Tag: Ravikanthe gowda

  • ರವಿ.ಡಿ ಚನ್ನಣ್ಣನವರ್ ಸೇರಿ 11 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ರವಿ.ಡಿ ಚನ್ನಣ್ಣನವರ್ ಸೇರಿ 11 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ಬೆಂಗಳೂರು: ರಾಜ್ಯ ಸರ್ಕಾರ 11 ಮಂದಿ ಐಪಿಎಸ್ (IPS) ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಏಳು ಅಧಿಕಾರಿಗಳು ವರ್ಗಾವಣೆಯಾದರೆ, 4 ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.

    ಎಂ.ಎ ಸಲೀಂ ಅವರನ್ನು ಸ್ಪೆಷಲ್ ಟ್ರಾಫಿಕ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಸ್ಪೆಷಲ್ ಟ್ರಾಫಿಕ್ ಕಮಿಷನರ್ ನೇಮಕ ಮಾಡುವ ಮೂಲಕ ನೂತನ ಹುದ್ದೆಯನ್ನು ಸೃಷ್ಟಿಸಲಾಗಿದೆ. ಜೊತೆಗೆ ಟ್ರಾಫಿಕ್ ಕಮೀಷನರ್ ಹುದ್ದೆಗೆ ಎಡಿಜಿಪಿ ದರ್ಜೆ ಅಧಿಕಾರಿ ನೇಮಿಸಿರುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

    ರಮೇಶ್ ಬಾನೋತ್ ಅವರನ್ನು ಮೈಸೂರು ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ. ಸಿಐಡಿ ವಿಭಾಗದಲ್ಲಿ ಎಡಿಜಿಪಿಯಾಗಿದ್ದ ಉಮೇಶ್ ಕುಮಾರ್ ಅವರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಸಿಐಡಿ ಎಸ್‍ಪಿಯಾಗಿದ್ದ ರವಿ.ಡಿ ಚನ್ನಣ್ಣನವರ್ (Ravi D channannavar) ಅವರನ್ನು ಕಿಯೋನಿಕ್ಸ್ ಎಂಡಿಯಾಗಿ, ಮಂಗಳೂರು ಪಶ್ಚಿಮ ವಲಯ ಐಜಿಪಿಯಾಗಿದ್ದ ದಿವ್ಯಜ್ಯೋತಿ ರೇ ಅವರನ್ನು ಐಜಿಪಿಯಾಗಿ ಕುಂದುಕೊರತೆಗಳು ಮತ್ತು ಮಾನಹ ಹಕ್ಕುಗಳ ಇಲಾಖೆಗೆ ಮತ್ತು ರವಿಕಾಂತೇಗೌಡ (Ravikanthe Gowda) ಅವರನ್ನು ಸಿಐಡಿ ವಿಭಾಗದ ಡಿಐಜಿಯಾಗಿ ವರ್ಗಾವಣೆಗೊಳಿಸಲಾಗಿದೆ.

    ರಮಣ್ ಗುಪ್ತ ಸಿಐಡಿ ಜಂಟಿ ಪೊಲೀಸ್ ಆಯುಕ್ತ, ಶರಣಪ್ಪ ಎಸ್.ಡಿ ಬೆಂಗಳೂರು ಸಿಸಿಬಿ ಕಮಿಷನರ್, ಚಂದ್ರಗುಪ್ತ ಡಿಐಜಿ ಮಂಗಳೂರು ಪಶ್ಚಿಮ ವಲಯ, ಎಂ.ಎನ್ ಅನುಚೇತ್ ಜಾಯಿಂಟ್ ಕಮಿಷನರ್ ಟ್ರಾಫಿಕ್ ಬೆಂಗಳೂರು ನಗರ, ದಿವ್ಯಜ್ಯೋತಿ ರೇ ಐಜಿಪಿ ಕುಂದುಕೊರತೆಗಳು ಮತ್ತು ಮಾನಹ ಹಕ್ಕುಗಳ ಇಲಾಖೆ, ಲೋಕೇಶ್ ಕುಮಾರ್ ಡಿಐಜಿ ಬಳ್ಳಾರಿ ರೇಂಜ್‍ಗೆ ವರ್ಗಾವಣೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಬಿಎಂಪಿಯ ಡೆಡ್ಲಿ ಕಸದ ಲಾರಿಗಳಿಗೆ ಶೀಘ್ರವೇ ಸ್ಪೀಡ್ ಗವರ್ನರ್ ಅಳವಡಿಕೆ

    ಬಿಬಿಎಂಪಿಯ ಡೆಡ್ಲಿ ಕಸದ ಲಾರಿಗಳಿಗೆ ಶೀಘ್ರವೇ ಸ್ಪೀಡ್ ಗವರ್ನರ್ ಅಳವಡಿಕೆ

    ಬೆಂಗಳೂರು: ಬಿಬಿಎಂಪಿ ಕಸದ ಲಾರಿಗಳಿಂದ ಅಪಘಾತ ಹಿನ್ನಲೆ ಸ್ಪೀಡ್ ಗವರ್ನರ್ ಅಳವಡಿಕೆಗೆ ಸೂಚನೆ ನೀಡಲಾಗಿದೆ ಎಂದು ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೆಗೌಡ ಹೇಳಿದ್ದಾರೆ.

    ಲಾರಿಗಳು 40 ಕಿಮೀ.ಗಿಂತ ವೇಗವಾಗಿ ಚಲಿಸದಂತೆ ವ್ಯವಸ್ಥೆಗೊಳಿಸಬೇಕು. ಸ್ಪೀಡ್ ಗವರ್ನರ್ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಆಲ್ಕೋ ಮೀಟರ್ ಮೂಲಕ ಚಾಲಕರ ತಪಾಸಣೆಗೆ ಸೂಚಿಸಲಾಗಿದೆ. ಈಗಾಗಲೇ ಬಿಬಿಎಂಪಿ ಕೆಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಶಾಲೆ ಆವರಣದಲ್ಲೇ ಭಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ

    ಈಗಾಗಲೇ ಸುಮಾರು ಚಾಲಕರಿಗೆ ಟ್ರಾಫಿಕ್ ಪೊಲೀಸರು ಹಂತ ಹಂತವಾಗಿ ತರಬೇತಿ ನೀಡುತ್ತಿದ್ದಾರೆ. ಪ್ರತಿ ಬಾರಿ 40 ಜನರಿಗೆ ತರಬೇತಿ ಕೊಟ್ಟು, ಒಂದು ರೀತಿ ಸಕಾರಾತ್ಮಕ ಬೆಳವಣಿಗೆ ಚಾಲಕರಲ್ಲಿ ಕಾಣಿಸುತ್ತಿದೆ. ಅಲ್ಲದೇ ಕಸದ ಲಾರಿಗಳ ಮೇಲೆ ಸಂಚಾರಿ ಪೊಲೀಸರು ಸ್ಪೆಷಲ್ ಡ್ರೈವ್ ಮಾಡಿದ್ದಾರೆ. ಈ ವೇಳೆ ಓರ್ವ ಚಾಲಕ ಮಾತ್ರ ಮದ್ಯಪಾನ ಮಾಡಿದ್ದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

    BBMP DEATH

    ಯಾವ ರೀತಿ ವಾಹನ ಚಾಲನೆ ಮಾಡಬೇಕು. ಎಲ್ಲಿ ವಾಹನ ನಿಲ್ಲಿಸಬೇಕು. ರಸ್ತೆಯ ಎಡಬದಿಯಲ್ಲಿ ಮಾತ್ರ ಕಸದ ಲಾರಿ ಚಲಾಯಿಸಬೇಕು. ಸ್ಕೂಲ್ ಜೋನ್, ಆಕ್ಸಿಡೆಂಟ್ ಜೋನ್, ಹೀಗೆ ಎಲ್ಲಿ ಹೇಗೆ ವಾಹನ ಚಾಲನೆ ಮಾಡಬೇಕು ಎಂದು ಟ್ರೈನಿಂಗ್ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದಿನಿಂದ ಶಾಲೆ ಆರಂಭ – ಈ ವರ್ಷವೂ ಮಕ್ಕಳಿಗಿಲ್ಲ ಸೈಕಲ್ ಭಾಗ್ಯ

    ಇದೇ ವೇಳೆ ಮೊನ್ನೆ ನಡೆದ ಅಪಘಾತದಲ್ಲಿ ಲಾರಿ ಚಾಲಕನಿಗೆ ಸೂಕ್ತ ಡ್ರೈವಿಂಗ್ ಲೈಸೆನ್ಸ್ ಇಲ್ಲದ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಅಧಿಕಾರಿಗಳಿಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.