Tag: Ravi Srivatsa

  • ಗ್ಯಾಂಗ್ಸ್ ಆಫ್ ಯುಕೆ: ಮತ್ತೆ ನೈಜ ಕಥೆ ಆಯ್ಕೆ ಮಾಡಿದ ರವಿ ಶ್ರೀವತ್ಸ

    ಗ್ಯಾಂಗ್ಸ್ ಆಫ್ ಯುಕೆ: ಮತ್ತೆ ನೈಜ ಕಥೆ ಆಯ್ಕೆ ಮಾಡಿದ ರವಿ ಶ್ರೀವತ್ಸ

    ಡೆಡ್ಲಿ ಸೋಮ, ಮಾದೇಶ, ದಶಮುಖ ಹೀಗೆ ಬಹುತೇಕ ಸ್ಟಾರ್ ಚಿತ್ರಗಳನ್ನೇ ನಿರ್ದೇಶಿಸಿದ ರವಿ ಶ್ರೀವತ್ಸ (Ravi Srivatsa)  ಅವರೀಗ ತಮ್ಮದೇ ಆದ ಹೊಸ ನಿರ್ಮಾಣ ಸಂಸ್ಥೆಯೊದನ್ನು ಸ್ಥಾಪಿಸಿದ್ದು,  ಆ ಮೂಲಕ ನಿರ್ಮಾಣವಾಗುತ್ತಿರುವ ‘ಗ್ಯಾಂಗ್ಸ್ ಆಫ್ ಯುಕೆ’ (Gangs of UK) ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಇತ್ತೀಚೆಗೆ ರವಿ ಶ್ರೀವತ್ಸ ಅವರ ‘ಡೆಡ್ಲಿ ಆರ್ಟ್ಸ್’ ಸಂಸ್ಥೆಯ ಲಾಂಛನ ಬಿಡುಗಡೆ ಹಾಗೂ ಗ್ಯಾಂಗ್ಸ್ ಆಫ್ ಯುಕೆ ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ನಿರ್ದೇಶಕ ಕೆವಿ.ರಾಜು ಅವರ ಧರ್ಮಪತ್ನಿ ನೂತನ ನಿರ್ಮಾಣ ಸಂಸ್ಥೆಯ ಲಾಂಛನಕ್ಕೆ ಚಾಲನೆ ನೀಡಿದರು.

    ಕನ್ನಡದ ಹಿರಿಯ ನಿರ್ದೇಶಕ‌  ಕೆ.ವಿ. ರಾಜು ಅವರ ಬಳಿ ಬರವಣಿಗೆ, ನಿರ್ದೇಶನದ ಪಾಠ ಕಲಿತಿದ್ದ ರವಿ ಶ್ರೀವತ್ಸ,‌ ಆರಂಭದಲ್ಲಿ ಕೆವಿ. ರಾಜು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವಾಗ ವಿದ್ಯೆ ಕಲಿಸಿದ ಗುರುಗಳನ್ನು ನೆನೆದು ಗಗ್ಗದಿತರಾದ ಅವರ  ಕಣ್ಣಲ್ಲಿ ಕಂಬನಿಧಾರೆ ಹರಿಯಿತು. ನಂತರ ಮಾತನಾಡುತ್ತ ನಾನು ಒಳ್ಳೆ ಸಿನಿಮಾ ಮಾಡ್ಬೇಕು ಅಂದಾಗೆಲ್ಲ ಅವರು ಹಿಂದೆ ನಿಲ್ತಿದ್ದರು.  2018ರಲ್ಲಿ ಮಾಡಿಕೊಂಡಿದ್ದ ಕಥೆಯಿದು. ಅವರನ್ನು  ಮಿಸ್ ಮಾಡಿಕೊಂಡ ಮೇಲೆ ಎಂ.ಎಸ್. ರಮೇಶ್ ನನಗೆ ಜೊತೆಯಾದರು. ಕಳೆದ ಡಿಸೆಂಬರ್ ನಲ್ಲಿ ರಮೇಶ್ ಅವರಿಗೆ ಈ ಕಥೆ ಹೇಳಿದಾಗ ಯಾರೆಲ್ಲ ಕಲಾವಿದರಿರ್ತಾರೆ ಅಂತ ಕೇಳಿದರು. ಒಟ್ಟು 56 ಕಲಾವಿದರಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಏ.18ಕ್ಕೆ ಚಿತ್ರದ ಮುಹೂರ್ತ ನಡೆಸಿ ಶೂಟಿಂಗ್ ಪ್ರಾರಂಭಿಸಿದೆವು. ಆನಂತರದಲ್ಲಿ  ಒರಟ ಪ್ರಶಾಂತ್, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್, ಪದ್ಮಾ ವಾಸಂತಿ, ಮುನಿ ಹೀಗೆ ಹೊಸಬರ ಜೊತೆ ಹಳಬರೂ ನಮ್ಮ ಬಳಗಕ್ಕೆ ಸೇರ್ಪಡೆಯಾದರು. ಕಳೆದ ಶನಿವಾರ ಚಿತ್ರದ ಶೂಟಿಂಗ್ ಮುಗಿಸಿದೆವು.

    ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್ ನಲ್ಲಿ ನಡೆದ ಘಟನೆ ಇಟ್ಟುಕೊಂಡು ಮಾಡಿದ ಚಿತ್ರಕಥೆಯಿದು. ರಕ್ತ ತನ್ನ ಕುರುಹನ್ನು ಬಿಟ್ಟು ಹೋಗುತ್ತೆ, ಜಿದ್ದು ಒಬ್ಬರಿಂದ ಒಬ್ಬರಿಗೆ ಟ್ರಾವೆಲ್ ಆಗುತ್ತೆ. ಇದು ಚಿತ್ರದ ಕಾನ್ಸೆಪ್ಟ್. ಅಲ್ಲಿನ ಡಿಸಿಪಿ ನಮಗೆ ತುಂಬಾ ಸಹಾಯ ಮಾಡಿದರು. ನಿರ್ಮಾಪಕರಾಗಿ ಎಲ್.ಎನ್. ರೆಡ್ಡಿ ಅವರೂ ನನ್ನಜೊತೆ  ಕೈಜೋಡಿಸಿದರು. ಉತ್ತರ ಕರ್ನಾಟಕದ ಹತ್ಯಾಕಾಂಡ ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದೆ ಎಂದು ಹೇಳಿದರು.

    ನಂತರ ಎಂ.ಎಸ್‌.ರಮೇಶ್ ಮಾತನಾಡಿ ನಾವಿಲ್ಲಿ ನಿಂತಿದ್ದೇವೆ ಅಂದ್ರೆ ಅದಕ್ಕೆ ಕೆ.ವಿ.ರಾಜು ಅವರೇ ಕಾರಣ. ಯಾವಾಗಲೂ ನಿನ್ನ ಕೆಲಸವನ್ನು ನೀನು ನಂಬು ಅಂತಿದ್ದರು. ಬಾಗಲಕೋಟೆಯಲ್ಲಿ ಡಿಸಿ ಜಾನಕಿ, ಎಸ್ಪಿ ಹೀಗೆ ಎಲ್ಲರೂ ನಮಗೆ ಸಪೋರ್ಟ್ ಮಾಡಿದರು. ಬಾಲಣ್ಣನ ಥರವೇ ಇರುವ ಟಂಕಸಾಲೆ ಉಮೇಶ್, ಮಹಂತೇಶ್ ಹುಲ್ಲೂರು ಇಂಥ ಸ್ಥಳೀಯ ಪ್ರತಿಭೆಗಳನ್ನು ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ರಾ ಫೀಲ್ ಕೊಡುವಂಥ ಡೈಲಾಗ್ ಗಳನ್ನು ಇಲ್ಲಿ  ಕಾಣಬಹುದು ಎಂದರು.

     

    ಕೆವಿ‌. ರಾಜು ಅವರ ಪುತ್ರ ಅಮೋಘ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನು ಉಪಾಧ್ಯ, ಪ್ರವೀಣ್, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್ ಹೀಗೆ ಸಾಕಷ್ಟು ನವ ಪ್ರತಿಭೆಗಳನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಪತ್ರಕರ್ತ ನವೀನ್ ಬಂಗಾರಪ್ಪ ಭೋಸರಾಜ ಹೆಸರಿನ ಉಸ್ತುವಾರಿ ಸಚಿವರಾಗಿ ನಟಿಸಿದ್ದಾರೆ. ವಿಶೇಷವಾಗಿ ಶಿಶುನಾಳ‌ ಷರೀಫರ 8 ಗೀತೆಗಳನ್ನು ತೆಗೆದುಕೊಂಡು ಬಿಟ್ಸ್ ಮಾಡಿದ್ದೇವೆ. ಒಟ್ಟು 9 ಹಾಡುಗಳು ಚಿತ್ರದಲ್ಲಿದ್ದು, ಸಾಧು ಕೋಕಿಲ್ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ. ಡಿಸೆಂಬರ್ ಅಥವಾ ಜನವರಿಗೆ ತೆರೆಮೇಲೆ ಬರಬೇಕೆಂದು ಪ್ಲಾನ್ ಮಾಡಿಕೊಂಡಿದ್ದೇವೆ ಎಂಬುದಾಗಿಯೂ ರವಿ ಶ್ರೀವತ್ಸ ಹೇಳಿದರು.

  • ಮತ್ತೊಮ್ಮೆ ಭೂಗತ ಲೋಕದ ದರ್ಶನ ಮಾಡಿಸಲಿದ್ದಾರೆ ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸ- ಸೆಟ್ಟೇರಿದ ‘ಎಂಆರ್’ ಸಿನಿಮಾ

    ಮತ್ತೊಮ್ಮೆ ಭೂಗತ ಲೋಕದ ದರ್ಶನ ಮಾಡಿಸಲಿದ್ದಾರೆ ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸ- ಸೆಟ್ಟೇರಿದ ‘ಎಂಆರ್’ ಸಿನಿಮಾ

    ಬೆಂಗಳೂರು: ಕೊನೆಗೂ ಮುತ್ತಪ್ಪ ರೈ ಜೀವನ ಕಥೆಯಾಧಾರಿತ ಸಿನಿಮಾ ಸೆಟ್ಟೇರಿದೆ. ಹೌದು, ಮುತ್ತಪ್ಪ ರೈ ಬದುಕಿರುವಾಗಲೇ ಅವರ ಬದುಕನ್ನು ತೆರೆ ಮೇಲೆ ತರುವ ಪ್ರಯತ್ನಗಳು ನಡೆದಿತ್ತು. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೂಡ ರೈ ಜೀವನವನ್ನು ತೆರೆ ಮೇಲೆ ತರುವ ಬಗ್ಗೆ ಮಾತನಾಡಿದ್ದರು. ಆದರೆ ಸಾಧ್ಯವಾಗರಲಿಲ್ಲ. ಇದೀಗ ಸ್ಯಾಂಡಲ್‍ವುಡ್ ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸ ಮುತ್ತಪ್ಪ ರೈ ಬದುಕಿನ ಕಥೆಯನ್ನು ತೆರೆ ಮೇಲೆ ತರಲು ಸಿದ್ಧತೆ ನಡೆಸಿದ್ದಾರೆ.

    ಚಿತ್ರಕ್ಕೆ ‘ಎಂಆರ್’ ಎಂದು ಟೈಟಲ್ ಫಿಕ್ಸ್ ಆಗಿದೆ. ರೈ ಬದುಕಿನ ಚಿತ್ರಣ ಮೂರು ಹಂತಗಳಲ್ಲಿ ತೆರೆ ಮೇಲೆ ತರಲು ರವಿ ಶ್ರೀವತ್ಸ ಪ್ಲ್ಯಾನ್ ಮಾಡಿಕೊಂಡಿದ್ದು, ಅದಕ್ಕಾಗಿ ಸಕಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ರೈ ಬದುಕನ್ನು ಅಧ್ಯಯನ ಮಾಡಿರುವ ನಿರ್ದೇಶಕರು, ಇದೀಗ ಅದನ್ನು ಬೆಳ್ಳಿ ಪರೆದೆ ಮೇಲೆ ತರುತ್ತಿದ್ದಾರೆ.

    ‘ಎಂಆರ್’ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದ್ದು, ಮುತ್ತಪ್ಪ ರೈ ಪಾತ್ರದಲ್ಲಿ ಹೊಸ ಪ್ರತಿಭೆ ದೀಕ್ಷಿತ್ ಮಿಂಚುತ್ತಿದ್ದಾರೆ. ರವಿ ಶ್ರೀವತ್ಸ ಅವರ ಡೆಡ್ಲಿ ಸೋಮ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ದೀಕ್ಷಿತ್ ಇದೀಗ ಅದೇ ನಿರ್ದೇಶಕರ ಸಿನಿಮಾದಲ್ಲಿ ಹೀರೋ ಆಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ. ಭೂಗತ ಲೋಕದ ಕ್ರೈಂ ಸ್ಟೋರಿ ಜೊತೆಗೆ ಪ್ರೇಮ್ ಕಹಾನಿಯೂ ಸಿನಿಮಾದಲ್ಲಿದ್ದು, ಮಲಯಾಳಂ ಮೂಲದ ನಟಿ ಸೌಮ್ಯ ಮೆನನ್ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ.

    ಸೌಭಾಗ್ಯ ಲಕ್ಷ್ಮೀ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಎಂಆರ್’ ಚಿತ್ರಕ್ಕೆ ಡೆಡ್ಲಿ ಸೋಮ ಚಿತ್ರಕ್ಕೆ ಬಂಡವಾಳ ಹೂಡಿದ್ದ ಶೋಭ ರಾಜಣ್ಣ ನಿರ್ಮಾಪಕ. ಗುರುಕಿರಣ್ ಸಂಗೀತ ಸಾರಥ್ಯದಲ್ಲಿ ‘ಎಂಆರ್’ ಚಿತ್ರದ ಹಾಡುಗಳು ಮೂಡಿ ಬರಲಿದೆ. ಸದ್ಯ ಮುಹೂರ್ತ ಆಚರಿಸಿಕೊಂಡಿರುವ ಚಿತ್ರತಂಡ, ಹೊಸ ವರ್ಷಕ್ಕೆ ಶೂಟಿಂಗ್ ಆರಂಭಿಸಲಿದ್ದು, ಆಗಸ್ಟ್ ತಿಂಗಳಿನಲ್ಲಿ ಚಿತ್ರದ ಮೊದಲ ಭಾಗವನ್ನು ತೆರೆ ಮೇಲೆ ತರುವ ಪ್ಲ್ಯಾನ್ ಮಾಡಿಕೊಂಡಿದೆ.

  • ರವಿ ಶ್ರೀವತ್ಸ ಒಬ್ಬ ಫ್ಲಾಪ್ ಡೈರೆಕ್ಟರ್, ಯಾವ್ದೇ ಫಿಲ್ಮ್ ಇಲ್ದೇ ಮನೆಯಲ್ಲಿದ್ದಾರೆ: ಸಂಜನಾ

    ರವಿ ಶ್ರೀವತ್ಸ ಒಬ್ಬ ಫ್ಲಾಪ್ ಡೈರೆಕ್ಟರ್, ಯಾವ್ದೇ ಫಿಲ್ಮ್ ಇಲ್ದೇ ಮನೆಯಲ್ಲಿದ್ದಾರೆ: ಸಂಜನಾ

    ಬೆಂಗಳೂರು: ರವಿ ಶ್ರೀವತ್ಸ ಒಬ್ಬ ಫ್ಲಾಪ್ ಡೈರಕ್ಟರ್, ಕೆಲಸ ಕಾರ್ಯ ಇಲ್ಲದೇ ಮನೆಯಲ್ಲಿ ಕುಳಿತಿದ್ದಾರೆ ಎಂದು ನಟಿ ಸಂಜನಾ ಕಿಡಿಕಾರಿದ್ದಾರೆ.

    ತನ್ನ ವಿರುದ್ಧ ರವಿ ಶ್ರೀವತ್ಸವ ಮಾಡಿದ ಆರೋಪಗಳಿಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ರವಿ ಶ್ರೀವತ್ಸ ಮೂರು ಸಿನಿಮಾ ಮಾಡಿದ್ದಾರೆ. ನಾನು 45 ಸಿನಿಮಾ ಮಾಡಿದ್ದೇನೆ. ಈಗ ಯಾವುದೇ ಸಿನಿಮಾ ಇಲ್ಲದೇ ಅವರು ಮನೆಯಲ್ಲಿ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.  ಇದನ್ನು ಓದಿ: ಜಾಗ್ವಾರ್ ಕಾರ್, ಕೋಟಿ ರೂ. ಆಸ್ತಿ ಇರುವ ಸಂಜನಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ: ರವಿ ಶ್ರೀವತ್ಸ ತಿರುಗೇಟು

    ಹುಟ್ಟಿನ ಡೇಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು 1989ರಲ್ಲಿ ಹುಟ್ಟಿದ್ದು ಬೇಕಾದರೆ ಪಾಸ್ ಪೋರ್ಟ್ ಕಳುಹಿಸಿ ಕೊಡುತ್ತೇನೆ. ನಿರ್ಮಾಪಕರಾದ ಶೈಲೇಂದ್ರ ಬಾಬು ಅವರು ಏನು ಮಾಡಿಲ್ಲ. ಈ ಘಟನೆಯಲ್ಲಿ ಅವರನ್ನು ಎಳೆದು ತರೋದು ಸರಿಯಲ್ಲ. ಶೈಲೇಂದ್ರ ಬಾಬು ಅವರ ಬಗ್ಗೆ ಅಂದು ಮಾತನಾಡಿಲ್ಲ. ಇಂದು ಕೂಡ ಮಾತನಾಡುವುದಿಲ್ಲ ಎಂದರು.

    ಎರಡೂವರೆ ಲಕ್ಷ ಪಡೆದ ಸಂಜನಾ ಆಸ್ತಿ ಕೋಟಿಗಟ್ಟಲೇ ಆಗಿದ್ದು, ಈಗ ಜಾಗ್ವಾರ್ ಕಾರಿನಲ್ಲಿ ಓಡುತ್ತಿದ್ದಾರೆ ಐಟಿ ರಿಟನ್ರ್ಸ್ ಪಾವತಿಸಿದ್ದಾರಾ ಎನ್ನುವ ಪ್ರಶ್ನೆಗೆ, ದೇವರು ಅಂತ ಮೇಲೆ ಒಬ್ಬ ಇದ್ದಾನೆ. ಗಂಡ ಹೆಂಡತಿ ಸಿನಿಮಾಗೆ ನಾನು ತೆಗೆದುಕೊಂಡಿದ್ದು ಒಂದುಕಾಲು ಲಕ್ಷ. ಇಂದು ನನ್ನ ಒಂದು ದಿನದ ಸಂಬಳ ಇದು. ನನ್ನ ಬಳಿ ಇರುವ ಆಸ್ತಿ ಹಣಗಳಿಗೆ ಐಟಿ ರಿಟನ್ರ್ಸ್ ಇದೆ. ನನ್ನ ಸ್ಟಾಪ್ ಸಂಬಳ ಬಂದು 14 ಸಾವಿರ ರೂ. ಎಂದು ತಿರುಗೇಟು ನೀಡಿದರು.

    ಗಂಡ ಹೆಂಡತಿ ಸಿನಿಮಾವನ್ನು ನೋಡಿದರೆ ಯಾವ ಯಾವ ಆಂಗಲ್ ಅಲ್ಲಿ ಶೂಟ್ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. 12 ವರ್ಷಗಳ ಹಿಂದೆ ಮಾಡಿದ್ದ್ದ ಈ ಕೆಲಸಕ್ಕೆ ದೇವರು ಅವರಿಗೆ ಕೆಲಸವನ್ನೇ ಕೊಟ್ಟಿಲ್ಲ. ತಂದೆಯ ವಿಚಾರಕ್ಕೆ ಪ್ರತಿಕ್ರಿಯಿಸಿ ನನ್ನ ತಂದೆಗೆ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಇರುವುದು ಇಷ್ಟನೇ ಇಲ್ಲ. ಅವತ್ತಿಗೂ ಇಷ್ಟವಿಲ್ಲ. ಇವತ್ತಿಗೂ ಇಷ್ಟವಿಲ್ಲ. ಇವತ್ತು ಯಾಕೆ ಮಾತನಾಡುವುದಿಲ್ಲ ಎಂದರೆ ನನ್ನ ಸರ್ಕಸ್ ನೋಡಿ ಮಾತನಾಡುತ್ತಿಲ್ಲ ಎಂದರು.

    ನಾಲ್ಕೈದು ಬಾರಿ ಸಿನಿಮಾವನ್ನು ನೋಡಿದ್ದೆ. ಅದಕ್ಕೆ ನಾನು ಸರ್ ನನಗೆ ಮಾಡುವುದಕ್ಕೆ ಧೈರ್ಯ ಬರುತ್ತಿಲ್ಲ. ಸ್ಟಲ್ಪ ಭಯವಾಗುತ್ತಿದೆ ಎಂದು ಹೇಳಿದ್ದೆ. ಅದಕ್ಕೆ ಅವರು ಇಲ್ಲಮ್ಮ ನಾವು ಮಾಡುವುದು ಬರೀ ಸೌತ್ ಇಂಡಿಯನ್ ವರ್ಷನ್. ನಮ್ಮ ನೇಟಿವಿಟಿ ಪ್ರಕಾರವೇ ಮಾಡುತ್ತೇವೆ. ನಮ್ಮ ನೇಟಿವಿಟಿ ಪ್ರಕಾರ ಮಾಡಲಿಲ್ಲ ಅಂದರೆ ಫ್ಯಾಮಿಲಿ ಪ್ರೇಕ್ಷಕರು ಬರುವುದಿಲ್ಲ. ಹೀಗಾದರೆ ಸಿನಿಮಾ ಫ್ಲಾಪ್ ಆಗುತ್ತೆ ಅಂದಿದ್ರು. ಅವತ್ತು ಅವರು ಹೇಳಿದ್ದೆ ಬೇರೆ ಮಾತನಾಡಿದ್ದೇ ಬೇರೆ, ಇಂದು ಮಾತನಾಡುತ್ತಿರುವುದೇ ಬೇರೆ ಎಂದು ಸಂಜನಾ ತಮ್ಮ ಅಸಮಾಧಾನವನ್ನು ಹೊರಹಾಕಿದರು.

    ಸಿನಿಮಾದಲ್ಲಿ 40-50 ಕಿಸ್ ದೃಶ್ಯಗಳನ್ನು ತೆಗೆದಿದ್ದಾರೆ. ಗಂಡ ಹೆಂಡತಿ ಪಾರ್ಟ್ 2 ವಿತ್‍ಔಟ್ ಶೂಟಿಂಗ್ ರಿಲೀಸ್ ಮಾಡುವಷ್ಟು ದೃಶ್ಯಗಳನ್ನು ತೆಗೆದಿದ್ದಾರೆ. ಅದರಲ್ಲಿ ಸೆನ್ಸಾರ್ ಮಂಡಳಿ ಸ್ವಲ್ಪ ಸೀನ್‍ಗಳಿಗೆ ಕತ್ತರಿ ಹಾಕಿದೆ. ಅವರನ್ನೇ ಬೇಕಾದ್ರೆ ಕೇಳಿ. ಕಡಿತಗೊಳಿಸಿದ ಮೇಲೆ 20% ಸಿನಿಮಾವಾಗಿದ್ದು, ಅಷ್ಟು ಅಶ್ಲೀಲವಾಗಿತ್ತು. ಮಾಡಲು ಇಷ್ಟವಿಲ್ಲದಿದ್ದರೂ ಹೆದರಿಸಿ ನಿಮಗೆ ಏನ್‍ಗೊತ್ತು ದೊಡ್ಡು ಚಾನ್ಸ್ ಕೊಡುತ್ತಿದ್ದೇವೆ. ನಿರ್ದೇಶಕರಿಗೆ ಮರ್ಯಾದೆ ಕೊಡುವುದಿಲ್ಲವಾ, ಸಿನಿಮಾ ಕೆಡಿಸುವುದಕ್ಕೆ ಬಂದಿದ್ದೀರಾ ಎಂದು ಹೆದರಿಸಿದ್ದರು ಎಂಬುದಾಗಿ ಹೇಳಿ ಅಂದಿನ ಶೂಟಿಂಗ್ ಘಟನೆಯನ್ನು ನೆನಪಿಸಿದರು.

    ಈಗಾಗಲೇ ಸಮಸ್ಯೆಗಳಿಂದ ಬದುಕುತ್ತಿರುವವರಿಗೆ ಏನೂ ಬೈಯಲು ಇಷ್ಟ ಪಡುವುದಿಲ್ಲ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದಷ್ಟೇ ಹೇಳಬಹುದು ಎಂದು ತಿಳಿಸಿ ಮಾತಿಗೆ ಸಂಜನಾ ವಿರಾಮ ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=_I8lmYouzBk

    https://www.youtube.com/watch?v=bI0PW29YLrU

    https://www.youtube.com/watch?v=Pr1WxEPsJPc

    https://www.youtube.com/watch?v=Fngx4OL8iUY

    https://www.youtube.com/watch?v=EhTC1JWIn1I