Tag: ravichandran

  • ಗಣೇಶೋತ್ಸವದ ಬಂದೋಬಸ್ತ್ ಜೊತೆಗೆ ಸ್ಟೇಜ್ ಮೇಲೆ ಹಾಡಿ ರಂಜಿಸಿದ ಪೊಲೀಸ್- ವಿಡಿಯೋ ವೈರಲ್

    ಗಣೇಶೋತ್ಸವದ ಬಂದೋಬಸ್ತ್ ಜೊತೆಗೆ ಸ್ಟೇಜ್ ಮೇಲೆ ಹಾಡಿ ರಂಜಿಸಿದ ಪೊಲೀಸ್- ವಿಡಿಯೋ ವೈರಲ್

    ಮೈಸೂರು: ಗಣೇಶೋತ್ಸವದ ಬಂದೋಬಸ್ತ್ ಕೆಲಸದಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಸಮವಸ್ತ್ರದಲ್ಲೇ ಚಲನಚಿತ್ರ ಗೀತೆ ಹಾಡುವುದರ ಜೊತೆಗೆ ವೇದಿಕೆಯ ಮೇಲೆ ನರ್ತಿಸುವ ಮೂಲಕ ಸಾರ್ವಜನಿಕರಿಗೆ ಸಖತ್ ಮನರಂಜನೆ ನೀಡಿದ್ದಾರೆ.

    ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ಕಳೆದ ರಾತ್ರಿ ಸಾರ್ವಜನಿಕ ಗಣೇಶೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಅರ್ಕೇಸ್ಟ್ರಾದಲ್ಲಿ ಕರ್ತವ್ಯದಲ್ಲಿದ್ದ ಪೇದೆಯೊಬ್ಬರು ಹಾಡಿ, ಕುಣಿದಿದ್ದಾರೆ.

    ಹಂಚ್ಯಾ ಗ್ರಾಮದ ಯುವಕರ ಜೊತೆ ಬೆರೆತು “ಯಾರೇ ನೀನು ರೋಜಾ ಹೂವೇ, ಯಾರೇ ನೀನು ಮಲ್ಲಿಗೆ ಹೂವೇ, ಹೇಳೆ ಓ ಚೆಲುವೆ” ಹಾಡು ಹೇಳುವುದರ ಜೊತೆಗೆ ಯುವಕರ ಜೊತೆಗೆ ಹೆಜ್ಜೆ ಹಾಕಿ ಸಾರ್ವಜನಿಕರನ್ನು ರಂಜಿಸಿದ್ದಾರೆ.

    ಪೇದೆಯ ಹಾಡು, ಕುಣಿತ ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಫುಲ್ ವೈರಲ್ ಆಗಿದೆ.

    https://www.youtube.com/watch?v=Vo_M83sNCiA&feature=youtu.be

  • ಕ್ರೇಜಿಸ್ಟಾರ್ ರವಿಚಂದ್ರನ್‍ಗೆ 56ನೇ ಜನ್ಮದಿನದ ಸಂಭ್ರಮ – ಸೀಜರ್ ಚಿತ್ರತಂಡದಿಂದ ಟೀಸರ್ ಬಿಡುಗಡೆ

    ಕ್ರೇಜಿಸ್ಟಾರ್ ರವಿಚಂದ್ರನ್‍ಗೆ 56ನೇ ಜನ್ಮದಿನದ ಸಂಭ್ರಮ – ಸೀಜರ್ ಚಿತ್ರತಂಡದಿಂದ ಟೀಸರ್ ಬಿಡುಗಡೆ

    ಬೆಂಗಳೂರು: ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ವಿ. ರವಿಚಂದ್ರನ್‍ಗೆ ಇಂದು 56ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಮನೆ ಮುಂದೆ ಬಂದು ನಿಂತ್ರೂ ಅದ್ಯಾಕೋ ರವಿಮಾಮ ಹೊರಗೆ ಬರಲಿಲ್ಲ. ಆದ್ರೆ ಕುಟುಂಬದವರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ್ರು.

    ಇನ್ನು ಕನಸುಗಾರನ ಹುಟ್ಟುಹಬ್ಬದ ಪ್ರಯುಕ್ತ `ಸೀಜರ್’ ಚಿತ್ರತಂಡ ಟೀಸರ್‍ವೊಂದನ್ನು ಬಿಡುಗಡೆ ಮಾಡಿದೆ. ಈ ಟೀಸರ್ ರವಿಚಂದ್ರನ್ ಅವರಿಗೆ ಅರ್ಪಿಸಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಕಾಶ್ ರಾಜ್, ಚಿರಂಜೀವಿ ಸರ್ಜ, ಪಾರುಲ್ ಯಾದವ್ ಮತ್ತಿತರರು ಅಭಿನಯಿಸಿದ್ದಾರೆ.

    ರಣಧೀರನ ಜನ್ಮದಿನದ ಶುಭಾಶಯ ಕೋರಿ ಸೀಜರ್ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ.

    https://www.youtube.com/watch?v=5ZSTOY0lbuA