Tag: Ravindra Vamshi

  • ಟೇಕ್ವಾಂಡೋ ಗರ್ಲ್ : ಇದು ಋತು ವರ್ಷ ಹುಡುಗಿಯ ಸಾಹಸ ಕಥೆ

    ಟೇಕ್ವಾಂಡೋ ಗರ್ಲ್ : ಇದು ಋತು ವರ್ಷ ಹುಡುಗಿಯ ಸಾಹಸ ಕಥೆ

    ನ್ನಡದಲ್ಲಿ ಈಗಾಗಲೇ ಸಾಕಷ್ಟು ನೈಜ ಘಟನೆ ಇರುವ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಅಂತಹ ಸಿನಿಮಾಗಳ ಸಾಲಿಗೆ ಹೀಗೊಂದು ಚಿತ್ರ ಸೇರ್ಪಡೆಯಾಗಿದೆ. ಹೆಸರು ಟೇಕ್ವಾoಡೋ ಗರ್ಲ್ (Taekwondo Girl). ಈ ಚಿತ್ರದ ಹೈಲೆಟ್ ಹತ್ತು ವರ್ಷದ ಪೋರಿ. ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು,  ಸಿದ್ಧವಾಗಿದೆ. ಅಂದಹಾಗೆ ಇದೊಂದು ಟೇಕ್ವಾoಡೋ ಸಮರ ಕಲೆಯ ಸುತ್ತ ನಡೆವ ಕಥೆ. ನಾಲ್ಕು ಬಾರಿ ಅಂತರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಿ ಬ್ಲ್ಯಾಕ್ ಬೆಲ್ಟ್ ಪಡೆದ ಹುಡುಗಿ ಚಿತ್ರದ ಆಕರ್ಷಣೆ.

    ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಮೇಲೆ ನಿತ್ಯ  ಕೃತ್ಯಗಳು ನಡೆಯುತ್ತಲೇ ಇವೆ. ಹೆಣ್ಣು ತನ್ನನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಟೇಕ್ವಾಂಡೋ ಗರ್ಲ್ ಸಿನಿಮಾ ತಯಾರಾಗಿದೆ. ಋತು ಸ್ಪರ್ಷ ಚಿತ್ರದ ಪ್ರಮುಖ ಆಕರ್ಷಣೆ.  ಒಂದು ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟ ಪಡುತ್ತಾಳೆ, ಓದುವುದೇ ಕಷ್ಟ ಇರುವಂತಹ ಸಮಯದ ನಡುವೆ ಟೇಕ್ವಾಂಡೋ ಸಮರ ಕಲೆ ಹೇಗೆ ಕಲಿಯುತ್ತಾಳೆ, ಈ ವಿದ್ಯೆ ಮೂಲಕ  ಸಮಾಜಕ್ಕೆ ಹೇಗೆ ಮಾದರಿ ಆಗುತ್ತಾಳೆ ಎನ್ನುವುದೇ ಕಥೆಯ ಎಳೆ.

    ಇನ್ನು ಐದನೇ ತರಗತಿಯಲ್ಲಿ ಓದುತ್ತಿರುವ ಋತು ವರ್ಷ (Ritu Varsha) 3ನೇ ವಯಸ್ಸಿನಿಂದ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾಳೆ. ಒಟ್ಟು ಎಂಟು ಪರೀಕ್ಷೆಗಳನ್ನು ಎದುರಿಸಿ ಈಗ ಬ್ಲ್ಯಾಕ್ ಬೆಲ್ಟ್ ಪಡೆದು 4 ಅಂತರಾಷ್ಟ್ರೀಯ ಚ್ಯಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಹೆಮ್ಮೆಯ ಟೇಕ್ವಾಂಡೋ ಪಟು ಆಗಿದ್ದಾಳೆ. ಈಕೆಯ ಸಾಧನೆಗೆ ಮೂಲ ಪ್ರೇರಣೆ ತಾಯಿ ಸುಮೀತಾ ಪ್ರವೀಣ್ (Sumita Praveen). ಮಗಳಿಗೆ ಸ್ವಯಂ ರಕ್ಷಣೆ ಮುಖ್ಯ ಎನ್ನುವುದನ್ನು ತಿಳಿ ಹೇಳಿ ಆಕೆಯನ್ನು 3ನೇ ವಯಸ್ಸಿನಿಂದ ತಯಾರಿ ಮಾಡಿದ್ದಾರೆ. ಇದು ಮಗಳಿಗಷ್ಟೇ ಸೀಮಿತವಾಗಬಾರದು ಎಂದು ಅದನ್ನೇ ಒಂದು ಸಿನಿಮಾ ಮುಖಾಂತರ ಸಮಾಜಕ್ಕೆ ಹೇಳಲು ಟೇಕ್ವಾಂಡೋ ಗರ್ಲ್ ಸಿನಿಮಾ ನಿರ್ಮಾಪಕರಾಗಿಯೂ ಚಿತ್ರವನ್ನು ನಿರ್ಮಿಸಿದ್ದಾರೆ.

    ಈ ಚಿತ್ರಕ್ಕೆ ಅವರ ಪತಿ ಪ್ರವೀಣ್ ಭಾನು ಕೂಡ ಸಾಥ್ ನೀಡಿ ಮಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ. ಮಗಳ ಹುಟ್ಟು ಹಬ್ಬದಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ನನ್ನ ಮಗಳಷ್ಟೇ ಅಲ್ಲ ಎಲ್ಲಾ ಹೆಣ್ಣು ಮಕ್ಕಳು ಟೇಕ್ವಾಂಡೋ ಕಲೆ ಕಲಿಯ ಬೇಕು ಎಂಬುದು ಸುಮೀತಾ ಮಾತು. ಇದನ್ನೂ ಓದಿ:Gadar 2 ಸಕ್ಸಸ್, ರಾಜಕೀಯಕ್ಕೆ ವಿದಾಯ ಹೇಳ್ತಾರಾ ಸನ್ನಿ ಡಿಯೋಲ್?

    ಈ ಚಿತ್ರಕ್ಕೆ ರವೀಂದ್ರ ವಂಶಿ  (Ravindra Vamshi) ನಿರ್ದೇಶಕರು. ಈ ಹಿಂದೆ ಪುಟಾಣಿ ಸಫಾರಿ ಚಿತ್ರ ನಿರ್ದೇಶನ ಮಾಡಿದ್ದ ಇವರು, ಟೇಕ್ವಾಂಡೋ ಗರ್ಲ್ ಚಿತ್ರ ನಿರ್ದೇಶನಕ್ಕೆ 25 ದಿನ ತರಬೇತಿ ಪಡೆದು ಅದರ ಬಗ್ಗೆ ತಿಳಿದುಕೊಂಡು ನಂತರ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಇದು ಮಕ್ಕಳ ಚಿತ್ರ ನಿಜ ಆದರೆ ಮಕ್ಕಳಿಂದ ದೊಡ್ಡವರಿಗಾಗಿ ನಿರ್ಮಿಸಿರುವ ಚಿತ್ರ ಇದಾಗಿದ್ದು ಈ ಚಿತ್ರವನ್ನು ಸ್ಕೂಲ್ ಮಕ್ಕಳಿಗೆ ತೋರಿಸಲು ನಿರ್ದರಿಸಿದ್ದೇವೆ ಎಂದು ಹೇಳಿದರು. ಚಿತ್ರದಲ್ಲಿ ಸುಮಾರು ಇನ್ನೂರು ಟೇಕ್ವಾಂಡೋ ವಿಧ್ಯಾರ್ಥಿಗಳು ಅಭಿನಯಿಸಿದ್ದಾರೆ.

     

    ಚಿತ್ರಕ್ಕೆ ಸುಮಾರು ನೂರೈವತ್ತು ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿರುವ ಸಂಗೀತ ನಿರ್ದೇಶಕ M.S. ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.  ಚೆಕ್ ದೇ ಇಂಡಿಯಾ, ದಂಗಲ್ ನಂತಹ ಚಿತ್ರ ಇದಾಗಿದ್ದು ಎಲ್ಲರೂ ಇಂತಹ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ನಟ ಗಣೇಶ್ ರಾವ್ ಚಿತ್ರದ  ಹಾಡುಗಳನ್ನು ಬಿಡುಗಡೆ ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾದಲ್ಲಿ ಹಿಂದೂ `ಮಠ’ಗಳ ಅವಹೇಳನ – ಚೀಪ್ ಪಬ್ಲಿಸಿಟಿ ನನಗೆ ಬೇಡ ಎಂದ ನಿರ್ದೇಶಕ

    ಸಿನಿಮಾದಲ್ಲಿ ಹಿಂದೂ `ಮಠ’ಗಳ ಅವಹೇಳನ – ಚೀಪ್ ಪಬ್ಲಿಸಿಟಿ ನನಗೆ ಬೇಡ ಎಂದ ನಿರ್ದೇಶಕ

    ಬೆಂಗಳೂರು: ಕನ್ನಡ ಸಿನಿಮಾ (Kannada Cinema) ರಂಗದಲ್ಲಿ `ಮಠ’ದ (Math) ಹೆಸರಿನಲ್ಲಿ ಮತ್ತೊಂದು ಸಿನಿಮಾ ಮೂಡಿ ಬಂದಿದೆ. ರವೀಂದ್ರ ವಂಶಿ (Ravindra Vamshi) ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಮೊದಲ ಮಠ ಸಿನಿಮಾ ಮಾಡಿದ್ದ ಗುರುಪ್ರಸಾದ್ (Guruprasad), ತಬಲಾ ನಾಣಿ, ಮಂಡ್ಯ ರಮೇಶ್ (Mandya Ramesh) ಸೇರಿದಂತೆ ಹಲವರು ನಟಿಸಿದ್ದಾರೆ.

    ಸಿನಿಮಾ ಬಗ್ಗೆ ಈಗ ಹಲವು ವಿವಾದಗಳು ಭುಗಿಲೆದ್ದಿದೆ. ಇತ್ತೀಚೆಗೆ ಮಠದ ಸ್ವಾಮೀಜಿಗಳಿಗೆ ಅವಮಾನಿಸಲಾಗಿದೆ ಎಂದು ಹೇಳಿದ್ದ ಕಾಳಿಮಠದ ರಿಷಿಕುಮಾರ್ ಸ್ವಾಮೀಜಿ ಇದೀಗ, ಹಿಂದೂ ಮಠಗಳ ಬಗ್ಗೆ ಸಿನಿಮಾದಲ್ಲಿ ಕೀಳಾಗಿ ತೋರಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ರಿಷಬ್‌ಗೆ ಕಾಲಿಗೆ ಬಿದ್ದು ಬನ್ನಿ- ‘ಮಠ’ ನಿರ್ದೇಶಕನಿಗೆ ರಿಷಿ ಕುಮಾರ ಸ್ವಾಮಿ ಕ್ಲಾಸ್

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Karnataka Film Chamber Of Commerce) ಚಿತ್ರತಂಡದ (Film Team) ವಿರುದ್ಧ ದೂರು ನೀಡಿರುವ ರಿಷಿಕುಮಾರ ಸ್ವಾಮೀಜಿ (Rishikumara Swamy), `ಮಠ’ ಟ್ರೇಲರ್ ಸಂಭಾಷಣೆಗಳಿಗೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಿತ್ರತಂಡದೊಂದಿಗೆ ಮುಖಾಮುಖಿಯಾಗಿ ಚರ್ಚಿಸಿದ್ದಾರೆ. ಇದನ್ನೂ ಓದಿ: ಟಾಲಿವುಡ್ ಲೆಜೆಂಡ್‌ ಬಾಲಯ್ಯ ಮುಂದೆ ಅಬ್ಬರಿಸಲಿದ್ದಾರೆ `ಕೆಜಿಎಫ್ 2′ ನಟ

    ಇದಕ್ಕೆ ಖಡಕ್ಕಾಗಿ ಕ್ಲ್ಯಾರಿಟಿ ಕೊಟ್ಟಿರೋ ನಿರ್ದೇಶಕ ರವೀಂದ್ರ ವಂಶಿ (Ravindra Vamshi), ನಾನು ಸುಮ್ಮನೆ ಸಿನಿಮಾ ಮಾಡಿಲ್ಲ, ನಾನು 149 ದಿನ, 70ಕ್ಕೂ ಹೆಚ್ಚು ಮಠಗಳಲ್ಲಿ ಶೂಟ್ ಮಾಡಿದ್ದೀನಿ. ನನಗೆ ಎಲ್ಲ ಧರ್ಮ, ಪರಂಪರೆಗಳ ಬಗ್ಗೆ ಗೌರವವಿದೆ. ನೀವು ಮೊದಲು ಸಿನಿಮಾ ನೋಡಿ ಮಾತನಾಡಿ. ನಾನು ಸಾಕಷ್ಟು ಅಧ್ಯಯನ ಮಾಡಿಯೇ ಸಿನಿಮಾ ಮಾಡಿದ್ದೀನಿ. ನನ್ನ ಸಿನಿಮಾಗೆ ಚೀಪ್ ಪಬ್ಲಿಸಿಟಿ ಅಗತ್ಯವಿಲ್ಲ. ನನ್ನ ಮಠ ಚಿತ್ರಕ್ಕೆ ಸುಳ್ಳು ಪ್ರಚಾರ ಬೇಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]