Tag: Ravindra Jadeja

  • ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿಯಿಂದ ಟಿಕೆಟ್?

    ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿಯಿಂದ ಟಿಕೆಟ್?

    ಗಾಂಧಿನಗರ: ಮೂರು ವರ್ಷಗಳ ಹಿಂದೆಯಷ್ಟೇ ಬಿಜೆಪಿ (BJP) ಸೇರ್ಪಡೆಗೊಂಡ ಟೀಂ ಇಂಡಿಯಾ (Team India) ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರ ಪತ್ನಿ ರಿವಾಬಾ ಜಡೇಜಾ (Rivaba Jadeja) ಅವರಿಗೆ ಗುಜರಾತ್ ವಿಧಾನಸಭಾ ಚುನಾವಣೆಗೆ (Gujarat Election) ಬಿಜೆಪಿಯಿಂದ ಟಿಕೆಟ್ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

    ಚುನಾವಣಾ ಸಂಭಾವಿತರ ಪಟ್ಟಿಯಲ್ಲಿ ಜಡೇಜಾ ಪತ್ನಿ ಹೆಸರು ಇರುವುದಾಗಿ ಕೇಳಿಬಂದಿದ್ದು, ಇಂದು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಲಿದೆ. ಪಕ್ಷದ ಮುಖ್ಯಸ್ಥ ಜೆ.ಪಿ ನಡ್ಡಾ (JP Nadda) ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಲಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (Amit Shah) ಮತ್ತು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಕಾಫಿನಾಡಲ್ಲಿ ದತ್ತಮಾಲಾ ಅಭಿಯಾನ – ಕೇಸರಿ ಬಾವುಟ ವಿಚಾರಕ್ಕೆ 2 ಕೋಮುಗಳ ಮಧ್ಯೆ ಗಲಾಟೆ

    ಕಳೆದ 27 ವರ್ಷಗಳಿಂದ ಗುಜರಾತ್‌ನ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿಯಿಂದ ಈಬಾರಿ ಮಾಜಿ ಸಿಎಂ ವಿಜಯ್ ರೂಪಾನಿ ಹಾಗೂ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರಂತಹ ಹಿರಿಯ ನಾಯಕರನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ. ಹಾಗೆಯೇ 75 ವರ್ಷ ದಾಟಿದವರು ಪ್ರತಿನಿಧಿಸಲು ಅನರ್ಹರಾಗುತ್ತಾರೆ. ಹಾಗಾಗಿ ಸಂಭಾವಿತರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕೇಳಿ ಬರಲಿದೆ ‘ಮೆಲ್ಲುಸಿರೆ ಸವಿಗಾನ’ ಹಾಡು

    2016ರಲ್ಲಿ ಜಡೇಜಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಿವಾಬಾ ಜಡೇಜಾ ಶಿಕ್ಷಣದಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರರಾಗಿದ್ದಾರೆ. ಅಲ್ಲದೇ ಕಾಂಗ್ರೆಸ್ ಹಿರಿಯ ಆಯಕ ಹರಿಸಿಂಗ್ ಸೋಲಂಕಿ ಅವರ ಸಂಬಂಧಿಯಾಗಿದ್ದಾರೆ. ಬಿಜೆಪಿ ನಾಯಕರಾದ ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • T20 ವಿಶ್ವಕಪ್ ಆಡಲು ಬುಮ್ರಾ, ಹರ್ಷಲ್ ಪಟೇಲ್ ಫಿಟ್ – ಜಡೇಜಾ ಆಡಲ್ಲ?

    T20 ವಿಶ್ವಕಪ್ ಆಡಲು ಬುಮ್ರಾ, ಹರ್ಷಲ್ ಪಟೇಲ್ ಫಿಟ್ – ಜಡೇಜಾ ಆಡಲ್ಲ?

    ಮುಂಬೈ: ಗಾಯಾಳುವಾಗಿ ಏಷ್ಯಾಕಪ್‍ನಿಂದ (Asia Cup 2022) ಹೊರಗುಳಿದಿದ್ದ ಟೀಂ ಇಂಡಿಯಾದ ವೇಗಿಗಳಾದ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಹರ್ಷಲ್ ಪಟೇಲ್ (Harshal Patel)  ಟಿ20 ವಿಶ್ವಕಪ್‍ಗೆ (T20 World) ಆಯ್ಕೆ ಆಗುವುದು ಖಚಿಗೊಂಡಿದ್ದು, ಆಲ್‍ರೌಂಡರ್ ರವೀಂದ್ರ ಜಡೇಜಾ ಬಹುತೇಕ ಹೊರಗುಳಿಯುವ ಸಾಧ್ಯತೆ ಬಗ್ಗೆ ವರದಿಯಾಗಿದೆ.

    ಮೂಲಗಳ ಪ್ರಕಾರ ಈಗಾಗಲೇ ಬುಮ್ರಾ ಮತ್ತು ಹರ್ಷಲ್ ಪಟೇಲ್ ಫಿಟ್‍ನೆಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಟಿ20 ವಿಶ್ವಕಪ್ ಆಯ್ಕೆಗೆ ಲಭ್ಯರಾಗಿದ್ದಾರೆ ಎಂದು ವರದಿಯಾಗಿದೆ. ಇಬ್ಬರೂ ವೇಗಿಗಳು ಏಷ್ಯಾಕಪ್‍ಗೂ ಮುನ್ನ ಗಾಯಾಳುವಾಗಿ ತಂಡದಿಂದ ಹೊರಗುಳಿದಿದ್ದರು. ಹರ್ಷಲ್ ಪಟೇಲ್ ಕೈ ಸೆಳೆತಕ್ಕೊಳಗಾಗಿ ಹೊರಗುಳಿದರೆ, ಬುಮ್ರಾ ಬೆನ್ನುನೋವಿನಿಂದಾಗಿ ಹೊರಗುಳಿದಿದ್ದರು. ಇದನ್ನೂ ಓದಿ: ಸೆ.20ರಿಂದ ಭಾರತ-ಆಸಿಸ್ ಟಿ20 ಸರಣಿ – ಬುಮ್ರಾ ಮೇಲೆ ಬೆಂಕಿ ಕಣ್ಣು

    ಆ ಬಳಿಕ ಬುಮ್ರಾ ಮತ್ತು ಹರ್ಷಲ್ ಪಟೇಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy in Bengaluru) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಚೇತರಿಕೆ ಕಂಡಿದ್ದಾರೆ. ಈ ಮೂಲಕ ಮತ್ತೆ ತಂಡಕ್ಕೆ ವಾಪಾಸ್ ಆಗಲು ಸಿದ್ಧತೆ ಆರಂಭಿಸಿದ್ದಾರೆ. ಜೊತೆಗೆ ಮುಂದಿನ ವಾರದೊಳಗಾಗಿ ಬಿಸಿಸಿಐ (BCCI) ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾವನ್ನು ಆಯ್ಕೆಮಾಡುವ ಸಾಧ್ಯತೆ ಇದೆ.

    ಏಷ್ಯಾಕಪ್‍ನಲ್ಲಿ ಬುಮ್ರಾ ಅಲಭ್ಯತೆ ಕಾಡಿತು. ಜೊತೆಗೆ ಆಲ್‍ರೌಂಡರ್ ರವೀಂದ್ರ ಜಡೇಜಾ (Ravindra Jadeja) ಗಾಯಗೊಂಡು ತಂಡದಿಂದ ಹೊರುಗುಳಿದಿದ್ದು, ಹಿನ್ನಡೆ ತಂದಿತ್ತು. ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಡೇಜಾ ಟಿ20 ವಿಶ್ವಕಪ್ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: ದುಬೈನಲ್ಲಿ ರವೀಂದ್ರ ಜಡೇಜಾ ಎಡವಟ್ಟು – BCCI ಕೆಂಡಾಮಂಡಲ

    ಬುಮ್ರಾ, ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಶಮಿ ಮತ್ತೆ ತಂಡಕ್ಕೆ ವಾಪಸ್ ಆಗುವುದು ಬಹುತೇಕ ಖಚಿಗೊಂಡಿದ್ದು, ಆವೇಶ್ ಖಾನ್ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ. ಏಷ್ಯಾಕಪ್‍ನಲ್ಲಿ ಶಮಿಯನ್ನು ಆಯ್ಕೆ ಮಾಡದೇ ಇದ್ದಿದ್ದಕ್ಕೆ ಟೀಕೆಗಳು ಕೇಳಿಬಂದಿತ್ತು. ಇದೀಗ ಶಮಿ ಟಿ20 ವಿಶ್ವಕಪ್ ಆಡುವುದು ಬಹುತೇಕ ಕನ್ಫರ್ಮ್ ಅಗಿದೆ.

    Live Tv
    [brid partner=56869869 player=32851 video=960834 autoplay=true]

  • ದುಬೈನಲ್ಲಿ ರವೀಂದ್ರ ಜಡೇಜಾ ಎಡವಟ್ಟು – BCCI ಕೆಂಡಾಮಂಡಲ

    ದುಬೈನಲ್ಲಿ ರವೀಂದ್ರ ಜಡೇಜಾ ಎಡವಟ್ಟು – BCCI ಕೆಂಡಾಮಂಡಲ

    ಮುಂಬೈ: ಟೀಂ ಇಂಡಿಯಾದ ಸ್ಟಾರ್ ಆಲ್‍ರೌಂಡರ್ ರವೀಂದ್ರ ಜಡೇಜಾ (Ravindra Jadeja) ಮೊಣಕಾಲಿನ ಗಾಯಕ್ಕೆ ತುತ್ತಾಗಿ ಇದೀಗ ಟಿ20 ವಿಶ್ವಕಪ್‍ನಿಂದಲೂ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಏಷ್ಯಾಕಪ್ (Asia Cup) ಟೂರ್ನಿಗಾಗಿ ದುಬೈಗೆ ತೆರಳಿದಾಗ ಜಡೇಜಾ ಮಾಡಿದ ಎಡವಟ್ಟಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೆಂಡಾಮಂಡಲವಾಗಿದೆ.

    ಹೌದು ಏಷ್ಯಾಕಪ್‍ನ ಮೊದಲೆರಡು ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಏಷ್ಯಾಕಪ್ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ಭಾರತ ತಂಡಕ್ಕೆ ಸೂಪರ್ ಫೋರ್ ಹಂತಕ್ಕೂ ಮುನ್ನ ಶಾಕ್ ಎದುರಾಗಿತ್ತು. ತಂಡದ ಸ್ಟಾರ್ ಆಟಗಾರನಾಗಿ ಗುರುತಿಸಿಕೊಂಡಿದ್ದ ಜಡೇಜಾ ಗಾಯಗೊಂಡು ಟೂರ್ನಿಯಿಂದ ಹೊರ ನಡೆದರು. ಆ ಬಳಿಕ ಸೋಲಿನತ್ತ ಮುಖ ಮಾಡಿದ ಭಾರತ ಸೂಪರ್ ಫೋರ್ ಹಂತದಲ್ಲೇ ಮುಗ್ಗರಿಸಿ ನಿರಾಸೆ ಮೂಡಿಸಿತು. ಇದನ್ನೂ ಓದಿ: ದ್ರಾವಿಡ್ ಕೋಚ್ ಆಗಿ ಹನಿಮೂನ್ ಅವಧಿ ಮುಗಿದಿದೆ ನೆನಪಿರಲಿ: ಸಬಾ ಕರೀಂ ಟಾಂಗ್

    ಇತ್ತ ಜಡೇಜಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣುತ್ತಿದ್ದಾರೆ. ಆದರೆ ಟಿ20 ವಿಶ್ವಕಪ್ ಆಡುವುದು ಅನುಮಾನ ಹಾಗಾಗಿ ಬಿಸಿಸಿಐ ಗಾಯದ ಕುರಿತು ತನಿಖೆ ನಡೆಸಿದಾಗ ಜಡೇಜಾರ ಎಡವಟ್ಟು ಬಯಲಾಗಿದೆ. ದುಬೈಗೆ ಏಷ್ಯಾಕಪ್‍ಗಾಗಿ ತೆರಳಿದ ಜಡೇಜಾ, ಅಲ್ಲಿ ಜಲ ಸಾಹಸ ಕ್ರೀಡೆ ಆಡಲು ಹೋಗಿ ಪೆಟ್ಟು ಮಾಡಿಕೊಂಡಿದ್ದರು. ಆ ಬಳಿಕ ಜಡೇಜಾ ಪಂದ್ಯವಾಡಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮಟ್ಟಿಗೆ ತೀವ್ರ ಗಾಯಕ್ಕೊಳಗಾಗಿದ್ದರು. ಇದನ್ನು ಅರಿತ ಬಿಸಿಸಿಐ ಜಡೇಜಾ ವಿರುದ್ಧ ಅಸಮಾಧಾನ ಹೊರಹಾಕಿದೆ. ನಾವು ಟಿ20 ವಿಶ್ವಕಪ್ ಗಮನದಲಿಟ್ಟುಕೊಂಡು ತಂಡವನ್ನು ಉತ್ತಮವಾಗಿ ಕಟ್ಟಲು ಯೋಜಿಸಿದರೆ, ಆಟಗಾರರು ಈ ಬಗ್ಗೆ ಗಮನ ಹರಿಸದೆ ಗಾಯಗೊಂಡು ತಂಡದಿಂದ ಹೊರಗುಳಿಯುತ್ತಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ:  ಅನುಷ್ಕಾ ಶರ್ಮಾ ಐರನ್ ಲೇಡಿ, ವಿರಾಟ್ ಕೊಹ್ಲಿ ಮ್ಯಾನ್ ಆಫ್ ಸ್ಟೀಲ್: ಶೋಯೆಬ್ ಅಕ್ತರ್

    ದ್ರಾವಿಡ್, ರೋಹಿತ್ ವಿರುದ್ಧ ಸಿಡಿಮಿಡಿ
    ಜಡೇಜಾಗೆ ಜಲ ಸಾಹಸ ಕ್ರೀಡೆಯಲ್ಲಿ ಭಾಗವಹಿಸದಂತೆ ಕೋಚ್ ದ್ರಾವಿಡ್ (Rahul Dravid) ಹೇಳಿದ್ದರು. ಆದರೂ ಜಡೇಜಾ ಈ ಮಾತನ್ನು ಕೇಳದೆ ಭಾಗವಹಿಸಿದ್ದರು ಎಂದು ಮೂಲಗಳಿಂದ ವರದಿಯಾಗಿದೆ. ಈ ಬಗ್ಗೆ ದ್ರಾವಿಡ್ ಮತ್ತು ರೋಹಿತ್ ಶರ್ಮಾಗೂ ಬಿಸಿಸಿಐ ಜಾಡಿಸಿದೆ. ಈಗಾಗಲೇ ಈ ಬಗ್ಗೆ ಯಾವುದೇ ತನಿಖೆ ನಡೆಯದಿದ್ದರೂ ಜಡೇಜಾ ಗಾಯದಿಂದ ಚೇತರಿಕೆ ಕಂಡ ಬಳಿಕ ತನಿಖೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ.

    Live Tv
    [brid partner=56869869 player=32851 video=960834 autoplay=true]

  • ಜಡೇಜಾ ಅನುಪಸ್ಥಿತಿಯಲ್ಲಿ ಪಂತ್, ಹೂಡಾ, ಅಕ್ಷರ್ ಪಟೇಲ್ ನಡುವೆ ಪ್ಲೇಯಿಂಗ್ 11 ಪೈಪೋಟಿ

    ಜಡೇಜಾ ಅನುಪಸ್ಥಿತಿಯಲ್ಲಿ ಪಂತ್, ಹೂಡಾ, ಅಕ್ಷರ್ ಪಟೇಲ್ ನಡುವೆ ಪ್ಲೇಯಿಂಗ್ 11 ಪೈಪೋಟಿ

    ದುಬೈ: ಏಷ್ಯಾ ಕಪ್‍ನ ಸೂಪರ್ ಫೋರ್ ಹಂತದ ಎರಡನೇ ಪಂದ್ಯ ಇಂದು ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯಲಿದೆ. ಭಾರತದ ಆಲ್‍ರೌಂಡರ್ ರವೀಂದ್ರ ಜಡೇಜಾ ಗಾಯಳುವಾಗಿ ತಂಡದಿಂದ ಹೊರಗುಳಿದಿದ್ದಾರೆ. ಇವರ ಸ್ಥಾನದಲ್ಲಿ ಆಡಲು ರಿಷಭ್ ಪಂತ್, ದೀಪಕ್ ಹೂಡಾ ಮತ್ತು ಅಕ್ಷರ್ ಪಟೇಲ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

    ಭಾರತ ಹಾಗೂ ಪಾಕಿಸ್ತಾನ ನಡುವಿನ ಸೂಪರ್ ಫೋರ್ ಹಂತದ ಪಂದ್ಯ ಮಹತ್ವ ಪಡೆದುಕೊಂಡಿದ್ದು, ಈಗಾಗಲೇ ಎರಡು ತಂಡಗಳು ಗೆಲ್ಲಲೇ ಬೇಕೆಂಬ ಹುಮ್ಮಸ್ಸಿನಲ್ಲಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದೆ. ಎರಡು ತಂಡದಲ್ಲೂ ಕೂಡ ಗಾಯದ ಸಮಸ್ಯೆ ಕಾಡುತ್ತಿದೆ. ಭಾರತದ ಪರ ಜಡೇಜಾ ಗಾಯದಿಂದಾಗಿ ಟೂರ್ನಿಯಿಂದಲೇ ಹೊರನಡೆದಿದ್ದಾರೆ. ಇದು ಟೀಂ ಇಂಡಿಯಾಗೆ ಹೊಡೆತ ನೀಡಿದೆ. ಇದನ್ನೂ ಓದಿ: ಮುಂದಿನ ಐಪಿಎಲ್‌ಗೂ ಧೋನಿ ಚೆನ್ನೈ ತಂಡ ನಾಯಕ

    ಈ ನಡುವೆ ಜಡೇಜಾ ಸ್ಥಾನ ತುಂಬಲು ಆಲ್‍ರೌಂಡರ್ ಮತ್ತು ಬ್ಯಾಟ್ಸ್‌ಮ್ಯಾನ್‌ಗಳ ನಡುವೆ ಪೈಪೋಟಿ ಏರ್ಪಟ್ಟಿದ್ದು, ಜಡೇಜಾರಂತೆ ಸ್ಪಿನ್ ಆಲ್‍ರೌಂಡರ್‌ಗಳಾಗಿ ಅಕ್ಷರ್ ಪಟೇಲ್ ಮತ್ತು ಅಶ್ವಿನ್ ತಂಡದಲ್ಲಿದ್ದಾರೆ. ಜೊತೆಗೆ ದೀಪಕ್ ಹೂಡಾ ಕೂಡ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವುದರಿಂದಾಗಿ ಪ್ಲೇಯಿಂಗ್ 11ನಲ್ಲಿ ಆಡಲು ಈ ಮೂವರ ನಡುವೆ ಪೈಪೋಟಿ ಜೋರಾಗಿದೆ. ಇವರೊಂದಿಗೆ ಪಂತ್ ಕೂಡ ಸೆಣಸಾಡಬೇಕಾದ ಸ್ಥಿತಿ ಇದ್ದು, ನಾಯಕ ಹಾಗೂ ಕೋಚ್‍ಗೆ ತಂಡದ ಆಯ್ಕೆ ತಲೆನೋವು ಶುರುವಾಗಿದೆ. ಇದನ್ನೂ ಓದಿ: T20 ವಿಶ್ವಕಪ್‍ನಿಂದಲೂ ಜಡೇಜಾ ಔಟ್?

    ಜಡೇಜಾ ಗಾಯದಿಂದಾಗಿ ಹೊರ ನಡೆದಾಗ ಅವರ ಸ್ಥಾನಕ್ಕೆ ಬಂದ ಅಕ್ಷರ್ ಪಟೇಲ್ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳುವ ಮುಂಚೂಣಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಪಂದ್ಯ ಆರಂಭಕ್ಕೂ ಮುನ್ನ ಯಾರಿಗೆ ನಾಯಕ ಹಾಗೂ ಕೋಚ್ ಅವಕಾಶ ಕಲ್ಪಿಸಿಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • T20 ವಿಶ್ವಕಪ್‍ನಿಂದಲೂ ಜಡೇಜಾ ಔಟ್?

    T20 ವಿಶ್ವಕಪ್‍ನಿಂದಲೂ ಜಡೇಜಾ ಔಟ್?

    ಮುಂಬೈ: ಗಾಯದ ಸಮಸ್ಯೆಯಿಂದ ಏಷ್ಯಾಕಪ್‍ನಿಂದ ಹೊರಗುಳಿದಿರುವ ಟೀಂ ಇಂಡಿಯಾದ ಸ್ಟಾರ್ ಆಲ್‍ರೌಂಡರ್ ರವೀಂದ್ರ ಜಡೇಜಾ ಇದೀಗ 2022ರ ಟಿ20 ವಿಶ್ವಕಪ್‍ನಿಂದಲೂ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

    TEAM INDIA

    ಮೊಣಕಾಲಿನ ಗಾಯದಿಂದಾಗಿ ಏಷ್ಯಾಕಪ್‍ನಿಂದ ಹೊರನಡೆದಿರುವ ಜಡೇಜಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಠ 3 ತಿಂಗಳಕಾಲ ವಿಶ್ರಾಂತಿಯಲ್ಲಿರಬೇಕಾದ ಅನಿವಾರ್ಯತೆ ಇದೆ ಅಲ್ಲದೇ ಕೆಲ ಕೇಸ್‍ಗಳಲ್ಲಿ 6 ತಿಂಗಳು ಇರಬೇಕಾಗುತ್ತದೆ ಎಂದು ಎನ್‍ಸಿಎ ವೈದ್ಯರ ತಂಡ ಹೇಳಿದೆ. ಹಾಗಾಗಿ ಜಡೇಜಾ ಟಿ20 ವಿಶ್ವಕಪ್ ಆಡುವುದು ಅನುಮಾನವಾಗಿದೆ. ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ನಾಳೆ ಸೂಪರ್ ಸಂಡೇ – ಕದನ ಕುತೂಹಲ ಮೂಡಿಸಿದ ಇಂಡೋ-ಪಾಕ್ ಹೋರಾಟ

    ಎನ್‍ಸಿಎ ವೈದ್ಯಕೀಯ ತಂಡದ ಪ್ರಕಾರ ಜಡೇಜಾ ಮೊಣಕಾಲಿನ ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿ ಪಡೆಯಬೇಕು. ಈ ಗಾಯ ವಾಸಿಯಾಗಲು 3 ತಿಂಗಳು ವಿಶ್ರಾಂತಿ ಅತ್ಯಗತ್ಯ. ಕೆಲವೊಮ್ಮೆ 6 ತಿಂಗಳು ವಿಶ್ರಾಂತಿ ಪಡೆಯುವ ಅನಿವಾರ್ಯತೆ ಇರುತ್ತದೆ. ಹಾಗಾಗಿ ಜಡೇಜಾ ಕುರಿತು ಈಗಲೇ ಯಾವುದೇ ಮಾಹಿತಿ ತಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.

    ಜಡೇಜಾ ಟೀಮ್ ಇಂಡಿಯಾದ ಪ್ರಮುಖ ಅಸ್ತ್ರಗಳಲ್ಲಿ ಒಬ್ಬರು. ತನ್ನ ಬಿಗ್‍ಹಿಟ್ ಮತ್ತು ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸುವ ತಾಕತ್ ಜಡೇಜಾಗಿದೆ. ಅಲ್ಲದೇ ಕೆಲ ವರ್ಷಗಳಿಂದ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಮೂರು ಮಾದರಿ ಕ್ರಿಕೆಟ್‍ನಲ್ಲೂ ಜಡೇಜಾ ತಂಡಕ್ಕೆ ನೆರವಾಗುತ್ತಿದ್ದಾರೆ. ಇದೆಲ್ಲದರ ಜೊತೆ ಜಡೇಜಾ ಟೀಂ ಇಂಡಿಯಾದ ಗನ್ ಫೀಲ್ಡರ್. ಪ್ರಸ್ತುತ ತಂಡದಲ್ಲಿರುವ ಶ್ರೇಷ್ಠ ಫೀಲ್ಡರ್‌ಗಳಲ್ಲಿ ಜಡೇಜಾ ನಂಬರ್ 1 ಸ್ಥಾನದಲ್ಲಿ ನಿಲ್ಲುತ್ತಾರೆ. ಹಾಗಾಗಿ ಜಡೇಜಾ ತಂಡದಿಂದ ಹೊರಗುಳಿದರೆ ಭಾರತ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಇದನ್ನೂ ಓದಿ: 8 ಎಕರೆ ಜಮೀನಿನಲ್ಲಿ ಅನುಷ್ಕಾ-ವಿರಾಟ್ ಫಾರ್ಮ್ ಹೌಸ್: ದುಡ್ಡಿದ್ದೋರ ದುನಿಯಾ ಎಂದ ಫ್ಯಾನ್ಸ್

    2022ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್, ನವೆಂಬರ್‌ನಲ್ಲಿ ನಡೆಯಲಿದೆ. ಈಗಾಗಲೇ ಕೆಲ ದೇಶಗಳು ಟಿ20 ವಿಶ್ವಕಪ್‍ಗಾಗಿ ತಂಡವನ್ನು ಆಯ್ಕೆ ಮಾಡಿದೆ. ಭಾರತ ತಂಡ ಆಯ್ಕೆ ಇನ್ನಷ್ಟೇ ಮಾಡಬೇಕಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಏಷ್ಯಾಕಪ್ ಟೂರ್ನಿಯಿಂದ ರವೀಂದ್ರ ಜಡೇಜಾ ಔಟ್

    ಏಷ್ಯಾಕಪ್ ಟೂರ್ನಿಯಿಂದ ರವೀಂದ್ರ ಜಡೇಜಾ ಔಟ್

    ದುಬೈ: ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಪ್ರಸ್ತುತ ಯುಎಇ ಆತಿಥ್ಯದಲ್ಲಿ ನಡೆಯುತ್ತಿರುವ 2022ರ ಏಷ್ಯಾ ಕಪ್ ಟೂರ್ನಿಯಿಂದ ಹೊರ ನಡೆದಿದ್ದಾರೆ.

    ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಟೀಂ ಇಂಡಿಯಾ ಸೇರ್ಪಡೆಯಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: AsiaCup: ಜಡೇಜಾ ಜಾದು, ಪಾಂಡ್ಯ ಪರಾಕ್ರಮ – ಪಾಕಿಸ್ತಾನದ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ

    ಆಲ್‌ರೌಂಡರ್ ರವೀಂದ್ರ ಜಡೇಜಾ ಬಲ ಮೊಣಕಾಲಿಗೆ ಗಾಯವಾಗಿದ್ದು, ಸದ್ಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ಅಕ್ಷರ್ ಪಟೇಲ್ ಅವರನ್ನು ಸ್ಟ್ಯಾಂಡ್‌ ಬೈ ಪ್ಲೇಯರ್ ಎಂದು ಹೆಸರಿಸಿದ್ದ ಬಿಸಿಸಿಐ ಇದೀಗ ಜಡೇಜಾ ಅವರ ಸ್ಥಾನ ತುಂಬಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

    ಭಾರತ-ಪಾಕಿಸ್ತಾನ ನಡುವೆ ನಡೆದ ಪಂದ್ಯದಲ್ಲಿ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದರು. ಪಾಕ್ ವಿರುದ್ಧ 29 ಎಸೆತಗಳಲ್ಲಿ 35 ರನ್ ಸಿಡಿಸಿ ಟೀಂ ಇಂಡಿಯಾ ಗೆಲುವಿಗೆ ಶ್ರಮಿಸಿದ್ದರು. ಹಾಂಕಾಂಗ್ ವಿರುದ್ಧ ನಡೆದ 2ನೇ ಪಂದ್ಯದಲ್ಲಿ ಒಂದು ವಿಕೆಟ್ ಪಡೆದು ಬ್ಯಾಟಿಂಗ್ ಅವಕಾಶದಿಂದ ವಂಚಿತರಾದರು.

    Live Tv
    [brid partner=56869869 player=32851 video=960834 autoplay=true]

  • ಗಾಯಗೊಂಡ ರವೀಂದ್ರ ಜಡೇಜಾ – ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ ಅಮಿರ್ ಅಲಿ

    ಗಾಯಗೊಂಡ ರವೀಂದ್ರ ಜಡೇಜಾ – ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ ಅಮಿರ್ ಅಲಿ

    ಟ್ರಿನಿಡಾಡ್: ಟೀಂ ಇಂಡಿಯಾದ ಆಲ್‍ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡಿರುವ ಪರಿಣಾಮ ಇಂದು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

    ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದ ವೇಳೆ ಜಡೇಜಾ ಮೊಣಕಾಲಿಗೆ ಗಾಯವಾಗಿದೆ. ಹಾಗಾಗಿ ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ಜಡೇಜಾ ಗಾಯಗೊಂಡ ಕಾರಣ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಸ್ಥಳೀಯ ಅಂಡರ್-19 ಆಟಗಾರ ಅಮಿರ್ ಅಲಿಯನ್ನು ಬೌಲಿಂಗ್ ಮಾಡಲು ಕರೆಸಿಕೊಳ್ಳಲಾಗಿತ್ತು. 20ರ ಹರೆಯದ ಅಮಿರ್ ಎಡಗೈ ಸ್ಪಿನ್ನರ್ ಆಗಿದ್ದು ಟೀಂ ಇಂಡಿಯಾ ಆಟಗಾರಿಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿ ಕೋಚ್ ರಾಹುಲ್ ದ್ರಾವಿಡ್‍ರಿಂದ ಕೆಲ ಟಿಪ್ಸ್‌ಗಳನ್ನು ಪಡೆದುಕೊಂಡರು. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ – ಫೈನಲ್‍ಗೆ ಲಗ್ಗೆ ಇಟ್ಟ ಎಲ್ದೋಸ್ ಪಾಲ್, ರೋಹಿತ್ ಯಾದವ್

    ಜಡೇಜಾ ಗಾಯದಿಂದ ಚೇತರಿಕೆ ಕಂಡರೂ ಏಕದಿನ ಸರಣಿಗೆ ವಿಶ್ರಾಂತಿ ಪಡೆಯಲು ಬಿಸಿಸಿಐ ಸೂಚಿಸಿದೆ ಎಂದು ಮೂಲಗಳಿಂದ ವರದಿಯಾಗಿದೆ. ಇನ್ನೊಂದೆಡೆ ನಾಯಕ ಶಿಖರ್ ಧವನ್ ಮತ್ತು ಕೋಚ್ ರಾಹುಲ್ ದ್ರಾವಿಡ್ ನಿರ್ಧಾರದ ಮೇಲೆ ಜಡೇಜಾ ಏಕದಿನ ಸರಣಿ ಆಡುವ ಸಾಧ್ಯತೆ ಹೆಚ್ಚಿದೆ. ಜಡೇಜಾ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದು ಟಿ20 ಸರಣಿಗೆ ಫಿಟ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದನ್ನೂ ಓದಿ: ರಾಹುಲ್‍ಗೆ ಕೊರೊನಾ ಪಾಸಿಟಿವ್ – ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಔಟ್?

    ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದು, ಶಿಖರ್ ಧವನ್ ಟೀಂ ಇಂಡಿಯಾದ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಇಂದಿನಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದ್ದು, ಜುಲೈ 29 ರಿಂದ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

    ಏಕದಿನ ಸರಣಿಗೆ ಭಾರತ ತಂಡ:
    ಶಿಖರ್ ಧವನ್ (ನಾಯಕ), ಶುಭ್‍ಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಹಲ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಆವೇಶ್ ಖಾನ್.

    Live Tv
    [brid partner=56869869 player=32851 video=960834 autoplay=true]

  • ಭಾರತ – ವೆಸ್ಟ್ಇಂಡೀಸ್ ಏಕದಿನ ಕ್ರಿಕೆಟ್‌ ಸರಣಿಗೆ ಆಯ್ಕೆ ಪಟ್ಟಿ ಪ್ರಕಟ – ಶಿಖರ್ ಧವನ್ ಕ್ಯಾಪ್ಟನ್

    ಭಾರತ – ವೆಸ್ಟ್ಇಂಡೀಸ್ ಏಕದಿನ ಕ್ರಿಕೆಟ್‌ ಸರಣಿಗೆ ಆಯ್ಕೆ ಪಟ್ಟಿ ಪ್ರಕಟ – ಶಿಖರ್ ಧವನ್ ಕ್ಯಾಪ್ಟನ್

    ಮುಂಬೈ: ಜುಲೈ 29 ರಿಂದ ನಡೆಯಲಿರುವ ಭಾರತ – ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳ ಸರಣಿಗೆ 16 ಸದಸ್ಯರ ಭಾರತ ಏಕದಿನ ಕ್ರಿಕೆಟ್ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಕಟಿಸಿದೆ.

    ಇತ್ತ ಜುಲೈ 7 ರಿಂದ 10ರ ವರೆಗೆ ಇಂಗ್ಲೆಂಡ್ ವಿರುದ್ಧ ನಡೆಯಲಿರುವ T20 ಹಾಗೂ ಜುಲೈ 12 ರಿಂದ 17ರ ವರೆಗೆ ನಡೆಯಲಿರುವ ಏಕದಿನ ಕ್ರಿಕೆಟ್‌ಗೆ ಸರಣಿಗೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಸಜ್ಜಾಗುತ್ತಿದೆ. ಈ ನಡುವೆ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಆಟಗಾರರನ್ನು ಆಯ್ಕೆ ಮಾಡಿದ್ದು ಇಂದು ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.

    ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಸೇರಿದಂತೆ ಹಲವು ಹಿರಿಯ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ ಹಾಗೂ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಉಪ ನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ.

    ಟೀಂನಲ್ಲಿ ಯಾರೆಲ್ಲಾ ಇದ್ದಾರೆ?
    ಶಿಖರ್ ಧವನ್ (ನಾಯಕ), ರವೀಂದ್ರ ಜಡೇಜಾ (ಉಪ ನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಟೀಂ ನಲ್ಲಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಡೇಜಾ ಐಪಿಎಲ್‍ನಿಂದ ಹೊರಗುಳಿದಂತೆ ಸಿಎಸ್‍ಕೆ ಫ್ರಾಂಚೈಸ್ ಇನ್‍ಸ್ಟಾಗ್ರಾಂ ಅನ್‍ಫಾಲೋ ಮಾಡಿದ್ಯಾಕೆ?

    ಜಡೇಜಾ ಐಪಿಎಲ್‍ನಿಂದ ಹೊರಗುಳಿದಂತೆ ಸಿಎಸ್‍ಕೆ ಫ್ರಾಂಚೈಸ್ ಇನ್‍ಸ್ಟಾಗ್ರಾಂ ಅನ್‍ಫಾಲೋ ಮಾಡಿದ್ಯಾಕೆ?

    ಮುಂಬೈ: ಗಾಯದ ಸಮಸ್ಯೆಯಿಂದ 15ನೇ ಆವೃತ್ತಿ ಐಪಿಎಲ್‍ನ ಉಳಿದ ಪಂದ್ಯಗಳಿಂದ ರವೀಂದ್ರ ಜಡೇಜಾ ಹೊರ ನಡೆದಿದ್ದಾರೆ. ಈ ನಡುವೆ ಇಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸ್ ಜಡೇಜಾ ಅವರ ಇನ್‍ಸ್ಟಾಗ್ರಾಂ ಖಾತೆಯನ್ನು ಅನ್‍ಫಾಲೋ ಮಾಡಿದೆ. ಇದು ಬಾರಿ ಚರ್ಚೆಗೆ ಗ್ರಾಸವಾಗಿದೆ.

    15ನೇ ಆವೃತ್ತಿ ಐಪಿಎಲ್ ಆರಂಭಕ್ಕೂ ಮುನ್ನ ಧೋನಿ ಚೆನ್ನೈ ತಂಡದ ನಾಯಕತ್ವ ತೊರೆದು ಜಡೇಜಾಗೆ ನಾಯಕತ್ವದ ಪಟ್ಟ ಕಟ್ಟಿದ್ದರು. ಆ ಬಳಿಕ ಚೆನ್ನೈ ಹೀನಾಯ ಪ್ರದರ್ಶನ ತೋರಿತು. ನಂತರ ಮತ್ತೆ ಧೋನಿ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ಜಡೇಜಾ ಗಾಯಾಳುವಾಗಿ ತಂಡ ತೊರೆದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ತಂಡದೊಳಗೆ ಕಿತ್ತಾಟ ನಡೆಯುತ್ತಿದೆ ಎಂಬ ಮಾತಿಗೆ ಜೀವ ತುಂಬಿದೆ. ಜಡೇಜಾ ಅವರ ಇನ್‍ಸ್ಟಾಗ್ರಾಂ ಖಾತೆಯನ್ನು ಚೆನ್ನೈ ಫ್ರಾಂಚೈಸ್ ಅನ್‍ಫಾಲೋ ಮಾಡಿರುವುದು‌ ಯಾಕೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಜಿಮ್‍ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ ಶಿಖರ್ ಧವನ್, ಪ್ರೀತಿ ಜಿಂಟಾ ವೀಡಿಯೋ ವೈರಲ್

    IPL 2022 RR VS LSG

    ಈ ನಡುವೆ ಮಾಜಿ ಆಟಗಾರ ಆಕಾಶ್ ಚೋಪ್ರಾ, ಜಡೇಜಾ ಗಾಯದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಜಡೇಜಾ ಮುಂದಿನ ಐಪಿಎಲ್‍ನಲ್ಲಿ ಚೆನ್ನೈ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ: ಕೆ.ಎಲ್ ರಾಹುಲ್ ಜೊತೆ ಮಗಳ ಮದುವೆಗೆ ಸುನೀಲ್ ಶೆಟ್ಟಿ ಗ್ರೀನ್ ಸಿಗ್ನಲ್

    ಚೆನ್ನೈ ತಂಡ ಜಡೇಜಾಗೆ 16 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿತ್ತು. ಆದರೆ ಜಡೇಜಾ 15ನೇ ಆವೃತ್ತಿ ಐಪಿಎಲ್‍ನಲ್ಲಿ ಒಟ್ಟು 10 ಪಂದ್ಯಗಳಿಂದ 116 ರನ್ ಮತ್ತು 3 ವಿಕೆಟ್ ಕಿತ್ತು ಕಳಪೆ ಪ್ರದರ್ಶನ ನೀಡಿದ್ದಾರೆ. ಡೆಲ್ಲಿ ವಿರುದ್ಧದ ಕಳೆದ ಪಂದ್ಯದಲ್ಲಿ ಜಡೇಜಾರನ್ನು ಗಾಯದ ಸಮಸ್ಯೆ ಎಂದು ಹೊರಗಿಡಲಾಗಿತ್ತು. ಆ ಬಳಿಕ ಜಡೇಜಾ ಟೂರ್ನಿಯಿಂದಲೇ ಔಟ್ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಆಗುತ್ತಿದೆ.

     

  • ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್

    ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್

    ಮುಂಬೈ: ಸಿಎಸ್‍ಕೆ ತಂಡದ ನಾಯಕ ಎಂಎಸ್ ಧೋನಿ ಮತ್ತು ಚೆನ್ನೈ ತಂಡದ ಆಟಗಾರರು ಇಂದು ರಂಜಾನ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ತೆಲಂಗಾಣ ರಾಜ್ಯದ ಅಧಿಕೃತ ಚಂದ್ರ-ವೀಕ್ಷಕ ಸಮಿತಿಯು ಮೇ 2, ಸೋಮವಾರ, ಈದ್-ಉಲ್-ಫಿತರ್ ಎಂದು ಘೋಷಿಸಿತ್ತು. ಇಸ್ಲಾಮಿಕ್ ಕ್ಯಾಲೆಂಡರ್‍ನ 10 ನೇ ತಿಂಗಳಾಗಿರುವ ಶವ್ವಾಲ್‍ನ ಅರ್ಧಚಂದ್ರಾಕೃತಿಯು ಹೈದರಾಬಾದ್‍ನಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಗೋಚರಿಸದ ಕಾರಣ ಮಂಗಳವಾರ ಆಚರಿಸಲಾಗುತ್ತಿದೆ. ಇದನ್ನೂ ಓದಿ: ರಾಜಸ್ಥಾನಕ್ಕೆ ಮುಳುವಾದ ರಿಂಕು, ರಾಣಾ ಜೊತೆಯಾಟ – ಕೋಲ್ಕತ್ತಾಗೆ 7 ವಿಕೆಟ್‍ಗಳ ಜಯ

     

    View this post on Instagram

     

    A post shared by Chennai Super Kings (@chennaiipl)

    ಚೆನ್ನೈ ತಂಡದ ಆಟಗಾರರಾದ ಧೋನಿ, ರಾಬಿನ್ ಉತ್ತಪ್ಪ, ಶಿವಂ ದುಬೆ, ರುತುರಾಜ್ ಗಾಯಕ್‍ವಾಡ್, ಮೊಯಿನ್ ಅಲಿ ಸೇರಿದಂತೆ ಅನೇಕ ಆಟಗಾರರು ಕೆಲವು ಬಗೆ ಬಗೆಯ ಖಾದ್ಯಗಳನ್ನು ಸೇವಿಸಿ ಸಂಭ್ರಮಿಸಿದ್ದಾರೆ.

    ಐಪಿಎಲ್ 2022ರ ಆವೃತ್ತಿಯಲ್ಲಿ ಸಿಎಸ್‍ಕೆ ತಂಡವು ಅತ್ಯಂತ ಕಳಪೆ ಆಟವನ್ನು ಪ್ರದರ್ಶಿಸುತ್ತಿದೆ. ತಂಡದ ಪ್ಲೇ-ಆಫ್ ಕನಸು ಬಹುತೇಕ ಕಠಿಣವಾಗಿದ್ದರೂ ತಂಡದ ಆಟಗಾರರ ಮನಸ್ಥಿತಿಯು ಸಾಕಷ್ಟು ಲವಲವಿಕೆಯಿಂದ ಕೂಡಿದೆ. ಇದನ್ನೂ ಓದಿ: ಮುಂದಿನ ಬಾರಿ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಆದರೆ…! – ಧೋನಿ ದ್ವಂದ್ವ ಹೇಳಿಕೆ

    ಈಗಾಗಲೇ ತಂಡವು ಒಟ್ಟು 9 ಪಂದ್ಯಗಳನ್ನಾಡಿ 2 ಜಯ, 6 ಸೋಲುಗಳನ್ನೊಳಗೊಂಡಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಈ ಮಧ್ಯೆ, ರವೀಂದ್ರ ಜಡೇಜಾ ಅವರು ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದು, ಧೋನಿಗೆ ನಾಯಕ ಪಟ್ಟ ನೀಡಿದ್ದರು.

    ಭಾನುವಾರ ಮೇ 1 ರಂದು ಸನ್‍ರೈಸರ್ಸ್ ಹೈದರಾಬಾದ್ (ಎಸ್‍ಆರ್‌ಎಚ್ಈದ್ ಹಬ್ಬವನ್ನು ಆಚರಿಸಿದ ಧೋನಿ ಬಳಗ ವೀಡಿಯೋ ವೈರಲ್ ) ಅನ್ನು ಸೋಲಿಸಿದ ನಂತರ ಧೋನಿ ಬಳಗವು ಆತ್ಮವಿಶ್ವಾಸದಲ್ಲಿದೆ. ಸಿಎಸ್‍ಕೆ ಮುಂದಿನ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಬುಧವಾರ ಸೆಣಸಲಿದೆ.