Tag: Ravindra Jadeja

  • ವಾರ್ನ್ ಭವಿಷ್ಯ ನುಡಿದ ಯುವಕ – ರಾಕ್‍ಸ್ಟಾರ್ ಜಡೇಜಾ ದಾಖಲೆಯ ಶತಕ

    ವಾರ್ನ್ ಭವಿಷ್ಯ ನುಡಿದ ಯುವಕ – ರಾಕ್‍ಸ್ಟಾರ್ ಜಡೇಜಾ ದಾಖಲೆಯ ಶತಕ

    ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನ ಭಾರತದ ಆಲ್‍ರೌಂಡರ್ ಆಟಗಾರ ರವೀಂದ್ರ ಜಡೇಜಾ ದಾಖಲೆಯ ಶತಕ ಸಿಡಿಸಿ ಮೆರೆದಿದ್ದಾರೆ.

    ಎರಡನೇ ದಿನದಾಟದ ಆರಂಭದಿಂದಲು ಬೌಂಡರಿ ಸಿಕ್ಸರ್‌ಗಳ ಮೂಲಕ ಅದ್ಭುತ ಇನ್ನಿಂಗ್ಸ್ ಕಟ್ಟಿದ ಜಡೇಜಾ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಶತಕದ ಬಳಿಕ ಮತ್ತೆ ರನ್ ವೇಗ ಹೆಚ್ಚಿಸಿಕೊಂಡ ಜಡ್ಡು ಅಜೇಯ 175 ರನ್ (228 ಎಸೆತ, 17 ಬೌಂಡರಿ, 3 ಸಿಕ್ಸ್) ಹೊಡೆಯುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಇದರೊಂದಿಗೆ ಜಡ್ಡು 7ನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮ್ಯಾನ್ ಒಬ್ಬ ಸಿಡಿಸಿದ ಅತೀ ಹೆಚ್ಚು ರನ್‍ಗಳ ಸರದಾರ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: 10 ವರ್ಷದ ಹುಡುಗ ಎಂದಿದ್ದ ಶೇನ್ ವಾರ್ನ್ ಕನಸಲ್ಲಿ ಸಚಿನ್ ಬಂದಿದ್ದು ಹೇಗೆ..?

    ಈ ಮೊದಲು 7ನೇ ಕ್ರಮಾಂಕದಲ್ಲಿ ಕಪಿಲ್ ದೇವ್ 163 ರನ್ ಸಿಡಿಸಿದ ದಾಖಲೆ ಇತ್ತು. ಈ ದಾಖಲೆಯನ್ನು ಜಡೇಜಾ ಮುರಿದು ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. 7ನೇ ಕ್ರಮಾಂಕದಲ್ಲಿ ಅತೀ ಹೆಚ್ಚು ರನ್ ಸಿಡಿಸಿದವರ ಪಟ್ಟಿಯಲ್ಲಿ ಜಡೇಜಾ ಮೊದಲ ಸ್ಥಾನದಲ್ಲಿದ್ದರೆ, ಆ ಬಳಿಕ ಕಪಿಲ್ ದೇವ್, ನಂತರ ಕ್ರಮವಾಗಿ 159 ರನ್ ಸಿಡಿಸಿರುವ ರಿಷಬ್ ಪಂತ್ ಮತ್ತು 144 ರನ್ ಸಿಡಿಸಿರುವ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ಇದನ್ನೂ ಓದಿ: ಇಂದು ಭಾವನಾತ್ಮಕ ಪೋಸ್ಟ್ ಮಾಡಿದ್ದ ಶೇನ್ ವಾರ್ನ್

    ಜಡೇಜಾ ತನ್ನ ಟೆಸ್ಟ್ ಕ್ರಿಕೆಟ್‍ನ ಎರಡನೇ ಶತಕ ಸಿಡಿಸಿದ ಬಳಿಕ ನಿನ್ನೆ ಹೃದಾಯಘಾತದಿಂದ ಸಾವನ್ನಪ್ಪಿದ ಆಸ್ಟ್ರೇಲಿಯಾದ ಲೆಜೆಂಡ್ ಕ್ರಿಕೆಟಿಗ ಶೇನ್ ವಾರ್ನ್ ಅವರಿಗೆ ಅರ್ಪಿಸಿದ್ದಾರೆ. ವಾರ್ನ್ ಈ ಹಿಂದೆ ರವೀಂದ್ರ ಜಡೇಜಾ ಮುಂದೊಂದು ದಿನ ಕ್ರಿಕೆಟ್‍ನ ರಾಕ್‍ಸ್ಟಾರ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಈ ಮಾತು ವಾರ್ನ್ ನಿಧನದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ.

  • ಸಖತ್ ಸದ್ದು ಮಾಡುತ್ತಿದೆ ಜಡ್ಡುವಿನ ಪುಷ್ಟ ಲುಕ್

    ಸಖತ್ ಸದ್ದು ಮಾಡುತ್ತಿದೆ ಜಡ್ಡುವಿನ ಪುಷ್ಟ ಲುಕ್

    ಮುಂಬೈ: ಟೀಂ ಇಂಡಿಯಾದ ಸ್ಟಾರ್ ಆಲ್‍ರೌಂಡರ್ ರವೀಂದ್ರ ಜಡೇಜಾ, ಅಲ್ಲು ಅರ್ಜುನ್ ಅವರ ಪುಷ್ಟ ಚಿತ್ರದ ಗೆಟಪ್‍ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

    ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ನಟಿಸಿರುವ ಪುಷ್ಟ ಚಿತ್ರ ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ. ಚಿತ್ರದ ಹಾಡು ಸೇರಿದಂತೆ ಖಡಕ್ ಡೈಲಾಗ್‍ಗಳು ಪ್ರೇಕ್ಷಕರ ಬಾಯಲ್ಲಿ ಮಾರ್ದನಿಸುತ್ತಿದೆ. ಇದನ್ನೂ ಓದಿ: ಫೀಲ್ಡಿಂಗ್‍ನಲ್ಲಿ ವಿರಾಟ್ ಕೊಹ್ಲಿ ಶತಕ

    ಪುಷ್ಟ ಸುನಿಮಾದಲ್ಲಿ ಅಲ್ಲು ಅರ್ಜುನ್ ಗಡ್ಡದಾರಿಯಾಗಿ ಕೆಲವು ಖಡಕ್ ಡೈಲಾಗ್‍ಗಳನ್ನು ಹೇಳಿದ್ದರು. ಆ ಡೈಲಾಗ್‍ಗಳು ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ಕೇಳಿಬರುತ್ತಿದೆ. ಚಿತ್ರ ಬಿಡುಗಡೆಯಾದ ಬಳಿಕ ಅದರಲ್ಲಿನ ಕೆಲವು ಡೈಲಾಗ್‍ಗಳನ್ನು ಆರಂಭದಿಂದಲು, ಗಾಯಾಳುವಾಗಿ ಟೀಂ ಇಂಡಿಯಾದಿಂದ ಹೊರಗುಳಿದಿರುವ ಜಡ್ಡು ತಮ್ಮ ಫ್ರೀ ಟೈಮ್‌ನಲ್ಲಿ ಹೇಳುತ್ತ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಇದನ್ನೂ ಓದಿ: ಹರಾಜಿಗೂ ಮುನ್ನ 3 ಆಟಗಾರರನ್ನು ಆಯ್ಕೆ ಮಾಡಿ: ಲಕ್ನೋ, ಅಹಮದಾಬಾದ್‍ಗೆ ಡೆಡ್‍ಲೈನ್

    ಇದೀಗ ಜಡೇಜಾ ಒಂದು ಹೆಜ್ಜೆ ಮುಂದೆ ಹೋಗಿ ಅಲ್ಲು ಅರ್ಜುನ್ ಚಿತ್ರದ ಪೋಸ್ಟರ್‌ನಲ್ಲಿ ಕಾಣಿಸಿಕೊಂಡ ಲುಕ್‍ನಲ್ಲಿ ಜಡೇಜಾ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಜಡ್ಡು ಹಂಚಿಕೊಂಡಿದ್ದು. ಫೋಟೋದಲ್ಲಿ ಬೀಡಿ ಸೇದುವ ದೃಶ್ಯ ಕಾಣುತ್ತಿದೆ. ಹಾಗಾಗಿ ಧೂಮಪಾನ ಆರೋಗ್ಯಕ್ಕೆ ಹಾನಿಕರ ನಾನು ಗ್ರಾಫಿಕ್ಸ್‌ನಿಂದಾಗಿ ಈ ರೀತಿ ಕಾಣಿಸಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

  • ಬೆಂಗಳೂರಿನಲ್ಲಿ ರೋಹಿತ್, ಜಡೇಜಾ ಪ್ರಾಕ್ಟೀಸ್

    ಬೆಂಗಳೂರಿನಲ್ಲಿ ರೋಹಿತ್, ಜಡೇಜಾ ಪ್ರಾಕ್ಟೀಸ್

    ಬೆಂಗಳೂರು: ಗಾಯಳುವಾಗಿ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿದಿರುವ ಟೀಂ ಇಂಡಿಯಾದ ಸೀಮಿತ ಓವರ್‌ಗಳ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಆಲ್‍ರೌಂಡರ್ ರವೀಂದ್ರ ಜಡೇಜಾ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(NCA) ಮುಖ್ಯಸ್ಥರಾದ ಲಕ್ಷ್ಮಣ್ ಗರಡಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

    ಶರ್ಮಾ ಮತ್ತು ಜಡೇಜಾ ಬೆಂಗಳೂರಿನಲ್ಲಿರುವ NCA ಅಕಾಡೆಮಿಯಲ್ಲಿ ಗಾಯದಿಂದ ಚೇತರಿಸಿಕೊಳ್ಳಲು ಆಗಮಿಸಿದ್ದು, ಈಗಾಗಲೇ ಅಭ್ಯಾಸ ಆರಂಭಿಸಿ ಮತ್ತೆ ಫಿಟ್ ಆಗಿ ತಂಡಕ್ಕೆ ಕಮ್‍ಬ್ಯಾಕ್ ಆಗಲು ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ವಿ.ವಿ.ಎಸ್ ಲಕ್ಷ್ಮಣ್ ಎನ್‍ಸಿಎ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದರು. ಅವರು ಇದೀಗ ರೋಹಿತ್ ಮತ್ತು ಜಡೇಜಾಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಇದನ್ನೂ ಓದಿ: ಎನ್‌ಸಿಎಯಲ್ಲಿ ಪಾಠ ಆರಂಭಿಸಿದ ಲಕ್ಷ್ಮಣ್

    ರವೀಂದ್ರ ಜಡೇಜಾ ಮೊಣಕಾಲು ಗಾಯದಿಂದ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದು, ರೋಹಿತ್ ಮುಂಬೈನಲ್ಲಿ ಅಭ್ಯಾಸದ ವೇಳೆ ಗಾಯಗೊಂಡು ಮೂರು ಅಥವಾ ನಾಲ್ಕು ವಾರಗಳ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ತಿಳಿಸಿದ್ದರು. ಇದೀಗ ಇವರಿಬ್ಬರೂ ಕೂಡ ಬೆಂಗಳೂರಿನಲ್ಲಿ ಗಾಯದಿಂದ ಚೇತರಿಕೆ ಕಾಣುತ್ತಿದ್ದಾರೆ. ಇದನ್ನೂ ಓದಿ: ಹೇಳದೇ ಕೇಳದೇ ನಾಯಕ ಪಟ್ಟದಿಂದ ತೆಗೆದ್ರು – ಮೌನ ಮುರಿದ ಕೊಹ್ಲಿ

  • ಜಡೇಜಾ ಬೌಲಿಂಗ್ ಆ್ಯಕ್ಷನ್ ಅನುಕರಿಸಿದ ಬುಮ್ರಾ

    ಜಡೇಜಾ ಬೌಲಿಂಗ್ ಆ್ಯಕ್ಷನ್ ಅನುಕರಿಸಿದ ಬುಮ್ರಾ

    ದುಬೈ: ಟೀಂ ಇಂಡಿಯಾದ ಸ್ಟಾರ್ ಆಲ್‍ರೌಂಡರ್ ರವೀಂದ್ರ ಜಡೇಜಾರ ಬೌಲಿಂಗ್ ಶೈಲಿಯಂತೆ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಿ ಗಮನಸೆಳೆದಿದ್ದಾರೆ.

    ಟಿ20 ವಿಶ್ವಕಪ್‍ನಲ್ಲಿ ಭಾರತ ತಂಡ ಸೆಮಿಫೈನಲ್‍ಗೇರಲು ವಿಫಲವಾಗಿ ಟೂರ್ನಿಯಿಂದ ಹೊರ ಬಿದ್ದಿದೆ. ಇದೀಗ ಐಸಿಸಿ ದುಬೈನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಬುಮ್ರಾ, ಜಡೇಜಾ ಬೌಲಿಂಗ್ ಶೈಲಿಯನ್ನು ಅನುಕರಿಸಿದ್ದರು. ಈ ವೀಡಿಯೋವನ್ನು ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ಜಡೇಜಾರ ದೊಡ್ಡ ಅಭಿಮಾನಿ ಎಂದು ಅಡಿಬರಹ ಕೊಟ್ಟು ಪೋಸ್ಟ್ ಮಾಡಿದೆ. ಇದನ್ನೂ ಓದಿ: ಅಂತ್ಯವಾಯಿತು ಟೀಂ ಇಂಡಿಯಾದಲ್ಲಿ ಕೊಹ್ಲಿ, ಶಾಸ್ತ್ರಿ ಯುಗ

     

    View this post on Instagram

     

    A post shared by ICC (@icc)

    ವೀಡಿಯೋದಲ್ಲಿ ಬುಮ್ರಾ ತಮ್ಮ ಎಂದಿನ ಶೈಲಿಯ ವೇಗದ ಬೌಲಿಂಗ್ ಬಿಟ್ಟು, ಜಡೇಜಾರಂತೆ ಸ್ಪಿನ್ ಬೌಲಿಂಗ್ ಮಾಡಿ ಸಂಭ್ರಮಿಸಿದ್ದಾರೆ. ಜಡೇಜಾ ಯಾವ ರೀತಿ ಬೌಲಿಂಗ್ ಆ್ಯಕ್ಷನ್ ಮಾಡುತ್ತಾರೋ ಅದೇ ರೀತಿ ಅನುಕರಿಸಿದ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಇದನ್ನೂ ಓದಿ: ಆರ್‌ಸಿಬಿ ಮುಖ್ಯ ಕೋಚ್ ಆಗಿ ಸಂಜಯ್‌ ಬಂಗಾರ್‌ ಆಯ್ಕೆ

  • ಧೋನಿ ಗೂಗ್ಲಿಗೆ ಕ್ಲೀನ್ ಬೌಲ್ಡ್ ಆದ ಜಡೇಜಾ

    ಧೋನಿ ಗೂಗ್ಲಿಗೆ ಕ್ಲೀನ್ ಬೌಲ್ಡ್ ಆದ ಜಡೇಜಾ

    ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಿರುಸಿನ ಬ್ಯಾಟಿಂಗ್‍ಗೆ ಹೆಸರುವಾಸಿ. ಇದೀಗ ಧೋನಿ ಬ್ಯಾಟಿಂಗ್ ಬಿಟ್ಟು ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿ ಸಹ ಆಟಗಾರ ಜಡೇಜಾರನ್ನು ಕ್ಲೀನ್ ಬೌಡ್ಡ್ ಮಾಡಿದ್ದಾರೆ.

    ದುಬೈನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಚೆನ್ನೈ ತಂಡ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಆಡಿರುವ ಎರಡು ಪಂದ್ಯಗಳನ್ನು ಗೆದ್ದು ಪ್ಲೇ ಆಫ್‍ನತ್ತ ಕಣ್ಣಿಟ್ಟಿದೆ. ಈ ನಡುವೆ ತಂಡದ ಆಟಗಾರರು ಕೂಡ ದುಬೈನ ಆನ್ ದಿ ಫೀಲ್ಡ್ ಮತ್ತು ಆಫ್ ದಿ ಫೀಲ್ಡ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಚೆನ್ನೈ ತಂಡ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಧೋನಿ, ಜಡೇಜಾಗೆ ಬೌಲಿಂಗ್ ಮಾಡಲು ಮುಂದಾಗಿದ್ದಾರೆ. ಜಡೇಜಾ ಉತ್ತಮ ಬ್ಯಾಟಿಂಗ್ ಪರಾಕ್ರಮ ಮೆರೆದು ಬೌಂಡರಿ, ಸಿಕ್ಸ್ ಸಿಡಿಸಿ ಧೋನಿಗೆ ಸವಾಲೆಸೆದರೆ, ಕಡೆಯಲ್ಲಿ ಧೋನಿ ಗೂಗ್ಲಿಗೆ, ಜಡ್ಡು ಕ್ಲೀನ್ ಬೌಲ್ಡ್ ಆಗಿದ್ದಾರೆ. ಇದನ್ನೂ ಓದಿ: ಇಂದು ಆರ್​ಸಿಬಿ, ಮುಂಬೈ ಕದನ – ಗೆಲುವಿಗಾಗಿ ವಿರಾಟ್, ರೋಹಿತ್ ಬಿಗ್ ಫೈಟ್

    ಧೋನಿ ಹಾಗೂ ಜಡೇಜಾ ನಡುವಿನ ಕಾದಾಟದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಹಾಕಿಕೊಂಡಿದೆ. ವೀಡಿಯೋದಲ್ಲಿ ಮೊದಲು ಜಡೇಜಾ, ಧೋನಿಯ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಬೌಂಡರಿ, ಸಿಕ್ಸ್ ಸಿಡಿಸಿದರು. ಆದರೂ ಕೂಡ ಧೋನಿ ಬೌಲಿಂಗ್ ಮುಂದುವರೆಸಿ ಜಡೇಜಾರನ್ನು ಬೌಲ್ಡ್ ಮಾಡುವ ಮೂಲಕ ವಿಕೆಟ್ ಕಿತ್ತು ಸಂಭ್ರಮ ಪಟ್ಟರು. ಇದನ್ನೂ ಓದಿ: ಜೇಸನ್ ಹೋಲ್ಡರ್ ಏಕಾಂಗಿ ಹೋರಾಟ ವ್ಯರ್ಥ: ಪಂಜಾಬ್‍ಗೆ ರೋಚಕ ಗೆಲುವು

  • ಐಪಿಎಲ್‍ನಲ್ಲಿ ರನೌಟ್ ದಾಖಲೆ ಬರೆದ ರವೀಂದ್ರ ಜಡೇಜಾ

    ಐಪಿಎಲ್‍ನಲ್ಲಿ ರನೌಟ್ ದಾಖಲೆ ಬರೆದ ರವೀಂದ್ರ ಜಡೇಜಾ

    ಮುಂಬೈ: ಕ್ರಿಕೆಟ್‍ನಲ್ಲಿ ಬ್ಯಾಟ್ಸ್ ಮ್ಯಾನ್ ಮತ್ತು ಬೌಲರ್‍ ಗಳೆಷ್ಟು ಮುಖ್ಯವೂ ಅಷ್ಟೇ ಮುಖ್ಯ ಒಬ್ಬ ಉತ್ತಮ ಫೀಲ್ಡರ್ ಕೂಡ ಮುಖ್ಯ. ಭಾರತ ತಂಡದ ಅದ್ಭುತ ಫೀಲ್ಡರ್‍ ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ ಫೀಲ್ಡಿಂಗ್‍ನಲ್ಲಿ ಇದೀಗ ನಡೆಯುತ್ತಿರುವ ಐಪಿಎಲ್‍ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಜಡ್ಡು, ತನ್ನ ಫೀಲ್ಡಿಂಗ್ ಕರಾಮತ್ತನ್ನು ಮತ್ತೊಮ್ಮೆ ತೋರಿಸಿದ್ದಾರೆ. ಜಡ್ಡು ಒಬ್ಬ ಆಲ್‍ರೌಂಡರ್ ಆಟಗಾರ ಎಂಬುದನ್ನು ಪದೇ ಪದೇ ಮೈದಾನದಲ್ಲಿ ಪ್ರೂವ್ ಮಾಡುತ್ತಿದ್ದು, ಇದೀಗ ತನ್ನ ಬುಲೆಟ್ ತ್ರೋ ಮೂಲಕ ರನೌಟ್ ಮಾಡಿ ಹೊಸ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.

    ಚೆನ್ನೈ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಪಂಜಾಬ್ ತಂಡದ ಆಟಗಾರ ಕ್ರಿಸ್ ಗೇಲ್ ಸ್ಟ್ರೈಕ್ ನಲ್ಲಿ ಚುರುಕಿನ ರನ್ ಓಡಲು ತಂಡದ ನಾಯಕ ಕನ್ನಡಿಗ ಕೆ.ಎಲ್ ರಾಹುಲ್‍ಗೆ ಕರೆ ನೀಡಿದರು. ಅದರಂತೆ ರನ್ ಕದಿಯಲು ಮುಂದಾದ ರಾಹುಲ್ ಇನ್ನೇನು ಕ್ರಿಸ್ ಮುಟ್ಟಬೇಕೆನ್ನುವಷ್ಟರಲ್ಲಿ ಪಾಯಿಂಟ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಜಡೇಜಾ ನುಗ್ಗಿ ಬಂದು ಡೈರೆಕ್ಟ್ ಹಿಟ್ ಹೊಡೆದರು. ನಂತರ ಮೂರನೇ ಅಂಪೈರ್ ಇದನ್ನು ಸರಿಯಾಗಿ ಪರೀಕ್ಷಿಸಿ ರನೌಟ್ ಎಂದು ತೀರ್ಪು ನೀಡಿದರು. ಈ ಮೂಲಕ ಜಡೇಜಾ ಐಪಿಎಲ್‍ನಲ್ಲಿ 22 ರನೌಟ್ ಮಾಡುವುದರೊಂದಿಗೆ ನೂತನ ದಾಖಲೆ ನಿರ್ಮಿಸಿದರು.

    ಈವರೆಗಿನ ಆವೃತ್ತಿಗಳನ್ನು ಗಮನಿಸಿದರೆ ಐಪಿಎಲ್‍ನಲ್ಲಿ ಅದೇಷ್ಟೋ ರನೌಟ್‍ಗಳು ಕಣ್ಣಮುಂದೆ ಬರುತ್ತದೆ. ಅದರಲ್ಲಿ ಇದೀಗ ಜಡೇಜಾ ಅವರ ರನೌಟ್ ಕೂಡ ಸೇರಿಕೊಂಡಿದೆ. ಐಪಿಎಲ್‍ನಲ್ಲಿ ಈ ವರೆಗೆ ಅತೀ ಹೆಚ್ಚು ರನೌಟ್ ಮಾಡಿದ ದಾಖಲೆ ಚೆನ್ನೈ ತಂಡದ ನಾಯಕ ಧೋನಿ ಅವರ ಹೆಸರಲ್ಲಿತ್ತು. ಧೋನಿ ಈವರೆಗೆ ಐಪಿಎಲ್‍ನಲ್ಲಿ 21 ರನೌಟ್ ಮಾಡಿದ್ದರು. ಇದೀಗ ಜಡೇಜಾ 22 ರನೌಟ್ ಮಾಡುವ ಮೂಲಕ ತನ್ನ ತಂಡದ ನಾಯಕನ ರನೌಟ್ ದಾಖಲೆಯನ್ನು ಮುರಿದು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

  • ಭಾರತದ ಡ್ರೆಸ್ಸಿಂಗ್ ರೂಮ್ ಮಾತುಕತೆ ಬಹಿರಂಗಪಡಿಸಿದ ಜಡೇಜಾ

    ಭಾರತದ ಡ್ರೆಸ್ಸಿಂಗ್ ರೂಮ್ ಮಾತುಕತೆ ಬಹಿರಂಗಪಡಿಸಿದ ಜಡೇಜಾ

    – ಅಡಿಲೇಡ್ ಟೆಸ್ಟ್ ಸೋಲಿನ ಬಳಿಕ ಆಟಗಾರರ ಮಾತುಕತೆ

    ನವದೆಹಲಿ: ಭಾರತ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗಾವಸ್ಕರ್ ಟ್ರೋಫಿ ಗೆದ್ದ ಬಳಿಕ, ಇದೀಗ ಮೊದಲ ಟೆಸ್ಟ್ ಸೋಲಿನ ನಂತರ ಡ್ರೆಸ್ಸಿಂಗ್ ರೂಮ್‍ನಲ್ಲಿ ಏನೆಲ್ಲಾ ಮಾತುಕತೆ ನಡೆಯಿತು ಎಂಬುದನ್ನು ಭಾರತದ ಸ್ಟಾರ್ ಆಲ್‍ರೌಂಡರ್ ರವೀಂದ್ರ ಜಡೇಜಾ ಬಹಿರಂಗ ಪಡೆಸಿದ್ದಾರೆ.

    ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತಿತ್ತು. ಇದರೊಂದಿಗೆ ಭಾರತದ ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿದು ಎಲ್ಲರ ಟೀಕೆಗೆ ಗುರಿಯಾಗಿತ್ತು. ಈ ನಡುವೆ ಭಾರತಕ್ಕೆ ಕಾಡಿದ ಗಾಯದ ಸಮಸ್ಯೆ ಮತ್ತು ತಂಡದ ನಾಯಕ ವಿರಾಟ್ ಕೊಹ್ಲಿ ತಂಡದಿಂದ ರಜೆ ಪಡೆದು ದೂರ ಹೋದಾಗ ಭಾರತ ಮತ್ತೆ ಹಿನ್ನಡೆಗೆ ಒಳಪಟ್ಟಿತ್ತು.

    ಈ ಎಲ್ಲಾ ಆಗುಹೋಗುಗಳ ನಡುವೆ ಭಾರತ ಆಸ್ಟ್ರೇಲಿಯಾದ ವೇಗಿಗಳ ಉರಿಚೆಂಡಿನ ದಾಳಿಗೆ ತಡೆಯೊಡ್ಡಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಸೆಟೆದುನಿಂತು ಭಾರತ ಸರಣಿ ಜಯಿಸಿಕೊಂಡಿತ್ತು. ಆದರೆ ಇದರ ಹಿಂದೆ ಆಟಗಾರರ ಮನಸ್ಥಿತಿ ಯಾವ ರೀತಿ ಬದಲಾಗಿತ್ತು ಎಂಬುದನ್ನು ಜಡೇಜಾ ರಿವೀಲ್ ಮಾಡಿದ್ದಾರೆ.

    ಮೊದಲ ಟೆಸ್ಟ್ ಸೋಲಿನ ಬಳಿಕ ಎಲ್ಲರೂ ಡ್ರೆಸ್ಸಿಂಗ್ ರೂಮ್‍ನಲ್ಲಿ ಕೂತು ಸೋಲಿನ ಬಗ್ಗೆ ಯೋಚಿಸದೆ ಆಸ್ಟ್ರೇಲಿಯಾಗೆ ಯಾವರೀತಿ ಮುಂದಿನ ಪಂದ್ಯಗಳಲ್ಲಿ ಪ್ರತ್ಯುತ್ತರ ಕೊಡಬಹುದು ಎಂಬುದನ್ನು ಯೋಚಿಸಿದೆವು. ನಾವು ಬರಿ ಮುಂದಿನ ಮೂರು ಪಂದ್ಯಗಳ ಬಗ್ಗೆ ಯೋಚನೆ ಮಾಡಿದೆವು ಹೊರತು ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಎಲ್ಲ ಆಟಗಾರರೂ ತಮ್ಮ ಮನಸ್ಸಿತಿಯನ್ನು ಬದಲಾಯಿಸಿಕೊಂಡು, ಪ್ರತಿಯೊಬ್ಬರು ತಮಗೆ ತಾವೇ ಆತ್ಮಸೈರ್ಯ ತುಂಬಿಕೊಂಡು ಮೈದಾನಕ್ಕೆ ಇಳಿದ ಪರಿಣಾಮ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನಲ್ಲಿ ಜಡ್ಡು ತಿಳಿಸಿದ್ದಾರೆ.

    ಹಾಗೇ ನಾನು ನನ್ನ ಚಿಂತನೆಯನ್ನು ಬದಲಾಯಿಸಿಕೊಂಡು ಸಕಾರಾತ್ಮಕವಾಗಿ ಚಿಂತಿಸಿ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನಹರಿಸಿದೆ. ಮೈದಾನಕ್ಕೆ ಇಳಿದಾಗ ತಂಡಕ್ಕೆ ನೆರವಾಗಬೇಕೆಂದು ನಾನು ಯೋಚಿಸಿದ ಪರಿಣಾಮ ನನ್ನಿಂದ ಉತ್ತಮ ಪ್ರದರ್ಶನ ಬಂದಿದೆ ಎಂದು ಅಭಿಪ್ರಯಾಪಟ್ಟಿದ್ದಾರೆ.

  • ಜಡೇಜಾ ಬುಲೆಟ್ ಥ್ರೋಗೆ ಸ್ಮಿತ್ ರನೌಟ್ – ಮತ್ತೆ ಮಿಂಚಿದ ಗಿಲ್

    ಜಡೇಜಾ ಬುಲೆಟ್ ಥ್ರೋಗೆ ಸ್ಮಿತ್ ರನೌಟ್ – ಮತ್ತೆ ಮಿಂಚಿದ ಗಿಲ್

    ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ 2ನೇ ದಿನವಾದ ಇಂದು ರವೀಂದ್ರ ಜಡೇಜಾ ಬುಲೆಟ್ ಥ್ರೋ ಮಾಡುವ ಮೂಲಕ ಶತಕದ ಆಟವಾಡಿ ಮುನ್ನುಗುತ್ತಿದ್ದ ಸ್ಟೀವನ್ ಸ್ಮಿತ್ ಅವರನ್ನು ರನೌಟ್ ಮಾಡಿದ್ದಾರೆ. ಈ ವೇಗವಾದ ರನೌಟ್‍ನಿಂದಾಗಿ ತಾನೂ ವಿಶ್ವದ ಅತ್ಯುತ್ತಮ ಫೀಲ್ಡರ್ ಎಂಬುದನ್ನು ಜಡೇಜಾ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

    ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ಮೊದಲ ದಿನದ ಮಳೆಯ ನಡುವೆ ಉತ್ತಮ ಮೊತ್ತ ಕಲೆಹಾಕಿದ್ದ ಆಸೀಸ್ ದಿನದಂತ್ಯಕ್ಕೆ 166 ರನ್ ಮಾಡಿ 2 ವಿಕೆಟ್ ಕಳೆದುಕೊಂಡಿತ್ತು. ಅಲ್ಲಿಂದ 2 ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ಲಬುಶೇನ್, ಮತ್ತು ಸ್ಟೀವನ್ ಸ್ಮಿತ್ ಅವರ ಉತ್ತಮ ಜೊತೆಯಾಟದಿಂದಾಗಿ 338 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಗಿದೆ. ನಿನ್ನೆಯ 166 ರನ್‍ಗೆ ಇಂದು 172ರನ್ ಸೇರಿಸಿ ಆಸ್ಟ್ರೇಲಿಯಾ ಆಲೌಟ್ ಆಯ್ತು.

    ಮೊದಲ ದಿನದಾಟದಲ್ಲಿ 67 ರನ್‍ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮಾರ್ನಸ್ ಲಬುಶೇನ್ 91 ರನ್(196 ಎಸೆತ, 11 ಬೌಂಡರಿ) ಹೊಡೆದು ಶತಕ ವಂಚಿತರಾದರೂ ಇನ್ನೂ 31 ರನ್ ಮಾಡಿ ಲಬುಶೇನ್‍ಗೆ ಜೊತೆಯಾಗಿದ್ದ ಸ್ಮಿತ್ 2ನೇ ದಿನ ಶತಕ ಸಿಡಿಸಿದರು.

    ಆಸ್ಟ್ರೇಲಿಯಾದ ರನ್ ಹೆಚ್ಚಿಸಲು ಬ್ಯಾಟ್ ಬಿಸುತ್ತಿದ್ದ ಸ್ಮಿತ್ 130 ರನ್(226 ಎಸೆತ, 16 ಬೌಂಡರಿ) ಗಳಿಸಿ ಆಟವಾಡುತ್ತಿದ್ದರು. 105ನೇ ಓವರ್ ಎಸೆಯಲು ದಾಳಿಗಿಳಿದ ಬುಮ್ರಾರ 4ನೇ ಎಸೆತವನ್ನು ಆಫ್ ಸೈಡ್‍ನತ್ತ ಹೊಡೆಯಲು ಮುಂದಾದ ಸ್ಮಿತ್ ಬ್ಯಾಟ್‍ಗೆ ಇನ್ ಸೈಡ್ ಎಡ್ಜ್ ಆದ ಚೆಂಡು ಸ್ವೇರ್ ಲೆಗ್‍ನತ್ತ ಹೋಗಿ ಜಡೇಜಾ ಅವರ ಕೈ ಸೇರಿತ್ತು. ಆದರೂ ಎರಡು ರನ್ ಕದಿಯುವ ಸಾಹಸಕ್ಕಿಳಿದ ಸ್ಮಿತ್, ಜಡೇಜಾ ಅವರ ಅತ್ಯುತ್ತಮ ಕ್ಷೇತ್ರ ರಕ್ಷಣೆಗೆ ದಂಡ ತೆರಬೇಕಾಯಿತು. ಇದರೊಂದಿಗೆ ಸ್ಮಿತ್ ಅವರ ಭರ್ಜರಿ ಇನ್ನಿಂಗ್ಸ್ ಕೊನೆಗೊಂಡಿತು.

    ಭಾರತದ ಪರ ಫೀಲ್ಡಂಗ್ ಜೊತೆಗೆ ಬೌಲಿಂಗ್‍ನಲ್ಲಿ ಮಿಂಚಿದ ರವೀಂದ್ರ ಜಡೇಜಾ 4 ವಿಕೆಟ್ ಕಿತ್ತರೆ, ಬುಮ್ರಾ ಮತ್ತು ಸೈನಿ ತಲಾ ಎರಡು ವಿಕೆಟ್ ಪಡೆದರು, ಸಿರಾಜ್ ಒಂದು ವಿಕೆಟ್ ಕಿತ್ತರು.

    ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಮೊದಲ ವಿಕೆಟ್‍ಗೆ 70 ರನ್ ಪೇರಿಸಿತ್ತು ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 26 ರನ್‍ಗಳಿಸಿ ಔಟಾಗಿ ನಿರಾಸೆ ಮೂಡಿಸಿದರೆ ಇನ್ನೂರ್ವ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ತಮ್ಮ ಮೊದಲ ಅರ್ಧಶತಕ ಸಿಡಿಸಿ ಪ್ಯಾಟ್ ಕಮಿನ್ಸ್‍ಗೆ ವಿಕೆಟ್ ಒಪ್ಪಿಸಿದರು. ಎರಡನೇ ದಿನದಾಟದ ಅಂತ್ಯದ ವೇಳೆ ಭಾರತ 96 ರನ್ ಮಾಡಿ 2 ವಿಕೆಟ್ ಕಳೆದುಕೊಂಡಿದೆ 9 ರನ್ ಮಾಡಿರುವ ಪೂಜಾರ ಮತ್ತು 5 ರನ್ ಗಳಿಸಿ ರಹಾನೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    https://twitter.com/Naveen99688812/status/1347392326637809667

     

  • ಜಡೇಜಾ ಬದಲು ಚಹಲ್‌ ಆಟ – ಚರ್ಚೆಗೆ ಗ್ರಾಸವಾದ ಟೀಂ ಇಂಡಿಯಾ ನಡೆ

    ಜಡೇಜಾ ಬದಲು ಚಹಲ್‌ ಆಟ – ಚರ್ಚೆಗೆ ಗ್ರಾಸವಾದ ಟೀಂ ಇಂಡಿಯಾ ನಡೆ

    – ವಿರೋಧ ವ್ಯಕ್ತಪಡಿಸಿದ ಆಸೀಸ್‌ ಕೋಚ್‌
    – ಗಾಯಗೊಂಡಿದ್ದರೂ 9 ರನ್‌ ಸೇರಿಸಿದ್ದ ಜಡೇಜಾ

    ಕ್ಯಾನ್ಪೆರಾ: ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಜಡೇಜಾ ಅವರ ಬದಲಿಗೆ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಅವರನ್ನು ಆಡುವ 11ರ ಬಳಗದಲ್ಲಿ ಆಡಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

    ಮಿಚೆಲ್‌ ಸ್ಟಾರ್ಕ್‌ ಎಸೆದ ಇನ್ನಿಂಗ್ಸ್‌ನ ಕೊನೆಯ ಓವರಿನ ಎರಡನೇ ಎಸೆತ ಬೌನ್ಸರ್‌ ಆಗಿತ್ತು. ಈ ಎಸೆತ ಜಡೇಜಾ ಹೆಲ್ಮೆಟ್‌ಗೆ ಬಡಿದು ಬ್ಯಾಕ್‌ವರ್ಡ್‌ ಪಾಯಿಂಟ್‌ಗೆ ಹೋಯಿತು. ಜಡೇಜಾ ಈ ಎಸೆತದಲ್ಲಿ ಒಂದು ರನ್‌ ಓಡಿದರೂ ಅಂಗಣಕ್ಕೆ ವೈದ್ಯಾಧಿಕಾರಿ ಬಂದು ಕನ್ಕಷನ್‌ ಪರೀಕ್ಷೆ ನಡೆಸಿರಲಿಲ್ಲ.

    ನಂತರದ ಎಸೆತದಲ್ಲಿ ವಾಷಿಂಗ್ಟನ್‌ ಸುಂದರ್‌ ಔಟಾದ ಕಾರಣ ಮತ್ತೆ ಜಡೇಜಾ ಸ್ಟ್ರೈಕ್‌ಗೆ ಬಂದರು. 4 ಮತ್ತು 5ನೇ ಎಸೆತವನ್ನು ಬೌಂಡರಿಗೆ ಅಟ್ಟಿದ ಜಡೇಜಾ ಕೊನೆಯ ಎಸೆತದಲ್ಲಿ 1 ರನ್‌ ತೆಗೆಯುವ ಮೂಲಕ ತಂಡದ ಮೊತ್ತವನ್ನು 160ಕ್ಕೆ ತಂದು ನಿಲ್ಲಿಸಿದರು.

    ಇನ್ನಿಂಗ್ಸ್‌ ಬ್ರೇಕ್‌ ಸಂದರ್ಭದಲ್ಲಿ ಭಾರತ ತಂಡ ಜಡೇಜಾ ಅವರಿಗೆ ಗಂಭೀರವಾದ ಗಾಯವಾದ ಕಾರಣ ಅವರ ಬದಲು ಯಜುವೇಂದ್ರ ಚಹಲ್‌ ಅವರನ್ನು ಆಡಿಸಲು ತೀರ್ಮಾನ ತೆಗೆದುಕೊಳ್ಳಲಾಯಿತು.

    ಟೀಮ್‌ ಇಂಡಿಯಾ ಕನ್ಕಷನ್‌ ಸಬ್‌ ತೆಗೆದುಕೊಳ್ಳುತ್ತಿರುವುದಾಗಿ ಮ್ಯಾಚ್‌ ರೆಫ್ರಿ ಡೇವಿಡ್‌ ಬೂನ್‌ ಗಮನಕ್ಕೆ ತಂದಿದೆ. ಆಸ್ಟ್ರೇಲಿಯಾ ತಂಡದ ನಾಯಕ ಆರೊನ್‌ ಫಿಂಚ್ ಮತ್ತು ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ಗೆ ತಿಳಿಸಿದಾಗ ಲ್ಯಾಂಗರ್‌ ಅಸಮಾಧಾನಗೊಂಡಿದ್ದಾರೆ. ಅಷ್ಟೇ ಅಲ್ಲದೇ ಡೇವಿಡ್‌ ಬೂನ್‌ ಎದುರು ವಾದಕ್ಕಿಳಿದ ಲ್ಯಾಂಗರ್‌ ಇದು ಸರಿಯಾದ ನಿರ್ಧಾರ ಅಲ್ಲ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಐಸಿಸಿ ನಿಯಮಗಳನ್ನು ಪಾಲನೆ ಮಾಡಬೇಕಾದ ಕಾರಣ ರೆಫ್ರಿ ಡೇವಿನ್‌ ಬೂನ್‌ ಬದಲಿ ಆಟಗಾರನನ್ನು ಆಡಿಸಲು ಒಪ್ಪಿಗೆ ನೀಡಿದರು.  ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ನಟರಾಜನ್ ಸೂಪರ್ ಬೌಲಿಂಗ್ – ಟೀಂ ಇಂಡಿಯಾಗೆ 11 ರನ್‍ಗಳ ರೋಚಕ ಜಯ

    ಚರ್ಚೆ ಏನು?
    ರವೀಂದ್ರ ಜಡೇಜಾ ಆಲ್‌ರೌಂಡರ್‌ ಆಟಗಾರನಾಗಿದ್ದು ಗಾಯಗೊಂಡ ಅವರ ಬದಲು ಚಹಲ್‌ ಅವರನ್ನು ಆಡಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಎದ್ದಿದೆ. ಅಷ್ಟೇ ಅಲ್ಲದೇ ಜಡೇಜಾ ಗಂಭೀರವಾಗಿ ಗಾಯಗೊಂಡಿದ್ದರೆ ಅರ್ಧದಲ್ಲೇ ಕ್ರೀಡಾಂಗಣವನ್ನು ತೊರೆಯಬೇಕಿತ್ತು. ಆದರೆ ನಂತರ 9 ರನ್‌ ಹೊಡೆದಿದ್ದಾರೆ. ಹೀಗಿರುವಾಗ ಗಾಯದ ಬಗ್ಗೆಯೇ ಅನುಮಾನ ಎದ್ದಿದೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

    ಈ ಹಿಂದೆ ಜಡೇಜಾ ಅವರನ್ನು ಟೀಕೆ ಮಾಡಿ ಸುದ್ದಿಯಾಗಿದ್ದ ವೀಕ್ಷಕ ವಿವರಣೆಗಾರ ಸಂಜಯ್‌ ಮಾಂಜ್ರೇಕರ್‌, ಈ ಪಂದ್ಯದ ವೇಳೆ ಭಾರತ ತಂಡ ಕನ್ಕಷನ್‌ ಸಬ್‌ಸ್ಟಿಟ್ಯೂಟ್‌ ನಿಯಮದ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ ಎಂದು ಹೇಳಿ ಬಿಸಿ  ಚರ್ಚೆಗೆ ತುಪ್ಪ ಸುರಿದರು. ಅಷ್ಟೇ ಅಲ್ಲದೇ ಐಸಿಸಿ ಈ ನಿಯಮದ ದುರ್ಬಳಕೆ ಆಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದರು.

    ಈ ಸಂದರ್ಭದಲ್ಲಿ ಕಾಮೆಂಟೇಟರ್‌ ಹರ್ಷ ಭೋಗ್ಲೆ, ಕೆಲ ಪ್ರಕರಣಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ತಡವಾಗಿ ಕನ್ಕಷನ್‌ ಗುಣಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಳೆದ ವರ್ಷ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಟೆಸ್ಟ್‌ ಪಂದ್ಯದಲ್ಲಿ ಬಾಂಗ್ಲಾ ತಂಡ ಇದೇ ರೀತಿ ತಡವಾಗಿ ಕನ್ಕಷನ್‌ ಸಬ್‌ ತೆಗೆದುಕೊಂಡ ಉದಾಹರಣೆ ಇದೆ ಎಂದು ಹೇಳಿ ಟೀಂ ಇಂಡಿಯಾ ನಡೆಯನ್ನು ಸಮರ್ಥಿಸಿಕೊಂಡರು.

    ಐಸಿಸಿ ನಿಯಮ ಏನು?
    ಬ್ಯಾಟಿಂಗ್‌ ವೇಳೆ ಚೆಂಡು ಬ್ಯಾಟ್ಸ್‌ಮನ್‌ನ ಹೆಲ್ಮೆಟ್‌ಗೆ ಬಡಿದರೆ ಆವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಬದಲಿ ಆಟಗಾರನನ್ನು ಆಡಿಸಬಹದು ಎಂದು ಐಸಿಸಿ 2019ರ ಜುಲೈನಲ್ಲಿ ನಿಯಮವನ್ನು ತಂದಿತ್ತು. ಈ ರೀತಿ ಆಡುವ 11ರ ಬಳಗಕ್ಕೆ ಬದಲಿ ಆಟಗಾರನಾಗಿ ಸೇರುವ ಆಟಗಾರನಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್‌ ಮಾಡುವ ಅವಕಾಶವನ್ನು ನೀಡಲಾಗುತ್ತದೆ.

    ಈ ಪಂದ್ಯದಲ್ಲಿ ಜಡೇಜಾ ಔಟಾಗದೇ 44 ರನ್‌(23 ಎಸೆತ, 5 ಬೌಂಡರಿ, 1 ಸಿಕ್ಸರ್‌) ಹೊಡೆದರೆ ಚಹಲ್‌ 4 ಓವರ್‌ ಎಸೆದು 25 ರನ್‌ ನೀಡಿ 3 ವಿಕೆಟ್‌ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.

     

  • ಕೊನೆಯ 52 ಎಸೆತದಲ್ಲಿ 100 ರನ್‌ – ಪಾಂಡ್ಯ, ಜಡೇಜಾ ಸ್ಫೋಟಕ ಆಟ, 303 ರನ್‌ ಟಾರ್ಗೆಟ್‌

    ಕೊನೆಯ 52 ಎಸೆತದಲ್ಲಿ 100 ರನ್‌ – ಪಾಂಡ್ಯ, ಜಡೇಜಾ ಸ್ಫೋಟಕ ಆಟ, 303 ರನ್‌ ಟಾರ್ಗೆಟ್‌

    ಕ್ಯಾನ್ಬೆರಾ: ಮಧ್ಯದಲ್ಲಿ ದಿಢೀರ್‌ ಕುಸಿತ ಕಂಡರೂ ಹಾರ್ದಿಕ್‌ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರ ಶತಕದ ಜೊತೆಯಾಟದಿಂದ ಭಾರತ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 303 ರನ್‌ಗಳ ಗುರಿಯನ್ನು ನೀಡಿದೆ.

    ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಭಾರತ 26 ರನ್‌ ಗಳಿಸಿದ್ದಾಗ 16 ರನ್‌ ಹೊಡೆದಿದ್ದ ಶಿಖರ್‌ ಧವನ್‌ ವಿಕೆಟ್‌ ಕಳೆದುಕೊಂಡಿತ್ತು. ನಂತರ ಶುಭಮನ್‌ ಗಿಲ್‌ 33 ರನ್‌ ಹೊಡೆದು ಔಟಾದರು.

    22.3 ಓವರ್‌ಗೆ 2 ವಿಕೆಟ್‌ ಕಳೆದುಕೊಂಡು 114 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಭಾರತ ನಂತರ 38 ರನ್‌ ಗಳಿಸುವಷ್ಟರಲ್ಲಿ ಅಮೂಲ್ಯವಾದ ಮೂರು ವಿಕೆಟ್‌ ಕಳೆದುಕೊಂಡಿತು.ಕೊಹ್ಲಿ 63 ರನ್‌( 78 ಎಸೆತ, 5 ಬೌಂಡರಿ), ಶ್ರೇಯಸ್‌ ಅಯ್ಯರ್‌ 19 ರನ್‌, ಕೆಎಲ್‌ ರಾಹುಲ್‌ 5 ರನ್‌ ಗಳಿಸಿ ಔಟಾದರು.

    32ನೇ ಓವರ್‌ಗೆ 152 ರನ್‌ ಆಗಿದ್ದಾಗ ಕೊಹ್ಲಿ ಔಟಾದರು. ನಂತರ ಬಂದ ಜಡೇಜಾ ಜೊತೆ ಪಾಂಡ್ಯ ಸೇರಿ ರನ್‌ ಸೇರಿಸತೊಡಗಿದರು. ಇಬ್ಬರು ಮುರಿಯದ 6ನೇ ವಿಕೆಟ್‌ಗೆ 108 ಎಸೆತಗಳಲ್ಲಿ 150 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

    ಪಾಂಡ್ಯ 55 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ ಅಂತಿಮವಾಗಿ ಔಟಾಗದೇ 92 ರನ್‌(76 ಎಸೆತ, 7 ಬೌಂಡರಿ, 1 ಸಿಕ್ಸರ್‌) ಚಚ್ಚಿದರು. ಸಾಥ್‌ ನೀಡಿದ್ದ ಜಡೇಜಾ ಔಟಾಗದೇ 66 ರನ್‌(50 ಎಸೆತ, 5 ಬೌಂಡರಿ, 3 ಸಿಕ್ಸರ್‌) ಹೊಡೆದರು. ಕೊನೆಯ 52 ಎಸೆತದಲ್ಲಿ ಈ ಜೋಡಿ 100 ರನ್‌ ಹೊಡೆದ ಪರಿಣಾಮ ಟೀಂ ಇಂಡಿಯಾ 5 ವಿಕೆಟ್‌ ನಷ್ಟಕ್ಕೆ 302 ರನ್‌ ಗಳಿಸಿತು. ಆಸ್ಟ್ರೇಲಿಯಾ ಇತರೇ ರೂಪದಲ್ಲಿ 8 ರನ್‌ ನೀಡಿತ್ತು.

    ರನ್‌ ಏರಿದ್ದು ಹೇಗೆ?
    50 ರನ್‌ – 62 ಎಸೆತ
    100 ರನ್‌ – 20 ಎಸೆತ
    150 ರನ್‌ -191 ಎಸೆತ
    200 ರನ್‌ – 250 ಎಸೆತ
    250 ರನ್‌ – 282 ಎಸೆತ
    300 ರನ್‌ – 299 ಎಸೆತ