Tag: ravibelgere

  • ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ 30 ಲಕ್ಷ ರೂ. ಸುಪಾರಿ- ಪತ್ನಿ ಸುಚಿತಾ ಪ್ರತಿಕ್ರಿಯಿಸಿದ್ದು ಹೀಗೆ

    ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ 30 ಲಕ್ಷ ರೂ. ಸುಪಾರಿ- ಪತ್ನಿ ಸುಚಿತಾ ಪ್ರತಿಕ್ರಿಯಿಸಿದ್ದು ಹೀಗೆ

    ಚಿಕ್ಕಮಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ರವಿಬೆಳಗೆರೆ ಅವರು ನೀಡಿದ ಸುಪಾರಿ ಪ್ರಕರಣ ಸಂಬಂಧ ಸುನಿಲ್ ಪತ್ನಿ ಸುಚಿತಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದು, ವಿಷಯ ಕೇಳಿ ನನಗೆ ಶಾಕ್ ಆಗಿದೆ ಎಂದು ಹೇಳಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಗ್ಗರವಳ್ಳಿಯಲ್ಲಿ ಮಾತಾನಾಡಿದ ಸುಚಿತಾ, ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ನನಗೆ ವಿಷಯ ತಿಳಿಯಿತು. ನೋಡಿದ ತಕ್ಷಣ ನಮಗೆ ಭಯ ಆಯಿತು. ಅಷ್ಟೇ ಅಲ್ಲದೇ ಇದನ್ನು ಕೇಳಿ ತುಂಬಾ ನೋವಾಗುತ್ತಿದೆ. ಮಗನ ತರ ಸಾಕಿ, ಆಶ್ರಯ ಕೊಟ್ಟು ಈ ರೀತಿ ಮಾಡಿದ್ದಾರೆ. 14 ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಬೇರೆಕಡೆ ಹೋಗಿಲ್ಲ. ಆದರೂ ಇಷ್ಟು ದೊಡ್ಡ ವ್ಯಕ್ತಿ ಜೊತೆಲಿದ್ದು, ಸುಪಾರಿ ಕೊಟ್ಟು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ನೋವಿನಿಂದ ಹೇಳಿದ್ದಾರೆ.

    ನಮಗೆ ಇನ್ನು ಜೀವ ಭಯ ಇದೆ. ಮುಂದೆ ಏನು ಮಾಡ್ತಾರೋ ಗೊತ್ತಿಲ್ಲ. ಸುಪಾರಿ ಕೊಟ್ಟು ಮಾಡಿದ್ದಾರೆ ಅಂದ್ರೆ ಇದನ್ನು ನಿಲ್ಲಿಸಲ್ಲ. ಆದ್ದರಿಂದ ರಾಜ್ಯ ಸರ್ಕಾರ ನಮಗೆ, ಮನೆಗೆ, ನನ್ನ ಗಂಡನಿಗೂ ರಕ್ಷಣೆ ಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

    ಹತ್ಯೆಗೆ ಯಾವುದೇ ಸಂಬಂಧ ಇಲ್ಲ. ಯಾಕೆಂದರೆ 2013 ರಲ್ಲಿ ಅವರನ್ನು ಎಂಡಿ ಆಗಿ ಹಾಯ್ ಬೆಂಗಳೂರು ಆಫಿಸ್‍ಗೆ ತಂದ್ರು. ಇವರು ಮ್ಯಾನೇಜರ್ ಆದ್ಮೇಲೆ ಆಫಿಸ್‍ಗೆ ವಾರದಲ್ಲಿ ಎರಡು ಬಾರಿ ಹೋಗಿ ಎಲ್ಲನೂ ಫೈನಲ್ ಮಾಡುತ್ತಿದ್ದರು. ಎಂಡಿ ಆಗಿ ಎಲ್ಲರಿಗೂ ಫೋನ್ ಮಾಡಿ ವಿಷಯವನ್ನು ತಿಳಿದುಕೊಳ್ಳಬೇಕು. ಆದ್ದರಿಂದ ಫೋನ್ ಮಾಡುತ್ತಿದ್ದರು.  ಈ ವಿಚಾರವನ್ನಿಟ್ಟುಕೊಂಡು ಅಕ್ರಮ ಸಂಬಂಧ ಇದೆ ಎಂದು ಈ ರೀತಿ ಮಾಡುವುದು ತಪ್ಪು ಎಂದು ಹೇಳಿದ್ದಾರೆ.

    ಇದೇ ವೇಳೆ ಮಾತನಾಡಿದ ಸುನೀಲ್ ಹೆಗ್ಗರವಳ್ಳಿ ಸಹೋದರ ಪರಮೇಶ್, 15 ವರ್ಷ ನನ್ನ ತಮ್ಮನನ್ನ ಸಾಕಿ, ಈಗ ಕೊಲೆಗೆ ಸುಪಾರಿ ಕೊಟ್ಟಿರೋದು ನಮಗೆ ತುಂಬಾ ದುಃಖವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.

  • ರವಿ ಬೆಳಗೆರೆಯನ್ನು ಯಾಕೆ ಬಂಧಿಸಿದ್ದಾರೆ?- ವರದಿಗಾರರಿಗೆ ಸಿಎಂ ಪ್ರಶ್ನೆ

    ರವಿ ಬೆಳಗೆರೆಯನ್ನು ಯಾಕೆ ಬಂಧಿಸಿದ್ದಾರೆ?- ವರದಿಗಾರರಿಗೆ ಸಿಎಂ ಪ್ರಶ್ನೆ

    ಮೈಸೂರು: ಹಾಯ್ ಬೆಂಗಳೂರು ಸಂಪಾದಕ ರವಿ ಬೆಳೆಗೆರೆ ಬಂಧನ ಕುರಿತಂತೆ ಪ್ರತಿಕ್ರಿಯೆ ನೀಡಲು ಕೇಳಿದಾಗ ಸಿಎಂ ಸಿದ್ದರಾಮಯ್ಯ, ಯಾವ ಕಾರಣಕ್ಕೆ ಬಂಧನ ಮಾಡಿದ್ದಾರೆ? ಅಂತ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಕಾನೂನು ಪ್ರಕಾರ ತನಿಖೆ ಮಾಡ್ತಾರೆ. ನಮಗೂ ಅದಕ್ಕೂ ಸಂಬಂಧ ಇಲ್ಲ. ಅವರ ಬಳಿ ಸಾಕ್ಷಿ ಇದೆಯೋ ಏನೋ ಗೊತ್ತಿಲ್ಲ. ಮಾತಾಡಬೇಕು. ಪೊಲೀಸರು ನನ್ನೊಂದಿಗೆ ಮಾತಾಡಿಲ್ಲ ಅಂದ್ರು. ಇದನ್ನೂ ಓದಿ: Exclusive: ಮದ್ವೆ ಮನೆಯಲ್ಲಿ ಊಟ ಮಾಡಿ ಸಿಎಂ ಕೊಟ್ಟ ಆದೇಶದಿಂದ ಬೆಳಗೆರೆ ಅರೆಸ್ಟ್!

    ರವಿ ಬೆಳಗರೆ ಕರ್ನಾಟಕದ ಖ್ಯಾತ ಪತ್ರಕರ್ತರಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುವುದು ಹೇಗೆ ಎಂದು ಪೊಲೀಸರು ಚಿಂತೆಯಲ್ಲಿದ್ದಾಗ ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಸಿಎಂ ಬೆನ್ನಿಗೆ ನಿಲ್ಲದೇ ಇದ್ದಲ್ಲಿ ಬಂಧನ ಕಷ್ಟವಾಗುತಿತ್ತು ಎಂದು ಬೆಳಗೆರೆ ಬಂಧನವಾದ ಬಳಿಕ ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದವು.  ಇದನ್ನೂ ಓದಿ: Exclusive: ರವಿಬೆಳಗೆರೆ ರಾಕ್ಷಸ, ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ: ಸುನೀಲ್ ಹೆಗ್ಗರವಳ್ಳಿ

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಆರಂಭದಲ್ಲಿ ನಾಡ ಪಿಸ್ತೂಲ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ತಾಹೀರ್ ಹುಸೇನ್ ಅನೂಪ್ ಗೌಡನನ್ನು ವಶಕ್ಕೆ ಪಡೆದಿದ್ದರು. ಯಲಹಂಕದಲ್ಲರುವ ಆತನ ಮನೆಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಒನಿಡಾ ಟಿವಿಯ ಹಿಂದುಗಡೆ ಮೂರು ಪಿಸ್ತೂಲ್ ಇರುವುದನ್ನು ನೋಡಿ ಪೊಲೀಸರು ಒಮ್ಮೆ ಬೆಚ್ಚಿ ಬಿದ್ದಿದ್ದರು. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿಯವರನ್ನು ಹತ್ಯೆ ಮಾಡಲು ರವಿ ಬೆಳೆಗೆರೆ 30 ಲಕ್ಷ ಸುಪಾರಿ ನಿಡಿರುವ ಬಗ್ಗೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ರವಿಬೆಳೆಗೆರೆಯನ್ನು ಪೊಲಿಸರು ಬಂಧಿಸಿದ್ದರು. ಇದನ್ನೂ ಓದಿ: ರವಿ ಬೆಳಗೆರೆ ಸುಪಾರಿ ಪ್ರಕರಣ: ಮಗಳು ಭಾವನಾ, ಮಗ ಕರ್ಣ ಹೀಗಂದ್ರು

    https://www.youtube.com/watch?v=gpHJrcsZuBM

    https://www.youtube.com/watch?v=kJ5uYUEgVeM

    https://www.youtube.com/watch?v=lgEoaxQ1l44

    https://www.youtube.com/watch?v=tvAkOpM6ZZo

    https://www.youtube.com/watch?v=p0Orve2DpiM

    https://www.youtube.com/watch?v=ucQolRekyhU