Tag: ravibelagere

  • ರಾತ್ರಿ ಮಾವನನ್ನು ಭೇಟಿಯಾದ ಶ್ರೀನಗರ ಕಿಟ್ಟಿ- ಸುನಿಲ್ ಹೆಗ್ಗರವಳ್ಳಿ ಮಾತಿಗೆ ಬೇಸರ

    ರಾತ್ರಿ ಮಾವನನ್ನು ಭೇಟಿಯಾದ ಶ್ರೀನಗರ ಕಿಟ್ಟಿ- ಸುನಿಲ್ ಹೆಗ್ಗರವಳ್ಳಿ ಮಾತಿಗೆ ಬೇಸರ

    ಬೆಂಗಳೂರು: ಸಿಸಿಬಿ ಕಚೇರಿಯಲ್ಲಿದ್ದ ತಮ್ಮ ಮಾವನನ್ನು ನಟ ಶ್ರೀನಗರ ಕಿಟ್ಟಿ ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

    ಬಳಿಕ ಮಾತನಾಡಿದ ಕಿಟ್ಟಿ, ಸುನಿಲ್ ಹೆಗ್ಗರವಳ್ಳಿ ಬಗ್ಗೆ ಮಾತನಾಡೋಕೂ ಇಷ್ಟವಿಲ್ಲ. ಅವನನ್ನು ನಾನು ನಿನ್ನೆ ಮೊನ್ನೆಯಿಂದ ನೋಡ್ತಿಲ್ಲ. ಅವನನ್ನು ಮನೆ ಮಗನಂತೆ ನೋಡಿಕೊಂಡಿದ್ದರು. ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನನಗೆ ಕೆಲಸ ಕಲಿಸಿಕೊಟ್ಟವರು ರವಿ ಬೆಳಗೆರೆ ಅಂತ ಅವನೇ ಹೇಳಿಕೊಂಡಿದ್ದಾನೆ. ಅದರಲ್ಲೂ ಯಾರನ್ನೂ ಏಕವಚನದಲ್ಲಿ ಮಾತನಾಡೋದು ಸರಿಯಲ್ಲ. ಆದ್ರೆ ಮೊನೆನ ಅವನು ಆಡಿದ ಮಾತುಗಳು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಅಂದ್ರು.

    ತಪ್ಪು ಮಾಡದಿದ್ದಾಗ ಹೊರಗಿನವರು ಆಡೋ ಮಾತುಗಳು ಮನಸ್ಸಿಗೆ ನೋವುಂಟು ಮಾಡುತ್ತೆ. ರವಿ ಬೆಳಗೆರೆಗೆ ಬಿಪಿ ಹೆಚ್ಚಾಗಿದ್ದು ಸುಧಾರಿಸಿಕೊಳ್ತಿದ್ದಾರೆ. ನಮಗೆ ಕಾನೂನಿನ ಮೇಲೆ ನಂಬಿಕೆಯಿದ್ದು, ನ್ಯಾಯ ಸಿಗುವ ವಿಶ್ವಾಸ ಇದೆ. ತಪ್ಪು ಮಾಡಿದ್ದರೆ ಶಿಕ್ಷೆ ಆಗೇ ಆಗುತ್ತೆ ಅಂತ ಅವರು ಹೇಳಿದ್ದರು.

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಶುಕ್ರವಾರ ಬಂಧಿಸಿತ್ತು. ಆತನ ವಿಚಾರಣೆ ವೇಳೆ ರವಿ ಬೆಳೆಗೆರೆಯವರು ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಲಾಗಿತ್ತು.

    ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎಂಬುದಾಗಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಳಗೆರೆ ಬಂಧನವಾಗಿ ವಿಚಾರಣೆ ನಡೆಯುತ್ತಿತ್ತು. ಅಂತೆಯೇ ಭಾನುವಾರ ರಾತ್ರಿ ಸುಮಾರು 9.40ರ ವೇಳೆಗೆ ಮಧು ಎಂಬಾತ ಸುನಿಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದಾರೆ.

    ಸುನೀಲ್ ರಿಸೀವ್ ಮಾಡಿದಾಗ ಕರೆ ಮಾಡಿದ್ದ ಮಧು ಎಂಬಾತ ರವಿ ಬೆಳೆಗೆರೆಯವರಿಗೆ ಫೋನ್ ಕೊಟ್ಟಿದ್ದಾನೆ. ಈ ವೇಳೆ ಸುನೀಲ್ ಜೊತೆ ಮಾತನಾಡಿದ ರವಿ ಬೆಳಗೆರೆ, ಯಶೋಮತಿ ಜೊತೆ ಸಂಬಂಧ ಇದೆ ಅಂತಾ ಮಾಧ್ಯಮಗಳ ಮುಂದೆ ಹೇಳಿದ್ದೀಯಾ? ಅಂತಾ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸುನೀಲ್, ನನಗೆ ಯಶೋಮತಿ ಜೊತೆ ಸಂಬಂಧವಿಲ್ಲ. ಹೀಗಿದ್ದಾಗ ನಾನ್ ಯಾಕೆ ಹಾಗೆ ಹೇಳಲಿ? ಅಂತಾ ಪ್ರಶ್ನಿಸಿದ್ದರು ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿತ್ತು.

    ನನಗೆ ಏನೇ ಆದರೂ ರವಿ ಬೆಳಗೆರೆ ಅವರೇ ಕಾರಣ. ಸಿಸಿಬಿ ಕಚೇರಿಯಿಂದ ಕರೆ ಮಾಡುವ ಮೂಲಕ ತಾನು ಏನ್ ಬೇಕಾದ್ರೂ ಮಾಡ್ತೀನಿ ಅನ್ನೋ ಮೆಸೇಜ್ ಕೊಟ್ಟಿದ್ದಾರೆ. ಯಶೋಮತಿ ನನ್ನ ಗೆಳತಿಯಷ್ಟೇ. ಎಲ್ಲರೂ ರವಿ ಬೆಳಗೆರೆಯಂತೆ ಇರಲು ಆಗುತ್ತಾ? ಅವರಿಗಾದರೂ ಹತ್ತಾರು ಮಂದಿ ಗರ್ಲ್ ಫ್ರೆಂಡ್ಸ್ ಇದ್ದಾರೆ ಅಂತಾ ಸುನಿಲ್ ಕೂಡ ಪ್ರತಿಕ್ರಿಯಿಸಿದ್ದರು.

    https://www.youtube.com/watch?v=4amfU_N3xCI

    https://www.youtube.com/watch?v=kbcTIaQVj5Q

    https://www.youtube.com/watch?v=ED0FdtDgq5U

  • ನಾನು ಯಾರಿಗೂ ಸುಪಾರಿ ನೀಡಿಲ್ಲ, ನಿಮ್ಮ ಟೈಮೂ ವೇಸ್ಟ್, ನನಗೂ ತೊಂದ್ರೆ – ಸಿಸಿಬಿ ಪೊಲೀಸರ ಬೆವರಿಳಿಸಿದ ಬೆಳಗೆರೆ

    ನಾನು ಯಾರಿಗೂ ಸುಪಾರಿ ನೀಡಿಲ್ಲ, ನಿಮ್ಮ ಟೈಮೂ ವೇಸ್ಟ್, ನನಗೂ ತೊಂದ್ರೆ – ಸಿಸಿಬಿ ಪೊಲೀಸರ ಬೆವರಿಳಿಸಿದ ಬೆಳಗೆರೆ

    ಬೆಂಗಳೂರು: ಪತ್ರಕರ್ತ ಹಾಗೂ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆ ವಿಚಾರಣೆ ಬಹುತೇಕ ಪೂರ್ಣಗೊಂಡಿದೆ.

    ವಿಚಾರಣೆಯ ವೇಳೆ ಯಾವುದೇ ಹೇಳಿಕೆ ನೀಡದಿರುವ ರವಿ ಬೆಳಗೆರೆ, ಯಾವ ಸುಪಾರಿಯೂ ನಾನು ನೀಡೇ ಇಲ್ಲ. ಕುಡಿದ ಮತ್ತಿನಲ್ಲಿ ಏನೋ ಹೇಳಿರಬಹುದು. ಅದನ್ನಾ ಪರಿಗಣಿಸೋಕೆ ಸಾಧ್ಯನಾ? ಎಂದು ಹೇಳಿದ್ದಾರೆ.

    ಕುಡಿದ ಮತ್ತಿನಲ್ಲಿ ಹೇಳಿರಬಹುದು ಅದನ್ನೇ ನೀವು ಸುಪಾರಿ ಅಂತ ಇದ್ದೀರಿ. ನಾನೇನಾದರೂ ಹೊಸಬನ ಭೇಟಿ ಮಾಡಿ, ಮಾತನಾಡಿದ್ರೆ ನಿಮ್ಮ ಅನುಮಾನ ಸರಿಯಾಗಿ ಇರ್ತಿತ್ತು. ಆದ್ರೆ ನಾನು ನನ್ನ ಮಾಜಿ ಡ್ರೈವರ್ ಭೇಟಿಯಾಗಿದ್ದೆ. ಪರಿಸ್ಥಿತಿ ಒತ್ತಡಕ್ಕೆ ಸಿಕ್ಕಿ ಕೊಲೆಗಾರ ಆದ. ಕೊಲೆಗಾರನನ್ನು ಭೇಟಿ ಮಾಡಿದ್ರೆ ನಾನು ಕೊಲೆಗಾರನ ಕೊಲೆ ಮಾಡಿಸ್ತೀನಾ?. ಸುಮ್ಮನೆ ನಿಮಗೂ ಕಾಲಹರಣ ನನಗೂ ಹಿಂಸೆನ್ರಪ್ಪ ಅಂತ ಸಿಸಿಬಿ ಅಧಿಕಾರಿಗಳಿಗೆಯೇ ರವಿ ಬೆಳಗೆರೆ ಟಾಂಗ್ ನೀಡಿದ್ದಾರೆ.

    ರವಿ ಬೆಳಗೆರೆ ಪೊಲೀಸ್ ಕಸ್ಟಡಿ ನಾಳೆಗೆ ಅಂತ್ಯವಾಗಲಿದೆ. ಈಗಾಗಲೇ ಪೊಲೀಸರು ಸಿಸಿಟಿವಿ, ಫೋನ್ ಕರೆಯನ್ನೇ ಆಧರಿಸಿ ತನಿಖೆ ಮುಂದುವರೆಸಿದ್ದಾರೆ. ಅಲ್ಲದೇ ಈಗಾಗಲೇ ಸುನಿಲ್ ಹೆಗ್ಗರವಳ್ಳಿ ಹೇಳಿಕೆ ಕೂಡ ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಸಿಸಿಬಿ ಮೂಲಗಳ ಮಾಹಿತಿ ನೀಡಿವೆ.

    ಎಫ್‍ಐಆರ್ ದಾಖಲು: ರವಿಬೆಳಗೆರೆ ಬಂಧನ ಪ್ರಕರಣದ ಬಳಿಕ ಹಾಯ್ ಬೆಂಗಳೂರು ಕಚೇರಿಯಲ್ಲಿ ಜಿಂಕೆ ಚರ್ಮ, ಆಮೆ ಚಿಪ್ಪು ಪತ್ತೆ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದರು. ಹೀಗಾಗಿ ಶನಿವಾರ ಅರಣ್ಯಾಧಿಕಾರಿಗಳು ಸಿಸಿಬಿ ಕಚೇರಿಗೆ ಆಗಮಿಸಿ ಜಿಂಕೆ ಚರ್ಮ ಮತ್ತು ಆಮೆ ಚಿಪ್ಪು ವಶಕ್ಕೆ ಪಡೆದಿದ್ದರು. ಸದ್ಯ ಈ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳಿಂದ ರವಿಬೆಳಗೆರೆ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿದೆ.

    ಆರೋಗ್ಯದಲ್ಲಿ ಏರುಪೇರು: ರವಿಬೆಳಗೆರೆಯವರಿಗೆ ಮತ್ತೆ ಲೋ ಶುಗರ್, ಲೋ ಬಿಪಿಯಾಗಿ ಆರೋಗ್ಯದಲ್ಲಿ ಏರಪೇರಾಗಿದೆ. ಹೀಗಾಗಿ ವೈದಕೀಯ ತಪಾಸಣೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರವಿಬೆಳಗೆರೆ ಹೈಡ್ರಾಮ ಮಾಡಿದ್ದು, ಸಿಗರೇಟ್ ಬೇಕಾಂತ ಹಠ ಹಿಡಿದಿದ್ದರು. ಅಲ್ಲದೇ ಕಾರಿಗೆ ಕಾಲು ಅಡ್ಡ ಇಟ್ಟಿಕೊಂಡು ಸಿಗರೇಟ್ ಕೊಡದೆ ಇದ್ರೆ ಕಾಲು ತೆಗೆಯಲ್ಲ ಅಂತಾ ಹಠ ಮಾಡಿದ್ದಾರೆ.

    ಸಿಗರೇಟು ಕೊಡದೇ ಇದ್ದಿದ್ದಕ್ಕೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾನೂನಿನಲ್ಲಿಯೇ ಅವಕಾಶ ಇದೆ, ಕೊಡೊದಕ್ಕೆ ನಿಮಗೇನು ಅಂತ ಬೈಯ್ದಿದ್ದಾರೆ. ಮನವೊಲಿಸಲು ಹೋದ ಮಗ ಕರ್ಣನ ಮೇಲೂ ಕಿಡಿಕಾರಿದ್ದಾರೆ. ಕೊನೆಗೆ ಸಿಸಿಬಿ ಪೊಲೀಸರು ಸಿಗರೇಟು ಕೊಟ್ಟು ಸೇದಿಸಿ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದೇ ವೇಳೆ ಕಾಲಿಗೆ ಗಾಯ ಆಗಿದೆ ನಿಮಗೆ ಮನುಷ್ಯತ್ವ ಇಲ್ವಾ ಅಂತ ಪೊಲೀಸರಿಗೆ ಬೆಳಗೆರೆ ತರಾಟೆ ತೆಗೆದುಕೊಂಡಿದ್ದಾರೆ.

    ಇದೇ ಸಂದರ್ಭದಲ್ಲಿ ಮಾಧ್ಯಮದವರನ್ನು ಹತ್ತಿರ ಕರೆದು ಎಷ್ಟು ದಿನ ಅಂತ ನನ್ನನ್ನೇ ಕಾಯ್ತಿರೋ ಬೇಜರಾಗೊಲ್ವಾ..? ಮತ್ತೆ ಸಿಕ್ತೀನಿ ಬಿಡ್ರೋ ಅಂತ ಹೇಳಿದ್ದಾರೆ.

    https://www.youtube.com/watch?v=Gw8qDp91QbA

    https://www.youtube.com/watch?v=7FMDBk4SZIs

    https://www.youtube.com/watch?v=BSYzOrn_xUM

  • ರವಿ ಬೆಳಗೆರೆ ಹತ್ಯೆಗೂ ನಡೆದಿತ್ತಂತೆ ಸಂಚು – ಗನ್ ಹಿಂದಿನ ರಿಯಲ್ ಕಹಾನಿ

    ರವಿ ಬೆಳಗೆರೆ ಹತ್ಯೆಗೂ ನಡೆದಿತ್ತಂತೆ ಸಂಚು – ಗನ್ ಹಿಂದಿನ ರಿಯಲ್ ಕಹಾನಿ

    ಬೆಂಗಳೂರು: ಸಹೋದ್ಯೋಗಿ, ಪತ್ರಕರ್ತ ಸುನಿಲ್ ಹೆಗ್ಗರವಳ್ಳಿಯನ್ನು ಕೊಲೆ ಮಾಡಲು ಸುಪಾರಿ ನೀಡಿರುವ ಆರೋಪದ ಮೇಲೆ ರವಿಬೆಳಗೆರೆ ಬಂಧನವಾಗಿದ್ದು, ಈ ಬೆನ್ನಲ್ಲೇ ರವಿಬೆಳಗೆರೆ ಹತ್ಯೆಗೂ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ರವಿ ಹತ್ಯೆಗೆ ಸ್ವಾಮೀಜಿ ಹಾಗೂ ಸಂಪಾದಕರೊಬ್ಬರಿಂದ ಸುಪಾರಿ ನೀಡಿರುವ ವಿಚಾರವೊಂದು ಬೆಳಕಿಗೆ ಬಂದಿದೆ. ತ್ಯಾಗಿ ಎಂಬವರಿಂದ ಈ ಸುಪಾರಿ ಸಂಚಿನ ಬಗ್ಗೆ ರವಿ ಬೆಳಗೆರೆಗೆ ಮಾಹಿತಿ ದೊರಕಿದ್ದು, ರೌಡಿ ಕುಳ್ಳಶಾಂತನಿಗೆ ಸುಪಾರಿ ಕೊಟ್ಟು ರವಿ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.

    ಆದ್ರೆ ಆ ರೌಡಿಯನ್ನ ಗೆಳೆಯರೇ ರವಿಬೆಳೆಗೆರೆ ಮುಂದೆ ಕರೆತಂದಿದ್ರಂತೆ. ಈ ವೇಳೆ ಅವರು ರವಿ ಬೆಳಗೆರೆಯನ್ನು ಕಂಡು ಶಾಕ್ ಆಗಿದ್ರಂತೆ. ಇದೇ ಸಂದರ್ಭದಲ್ಲಿ ಸುಪಾರಿ ಕಿಲ್ಲರ್ ಹತ್ಯೆಗೆ ಡೀಲ್ ಕೊಟ್ಟಿದ್ದವರ ಮಾಹಿತಿ ನೀಡಿದ್ದನಂತೆ. ಹತ್ಯೆಗೆ ಸುಪಾರಿ ಕೊಟ್ಟ ಸ್ವಾಮೀಜಿ, ಸಂಪಾದಕರ ಹೆಸರು ಕೇಳಿ ರವಿ ಬೆಳಗೆರೆಗೆ ಶಾಕ್ ಆಗಿತ್ತಂತೆ. ಹೀಗಾಗಿ ರವಿಬೆಳಗೆರೆ ಅಂದೇ ಒಂದು ರಿವಾಲ್ವರ್ ಬೇಕೆಂದು ಡಿಸೈಡ್ ಮಾಡಿದ್ದರಂತೆ. ಈವರೆಗೆ ರವಿ ಎರಡು ಬಾರಿ ರಿವಾಲ್ವರ್ ಬಳಸಿದ್ದಾರೆ ಎಂಬ ಮಾಹಿತಿಯೊಂದು ದೊರೆತಿದೆ.

  • ಪತ್ರಕರ್ತ ರವಿ ಬೆಳಗೆರೆ ಸುಪಾರಿ ಕೇಸಲ್ಲಿ ಹೊಸ ಟ್ವಿಸ್ಟ್!

    ಪತ್ರಕರ್ತ ರವಿ ಬೆಳಗೆರೆ ಸುಪಾರಿ ಕೇಸಲ್ಲಿ ಹೊಸ ಟ್ವಿಸ್ಟ್!

    ಬೆಂಗಳೂರು: ಸುಮಾರು 14 ವರ್ಷ ಜೊತೆಗಿದ್ದ ಸಹೋದ್ಯೋಗಿ ಹಾಗೂ ತನ್ನ ಎರಡನೇ ಮಗ ಎಂದೇ ಕರೆದಿದ್ದ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ನೀಡಿರುವ ಸುಪಾರಿ ಕೇಸ್ ಮತ್ತೊಂದು ತಿರುವು ಪಡೆದಿದೆ.

    ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ರೂಪಿಸಿದ ಮೊದಲ ಸಂಚು ವಿಫಲವಾದ ಕೂಡಲೇ ಹಂತಕರಿಗೆ ತಲೆಮರೆಸಿಕೊಳ್ಳುವಂತೆ ರವಿ ಬೆಳಗೆರೆ ಸೂಚಿಸಿದ್ದರು. ಆಗಸ್ಟ್ 28ರ ಮೊದಲ ಪ್ಲಾನ್ ವಿಫಲವಾದ ಬಳಿಕ ಅಂದರೆ, ತಿಂಗಳು ಕಳೆದ ಬಳಿಕ ಮತ್ತೊಮ್ಮೆ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸ್ಕೆಚ್ ಹಾಕಿದ್ದರು. ಆದ್ರೆ ಅಂದು ಕೂಡ ಸುನಿಲ್ ಹೆಗ್ಗರವಳ್ಳಿ ಸ್ವಲ್ಪದ್ರಲ್ಲೇ ಪಾರಾಗಿದ್ದರು. ಇದನ್ನೂ ಓದಿ: ನನ್ನ ಕೊಲೆಗೆ ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದರೆಂದು ಕೇಳಿ ಶಾಕ್ ಆಗಿದೆ: ಸುನೀಲ್ ಹೆಗ್ಗರವಳ್ಳಿ

    ಸುನಿಲ್ ಮನೆಯಲ್ಲಿ ಸಿಸಿಟಿವಿ ಇದ್ದಿದ್ದರಿಂದ ಮೊದಲ ಪ್ಲಾನ್ ವಿಫಲವಾದ ಬಳಿಕ, 2ನೇ ಬಾರಿ ಬೇರೆ ಕಡೆ ಹತ್ಯೆಗೆ ಸಂಚು ರೂಪಿಸಿದ್ದರು. ಕರೆ ಮಾಡಿ ಬೇರೆ ಕಡೆಗೆ ಕರೆಸಿಕೊಂಡು ಹತ್ಯೆಗೆ ಪ್ಲಾನ್ ಮಾಡಿದ್ದರು. ತನ್ನ ಆಪ್ತನ ಮೊಬೈಲ್‍ನಿಂದ 20ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು. ಆದ್ರೆ ಈ ಬಾರಿ ಸುನಿಲ್ ಹೆಗ್ಗರವಳ್ಳಿ ಧರ್ಮಸ್ಥಳದಲ್ಲಿ ಇದ್ದಿದ್ರಿಂದ ಪಾರಾಗಿದ್ದರು. ಇದರಿಂದ ಬೇಸತ್ತು ಶಶಿಧರ್ ಮುಂಡೇವಾಡಗೆ ರವಿಬೆಳಗೆರೆ ಬೈದು ಕಳುಹಿಸಿದ್ದರು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: Exclusive: ರವಿಬೆಳಗೆರೆ ರಾಕ್ಷಸ, ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ: ಸುನೀಲ್ ಹೆಗ್ಗರವಳ್ಳಿ

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಶುಕ್ರವಾರ ಬಂಧಿಸಿತ್ತು. ಆತನ ವಿಚಾರಣೆ ವೇಳೆ ರವಿ ಬೆಳೆಗೆರೆಯವರು ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: Exclusive: ಮದ್ವೆ ಮನೆಯಲ್ಲಿ ಊಟ ಮಾಡಿ ಸಿಎಂ ಕೊಟ್ಟ ಆದೇಶದಿಂದ ಬೆಳಗೆರೆ ಅರೆಸ್ಟ್!

    ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎಂಬುದಾಗಿ ತಿಳಿದುಬಂದಿತ್ತು. ಸದ್ಯ ರವಿಬೆಳಗೆರೆ ಸಿಸಿಬಿ ವಶದಲ್ಲಿದ್ದಾರೆ. ಇದನ್ನೂ ಓದಿ: ರವಿ ಬೆಳಗೆರೆ ಹೆಸರನ್ನ ಸುಪಾರಿ ಹಂತಕ ಬಾಯ್ಬಿಟ್ಟಿದ್ದು ಹೇಗೆ? ಬೆಳಗೆರೆ ಕಚೇರಿಯಲ್ಲಿ ಏನು ಸಿಕ್ಕಿದೆ?

    https://www.youtube.com/watch?v=X0xApCHxdCQ

    https://www.youtube.com/watch?v=x86o3NINFFM

    https://www.youtube.com/watch?v=J4W3Dqe2jrY

    https://www.youtube.com/watch?v=NVU9MGtsE60

  • ಗೌರಿ ಹತ್ಯೆ ಕೇಸ್ ಮುಚ್ಚಿ ಹಾಕೋಕೆ ಸ್ಕೆಚ್- ಸರ್ಕಾರದ ವಿರುದ್ಧ ಬಿಜೆಪಿ ಕೆಂಡಾಮಂಡಲ

    ಗೌರಿ ಹತ್ಯೆ ಕೇಸ್ ಮುಚ್ಚಿ ಹಾಕೋಕೆ ಸ್ಕೆಚ್- ಸರ್ಕಾರದ ವಿರುದ್ಧ ಬಿಜೆಪಿ ಕೆಂಡಾಮಂಡಲ

    ಬೆಂಗಳೂರು: ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ಬಂಧಿಸೋ ಮೂಲಕ ಗೌರಿ ಲಂಕೇಶ್ ಹತ್ಯೆ ಕೇಸ್‍ನಿಂದ ಜನರನ್ನು ದಿಕ್ಕು ತಪ್ಪಿಸಲು ಸರ್ಕಾರ ಯತ್ನಿಸುತ್ತಿದೆ ಅಂತಾ ಬಿಜೆಪಿ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

    ಗೌರಿ ಲಂಕೇಶ್ ಹಂತಕರ ಬಂಧನಕ್ಕೆ ನೇಮಕಗೊಂಡಿರುವ ಎಸ್‍ಐಟಿ ಕೆಲಸವೇ ಮಾಡುತ್ತಿಲ್ಲ. ಎಸ್‍ಐಟಿ ತಂಡ ಗಣೇಶನ ಮಾಡಿ ಅಂದ್ರೆ ಅವರ ಅಪ್ಪನನ್ನು ಮಾಡ್ತಿದೆ. ಬೆಳಗೆರೆ ಸುಪಾರಿ ಪ್ರಕರಣವನ್ನು ದೊಡ್ಡದು ಮಾಡಲು ಹೊರಟಿದೆ. ಆದ್ರೆ ಗೌರಿ ಕೇಸೇ ಬೇರೆ. ಹಂತಕರ ಬಗ್ಗೆ ಯಾವುದೇ ಸುಳಿವು ಅವರಿಗೆ ಸಿಕ್ಕಿಲ್ಲ. ಜನರ ಮನಸ್ಸನ್ನು ಬೇರೆ ಕಡೆ ತಿರುಗಿಸಲು ರವಿ ಬೆಳೆಗೆರೆ ಪ್ರಕರಣವನ್ನು ಅದಕ್ಕೆ ಲಿಂಕ್ ಮಾಡುತ್ತಿದ್ದಾರೆ. ರವಿ ಬೆಳೆಗೆರೆ ಸುಪಾರಿ ಪ್ರಕರಣ ತನಿಖೆಗೆ ಬೇರೆ ಪೊಲೀಸ್ ವಿಭಾಗಗಳಿವೆ. ಎಸ್‍ಐಟಿ ತನಗೆ ವಹಿಸಿದ ಮೂಲ ಕರ್ತವ್ಯವನ್ನೇ ಮೆರೆತು ಬೇರೆ ಮಾಡಲು ಹೊರಟಿದೆ ಅಂತ ಅಂತ ಕಿಡಿಕಾರಿದ್ರು.

    ಗೌರಿ ಹಂತಕರ ಬಗ್ಗೆ ಯಾವುದೇ ಸುಳಿವು ಅವರಿಗೆ ಸಿಕ್ಕಿಲ್ಲ. ಆದ್ರೆ ವಹಿಸಿದ ಮೂಲ ಕರ್ತವ್ಯವನ್ನು ಬಿಟ್ಟು ಬೆಳಗೆರೆ ಕೇಸ್ ಹಿಂದೆ ಬಿದ್ದಿದೆ. ಒಟ್ಟಿನಲ್ಲಿ ವಿಷಯಾಂತರ ಮಾಡಲು ಸರ್ಕಾರ ಹೊರಟಿದೆ ಅಂತಾ ಸಿಡಿಮಿಡಿಗೊಂಡಿದ್ದಾರೆ.

    ಪೊಲೀಸ್ ಇಲಾಖೆ ಯಾರ ಹಿಡಿತದಲ್ಲಿ ಇದೆ ಅನ್ನೋದೆ ಗೊತ್ತಾಗ್ತಿಲ್ಲ. ಕೆಂಪಯ್ಯ ಹಿಡಿತದಲ್ಲೇ ಪೊಲೀಸ್ ಇಲಾಖೆ ಇದೆ. ರಾಮಲಿಂಗಾರೆಡ್ಡಿ ಕೂಡ ಬೇರೆ ಗೃಹ ಸಚಿವರಂತೆ ಕೆಂಪಯ್ಯ ಕೆಳಗೆ ಕಾರ್ಯನಿರ್ವಹಿಸ್ತಿದ್ದಾರೆ. ಗೌರಿ ಹತ್ಯೆ ಹಂತಕರನ್ನ ಹಿಡಿದೇ ಬಿಡ್ತೀವಿ ಅಂತಾ ಸುಮ್ನೆ ಹೇಳ್ತಿದ್ದಾರೆ ಅಷ್ಟೇ ಅಂತ ಅವರು ಆರೋಪಿಸಿದ್ದಾರೆ.

     

  • ಪತ್ರಕರ್ತ ರವಿ ಬೆಳಗೆರೆ ಬಂಧನ: ಬಿಗ್ ಬುಲೆಟಿನ್ ನಲ್ಲಿ `ಬಿಗ್’ ಚರ್ಚೆಯ ಸಂಪೂರ್ಣ ವರದಿ

    ಪತ್ರಕರ್ತ ರವಿ ಬೆಳಗೆರೆ ಬಂಧನ: ಬಿಗ್ ಬುಲೆಟಿನ್ ನಲ್ಲಿ `ಬಿಗ್’ ಚರ್ಚೆಯ ಸಂಪೂರ್ಣ ವರದಿ

    ಬೆಂಗಳೂರು: ಸುಮಾರು 14 ವರ್ಷ ಜೊತೆಗಿದ್ದ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಪತ್ರಕರ್ತ ರವಿಬೆಳಗೆರೆಯನ್ನು ಪೊಲೀಸರು ಬಂಧಿಸಿದ್ದು. ಈ ಕುರಿತು ಶನಿವಾರದ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಖ್ಯಾತ ವಕೀಲ ಎಂಟಿ ನಾಣಯ್ಯ ಹಾಗೂ ಠಾಗೂರ್ ಜೊತೆ ನಡೆದ ಚರ್ಚೆಯ ಸಂಪೂರ್ಣ ವಿವರ ಇಲ್ಲಿದೆ.

    * ಅನುಮಾನ ಬಂದ ತಕ್ಷಣ ಬಂಧನ ಮಾಡ್ತಾರಾ? ಅಥವಾ ಅದಕ್ಕೆ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡು ಬಳಿಕ ಕ್ರಮ ಕೈಗೊಳ್ಳುತ್ತಾರಾ?
    ಅನುಮಾನ ಬಂದ ತಕ್ಷಣ ಓರ್ವ ವ್ಯಕ್ತಿಯನ್ನು ಬಂಧಿಸಲು ಸಾಧ್ಯವಾಗಲ್ಲ. ಯಾಕಂದ್ರೆ ಒಬ್ಬ ವ್ಯಕ್ತಿಯ ಮೇಲೆ ಅನುಮಾನ ಬಂದ್ರೆ ಅದು ಸ್ವಲ್ಪ ಮಟ್ಟಿಗಾದ್ರು ಸಾಕ್ಷಿಭೂತವಾಗಿರುತ್ತೆ. ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಭಾರೀ ದೊಡ್ಡ ಆಘಾತವಾಗುತ್ತೆ ಅಂತಂದ್ರೆ ಮಾತ್ರ ಆತನನ್ನು ಬಂಧಿಸಲಾಗುತ್ತೆ.

    ನಿಮಗೆ ಈ ಸುದ್ದಿ ಕೇಳಿ ಅಚ್ಚರಿಯಾಯ್ತಾ ಅಂತ ಠಾಗೋರ್ ಅವರನ್ನು ಕೇಳಿದಾಗ, ಅವರು ನನಗೆ ನಿಜಕ್ಕೂ ಇದೊಂದು ಅಚ್ಚರಿ ಅಂತ ಅನಿಸಿಲ್ಲ. ಯಾಕಂದ್ರೆ ನಾನು ಅವರನ್ನು ಕಿರಿತೆರೆಯಿಂದ, ಅವರು ಬರೆದ ಪುಸ್ತಕಗಳ ಹಾಗೂ ಕಪ್ಪು ಹಣದ ಬಗ್ಗೆ ಬರೆದ ಲೇಖನಗಳನ್ನು ನಾನು ಓದುತ್ತಾ ಬಂದಿದ್ದೇನೆ. ಅವರು ಬೆಳೆದು ಬಂತ ರೀತಿಯನ್ನು ನೋಡಿದ್ರೆ ಅಚ್ಚರಿ ಅನಿಸಲ್ಲ. ಅಧಿಕಾರ ಮತ್ತು ಹಣದ ಮದ ಏರಿದ ಯಾರಿಗೂ ತಮ್ಮ ಪೂರ್ವ ಜನ್ಮ ಸ್ಮರಣೆಯಿರುವುದಿಲ್ಲ. ಇವರು ಈ ಪತ್ರಿಕೆಯನ್ನು ಆರಂಭಿಸುವ ಸಮಯದಲ್ಲಿ ನಾನು ವಿಜಯಪುರದಲ್ಲಿ ಎಸ್‍ಪಿಯಾಗಿದ್ದೆ. ಆ ವೇಳೆ ನನ್ನ ಇನ್ನೊಬ್ಬ ಆತ್ಮೀಯ ಸಹೋದ್ಯೋಗಿ ಇವರನ್ನು ನನ್ನ ಬಳಿ ಕಳುಹಿಸಿಕೊಟ್ಟು, ಇವರೊಬ್ಬ ಒಳ್ಳೆಯ ಪತ್ರಕರ್ತ, ಸಾಹಿತಿ. ತುಂಬಾ ಚೆನ್ನಾಗಿ ಲೇಖನಗಳನ್ನು ಬರೆಯುತ್ತಾರೆ. ಸ್ವಲ್ಪ ಅವರಿಗೆ ಸಹಾಯ ಮಾಡಿ ಅಂತ ಹೇಳಿದ್ರು.

    ಈ ವೇಳೆ ನಾನು ಏನು ಸಹಾಯ ಮಾಡಲಿ ಅಂದಾಗ ಅವರು ಏನಿಲ್ಲಾ ಕೆಲವೊಂದು ಪ್ರಕರಣಗಳ ನೈಜತೆಯನ್ನು ಅವರಿಗೆ ಕೊಡಿ ಅಂತ ಹೇಳಿದ್ರು. ಅವಾಗ ನಾನು ತನಿಖೆಯಲ್ಲಿದ್ದರೆ ಅಂತಹ ವಿಷಯಗಳನ್ನು ಕೊಡಲು ಸಾಧ್ಯವಿಲ್ಲ. ತನಿಖೆ ಆದ ಬಳಿಕ ಚಾರ್ಜ್ ಶೀಟ್ ನಂತ್ರ ಪ್ರಕರಣಗಳ ವಿಷಯಗಳನ್ನು ಕೊಡಬಹುದು ಅಂತ ಹೇಳಿದ್ದೆ ಅಂತ ಅವರು ವಿವರಿಸಿದ್ರು.

    * ಕಾನೂನಾತ್ಮಕವಾಗಿ ಈ ಪ್ರಕರಣ ಗಟ್ಟಿಯಾಗಿದೆಯಾ?
    ಅವನೊಬ್ಬ ಹೇಳಿಕೆ ಕೊಟ್ಟ ಅಂತ ಪೊಲೀಸರು ರವಿಬೆಳಗೆರೆ ಅವರನ್ನು ಬಂಧಿಸಿದ್ದಾರೆ. ಅವರ ಕಚೇರಿಗೆ ಬಂದು ಅಲ್ಲಿ ಸಾಕಷ್ಟು ಆಯುಧಗಳು ಸಿಕ್ಕಿದ್ದವು. ಆದ್ರೆ ಒಬ್ಬ ಮಾಧ್ಯಮ ವ್ಯಕ್ತಿ ಅನಧಿಕೃತವಾಗಿ ಇಂತಹ ಆಯುಧಗಳನ್ನು ಇಟ್ಟುಕೊಳ್ಳುವ ಅವಶ್ಯಕತೆ ಇದೆಯಾ ಅಂತ ನಾಣಯ್ಯ ಪ್ರಶ್ನಿಸಿದ್ರು.

    * ಒಂದು ಗನ್ ಇಟ್ಕೊಂಡವನು 40-50 ಲೈವ್ ಕಾಟ್ರೆಜನ್ನು ಇಟ್ಟುಕೊಳ್ಳಲು ಅವಕಾಶವಿದೆಯಾ?
    ಇಲ್ಲ. ಯಾವುದೇ ಒಂದು ಆಯುಧ ಪರವಾನಿಗೆ ಕೊಡಬೇಕಾದ್ರೆ ಅವನಿಗಿರುವಂತಹ ಭಯ, ಹೆದರಿಕೆ ಅಥವಾ ಬೆದರಿಕೆಯ ಆಧಾರದ ಮೇಲೆ ಸಾಧರಣವಾಗಿ ಸುಮಾರು 20 ಗುಂಡುಗಳನ್ನು ಮಾತ್ರ ಇಟ್ಟುಕೊಳ್ಳಬಹುದು. ಅದರಕ್ಕಿಂದ ಜಾಸ್ತಿ ಅವಕಾಶವಿಲ್ಲ ಅಂತ ಠಾಕೋರ್ ಹೇಳಿದ್ರು.

    ಅಲ್ಲದೆ ಒಂದು ಆಯುಧಕ್ಕೆ ಮಾತ್ರ ಅವಕಾಶವಿದೆ ಹೊರತು ಎರಡೆರಡು ಆಯುಧಕ್ಕೆ ಯಾವತ್ತು ಅವಕಾಶ ಕೊಡಲ್ಲ. ಎರಡನೇ ಆಯುಧ ಡಬಲ್ ಬ್ಯಾರೆಲ್ ಗನ್ ಆಗಿರುತ್ತದೆ. ತುಂಬಾ ದೂರ ಪ್ರಯಾಣ ಮಾಡುವಾಗ ಸ್ವಯಂ ರಕ್ಷಣೆಗಾಗಿ ಮಾತ್ರ ಇದನ್ನು ಇಟ್ಟುಕೊಳ್ಳಬಹುದು. ಆದ್ರೆ 50 ಗುಂಡುಗಳನ್ನು ಇಟ್ಟುಕೊಂಡಿರುವುದು ದುರುದ್ದೇಶವೇ ಸರಿ ಅಂತ ಅವರು ವಿವರಿಸಿದ್ರು.

    ಕಾನೂನು ಬಾಹಿರವಾಗಿ ಆಯುಧಗಳು ಹಾಗೂ ಪ್ರಾಣಿಗಳ ಚರ್ಮಗಳನ್ನು ಇಟ್ಟುಕೊಂಡಿರುವುದು ಸರಿಯಲ್ಲ. ಅದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಸದ್ಯ ರವಿ ಬೆಳೆಗೆರೆ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಬಂಧನ ಮಾಡಿದ 90 ದಿನದೊಳಗಡೆ ಚಾರ್ಜ್‍ಶೀಟ್ ಹಾಕ್ಬೇಕು ಅಂತ ವಕೀಲ ನಾಣಯ್ಯ ಹೇಳಿದ್ರು.

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ವೇಳೆ ವಿಶೇಷ ತನಿಖಾ ತಂಡ ಬೆಂಗಳೂರಿನಲ್ಲಿ ಸುಪಾರಿ ಕಿಲ್ಲರ್ ವಿಜಯಪುರದ ಚಡಚಣದ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಶುಕ್ರವಾರ ಬಂಧಿಸಿತ್ತು. ಆತನ ವಿಚಾರಣೆ ವೇಳೆ ರವಿ ಬೆಳೆಗೆರೆಯವರು ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಲಾಗಿತ್ತು.

    ರವಿ ಬೆಳಗೆರೆ ಎರಡನೇ ಪತ್ನಿ ಜತೆ ಹಾಯ್ ಬೆಂಗಳೂರು ಪತ್ರಿಕೆ ವರದಿಗಾರ ಸನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧದ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸುನೀಲ್ ಹತ್ಯೆ ಮಾಡಲು ನಿರ್ಧರಿಸಿದ್ದ ಬೆಳಗೆರೆ ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಗೆ 30 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದರು ಎಂಬುದಾಗಿ ತಿಳಿದುಬಂದಿತ್ತು.

    https://www.youtube.com/watch?v=3nx-qtIEjcg