್ಷಣವೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟ್ವೀಟ್ ಮಾಡಿದರು.

    ಈ ಟ್ವೀಟನ್ನು ಕೂಡಲೇ ಸಚಿವರು ಸಿಎಸ್‍ಸಿ ಇ ಗವರ್ನೆಸ್ಸ್ ಸರ್ವಿಸ್ ಇಂಡಿಯಾಗೆ ಟ್ಯಾಗ್ ಮಾಡಿದ್ದಾರೆ. ಮಾತ್ರವಲ್ಲದೇ `ಇದು ಸಾರ್ವಜನಿಕ ಸ್ವತ್ತು ಅಲ್ಲ, ಇದ್ರಲ್ಲಿ ಏನಾದ್ರೂ ಖಾಸಗಿ ಮಾಹಿತಿಗಳಿವೆಯೇ’ ಎಂದು ಸಚಿವರು ಸಾಕ್ಷಿಯನ್ನು ಪ್ರಶ್ನಿಸಿದ್ರು.

    ಸಚಿವರ ಪ್ರಶ್ನೆಗೆ ಸಿಎಸ್ ಸಿ ಇ- ಆಡಳಿತ ಪೋಸ್ಟ್ ಮಾಡಿದ್ದ ಟ್ವೀಟ್ ನ ಸ್ಕ್ರೀನ್ ಶಾಟ್ ತೆಗೆದು ಫೋಟೋ ಕಳುಹಿಸುವ ಮೂಲಕ ಸಾಕ್ಷಿ `ಖಾಸಗಿ ಮಾಹಿತಿಗಳು ಬಹಿರಂಗವಾಗಲು ಇನ್ನೇನು ಉಳಿದಿದೆ ಅಂತಾ ಮರು ಪ್ರಶ್ನೆ ಹಾಕಿದ್ದಾರೆ. ಬಳಿಕ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ತಮ್ಮ ಗಮನಕ್ಕೆ ವಿಷಯವನ್ನು ತಂದಿದ್ದೀಕೆ ಸಾಕ್ಷಿ ಸಿಂಗ್ ಗೆ ಧನ್ಯವಾದ ಹೇಳಿದರು.

    ಖಾಸಗಿ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಕಾನೂನಿಗೆ ವಿರುದ್ಧವಾದುದು. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಂತಾ ಸಚಿವರು ಧೋನಿ ಪತ್ನಿಗೆ ತಿಳಿಸಿದ್ದಾರೆ.