Tag: Ravishankar Gowda

  • ಗುಳಿಕೆನ್ನೆ ಹುಡುಗ ದಿಗಂತ್ ಚಿತ್ರಕ್ಕೆ ಇಬ್ಬರು ಮಹಿಳೆಯರ ಉಸ್ತುವಾರಿ

    ಗುಳಿಕೆನ್ನೆ ಹುಡುಗ ದಿಗಂತ್ ಚಿತ್ರಕ್ಕೆ ಇಬ್ಬರು ಮಹಿಳೆಯರ ಉಸ್ತುವಾರಿ

    ನ್ನಡ ಸಿನಿಮಾ ರಂಗಕ್ಕೆ ಮತ್ತೋರ್ವ ನಿರ್ದೇಶಕಿಯ ಪ್ರವೇಶವಾಗಿದೆ. ಕೆನಡಾ ನಿವಾಸಿ ಬೃಂದಾ ಮುರಳೀಧರ್ ‘ಅಂತು ಇಂತು’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಕಿರುತೆರೆ, ಹಿರಿತೆರೆ ನಟಿ ಹಾಗೂ ನಿರ್ಮಾಪಕಿ‌ ಜಯಶ್ರೀ ರಾಜ್, ಬೃಂದಾ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಲಿದ್ದಾರೆ. ದಿಗಂತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿರುವುದು ವಿಶೇಷ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ಈ ಕುರಿತು ಮಾತನಾಡಿರುವ ಬೃಂದಾ, ‘ನಾನು ಮೂಲತಃ ಮೈಸೂರಿವಳು. ರಂಗ ಕಲಾವಿದೆ. ಇಪ್ಪತ್ತೈದು ವರ್ಷಗಳಿಂದ ಕೆನಡಾದಲ್ಲಿದ್ದೀನಿ. ಅಲ್ಲೇ ನಾನು ಹಾಗೂ ನನ್ನ ಪತಿ ಮುರಳಿಧರ್ ನಾಟಕ ಸೇರಿದಂತೆ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ನಾನು ಈ ಹಿಂದೆ ನಾಟ್ ನಾಟ್ ಎಂಬ ಇಂಗ್ಲಿಷ್ ಚಿತ್ರ ನಿರ್ದೇಶಿಸಿದ್ದೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಇದು ಸ್ವದೇಶದಿಂದ ವಿದೇಶಕ್ಕೆ ಹೋಗಿ ನೆಲೆಸಿರುವವರ ಕಥೆ‌. ನಾವು ಎಲ್ಲೇ ಇದ್ದರೂ ನಮ್ಮ ಹುಟ್ಟಿದ ಊರಿನ ಮಮತೆ ಸದಾ ಸೆಳೆಯುತ್ತಿರುತ್ತದೆ. ಈ ರೀತಿ ಭಾವನಾತ್ಮಕ ಕಥೆಯುಳ್ಳ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ’ ಎಂದರು. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ‘ನಾನು 25 ವರ್ಷಗಳಿಂದ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ  ಅಭಿನಯಿಸಿದ್ದೇನೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ಮಾಣ ಕೂಡ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ. ನಿರ್ದೇಶಕಿ  ಬೃಂದಾ ಅವರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು’ ಎನ್ನುವುದು ಜಯಶ್ರೀ ರಾಜ್ ಮಾತು. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಅಂದಹಾಗೆ ಈ ಸಿನಿಮಾದಲ್ಲಿ ದಿಗಂತ್ ಭಾರತದಿಂದ ಕೆನಡಾಕ್ಕೆ ಬಂದ ಹುಡುಗನ ಪಾತ್ರ ಮಾಡುತ್ತಿದ್ದಾರೆ. ಗಿರಿಜಾ ಲೋಕೇಶ್, ರವಿಶಂಕರ್ ಗೌಡ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ‌. ಕೆನಡಾದ ಸ್ಥಳಿಯ ತಂತ್ರಜ್ಞರು ಇದರಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ‌.

  • ವಿಕ್ರಾಂತ್ ರೋಣ ಸಿನಿಮಾ ನೋಡ್ತಾಯಿದ್ರೆ ಜೀವ ನಡುಗುತ್ತೆ: ನಟ ರವಿಶಂಕರ್ ಗೌಡ

    ವಿಕ್ರಾಂತ್ ರೋಣ ಸಿನಿಮಾ ನೋಡ್ತಾಯಿದ್ರೆ ಜೀವ ನಡುಗುತ್ತೆ: ನಟ ರವಿಶಂಕರ್ ಗೌಡ

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ಸಿನಿಮಾ ಡಬ್ಬಿಂಗ್‍ನಲ್ಲಿ ಭಾಗವಹಿಸಿದ ನಟ ರವಿಶಂಕರ್ ಗೌಡ ಸಿನಿಮಾ ಕುರಿತಾಗಿ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದಾರೆ.

    ವಿಕ್ರಾಂತ್ ರೋಣ ಡಬ್ಬಿಂಗ್ ಮಾಡಿದೆ. ಅಬ್ಬಾ!! ಸಿನಿಮಾ ಪ್ರಾರಂಭವಾದಗಿನಿಂದ ಕೊನೆಯವರೆಗೂ ಸೀಟಿನಲ್ಲಿ ಒರಗಿಕೊಳ್ಳಲು ಸಾಧ್ಯವಿಲ್ಲ ಕುತೂಹಲದ ಮಹಾಪೂರವಾಗಿದೆ. ಗೆಳೆಯ ದೀಪುವಿನ ಅಭಿನಯಕ್ಕೆ ಮನಸೋಲದವರಿಲ್ಲ. ಹೊಸ ಕಲಾವಿದರು ಅಚ್ಚುಕಟ್ಟಾದ ಅಭಿನಯಿಸಿದ್ದಾರೆ. ಎಂದು ರವಿಶಂಕರ್ ಗೌಡ ಡಬ್ಬಿಂಗ್ ಮಾಡಿದ ಅನುಭವವನ್ನು ಟ್ವೀಟ್ ಮಾಡಿದ್ದಾರೆ.

    ಪೂರ್ತಿ ಸಿನಿಮಾ ನೋಡುತ್ತಿದ್ದರೆ ಜೀವ ನಡುಗತ್ತದೆ. ನಿರ್ದೇಶಕ ಅನೂಪ್ ಭಂಡಾರಿಗೆ ಹಾಗೂ ನಿರ್ಮಾಪಕ ಜಾಕ್ ಮಂಜು ಸರ್‌ಗೆ ಅಭಿನಂದನೆಗಳು ಎಂದು ರವಿಶಂಕರ್ ಗೌಡ ವಿಕ್ರಾಂತ್ ರೋಣ ಸಿನಿಮಾದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ನಿರೂಪ್ ಭಂಡಾರಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ಅಶೋಕ್ ಪ್ರಮುಖ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಂಬಾ ವಿಶೇಷವಾದ ಪಾತ್ರದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ಗೌಡ ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಜಾಕ್ ಮಂಜು ನಿರ್ಮಾಣ ಮಾಡಿದ್ದು, ಬಿಡುಗಡೆ ಬಗ್ಗೆ ಸದ್ಯಕ್ಕೆ ಯಾವುದೇ ಅಪ್‍ಡೇಟ್ ಇಲ್ಲ.

    ಸಿನಿಮಾ ಆರಂಭದಿಂದಲೂ ಒಂದಲ್ಲ ಒಂದು ವಿಷಯಕ್ಕೆ ಕುತೂಹಲ ಹೆಚ್ಚಿಸುತ್ತಿರುವ ಈ ಚಿತ್ರ ಈಗ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿದೆ. ಫಸ್ಟ್ ಲುಕ್ ಪೋಸ್ಟರ್ ಹಾಗೂ ದುಬೈನ ಬುರ್ಜ್ ಖಲೀಫಾ ಕಟ್ಟಡ ಮೇಲೆ ಬಿಡುಗಡೆಯಾದ ಟೀಸರ್ ನೋಡಿದ್ಮೇಲೆ ಪ್ರೇಕ್ಷಕರು ಬಹಳ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  • ಮಾರಾಟಕ್ಕಿರೋ ಮನೆ ನೋಡಲು ಮತ್ತೆ ಬಂದ ಶ್ರುತಿ ಹರಿಹರನ್!

    ಮಾರಾಟಕ್ಕಿರೋ ಮನೆ ನೋಡಲು ಮತ್ತೆ ಬಂದ ಶ್ರುತಿ ಹರಿಹರನ್!

    ಬೆಂಗಳೂರು: ಕನ್ನಡದಲ್ಲಿ ಭರವಸೆಯ ನಟಿಯಾಗಿ ನೆಲೆ ಕಂಡುಕೊಂಡಿದ್ದವರು ಶ್ರುತಿ ಹರಿಹರನ್. ಆದರೆ ಒಂದಷ್ಟು ವಿವಾದದ ಬೆನ್ನಿಗೇ ಅವರು ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ಇದೀಗ ವಿದೇಶದಲ್ಲಿ ನೆಲೆಸಿರೋ ಶ್ರುತಿ ಬಹು ಕಾಲದ ನಂತರ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಮತ್ತೆ ವಾಪಾಸಾಗಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈವರೆಗೆ ಸಾಕಷ್ಟು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಶ್ರುತಿ ‘ಮನೆ ಮಾರಾಟಕ್ಕಿದೆ’ ಚಿತ್ರದಲ್ಲಿ ಮತ್ತೊಂದು ಥರತದ ಪಾತ್ರಕ್ಕೆ ಜೀವ ತುಂಬಿದ್ದಾರೆ.

    ಶ್ರುತಿ ಹರಿಹರನ್ ಯಾವಾಗ ಒಂದು ವಿವಾದದ ನಂತರದಲ್ಲಿ ವಿದೇಶ ಸೇರಿಕೊಂಡಿದ್ದರೋ ಆ ನಂತರದಲ್ಲಿ ಮತ್ತೆ ಅವರು ಮರಳೋದು ಕಷ್ಟ ಎಂಬಂಥಾ ವಾತಾವರಣವಿತ್ತು. ಆದರೆ ಅದರ ಆಜೂ ಬಾಜಲ್ಲಿಯೇ ಮನೆ ಮಾರಾಟಕ್ಕಿದೆ ಚಿತ್ರವನ್ನು ಒಪ್ಪಿಕೊಂಡಿದ್ದ ಶ್ರುತಿ ಹರಿಹರನ್ನು ಇಲ್ಲಿ ಚೆಂದದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಇದು ಔಟ್ ಆಂಡ್ ಔಟ್ ಕಾಮಿಡಿ ಚಿತ್ರ ಅನ್ನೋದು ಈಗಾಗಲೇ ಪ್ರೇಕ್ಷಕರಿಗೆಲ್ಲ ಗೊತ್ತಾಗಿದೆ. ಟ್ರೇಲರ್ ನಲ್ಲಿ ಕಾಣಿಸಿಕೊಂಡಿದ್ದ ದೃಷ್ಯಾವಳಿಗಳು ಹಾರ್ ಲುಕ್ಕಿನಲ್ಲಿ ಬೆಚ್ಚಿ ಬೀಳಿಸುತ್ತಲೇ ಹಾಸ್ಯದ ವಿಚಾರದಲ್ಲಿ ಎದ್ದೂ ಬಿದ್ದು ನಗುವಂತೆ ಮಾಡಿವೆ. ಕೆಲವೇ ಕೆಲ ನಿಮಿಷದ ಈ ಟ್ರೇಲರ್ ಈ ಪಾಟಿ ಪರಿಣಾಮಕಾರಿಯಾಗಿರೋವಾಗ ಇಡೀ ಚಿತ್ರ ಅದೆಷ್ಟು ಮಜವಾಗಿ ಮೂಡಿ ಬಂದಿರಬಹುದೆಂದು ಯಾರಿಗಾದರೂ ಅಂದಾಜು ಸಿಗದಿರಲು ಸಾಧ್ಯವಿಲ್ಲ.

    ಹಾಗಾದರೆ ಕಂಪ್ಲೀಟ್ ಕಾಮಿಡಿ ಶೈಲಿಯ ಈ ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹರಿಹರನ್ ಯಾವ ಥರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ಕುತೂಹಲ ಕಾಡೋದು ಸಹಜವೇ. ಮನೆ ಮಾರಾಟಕ್ಕಿದೆ ಚಿತ್ರತಂಡ ಈ ವಿಚಾರದಲ್ಲಿ ಭಾರೀ ಜಾಗರೂಕತೆಯಿಂದ ವರ್ತಿಸುತ್ತಾ ಸಾಗಿ ಬಂದಿದೆ. ತೀರಾ ಟ್ರೇಲರ್‍ನಲ್ಲಿಯೂ ಕೂಡಾ ಸರಿಕಟ್ಟಾಗಿ ಪಾತ್ರಗಳ ಚಹರೆ ಗೊತ್ತಾಗದಂತೆ ಎಚ್ಚರ ವಹಿಸಿದೆ. ಶ್ರುತಿ ಪಾತ್ರದ ವಿಚಾರದಲ್ಲಿಯೂ ಕೆಲವೇ ಕೆಲ ಮಾಹಿತಿ ಬಿಟ್ಟು ಕೊಡುತ್ತಾ ಗೌಪ್ಯತೆ ಕಾಪಾಡಿಕೊಂಡಿದೆ. ಅಂತೂ ಈ ಸಿನಿಮಾದಲ್ಲಿ ಶ್ರುತಿ ಮನೆ ಓನರ್ ಆಗಿ ಕಾಣಿಸಿಕೊಂಡಿರೋದಂತೂ ಸತ್ಯ. ಆ ಪಾತ್ರದ ಮಜಾ ಏನನ್ನೋದು ಈ ವಾರವೇ ಎಲ್ಲರಿಗೂ ಗೊತ್ತಾಗಲಿದೆ.

  • ಒಟ್ಟೊಟ್ಟಿಗೆ ಮನೆ ಮಾರಾಟಕ್ಕಿಟ್ಟ ಕಾಮಿಡಿ ನಟರು!

    ಒಟ್ಟೊಟ್ಟಿಗೆ ಮನೆ ಮಾರಾಟಕ್ಕಿಟ್ಟ ಕಾಮಿಡಿ ನಟರು!

    ಬೆಂಗಳೂರು: ಹೀಗೆಂದಾಕ್ಷಣ ಯಾರಿಗಾದರೂ ಗಾಬರಿಯಾಗೋದು ಸಹಜವೇ. ಆದರೆ ಕನ್ನಡದ ಖ್ಯಾತ ಕಾಮಿಡಿ ಕಲಾವಿದರಾದ ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಮಾರಾಟಕ್ಕಿಟ್ಟಿರೋ ಮನೆ ಸೇರಿಕೊಂಡು ಭೂತ ಪ್ರೇತ ಬಾಧೆಗೀಡಾಗಿರೋದಂತೂ ಸತ್ಯ. ಇಂಥಾದ್ದು ಸಂಭವಿಸಿರೋದು ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಎಂಬ ಚಿತ್ರದ ವಿಚಾರದಲ್ಲಿ. ಇದರಲ್ಲಿ ಈ ನಾಲ್ವರು ಲೀಡ್ ಕಾಮಿಡಿ ನಟರು ಡಿಫರೆಂಟಾಗಿರೋ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಜೊತೆಗೆ ಮಾರಾಟಕ್ಕಿಟ್ಟಿರೋ ಮನೆಯೊಳಗಿನ ವಿಚಿತ್ರ ಬೂತಬಾಧೆಯಿಂದ ತಾವು ಕಂಗಾಲಾಗಿ ಪ್ರೇಕ್ಷಕರಲ್ಲಿ ನಗೆಯುಕ್ಕಿಸಲು ರೆಡಿಯಾಗಿದ್ದಾರೆ.

    ಸಾಧು ಕೋಕಿಲಾ ಮತ್ತು ಚಿಕ್ಕಣ್ಣರಂಥಾ ನಟರನ್ನು ಈವರೆಗೂ ಕನ್ನಡದ ಪ್ರೇಕ್ಷಕರು ನಾನಾ ಪಾತ್ರಗಳಲ್ಲಿ ನೋಡಿದ್ದಾರೆ. ಆದರೆ ಇದೇ ವಾರ ಬಿಡುಗಡೆಯಾಗಲಿರುವ ಮನೆ ಮಾರಾಟಕ್ಕಿದೆ ಎಂಬ ಚಿತ್ರದಂಥಾ ಪಾತ್ರಗಳಲ್ಲಿ ಈ ಹಿಂದೆಂದೂ ನೋಡಿರಲು ಸಾಧ್ಯವೇ ಇಲ್ಲ ಅನ್ನೋದು ಚಿತ್ರತಂಡದ ವಿಶ್ವಾಸ. ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಟ್ರೇಲರ್‍ನಲ್ಲಿ ಇವರೆಲ್ಲರ ಪಾತ್ರಗಳ ಝಲಕ್‍ಗಳೂ ಸ್ಪಷ್ಟವಾಗಿಯೇ ಕಾಣಿಸಿವೆ. ಆದರೆ ಅದನ್ನೂ ಮೀರಿದ ಮಜಾ ಈ ಪಾತ್ರಗಳಿಂದ ಪ್ರೇಕ್ಷಕರಿಗೆ ಸಿಗಲಿದೆಯಂತೆ.

    ಸಾಧು ಕೋಕಿಲಾ ಕನ್ನಡ ಚಿತ್ರರಂಗದ ಹೆಮ್ಮೆಯ ಪ್ರತಿಭಾವಂತ ಹಾಸ್ಯ ಕಲಾವಿದ. ಅವರೊಂದು ಸಿನಿಮಾದಲ್ಲಿ ನಟಿಸಿದ್ದಾರೆಂದರೆ, ಅದು ವಿಶೇಷವಾಗಿರುತ್ತದೆಂದೇ ಅರ್ಥ. ಅವರ ಪಾತ್ರದ ಮೇಲೆ ಅಗಾಧ ಪ್ರಮಾಣದಲ್ಲಿ ನಿರೀಕ್ಷೆಉಗಳೂ ಇರೋದು ಸುಳ್ಳಲ್ಲ. ಆದರೆ ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಮಾತ್ರ ಪ್ರೇಕ್ಷಕರ್ಯಾರೂ ನಿರೀಕ್ಷೆ ಮಾಡದಂಥಾ ರೀತಿಯಲ್ಲಿ ಸಾಧು ಮಹಾರಾಜರ ಪಾತ್ರ ಮೂಡಿ ಬಂದಿದೆಯಂತೆ. ಇಲ್ಲಿ ನಾಲಕ್ಕು ಹಾಸ್ಯ ಕಲಾವಿದರ ಪಾತ್ರವೂ ಕೂಡಾ ಒಂದಕ್ಕಿಂತ ಒಂದು ಚೆಂದ ಎಂಬಂತೆ ಮೂಡಿ ಬಂದಿದೆ ಎಂಬ ಭರವಸೆ ನಿರ್ದೇಶಕರಲ್ಲಿದೆ. ಅದೇನೆಂಬುದು ಇನ್ನು ದಿನದೊಪ್ಪತ್ತಿನಲ್ಲಿಯೇ ಜಾಹೀರಾಗಲಿದೆ.

  • ಮಾರಾಟಕ್ಕಿರೋ ಮನೆ ಮೂಲಕ ಸಾಕಾರಗೊಂಡ ಮಹಾ ಕನಸು!

    ಮಾರಾಟಕ್ಕಿರೋ ಮನೆ ಮೂಲಕ ಸಾಕಾರಗೊಂಡ ಮಹಾ ಕನಸು!

    ಬೆಂಗಳೂರು: ಮಂಜು ಸ್ವರಾಜ್ ನಿರ್ದೇಶನ ‘ಮನೆ ಮಾರಾಟಕ್ಕಿದೆ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಎಸ್ ವಿ ಬಾಬು ನಿರ್ಮಾಣ ಮಾಡಿರೋ ಈ ಅದ್ದೂರಿ ಚಿತ್ರ ಭರಪೂರ ಕಾಮಿಡಿಯೊಂದಿಗೆ ರೂಪುಗೊಂಡಿದೆ ಎಂಬ ವಿಚಾರ ಈಗಾಗಲೇ ಟ್ರೇಲರ್ ನೊಂದಿಗೆ ಜಾಹೀರಾಗಿದೆ. ಈ ಮೂಲಕವೇ ಮಹಾ ಸಾಹಸವೊಂದನ್ನು ಮಂಜು ಸ್ವರಾಜ್ ಸಾಧ್ಯವಾಗಿಸಿಕೊಂಡಿದ್ದಾರೆ. ಅದು ಇಲ್ಲಿರೋ ಕಾಮಿಡಿ ನಟರನ್ನು ಒಂದುಗೂಡಿಸಿರೋ ಸಾಹಸ. ಇನ್ನುಳಿದಂತೆ ಈ ಸಿನಿಮಾ ಮೂಲಕವೇ ಕನ್ನಡ ಸಿನಿಮಾ ಪ್ರೇಕ್ಷಕರ ಅದೆಷ್ಟೋ ವರ್ಷಗಳ ಕನಸೊಂದು ನನಸಾಗಿದೆ!

    ಯಾವುದೇ ಸಿನಿಮಾ ಎಂಥಾದ್ದೇ ಕಥೆಜಯನ್ನೊಳಗೊಂಡಿದ್ದರೂ ಅದರ ಪರಿಪೂರ್ಣ ಸ್ಥಿತಿ ಕಾಮಿಡಿ ಝಲಕ್ಕಿನೊಂದಿಗೇ ಸಂಪನ್ನಗೊಳ್ಳುತ್ತದೆ. ಓರ್ವ ಕಾಮಿಡಿ ನಟನ ಹಾಸ್ಯದ ಹೊನಲಿನಲ್ಲಿ ಪ್ರೇಕ್ಷಕರೆಲ್ಲರೂ ಮಿಂದೆದ್ದು ತೃಪ್ತರಾಗುತ್ತಾರೆ. ಅಷ್ಟಕ್ಕೂ ಕನ್ನಡದಲ್ಲಿರೋ ಕಾಮಿಡಿ ನಟರ ಸಂಖ್ಯೆಯೇ ತೀರಾ ಕಡಿಮೆ. ಹಾಗೆ ಲೀಡ್‍ನಲ್ಲಿರೋ ಹಾಸ್ಯ ಕಲಾವಿದರನ್ನೆಲ್ಲ ಒಂದೇ ಚಿತ್ರದಲ್ಲಿ ನೋಡಬೇಕು, ಆ ಮೂಲಕ ಭರಪೂರ ಕಾಮಿಡಿ ಝಲಕ್ಕುಗಳಲ್ಲಿ ಮೈ ಮರೆಯ ಬೇಕೆಂಬುದು ಹಲವು ಪ್ರೇಕ್ಷಕರ ವರ್ಷಾಂತರಗಳ ಕನಸಾಗಿತ್ತು. ಆದರೆ ಮೇಲು ನೋಡಕ್ಕೆ ಸಾಮಾನ್ಯವಾಗಿ ಕಂಡರೂ ಒಪಂದಷ್ಟು ಹಾಸ್ಯ ಕಲಾವಿದರನ್ನು ಒಟ್ಟಿಗೆ ಸೇರಿಸೋದೇ ಒಂದು ಸಾಹಸ. ಅದನ್ನು ನಿರ್ದೇಶಕ ಮಂಜು ಸಾಧ್ಯವಾಗಿಸಿದ್ದಾರೆ.

    ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡರನ್ನು ಈ ಮೂಲಕ ಮಂಜು ಸ್ವರಾಜ್ ಒಟ್ಟಿಗೆ ನಟಿಸುವಂತೆ ಮಾಡಿದ್ದಾರೆ. ಈ ನಾಲಕ್ಕು ಮಂದಿಯೂ ಕಾಮಿಡಿಯಲ್ಲಿ ದೊಡ್ಡ ಹೆಸರು ಮಾಡಿರುವವರು. ಇವರೆಲ್ಲರೂ ಸದಾ ಒಂದಿಲ್ಲೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಪ್ರತೀ ದಿನವೂ ಒಂದಲ್ಲ ಒಂದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರೋ ಇವರೆಲ್ಲರನ್ನು ಒಂದುಗೂಡಿಸೋದೇ ಒಂದು ಸಾಹಸ. ಆದರೆ ಅದನ್ನು ಮಂಜು ಸ್ವರಾಜ್ ಲೀಲಾಜಾಲವಾಗಿಯೇ ಮಾಡಿ ಮುಗಿಸಿದ್ದಾರೆ. ಈ ಎಲ್ಲ ಕಲಾªವಿದರೂ ಕೂಡಾ ಈ ಸಿನಿಮಾಗಾಗಿ ಅದೆಷ್ಟೇ ಸವಾಲುಗಳೆದುರಾದರೂ ಲೆಕ್ಕಿಸದೇ ದುಡಿದಿದ್ದಾರೆ. ತಂತಮ್ಮ ಪಾತ್ರಗಳಲ್ಲಿ ಅದ್ಭುತವಾಗಿಯೇ ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ. ಅಂದಹಾಗೆ ಅತ್ಯಂತ ವಿಶೇಷವಾದ, ಮಜವಾದ ಕಥೆ ಮತ್ತು ಪಾತ್ರಗಳೊಂದಿಗೆ ಈ ಚಿತ್ರ ಇದೇ ವಾರ ತೆರೆ ಕಾಣಲಿದೆ.

  • ಮಾರಾಟಕ್ಕಿರೋ ಮನೆಯಲ್ಲಿ ಕಾಮಿಡಿ ಕಲರವ!

    ಮಾರಾಟಕ್ಕಿರೋ ಮನೆಯಲ್ಲಿ ಕಾಮಿಡಿ ಕಲರವ!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿರೋ ಅಷ್ಟೂ ಕಾಮಿಡಿ ಕಲಾವಿದರನ್ನು ಒಂದೇ ಚಿತ್ರದಲ್ಲಿ ನೋಡಬೇಕೆಂಬುದು ಬಹುತೇಕ ಪ್ರೇಕ್ಷಕರ ಹಲವಾರು ವರ್ಷಗಳ ಕನಸು. ಆದರೆ ಇದುವರೆಗೂ ಅದು ತೃಪ್ತಿದಾಯಕವಾಗಿ ಸಾಕಾರಗೊಂಡಿದ್ದಿಲ್ಲ. ಪ್ರೇಕ್ಷಕರಲ್ಲಿರೋ ಈ ಆಕಾಂಕ್ಷೆಯನ್ನು ಅರ್ಥೈಸಿಕೊಂಡಿರೋ ನಿರ್ದೇಶಕ ಮಂಜು ಸ್ವರಾಜ್ ‘ಮನೆ ಮಾರಾಟಕ್ಕಿದೆ’ ಚಿತ್ರದ ಮೂಲಕ ಲೀಡ್ ಕಾಮಿಡಿ ಕಲಾವಿದರನ್ನು ಕೂಡಿಟ್ಟುಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಆರಂಭ ಕಾಲದಿಂದಲೂ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇತ್ತು. ಈ ಟ್ರೇಲರರ್ ನೋಡಿದ ಮೇಲಂತೂ ಅದು ಇಮ್ಮಡಿಸಿದೆ. ಯಾಕೆಂದರೆ ಈ ಟ್ರೇಲರ್ ಅಷ್ಟೊಂದು ಮಜವಾಗಿ ಮೂಡಿ ಬಂದಿದೆ.

    ಮನೆ ಮಾರಾಟಕ್ಕಿದೆ ಎಸ್.ವಿ ಬಾಬು ನಿರ್ಮಾಣದ ಹದಿನಾರನೇ ಚಿತ್ರ. ಈವರೆಗೂ ಪಟಾಕಿ, ಶ್ರಾವಣಿ ಸುಬ್ರಮಣ್ಯದಂಥಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಡಮಾಡಿರುವ ಮಂಜು ಸ್ವರಾಜ್ ನಿರ್ದೇಶನದ ಐದನೇ ಚಿತ್ರ. ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಇದರ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಬಹು ವೈಶಿಷ್ಟ್ಯದ ಪಾತ್ರಕ್ಕೆ ಶ್ರುತಿ ಹರಿಹರನ್ ಜೀವ ತುಂಬಿದ್ದಾರೆ. ಇದೀಗ ಬಿಡುಗಡೆಯಾಗಿರೋ ಟ್ರೇಲರ್‍ನಲ್ಲಿ ಈ ಎಲ್ಲರ ಪಾತ್ರಗಳೂ ಕೂಡಾ ಪ್ರೇಕ್ಷಕರಿಗೆ ಪರಿಚಯವಾಗಿವೆ. ಅವೆಲ್ಲವೂ ತುಂಬಾನೇ ಮಜವಾದ ರೀತಿಯಲ್ಲಿ ಮೂಡಿ ಬಂದಿವೆ.

    ಈ ಟ್ರೇಲರ್ ಮೂಲಕವೇ ಮನೆ ಮಾರಾಟಕ್ಕಿದೆ ಎಂಬುದು ಕಾಮಿಡಿ ಹಾರರ್ ಜಾನರಿನ ಚಿತ್ರವೆಂಬುದು ಸ್ಪಷ್ಟವಾಗಿಯೇ ಗೊತ್ತಾಗಿದೆ. ಹೀಗೆ ಎಲ್ಲ ಕಾಮಿಡಿ ನಟರನ್ನೂ ಕೂಡಾ ಒಂದೆಡೆ ಸೇರಿಸೋ ಸಾಹಸದಲ್ಲಿ ನಿರ್ದೇಶಕ ಮಂಜು ಸ್ವಾರಾಜ್ ಗೆದ್ದಿದ್ದಾರೆಂಬುದಕ್ಕೆ, ಈ ಸಿನಿಮಾ ಜನರೆಲ್ಲರಿಗೆ ಇಷ್ಟವಾಗಿ ದೊಡ್ಡ ಮಟ್ಟದಲ್ಲಿಯೇ ಗೆಲ್ಲುತ್ತದೆ ಎಂಬುದಕ್ಕೆ ಈ ಟ್ರೇಲರ್‍ನ ತುಂಬಾ ಸಾಕ್ಷಿಗಳು ಸಿಗುತ್ತವೆ. ಇದು ಕಾಮಿಡಿ ಥ್ರಿಲ್ಲರ್ ಜಾನರಿನ ಚಿತ್ರವೆಂದಾಕ್ಷಣ ಸಿದ್ಧ ಸೂತ್ರಗಳಿಗೆ ತಕ್ಕುದಾದ ಕಲ್ಪನೆ ಇಟ್ಟುಕೊಳ್ಳುವಂತಿಲ್ಲ. ಯಾಕೆಂದರೆ ಪ್ರೇಕ್ಷಕರೆಲ್ಲರಿಗೂ ಸರ್‍ಪ್ರೈಸ್ ಎಂಬಂಥಾ ಹಲವಾರು ಅಂಶಗಳು ಇಲ್ಲಿವೆಯಂತೆ. ಅದೇನೆಂಬುದು ಶೀಘ್ರದಲ್ಲಿಯೇ ಜಾಹೀರಾಗಲಿದೆ.

  • ಗೋಲ್ಡನ್ ಸ್ಟಾರ್ ಆರೆಂಜ್‍ನಲ್ಲಿ ಇದ್ದಾನೊಬ್ಬ ಗೋಲ್ಡ್‌ಮ್ಯಾನ್‌!

    ಗೋಲ್ಡನ್ ಸ್ಟಾರ್ ಆರೆಂಜ್‍ನಲ್ಲಿ ಇದ್ದಾನೊಬ್ಬ ಗೋಲ್ಡ್‌ಮ್ಯಾನ್‌!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಚಿತ್ರ ಬಿಡುಗಡೆಯಾಗಲು ಇನ್ನೊಂದು ವಾರವಷ್ಟೇ ಬಾಕಿ ಉಳಿದಿದೆ. ಅದಾಗಲೇ ಪ್ರಶಾಂತ್ ರಾಜ್ ನಿರ್ದೇಶನದ ಈ ಚಿತ್ರ ನಾನಾ ಥರದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟೇ ತರದಲ್ಲಿ ಆಕರ್ಷಣೆಗಳನ್ನೂ ಹೊಂದಿರೋ ಆರೆಂಜ್‍ನಲ್ಲಿ ರವಿಶಂಕರ್ ಗೌಡ ಡಿಫರೆಂಟಾದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ!

    ರವಿಶಂಕರ್ ಗೌಡ ಮತ್ತು ಗಣೇಶ್ ನಿಜ ಜೀವನದಲ್ಲಿಯೂ ಸ್ನೇಹಿತರು. ಈ ಹಿಂದೆಯೂ ಒಂದಷ್ಟು ಚಿತ್ರಗಳಲ್ಲಿ ಇವರು ಒಟ್ಟಾಗಿ ನಟಿಸಿದ್ದಾರೆ. ಆರೆಂಜ್ ಚಿತ್ರದಲ್ಲಿಯೂ ಅದು ಮುಂದುವರೆದಿದೆ.

    ಈ ಚಿತ್ರದಲ್ಲಿಯೂ ಗಣೇಶ್ ಸ್ನೇಹಿತನಾಗಿ ನಟಿಸಿರೋ ರವಿಶಂಕರ್ ನಿಜವಾದ ಗೋಲ್ಡನ್ ಸ್ಟಾರ್ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಿರುದಿನ ಗಣೇಶ್ ಪಕ್ಕದಲ್ಲಿಯೇ ಇರುವಾಗ ರವಿಶಂಕರ್ ಹೇಗೆ ಗೋಲ್ಡನ್ ಸ್ಟಾರ್ ಆಗಲು ಸಾಧ್ಯ ಎಂಬ ಪ್ರಶ್ನೆ ಇದ್ದರೆ ಅದಕ್ಕೆ ಆರೆಂಜ್‍ನಲ್ಲಿ ಮಜವಾದ ಉತ್ತರ ಸಿಗಲಿದೆಯಂತೆ.

    ಒಂದರ್ಥದಲ್ಲಿ ಆರೆಂಜ್ ಚಿತ್ರದಲ್ಲಿ ರವಿಶಂಕರ್ ಅವರದ್ದು ಗೋಲ್ಡನ್ ಮ್ಯಾನ್ ಗೆಟಪ್ಪು. ಅದರ ಅಸಲಿ ಅಂದವನ್ನು ಆಸ್ವಾದಿಸಲು ಇನ್ನೊಂದು ವಾರ ಕಾಯಬೇಕಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv