Tag: Ravindra Chandrasekhar

  • ಪತಿಗೆ ಜಾಮೀನು: ತಬ್ಬಿ ಮುದ್ದಾಡಿದ ನಟಿ ಮಹಾಲಕ್ಷ್ಮಿ

    ಪತಿಗೆ ಜಾಮೀನು: ತಬ್ಬಿ ಮುದ್ದಾಡಿದ ನಟಿ ಮಹಾಲಕ್ಷ್ಮಿ

    ಖ್ಯಾತ ಕಿರುತೆರೆ ನಟಿ ಮಹಾಲಕ್ಷ್ಮಿ ಅವರ ಪತಿ, ನಿರ್ಮಾಪಕ ರವೀಂದರ್ ಚಂದ್ರಶೇಖರ್ ಕೊನೆಗೂ ಜೈಲಿನಿಂದ ಹೊರ ಬಂದಿದ್ದಾರೆ. ಮದ್ರಾಸ್ ಹೈಕೋರ್ಟ್ ಐದು ಕೋಟಿ ರೂಪಾಯಿ ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ. ಪತಿಯು ಜೈಲಿನಲ್ಲಿದ್ದಾಗ ತನಗೆ ಮೋಸವಾಗಿದೆ, ರವೀಂದರ್ ತನಗೆ ಮೋಸ ಮಾಡಿದ್ದಾರೆ ಎಂದು ಬಡಬಡಿಸಿದ್ದ ಮಹಾಲಕ್ಷ್ಮಿ, ಪತಿಯು ಜೈಲಿನಿಂದ ಆಚೆ ಬರುತ್ತಿದ್ದಂತೆ ಅಪ್ಪಿ ಮುದ್ದಾಡಿದ್ದಾರೆ.

    ಪತಿ ಜೈಲಿಗೆ ಹೋಗಿದ್ದಾಗ ಮಹಾಲಕ್ಷ್ಮಿ ಮಾಡಿದ್ದೇನು?

    ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ ಅವರು ತಮ್ಮ ಪತಿ, ನಿರ್ಮಾಪಕ ರವೀಂದ್ರ ಬಗ್ಗೆ ಗುರುತರ ಆರೋಪ ಮಾಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿತ್ತು. ಹಣದ ವಂಚನೆ ಪ್ರಕರಣದಲ್ಲಿ ಜೈಲು (Jail) ಪಾಲಾಗಿರುವ ರವೀಂದ್ರ ಅವರಿಗೆ ಜಾಮೀನು ಸಿಗುವುದು ಕಷ್ಟವಾಗಿತ್ತು. ಹಾಗಂತ ಮಹಾಲಕ್ಷ್ಮಿ ಬೇಸರದಲ್ಲೂ ಇಲ್ಲ. ದಿನಕ್ಕೊಂದು ಫೋಟೋಶೂಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾ, ಟ್ರೋಲ್ ಆಗುತ್ತಿದ್ದರು.

    ಈ ನಡುವೆ ಮಹಾಲಕ್ಷ್ಮಿ ಅವರೇ ಆಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ಮದುವೆ ಆಗುವಾಗ ತನ್ನ ಗಂಡ ಸಾಲ ಮಾಡಿರುವ ಮತ್ತು ಅವರಿಗೆ ಮೋಸ ಮಾಡಿರುವ ಯಾವುದೇ ವಿಚಾರವನ್ನು ನನ್ನ ಜೊತೆ ಹಂಚಿಕೊಂಡಿಲ್ಲ. ಅವರು ನನಗೆ ಮೋಸ ಮಾಡಿ ಮದುವೆ ಆಗಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾದ ಮಾತುಗಳು ಹರಿದಾಡಿದವು. ಈ ಮಾತುಗಳು ಸಖತ್ ಸುದ್ದಿ ಆಗಿದ್ದರೂ, ಮಹಾಲಕ್ಷ್ಮಿ ಮಾತ್ರ ಇದು ನಿಜನಾ ಅಥವಾ ಸುಳ್ಳಾ ಎಂದು ಸ್ಪಷ್ಟ ಪಡಿಸಲಿಲ್ಲ.

    ಇತ್ತೀಚೆಗಷ್ಟೇ ರವೀಂದ್ರ (Ravindar Chandrasekaran), ಮಹಾಲಕ್ಷ್ಮಿ (Mahalakshmi) ಜೋಡಿಯು ಮೊದಲ ಮದುವೆ ವಾರ್ಷಿಕೋತ್ಸವ ಪೂರೈಸಿದ್ದರು. ಈ ಬೆನ್ನಲ್ಲೇ ವಂಚನೆ ಪ್ರಕರಣವೊಂದರಲ್ಲಿ ರವೀಂದ್ರ ಜೈಲು ಪಾಲಾದ್ರು. ಗಂಡ ಜೈಲು ಸೇರಿದ್ರೆ, ಹೆಂಡತಿ ಮಹಾಲಕ್ಷ್ಮಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದರು. ನಟಿಯ ನಡೆಗೆ ನೆಟ್ಟಿಗರು ಕಾಲೆಳೆದಿದ್ದರು.

    ಲೈಟ್ ಬಣ್ಣ ಸೀರೆಯಲ್ಲಿ ಮತ್ತೊಂದು ಹಳದಿ ಬಣ್ಣದ ಸೀರೆಯಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿ ಮಿಂಚಿದ್ದರು. ಬಗೆ ಬಗೆಯ ಭಂಗಿಯಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದರು. ಗಂಡ ಜೈಲಿನಲ್ಲಿದ್ರೆ ನೀವು ಫೋಟೋ ತೆಗೆಸಿ ಮೋಜು ಮಾಡ್ತೀರಾ ಅಂತಾ ಬಗೆ ಬಗೆಯ ಕಾಮೆಂಟ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಂದಿದ್ದವು.

    ರವೀಂದ್ರ ಚಂದ್ರಶೇಖರ್ ಅವರನ್ನು ವಂಚನೆ ಆರೋಪದ ಮೇಲೆ ತಮಿಳುನಾಡು ಪೊಲೀಸರು ಸೆ.8ರಂದು ಬಂಧಿಸಿದ್ದರು. 16 ಕೋಟಿ ರೂ. ವಂಚಿಸಿದ ಆರೋಪದಲ್ಲಿ ನಿರ್ಮಾಪಕ ರವೀಂದ್ರ ಅವರನ್ನು ಅರೆಸ್ಟ್ ಮಾಡಿದ್ದರು.

     

    ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಕಾಪಾ (Balaji,) ಎಂಬ ಉದ್ಯಮಿಗೆ ನಿರ್ಮಾಪಕ ರವೀಂದ್ರ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ತಮ್ಮ ಲಿಬ್ರಾ ಪ್ರೋಡಕ್ಷನ್ಸ್ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಅವರನ್ನು ಕೇಳಿದ್ದರು. ಅದರಂತೆ ಉದ್ಯಮಿ ಬಾಲಾಜಿ ಅವರು ರವೀಂದ್ರಗೆ 2020ರ ಸೆಪ್ಟೆಂಬರ್‌ನಲ್ಲಿ 16 ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದರು. ಉದ್ಯಮಿ ಬಳಿ ಹಣ ಪಡೆದು ಯೋಜನೆಗೆ ಚಾಲನೆ ನೀಡಿಲ್ಲ. ಪಡೆದ ಹಣವನ್ನು ಹಿಂತಿರುಗಿಸಿಲ್ಲ ಎಂದು ತಮಿಳುನಾಡು ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಂಡನಿಗೆ ಜೈಲಿನಲ್ಲಿ ವಿಐಪಿ ಸೆಲ್ ಬೇಡಿಕೆ ಇಟ್ಟ ನಟಿ ಮಹಾಲಕ್ಷ್ಮಿ

    ಗಂಡನಿಗೆ ಜೈಲಿನಲ್ಲಿ ವಿಐಪಿ ಸೆಲ್ ಬೇಡಿಕೆ ಇಟ್ಟ ನಟಿ ಮಹಾಲಕ್ಷ್ಮಿ

    ನ್ನ ಗಂಡನಿಗೆ ಜೈಲಿನಲ್ಲಿ ವಿಐಪಿ ಸೆಲ್ ನೀಡುವಂತೆ ನಟಿ ಮಹಾಲಕ್ಷ್ಮಿ  ಕೋರ್ಟಿಗೆ ಮನವಿ ಮಾಡಿದ್ದರು. ತನ್ನ ಪತಿಯು ಸಿಲೆಬ್ರಿಟಿ ಆಗಿರುವುದರಿಂದ ಅವರಿಗೆ ಎ ಕ್ಲಾಸ್ ಸೆಲ್ ನೀಡಬೇಕು ಎಂದು ಮಹಾಲಕ್ಷ್ಮಿ ಎಗ್ಮೋರ್ ನ್ಯಾಯಾಲಕ್ಕೆ ಮನವಿ ಮಾಡಿಕೊಂಡಿದ್ದರು. ಜೊತೆಗೆ ಜಾಮೀನು (Bail) ಕೂಡ ಕೋರಿ ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

    ಜೈಲಿನಲ್ಲಿ ಪತಿಯನ್ನು ನೋಡಿ ಕಣ್ಣೀರು ಹಾಕಿರುವ ಮಹಾಲಕ್ಷ್ಮಿ, ಶತಾಯಗತಾಯ ಅವರನ್ನು ಬಂಧನದಿಂದ ಬಿಡಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಕಾನೂನು ಹೋರಾಟ ಮಾಡುತ್ತಿದ್ದಾರೆ. ತನ್ನ ಪತಿಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ವಾದ ಮಾಡುತ್ತಿದ್ದಾರೆ. ಸದ್ಯ ಜಾಮೀನು ಸಿಗದೇ ಇರುವ ಕಾರಣದಿಂದಾಗಿ ಪತಿ ರವೀಂದರ್ ಇನ್ನಷ್ಟು ದಿನ ಜೈಲಿನಲ್ಲಿ(Jail)  ಇರಬೇಕಾಗಿದೆ.

    ಏನಿದು ಪ್ರಕರಣ?

    ಕಿರುತೆರೆ ನಟಿ ಮಹಾಲಕ್ಷ್ಮಿ (Mahalakshmi) ಪತಿ ರವೀಂದ್ರ ಚಂದ್ರಶೇಖರ್ (Ravindra Chandrashekar) ಅವರನ್ನು ವಂಚನೆ ಆರೋಪದ ಮೇಲೆ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. 16 ಕೋಟಿ ರೂ. ವಂಚಿಸಿದ ಆರೋಪದಲ್ಲಿ ನಿರ್ಮಾಪಕ ರವೀಂದ್ರ ಅವರನ್ನು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ‘ಸೀತಾರಾಮಂ’ ಬೆಡಗಿ

     

    ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‍ನ ಬಾಲಾಜಿ ಕಾಪಾ ಎಂಬ ಉದ್ಯಮಿಗೆ ನಿರ್ಮಾಪಕ ರವೀಂದ್ರ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ತಮ್ಮ ಲಿಬ್ರಾ ಪ್ರೊಡಕ್ಷನ್ಸ್‌ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಅವರನ್ನು ಕೇಳಿದ್ದರು. ಅದರಂತೆ ಉದ್ಯಮಿ ಬಾಲಾಜಿ ಅವರು ರವೀಂದ್ರಗೆ 2020ರ ಸೆಪ್ಟೆಂಬರ್‌ನಲ್ಲಿ 16 ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದರು. ಉದ್ಯಮಿ ಬಳಿ ಹಣ ಪಡೆದು ಯೋಜನೆಗೆ ಚಾಲನೆ ನೀಡಿಲ್ಲ. ಪಡೆದ ಹಣವನ್ನು ಹಿಂತಿರುಗಿಸಿಲ್ಲ ಎಂದು ತಮಿಳುನಾಡು ಪೊಲೀಸರಿಗೆ ಉದ್ಯಮಿ ದೂರು ನೀಡಿದ್ದರು.

    ಅವರ ದೂರಿನ ಮೇಲೆ ತನಿಖೆ ನಡೆಸಲಾಗಿದ್ದು, ರವೀಂದ್ರ ಅವರು ದಾಖಲೆಗಳನ್ನು ನಕಲು ಮಾಡಿದ್ದು ಬೆಳಕಿಗೆ ಬಂದಿದೆ. ಈ ಸಂಬಂಧ ರವೀಂದ್ರ ಚಂದ್ರಶೇಖರ್ ಅವರನ್ನ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಅವರ ಮೇಲೆ ಹಲವು ವಂಚನೆ ಪ್ರಕರಣಗಳು ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಾಲಕ್ಷ್ಮಿ ಮದುವೆಗೆ ಶತದಿನೋತ್ಸವ: ಹೆಂಡ್ತಿಗೆ ಹ್ಯಾಪಿ ಕ್ರೆಡಿಟ್ ಕೊಟ್ಟ ರವೀಂದ್ರ

    ಮಹಾಲಕ್ಷ್ಮಿ ಮದುವೆಗೆ ಶತದಿನೋತ್ಸವ: ಹೆಂಡ್ತಿಗೆ ಹ್ಯಾಪಿ ಕ್ರೆಡಿಟ್ ಕೊಟ್ಟ ರವೀಂದ್ರ

    ಕಾಲಿವುಡ್ ನಟಿ ಮಹಾಲಕ್ಷ್ಮಿ ಹಾಗೂ ರವೀಂದ್ರ ಚಂದ್ರಶೇಖರ್ ಮದುವೆಯಾಗಿ ನೂರು ದಿನಗಳನ್ನು ಪೂರೈಸಿದ್ದಾರೆ. ಈ ಸಂಭ್ರಮವನ್ನು ಸ್ವತಃ ರವೀಂದ್ರ ಅವರೇ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದ್ದಾರೆ. ನಾನು ಇಂದು ಹ್ಯಾಪಿ ಆಗಿ ಇದ್ದೇನೆ ಅಂದರೆ, ಅದಕ್ಕೆ ನೀನೇ ಕಾರಣ ಅಮ್ಮು ಎಂದು ಅವರು ಬರೆದುಕೊಂಡಿದ್ದಾರೆ. ಕಿರುತೆರೆ ನಟಿಯಾಗಿ ಸಾಕಷ್ಟು ಫೇಮಸ್ ಆಗಿದ್ದ ಮಹಾಲಕ್ಷ್ಮಿ, ನಿರ್ಮಾಪಕ ರವೀಂದ್ರ ಅವರನ್ನು ಮದುವೆಯಾದಾಗ ಅಭಿಮಾನಿಗಳು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

    ಈ ಜೋಡಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಮಿಸ್ ಮ್ಯಾಚ್ ಜೋಡಿ ಎಂದು ಟ್ರೆಂಡ್ ಕೂಡ ಆಗಿತ್ತು. ಕೆಲ ದಿನಗಳ ನಂತರ  ಈ ಜೋಡಿಯ ಹಿನ್ನೆಲೆಯನ್ನು ಕೆದಕಲಾಗಿತ್ತು. ಇಬ್ಬರಿಗೂ ಇದು ಎರಡನೇ ಮದುವೆ ಎಂದು ಹೇಳಲಾಗಿತ್ತು. ಏನೆಲ್ಲ ನೆಗೆಟಿವ್ ಕಾಮೆಂಟ್ ಬಂದರೂ, ಇಬ್ಬರೂ ನಗು ನಗುತ್ತಲೇ ಅವುಗಳನ್ನು ತಗೆದುಕೊಂಡರು. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಮದುವೆ ನಂತರದ ದಿನಗಳನ್ನು ರವೀಂದ್ರ ಆಗಾಗ್ಗೆ ಅಪ್ ಡೇಟ್ ಮಾಡುತ್ತಲೇ ಇರುತ್ತಾರೆ. ತಮ್ಮ ಬದುಕಿಗೆ ಮಹಾಲಕ್ಷ್ಮಿ ಬಂದ ನಂತರ ಸಾಕಷ್ಟು ಬದಲಾವಣೆಗಳನ್ನು ಕಂಡೆ ಎಂದು ಮೊನ್ನೆಯಷ್ಟೇ ಅವರು ಬರೆದುಕೊಂಡಿದ್ದರು. ಇದೀಗ ನೂರರ ಸಂಭ್ರಮಕ್ಕೂ ಅವರು ಭಾವುಕ ಪೋಸ್ಟ್ ಹಾಕಿದ್ದಾರೆ. ಅವರ ಬದುಕಿನಲ್ಲಿ ಉಲ್ಲಾಸ ಬರುವುದಕ್ಕೆ ಕಾರಣ ಪತ್ನಿ ಮಹಾಲಕ್ಷ್ಮಿ ಎಂದು ಅವರಿಗೆ ಕ್ರೆಡಿಟ್ ಕೊಟ್ಟಿದ್ದಾರೆ.

    ದುಡ್ಡಿಗಾಗಿ ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಸುದ್ದಿ ಹರಿ ಬಿಡಲಾಯಿತು. ರವೀಂದ್ರ ಅವರ ಬಾಡಿ ಶೇಮಿಂಗ್ ಮಾಡಲಾಯಿತು. ಅಲ್ಲದೇ, ಇಬ್ಬರ ಬಗ್ಗೆಯೂ ಹಲವು ಗಾಸಿಪ್ ಗಳನ್ನು ಹಂಚಲಾಯಿತು. ಏನೇ ಮಾಡಿದರೂ, ಇಬ್ಬರೂ ಜೋಡಿಯೂ ಖುಷಿ ಖುಷಿಯಾಗಿ ತಗೆದುಕೊಂಡರು. ಹಲವರಿಗೆ ಉತ್ತರವನ್ನೂ ಕೊಟ್ಟರು. ಏನೇ ಆಗಲಿ ಬದುಕು ನಗುನಗುತ್ತಲೇ ಇರುಬೇಕು ಎನ್ನುವುದು ಇವರ ಫಿಲಾಸಫಿ.

    Live Tv
    [brid partner=56869869 player=32851 video=960834 autoplay=true]

  • ‘ಲವ್ ಯೂ ಅಮ್ಮು’ ಎಂದು ನಿರ್ಮಾಪಕನ ಜೊತೆ ಸಪ್ತಪದಿ ತುಳಿದ ನಟಿ ಮಹಾಲಕ್ಷ್ಮೀ: ಮದುವೆ ಬಗ್ಗೆ ಅನುಮಾನಗೊಂಡ ಅಭಿಮಾನಿಗಳು

    ‘ಲವ್ ಯೂ ಅಮ್ಮು’ ಎಂದು ನಿರ್ಮಾಪಕನ ಜೊತೆ ಸಪ್ತಪದಿ ತುಳಿದ ನಟಿ ಮಹಾಲಕ್ಷ್ಮೀ: ಮದುವೆ ಬಗ್ಗೆ ಅನುಮಾನಗೊಂಡ ಅಭಿಮಾನಿಗಳು

    ಮಿಳಿನ ಖ್ಯಾತ ಕಿರುತೆರೆ ನಟಿ ಮಹಾಲಕ್ಷ್ಮೀ ಮದುವೆ ಆಗುವ ಮೂಲಕ ನಿನ್ನೆ ಬೆಳ್ಳಂಬೆಳಗ್ಗೆ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಆದರೆ, ಅದನ್ನು ಸಂಭ್ರಮಿಸೋಕೆ ರೆಡಿಯಾಗಿಲ್ಲ ಅಭಿಮಾನಿಗಳು. ಕಾರಣ ಮಹಾಲಕ್ಷ್ಮೀ ಆಯ್ಕೆ ಮಾಡಿಕೊಂಡ ಹುಡುಗ. ತಮಿಳಿನ ಶ್ರೀಮಂತ ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಜೊತೆ ನಿನ್ನೆ ಬೆಳಿಗ್ಗೆ ಹೊಸ ಜೀವನಕ್ಕೆ ಕಾಲಿಟ್ಟಿರುವ ಮಹಾಲಕ್ಷ್ಮಿ, ಆ ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಹುಡುಗನ ಕಂಡು ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.

    ಪ್ರೀತಿ ಕುರುಡು ನಿಜ. ಹಾಗಂತ ಮಹಾಲಕ್ಷ್ಮೀ ಅಭಿಮಾನಿಗಳು ಒಪ್ಪಿಕೊಳ್ಳುತ್ತಿಲ್ಲ. ಕಾರಣ ರವೀಂದ್ರ ಅವರ ಧಡೂತಿ ದೇಹ. ಮಹಾಲಕ್ಷ್ಮಿ ಗುಬ್ಬಚ್ಚಿ ಮರಿಯಂತೆ ಕಂಡರೆ, ರವೀಂದ್ರ ನಟಿಗಿಂತೂ ಮೂರ್ನಾಲ್ಕು ಪಟ್ಟ ದಪ್ಪ ಇದ್ದಾರೆ. ಹಾಗಾಗಿ ಇದು ನಿಜವಾಗಿಯೂ ನಡೆದ ಮದುವೆನಾ? ಅಥವಾ ಸೀರಿಯಲ್ ದೃಶ್ಯನಾ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಪ್ರೀತಿಗೆ ಎಲ್ಲವನ್ನೂ ತಡೆದುಕೊಳ್ಳುವ ಶಕ್ತಿ ಇದೆ ಎಂದು ಹಲವರು ಹಾರೈಸಿದ್ದಾರೆ. ಇದನ್ನೂ ಓದಿ:ಮ್ಯೂಸಿಕಲ್ ಲವ್ ಸ್ಟೋರಿಗೆ ನಾಯಕಿಯಾದ ಮೇಘಶ್ರೀ

    ಇದು ಇಬ್ಬರಿಗೂ ಎರಡನೇ ಮದುವೆ. ಮಹಾಲಕ್ಷ್ಮೀಗೆ ಒಂದು ಮಗು ಕೂಡ ಇದೆ. ಇದೆಲ್ಲವನ್ನೂ ರವೀಂದ್ರ ಒಪ್ಪಿಕೊಂಡಿದ್ದರೆ, ರವೀಂದ್ರ ಅವರ ಎಲ್ಲ ವಿಚಾರವನ್ನೂ ತಿಳಿದುಕೊಂಡು ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಖುಷಿಯಿಂದ ಇರುವ ಹೊತ್ತಿನಲ್ಲಿ ‘ನಟಿಯು ಹಣಕ್ಕಾಗಿ ಆತನನ್ನು ಮದುವೆಯಾಗಿದ್ದಾರೆ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಏನೇ ಇರಲಿ, ಇಬ್ಬರೂ ಇಷ್ಟಪಟ್ಟು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂದಿನ ಜೀವನ ಚೆನ್ನಾಗಿರಲಿ ಎಂದು ಹಾರೈಸೋಣ.

    Live Tv
    [brid partner=56869869 player=32851 video=960834 autoplay=true]