Tag: Ravindra Venshi

  • `ಮಠ’ ಟ್ರೈಲರ್ ಲಾಂಚ್‌ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್

    `ಮಠ’ ಟ್ರೈಲರ್ ಲಾಂಚ್‌ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್

    ಚಂದನವನದಲ್ಲಿ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ ಜಗ್ಗೇಶ್(Jaggesh), ಗುರು ಪ್ರಸಾದ್(Guru Prasad) ಜುಗಲ್ ಬಂದಿಯ `ಮಠ’ ಇದೀಗ ಮತ್ತೆ ಸೌಂಡ್ ಮಾಡುತ್ತಿದೆ. ಅದೇ ಹೆಸರಿನ ಟೈಟಲ್ ಜೊತೆ ಭಿನ್ನ ಕಂಟೆಂಟ್ ಹೊತ್ತು ರವೀಂದ್ರ ವೆಂಶಿ ಮತ್ತು ತಂಡ ಮೋಡಿ ಮಾಡಲು ರೆಡಿಯಾಗಿದ್ದಾರೆ. ಸದ್ಯ ಈ ಚಿತ್ರದ ಟ್ರೈಲರ್ ಲಾಂಚ್‌ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್ ನೀಡಿದ್ದಾರೆ.

    ರವೀಂದ್ರ ವೆಂಶಿ ನಿರ್ದೇಶನದಲ್ಲಿ `ಮಠ’ ಸಿನಿಮಾ ಮೂಡಿ ಬಂದಿದ್ದು, ನೈಜ ಘಟನೆ ಆಧರಿಸಿ ಈ ಚಿತ್ರ ಮಾಡಲಾಗಿದೆ. ಇನ್ನೂ ʻಮಠʼ ಚಿತ್ರದ ಟ್ರೈಲರ್ ನೋಡಿ, ಚಿತ್ರತಂಡದ ಭಿನ್ನ ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ. ಇಡೀ ಚಿತ್ರತಂಡಕ್ಕೆ ದೊಡ್ಮನೆ ಸೊಸೆ ಅಶ್ವಿನಿ(Ashwini Puneeth Rajkumar) ಶುಭಹಾರೈಸಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕೇಳಿ ಬರಲಿದೆ ‘ಮೆಲ್ಲುಸಿರೆ ಸವಿಗಾನ’ ಹಾಡು

    ಇದೀಗ ಚಿತ್ರದ ಟ್ರೈಲರ್ ರಿಲೀಸ್ ಆಗಿ, ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. 300 ಮಠಗಳಲ್ಲಿ ಚಿತ್ರೀಕರಣ ಮಾಡಲಾಗಿರುವ ಈ ಸಿನಿಮಾ ಸದ್ಯದಲ್ಲೇ ತೆರೆಗೆ ಅಬ್ಬರಿಸಲಿದೆ.

    ಇನ್ನೂ ಚಿತ್ರದಲ್ಲಿ ಗುರುಪ್ರಸಾದ್, ಸಾಧುಕೋಕಿಲ, ಶರತ್ ಲೋಹಿತಾಶ್ವ, ಬೀರಾದರ್, ರಮೇಶ್ ಭಟ್, ಬ್ಯಾಂಕ್ ಜನಾರ್ಧನ್, ಗಿರಿ, ಮೂಗು ಸುರೇಶ್, ರಾಜು ತಾಳಿಕೋಟೆ ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆ.ಆರ್.ಎಸ್ ನಲ್ಲಿ ನಡೆದಂತಹ ಸತ್ಯ ಘಟನೆ ಆಧಾರಿತ ಚಿತ್ರಕ್ಕೆ ಮುಹೂರ್ತ

    ಕೆ.ಆರ್.ಎಸ್ ನಲ್ಲಿ ನಡೆದಂತಹ ಸತ್ಯ ಘಟನೆ ಆಧಾರಿತ ಚಿತ್ರಕ್ಕೆ ಮುಹೂರ್ತ

    ಹೆಸರಿಡದ ಚಿತ್ರ ’ಪ್ರೊಡಕ್ಷನ್ ನಂ.1’ ಸಿನಿಮಾದ ಮುಹೂರ್ತ (Muhurth) ಸಮಾರಂಭವು ವಿಜಯ ದಶಮಿ ದಿನದಂದು ಬೆಂಗಳೂರಿನ ನಂದಿನಿ ಲೇಔಟ್‌ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಮಾಜಿ ಕಾರ್ಪೋರೇಟರ್ ರಾಜೇಂದ್ರಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ’ಪುಟಾಣಿಸಫಾರಿ’ ’ವರ್ಣಮಯ’ ’ಮಠ’ ’ನೈಟ್‌ಕರ್ಫ್ಯೂ’ ಹಾಗೂ ಇದೇ ತಿಂಗಳು ಬಿಡುಗಡೆಯಾಗುತ್ತಿರುವ ’ವಾಸಂತಿ ನಲಿದಾಗ’ ಚಿತ್ರಗಳನ್ನು ನಿರ್ದೇಶನ ಮಾಡಿರುವ ರವೀಂದ್ರ ವೆಂಶಿ (Ravindra Venshi) ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.

    ರೈತ, ಉದ್ಯಮಿಯಾಗಿರುವ ಚಿಕ್ಕಬದರಿಕಲ್ಲು ಮೂಲದ ಆರ್.ಕೃಷ್ಣಮೂರ್ತಿ (R. Krishnamurthy) ಎಂ.ಆರ್.ಕೆ. ಫಿಲಿಂಸ್ ಮುಖಾಂತರ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ’ಹೀಗೊಂದು ರಕ್ತ ಚರಿತ್ರೆ’ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. 2004ರ ಕಾಲಘಟ್ಟದಲ್ಲಿ ಕೆಆರ್‌ಎಸ್‌ದಲ್ಲಿ ನಡೆದಂತ ಸತ್ಯ ಘಟನೆಯನ್ನು ಆಧರಿಸಿದ ಸಿನಿಮಾವು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಳ್ಳುತ್ತಿದೆ. ’ವಾಸಂತಿ ನಲಿದಾಗ’ ಚಿತ್ರದ ನಾಯಕ ರೋಹಿತ್‌ ಶ್ರೀಧರ್ (Rohit Sridhar) ಅವರಿಗೆ ಎರಡನೇ ಅವಕಾಶ. ಇದನ್ನೂ ಓದಿ:ಮಗಳ ಫೋಟೋ ಜೊತೆ ಹೆಸರು ರಿವೀಲ್ ಮಾಡಿದ `ಕಾಂತಾರಾ’ ಹೀರೋ ರಿಷಬ್ ಶೆಟ್ಟಿ

    ನಾಯಕಿ, ಉಳಿದ ತಾರಗಣದ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಿದೆ. ಹೆಸರಾಂತ ನಟ ಖಳನಾಗಿ ನಟಿಸುವ ಸಾಧ್ಯತೆ ಇದೆ. ಪ್ರಮೋದ್‌ ಭಾರತೀಯ ಛಾಯಾಗ್ರಾಹಕ ಇನ್ನುಳಿದಂತೆ, ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]