Tag: Ravindra Jadeja

  • ಕೊನೆಯ ಓವರ್‌ ಜಡೇಜಾಗೆ ನೀಡಿದ್ದು ಯಾಕೆ- ಬಹಿರಂಗ ಪಡಿಸಿದ ಧೋನಿ

    ಕೊನೆಯ ಓವರ್‌ ಜಡೇಜಾಗೆ ನೀಡಿದ್ದು ಯಾಕೆ- ಬಹಿರಂಗ ಪಡಿಸಿದ ಧೋನಿ

    ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್‌ ರವೀಂದ್ರ ಜಡೇಜಾ ಅವರಿಗೆ ನೀಡಿದ್ದು ಯಾಕೆ ಎಂಬುದನ್ನು ಧೋನಿ ಬಹಿರಂಗ ಪಡಿಸಿದ್ದಾರೆ.

    ಕೊನೆಯ ಓವರ್‌ ಸ್ಪಿನ್ನರ್‌ ಜಡೇಜಾ ಅವರಿಗೆ ನೀಡಿದ್ದರಿಂದ ಚೆನ್ನೈಗೆ ಸೋಲಾಗಿದೆ. ಧೋನಿ ನಿರ್ಧಾರವೇ ಚೆನ್ನೈಗೆ ಮುಳುವಾಯಿತು ಎಂಬ ಟೀಕೆ ಸಿಎಸ್‌ಕೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ಈಗ ಧೋನಿ ನಾನು ಯಾಕೆ ಈ ನಿರ್ಧಾರಕ್ಕೆ ಬಂದೆ ಎಂಬುದನ್ನು ತಿಳಿಸಿದ್ದಾರೆ.

    ಬ್ರಾವೋ ಫಿಟ್‌ ಇರಲಿಲ್ಲ. ಗಾಯಗೊಂಡು ಮೈದಾನ ತೊರೆದ ನಂತರ ಮತ್ತೆ ಬರಲಿಲ್ಲ. ನನ್ನ ಬಳಿ ಕರ್ರನ್‌ ಮತ್ತು ಜಡೇಜಾ ಆಯ್ಕೆ ಮಾತ್ರ ಇತ್ತು. ಹೀಗಾಗಿ ಕೊನೆಯ ಓವರ್‌ ಅನ್ನು ಜಡೇಜಾ ಅವರಿಗೆ ನೀಡಿದೆ ಎಂದು ಹೇಳಿದರು. ಪಂದ್ಯದ ನಂತರ ಕೋಚ್‌ ಸ್ಟಿಫನ್‌ ಫ್ಲೇಮಿಂಗ್‌ ಸಹ ಈ ಮಾತನ್ನೇ ಆಡಿದರು.180 ರನ್‌ ಗಳ ಗುರಿಯನ್ನು ಪಡೆದ ಡೆಲ್ಲಿ ಕೊನೆಯ 12 ಎಸೆತಗಳಲ್ಲಿ 21 ರನ್‌ ಬೇಕಿತ್ತು. 19ನೇ ಓವರ್‌ ಎಸೆದ ಕರ್ರನ್‌ 4 ರನ್‌ ನೀಡಿ 1 ವಿಕೆಟ್‌ ಪಡೆದರು. ಕೊನೆಯ 6 ಎಸೆತದಲ್ಲಿ 17 ರನ್‌ ಬೇಕಿತ್ತು.

    ಕೊನೆಯ ಓವರ್‌ ಎಸೆದ ಜಡೇಜಾ ಮೊದಲ ಎಸೆತವನ್ನು ವೈಡ್‌ ಹಾಕಿದರು. ನಂತರದ ಎಸೆತದಲ್ಲಿ ಒಂದು ರನ್‌ ಬಂತು. ಸ್ಟ್ರೈಕ್‌ಗೆ ಅಕ್ಷರ್‌ ಪಟೇಲ್‌ ಬಂದರು. ನಂತರ 2 ಎಸೆತಗಳನ್ನು ಅಕ್ಷರ್‌ ಪಟೇಲ್‌ ಸಿಕ್ಸರ್‌ಗೆ ಅಟ್ಟಿದರು. 4ನೇ ಎಸೆತದಲ್ಲಿ 2 ರನ್‌ ಬಂತು. ಐದನೇಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಪರಿಣಾಮ ಡೆಲ್ಲಿ ತಂಡ 5 ವಿಕೆಟ್‌ಗಳ ಜಯವನ್ನು ಪಡೆದು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿತು.

    29 ಎಸೆತಗಳಲ್ಲಿ 50 ರನ್‌ ಹೊಡೆದ ಶಿಖರ್‌ ಧವನ್‌ ಅಜೇಯ 101 ರನ್‌(58 ಎಸೆತ, 14 ಬೌಂಡರಿ, 1ಸಿಕ್ಸರ್‌) ಚಚ್ಚಿದರು. ಸ್ಫೋಟಕ ಬ್ಯಾಟಿಂಗ್‌ ಮಾಡಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದ ಅಕ್ಷರ್‌ ಪಟೇಲ್‌ 21 ರನ್‌(5 ಎಸೆತ, 3 ಸಿಕ್ಸರ್‌) ಹೊಡೆದರು.

    ಚೆನ್ನೈ ಪರ 6 ಮಂದಿ ಬೌಲಿಂಗ್‌ ಮಾಡಿದ್ದರು. ದೀಪಕ್‌ ಚಹರ್‌, ಸ್ಯಾಮ್‌ ಕರ್ರನ್‌, ಶಾರ್ದೂಲ್‌ ಠಾಕೂರ್‌, ಜಡೇಜಾ, ಕರ್ಣ್‌ ಶರ್ಮಾ, ಬ್ರಾವೋ ಬೌಲಿಂಗ್‌ ಮಾಡಿದ್ದರು. ಬ್ರಾವೋ 3 ಓವರ್‌ ಬೌಲ್‌ ಮಾಡಿ 23 ರನ್‌ ನೀಡಿ 1 ವಿಕೆಟ್‌ ಪಡೆದಿದ್ದರು. ಜಡೇಜಾ 1.5 ಓವರ್‌ ಬೌಲ್‌ ಮಾಡಿ 35 ರನ್‌ ನೀಡಿದ್ದರು.

  • 241 ಟಿ-20 ಪಂದ್ಯಗಳಲ್ಲಿ ಚೊಚ್ಚಲ ಅರ್ಧಶತಕ – ವಿಶೇಷ ದಾಖಲೆ ಬರೆದ ಜಡೇಜಾ

    241 ಟಿ-20 ಪಂದ್ಯಗಳಲ್ಲಿ ಚೊಚ್ಚಲ ಅರ್ಧಶತಕ – ವಿಶೇಷ ದಾಖಲೆ ಬರೆದ ಜಡೇಜಾ

    ನವದೆಹಲಿ: ಬರೋಬ್ಬರಿ 241 ಟಿ-20 ಪಂದ್ಯಗಳನ್ನು ಆಡಿರುವ ಭಾರತದ ಅನುಭವಿ ಆಲ್‍ರೌಂಡರ್ ರವೀಂದ್ರ ಜಡೇಜಾ ಅವರು, ಶುಕ್ರವಾರ ಟಿ-20 ಮಾದರಿ ಪಂದ್ಯದಲ್ಲಿ ಮೊದಲ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

    ಶುಕ್ರವಾರ ದುಬೈನಲ್ಲಿ ನಡೆದ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಏಳು ರನ್‍ಗಳ ಅಂತರದಲ್ಲಿ ಸೋತಿದೆ. ತಂಡ ಸೋತರು 34 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದ ರವೀಂದ್ರ ಜಡೇಜಾ, 13 ವರ್ಷಗಳ ಕಾಲ 241 ಟಿ-20 ಪಂದ್ಯಗಳನ್ನಾಡಿದ ನಂತರ ತಮ್ಮ ಚೊಚ್ಚಲ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

    2007ರಲ್ಲಿ ಭಾರತದ ಪರ ಟಿ-20 ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ರವೀಂದ್ರ ಜಡೇಜಾ, ಸತತವಾಗಿ ಒಟ್ಟು 13 ವರ್ಷದಿಂದ ಟಿ-20 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ ಸೇರಿದಂತೆ ಒಟ್ಟಾರೆ ಸುಮಾರು 241 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಈವೆರಗೂ ಕೂಡ ಟಿ-20 ಮಾದರಿಯಲ್ಲಿ ಒಂದು ಅರ್ಧಶಕವನ್ನು ಸಿಡಿಸಿರಲಿಲ್ಲ. 2012ರ ಐಪಿಎಲ್‍ನಲ್ಲಿ ಡೆಕ್ಕನ್ ಚಾರ್ಜಸ್ ತಂಡದ ವಿರುದ್ಧ 48 ರನ್ ಗಳಿಸಿದ್ದೇ ಟಿ-20ಯಲ್ಲಿ ಅವರ ಗರಿಷ್ಠ ಮೊತ್ತವಾಗಿತ್ತು.

    ಜಡೇಜಾ ವಿಶೇಷ ದಾಖಲೆ:
    ನಿನ್ನೆಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಜಡೇಜಾ ಅವರು, ಐಪಿಎಲ್‍ನಲ್ಲಿ 2 ಸಾವಿರ ರನ್ ಪೂರ್ಣಗೊಳಿಸಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ 2 ಸಾವಿರ ರನ್ ಮತ್ತು 100ಕ್ಕೂ ಹೆಚ್ಚು ವಿಕೆಟ್ ಕಿತ್ತ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಐಪಿಎಲ್‍ನ 174 ಪಂದ್ಯಗಳಲ್ಲಿ 2 ಸಾವಿರ್ ರನ್ ಭಾರಿಸಿರುವ ಜಡೇಜಾ ಅವರು, ಅದೇ 174 ಪಂದ್ಯಗಳಲ್ಲಿ 110 ವಿಕೆಟ್ ಪಡೆದು ತಾನೊಬ್ಬ ಉತ್ತಮ ಆಲ್‍ರೌಂಡರ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಇದನ್ನು ಓದಿ: ಪಂದ್ಯ ಸೋತ್ರೂ ಮನಸ್ಸು ಗೆದ್ದ ಮಹಿ – ಧೋನಿ ಪ್ರಯತ್ನಕ್ಕೆ ಫ್ಯಾನ್ಸ್ ಫಿದಾ

    ಜೊತೆಗೆ ಟಿ-20 ಕ್ರಿಕೆಟ್‍ನಲ್ಲಿ ದೀರ್ಘಾವಧಿ ಕಾಲದಿಂದ ಒಂದು ಅರ್ಧಶತಕವನ್ನು ಸಿಡಿಸದೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರೆಂಬ ದಾಖಲೆ ಕೂಡ ಜಡೇಜಾ ಅವರ ಹೆಸರಿನಲ್ಲಿತ್ತು. ಆದರೆ ಶುಕ್ರವಾರ ನಡೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಜೊತೆಗೆ ಧೋನಿಯ ಜೊತೆ ಉತ್ತಮ ಜೊತೆಯಾಟವಾಡಿದ ಅವರು, ಐದನೇ ವಿಕೆಟ್‍ಗೆ 56 ಎಸೆತಗಳಲ್ಲಿ 71 ರನ್ ಸೇರಿಸಿದ್ದರು.

  • ಐಪಿಎಲ್ ನಂ.1 ದಾಖಲೆಯ ಸನಿಹದಲ್ಲಿ ರವೀಂದ್ರ ಜಡೇಜಾ

    ಐಪಿಎಲ್ ನಂ.1 ದಾಖಲೆಯ ಸನಿಹದಲ್ಲಿ ರವೀಂದ್ರ ಜಡೇಜಾ

    ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ಆಲ್‍ರೌಂಡರ್ ರವೀಂದ್ರ ಜಡೇಜಾ ಐಪಿಎಲ್ 2020ರ ಆವೃತ್ತಿಯಲ್ಲಿ ಅಪರೂಪದ ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ.

    ಯುಎಇನಲ್ಲಿ ಸೆ.19 ರಿಂದ ನ.10ರ ವರೆಗೂ 2020ರ ಐಪಿಎಲ್ ಟೂರ್ನಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಕಿ ಆಗಲಿವೆ.

    ಐಪಿಎಲ್ ಮೊದಲ ಆವೃತ್ತಿಯಿಂದ 4 ಟೂರ್ನಿಗಳನ್ನು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಜಡೇಜಾರನ್ನು 2012ರಲ್ಲಿ ಚೆನ್ನೈ ತಂಡ 9.27 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆ ಬಳಿಕ ಚೆನ್ನೈ ತಂಡದಲ್ಲಿ ಪ್ರಮುಖ ಆಲ್‍ರೌಂಡರ್ ಆಗಿ ಸ್ಥಾನ ಪಡೆದಿರುವ ಜಡೇಜಾ, ಇದುವರೆಗೂ 170 ಪಂದ್ಯಗಳಿಂದ, 1,927 ರನ್ ಹಾಗೂ 108 ವಿಕೆಟ್ ಪಡೆದಿದ್ದಾರೆ.

    ಐಪಿಎಲ್ 2020ರ ಆವೃತ್ತಿಯಲ್ಲಿ ಜಡೇಜಾ 70 ರನ್ ಗಳಿಸಿದರೇ ಟೂರ್ನಿಯ ಇತಿಹಾಸದಲ್ಲಿ 2 ಸಾವಿರ ರನ್ ಹಾಗೂ 100 ವಿಕೆಟ್ ಪಡೆದ ಮೊದಲ ಆಲ್‍ರೌಂಡರ್ ಎಂಬ ಹೆಗ್ಗಳಿಕೆಯನ್ನು ಪಡೆಯಲಿದ್ದಾರೆ. ಜಡೇಜಾ ಬಳಿಕ ಈ ಪಟ್ಟಿಯಲ್ಲಿ ಶೇನ್ ವಾಟ್ಸನ್ 3,575 ರನ್, 92 ವಿಕೆಟ್‍ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 2019ರ ಐಪಿಎಲ್ ಆವೃತ್ತಿಯಲ್ಲಿ ವಾಟನ್ಸ್ ಒಂದು ಓವರ್ ಸಹ ಬೌಲ್ ಮಾಡಿರಲಿಲ್ಲ. ಉಳಿದಂತೆ ಡ್ವೇನ್ ಬ್ರಾವೋ 1,483 ರನ್, 147 ವಿಕೆಟ್‍ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

  • ಸಾರ್ವಕಾಲಿಕ ಇಷ್ಟಪಡುವ ಹವ್ಯಾಸವನ್ನ ರಿವೀಲ್ ಮಾಡಿದ ಜಡೇಜಾ

    ಸಾರ್ವಕಾಲಿಕ ಇಷ್ಟಪಡುವ ಹವ್ಯಾಸವನ್ನ ರಿವೀಲ್ ಮಾಡಿದ ಜಡೇಜಾ

    ಗಾಂಧಿನಗರ: ಭಾರತ ಕ್ರಿಕೆಟ್ ತಂಡದ ಆಲ್‍ರೌಡರ್ ರವೀಂದ್ರ ಜಡೇಜಾ ಅವರಿಗೆ ಕ್ರಿಕೆಟ್ ಅಷ್ಟೇ ಅಲ್ಲದೆ ವಿವಿಧ ಹವ್ಯಾಸಗಳಿವೆ. ಈ ಪೈಕಿ ಒಂದನ್ನು ಸಾರ್ವಕಾಲಿಕ ಇಷ್ಟಪಡುವ ಹವ್ಯಾಸವೆಂದು ಜಡ್ಡು ಹೇಳಿದ್ದಾರೆ.

    ರವೀಂದ್ರ ಜಡೇಜಾ ಕುದುರೆ ಓಡಿಸುತ್ತಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ‘ಇದು ನಾನು ಇಷ್ಟ ಪಡುವ ಸರ್ವಕಾಲಿಕ ಹವ್ಯಾಸ’ ಎಂದು ಬರೆದುಕೊಂಡಿದ್ದಾರೆ.

    ಹೆಮ್ಮಾರಿ ಕೊರೊನಾ ವೈರಸ್ ವಿಶ್ವದ ಎಲ್ಲಾ 195 ದೇಶಗಳಿಗೆ ಹರಡಿ ತಲ್ಲಣಗೊಳಿಸಿದೆ. ಇದರಿಂದಾಗಿ ಭಾರತದಲ್ಲಿ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಈ ಸಮಯದಲ್ಲಿ ಭಾರತ ಸೇರಿದಂತೆ ಎಲ್ಲಾ ಕ್ರೀಡಾ ಪಂದ್ಯಾವಳಿಗಳನ್ನು ರದ್ದುಪಡಿಸಲಾಗಿದೆ ಅಥವಾ ಮುಂದೂಡಲಾಗಿದೆ. ಲಾಕ್‍ಡೌನ್‍ನಿಂದಾಗಿ ಎಲ್ಲಾ ಆಟಗಾರರು ತಮ್ಮ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

    ಟೀಂ ಇಂಡಿಯಾ ಆಲ್‍ರೌಡಂರ್ ರವೀಂದ್ರ್ ಜಡೇಜಾ ಅವರು ಮಂಗಳವಾರ ತಮ್ಮ ಫಾರ್ಮ್ ಹೌಸ್‍ನಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ಜಡೇಜಾ ಕುದುರೆ ಸವಾರಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಡೇಜಾ ಅವರು ಟ್ವೀಟ್‍ನಲ್ಲಿ ವಿಡಿಯೋ ಹಂಚಿಕೊಂಡು, ‘ಲಾಕ್‍ಡೌನ್ ಅನ್ನು ಅನುಸರಿಸಿ, ಮನೆಯಲ್ಲಿಯೇ ಇರಿ ಎಂದು ಜನರಿಗೆ ಮನವಿ ಮಾಡಿಕೊಂಡಿದ್ದರು.

  • ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಜಡೇಜಾ – ವಿಡಿಯೋ ವೈರಲ್

    ಹಾರಿ ಒಂದೇ ಕೈಯಲ್ಲಿ ಸ್ಟನ್ನಿಂಗ್ ಕ್ಯಾಚ್ ಹಿಡಿದ ಜಡೇಜಾ – ವಿಡಿಯೋ ವೈರಲ್

    ಕ್ರೈಸ್ಟ್ ಚರ್ಚ್: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತೊಮ್ಮೆ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ಮಾಡಿ ಒಂದು ಕೈಯಲ್ಲಿ ಕ್ಯಾಚ್ ಹಿಡಿದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಶಮಿ ಎಸೆದ 72ನೇ ಓವರಿನ ಕೊನೆ ಎಸೆತವನ್ನು ನೀಲ್ ವ್ಯಾಗ್ನರ್ 21 ರನ್(41 ಎಸೆತ, 3 ಬೌಂಡರಿ) ಬಲವಾಗಿ ಹೊಡೆದರು. ಬಾಲ್ ಸಿಕ್ಸ್ ಅಥವಾ ಬೌಂಡರಿಗೆ  ಹೋಯಿತು ಎಂದೇ ಭಾವಿಸುತ್ತಿದ್ದಾಗ ಡೀಪ್ ಸ್ಕ್ಯಾರ್ ಲೆಗ್ ನಲ್ಲಿದ್ದ ಜಡೇಜಾ ಗಾಳಿಯಲ್ಲಿ ಹಾರಿ ಎಡಗೈಯಲ್ಲಿ ಹಿಡಿದೇ ಬಿಟ್ಟರು.

    ಬಾಲ್ ಜಡೇಜಾ ಕೈ ಸೇರಿದ್ದನ್ನು ನೋಡಿ ಶಮಿ ಸೇರಿದಂತೆ ಆಟಗಾರರು ಒಮ್ಮೆ ಆಶ್ಚರ್ಯಚಕಿತರಾಗಿ ಸಂತಸ ವ್ಯಕ್ತಪಡಿಸಿದರು. ಬೌಲಿಂಗ್‍ನಲ್ಲೂ ಮಿಂಚಿದ ಜಡೇಜಾ 10 ಓವರ್ ಎಸೆದು 2 ಮೇಡನ್ ಮಾಡಿ 22 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ.

    ಜಡೇಜಾ ಕ್ಯಾಚ್ ಹಿಡಿದ ವಿಡಿಯೋ ವೈರಲ್ ಆಗಿದ್ದು, ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಟ್ವಿಟ್ಟರ್ ನಲ್ಲಿ ಜಡೇಜಾ ಕ್ಯಾಚ್ ಹಿಡಿದಿದ್ದನ್ನು ಪ್ರಶಂಸಿಸಿದ್ದಾರೆ. ವಾವ್, ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾಗಬಲ್ಲ ಕ್ಯಾಚ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಜಡೇಜಾ ಅವರನ್ನು ಅಭಿನಂದಿಸುತ್ತಿದ್ದಾರೆ. ಇದನ್ನೂ ಓದಿ: ಜಡೇಜಾ ರಾಕೆಟ್ ಥ್ರೋ, ಸ್ಟನ್ ಆದ ನೀಶಮ್ – ವಿಡಿಯೋ ನೋಡಿ

    https://twitter.com/kingkohliaddict/status/1233949159780044801

     

  • ಆಸೀಸ್ ಸ್ಪಿನ್ನರ್‌ಗೆ ಹ್ಯಾಟ್ರಿಕ್ ವಿಕೆಟ್ – ಜಡೇಜಾಗೆ ಕ್ರೆಡಿಟ್

    ಆಸೀಸ್ ಸ್ಪಿನ್ನರ್‌ಗೆ ಹ್ಯಾಟ್ರಿಕ್ ವಿಕೆಟ್ – ಜಡೇಜಾಗೆ ಕ್ರೆಡಿಟ್

    ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಆಸ್ಟನ್ ಅಗರ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ. ತಮ್ಮ ಈ ಸಾಧನೆಯನ್ನು ಆಸ್ಟನ್ ಅಗರ್ ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ ಜಡೇಜಾ ಅವರಿಗೆ ಸಲ್ಲಿಸಿದ್ದಾರೆ.

    ಜೋಹಾನ್ಸ್‌ಬರ್ಗ್ ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಇನ್ನಿಂಗ್ಸ್ ನ 8ನೇ ಓವರಿನಲ್ಲಿ ಆಸ್ಟನ್ ಅಗರ್ ಅವರು ಮೂರು ಎಸೆತಗಳಲ್ಲಿ ಫ್ಲಾಫ್ ಡು ಪ್ಲೆಸಿಸ್, ಆಂಡಿಲೆ ಫೆಹ್ಲುಕ್ವೇವೊ ಮತ್ತು ಡೇಲ್ ಸ್ಟೇನ್‍ರ ವಿಕೆಟ್‍ಗಳನ್ನು ಪಡೆದರು. ಟಿ20 ಕ್ರಿಕೆಟ್‍ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ  ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಆಸ್ಟನ್ ಅಗರ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ 2007ರಲ್ಲಿ ಈ ಸಾಧನೆ ಮಾಡಿದ್ದರು.

    ಪಂದ್ಯದ ನಂತರ ಮಾತನಾಡಿದ ಆಸ್ಟನ್ ಅಗರ್, ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ ಜಡೇಜಾ ಅವರಿಗೆ ನನ್ನ ಈ ಸಾಧನೆ ಸಲ್ಲುತ್ತದೆ. ಜಡೇಜಾ ಅವರು ನನ್ನ ನೆಚ್ಚಿನ ಕ್ರಿಕೆಟಿಗ. ಭಾರತದಲ್ಲಿ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಅನೇಕ ವಿಷಯಗಳನ್ನು ಕಲಿತಿದ್ದೇನೆ ಎಂದು ಹೇಳಿದ್ದಾರೆ.

    ಆಸ್ಟ್ರೇಲಿಯಾ ತಂಡವು ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಮೂರು ಟಿ20 ಪಂದ್ಯಗಳ ಸರಣಿ ನಡೆಯುತ್ತಿದ್ದು, ಅಗರ್ ಮೊದಲ ಪಂದ್ಯದಲ್ಲಿ 4 ಓವರ್ ಗಳಲ್ಲಿ 24 ರನ್‍ಗಳಿಗೆ 5 ವಿಕೆಟ್ ಪಡೆದರು. ಆತಿಥೇಯರನ್ನು ಆಸ್ಟ್ರೇಲಿಯಾ 107 ರನ್‍ಗಳಿಂದ ಮಣಿಸಿತು. 196ರ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ತಂಡವನ್ನು ಕೇವಲ 89 ರನ್‍ಗಳಿಗೆ ಕಟ್ಟಿಹಾಕಿತ್ತು. ಅಗರ್ ಪಂದ್ಯಶ್ರೇಷ್ಠರಾಗಿದ್ದಾರೆ.

    ರವೀಂದ್ರ ಜಡೇಜಾ ರಾಕ್‍ಸ್ಟಾರ್:
    ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಗರ್, ‘ನಾನು ಜಡೇಜಾ ಅವರನ್ನು ರಾಕ್‍ಸ್ಟಾರ್ ಎಂದು ಪರಿಗಣಿಸುತ್ತೇನೆ. ಅವರು ನನ್ನ ನೆಚ್ಚಿನ ಆಟಗಾರ. ನಾನು ಅವರಂತೆ ಆಲ್‍ರೌಂಡರ್ ಆಗಲು ಬಯಸುತ್ತೇನೆ’ ಎಂದು ಹೇಳಿದ್ದಾರೆ.

    ಜಡೇಜಾರಿಂದ ಮಾತ್ರ ಸ್ಫೂರ್ತಿ:
    ಭಾರತ ವಿರುದ್ಧದ ಸರಣಿಯಲ್ಲಿ ನಾನು ಜಡೇಜಾ ಅವರೊಂದಿಗೆ ಸುದೀರ್ಘ ಸಂಭಾಷಣೆ ನಡೆಸಿದೆ. ಅವರು ನನಗೆ ಬಹಳ ಮುಖ್ಯವಾದ ವಿಷಯಗಳನ್ನು ಹೇಳಿದ್ದರು. ಅವರು ಕ್ರಿಕೆಟ್ ಜಗತ್ತಿನಲ್ಲಿ ನನ್ನ ನೆಚ್ಚಿನ ಆಟಗಾರ. ನಾನು ಅವರಂತೆ ಆಡಲು ಬಯಸುತ್ತೇನೆ. ಜಡೇಜಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ ಎಂದು ಮೆಚ್ಚುಗೆ ಮಾತನಾಡಿದ್ದಾರೆ.

  • ಜಡೇಜಾ ರಾಕೆಟ್ ಥ್ರೋ, ಸ್ಟನ್ ಆದ ನೀಶಮ್ – ವಿಡಿಯೋ ನೋಡಿ

    ಜಡೇಜಾ ರಾಕೆಟ್ ಥ್ರೋ, ಸ್ಟನ್ ಆದ ನೀಶಮ್ – ವಿಡಿಯೋ ನೋಡಿ

    ಆಕ್ಲೆಂಡ್: ಟೀಂ ಇಂಡಿಯಾದ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತೊಮ್ಮೆ ತಾನೊಬ್ಬ ಅತ್ಯುತ್ತಮ ಫೀಲ್ಡರ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    175 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡಿಗೆ ಜಡೇಜಾ ಫೀಲ್ಡಿಂಗ್ ಮೂಲಕ ಶಾಕ್ ನೀಡಿದ್ದರು. ನವದೀಪ್ ಸೈನಿ ಎಸೆದ 35ನೇ ಓವರಿನ ಎರಡನೇ ಎಸೆತದಲ್ಲಿ ರಾಸ್ ಟೇಲರ್ ಒಂಟಿ ರನ್ ಪಡೆಯಲು ಯತ್ನಿಸಿದರು. ಬ್ಯಾಕ್‍ವರ್ಡ್ ಪಾಯಿಂಟ್ ನತ್ತ ಬರುತ್ತಿದ್ದಂತೆ ಅಲ್ಲಿಂದ ಜಡೇಜಾ ಎಡಗೈಯಲ್ಲಿ ಬಾಲ್ ಹಿಡಿದು ನೇರವಾಗಿ ಸ್ಟ್ರೈಕ್ ನಲ್ಲಿದ್ದ ವಿಕೆಟಿಗೆ ಥ್ರೋ ಮಾಡಿದರು.

    ನೀಶಮ್ ವೇಗವಾಗಿ ಓಡಿದ್ದರೂ ಕ್ರೀಸ್ ತಲುಪವ ಮುನ್ನವೇ ಬಾಲ್ ವಿಕೆಟಿಗೆ ಬಡಿದಿತ್ತು. ಬಾಲ್ ವಿಕೆಟಿಗೆ ಬಿದ್ದಿದ್ದನ್ನು ಕಂಡು ಜಡೇಜಾ ಅಲ್ಲೇ ಹಾರಿ ಸಂಭ್ರಮಿಸಿದರು. ಮೂರನೇ ಅಂಪೈರ್ ಸ್ಕ್ರೀನಿನಲ್ಲಿ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಭಾರತೀಯ ಆಟಗಾರರು ಸಂಭ್ರಮಿಸಿ ಜಡೇಜಾ ಅವರನ್ನು ಅಭಿನಂದಿಸಿದರು. 3 ರನ್ ಗಳಿಸಿದ ನೀಶಮ್ ಸಪ್ಪೆ ಮುಖವನ್ನು ಹಾಕಿಕೊಂಡು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ಡೈವ್ ಮಾಡಿ ವಿಕೆಟಿಗೆ ಥ್ರೋ – ವಿರಾಟ್ ರನೌಟ್‍ಗೆ ನೆಟ್ಟಿಗರು ಫಿದಾ

    ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿದೆ. ಮಾರ್ಟಿನ್ ಗಪ್ಟಿಲ್ 79 ರನ್(79 ಎಸೆತ, 8 ಬೌಂಡರಿ, 3 ಸಿಕ್ಸರ್), ಹೆನ್ರಿ ನಿಕೋಲಸ್ 41 ರನ್(59 ಎಸೆತ, 5 ಬೌಂಡರಿ), ರಾಸ್ ಟೇಲರ್ ಔಟಾಗದೇ 73 ರನ್(74 ಎಸೆತ, 6 ಬೌಂಡರಿ, 2 ಸಿಕ್ಸರ್) ಹೊಡೆದರೆ ಕೊನೆಯಲ್ಲಿ ಬೌಲರ್ ಕೈಲ್ ಜಾಮಿಸನ್ ಔಟಾಗದೇ 25 ರನ್(24 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದ ಪರಿಣಾಮ ನ್ಯೂಜಿಲೆಂಡ್ ಉತ್ತಮ ಮೊತ್ತ ಪೇರಿಸಿತು. ಚಹಲ್ 3 ವಿಕೆಟ್ ಪಡೆದರೆ ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದರು.

    274 ರನ್ ಗಳ ಗುರಿಯನ್ನು ಪಡೆದ ಭಾರತ 96 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದೆ. ಪೃಥ್ವಿ ಶಾ 24, ನ್, ಮಯಾಂಕ್ ಅಗರ್ವಾಲ್ 3, ವಿರಾಟ್ ಕೊಹ್ಲಿ 15, ಕೆಎಲ್ ರಾಹುಲ್ 4, ಜಾಧವ್ 9,  ಶ್ರೇಯಸ್ ಅಯ್ಯರ್ 52 ಗಳಿಸಿ ಔಟಾಗಿದ್ದಾರೆ.  ಜಡೇಜಾ 12 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. 27.4 ಓವರ್ ನಷ್ಟಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿದೆ.

    https://twitter.com/saffron_sword3/status/1226009034479697920

  • ‘ಬೌಲರ್ ಹೆಸರೇಳಿ’- ಸಂಜಯ್ ಮಂಜ್ರೇಕರ್​ರನ್ನ ಅಣಕಿಸಿದ ರವೀಂದ್ರ ಜಡೇಜಾ

    ‘ಬೌಲರ್ ಹೆಸರೇಳಿ’- ಸಂಜಯ್ ಮಂಜ್ರೇಕರ್​ರನ್ನ ಅಣಕಿಸಿದ ರವೀಂದ್ರ ಜಡೇಜಾ

    -ಜಡೇಜಾ ಟ್ವೀಟ್‍ಗೆ ಸಂಜಯ್ ಪ್ರತಿಕ್ರಿಯೆ

    ಆಕ್ಲೆಂಡ್: ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಲ್‍ರೌಂಡರ್ ರವೀಂದ್ರ ಜಡೇಜಾ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಜರ್ ನಡುವೆ ವಾಕ್ ಯುದ್ಧ ನಡೆದಿತ್ತು. ಅಂದು ಜಡೇಜಾರಂತಹ ‘ಬಿಟ್ಸ್ ಅಂಡ್ ಪೀಸಸ್’ ಆಟಗಾರನಿಗೆ ನಾನು ಅಭಿಮಾನಿಯಲ್ಲ. ಜಡೇಜಾ ಟೆಸ್ಟ್ ಏಕದಿನ ಮಾದರಿ ಸಿಮೀತ ಓವರ್ ಗಳ ಕ್ರಿಕೆಟ್‍ಗೆ ಫಿಟ್ ಅಲ್ಲ. ಆತ ಟೆಸ್ಟ್ ಕ್ರಿಕೆಟ್ ಮಾತ್ರ ಅಗತ್ಯ ಎಂದು ವ್ಯಾಖ್ಯಾನಿಸಿದ್ದರು.

     

    ಮಂಜ್ರೇಕರ್ ಅವರ ಈ ಕಾಮೆಂಟ್‍ಗಳಿಗೆ ತಿರುಗೇಟು ನೀಡಿದ್ದ ಜಡೇಜಾ, ತನ್ನ ಸ್ಥಾನ ಯಾವುದು ಎಂದು ತಿಳಿದುಕೊಂಡು ಮಾತನಾಡಿ. ನಿಮಗಿಂತ ಹೆಚ್ಚು ಪಂದ್ಯಗಳನ್ನು ದೇಶದ ಪರ ಆಡಿದ್ದೇನೆ ಎಂದಿದ್ದರು. ಇಂದಿಗೂ ರವೀಂದ್ರ ಜಡೇಜಾ, ಮಂಜ್ರೇಕರ್ ಅವರ ಮಾತುಗಳನ್ನು ಮರೆತಿಲ್ಲ.

    ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಪಡೆದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೆಎಲ್ ರಾಹುಲ್ ಅವರಿಗೆ ನೀಡಲಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಮಂಜ್ರೇಕರ್ ಅವರು, ಈ ಪಂದ್ಯದಲ್ಲಿ ಬೌಲರ್ ಗಳಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಿದ್ದರೆ ಉತ್ತಮವಾಗಿರುತ್ತಿತ್ತು ಎಂದಿದ್ದರು. ಮಂಜ್ರೇಕರ್ ಅವರ ಅಭಿಪ್ರಾಯಕ್ಕೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದ ಜಡೇಜಾ, ಆ ಬೌಲರ್ ಹೆಸರನ್ನು ಹೇಳಿ ಎಂದು ಅಣಕಿಸಿದ್ದರು.

    ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ 4 ಓವರ್ ಗಳಲ್ಲಿ 18 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದಿದ್ದರು. ಬೌಲರ್ ಗಳ ಪ್ರದರ್ಶನವನ್ನು ಪರಿಗಣಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದ್ದರೆ ಜಡೇಜಾ ಅವರಿಗೆ ಲಭಿಸುತ್ತಿತ್ತು. ಜಡೇಜಾ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಮಂಜ್ರೇಕರ್ ಅವರು, ನಿನಗೆ ಅಥವಾ ಬುಮ್ರಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಬಹುದಿತ್ತು. ಬುಮ್ರಾಗೆ ಏಕೆ ಎಂದರೇ, ಆತ ಮಾಡಿದ 3, 10, 18 ಮತ್ತು 20 ಓವರ್ ಗಳ ಎಕಾನಮಿ ತುಂಬಾ ಉತ್ತಮವಾಗಿದೆ ಎಂದು ತಮ್ಮ ಸಮರ್ಥನೆಯನ್ನು ತಿಳಿಸಿದ್ದಾರೆ.

  • 1 ರನ್ ಅಂತರದಲ್ಲಿ 2 ಪ್ರಮುಖ ವಿಕೆಟ್ ಪತನ- 36 ರನ್‍ಗಳಿಂದ ಗೆದ್ದ ಭಾರತ

    1 ರನ್ ಅಂತರದಲ್ಲಿ 2 ಪ್ರಮುಖ ವಿಕೆಟ್ ಪತನ- 36 ರನ್‍ಗಳಿಂದ ಗೆದ್ದ ಭಾರತ

    – ಕುಲದೀಪ್ ಶತಕ ವಿಕೆಟ್ ಸಾಧನೆ
    – ಸೈ ಎನಿಸಿಕೊಂಡ ಸೈನಿ, ಶಮಿ ಹ್ಯಾರ್ಟಿಕ್ ಮಿಸ್

    ರಾಜ್‍ಕೋಟ್: ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ನವದೀಪ್ ಸೈನಿ ಬೌಲಿಂಗ್ ಕಮಾಲ್ ಹಾಗೂ ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಭರ್ಜರಿ ಬ್ಯಾಟಿಂಗ್‍ನಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 36 ರನ್‍ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಭಾರತ ಸರಣಿಯನ್ನು ಜೀವಂತವಾಗಿರಿಸಿದೆ.

    ಎರಡನೇ ಪಂದ್ಯದಲ್ಲಿ ಭಾರತ 49.1ನೇ ಓವರ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು 304 ರನ್ ಗಳಿಗೆ ಆಲೌಟ್ ಮಾಡುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಸ್ಟೀವ್ ಸ್ಮಿತ್ 98 ರನ್ (102 ಎಸೆತ, 9 ಬೌಂಡರಿ, ಸಿಕ್ಸ್) ಹಾಗೂ ಮಾರ್ನಸ್ ಲಾಬುಶೇನ್ 46 ರನ್ (47 ಎಸೆತ, 4 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.

    ಟೀಂ ಇಂಡಿಯಾ ನೀಡಿದ್ದ 341 ರನ್ ಗುರಿಯನ್ನು ಬೆನ್ನುಹತ್ತಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಡೇವಿಡ್ ವಾರ್ನರ್ 15 ರನ್‍ಗಳಿಗೆ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಸ್ಟೀವ್ ಸ್ಮಿತ್ ಹಾಗೂ ಆ್ಯರನ್ ಫಿಂಚ್ ವಿಕೆಟ್ ಕಾಯ್ದುಕೊಂಡು ಆಟ ಮುಂದುವರಿಸಿದರು.

    ಬೌಂಡರಿ ಸುರಿಮಳೆ:
    ಇನ್ನಿಂಗ್ಸ್ 8 ಓವರ್ ಗಳಲ್ಲಿ 33 ರನ್ ಗಳಿಸಿದ್ದ ಸ್ಮಿತ್ ಹಾಗೂ ಫಿಂಚ್ ಜೋಡಿ ಬಳಿಕ ಬೌಂಡರಿ ಸುರಿಮಳೆ ಸುರಿಸಿತು. ಇನ್ನಿಂಗ್ಸ್ ನ 9 ಹಾಗೂ 10ನೇ ಓವರ್ ನಲ್ಲಿ ಫಿಂಚ್ ಎರಡು, ಸ್ಮಿತ್ ಮೂರು ಬೌಂಡರಿ ಬಾರಿಸಿ ತಂಡದ ಮೊತ್ತವನ್ನು ಏರಿಸಿದರು. ಈ ಜೋಡಿ 2ನೇ ವಿಕೆಟ್‍ಗೆ 62 ರನ್‍ಗಳ ಕೊಡುಗೆ ನೀಡಿತು. 33 ರನ್ ಗಳಿಸಿದ್ದ ಫಿಂಚ್ ಇನ್ನಿಂಗ್ಸ್ ನ 16ನೇ ಓವರ್ ನಲ್ಲಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.

    ಸ್ಮಿತ್‍ಗೆ ಜೊತೆಯಾದ ಮಾರ್ನಸ್ ಲಾಬುಶೇನ್ ಉತ್ತಮ ಜೊತೆಯಾಟ ಕಟ್ಟಿದರು. ಭಾರತದ ಬೌಲರ್ ಗಳನ್ನು ಕಾಡಿದ ಈ ಜೋಡಿ 3ನೇ ವಿಕೆಟ್‍ಗೆ 96 ರನ್ ಗಳಿಸಿ ತಂಡಕ್ಕೆ ಆಸರೆಯಾಯಿತು. ಇನ್ನಿಂಗ್ಸ್ ನ 31ನೇ ಓವರ್ ನಲ್ಲಿ ರವೀಂದ್ರ ಜಡೇಜಾ ಅವರು ಮಾರ್ನಸ್ ಲಾಬುಶೇನ್ ವಿಕೆಟ್ ಪಡೆಯುವ ಮೂಲಕ ಜೋಡಿಯನ್ನು ಮುರಿದರು. ಮಾರ್ನಸ್ ಲಾಬುಶೇನ್ 46 ರನ್ (47 ಎಸೆತ, 4 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ಕುಲದೀಪ್ ಸಾಧನೆ:
    ಆದರೆ ಸ್ಟೀವ್ ಸ್ಮಿತ್ ಮಾತ್ರ ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ಮಾಡಿದರು. ಈ ವಿಕೆಟ್ ಉರುಳಿಸಲು ಟೀಂ ಬೌಲರ್ ಗಳು ಭಾರೀ ಶ್ರಮಪಟ್ಟರು. ಸ್ಮಿತ್‍ಗೆ ಜೊತೆಯಾದ ಅಲೆಕ್ಸ್ ಕ್ಯಾರಿ ಬಹುಬೇಗ (ಇನ್ನಿಂಗ್ಸ್ ನ 38ನೇ ಓವರ್ ನಲ್ಲಿ) ಕುಲದೀಪ್ ಯಾದವ್‍ಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ 100 ವಿಕೆಟ್ ಪಡೆದ ಸಾಧನೆಯನ್ನು ಕುಲದೀಪ್ ಯಾದವ್ ಮಾಡಿದ್ದಾರೆ. ಅವರು 56 ಇನ್ನಿಂಗ್ಸ್ ಗಳಲ್ಲಿ ಈ ಸಾಧನ ಬರೆದಿದ್ದಾರೆ.

    ಟರ್ನಿಂಗ್ ಪಾಯಿಂಟ್: 3 ವಿಕೆಟ್ ನಷ್ಟಕ್ಕೆ 220 ರನ್‍ಗಳಿಸಿ ಸುಭದ್ರ ಸ್ಥಿತಿಯಲ್ಲಿದ್ದಾಗ ಕುಲದೀಪ್ ಯಾದವ್ ಎಸೆದ 38 ಓವರ್ ಪಂದ್ಯದ ಗತಿಯನ್ನು ಬದಲಾಯಿಸಿತು. ಅಲೆಕ್ಸ್ ಕ್ಯಾರಿ ವಿಕೆಟ್ ಕಿತ್ತ ಕುಲದೀಪ್ ಮುಂದಿನ ಮೂರನೇ ಎಸೆತದಲ್ಲಿ ಸ್ಮಿತ್ ವಿಕೆಟ್ ಪಡೆದು ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಹೀಗಾಗಿ ಆಸ್ಟ್ರೇಲಿಯಾ ತಂಡ ರನ್ ಏರಿಕೆಗೆ ಬ್ರೇಕ್ ಬಿತ್ತು. ಇನ್ನಿಂಗ್ಸ್ ನ 40ನೇ ಓವರ್ ಮುಕ್ತಾಯಕ್ಕೆ ಆಸೀಸ್ ಪ್ರಮುಖ 5 ವಿಕೆಟ್‍ಗಳನ್ನು ಕಳೆದುಕೊಂಡು 221 ರನ್ ಗಳಿಸಿತ್ತು.

    ಶಮಿ ಹ್ಯಾಟ್ರಿಕ್ ಮಿಸ್:
    ಆಷ್ಟನ್ ಟರ್ನರ್ ಹಾಗೂ ಆಷ್ಟನ್ ಆಗರ್ ವಿಕೆಟ್ ಕಾಯ್ದುಕೊಂಡು ತಂಡದ ಮೊತ್ತವನ್ನು ಏರಿಸಿ ಗೆಲುವಿನ ದಡ ಸೇರಿಸಲು ಪ್ರಯತ್ನ ಪಟ್ಟರು. ಆರನೇ ವಿಕೆಟ್‍ಗೆ 38 ರನ್ ಜೊತೆಯಾಟ ಕಟ್ಟಿದ ಈ ಜೋಡಿಯನ್ನು ಇನ್ನಿಂಗ್ಸ್ ನ 44ನೇ ಓವರ್‍ನ ಮೊದಲ ಎಸೆತದಲ್ಲೇ ಮೊಹಮ್ಮದ್ ಶಮಿ ಮುರಿದರು. ಟರ್ನರ್ 15 ಎಸೆತಗಳಲ್ಲಿ 13 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ನಂತರದ ಎಸೆತದಲ್ಲಿ ಕಮ್ಮಿನ್ಸ್ ವಿಕೆಟ್ ಕಿತ್ತ ಶಮಿ ಹ್ಯಾಟ್ರಿಕೆ ವಿಕೆಟ್ ನಿರೀಕ್ಷೆ ಮೂಡಿಸಿದರು. ಆದರೆ ಮೈದಾಕ್ಕಿಳಿದ ಮಿಚೆಲ್ ಸ್ಟಾರ್ಕ್ ಔಟಾಗದೆ ಆ ಎಸೆತದಲ್ಲಿ 2 ರನ್ ಗಳಿಸಿದರು.

    ಸೈ ಎನಿಸಿಕೊಂಡ ಸೈನಿ:
    ಇನ್ನಿಂಗ್ಸ್ ನ 47ನೇ ಓವರ್ ನಲ್ಲಿ ನವದೀಪ್ ಸೈನಿ ಆಷ್ಟನ್ ಆಗರ್ 25 ರನ್ (25 ಎಸೆತ, 3 ಬೌಂಡರಿ) ಹಾಗೂ ಮೈಕಲ್ ಸ್ಟಾರ್ಕ್ (6 ರನ್) ವಿಕೆಟ್ ಕಿತ್ತರು.

    ಬೌಲಿಂಗ್:
    ಜಸ್‍ಪ್ರೀತ್ ಬುಮ್ರಾ ಕೇವಲ ಒಂದು ವಿಕೆಟ್ ಪಡೆದಿದ್ದರೂ ರನ್ ಕಂಟ್ರೋಲ್ ಮಾಡಿದ್ದಾರೆ. 9.1 ಓವರ್ ಬೌಲಿಂಗ್ ಮಾಡಿದ ಬುಮ್ರಾ ಕೇವಲ 32 ರನ್ ನೀಡಿದ್ದಾರೆ. ಮೂರು ವಿಕೆಟ್ ಕಿತ್ತ ಮೊಹಮ್ಮದ್ ಶಮಿ ತಮ್ಮ ಹತ್ತನೇ ಓವರ್ ನಲ್ಲಿ 19 ರನ್ ನೀಡಿದ ಪರಿಣಾಮ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಆಗಿದ್ದಾರೆ. ಶಮಿ 10 ಓವರ್ ಬೌಲಿಂಗ್ ಮಾಡಿ ಒಟ್ಟು 77 ರನ್ ನೀಡಿದ್ದಾರೆ. ರವೀಂದ್ರ ಜಡೇವಾ, ನವದೀಪ್ ಸೈನಿ ಹಾಗೂ ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದಿದ್ದಾರೆ.

    ಆಸ್ಟ್ರೇಲಿಯಾ ವಿಕೆಟ್ ಪತನ:
    ಮೊದಲ ವಿಕೆಟ್- 20 ರನ್
    ಎರಡನೇ ವಿಕೆಟ್- 82 ರನ್
    ಮೂರನೇ ವಿಕೆಟ್- 178 ರನ್
    ನಾಲ್ಕನೇ ವಿಕೆಟ್- 220 ರನ್
    ಐದನೇ ವಿಕೆಟ್- 221 ರನ್
    ಆರನೇ ವಿಕೆಟ್- 259 ರನ್
    ಏಳನೇ ವಿಕೆಟ್- 259 ರನ್
    ಎಂಟನೇ ವಿಕೆಟ್- 274 ರನ್
    ಒಂಬತ್ತನೇ ವಿಕೆಟ್- 275 ರನ್
    ಹತ್ತನೇ ವಿಕೆಟ್- 304 ರನ್

    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ರೋಹಿತ್ ಶರ್ಮಾ 42 ರನ್ (44 ಎಸೆತ, 6 ಬೌಂಡರಿ), ಶಿಖರ್ ಧವನ್ 96 ರನ್ (90 ಎಸೆತ, 13 ಬೌಂಡರಿ, ಸಿಕ್ಸ್), ವಿರಾಟ್ ಕೊಹ್ಲಿ 78 ರನ್ (76 ಎಸೆತ, 6 ಬೌಂಡರಿ) ಹಾಗೂ ಕೆ.ಎಲ್.ರಾಹುಲ್ 80 ರನ್ (52 ಎಸೆತ, 6 ಬೌಂಡರಿ, 3 ಸಿಕ್ಸರ್) ಸಹಾಯದಿಂದ 6 ವಿಕೆಟ್‍ಗಳ ನಷ್ಟದಿಂದ 340 ರನ್ ಪೇರಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯ ಬೆಂಗಳೂರಿನಲ್ಲಿ ಭಾನುವಾರ ನಡೆಯಲಿದೆ.

  • ಹರ್ಷ ಬೋಗ್ಲೆಯನ್ನು ಟ್ರೋಲ್ ಮಾಡಿದ ಜಡೇಜಾ

    ಹರ್ಷ ಬೋಗ್ಲೆಯನ್ನು ಟ್ರೋಲ್ ಮಾಡಿದ ಜಡೇಜಾ

    ಕಟಕ್: ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಆಲ್‍ರೌಂಡರ್ ರವೀಂದ್ರ ಜಡೇಜಾ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಇದೇ ವೇಳೆ ಪಂದ್ಯದ ಬಳಿಕ ನಡೆದ ಕಿರು ಸಂದರ್ಶನದ ವೇಳೆ ವಿವರಣೆಗಾರ ಹರ್ಷ ಭೋಗ್ಲೆ ಅವರನ್ನು ಟ್ರೋಲ್ ಮಾಡಿದ್ದಾರೆ ಎಂಬರ್ಥದ ಕಮೆಂಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಬರತೊಡಗಿದೆ.

    ಪಂದ್ಯದ ಬಳಿಕ ಶಾರ್ದೂಲ್ ಠಾಕೂರ್ ಮತ್ತು ಜಡೇಜಾ ಇಬ್ಬರನ್ನು ಹರ್ಷ ಭೋಗ್ಲೆ ಕಿರು ಸಂದರ್ಶನ ಮಾಡಿದ್ದರು. ಈ ವೇಳೆ ಶಾರ್ದೂಲ್ ಅವರಿಗೆ ಇಂಗ್ಲೀಷ್‍ನಲ್ಲಿ ಪ್ರಶ್ನೆ ಕೇಳಿದ್ದ ಭೋಗ್ಲೆ, ಜಡೇಜಾ ಅವರಲ್ಲಿ ಹಿಂದಿಯಲ್ಲಿ ಪ್ರಶ್ನಿಸಿದ್ದರು. ಇದನ್ನು ಓದಿ: ಜಡೇಜಾ ಬಳಿ ಕ್ಷಮೆ ಕೋರಿದ ಸಂಜಯ್ ಮಂಜ್ರೇಕರ್

    ಭೋಗ್ಲೆ ಅವರ ಪ್ರಶ್ನೆಗೆ ಹಿಂದಿಯಲ್ಲೇ ತಾಳ್ಮೆಯಿಂದ ಉತ್ತರಿಸಿದ್ದ ಜಡೇಜಾ, ಕೊಹ್ಲಿ ಔಟಾದ ಬಳಿಕ ತಮ್ಮ ಮನಸ್ಸಿನಲ್ಲಿ ಯಾವ ರೀತಿ ಬ್ಯಾಟ್ ಮಾಡಬೇಕೆಂದು ಯೋಚಿಸುತ್ತಿದ್ದಾಗಿ ವಿವರಿಸಿದರು. ಅಲ್ಲದೇ ಹಿಂದಿಯಲ್ಲಿ ಮಾತು ಆರಂಭಿಸಿದ್ದ ಜಡೇಜಾ, ಇಂಗ್ಲೀಷ್ ನಲ್ಲಿ ಅಂತ್ಯಗೊಳಿಸಿದ್ದರು. ಕೂಡಲೇ ಎಚ್ಚೆತ್ತ ಭೋಗ್ಲೆ ತಮ್ಮ 2ನೇ ಪ್ರಶ್ನೆಯನ್ನು ಇಂಗ್ಲೀಷ್‍ನಲ್ಲಿ ಕೇಳಿದರು. ಅಲ್ಲದೇ ಮೈದಾನದಲ್ಲಿರುವ ವೇಳೆ ಬಾಲ್, ರನ್ ಲೆಕ್ಕಾಚಾರ ನಡೆಸುತ್ತೀರಾ ಎಂದು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಜಡೇಜಾ, ದೊಡ್ಡ ಸ್ಕ್ರೀನ್ ಮೇಲೆ ಅವರು ರನ್, ಬಾಲ್ ಅಂತರದ ಬಗ್ಗೆ ತೋರಿಸುತ್ತಾರೆ. ಆದ್ದರಿಂದ ಈ ಲೆಕ್ಕಾಚಾರ ಮಾಡಲು ಸಹಾಯಕವಾಗುತ್ತದೆ ಎಂದು ಟ್ರೋಲ್ ಮಾಡಿದ್ದರು.

    ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಹರ್ಷ ಭೋಗ್ಲೆ, ಆಟಗಾರರು ಯಾವ ಭಾಷೆಯಲ್ಲಿ ಮಾತನಾಡಲು ಇಷ್ಟಪಡುತ್ತಾರೆ ಆದೇ ಭಾಷೆಯಲ್ಲಿ ನಾನು ಅವರೊಂದಿಗೆ ಮಾತನಾಡುತ್ತೇನೆ. ಜಡೇಜಾ ಅವರನ್ನು ಕಳೆದ 10 ವರ್ಷಗಳಿಂದ ತಿಳಿದಿರುವ ಕಾರಣ ಅವರದ್ದೇ ಭಾಷೆಯಲ್ಲಿ ನಾನು ಮಾತನಾಡಿದೆ. ಆದರೆ ಅವರು ಇಂಗ್ಲೀಷ್‍ನಲ್ಲಿ ಉತ್ತಮ ಎಂದು ಸೂಚಿಸಿದ ಕೂಡಲೇ ನಾನು ಕೂಡ ಇಂಗ್ಲೀಷ್ ನಲ್ಲೇ ಮಾತನಾಡಿದೆ ಎಂದು ತಿಳಿಸಿದ್ದಾರೆ.

    https://twitter.com/sn_sumanth/status/1209053609502986240