Tag: Ravidas Jayanti

  • ಸಂತ ರವಿದಾಸ್‌ಗೆ ಪ್ರಾರ್ಥನೆ ಸಲ್ಲಿಸಿದ ಮೋದಿ – ವೀಡಿಯೋ ವೈರಲ್

    ಸಂತ ರವಿದಾಸ್‌ಗೆ ಪ್ರಾರ್ಥನೆ ಸಲ್ಲಿಸಿದ ಮೋದಿ – ವೀಡಿಯೋ ವೈರಲ್

    ನವದೆಹಲಿ: ಇಂದು ರವಿದಾಸ್ ಜಯಂತಿ ಪ್ರಯುಕ್ತ ದೆಹಲಿಯ ಕರೋಲ್ ಬಾಗ್‍ನಲ್ಲಿರುವ ಶ್ರೀ ಗುರು ರವಿದಾಸ್ ವಿಶ್ರಾಮ್ ಧಾಮ್ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

    ಕಾರ್ಯಕ್ರಮದ ವೇಳೆ ಸ್ಥಳೀಯರೊಂದಿಗೆ ಸಂವಾದ ನಡೆಸಿದ ಅವರು, ನಂತರ ದೇವಸ್ಥಾನದಲ್ಲಿ ನೆರೆದಿದ್ದ ಭಕ್ತರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ ಭಕ್ತರೊಂದಿಗೆ ಕೀರ್ತನೆಗಳನ್ನು ಹಾಡಿದರು. ಇದನ್ನೂ ಓದಿ: ಚೆಂಬೆಳಕಿನ ಕವಿಯನ್ನು ಸಿನಿಮಾ ರಂಗ ಅಪ್ಪಿಕೊಳ್ಳಲಿಲ್ಲ

    ನರೇಂದ್ರ ಮೋದಿ ಅವರು ತಮ್ಮ ಸರ್ಕಾರವು ಪ್ರತಿ ಹೆಜ್ಜೆ ಮತ್ತು ಯೋಜನೆಯಲ್ಲಿ ಗುರು ರವಿದಾಸ್ ಅವರ ಚೈತನ್ಯ ತುಂಬಿದೆ ಎಂದು ಹೇಳಿದ್ದಾರೆ. ಇನ್ನೂ ದೇವಾಲಯಕ್ಕೆ ಭೇಟಿ ನೀಡಿದ ವೀಡಿಯೋವನ್ನು ತಮ್ಮ ಟ್ವಿಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ರವಿದಾಸ್ ಜಯಂತಿ ಪ್ರಯುಕ್ತ ರಾಷ್ಟ್ರ ರಾಜಧಾನಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳಿಗೆ ದೆಹಲಿ ಸರ್ಕಾರ ರಜೆ ಘೋಷಿಸಿದೆ. ಗುರು ರವಿದಾಸ್ 15 ನೇ ಮತ್ತು 16 ನೇ ಶತಮಾನದಲ್ಲಿ ಭಕ್ತಿ ಚಳವಳಿಯ ಸಂತರಾಗಿದ್ದರು ಮತ್ತು ಅವರ ಸ್ತೋತ್ರಗಳನ್ನು ಗುರು ಗ್ರಂಥ ಸಾಹಿಬ್‍ನಲ್ಲಿ ಸೇರಿಸಲಾಗಿದೆ. ಅವರನ್ನು 21ನೇ ಶತಮಾನದ ರವಿದಾಸ್ಸಿಯಾ ಧರ್ಮದ ಸ್ಥಾಪಕ ಎಂದು ಪರಿಗಣಿಸಲಾಗಿದೆ. ರವಿದಾಸ್ ಜಯಂತಿಯನ್ನು ಮಾಘ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಇಂದು ಮಾಘ ತಿಂಗಳ ಹುಣ್ಣಿಮೆಯ ದಿನವಾಗಿದೆ. ಇದನ್ನೂ ಓದಿ: ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ

    ಗುರು ರವಿದಾಸ್ ಅವರ ನಿಖರವಾದ ಜನ್ಮ ದಿನಾಂಕ ತಿಳಿದಿಲ್ಲ. ಆದರೆ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ 1377 ರಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಗುರು ರವಿದಾಸ್ ಅವರು ತಮ್ಮ ಜಾತಿಯನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನತೆ ಮತ್ತು ಘನತೆಯನ್ನು ಪ್ರತಿಪಾದಿಸಿದರು. ಅಲ್ಲದೇ ಲಿಂಗ ಸಮಾನತೆಯನ್ನು ಉತ್ತೇಜಿಸಿದರು ಮತ್ತು ಜಾತಿಯ ಆಧಾರದ ಮೇಲೆ ಸಮಾಜದ ವಿಭಜನೆಯನ್ನು ವಿರೋಧಿಸುತ್ತಿದ್ದರು.