Tag: Ravichandran Ashwin

  • India vs New Zealand: ಜಡೇಜಾ, ಅಶ್ವಿನ್‌ ಸ್ಪಿನ್‌ ಜಾದು – ಟೀಂ ಇಂಡಿಯಾ ಹಿಡಿತದಲ್ಲಿ 3ನೇ ಟೆಸ್ಟ್‌

    India vs New Zealand: ಜಡೇಜಾ, ಅಶ್ವಿನ್‌ ಸ್ಪಿನ್‌ ಜಾದು – ಟೀಂ ಇಂಡಿಯಾ ಹಿಡಿತದಲ್ಲಿ 3ನೇ ಟೆಸ್ಟ್‌

    ಮುಂಬೈ: ರವೀಂದ್ರ ಜಡೇಜಾ ಮತ್ತು ಆರ್‌.ಅಶ್ವಿನ್‌ ಸ್ಪಿನ್‌ ಮೋಡಿಯಿಂದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಹಿಡಿತ ಸಾಧಿಸಿದೆ. ನ್ಯೂಜಿಲೆಂಡ್‌ 2ನೇ ದಿನದಾಟದ ಅಂತ್ಯಕ್ಕೆ 171 ರನ್‌ ಗಳಿಸಿದ್ದು, 9 ವಿಕೆಟ್‌ ಕಳೆದುಕೊಂಡಿದೆ. ಆ ಮೂಲಕ 143 ರನ್‌ಗಳ ಮುನ್ನಡೆ ಸಾಧಿಸಿದೆ.

    ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 28 ರನ್‌ಗಳ ಅಲ್ಪ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ ಅನ್ನು ಟೀಂ ಇಂಡಿಯಾ ಸಂಘಟಿತ ಬೌಲಿಂಗ್‌ನಿಂದ ಕಟ್ಟಿ ಹಾಕಿತು.

    ನ್ಯೂಜಿಲೆಂಡ್‌ ತಂಡದ ನಾಯಕ ಟಾಮ್‌ ಲೇಥಮ್‌ನನ್ನು (1 ರನ್) ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಟೀಂ ಇಂಡಿಯಾ ಬೌಲರ್‌ ಆಕಾಶ್‌ ದೀಪ್‌ ಪೆವಿಲಿಯನ್‌ಗೆ ಅಟ್ಟಿದರು.‌ ಅವರ ಜೊತೆಗೆ ಡೆವೋನ್‌ ಕಾನ್ವೆ (22) ವಿಕೆಟ್‌ ಅನ್ನು 13ನೇ ಓವರ್‌ನಲ್ಲಿ ವಾಷಿಂಗ್ಟನ್‌ ಸುಂದರ್‌ ಉರುಳಿಸಿದರು.

    ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ ಮತ್ತು ಆರ್‌.ಅಶ್ವಿನ್‌ ಮೋಡಿ ಮಾಡಿದರು. ಜಡೇಜಾ ದಿನದಾಟದ ಅಂತ್ಯದ ಕೊನೆ ಬಾಲ್‌ನಲ್ಲಿ ವಿಕೆಟ್‌ ಬೀಳಿಸುವ ಮೂಲಕ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಗೊಂಚಲು ಪಡೆದರು. ಅಶ್ವಿನ್‌ ಮೂರು ವಿಕೆಟ್‌ ಕಿತ್ತು ನ್ಯೂಜಿಲೆಂಡ್‌ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು.

    ಟೀಂ ಇಂಡಿಯಾದ ಉತ್ತಮ ಬೌಲಿಂಗ್‌ ಪ್ರದರ್ಶನದ ನಡುವೆಯೂ ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ ಕಿವೀಸ್‌ ಪಡೆದ ವಿಲ್‌ ಯಂಗ್‌ (51) ಅರ್ಧಶತಕ ಗಳಿಸಿದರು. ಡೇರಿಲ್ ಮಿಚೆಲ್ (22), ಗ್ಲೆನ್ ಫಿಲಿಪ್ಸ್ (26) ಬ್ಯಾಟಿಂಗ್‌ ನೆರವಿನಿಂದ ನ್ಯೂಜಿಲೆಂಡ್‌ ಎರಡನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್‌ ಕಳೆದುಕೊಂಡು 171 ರನ್‌ ಗಳಿಸಿತು. ಆ ಮೂಲಕ 143 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಮೂರು ದಿನಗಳ ಆಟ ಬಾಕಿ ಇದೆ.

    ಟೆಸ್ಟ್‌ ಸರಣಿಯ ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 235 ರನ್‌ಗಳಿಗೆ ಆಲೌಟ್‌ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇನ್ನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಶುಭಮನ್‌ ಗಿಲ್‌ (90) ಮತ್ತು ರಿಷಭ್‌ ಪಂತ್‌ (60) ಬಲ ತುಂಬಿದರು. ಕೊನೆಯಲ್ಲಿ ವಾಷಿಂಗ್ಟನ್‌ ಸುಂದರ್‌ (38 ರನ್) ಉಪಯುಕ್ತ ಆಟವಾಡಿದ್ದರಿಂದ ಭಾರತ‌ 263 ರನ್‌ ಗಳಿಸಲು ಸಾಧ್ಯವಾಯಿತು. ಆ ಮೂಲಕ ನ್ಯೂಜಿಲೆಂಡ್‌ ಎದುರು ಅಲ್ಪ ಮುನ್ನಡೆ ಸಾಧಿಸಿತ್ತು.

  • ಇತಿಹಾಸ ಸೃಷ್ಟಿಸಿದ ಕಿವೀಸ್ – 12 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲುವು

    ಇತಿಹಾಸ ಸೃಷ್ಟಿಸಿದ ಕಿವೀಸ್ – 12 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲುವು

    – ಕಳಪೆ ಬ್ಯಾಟಿಂಗ್‌ನಿಂದ ಬೆಲೆತೆತ್ತ ಭಾರತ

    ಪುಣೆ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಕಳಪೆ ಪ್ರದರ್ಶನದಿಂದಾಗಿ ಭಾರತ ತಂಡ (Team India) ಬೆಲೆತೆತ್ತಿದೆ. 2ನೇ ಟೆಸ್ಟ್ ಪಂದ್ಯದಲ್ಲೂ ಭಾರತಕ್ಕೆ ಹೀನಾಯ ಸೋಲಾಗಿದ್ದು, ಕಿವೀಸ್ 113 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 12 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ (Test series) ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಕಿವೀಸ್ ಪಾತ್ರವಾಗಿದೆ.

    ಪುಣೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ 359 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 245 ರನ್‌ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿದೆ. ಈ ಮೂಲಕ 1983ರ ಬಳಿಕ ಒಂದೇ ವರ್ಷದಲ್ಲಿ 3 ಟೆಸ್ಟ್ ಪಂದ್ಯ ಸೋತ ಅಪಖ್ಯಾತಿ ಪಡೆದಿದೆ. 1969ರಲ್ಲಿ ಒಂದೇ ವರ್ಷದಲ್ಲಿ 4 ಟೆಸ್ಟ್ ಹಾಗೂ 1983ರಲ್ಲಿ 3 ಟೆಸ್ಟ್ ಸೋತಿದ್ದ ಭಾರತ, 2024ರಲ್ಲಿ 3 ಟೆಸ್ಟ್ ಕಳೆದುಕೊಂಡಿದೆ. ಇದನ್ನೂ ಓದಿ: ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ ರಿಲೀಸ್ – ಆರ್‌ಸಿಬಿ ಸೇರ್ತಾರಾ ಕನ್ನಡಿಗ?

    301 ರನ್‌ಗಳ ಮುನ್ನಡೆಯೊಂದಿಗೆ ಮೂರನೇ ದಿನದ ಆಟ ಆರಂಭಿಸಿದ ಕಿವೀಸ್ 2ನೇ ಇನ್ನಿಂಗ್ಸ್‌ನಲ್ಲಿ 255 ರನ್ ಗಳಿಸಿ, ಭಾರತಕ್ಕೆ 359 ರನ್‌ಗಳ ಗುರಿ ನೀಡಿತ್ತು. ಬೃಹತ್ ಮೊತ್ತದ ಗುರಿ ಬೆನ್ನಟಿದ ಭಾರತ ಕಿವೀಸ್ ಸ್ಪಿನ್ ದಾಳಿಗೆ ಮಕಾಡೆ ಮಲಗಿತು. ಕಿವೀಸ್ ಸ್ಪಿನ್ ಮಾಂತ್ರಿಕ ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್ ಅವರ ದಾಳಿಗೆ ತತ್ತರಿಸಿ ರನ್ ಕದಿಯಲು ತಿಣುಕಾಡಿತ್ತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಹೊರತುಪಡಿಸಿ ಉಳಿದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿಕೊಂಡರು. ಇದು ಟೀಂ ಇಂಡಿಯಾ ಸೋಲಿಗೆ ಕಾರಣವಾಯಿತು.

    ಭಾರತದ ಪರ ಯಶಸ್ವಿ ಜೈಸ್ವಾಲ್ 77 ರನ್ (65 ಎಸೆತ, 3 ಸಿಕ್ಸರ್, 9 ಬೌಂಡರಿ), ಶುಭಮನ್ ಗಿಲ್ 23 ರನ್, ವಿರಾಟ್ ಕೊಹ್ಲಿ 17 ರನ್, ವಾಷಿಂಗ್ಟನ್ ಸುಂದರ್ 21 ರನ್, ಸರ್ಫರಾಜ್ ಖಾನ್ 9 ರನ್, ರವಿಚಂದ್ರನ್ ಅಶ್ವಿನ್ 18 ರನ್, ನಾಯಕ ರೋಹಿತ್ ಶರ್ಮಾ (Rohit Sharma) 8 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾ 84 ಎಸೆತಗಳಲ್ಲಿ 42 ರನ್‌ ಗಳಿಸಿದ್ದರು. ಆದ್ರೆ ಸಿಕ್ಸರ್‌ ಸಿಡಿಸುವ ಭರದಲ್ಲಿ ಬೌಂಡರಿ ಲೈನ್‌ಬಳಿ ಕ್ಯಾಚ್‌ಗೆ ತುತ್ತಾದರು. ಇದನ್ನೂ ಓದಿ: ನಾನು ಅವರ ಹಾಸಿಗೆಯ ಮೇಲೆ ಕುಳಿತಿದ್ದೆ – ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮತ್ತೆ ಸಾಕ್ಷಿ ಮಲಿಕ್‌ ಆರೋಪ

    ಮಿಂಚಿದ ಮಿಚೆಲ್
    ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ವಿರುದ್ಧ 19.3 ಓವರ್‌ಗಳಲ್ಲಿ 53 ರನ್ ಬಿಟ್ಟುಕೊಟ್ಟು 7 ವಿಕೆಟ್ ಕಬಳಿಸಿದ್ದ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ 2ನೇ ಇನ್ನಿಂಗ್ಸ್ನಲ್ಲೂ ಭಾರತದ ಬ್ಯಾಟರ್‌ಗಳ ಮೇಲೆ ಹಿಡಿತ ಸಾಧಿಸಿದರು. 29. ಓವರ್‌ಗಳಲ್ಲಿ 104 ರನ್ ಬಿಟ್ಟುಕೊಟ್ಟು 6 ವಿಕೆಟ್ ಪಡೆದು ಮಿಂಚಿದರು. ಇದರೊಂದಿಗೆ ಅಜಾಝ್ ಪಟೇಲ್ 2 ವಿಕೆಟ್, ಗ್ಲೆನ್ ಫಿಲಿಪ್ಸ್ 1 ವಿಕೆಟ್ ಪಡೆದರು.

    2ನೇ ಇನ್ನಿಂಗ್ಸ್‌ನಲ್ಲಿ ಕಿವೀಸ್ ಸವಾಲಿನ ಮೊತ್ತ:
    ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆರಂಭಿಕ ಸಂಕಷ್ಟದ ಹೊರತಾಗಿಯೂ ಕಿವೀಸ್ 255 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ನಾಯಕ ಲಾಥಮ್ 86 ರನ್ (133 ಎಸೆತ, 10 ಬೌಂಡರಿ) ಗಳಿಸಿದ್ರೆ, ವಿಲ್ ಯಂಗ್ 23 ರನ್, ಡೆವೋನ್ ಕಾನ್ವೆ 17 ರನ್, ಡೇರಿಲ್ ಮಿಚೆಲ್ 18 ರನ್ ಹಾಗೂ ರಚಿನ್ ರವೀಂದ್ರ 9 ರನ್, ಟಾಮ್ ಬ್ಲಂಡೆಲ್ 41 ರನ್, ಗ್ಲೆನ್ ಫಿಲಿಪ್ಸ್ 48 ರನ್‌ಗಳ ಕೊಡುಗೆ ನೀಡಿದರು.

    ಸುಂದರ್ ಸೂಪರ್:
    ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಕಬಳಿಸಿ ಟೀಂ ಇಂಡಿಯಾಕ್ಕೆ ಆಧಾರವಾಗಿದ್ದ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ 2ನೇ ಇನ್ನಿಂಗ್ಸ್‌ನಲ್ಲೂ ತಮ್ಮ ಬೌಲಿಂಗ್ ದಾಳಿಯಲ್ಲಿ ಹಿಡಿತ ಸಾಧಿಸಿದರು. 19. ಓವರ್‌ಗಳಲ್ಲಿ 56 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು, ಒದರೊಂದಿಗೆ ರವೀಂದ್ರ ಜಡೇಜಾ 3 ವಿಕೆಟ್ ಹಾಗೂ ಅಶ್ವಿನ್ 1 ವಿಕೆಟ್ ಪಡೆದರು. ಇದನ್ನೂ ಓದಿ: IPLನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡದ ಕ್ಯಾಪ್ಟನ್ ಆಗ್ತಾರಾ ರಿಷಬ್ ಪಂತ್?

    ಮೊದಲ ಇನ್ನಿಂಗ್ಸ್‌ನಲ್ಲೂ ಭಾರತ ಕಳಪೆ ಬ್ಯಾಟಿಂಗ್:
    ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ದಾಳಿಗೆ ತತ್ತರಿಸಿದ ಭಾರತದ ಬ್ಯಾರ್ಟ್ಗಳು ರನ್ ಕದಿಯಲು ತಿಣುಕಾಡಿದರು. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ತಲಾ 30 ರನ್ ಗಳಿಸಿದ್ರೆ ರವೀಂದ್ರ ಜಡೇಜಾ 38 ರನ್ ಗಳಿಸಿದ್ರು. ಇನ್ನುಳಿದಂತೆ ರಿಷಭ್ ಪಂತ್ 18 ರನ್, ಸರ್ಫರಾಜ್ ಖಾನ್ 11 ರನ್, ರವಿಚಂದ್ರನ್ ಅಶ್ವಿನ್ 4 ರನ್, ಆಕಾಶ್ ದೀಪ್ 6 ರನ್ ಗಳಿಸಿದ್ರೆ, ವಾಷಿಂಗ್ಟನ್ ಸುಂದರ್ 18 ರನ್ ಗಳಿಸಿ ಅಜೇಯರಾಗುಳಿದರು. ನಾಯಕ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಶೂನ್ಯ ಸುತ್ತಿದರು.

  • ಒಂದೇ ದಿನ 14 ವಿಕೆಟ್‌ ಉಡೀಸ್‌ – ಭಾರತದ ವಿರುದ್ಧ ಕಿವೀಸ್‌ಗೆ 301 ರನ್‌ಗಳ ಭರ್ಜರಿ ಮುನ್ನಡೆ

    ಒಂದೇ ದಿನ 14 ವಿಕೆಟ್‌ ಉಡೀಸ್‌ – ಭಾರತದ ವಿರುದ್ಧ ಕಿವೀಸ್‌ಗೆ 301 ರನ್‌ಗಳ ಭರ್ಜರಿ ಮುನ್ನಡೆ

    – ಮಿಚೆಲ್‌ ಸ್ಯಾಂಟ್ನರ್‌, ಸುಂದರ್‌ ಸೂಪರ್‌

    ಪುಣೆ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ (Newzealand) ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಸ್ಪಿನ್ನರ್‌ಗಳ ಆರ್ಭಟವೇ ಮುಂದುವರಿದಿದ್ದು, ಉಭಯ ತಂಡಗಳ ಒಟ್ಟು 14 ವಿಕೆಟ್‌ ಪತನಗೊಂಡಿದೆ. ಭಾರತದ (Team India) ವಿರುದ್ಧ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್‌ ತಂಡ 2ನೇ ದಿನದ ಅಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 198 ರನ್‌ ಗಳಿಸಿದ್ದು, 301 ರನ್‌ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

    243 ರನ್‌ಗಳ ಹಿನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ ಟೀಂ ಇಂಡಿಯಾ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಕೇವಲ 156 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ ಇನ್ನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ಹೊರತಾಗಿಯೂ ನಾಯಕ ಟಾಮ್‌ ಲಾಥಮ್‌ (Tom Latham) ಅವರ ಅಮೋಘ ಅರ್ಧಶತಕದೊಂದಿಗೆ 200 ರನ್‌ಗಳ ಗಡಿ ಸಮೀಪಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಲಕ್ನೋ ತಂಡದಿಂದ ಕೆ.ಎಲ್ ರಾಹುಲ್ ರಿಲೀಸ್ – ಆರ್‌ಸಿಬಿ ಸೇರ್ತಾರಾ ಕನ್ನಡಿಗ?

    ದ್ವಿತೀಯ ಇನ್ನಿಂಗ್ಸ್‌ನಲ್ಲಿ ಲಾಥಮ್‌ 86 ರನ್‌ (133 ಎಸೆತ, 10 ಬೌಂಡರಿ) ಗಳಿಸಿದ್ರೆ, ವಿಲ್‌ ಯಂಗ್‌ 23 ರನ್‌, ಡೆವೋನ್‌ ಕಾನ್ವೆ 17 ರನ್‌, ಡೇರಿಲ್‌ ಮಿಚೆಲ್‌ 18 ರನ್‌ ಹಾಗೂ ರಚಿನ್‌ ರವೀಂದ್ರ 9 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಇನ್ನೂ ಟಾಮ್‌ ಬ್ಲಂಡೆಲ್‌ 30 ರನ್‌ (70 ಎಸೆತ, 2 ಬೌಂಡರಿ), ಗ್ಲೆನ್‌ ಫಿಲಿಪ್ಸ್‌ 9 ರನ್‌ ಗಳಿಸಿ ಅಜೇಯರಾಗುಳಿದಿದ್ದಾರೆ. ಶನಿವಾರ 3ನೇ ದಿನದಾಟ ಆರಂಭಿಸಲಿದ್ದಾರೆ.

    ಸೂಪರ್‌ ʻಸುಂದರ್‌ʼ:
    ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ಕಬಳಿಸಿ ಟೀಂ ಇಂಡಿಯಾಕ್ಕೆ ಆಧಾರವಾಗಿದ್ದ ಆಫ್‌ ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ (Washington Sundar) 2ನೇ ದಿನದಾಟದಲ್ಲೂ 4 ವಿಕೆಟ್‌ ಪಡೆಯುವ ಮೂಲಕ ಭರ್ಜರಿ ಕಮಾಲ್‌ ಮಾಡಿದ್ದಾರೆ. ಇದರೊಂದಿಗೆ ಸಾಥ್‌ ನೀಡಿರುವ ರವಿಚಂದ್ರನ್‌ ಅಶ್ವಿನ್‌ 1 ವಿಕೆಟ್‌ ಪಡೆದಿದ್ದಾರೆ. ಇದನ್ನೂ ಓದಿ: IPLನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡದ ಕ್ಯಾಪ್ಟನ್ ಆಗ್ತಾರಾ ರಿಷಬ್ ಪಂತ್?

    ಫ್ಲಾಪ್‌ ಆದ ಬ್ಯಾಟರ್ಸ್‌:
    ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್‌ ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ ದಾಳಿಗೆ ತತ್ತರಿಸಿದ ಭಾರತದ ಬ್ಯಾರ್ಟ್‌ಗಳು ರನ್‌ ಕದಿಯಲು ತಿಣುಕಾಡಿದರು. ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ತಲಾ 30 ರನ್‌ ಗಳಿಸಿದ್ರೆ ರವೀಂದ್ರ ಜಡೇಜಾ 38 ರನ್‌ ಗಳಿಸಿದ್ರು. ಇನ್ನುಳಿದಂತೆ ರಿಷಭ್‌ ಪಂತ್‌ 18 ರನ್‌, ಸರ್ಫರಾಜ್‌ ಖಾನ್‌ 11 ರನ್‌, ರವಿಚಂದ್ರನ್‌ ಅಶ್ವಿನ್‌ 4 ರನ್‌, ಆಕಾಶ್‌ ದೀಪ್‌ 6 ರನ್‌ ಗಳಿಸಿದ್ರೆ, ವಾಷಿಂಗ್ಟನ್‌ ಸುಂದರ್‌ 18 ರನ್‌ ಗಳಿಸಿ ಅಜೇಯರಾಗುಳಿದರು. ನಾಯಕ ರೋಹಿತ್‌ ಶರ್ಮಾ, ಜಸ್ಪ್ರೀತ್‌ ಬುಮ್ರಾ ಶೂನ್ಯ ಸುತ್ತಿದರು.

    ಸ್ಯಾಂಟ್ನರ್‌ ಸ್ಪಿನ್‌ ಮಿಂಚು:
    ಕಿವೀಸ್‌ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಮಿಚೆಲ್‌ ಸ್ಯಾಂಟ್ನರ್‌ 19.3 ಓವರ್‌ಗಳಲ್ಲಿ 53 ರನ್‌ ಬಿಟ್ಟುಕೊಟ್ಟು 7 ವಿಕೆಟ್‌ ಕಿತ್ತರೆ, ಗ್ಲೆನ್‌ ಫಿಲಿಪ್ಸ್‌ 2 ವಿಕೆಟ್‌ ಹಾಗೂ ಟಿಮ್‌ ಸೌಥಿ 1 ವಿಕೆಟ್‌ ಕಿತ್ತರು. ಇದನ್ನೂ ಓದಿ: ಮೊದಲ ದಿನ ಸ್ಪಿನ್ನರ್‌ಗಳ ಆಟ – ವಾಷಿಂಗ್ಟನ್‌, ಅಶ್ವಿನ್‌ ಶೈನ್‌; ಕಿವೀಸ್‌ 259ಕ್ಕೆ ಆಲೌಟ್‌

  • ಮೊದಲ ದಿನ ಸ್ಪಿನ್ನರ್‌ಗಳ ಆಟ – ವಾಷಿಂಗ್ಟನ್‌, ಅಶ್ವಿನ್‌ ಶೈನ್‌; ಕಿವೀಸ್‌ 259ಕ್ಕೆ ಆಲೌಟ್‌

    ಮೊದಲ ದಿನ ಸ್ಪಿನ್ನರ್‌ಗಳ ಆಟ – ವಾಷಿಂಗ್ಟನ್‌, ಅಶ್ವಿನ್‌ ಶೈನ್‌; ಕಿವೀಸ್‌ 259ಕ್ಕೆ ಆಲೌಟ್‌

    ಪುಣೆ:‌ ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಭಾರತೀಯ ಸ್ಪಿನ್ನರ್‌ಗಳಾದ ವಾಷಿಂಗ್ಟನ್‌ ಸುಂದರ್‌ (Washington Sundar) ಹಾಗೂ ರವಿಚಂದ್ರನ್‌ ಅಶ್ವಿನ್‌ ಭರ್ಜರಿ ಕಮಾಲ್‌ ಮಾಡಿದ್ದಾರೆ.

    45 ತಿಂಗಳ ಬಳಿಕ ಟೆಸ್ಟ್‌ ಕ್ರಿಕೆಟ್‌ ಅಖಾಡಕ್ಕಿಳಿದ ವಾಷಿಂಗ್ಟನ್‌ ಸುಂದರ್‌ 23.1 ಓವರ್‌ಗಳಲ್ಲಿ 59 ರನ್‌ ಬಿಟ್ಟುಕೊಟ್ಟು ಪ್ರಮುಖ 7 ವಿಕೆಟ್‌ ಕಬಳಿಸುವ ಮೂಲಕ ಕಿವೀಸ್‌ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಸಹಕಾರಿಯಾಗಿದ್ದಾರೆ. ಇದರೊಂದಿಗೆ ಸ್ಪಿನ್‌ ಮಾಂತ್ರಿಕ ಆರ್‌. ಅಶ್ವಿನ್‌ (Ravichandran Ashwin) 3 ವಿಕೆಟ್‌ ಪಡೆದು, ಮೊದಲ ದಿನದಾಟದಲ್ಲಿ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸಿದ್ದಾರೆ.

    ಭಾರತದ (Team India) ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯದಲ್ಲಿ ಮೊದಲ ದಿನವೇ ಕಿವೀಸ್‌ (Newzealand) 79.1 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟ್‌ ಆಗಿದೆ. ಬಳಿಕ ತನ್ನ ಸರದಿಯ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ 11 ಓವರ್‌ಗಳಲ್ಲಿ 16 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿದೆ. ಈ ಮೂಲಕ 243 ರನ್‌ ಹಿನ್ನಡೆಯಲ್ಲಿದೆ. ರೋಹಿತ್‌ ಶರ್ಮಾ (Rohit Sharma) ಡಕೌಟ್‌ ಆಗಿ ಪೆವಿಲಿಯನ್‌ಗೆ ಮರಳಿದ್ದಾರೆ. ಇನ್ನೂ ಯಶಸ್ವಿ ಜೈಸ್ವಾಲ್‌ (6 ರನ್‌), ಶುಭಮನ್‌ ಗಿಲ್‌ (10 ರನ್‌) ಗಳಿಸಿ ಕ್ರೀಸ್‌ನಲ್ಲಿದ್ದು, ಶುಕ್ರವಾರ 2ನೇ ದಿನದ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ.

    ಸ್ಪಿನ್ನರ್‌ಗಳ ಆಟಕ್ಕೆ ನೆಲಕಚ್ಚಿದ ಕಿವೀಸ್‌:
    ಮೊದಲ ಟೆಸ್ಟ್‌ ಪಂದ್ಯದಲ್ಲಿ ಅಬ್ಬರಿಸಿದ್ದ ಕಿವೀಸ್‌ ಬ್ಯಾಟರ್‌ಗಳು 2ನೇ ಟೆಸ್ಟ್‌ ಪಂದ್ಯದಲ್ಲಿ ನೆಲ ಕಚ್ಚಿದರು. ಡಿವೋನ್‌ ಕಾನ್ವೆ, ರಚಿನ್‌ ರವೀಂದ್ರ, ಮಿಚೆಲ್‌ ಸ್ಯಾಂಟ್ನರ್‌ ಹೊರತುಪಡಿಸಿದ್ರೆ, ಉಳಿದ ಅಗ್ರ ಕ್ರಮಾಂಕದ ಬ್ಯಾರಟ್‌ಗಳು ಅಲ್ಪಮೊತ್ತಕ್ಕೆ ಪೆವಿಲಿಯನ್‌ಗೆ ಮರಳಿದರು.

    ಕಿವೀಸ್‌ ಪರ ಡಿವೋನ್‌ ಕಾನ್ವೆ 76 ರನ್‌ (141 ಎಸೆತ, 11 ಬೌಂಡರಿ), ರಚಿನ್‌ ರವೀಂದ್ರ 65 ರನ್‌ (105 ಎಸೆತ, 5 ಬೌಂಡರಿ, 1 ಸಿಕ್ಸರ್)‌ ಗಳಿಸಿದ್ರೆ, ಮಿಚೆಲ್‌ ಸ್ಯಾಂಟ್ನರ್‌ 33 ರನ್‌, ಟಾಮ್‌ ಲಾಥಮ್‌ 15 ರನ್‌, ವಿಲ್‌ ಯಂಗ್‌, ಡೇರಿಲ್‌ ಮಿಚೆಲ್‌ ತಲಾ 18 ರನ್‌, ಟಾಮ್‌ ಬ್ಲಂಡೆಲ್‌ 3 ರನ್‌, ಗ್ಲೆನ್‌ ಫಿಲಿಪ್ಸ್‌ 9 ರನ್‌, ಟಿಮ್‌ ಸೌಥಿ 5 ರನ್‌ ಆಜಾಝ್‌ ಪಟೇಲ್‌ 4 ರನ್‌ ಗಳಿಸಿ ಔಟಾದರು. ವಿಲಿಯಂ ಒ ರೂರ್ಕಿ ಒಂದು ಎಸೆತವನ್ನೂ ಎದುರಿಸದೇ ಅಜೇಯರಾಗುಳಿದರು.

  • ICC Test Ranking | ಅಶ್ವಿನ್‌ ಹಿಂದಿಕ್ಕಿ ನಂ.1 ಪಟ್ಟಕ್ಕೇರಿದ ಬುಮ್ರಾ – ಬ್ಯಾಟಿಂಗ್‌ನಲ್ಲಿ ಯಶಸ್ವಿ, ಕೊಹ್ಲಿ ಶೈನ್‌

    ICC Test Ranking | ಅಶ್ವಿನ್‌ ಹಿಂದಿಕ್ಕಿ ನಂ.1 ಪಟ್ಟಕ್ಕೇರಿದ ಬುಮ್ರಾ – ಬ್ಯಾಟಿಂಗ್‌ನಲ್ಲಿ ಯಶಸ್ವಿ, ಕೊಹ್ಲಿ ಶೈನ್‌

    ಮುಂಬೈ: ಇತ್ತೀಚೆಗೆ ಬಾಂಗ್ಲಾದೇಶ ತಂಡದ ವಿರುದ್ಧ ನಡೆದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ (Team India) ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿತು. ಈ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದ ಟೀಂ ಇಂಡಿಯಾ ಆಟಗಾರರು ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ (ICC Test Rankings) ಅದ್ಭುತ ಸಾಧನೆ ಮಾಡಿದ್ದಾರೆ.

    ಬಾಂಗ್ಲಾದೇಶದ ವಿರುದ್ಧ ನಡೆದ ಟೆಸ್ಟ್‌ ಪಂದ್ಯಗಳಲ್ಲಿ 11 ವಿಕೆಟ್‌ ಪಡೆದ ಟೀಂ ಇಂಡಿಯಾ ಸ್ಟಾರ್‌ ವೇಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) ಮತ್ತೊಮ್ಮೆ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೆ ಜಿಗಿದಿದ್ದಾರೆ. 870 ರೇಟಿಂಗ್ಸ್‌ನೊಂದಿಗೆ ನಂ.1 ಸ್ಥಾನದಲ್ಲಿದ್ದ ಭಾರತದ ಅಶ್ವಿನ್‌ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. 1 ಸ್ಥಾನ ಕುಸಿತ ಕಂಡಿರುವ ಅಶ್ವಿನ್‌ (Ravichandran Ashwin) 847 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇನ್ನೂ ರವಿಂದ್ರ ಜಡೇಜಾ 809 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆದ 2 ಟೆಸ್ಟ್‌ ಪಂದ್ಯದಲ್ಲಿ ಅಶ್ವಿನ್‌ 11 ವಿಕೆಟ್‌ ಪಡೆದಿದ್ದರು. ಇದನ್ನೂ ಓದಿ: IPL Mega Auction | ಹಿಟ್‌ಮ್ಯಾನ್ ರೋಹಿತ್‌ ಇನ್‌ – ಡುಪ್ಲೆಸಿ ಔಟ್‌ – ಆರ್‌ಸಿಬಿಗೆ ಆನೆ ಬಲ

    ಐಸಿಸಿ ಟೆಸ್ಟ್‌ ಬೌಲಿಂಗ್‌ ರ‍್ಯಾಂಕಿಂಗ್‌
    1. ಜಸ್ಪ್ರೀತ್‌ ಬುಮ್ರಾ – ಭಾರತ – 870 ಅಂಕ
    2. ಆರ್. ಅಶ್ವಿನ್‌ – ಭಾರತ -‌ 869 ಅಂಕ
    3. ಜೋಶ್‌ ಹೇಜಲ್ವುಡ್‌ – ಆಸ್ಟ್ರೇಲಿಯಾ – 847 ಅಂಕ
    4. ಪ್ಯಾಟ್‌ ಕಮ್ಮಿನ್ಸ್‌ – ಆಸ್ಟ್ರೇಲಿಯಾ 820 ಅಂಕ
    5. ಕಗಿಸೊ ರಬಾಡ – ದಕ್ಷಿಣ ಆಫ್ರಿಕಾ – 820 ಅಂಕ

    ರ‍್ಯಾಂಕಿಂಗ್‌ನಲ್ಲಿ ಯಶಸ್ವಿ:
    ಬಾಂಗ್ಲಾ ವಿರುದ್ಧದ ಟೆಸ್ಟ್‌ನಲ್ಲಿ ಬೌಲಿಂಗ್‌ನಲ್ಲಿ ಬುಮ್ರಾ, ಅಶ್ವಿನ್‌ ಕಮಾಲ್‌ ಮಾಡಿದರೆ, ಬ್ಯಾಟಿಂಗ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಫಿಫ್ಟಿ ಸಿಡಿಸಿ ಯಶಸ್ವಿ ಜೈಸ್ವಾಲ್‌ (Yashasvi Jaiswal) ಮಿಂಚಿದ್ದಾರೆ. 2 ಸ್ಥಾನ ಜಿಗಿತ ಕಂಡು ಐಸಿಸಿ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಸತತ 6 ಸ್ಥಾನಗಳಲ್ಲಿ ಏರಿಕೆ ಕಂಡಿರುವ ವಿರಾಟ್‌ ಕೊಹ್ಲಿ 6ನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಭಾರತ ಮತ್ತೊಂದು ಮೈಲುಗಲ್ಲು – ಅತಿ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ ಸಾಧನೆ

    ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ‍್ಯಾಂಕಿಂಗ್‌
    1. ಜೋ ರೂಟ್‌ – ಇಂಗ್ಲೆಂಡ್‌ – 899 ಅಂಕ
    2. ಕೇನ್‌ ವಿಲಿಯಮ್ಸನ್‌ – ನ್ಯೂಜಿಲೆಂಡ್‌ – 829 ಅಂಕ
    3. ಯಶಸ್ವಿ ಜೈಸ್ವಾಲ್‌ – ಭಾರತ – 792 ಅಂಕ
    4. ಸ್ಟೀವ್‌ ಸ್ಮಿತ್‌ – ಆಸ್ಟ್ರೇಲಿಯಾ – 757 ಅಂಕ
    5. ಉಸ್ಮಾನ್‌ ಖವಾಜ – ಆಸ್ಟ್ರೇಲಿಯಾ – 728 ಅಂಕ

  • ಭಾರತ-ಬಾಂಗ್ಲಾ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ – ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 107ಕ್ಕೆ 3 ವಿಕೆಟ್‌

    ಭಾರತ-ಬಾಂಗ್ಲಾ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ – ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 107ಕ್ಕೆ 3 ವಿಕೆಟ್‌

    – ದಿಗ್ಗಜ ಅನಿಲ್‌ ಕುಂಬ್ಳೆ ದಾಖಲೆ ಮುರಿದ ಅಶ್ವಿನ್‌

    ಕಾನ್ಪುರ: ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ (Ind vs Ban) ತಂಡಗಳು ಕಾದಾಟ ನಡೆಸುತ್ತಿವೆ. ಮಳೆಯ ಕಾಟದಿಂದಾಗಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ 2ನೇ ಟೆಸ್ಟ್‌ ಪಂದ್ಯದ (Test Cricket Match) ಮೊದಲ ದಿನ ಕೇವಲ 35 ಓವರ್‌ಗಳಿಗೆ ಮುಕ್ತಾಯಗೊಂಡಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ ಮೊದಲ ದಿನದ ಅಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 107 ರನ್‌ ಗಳಿಸಿದೆ.

    ಕಾನ್ಪುರದ (Kanpur) ಗ್ರೀನ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್‌ ಪಂದ್ಯಕ್ಕೆ ಮಳೆಯ ಕಾಟದಿಂದಾಗಿ ಟಾಸ್‌ ತಡವಾಯಿತು. ಜೊತೆಗೆ ಮೊದಲ ದಿನದಾಟವನ್ನು ಕೇವಲ 35 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾ ತಂಡ 26 ರನ್‌ಳಿಗೆ ಮೊದಲ ವಿಕೆಟ್‌ ಪಡೆದರೂ ಬಳಿಕ ಮೊಮಿನುಲ್ ಹಕ್, ನಾಯಕ ನಜ್ಮುಲ್‌ ಹೊಸೈನ್‌ ಸ್ಯಾಂಟೋ (Najmul Hossain Shanto) ಅವರ ಸಾಧಾರಣ ಬ್ಯಾಟಿಂಗ್‌ ಪ್ರದರ್ಶನದಿಂದ 100 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ವೆಸ್ಟ್ ಇಂಡೀಸ್ ಆಲ್‌ರೌಂಡರ್‌ ಡ್ವೇನ್ ಬ್ರಾವೋ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ

    ಶಾದ್ಮಾನ್‌ ಇಸ್ಲಾಂ 24 ರನ್‌ ಗಳಿಸಿದ್ರೆ, ಸ್ಯಾಂಟೋ 31 ರನ್‌ ಗಳಿಸಿ ಔಟಾದರು. ಮತ್ತೊಬ್ಬ ಆರಂಭಿಕ ಝಾಕಿರ್‌ ಹಸನ್‌ ಶೂನ್ಯ ಸುತ್ತಿದರು. ಇನ್ನೂ 81 ಎಸೆತಗಳಲ್ಲಿ 40 ರನ್‌ ಗಳಿಸಿರುವ ಮೊಮಿನುಲ್ ಹಕ್ ಮತ್ತು ಮುಶ್ಫಿಕರ್ ರಹೀಮ್ 6 ರನ್‌ ಗಳಿಸಿದ್ದು, ಕ್ರೀಸ್‌ನಲ್ಲಿದ್ದಾರೆ. ಶನಿವಾರ 2ನೇ ದಿನದಾಟ ಮುಂದುವರಿಸಲಿದ್ದಾರೆ.

    ಮೊದಲ ಟೆಸ್ಟ್‌ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಪಡೆದು ದಿಗ್ಗಜರ ಎಲೈಟ್‌ ಪಟ್ಟಿ ಸೇರಿದ್ದ ಆರ್‌. ಅಶ್ವಿನ್‌ 2ನೇ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ವಿಕೆಟ್‌ ಪಡೆದರೆ, ವೇಗಿ ಆಕಾಶ್‌ ದೀಪ್‌ 2 ವಿಕೆಟ್‌ ಪಡೆದು ಮಿಂಚಿದ್ದಾರೆ. ಇದನ್ನೂ ಓದಿ: IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ?

    ದಿಗ್ಗಜ ಅನಿಲ್‌ ಕುಂಬ್ಳೆ ದಾಖಲೆ ಮುರಿದ ಅಶ್ವಿನ್‌:
    ಬಾಂಗ್ಲಾ ನಾಯಕ ನಜ್ಮುಲ್‌ ಹುಸೇನ್‌ ಸ್ಯಾಂಟೋ ಅವರ ವಿಕೆಟ್‌ ಔಟ್‌ ಮಾಡಿದ ಭಾರತದ ರವಿಚಂದ್ರನ್‌ ಅಶ್ವಿನ್‌ (Ravichandran Ashwin) ಅವರು ಏಷ್ಯಾದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸ್ಪಿನ್‌ ದಿಗ್ಗಜ ಅನಿಲ್‌ ಕಂಬ್ಳೆಯನ್ನು ಹಿಂದಿಕ್ಕಿದ್ದಾರೆ. ಆರ್‌ ಅಶ್ವಿನ್‌ ಎಸೆದ 29ನೇ ಓವರ್‌ನ ಕೊನೆಯ ಎಸೆತವನ್ನು ಅರಿಯುವಲ್ಲಿ ವಿಫಲರಾದ ಸ್ಯಾಂಟೋ ಚೆಂಡನ್ನು ಪ್ಯಾಡ್‌ ಮೇಲೆ ತಾಗಿಸಿಕೊಂಡರು. ಆ ಮೂಲಕ ಎಲ್‌ಬಿಡಬ್ಲ್ಯು ಔಟ್‌ಗೆ ತುತ್ತಾದರು. ಇದರೊಂದಿಗೆ ಅಶ್ವಿನ್‌ ಅವರು ಏಷ್ಯಾ ನೆಲದಲ್ಲಿ 420 ಟೆಸ್ಟ್‌ ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ 419 ವಿಕೆಟ್‌ಗಳನ್ನು ಕಬಳಿಸಿದ್ದ ಸ್ಪಿನ್ ದಿಗ್ಗಜ ಅನಿಲ್‌ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ.

  • ಸ್ಪಿನ್‌ ಮಾಂತ್ರಿಕ ಅಶ್ವಿನ್‌ ಆಲ್‌ರೌಂಡ್‌ ಆಟ – ಭಾರತಕ್ಕೆ 280 ರನ್‌ಗಳ ಭರ್ಜರಿ ಜಯ; 1-0 ಸರಣಿ ಮುನ್ನಡೆ

    ಸ್ಪಿನ್‌ ಮಾಂತ್ರಿಕ ಅಶ್ವಿನ್‌ ಆಲ್‌ರೌಂಡ್‌ ಆಟ – ಭಾರತಕ್ಕೆ 280 ರನ್‌ಗಳ ಭರ್ಜರಿ ಜಯ; 1-0 ಸರಣಿ ಮುನ್ನಡೆ

    ಚೆನ್ನೈ: ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ (Ravichandran Ashwin) ಅವರ ಆಲ್‌ರೌಂಡರ್‌ ಪ್ರದರ್ಶನದಿಂದಾಗಿ ಭಾರತ ಕ್ರಿಕೆಟ್‌ ತಂಡವು ಬಾಂಗ್ಲಾದೇಶ (Bangladesh) ತಂಡದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ 280 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ದಿನದಾಟದಲ್ಲಿ ಕಠಿಣ ಗುರಿ ಬೆನ್ನಟ್ಟಿದ ಬಾಂಗ್ಲಾ ಭಾರತದ ಸ್ಪಿನ್‌ ಮಾಂತ್ರಿಕರ ದಾಳಿಗೆ ಮಕಾಡೆ ಮಲಗಿದರು. 158 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡ 357 ರನ್‌ಗಳ ಹಿನ್ನಡೆಯೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿತು. 200 ರನ್‌ ದಾಟುತ್ತಿದ್ದಂತೆ ಪೆವಿಲಿಯನ್‌ ಪರೇಡ್‌ ನಡೆಸಿತು. ಪರಿಣಾಮ 234 ರನ್‌ಗಳಿಗೆ ಬಾಂಗ್ಲಾ ಸರ್ವಪತನ ಕಂಡಿತು.

    ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಬಾಂಗ್ಲಾ ಪರ 5ನೇ ವಿಕೆಟ್‌ಗೆ ಶಕೀಬ್‌ ಮತ್ತು ನಾಯಕ ನಜ್ಮುಲ್‌ ಹೊಸೈನ್‌ ಸ್ಯಾಂಟೋ (Najmul Hossain Shanto) ತಾಳ್ಮೆಯ ಇನ್ನಿಂಗ್ಸ್‌ ಕಟ್ಟಿದ್ದರು. 108 ಎಸೆತಗಳಲ್ಲಿ ಈ ಜೋಡಿ 48 ರನ್‌ ಗಳಿಸಿತ್ತು. ಶಕೀಬ್‌ (Shakib Al Hasan) ಔಟಾಗುತ್ತಿದ್ದಂತೆ ಬಾಂಗ್ಲಾ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸಲು ಶುರು ಮಾಡಿದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ಪರ‌ ಸ್ಯಾಂಟೋ 82 ರನ್‌, ಜಾಕಿರ್‌ ಹಸನ್‌ 33 ರನ್‌, ಶದಾಮನ್‌ ಇಸ್ಲಾಮ್‌ 35 ರನ್‌, ಮಮಿನ್ಮುಲ್‌ ಹಾಕಿ ಹಾಗೂ ರಹೀಂ ತಲಾ 13 ರನ್‌ ಗಳಿಸಿದ್ರೆ, ಶಕೀಬ್‌ 25 ರನ್‌ ಗಳಿಸಿದರು. ಉಳಿದ ಆಟಗಾರರು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರದ ಕಾರಣ, ಭಾರತದ ಎದುರು ಮಂಡಿಯೂರಬೇಕಾಯಿತು.

    ಭಾರತ 287ಕ್ಕೆ ಡಿಕ್ಲೆರ್:
    ಇದರ ನಡುವೆ ಭಾರತ ತಂಡ 287/4 ಸ್ಕೋರ್‌ಗೆ ಎರಡನೇ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ 227 ರನ್‌ಗಳ ಮುನ್ನಡೆ ಸೇರಿದಂತೆ ಬಾಂಗ್ಲಾದೇಶಕ್ಕೆ ಭಾರತ, 515 ರನ್‌ಗಳ ಬೃಹತ್ ಗುರಿಯನ್ನು ನೀಡಿದೆ. ಪಂತ್ ಜೊತೆಗೆ ಶುಭಮನ್ ಗಿಲ್ (ಔಟಾಗದೆ 119; 176 ಎಸೆತ, 10 ಬೌಂಡರಿ, 4 ಸಿಕ್ಸರ್) ಕೂಡ ಶತಕ ಗಳಿಸಿದರು. ಕೆಎಲ್ ರಾಹುಲ್ (ಔಟಾಗದೆ 22; 19 ಎಸೆತ, 4 ಬೌಂಡರಿ) ಅಜೇಯರಾಗಿ ಉಳಿದರು.

    ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 376 ರನ್:
    ಬಾಂಗ್ಲಾದೇಶ ಬೌಲರ್‌ಗಳಲ್ಲಿ ಮೆಹದಿ ಹಸನ್ ಮಿರಾಜ್ ತಲಾ ಎರಡು, ಟಾಸ್ಕಿನ್ ಅಹ್ಮದ್ ಮತ್ತು ನಹಿದ್ ತಲಾ ಒಂದೊಂದು ವಿಕೆಟ್ ಪಡೆದರು. ಇದರ ನಡುವೆ ಭಾರತ ಮೊದಲ ಇನಿಂಗ್ಸ್ನಲ್ಲಿ 376 ರನ್‌ಗಳ ಬೃಹತ್ ಸ್ಕೋರ್ ಮಾಡಿತು. ರವಿಚಂದ್ರನ್ ಅಶ್ವಿನ್ (113) ಮತ್ತು ರವೀಂದ್ರ ಜಡೇಜಾ (86) ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಹಸನ್ ಮಹ್ಮೂದ್ (5/83) ಐದು ವಿಕೆಟ್ ಪಡೆದಿದ್ದರು.

    ಬಾಂಗ್ಲಾ 149ಕ್ಕೆ ಆಲ್‌ಔಟ್
    ಜಸ್‌ಪ್ರೀತ್ ಬುಮ್ರಾ (4/50), ಆಕಾಶ ದೀಪ್ (2/19), ರವೀಂದ್ರ ಜಡೇಜಾ (2/19) ಮತ್ತು ಮೊಹಮ್ಮದ್ ಸಿರಾಜ್ (2/30) ನೆರವಿನಿಂದ ಭಾರತ ತಂಡ, ಪ್ರಥಮ ಇನಿಂಗ್ಸ್ನಲ್ಲಿ ಬಾಂಗ್ಲಾದೇಶ ತಂಡವನ್ನು 149 ರನ್‌ಗಳಿಗೆ ಆಲ್‌ಔಟ್ ಮಾಡಿತ್ತು. ಶಕಿಬ್ ಅಲ್ ಹಸನ್ (32) ಗರಿಷ್ಠ ಸ್ಕೋರರ್ ಆಗಿದ್ದರು.

  • IPL 2025 | ಐಪಿಎಲ್‌ ಅಖಾಡದಲ್ಲಿ ʻಇಂಪ್ಯಾಕ್ಟ್‌ʼ ವಾರ್‌, ಪರ-ವಿರೋಧ ಚರ್ಚೆ; ಏನಿದು ನಿಯಮ?

    IPL 2025 | ಐಪಿಎಲ್‌ ಅಖಾಡದಲ್ಲಿ ʻಇಂಪ್ಯಾಕ್ಟ್‌ʼ ವಾರ್‌, ಪರ-ವಿರೋಧ ಚರ್ಚೆ; ಏನಿದು ನಿಯಮ?

    ಮುಂಬೈ: ಐಪಿಎಲ್‌ ಟೂರ್ನಿಯಲ್ಲಿ ಬಳಕೆಯಾಗುತ್ತಿರುವ ಇಂಪ್ಯಾಕ್ಟ್‌ ಪ್ಲೇಯರ್‌ ನಿಮಯ (Impact Player Rule) ಮತ್ತೆ ಬಿಸಿಬಿಸಿ ಚರ್ಚೆಯಲ್ಲಿದೆ.

    2024ರ ಐಪಿಎಲ್‌ ಟೂರ್ನಿ ಬಳಿಕ ರೋಹಿತ್‌ ಶರ್ಮಾ (Rohit Sharma) ಸೇರಿದಂತೆ ಅನೇಕರು ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ಬಗ್ಗೆ ಆಕ್ಷೇಪ ಹೊರಹಾಕಿದ್ದರು. ಮುಂದಿನ ಐಪಿಎಲ್‌ನಲ್ಲಿ ಇಂಪ್ಯಾಕ್ಟ್‌ ನಿಯಮ ಕೈಬಿಡುವಂತೆ ಒತ್ತಾಯಗಳೂ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಧ್ಯಕ್ಷ ಅರುಣ್ ಧುಮಾಲ್, ರೋಹಿತ್‌ ಶರ್ಮಾ ಈ ಹಿಂದೆಯೂ ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ನ್ಯೂನತೆ ತೋರಿಸಿದ್ದಾರೆ. ಪ್ರತಿಯೊಂದು ನಿಯಮಕ್ಕೂ ಅದರದ್ದೇ ಆದ ಸಾಧಕ ಬಾಧಕಗಳಿವೆ. ಪ್ರಸ್ತುತ ಐಪಿಎಲ್‌ ಸೀಸನ್‌ ಮುಗಿದ ಬಳಿಕ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಈ ನಿಯಮದ ಕುರಿತು ಪರಿಶೀಲಿಸಲಿದೆ ಎಂದು ಹೇಳಿದ್ದರು.

    ಈ ನಡುವೆ ಟೀಂ ಇಂಡಿಯಾದ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ (Ravichandran Ashwin), ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮದ ಬಗ್ಗೆ ಬ್ಯಾಟ್‌ ಬೀಸಿದ್ದಾರೆ. ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮವು ತುಂಬಾ ಕೆಟ್ಟದ್ದಲ್ಲ ಅಂತ ನಾನು ಭಾವಿಸುತ್ತೇನೆ. ಈ ನಿಯಮದಿಂದ ಆಲ್‌ರೌಂಡರ್‌ಗಳನ್ನ ನಿರುತ್ಸಾಹಗೊಳಿಸುವುದಿಲ್ಲ. ಹೊಸ ತನಕ್ಕೆ ಅವಕಾಶ ನೀಡುವ ಜೊತೆಗೆ, ಆಟವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ ಅಂತ ಹೇಳಿದ್ದಾರೆ. ಅದಕ್ಕೆ ಉದಾಹರಣೆಯನ್ನೂ ನೀಡಿದ್ದಾರೆ.

    2024ರ ಕ್ವಾಲಿಫೈಯರ್‌-2ರಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡವನ್ನು ಎದುರಿಸಿತ್ತು. ಪ್ಯಾಟ್‌ ಕಮ್ಮಿನ್ಸ್‌ ನಾಯಕತ್ವದ ಸನ್‌ ರೈಸರ್ಸ್‌ (Sunrisers Hyderabad) ತಂಡವು 9 ವಿಕೆಟ್‌ಗೆ 175 ರನ್‌ ಗಳಿಸಿತ್ತು. ರಾಜಸ್ಥಾನ್‌ ತಂಡ 36 ರನ್‌ಗಳಿಂದ ಸೋಲು ಕಂಡಿತು. ಈ ಪಂದ್ಯದಲ್ಲಿ ಶಹಬಾಜ್‌ ಅಹ್ಮದ್‌ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿದಿದ್ದರು. ಬ್ಯಾಟಿಂಗ್‌ನಲ್ಲಿ 18 ರನ್‌ ಗಳಿಸಿ ಬೌಲಿಂಗ್‌ನಲ್ಲಿ 3 ಪ್ರಮುಖ ವಿಕೆಟ್‌ ಕಿತ್ತು, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಈ ನಿಯಮ ಇರುವುದರಿಂದಲೇ ಬಹಳ ಆಟಗಾರರು ತಮ್ಮ ಪ್ರತಿಭೆ ತೋರಿಸಲು ಸಾಧ್ಯವಾಗಿದೆ. ಮುಖ್ಯವಾಗಿ ಇಂಪ್ಯಾಕ್ಟ್‌ ನಿಯಮ ಇಲ್ಲದೇ ಇದ್ದಿದ್ದರೇ, ಧ್ರುವ್‌ ಜುರೆಲ್‌, ಶಿವಂ ದುಬೆ, ಶಬಹಾಜ್‌ ಅಹ್ಮದ್‌ ಅಂತಹ ಆಟಗಾರರು ಎಂದಿಗೂ ಅವಕಾಶ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಶ್ವಿನ್‌ ಹೇಳಿದ್ದಾರೆ.

    ಅಲ್ಲದೇ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಅಭಿಷೇಕ್‌ ಪೋರೆಲ್‌ ಇಂಪ್ಯಾಕ್ಟ್‌ ಆಟಗಾರನಾದಮೇಲೆ ಆರಂಭಿಕನಾಗಿ ಕಣಕ್ಕಿಳಿದು ಅಬ್ಬರಿಸಿದ್ದರು.

    ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?
    ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಉಭಯ ತಂಡಗಳು ತಮ್ಮ ತಂಡದಲ್ಲಿನ ಒಬ್ಬ ಆಟಗಾರನನ್ನು ಬದಲಿಸುವ ಅವಕಾಶ ಪಡೆಯುವುದಾಗಿದೆ. ನಿಯಮದ ಪ್ರಕಾರ ತಂಡಗಳು ತಾವು ಘೋಷಿಸಿರುವ ತಂಡದಲ್ಲಿ ಒಬ್ಬ ಬೌಲರ್ ಬದಲಿಗೆ ಒಬ್ಬ ಬ್ಯಾಟ್ಸ್‌ಮನ್ ಅಥವಾ ಒಬ್ಬ ಬ್ಯಾಟ್ಸ್​ಮನ್ ಬದಲಿಗೆ ಬೌಲರ್‌ಅನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಇದರಿಂದ ಉಭಯ ತಂಡಗಳಿಗೆ ಒಬ್ಬ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ ಹೆಚ್ಚುವರಿ ಸಿಕ್ಕಂತೆ ಆಗುತ್ತದೆ. ಅಲ್ಲದೇ ಒಟ್ಟು ನಾಲ್ಕು ಜನ ಮೀಸಲು ಆಟಗಾರರು ಇರುವುದರಿಂದ ಪ್ಲೇಯಿಂಗ್‌-11 ನಲ್ಲಿರುವ ಆಟಗಾರರು ಗಾಯಕ್ಕೆ ತುತ್ತಾದಲ್ಲಿ ಮತ್ತೊಬ್ಬರನ್ನು ಫೀಲ್ಡಿಂಗ್‌ಗೆ ಬಳಸಿಕೊಳ್ಳುವ ಅವಕಾಶವೂ ಇದೆ.

    ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮ ಬಂದಿದ್ದು ಯಾವಾಗ?
    ಆಸ್ಟ್ರೇಲಿಯಾದಲ್ಲಿ ಬಿಗ್‌ಬ್ಯಾಷ್‌ ಲೀಗ್‌ನಲ್ಲಿ ಮೊದಲು ಇಂಪ್ಯಾಕ್ಟ್ ಪ್ಲೇಯರ್‌ ನಿಯಮವನ್ನು ಪರಿಚಯಿಸಲಾಗಿತ್ತು. ಇದರಿಂದ ಸ್ಫೂರ್ತಿ ಪಡೆದ ಬಿಸಿಸಿಐ, ಐಪಿಎಲ್‌ ಟೂರ್ನಿಯಲ್ಲಿ ಅಳವಡಿಸಲು ನಿರ್ಧರಿಸಿತು. ಆದ್ರೆ ಐಪಿಎಲ್‌ಗೂ ಮುನ್ನ 2022-23ರ ಸೈಯದ್‌ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಬಾರಿ ಈ ನಿಯಮವನ್ನು ಅಳವಡಿಸಿಕೊಂಡು ಪ್ರಯೋಗ ನಡೆಸಿತ್ತು. ಅದು ಸಕ್ಸಸ್‌ ಆದ ನಂತರ ಕಳೆದ ಎರಡು ಆವೃತ್ತಿಗಳಿಂದ ಐಪಿಎಲ್‌ನಲ್ಲಿ ಅನುಷ್ಠಾನಕ್ಕೆ ತರಲಾಯಿತು.

    ಈ ಹಿಂದೆ ರೋಹಿತ್‌ ಶರ್ಮಾ ಹೇಳಿದ್ದೇನು?
    ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮಕ್ಕೆ ನಾನು ಅಭಿಮಾನಿಯಲ್ಲ. ಜನರಿಗೆ ಸ್ವಲ್ಪ ಮನರಂಜನೆ ನೀಡುವ ಸಲುವಾಗಿ ಪಂದ್ಯದ ದೊಡ್ಡ ಭಾಗವನ್ನು ನೀವು ತೆಗೆದುಕೊಳ್ಳುತ್ತಿದ್ದೀರಿ. ಆದರೆ, ನೀವು ಕ್ರಿಕೆಟ್‌ನ ನಿಜವಾದ ಅಂಶವನ್ನು ನೋಡುವುದಾದರೆ, ನಾನು ಕೆಲವೊಂದು ಉದಾಹರಣೆ ನೀಡುತ್ತೇನೆ. ಭಾರತ ತಂಡಕ್ಕೆ ವಾಷಿಂಗ್ಟನ್‌ ಸುಂದರ್‌, ಶಿವಂ ದುಬೆ ಅವರಂಥ ಆಟಗಾರರು ಬೌಲ್‌ ಮಾಡುವುದೇ ಇಲ್ಲ. ಹಾಗಾಗಿ ಇದು ಒಳ್ಳೆಯ ಸಂಗತಿಯಲ್ಲ. ಈ ನಿಯಮದಿಂದ ನೀವು ಏನು ಸಾಧಿಸುತ್ತೀರೋ ನನಗೆ ಗೊತ್ತಿಲ್ಲ ಎಂದು ರೋಹಿತ್‌ ಶರ್ಮಾ ತಿಳಿಸಿದ್ದರು.

  • ಶ್ರೀಲೀಲಾ ಡ್ಯಾನ್ಸ್ ನೋಡಿ ಹೊಗಳಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್

    ಶ್ರೀಲೀಲಾ ಡ್ಯಾನ್ಸ್ ನೋಡಿ ಹೊಗಳಿದ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್

    ನ್ನಡತಿ, ತೆಲುಗಿನ ಟಾಪ್ ನಟಿ ಶ್ರೀಲೀಲಾ (Sreeleela) ಹವಾ ಜೋರಾಗಿದೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಪೀಕ್‌ನಲ್ಲಿರುವ ಶ್ರೀಲೀಲಾಗೆ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಭೇಷ್ ಎಂದಿದ್ದಾರೆ. ‘ಗುಂಟೂರು ಖಾರಂ’ ಚಿತ್ರದಲ್ಲಿ ಶ್ರೀಲೀಲಾ ಡ್ಯಾನ್ಸ್ ನೋಡಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ (Ravichandran Ashwin) ಬೆರಗಾಗಿದ್ದಾರೆ.

    ಸಂದರ್ಶನವೊಂದರಲ್ಲಿ ಶ್ರೀಲೀಲಾ ಬಗ್ಗೆ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿ, ಇತ್ತೀಚೆಗೆ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ ನೋಡಿದೆ. ಸಿನಿಮಾ ತುಂಬಾ ಚೆನ್ನಾಗಿದೆ. ಅದರಲ್ಲಿ ಶ್ರೀಲೀಲಾ ಡ್ಯಾನ್ಸ್ ಚೆನ್ನಾಗಿ ಮಾಡಿದ್ದಾರೆ. ಅವರ ಡ್ಯಾನ್ಸ್ ನೋಡಿ ಬೆರಗಾದೆ ಎಂದು ಕ್ರಿಕೆಟಿಗ ಮಾತನಾಡಿದ್ದಾರೆ. ಇದನ್ನೂ ಓದಿ:ದುಪ್ಪಟ್ಟು ಸಂಭಾವನೆಗೆ ಬೇಡಿಕೆಯಿಟ್ಟ ಸಮಂತಾ

    ನನಗೆ ಸಿನಿಮಾ ನೋಡಲು ಸಮಯವಿಲ್ಲ. ಆದರೆ ರಜನಿಕಾಂತ್ (Rajanikanth) ಸಿನಿಮಾ ಬಿಟ್ಟು ಬೇರೆ ಸಿನಿಮಾಗಳನ್ನು ನೋಡಲ್ಲ. ಆದರೆ ಮಹೇಶ್ ಬಾಬು, ಶ್ರೀಲೀಲಾ ನಟನೆಯ ಈ ಸಿನಿಮಾ ಇಷ್ಟ ಆಯ್ತು. ಅದರಲ್ಲೂ ಶ್ರೀಲೀಲಾ ಡ್ಯಾನ್ಸ್ ಚೆನ್ನಾಗಿದೆ ಎಂದು ಕ್ರಿಕೆಟಿಗ ಸಂದರ್ಶನದಲ್ಲಿ ಕೊಂಡಾಡಿದ್ದಾರೆ. ಇದನ್ನೂ ಓದಿ:ದುಪ್ಪಟ್ಟು ಸಂಭಾವನೆಗೆ ಬೇಡಿಕೆಯಿಟ್ಟ ಸಮಂತಾ

    ಸದ್ಯ ಶ್ರೀಲೀಲಾ ಅವರು ಪವನ್ ಕಲ್ಯಾಣ್ (Pawan Kalyan) ನಟನೆಯ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ.

  • ಒಂದೇ ಮ್ಯಾಚ್‌ನಲ್ಲಿ 12 ವಿಕೆಟ್‌ ಪಡೆದು ಅಶ್ವಿನ್‌ ಸಾಧನೆ – ವಿಂಡೀಸ್ ವಿರುದ್ಧ ಭಾರತಕ್ಕೆ ಜಯದ ಮುನ್ನಡೆ

    ಒಂದೇ ಮ್ಯಾಚ್‌ನಲ್ಲಿ 12 ವಿಕೆಟ್‌ ಪಡೆದು ಅಶ್ವಿನ್‌ ಸಾಧನೆ – ವಿಂಡೀಸ್ ವಿರುದ್ಧ ಭಾರತಕ್ಕೆ ಜಯದ ಮುನ್ನಡೆ

    ಡೊಮಿನಿಕಾ: ಯಶಸ್ವಿ ಜೈಸ್ವಾಲ್‌ (Yashasvi Jaiswal, ರೋಹಿತ್‌ ಶರ್ಮಾ (Rohit Sharma) ಶತಕದ ಬ್ಯಾಟಿಂಗ್‌ ಹಾಗೂ ರವಿಚಂದ್ರನ್‌ ಅಶ್ವಿನ್‌ ಸ್ಪಿನ್‌ ಮೋಡಿ ನೆರವಿನಿಂದ ಭಾರತ, ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ 141 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಟೀಂ ಇಂಡಿಯಾ ಪರ ಮೊದಲ ಟೆಸ್ಟ್‌ ಮ್ಯಾಚ್‌ನಲ್ಲೇ 12 ವಿಕೆಟ್‌ ಉಡೀಸ್‌ ಮಾಡಿರುವ ಅಶ್ವಿನ್‌ (Ravichandran Ashwin) ಮತ್ತೊಂದು ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ತೂಕದಿಂದಲೇ ಗಮನ ಸೆಳೆದ ಕಾರ್ನ್‍ವಾಲ್ ವಿಂಡೀಸ್‌ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?

    ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಚಾಂಪಿಯನ್‌ ಶಿಪ್‌ (WTC) ಫೈನಲ್‌ ಪಂದ್ಯದಲ್ಲಿ ಬೆಂಚ್‌ ಕಾದಿದ್ದ ಅಶ್ವಿನ್‌, ವೆಸ್ಟ್ ಇಂಡೀಸ್‌ (West Indies) ವಿರುದ್ಧ ಮೊದಲ ಪಂದ್ಯದಲ್ಲಿಯೇ ಮಿಂಚಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 24.3 ಓವರ್‌ಗಳಲ್ಲಿ 60 ರನ್‌ ನೀಡಿ 5 ವಿಕೆಟ್‌ ಪಡೆದಿದ್ದ ಅಶ್ವಿನ್‌, 2ನೇ ಇನ್ನಿಂಗ್ಸ್‌ನಲ್ಲಿ 21.3 ಓವರ್‌ಗಳಲ್ಲಿ 71 ರನ್‌ ನೀಡಿ 7 ವಿಕೆಟ್‌ ಪಡೆದಿದ್ದಾರೆ. ಈ ಮೂಲಕ ಟೆಸ್ಟ್ ವೃತ್ತಿ ಜೀವನದಲ್ಲಿ 6ನೇ ಬಾರಿ ಟೆಸ್ಟ್‌ ಕ್ರಿಕೆಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ 5 ವಿಕೆಟ್‌ ಸಾಧನೆ ಮಾಡಿದ ಬೌಲರ್‌ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: Asian Games 2023ಗೆ ಟೀಂ ಇಂಡಿಯಾ ರೆಡಿ – ರಿಂಕುಗೆ ಕೊನೆಗೂ ಸಿಕ್ತು ಚಾನ್ಸ್, ಫಸ್ಟ್ ರಿಯಾಕ್ಷನ್ ಏನು?

    150, 130ಕ್ಕೆ ಆಲೌಟ್‌:
    ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ ಗಳಿಗೆ ವಿಕೆಟ್‌ ಕಳೆದುಕೊಂಡಿದ್ದ ವಿಂಡೀಸ್‌ ತಂಡ 2ನೇ ಇನ್ನಿಂಗ್ಸ್‌ನಲ್ಲೂ ಭಾರತದ ಸ್ಪಿನ್‌ ಬೌಲರ್‌ಗ ದಾಳಿಗೆ ಮಕಾಡೆ ಮಲಗಿತು. ಇದರಿಂದ ಐದು ದಿನಗಳ ಕಾಲ ನಡೆಯಬೇಕಿದ್ದ ಮೊದಲ ಟೆಸ್ಟ್‌ ಪಂದ್ಯ ಮೂರೇ ದಿನಗಳಲ್ಲಿ ಮುಕ್ತಾಯವಾಯಿತು.

    ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್‌ ತಂಡಕ್ಕೆ ಮತ್ತೊಮ್ಮೆ ಅಶ್ವಿನ್‌ ತಮ್ಮ ಸ್ಪಿನ್‌ ಮೋಡಿಯಿಂದ ಆಘಾತ ನೀಡಿದರು. ವಿಂಡೀಸ್‌ ಪರ ಅಲಿಕ್ ಅಥಾನಾಜೆ 28 ರನ್‌, ಜೇಸನ್‌ ಹೋಲ್ಡರ್‌ ಅಜೇಯ 20 ರನ್‌ ಗಳಿಸಿದ್ದು ಬಿಟ್ಟರೆ ಉಳಿದೆಲ್ಲರೂ 20 ರನ್‌ಗಳ ಗಡಿ ದಾಟಲೂ ಆಗದೇ ವಿಕೆಟ್‌ ಕೈಚೆಲ್ಲಿದರು. ಅಂತಿಮವಾಗಿ 50.3 ಓವರ್‌ಗಳಿಗೆ ವಿಂಡೀಸ್‌ ತಂಡ ಕೇವಲ 130 ರನ್‌ಗಳಿಗೆ ಆಲೌಟ್‌ ಆಯಿತು. ಭಾರತ 141 ರನ್‌ಗಳಿಂದ ಗೆದ್ದು ಬೀಗಿತು. ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ ಕೇವಲ 150 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

    ಇನ್ನೂ 2ನೇ ದಿನದಾಟದಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್‌ 3ನೇ ದಿನ ಚೊಚ್ಚಲ ದ್ವಿಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿಯುವ ಸನಿಹದಲ್ಲಿದ್ದರು. ಆದ್ರೆ 387 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 16 ಬೌಂಡರಿಗಳೊಂದಿಗೆ 171 ರನ್‌ ಗಳಿಸಿ ಆಡುತ್ತಿದ್ದಾಗ ಸುಲಭ ಕ್ಯಾಚ್‌ಗೆ ತುತ್ತಾದರು. ಆ ನಂತರ ವಿರಾಟ್‌ ಕೊಹ್ಲಿ 182 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 76 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ರವೀಂದ್ರ ಜಡೇಜಾ ಅಜೇಯ 37 ರನ್‌, ಇಶಾನ್‌ ಕಿಶನ್‌ ಅಜೇಯ 1 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. 3ನೇ ದಿನ ಕ್ರೀಸ್‌ಗಿಳಿದ ಉಪ ನಾಯಕ ಅಜಿಂಕ್ಯ ರಹಾನೆ ಕೇವಲ 3 ರನ್‌ಗಳಿಗೆ ಔಟಾಗಿ ನಿರಾಸೆ ಅನುಭವಿಸಿದರು.

    ಸಂಕ್ಷಿಪ್ತ ಸ್ಕೋರ್‌
    ವೆಸ್ಟ್‌ ಇಂಡೀಸ್‌ ಮೊದಲ ಇನ್ನಿಂಗ್ಸ್‌ 150/10
    ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ 421/5ಡಿ
    ವೆಸ್ಟ್‌ ಇಂಡೀಸ್‌ 2ನೇ ಇನ್ನಿಂಗ್ಸ್‌ 130/10

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]