Tag: Ravindra Jadeja

  • ಜಡೇಜಾ ಸ್ಕೋರ್ ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ಹೆಚ್ಚು: ರಮ್ಯಾ

    ಜಡೇಜಾ ಸ್ಕೋರ್ ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ಹೆಚ್ಚು: ರಮ್ಯಾ

    ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಇಂಗ್ಲೆಂಡ್ ವಿರುದ್ಧ ಗಳಿಸಿದ ರನ್‍ಗಿಂತ ಭಾರತದಲ್ಲಿ ಪೆಟ್ರೋಲ್ ದರವೇ ದುಬಾರಿ ಎನ್ನುವ ಮೂಲಕ ಮಾಜಿ ಸಂಸದೆ ರಮ್ಯಾ ಟ್ವಿಟ್ಟರ್ ನಲ್ಲಿ ಕೇಂದ್ರ ಸರ್ಕಾರದ ಕಾಲೆಳೆದಿದ್ದಾರೆ.

    ರಮ್ಯಾರವರು ತಮ್ಮ ಟ್ವಿಟ್ಟರ್ ಮೂಲಕ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ವೈಯಕ್ತಿಕವಾಗಿ ರವೀಂದ್ರ ಜಡೇಜಾರವರು 86 ರನ್ ಗಳಿಸಿದ್ದಾರೆ. ಆದರೆ ಅವರು ಗಳಿಸಿದ್ದು ಭಾರತದಲ್ಲಿ 2ನೇ ಅತ್ಯಧಿಕ ರನ್ ಆಗಿದೆ. ಮೊದಲನೇಯ ಅತ್ಯಧಿಕ ರನ್ ಭಾರತದ ಪೆಟ್ರೋಲ್ ದರವೇ 87 ಆಗಿದೆ ಎಂದು ಬರೆದುಕೊಂಡಿದ್ದರು.

    ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲನೇ ಇನ್ನಿಂಗ್ಸ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಪರ ರವೀಂದ್ರ ಜಡೇಜಾರವರು 86 ರನ್ ಗಳಿಸುವ ಮೂಲಕ ಭಾರತ ಪರ ವೈಯಕ್ತಿಕವಾಗಿ ಅತಿ ಹೆಚ್ಚು ರನ್‍ಗಳಿಸಿದ್ದರು. ರವೀಂದ್ರ ಜಡೇಜಾ ಅಜೇಯಾ 86 ರನ್ (156 ಎಸೆತ, 11 ಬೌಂಡರಿ, 1 ಸಿಕ್ಸರ್) ನೆರವಿನ ಹೊರತಾಗಿಯೂ ಟೀಂ ಇಂಡಿಯಾ 292 ರನ್‍ಗಳಿಗೆ ಅಲೌಟ್ ಆಗಿ 40 ರನ್ ಗಳ ಅಲ್ಪ ಹಿನ್ನಡೆ ಪಡೆಯಿತು. ಈ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 10 ವಿಕೆಟ್ ನಷ್ಟಕ್ಕೆ 332 ರನ್‍ಗಳಿಸಿತ್ತು.

    ದಿನದಿಂದ ದಿನಕ್ಕೆ ತೈಲ ಬೆಲೆಗಳು ಗಗನಕ್ಕೇರುತ್ತಿದ್ದರೂ, ಕೇಂದ್ರ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ, ಹೀಗಾಗಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾಂಗ್ರೆಸ್ ಸೋಮವಾರ ಭಾರತ್ ಬಂದ್ ಗೆ ಕರೆ ನೀಡಿತ್ತು. ಕರ್ನಾಟಕದಲ್ಲಿಯೂ ಬಂದ್‍ಗೆ ಸಂಪೂರ್ಣ ಸಹಕಾರ ದೊರೆತಿದ್ದು, ಬಹುತೇಕ ಸಾರಿಗೆ ವ್ಯವಸ್ಥೆ ಸ್ತಭ್ದವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಅಂಗಡಿ-ಮುಗ್ಗಟ್ಟುಗಳು ಮುಚ್ಚಿವೆ. ಬೇರೆ ಊರಿನಿಂದ ಬಂದ ಪ್ರಯಾಣಿಕರು ತಮ್ಮ ತಮ್ಮ ಸ್ಥಳಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ತೈಲ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಭಾರತ್ ಬಂದ್- ಏನಿರುತ್ತೆ..? ಏನಿರಲ್ಲ..?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಮೇಲೆ ಪೇದೆಯಿಂದ ಹಲ್ಲೆ!

    ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ಮೇಲೆ ಪೇದೆಯಿಂದ ಹಲ್ಲೆ!

    ಗಾಂಧಿನಗರ: ಭಾರತ ತಂಡದ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಪತ್ನಿ ರೀವಾ ಮೇಲೆ ಪೊಲೀಸ್ ಪೇದೆಯೊಬ್ಬರು ಹಲ್ಲೆ ನಡೆಸಿದ ಘಟನೆ ಸೋಮವಾರ ಗುಜರಾತ್‍ನ ಜಾಮ್‍ನಗರದಲ್ಲಿ ನಡೆದಿದೆ.

    ಪೇದೆ ಸಂಜಯ್ ಅಹಿರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಜರಾತ್‍ನ ಸಾರು ಸೆಕ್ಷನ್ ರಸ್ತೆಯಲ್ಲಿ ರೀವಾ ಜಡೇಜಾ ಚಲಾಯಿಸುತ್ತಿದ್ದ ಕಾರು ಪೇದೆಯ ಬೈಕಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕೋಪಗೊಂಡ ಪೇದೆ ರೀವಾ ಜಡೇಜಾ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಸ್‍ಐ ಪ್ರದೀಪ್ ಸೇಜುಲ್ ತಿಳಿಸಿದ್ದಾರೆ.

    ರೀವಾ ತನ್ನ ಕಾರಿನಿಂದ ಪೇದೆ ಬೈಕಿಗೆ ಡಿಕ್ಕಿ ಹೊಡೆದ ಕಾರಣ ಆತ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಸದ್ಯ ನಾವು ರೀವಾಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದ್ದೇವೆ ಹಾಗೂ ಆ ಪೇದೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರದೀಪ್ ಸೇಜುಲ್ ಹೇಳಿದ್ದಾರೆ.

    ಪೇದೆ ಸಂಜಯ್ ಅಹಿರ್ ರೀವಾ ಜಡೇಜಾ ಅವರ ಜೊತೆ ಕ್ರೂರವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಪೇದೆ ರೀವಾ ಅವರ ತಲೆ ಕೂದಲನ್ನು ಎಳೆದು ದಯೆ ತೋರಿಸದೇ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ರೀವಾ ಅವರನ್ನು ಆ ಪೇದೆಯಿಂದ ರಕ್ಷಿಸಲಾಗಿದೆ ಎಂದು ಘಟನೆ ಸ್ಥಳದಲ್ಲಿದ್ದ ವಿಜಯ್‍ಸಿನ್ ಚೌಧ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸದ್ಯ ಪೇದೆ ಸಂಜಯ್ ಅಹಿರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಆನ್ ಫೀಲ್ಡ್ ನಲ್ಲೇ ರವೀಂದ್ರ ಜಡೇಜಾಗೆ ಚಮಕ್ ಕೊಟ್ಟ ಧೋನಿ! -ವಿಡಿಯೋ ನೋಡಿ

    ಆನ್ ಫೀಲ್ಡ್ ನಲ್ಲೇ ರವೀಂದ್ರ ಜಡೇಜಾಗೆ ಚಮಕ್ ಕೊಟ್ಟ ಧೋನಿ! -ವಿಡಿಯೋ ನೋಡಿ

    ಪುಣೆ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಆನ್ ಫೀಲ್ಡ್ ನಲ್ಲೇ ರವೀಂದ್ರ ಚಮಕ್ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

    ಹೈದರಾಬಾದ್ ವಿರುದ್ಧ ಪಂದ್ಯದ 7ನೇ ಓವರ್ ವೇಳೆ ಘಟನೆ ನಡೆದಿದ್ದು, ಶಿಖರ್ ಧವನ್ ಬ್ಯಾಟಿಂಗ್ ವೇಳೆ ಬಾಲ್ ಶಾರ್ಟ್ ಮಿಡ್ ವಿಕೆಟ್ ಕಡೆ ಸಾಗಿತ್ತು. ಎದುರಾಳಿ ತಂಡದ ಬ್ಯಾಟ್ಸ್‍ಮನ್ ರನ್ ಕದಿಯಲು ಅವಕಾಶ ನೀಡಬಾರದೆಂದು ಧೋನಿ ಬಾಲ್ ಚೇಸ್ ಮಾಡಿದರು. ಈ ವೇಳೆ ಮತ್ತೊಂದು ಬದಿಯಿಂದ ಬಂದ ಜಡೇಜಾ ಬರುತ್ತಿದ್ದರು. ಕೈಗೆ ಬಾಲ್ ಸಿಕ್ಕ ಕೂಡಲೇ ಧೋನಿ ಜಡೇಜಾ ಕಡೆ ಬಾಲ್ ಎಸೆಯುವಂತೆ ಮಾಡಿ ಹೆದರಿಸಿದ್ದಾರೆ. ಇದನ್ನು ಕಂಡ ಜಡೇಜಾ ಒಮ್ಮೆಲೆ ಶಾಕ್ ಆಗಿದ್ದಾರೆ. ಬಳಿಕ ಒಂದು ಕ್ಷಣ ಇಬ್ಬರ ಮುಖದಲ್ಲೂ ನಗು ಕಂಡಿತ್ತು.

    https://twitter.com/PRINCE3758458/status/995637268361687040?

    ಸದ್ಯ ಚೆನ್ನೈ ತಂಡ ಹೈದರಾಬಾದ್ ವಿರುದ್ಧ ಪಂದ್ಯವನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಪ್ಲೇ ಆಫ್ ಗೆ ಪ್ರವೇಶ ಪಡೆದಿದೆ. ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಂಬಟಿ ರಾಯುಡು ಅಜೇಯ ಶತಕ (100 ರನ್, 62 ಎಸೆತ, ತಲಾ 7 ಸಿಕ್ಸರ್ ಹಾಗೂ ಬೌಂಡರಿ) ಸಿಡಿಸಿ ಮಿಂಚಿದರು. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

  • ಎರಡನೇ ಟೆಸ್ಟ್ ಜಯದ ಹೀರೋ ಜಡೇಜಾ ಮೂರನೇ ಪಂದ್ಯದಿಂದ ಅಮಾನತು

    ಎರಡನೇ ಟೆಸ್ಟ್ ಜಯದ ಹೀರೋ ಜಡೇಜಾ ಮೂರನೇ ಪಂದ್ಯದಿಂದ ಅಮಾನತು

    ಕೊಲಂಬೋ: ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಿಸಿಕೊಟ್ಟು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಸ್ಪಿನ್ನರ್ ರವೀಂದ್ರ ಜಡೇಜಾ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಒಂದು ಟೆಸ್ಟ್ ಪಂದ್ಯದಿಂದ ಅಮಾನತುಗೊಂಡಿದ್ದಾರೆ.

    ನಿಷೇಧ ಹೇರಿದ್ದರಿಂದ ಆಗಸ್ಟ್ 12ರಿಂದ ಪಳ್ಳೆಕೆಲೆಯಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ಜಾಗದಲ್ಲಿ ಕುಲ್‍ದೀಪ್ ಯಾದವ್ ಆಡುವ ಸಾಧ್ಯತೆಯಿದೆ.

    ನಿಷೇಧ ಹೇರಿದ್ದು ಯಾಕೆ? 2ನೇ ಟೆಸ್ಟ್ ಮೂರನೇ ದಿನವಾದ ಶನಿವಾರ 58ನೇ ಓವರ್ ಜಡೇಜಾ ಎಸೆಯುತ್ತಿದ್ದರು. ಈ ವೇಳೆ ಸ್ಟ್ರೈಕ್ ನಲ್ಲಿದ್ದ ದಿಮುತ್ ಕರುಣರತ್ನೆ ಬಾಲನ್ನು ಜಡೇಜಾ ಕೈ ಸೇರುವಂತೆ ಹೊಡೆದಿದ್ದರು. ಕೈ ಸೇರುತ್ತಿದ್ದಂತೆ ಬಾಲನ್ನು ನೇರವಾಗಿ ಬ್ಯಾಟ್ಸ್ ಮನ್ ನತ್ತ ಜಡೇಜಾಥ್ರೋ ಮಾಡಿದ್ದರು. ಈ ಬಾಲು ಕರುಣರತ್ನೆಗೆ ತಾಗದೇ ಇದ್ದರೂ ಇದೊಂದು ಅಪಾಯಕಾರಿ ಥ್ರೋ ಎಸೆದ ಕಾರಣ ಐಸಿಸಿ ಜಡೇಜಾ ಅವರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಿದೆ. ಅಷ್ಟೇ ಪಂದ್ಯದ ಶೇ.50 ಸಂಭಾವನೆಯನ್ನು ದಂಡವಾಗಿ ವಿಧಿಸಲಾಗಿದೆ.

    ಆನ್ ಫೀಲ್ಡ್ ಅಂಪೈರ್ ಎಚ್ಚರಿಕೆ ನೀಡಿದ ಬಳಿಕ ಜಡೇಜಾ ಕ್ಷಮೆ ಕೇಳಿದ್ದರು. ಈ ಘಟನೆಯನ್ನು ಮ್ಯಾಚ್ ರೆಫರಿ ಐಸಿಸಿಗೆ ಮಾಹಿತಿ ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಐಸಿಸಿ ತನ್ನ 2.2.8 ನೀತಿ ಸಂಹಿತೆ ಅಡಿಯಲ್ಲಿ ಕಠಿಣ ಕ್ರಮವನ್ನು ಕೈಗೊಂಡಿದೆ.

    ನೀತಿ ಸಂಹಿತೆ ಏನು ಹೇಳುತ್ತೆ? ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟಗಾರನೊಬ್ಬ ಚೆಂಡನ್ನು (ಅಥವಾ ಕ್ರಿಕೆಟ್ ಆಟಕ್ಕೆ ಬಳಸುವ ಯಾವುದೇ ವಸ್ತು ಉದಾ: ನೀರಿನ ಬಾಟಲ್) ಸಮೀಪದ ಆಟಗಾರ, ಆಟಗಾರರನ ಸಹಾಯಕ್ಕೆ ಧಾವಿಸುವ ಸಿಬ್ಬಂದಿ, ಅಂಪೈರ್, ಪಂದ್ಯದ ರೆಫ್ರೀ ಅಥವಾ ಮೂರನೇ ವ್ಯಕ್ತಿಗೆ ಅಪಾಯಕಾರಿಯಾಗಿ ಎಸೆಯುವಂತಿಲ್ಲ.

    ಇದೇ ಮೊದಲಲ್ಲ: ಐಸಿಸಿ ನಿಯಮವನ್ನು ರವೀಂದ್ರ ಜಡೇಜಾ ಉಲ್ಲಂಘನೆ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2016ರ ಆಕ್ಟೋಬರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಇಂದೋರ್ ಟೆಸ್ಟ್ ಪಂದ್ಯದ ವೇಳೆಯಲ್ಲೂ ಜಡೇಜಾ ನಿಯಮ ಉಲ್ಲಂಘಿಸಿದ್ದರು. ಈ ಅಪರಾಧಕ್ಕಾಗಿ ಅವರಿಗೆ ಪಂದ್ಯದ ಶೇ.50 ಸಂಭಾವನೆಯನ್ನು ದಂಡವಾಗಿ ವಿಧಿಸಲಾಗಿತ್ತು.

    ಭಾರತಕ್ಕೆ ಗೆಲುವು: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಭಾರತ ಒಂದು ಇನ್ನಿಂಗ್ಸ್ ಮತ್ತು 53 ರನ್ ಗಳಿಂದ ಗೆದ್ದುಕೊಂಡಿದೆ. ಫಾಲೋವನ್ ಹೇರಿದ ಬಳಿಕ ಎರಡನೇ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ 116.5 ಓವರ್ ಗಳಲ್ಲಿ 386 ರನ್ ಗಳಿಗೆ ಆಲೌಟ್ ಆಯ್ತು. ಈ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.

    ಮೊದಲ ಇನ್ನಿಂಗ್ಸ್ ನಲ್ಲಿ 70 ರನ್ ಹೊಡೆದಿದ್ದ ಜಡೇಜಾ 2 ವಿಕೆಟ್ ಕಬಳಿಸಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ 152 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

  • ಟೆಸ್ಟ್ ಬೌಲಿಂಗ್‍ನಲ್ಲಿ ಅಶ್ವಿನ್‍ರನ್ನ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಜಡೇಜಾ

    ಟೆಸ್ಟ್ ಬೌಲಿಂಗ್‍ನಲ್ಲಿ ಅಶ್ವಿನ್‍ರನ್ನ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಜಡೇಜಾ

    ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರವೀಂದ್ರ ಜಡೇಜಾ ಬೌಲಿಂಗ್‍ನಲ್ಲಿ ಆರ್.ಅಶ್ವೀನ್‍ರನ್ನು ಹಿಂದಿಕ್ಕುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಕ್ರಿಕೆಟಿಗ ಚೇತೇಶ್ವರ ಪೂಜಾರ ಎರಡನೇ ಸ್ಥಾನದಲ್ಲಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಾಲ್ಕನೇಯ ಸ್ಥಾನದಲ್ಲಿದ್ದಾರೆ.

    ಬ್ಯಾಟಿಂಗ್‍ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ 941 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಪೂಜಾರ 861 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಇನ್ನೂ ನಾಯಕ ವಿರಾಟ್ ಕೊಹ್ಲಿ 826 ಅಂಕಗಳನ್ನು ಪಡೆಯುವ ಮೂಲಕ ನಾಲ್ಕನೇಯ ಸ್ಥಾನದಲ್ಲಿದ್ದಾರೆ. ಅಜಿಂಕ್ಯಾ ರೆಹಾನೆ 704 ಅಂಕಗಳನ್ನು ಪಡೆಯುವ ಮೂಲಕ 17ನೇ ಸ್ಥಾನದಲ್ಲಿದ್ದಾರೆ.

    ಆಲ್ ರೌಂಡರ್ ವಿಭಾಗದಲ್ಲಿ ನೆರೆಯ ಬಾಂಗ್ಲಾದೇಶದ ಶಕೀಬ್-ಅಲ್-ಹಸನ್ 431 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

    ಏಕದಿನ ಪಂದ್ಯಗಳ ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮೊದಲ ಸ್ಥಾನ, ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನೂ ರೋಹಿತ್ ಶರ್ಮಾ, ಎಂ.ಎಸ್.ಧೋನಿ ಮತ್ತು ಶಿಖರ್ ಧವನ್ ಕ್ರಮವಾಗಿ 12, 13 ಮತ್ತು 15ನೇ ಸ್ಥಾನದಲ್ಲಿದ್ದಾರೆ.

    ಏಕದಿನ ಪಂದ್ಯಗಳ ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಅಕ್ಷರ್ ಪಟೇಲ್, ಅಮೀತ್ ಮಿಶ್ರಾ ಮತ್ತು ಅಶ್ವಿನ್ ಕ್ರಮವಾಗಿ 11, 13 ಮತ್ತು 20 ನೇ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ವಿಭಾಗದಲ್ಲಿ ಬಾಂಗ್ಲಾ ದೇಶದ ಶಕೀಬ್-ಅಲ್-ಹಸನ್ ಮೊದಲ ಸ್ಥಾನದಲ್ಲಿದ್ದು. ಭಾರತದ ರವೀಂದ್ರ ಜಡೇಜಾ 10 ನೇ ಸ್ಥಾನದಲ್ಲಿದ್ದಾರೆ.