Tag: Ravinder Jadeja

  • IND vs ENG, 1st Test: ಕುಂಬ್ಳೆ-ಹರ್ಭಜನ್‌ ದಾಖಲೆ ಉಡೀಸ್‌ ಮಾಡಿದ ಜಡೇಜಾ-ಅಶ್ವಿನ್‌ ಜೋಡಿ

    IND vs ENG, 1st Test: ಕುಂಬ್ಳೆ-ಹರ್ಭಜನ್‌ ದಾಖಲೆ ಉಡೀಸ್‌ ಮಾಡಿದ ಜಡೇಜಾ-ಅಶ್ವಿನ್‌ ಜೋಡಿ

    ಹೈದರಾಬಾದ್: ಗುರುವಾರ ಹೈದರಾಬಾದ್‌ನಲ್ಲಿ (Hyderabad) ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳಾದ ಆರ್. ಅಶ್ವಿನ್ (R.Ashwin) ಮತ್ತು ರವೀಂದ್ರ ಜಡೇಜಾ (Ravindra Jadeja) ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ಬೌಲಿಂಗ್ ಜೋಡಿ ಎನಿಸಿಕೊಂಡಿದ್ದಾರೆ.

    ಈ ಜೋಡಿ 54 ಪಂದ್ಯಗಳಲ್ಲಿ 501 ವಿಕೆಟ್‌ಗಳನ್ನು ಗಳಿಸಿದ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರ ದಾಖಲೆ ಮುರಿದು 504 ವಿಕೆಟ್‌ಗಳನ್ನು ಪಡೆದಿದೆ. ಇದನ್ನೂ ಓದಿ: ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆಚ್ಚಿದ ಆಂಗ್ಲ ಪಡೆ – ಮೊದಲ ದಿನದಾಟದಲ್ಲೇ 246 ರನ್‍ಗೆ ಆಲೌಟ್‌ !

    138 ಟೆಸ್ಟ್ ಪಂದ್ಯಗಳಲ್ಲಿ 1,039 ವಿಕೆಟ್‌ಗಳನ್ನು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಜೋಡಿ ಕಬಳಿಸಿದೆ. ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಈ ಜೋಡಿ ಬರೆದಿದೆ. ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯಾನ್ 81 ಟೆಸ್ಟ್‌ಗಳಲ್ಲಿ 643 ವಿಕೆಟ್‌ಗಳನ್ನು ಪಡೆದು ದಾಖಲೆಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ.

    ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭಗೊಂಡ ಟೀಂ ಇಂಡಿಯಾ (Team India) ಹಾಗೂ ಇಂಗ್ಲೆಂಡ್ (England) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ (IND vs ENG 1st Test) ಮೊದಲ ಇನ್ನಿಂಗ್ಸ್‌ನ 64.3 ಓವರ್‌ಗಳಲ್ಲಿ 246 ರನ್‍ಗಳಿಗೆ ಪ್ರವಾಸಿ ತಂಡ ಸರ್ವಪತನ ಕಂಡಿದೆ. ಇದನ್ನೂ ಓದಿ: ಬಾಕ್ಸಿಂಗ್‌ಗೆ ಮೇರಿಕೋಮ್‌ ನಿವೃತ್ತಿ ಘೋಷಣೆ

    ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತದ ಬೌಲಿಂಗ್‌ ಜೋಡಿ
    ಅಶ್ವಿನ್/ಜಡೇಜಾ – 504 ವಿಕೆಟ್
    ಕುಂಬ್ಳೆ/ಹರ್ಭಜನ್ – 501
    ಜಹೀರ್/ ಹರ್ಭಜನ್ – 474
    ಅಶ್ವಿನ್/ ಉಮೇಶ್ – 431
    ಕುಂಬ್ಳೆ/ ಶ್ರೀನಾಥ್ – 412

  • ಆರ್‌ಎಸ್‍ಎಸ್ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ: ರವೀಂದ್ರ ಜಡೇಜಾ

    ಆರ್‌ಎಸ್‍ಎಸ್ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ: ರವೀಂದ್ರ ಜಡೇಜಾ

    ಗಾಂಧಿನಗರ: ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ ಎಂದು ಹೇಳುವ ಮೂಲಕ ಟೀಂ ಇಂಡಿಯದ ಆಲ್‌ರೌಂಡರ್‌ ಆಟಗಾರ ರವೀಂದ್ರ ಜಡೇಜಾ(Ravinder Jadeja ) ಆರ್‌ಎಸ್‍ಎಸ್ ಮತ್ತು ಅದರ ಸಿದ್ಧಾಂತವನ್ನು ಹೊಗಳಿದ್ದಾರೆ.

    ಗುಜರಾತ್‍ನಲ್ಲಿ ಬಿಜೆಪಿಯಿಂದ(BJP) ಗೆದ್ದಿರುವ ಪತ್ನಿ ರಿವಾಬಾ(Rivaba) ವಿಡಿಯೋವನ್ನು ಟ್ವೀಟ್‌ ಮಾಡಿ ಜಡೇಜಾ ಆರ್‌ಎಸ್‌ಎಸ್‌(RSS) ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಆರ್‌ಎಸ್‌ಎಸ್ ಬಗ್ಗೆ ನಿಮ್ಮ ಜ್ಞಾನವನ್ನು ನೋಡಿ ತುಂಬಾ ಸಂತೋಷವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ನಮ್ಮ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿಯುವ ಆದರ್ಶಗಳನ್ನು ಉತ್ತೇಜಿಸುವ ಸಂಸ್ಥೆ. ನಿಮ್ಮ ಜ್ಞಾನ ಮತ್ತು ಕಠಿಣ ಪರಿಶ್ರಮವೇ ನಿಮ್ಮನ್ನು ಪ್ರತ್ಯೇಕಿಸುತ್ತದೆ. ಇದನ್ನು ಮುಂದುವರಿಸಿ ಎಂದು ಜಡೇಜಾ ಪತ್ನಿಯ ಮಾತಿಗೆ ಚಪ್ಪಾಳೆ ತಟ್ಟಿದ್ದಾರೆ.

    ವೀಡಿಯೋದಲ್ಲಿ ಏನಿದೆ?
    ಕಾರ್ಯಕ್ರಮ ಒಂದರಲ್ಲಿ ಪತ್ರಕರ್ತರೊಬ್ಬರು ಆರ್‌ಎಸ್‍ಎಸ್ ಬಗ್ಗೆ ರಿವಾಬಾ ಜಡೇಜಾಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ರಿವಾಬಾ, ಆರ್‌ಎಸ್‍ಎಸ್ ಬಿಜೆಪಿಯ ತೊಟ್ಟಿಲು. ವಿಶ್ವದ ಅತಿದೊಡ್ಡ ಸ್ವಾಯತ್ತ ಸಂಸ್ಥೆ. ರಾಷ್ಟ್ರೀಯತೆ, ದೇಶಭಕ್ತಿ, ದೇಶಪ್ರೇಮ, ಸಂಘಟನೆ, ಏಕತೆ, ತ್ಯಾಗವನ್ನು ಒಟ್ಟುಗೂಡಿಸುವ ಸಂಸ್ಥೆ ಆರ್‍ಎಸ್‍ಎಸ್ ಎಂದಿದ್ದರು. ಈ ಉತ್ತರ ಕೇಳಿ ಇಡೀ ಸಭಾಂಗಣವೇ ಚಪ್ಪಾಳೆ ತಟ್ಟುವ ಮೂಲಕ ಪ್ರತಿಧ್ವನಿಸಿತು. ಇದನ್ನೂ ಓದಿ: ದ್ವಿಶತಕ ಸಿಡಿಸಿ ಅಬ್ಬರದ ಸಂಭ್ರಮದಲ್ಲಿ ವಾರ್ನರ್ ಎಡವಟ್ಟು – ಕೈ,ಕೈ ಹಿಡಿದು ಪೆವಿಲಿಯನ್‌ಗೆ ಕರೆತಂದ ಫಿಸಿಯೋ

    ಕಾಂಗ್ರೆಸ್‌ ಟೀಕೆ:
    ಕಾಂಗ್ರೆಸ್‌ ನಾಯಕ ಪ್ರತಿಕ್ರಿಯಿಸಿ, ಕ್ರೀಡೆ ಮಾತ್ರವಲ್ಲ ಇಡೀ ಚಿತ್ರೋದ್ಯಮ ಮತ್ತು ಎಲ್ಲೆಡೆ ಭಾರತೀಯ ಜನತಾ ಪಕ್ಷವು ಅಂತಹ ವಾತಾವರಣವನ್ನು ಸೃಷ್ಟಿಸಿದೆ. ಎಲ್ಲರೂ ಈ ಬಿಜೆಪಿ ನಾಯಕರನ್ನು ಸಂತೋಷವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಏಕೆಂದರೆ ಅವರಲ್ಲಿ ಹೆಚ್ಚಿನವರು ಈ ಸರ್ಕಾರದ ಆದಾಯ ತೆರಿಗೆ ಇಲಾಖೆ ಮತ್ತು ಇತರ ಏಜೆನ್ಸಿಗಳ ಬಗ್ಗೆ ಹೆದರುತ್ತಾರೆ. ಎಲ್ಲಾ ತನಿಖಾ ಸಂಸ್ಥೆಗಳು ಆಟಿಕೆಗಳಾಗಿ ಬದಲಾಗಿವೆ ಮತ್ತು ಅವುಗಳೊಂದಿಗೆ ಆಟವಾಡುತ್ತಿವೆ. ಈ ಕಾರಣಕ್ಕೆ ಜನರು ಭಯಗೊಂಡಿದ್ದು ಅವರು ಬಿಜೆಪಿಯನ್ನು ಸಂತೋಷವಾಗಿರಿಸಲು ಬಯಸುತ್ತಾರೆ ಎಂದು ಟೀಕಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]