Tag: Ravi Shastri

  • IPL ನೂತನ ತಂಡ ಅಹಮದಾಬಾದ್‍ ಕೋಚ್ ಆಗ್ತಾರಂತೆ ರವಿಶಾಸ್ತ್ರಿ?

    IPL ನೂತನ ತಂಡ ಅಹಮದಾಬಾದ್‍ ಕೋಚ್ ಆಗ್ತಾರಂತೆ ರವಿಶಾಸ್ತ್ರಿ?

    ಮುಂಬೈ: ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಯುವ ರವಿಶಾಸ್ತ್ರಿ 2022ರ 15ನೇ ಆವೃತ್ತಿಯ ಐಪಿಎಲ್‍ನಲ್ಲಿ ನೂತನ ತಂಡವಾಗಿರುವ ಅಹಮದಾಬಾದ್ ತಂಡಕ್ಕೆ ಮುಖ್ಯ ಕೋಚ್ ಆಗಲಿದ್ದಾರೆ ಎಂದು ವರದಿಯಾಗಿದೆ.

    2017ರ ಬಳಿಕ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ರವಿಶಾಸ್ತ್ರಿ ಭಾರತ ಟಿ20 ವಿಶ್ವಕಪ್ ಅಭಿಯಾನ ಮುಗಿಸಿದ ಕೂಡಲೇ ಕೋಚ್ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಆ ಬಳಿಕ ಅವರು 2022ರ ಐಪಿಎಲ್‍ಗೆ ಇದೀಗ ಹೊಸದಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್ ತಂಡದ ಪರ ಕೋಚ್ ಆಗಿ ಕಾರ್ಯನಿರ್ವಹಿಸಲು ತಂಡದ ಮಾಲೀಕರಾಗಿರುವ ಸಿವಿಸಿ ಕ್ಯಾಪಿಟಲ್ಸ್, ಶಾಸ್ತ್ರಿ ಅವರನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

    ರವಿಶಾಸ್ತ್ರಿ ಜೊತೆಗೆ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರಿಗೂ ಕೂಡ ಅಹಮದಾಬಾದ್ ಫ್ರಾಂಚೈಸಿ ಆಫರ್ ನೀಡಿದ್ದು, ಈ ಮೂವರು ಕೂಡ ಹೊಸ ತಂಡದೊಂದಿಗೆ ಕೈಜೋಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಮಾಹಿತಿ ಇದೆ. ಈ ನಡುವೆ ಆರ್​ಸಿಬಿ ತಂಡ ಕೂಡ ರವಿ ಶಾಸ್ತ್ರಿ ಅವರನ್ನು ಸಂಪರ್ಕಿಸಿ ಕೋಚ್ ಸ್ಥಾನಕ್ಕೆ ಆಫರ್ ನೀಡಿದೆ ಎಂದು ವರದಿಯಾಗಿದ್ದು, ಸದ್ಯ ರವಿಶಾಸ್ತ್ರಿ ನಡೆ ಯಾವ ಕಡೆ ಎಂಬುದು ಕೆಲದಿನಗಳಲ್ಲಿ ಹೊರಬೀಳಲಿದೆ.

    ಇದೀಗ ರವಿಶಾಸ್ತ್ರಿ ಕೋಚ್ ಹುದ್ದೆಯಿಂದ ನಿರ್ಗಮಿಸುತ್ತಿದ್ದಂತೆ ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ಬಿಸಿಸಿಐ ನೇಮಿಸಿದೆ. ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಬೇಕಿದ್ದು, ಈ ಸರಣಿಯೊಂದಿಗೆ ರಾಹುಲ್ ದ್ರಾವಿಡ್ ಕೋಚ್ ಆಗಿ ತಮ್ಮ ಕಾರ್ಯ ಆರಂಭಿಸಲಿದ್ದಾರೆ. ಇದನ್ನೂ ಓದಿ: ಪಂದ್ಯಕ್ಕೂ ಮೊದಲು ಅಬುಧಾಬಿ ಪಿಚ್‌ ಕ್ಯೂರೇಟರ್‌ ನಿಗೂಢ ಸಾವು

  • ಐದನೇ ಟೆಸ್ಟ್ ಪಂದ್ಯ ರದ್ದು- ಕಾಟಕೊಟ್ಟ ಕೊರೊನಾ

    ಐದನೇ ಟೆಸ್ಟ್ ಪಂದ್ಯ ರದ್ದು- ಕಾಟಕೊಟ್ಟ ಕೊರೊನಾ

    ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ಕೊರೊನಾದಿಂದಾಗಿ ರದ್ದುಗೊಂಡಿದೆ. ಈ ಮೂಲಕ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದ ಭಾರತಕ್ಕೆ ಕೊರೊನಾ ಕಾಟಕೊಟ್ಟಿದೆ.

    4ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತ ತಂಡದ ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಬಳಿಕ ಅವರ ಸಂಪರ್ಕದಲ್ಲಿದ್ದ ಮೂವರು ಸಹಾಯಕ ಸಿಬ್ಬಂದಿಗಳಾದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮತ್ತು ಫಿಸಿಯೋ ನಿತೀನ್ ಪಟೇಲ್ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಇದನ್ನೂ ಓದಿ: ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾಗೆ ಧೋನಿ ಮೆಂಟರ್

    ನಿನ್ನೆ ಮತ್ತೋರ್ವ ಸಹಾಯಕ ಸಿಬ್ಬಂದಿಗೆ ಕೊರೊನಾ ದೃಢವಾದ ಬೆನ್ನಲ್ಲೇ ಭಾರತದ ಅಭ್ಯಾಸವನ್ನು ಮೊಟಕುಗೊಳಿಸಲಾಗಿತ್ತು. ಹಾಗಾಗಿ ಇಂದಿನ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತದ ಆಟಗಾರರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಎಲ್ಲಾ ಆಟಗಾರರ ರಿಪೋರ್ಟ್ ಕೂಡ ನೆಗೆಟಿವ್ ಬಂದಿತ್ತು. ಆದರೂ ಕೂಡ ಅಂತಿಮ ಕ್ಷಣದಲ್ಲಿ ಪಂದ್ಯ ರದ್ದು ಗೊಳಿಸಲು ಉಭಯ ತಂಡಗಳು ಒಪ್ಪಿಗೆ ಸೂಚಿಸಿ ಕೋವಿಡ್-19 ಹಿನ್ನೆಲೆ ಪಂದ್ಯ ರದ್ದುಗೊಂಡಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿದ ಸಿಎಂ

    ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಡ್ರಾ ಆಗಿದ್ದರೆ, ಎರಡನೇ ಪಂದ್ಯ ಭಾರತ ತಂಡ ಜಯಗಳಿಸಿತ್ತು. ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಜಯಗಳಿಸಿ 1-1 ಸಮಬಲ ಸಾಧಿಸಿತ್ತು. ಬಳಿಕ ಓವೆಲ್‍ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿತ್ತು. ಇದೀಗ ಐದನೇ ಟೆಸ್ಟ್ ಪಂದ್ಯ ರದ್ದುಕೊಂಡಿರುವುದರಿಂದ ಸರಣಿ ಗೆಲುವಿನ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

  • ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ರಿಲೀಫ್

    ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ರಿಲೀಫ್

    ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಎಲ್ಲಾ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದೆ.

    4ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತ ತಂಡದ ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಬಳಿಕ ಅವರ ಸಂಪರ್ಕದಲ್ಲಿದ್ದ ಮೂವರು ಸಹಾಯಕ ಸಿಬ್ಬಂದಿಗಳಾದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮತ್ತು ಫಿಸಿಯೋ ನಿತೀನ್ ಪಟೇಲ್ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಇದನ್ನೂ ಓದಿ: ಜಾರ್ಖಂಡ್ ತಂಡದ ಯಶಸ್ಸು- ಬಿಸಿಸಿಐ ಪ್ಲ್ಯಾನ್ ಧೋನಿ ಟೀಂ ಇಂಡಿಯಾ ಮೆಂಟರ್

    ನಿನ್ನೆ ಮತ್ತೋರ್ವ ಸಹಾಯಕ ಸಿಬ್ಬಂದಿಗೆ ಕೊರೊನಾ ದೃಢವಾದ ಬೆನ್ನಲ್ಲೇ ಭಾರತದ ಅಭ್ಯಾಸವನ್ನು ಮೊಟಕುಗೊಳಿಸಲಾಗಿತ್ತು. ಹಾಗಾಗಿ ಇಂದಿನ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆತಂಕ ಆವರಿಸಿತ್ತು. ಆದರೆ ಆ ಬಳಿಕ ನಡೆದ ಕೊರೊನಾ ಟೆಸ್ಟ್ ನಲ್ಲಿ ಎಲ್ಲಾ ಆಟಗಾರರ ರಿಪೋರ್ಟ್ ಕೂಡ ನೆಗೆಟಿವ್ ಬಂದಿದೆ. ಹಾಗಾಗಿ ಯಾವುದೇ ಆತಂಕವಿಲ್ಲದೆ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್- ಕ್ವಾರಂಟೈನ್‍ನಲ್ಲಿ ಮೂವರು ಸಹಾಯಕ ಸಿಬ್ಬಂದಿ

    ಓವೆಲ್‍ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ. ಇದೀಗ ಐದನೇ ಹಾಗೂ ಅಂತಿಮ ಪಂದ್ಯಕ್ಕೆ ತಂಡ ಸಿದ್ಧಗೊಂಡಿದ್ದು, ಪಂದ್ಯದಲ್ಲಿ ಗೆಲುವಿನ ಮೂಲಕ ಸರಣಿ ಗೆಲ್ಲುವ ತವಕದಲ್ಲಿದೆ. ಅತ್ತ ಇಂಗ್ಲೆಂಡ್ ಈ ಪಂದ್ಯವನ್ನು ಗೆದ್ದು ಸರಣಿ ಡ್ರಾ ಮಾಡಿಕೊಳ್ಳುವ ಇರಾದೆಯಲ್ಲಿದೆ.

  • ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್- ಕ್ವಾರಂಟೈನ್‍ನಲ್ಲಿ ಮೂವರು ಸಹಾಯಕ ಸಿಬ್ಬಂದಿ

    ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್- ಕ್ವಾರಂಟೈನ್‍ನಲ್ಲಿ ಮೂವರು ಸಹಾಯಕ ಸಿಬ್ಬಂದಿ

    ಓವೆಲ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಈ ಬೆನ್ನಲ್ಲೇ ಅವರ ಸಂಪರ್ಕದಲ್ಲಿದ್ದ ಮೂವರು ಸಹಾಯಕ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

    ಓವೆಲ್‍ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ನ ನಾಲ್ಕನೇ ದಿನದಾಟದ ಮುಂಚೆ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಇವರ ಸಂಪರ್ಕದಲ್ಲಿದ್ದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮತ್ತು ಫಿಸಿಯೋ ಥೆರಪಿಸ್ಟ್ ನಿತೀನ್ ಪಟೇಲ್ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ವೀರ ಕನ್ನಡಿಗ ಸುಹಾಸ್ ಬೆಳ್ಳಿ ಸಾಧನೆ

    ನಾಲ್ಕನೇ ಟೆಸ್ಟ್​ನ ಮೂರನೇ ದಿನ ಭಾರತ ತಂಡ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 280ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು 181 ರನ್‍ಗಳ ಮುನ್ನಡೆ ಪಡೆದುಕೊಂಡಿತ್ತು.  ಇದೀಗ ನಾಲ್ಕನೇ ದಿನದಾಟ ಮುಂದುವರಿಯುತ್ತಿದೆ.

  • ಮೊದಲ ಏಕದಿನ ಪಂದ್ಯ ಗೆಲುವಿನ ಬಳಿಕ ಸಂಭ್ರಮ ಆಚರಿಸಿದ ಟೀಂ ಇಂಡಿಯಾ

    ಮೊದಲ ಏಕದಿನ ಪಂದ್ಯ ಗೆಲುವಿನ ಬಳಿಕ ಸಂಭ್ರಮ ಆಚರಿಸಿದ ಟೀಂ ಇಂಡಿಯಾ

    ಪುಣೆ: ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಗೆದ್ದ ಭಾರತ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಜೊತೆಯಾಗಿ ಊಟಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

    ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 66 ರನ್‍ಗಳಿಂದ ಗೆದ್ದು ಬಿಗಿತ್ತು. ಇದೀಗ ಈ ಜಯವನ್ನು ಭರ್ಜರಿಯಾಗಿ ಸಂಭ್ರಮಿಸಿರುವ ಟೀಂ ಇಂಡಿಯಾ ಆಟಗಾರರು ಮತ್ತು ತರಬೇತಿ ಸಿಬ್ಬಂದಿ ಜೊತೆಯಾಗಿ ಊಟಮಾಡುತ್ತೀರುವ ಫೋಟೋವನ್ನು ತಂಡದ ಕೋಚ್ ರವಿಶಾಸ್ತ್ರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಸಂಭ್ರಮಾಚರಣೆಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ರಿಷಬ್ ಪಂತ್, ಪಾಂಡ್ಯ ಸಹೋದರರು, ಚಹಲ್ ಮತ್ತು ಇತರ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಜೊತೆಗಿದ್ದರು. ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಾಕಿಕೊಂಡಿರುವ ರವಿಶಾಸ್ತ್ರಿ ಎಲ್ಲರು ಜೊತೆಯಾಗಿದ್ದೇವೆ, ಬಬಲ್ ಒಳಗೂ ಹೊರಗೂ ಹಾಗಾಗಿ ಫಲಿತಾಂಶ ಒಂದೇ ಆಗಿದೆ. ಪುಣೆಯಲ್ಲಿ ಇಂದು ಸುಂದರವಾದ ದಿನ ಕಳೆದಂತಾಗಿದೆ ಎಂದು ಬರೆದುಕೊಂಡಿದ್ದಾರೆ.

    ತಂಡದ ಆಟಗಾರರು ಮತ್ತು ಸಿಬ್ಬಂದಿಗಳು ಕೊರೊನಾದಿಂದಾಗಿ ಬಯೋ ಬಬಲ್‍ಗೆ ಒಳಗಾಗಿದ್ದು ಎಲ್ಲರೂ ಕೂಡ ಜೊತೆಯಾಗಿ ಸಮಯ ಕಳೆಯುವ ಮೂಲಕ ದೀರ್ಘವಾದ ಕ್ರಿಕೆಟ್ ಸರಣಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

    ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 3-1 ರಿಂದ ಗೆದ್ದರೆ, ಟಿ20 ಸರಣಿಯನ್ನು 3-2 ರಿಂದ ಭಾರತ ಜಯಿಸಿತ್ತು ಇದೀಗ ಮೊದಲ ಏಕದಿನ ಸರಣಿಯಲ್ಲಿ 66 ರನ್‍ಗಳ ಜಯದೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಎರಡನೇ ಏಕದಿನ ಪಂದ್ಯ ಪುಣೆಯಲ್ಲಿ ಮಾರ್ಚ್ 26 ರಂದು ನಡೆಯಲಿದೆ.

  • ಟೀಂ ಇಂಡಿಯಾಗೆ ಯಾರೂ ನೀಡದ ಜೀವಮಾನದ ಶ್ರೇಷ್ಠ ಕೊಡುಗೆ – ಪಂತ್‍ರನ್ನು ಹಾಡಿ ಹೊಗಳಿದ ರವಿಶಾಸ್ತ್ರಿ

    ಟೀಂ ಇಂಡಿಯಾಗೆ ಯಾರೂ ನೀಡದ ಜೀವಮಾನದ ಶ್ರೇಷ್ಠ ಕೊಡುಗೆ – ಪಂತ್‍ರನ್ನು ಹಾಡಿ ಹೊಗಳಿದ ರವಿಶಾಸ್ತ್ರಿ

    ಮುಂಬೈ: ಭಾರತ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್ ಭಾರತ ತಂಡಕ್ಕೆ ಯಾರೂ ಕೂಡ ನೀಡದೇ ಇರುವಂತಹ ಜೀವಮಾನದ ಅತ್ಯಂತ ಶ್ರೇಷ್ಠವಾದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ಭಾರತ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಹಾಡಿ ಹೊಗಳಿದ್ದಾರೆ.

    ರಿಷಬ್ ಪಂತ್ ಕಳಪೆ ಫಾರ್ಮ್‍ನಲ್ಲಿ ಭಾರತ ತಂಡದಲ್ಲಿದ್ದಾಗ ಎಲ್ಲರೂ ಕೂಡ ದೂರುತಿದ್ದರು. ಆ ಬಳಿಕ ತಮ್ಮ ಬ್ಯಾಟಿಂಗ್ ಲಯ ಕಂಡುಕೊಂಡು ಕಳೆದ ಎರಡು ಮೂರು ತಿಂಗಳಲ್ಲಿ ಭಾರತ ತಂಡದ ಆಧಾರ ಸ್ತಂಭವಾಗಿ ಅತ್ಯುತ್ತಮ ನಿರ್ವಾಹಣೆಯ ಮೂಲಕ ತಂಡಕ್ಕೆ ಯಾರೂ ನೀಡದೇ ಇರುವಂತಹ ಕೊಡುಗೆ ಕೊಟ್ಟಿದ್ದಾರೆ ಎಂದು ಶಾಸ್ತ್ರಿ ಗುಣಗಾನ ಮಾಡಿದ್ದಾರೆ.

    ಪಂತ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸಿಡ್ನಿ ಮತ್ತು ಬ್ರಿಸ್ಬೇನ್ ಟೆಸ್ಟ್ ನಲ್ಲಿ ಭಾರತ ತಂಡಕ್ಕೆ ಬ್ಯಾಟಿಂಗ್‍ನಲ್ಲಿ ಆಧಾರವಾಗಿ 2-1 ರಿಂದ ಸರಣಿ ಗೆಲ್ಲಿಸಿಕೊಟ್ಟರೆ, ನಂತರ ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಬ್ಯಾಟ್ಸ್‌ಮ್ಯಾನ್ ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೂ ಕೂಡ ಪಂತ್ ದಿಟ್ಟ ಬ್ಯಾಟಿಂಗ್ ಮುಂದುವರಿಸಿ ಅಮೋಘ ಶತಕ ಸಿಡಿಸಿ ಭಾರತಕ್ಕೆ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆದುಕೊಳ್ಳುವಂತೆ ಮಾಡಿದ್ದರು.

    ಪಂತ್ ಅವರ ಬ್ಯಾಟಿಂಗ್ ಸಾಹಸದ ಬಗ್ಗೆ ಕೊಂಡಾಡಿರುವ ಶಾಸ್ತ್ರಿ, ಪಂತ್ ಅವರ ಬ್ಯಾಟಿಂಗ್ ಪರಾಕ್ರಮ ನೋಡುತ್ತಿದ್ದಾಗ ನನಗೆ ನನ್ನ ಹಿಂದಿನ ದಿನಗಳ ನೆನಪಾಗುತ್ತದೆ. ನಮ್ಮ ಜೀವನದ 21, 22 ಮತ್ತು 23ನೇ ವರ್ಷದಲ್ಲಿ ನಾವು ಕಾಣುವ ಯಶಸ್ಸು ನಮ್ಮ ಮುಂದಿನ ಜೀವನವನ್ನು ರೂಪಿಸುತ್ತದೆ. ಪಂತ್ ಕಳೆದ ಬಾರಿಯ ಐಪಿಎಲ್ ವೇಳೆ ತಮ್ಮ ಬ್ಯಾಟಿಂಗ್ ಲಯ ಕಳೆದುಕೊಂಡು ಎಲ್ಲರಿಂದ ಟೀಕೆಗೆ ಒಳಗಾಗಿದ್ದರು. ಆದರೆ ಭಾರತ ತಂಡಕ್ಕೆ ಮರಳಿದ ನಂತರ ತಮ್ಮ ದೇಹದ ತೂಕ ಇಳಿಸಿಕೊಂಡು ಶ್ರಮಪಟ್ಟು ತಮ್ಮ ನಿಜವಾದ ಬ್ಯಾಟಿಂಗ್ ಸಾಮರ್ಥ್ಯವನ್ನು ತೋರ್ಪಡಿಸಿ, ಉತ್ತಮ ಫಾರ್ಮ್‍ಗೆ ಮರಳಿದ್ದಾರೆ. ಇದೀಗ ಅವರು ಯಾವ ರೀತಿ ಭಾರತ ತಂಡಕ್ಕೆ ಸಹಕಾರಿಯಾಗುತ್ತಿದ್ದಾರೆ ಎಂಬುದನ್ನು ವಿಶ್ವವೇ ಗಮನಿಸುತ್ತಿದೆ ಎಂದರು.

  • ‘ಮಿಸ್ಟರ್ 360’ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಮತ್ತೆ ರೀ ಎಂಟ್ರಿ ಕೊಡಿ: ರವಿಶಾಸ್ತ್ರಿ

    ‘ಮಿಸ್ಟರ್ 360’ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಮತ್ತೆ ರೀ ಎಂಟ್ರಿ ಕೊಡಿ: ರವಿಶಾಸ್ತ್ರಿ

    ಮುಂಬೈ: ಐಪಿಎಲ್ 2020ರ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವ ಮಿಸ್ಟರ್ 360 ಡಿಗ್ರಿ ಎಂದೇ ಖ್ಯಾತಿ ಗಳಿಸಿರುವ ಎಬಿ ಡಿವಿಲಿಯರ್ಸ್, ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಾಪಸ್ ಆಗಬೇಕಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

    ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪರ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಳಿಕ ರವಿಶಾಸ್ತ್ರಿ ಈ ಕುರಿತು ಮಾತನಾಡಿದ್ದಾರೆ. ಕೋಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಡಿವಿಲಿಯರ್ಸ್ 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಗಳಿಂದ 73 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಪಂದ್ಯದಲ್ಲಿ ಆರ್ ಸಿಬಿ 82 ರನ್ ಗಳ ಭರ್ಜರಿ ಗೆಲುವು ಪಡೆದಿತ್ತು.

    ಪಂದ್ಯದ ಬಳಿಕ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರವಿಶಾಸ್ತ್ರಿ, ಇನ್ನಿಂಗ್ಸ್ ನಂಬಲಾಗುತ್ತಿಲ್ಲ. ಬೆಳಗ್ಗೆ ಎದ್ದ ಬಳಿಕವೂ ನಿನ್ನ ಬ್ಯಾಟಿಂಗ್ ನೆನಪಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿನ್ನ ಅಗತ್ಯವಿದೆ ಎಂಬುದನ್ನು ಈ ಪಂದ್ಯದಿಂದ ತಿಳಿಯುತ್ತಿದೆ. ನಿವೃತ್ತಿಯ ನಿರ್ಣಯವನ್ನು ನೀನು ಹಿಂಪಡೆ, ನಿನ್ನ ರೀ ಎಂಟ್ರಿಗೆ ಇದು ಸಾಕು ಎಂದು ಹೇಳಿದ್ದಾರೆ.

    2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸುವ ಮೂಲಕ ಎಬಿ ಡಿವಿಲಿಯರ್ಸ್ ಎಲ್ಲರಿಗೂ ಶಾಕ್ ನೀಡಿದ್ದರು. ಆ ಬಳಿಕ 2019ರ ವಿಶ್ವಕಪ್ ಟೂರ್ನಿಗೆ ವಾಪಸ್ ಆಗಲು ಚಿಂತಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಸೋಲುಂಡ ಬಳಿಕ ಅಲ್ಲಿನ ಕ್ರಿಕೆಟ್ ಬೋರ್ಡ್ ಮುಂದಿನ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಡಿವಿಲಿಯರ್ಸ್ ಅವರನ್ನು ಪರಿಗಣಿಸಲು ಆಸಕ್ತಿ ತೋರಿತ್ತು. ಆದರೆ ಸಂಪೂರ್ಣ ಫಿಟ್ ಎನಿಸದರೆ ಮಾತ್ರ ನಿವೃತ್ತಿ ವಾಪಸ್ ಪಡೆಯುವುದಾಗಿ ಡಿವಿಲಿಯರ್ಸ್ ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರವಿಶಾಸ್ತ್ರಿ ಅವರ ಟ್ವೀಟ್ ಹೆಚ್ಚು ಗಮನಾರ್ಹವಾಗಿದೆ.

  • ಟಿ20 ವಿಶ್ವಕಪ್‍ಗಿಂತಲೂ ಐಪಿಎಲ್ ಬಹುಮುಖ್ಯ: ರವಿಶಾಸ್ತ್ರಿ

    ಟಿ20 ವಿಶ್ವಕಪ್‍ಗಿಂತಲೂ ಐಪಿಎಲ್ ಬಹುಮುಖ್ಯ: ರವಿಶಾಸ್ತ್ರಿ

    ಮುಂಬೈ: ಕೊರೊನಾ ವೈರಸ್ ಮಹಾಮಾರಿಯ ಸಂದಿಗ್ಧ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಕ್ರೀಡೆಗಳು ಪ್ರಾರಂಭವಾದರೆ ಮೊದಲು ದೇಶೀಯ ಕ್ರಿಕೆಟ್, ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿ ಆರಂಭಿಸಲು ಪ್ರಾಮುಖ್ಯತೆ ನೀಡಬೇಕು ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

    ಪ್ರಸ್ತುತ ಗ್ಲೋಬಲ್ ಕ್ರಿಕೆಟ್ ಟೂರ್ನಿಗಳಿಗೆ ನಾನು ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ಮೊದಲು ದೇಶೀಯ ಕ್ರಿಕೆಟ್ ಪರಿಸ್ಥಿತಿ ಸುಧಾರಣೆ ಆಗಬೇಕು. ಅಂತರರಾಷ್ಟ್ರೀಯ ಕ್ರಿಕೆಟಿಗರು, ದೇಶೀಯ ಕ್ರಿಕೆಟಿಗರು ಕ್ರೀಡಾಂಗಣಕ್ಕೆ ಆಗಮಿಸಬೇಕು. ಆ ಬಳಿಕ ದ್ವಿಪಕ್ಷೀಯ ಟೂರ್ನಿ ಕ್ರಿಕೆಟ್ ಟೂರ್ನಿಗಳು ಆರಂಭವಾಗಬೇಕಿದೆ. ಸದ್ಯದ ಸ್ಥಿತಿಯಲ್ಲಿ ಗ್ಲೋಬಲ್ ಟೂರ್ನಿಗಳನ್ನು ಆಯೋಜಿಸುವುದಕ್ಕಿಂತ ಐಪಿಎಲ್ ರೀತಿಯ ಟೂರ್ನಿ ನಿರ್ವಹಿಸುವುದು ಉತ್ತಮ. ಕ್ರಿಕೆಟ್ ಜಗತ್ತು ಮತ್ತೆ ಚೇತರಿಸಿಕೊಳ್ಳಲು ಟಿ20 ವಿಶ್ವಕಪ್‍ಗಿಂತಲೂ ಐಪಿಎಲ್ ಮುಖ್ಯ. ದೇಶೀಯ ಕ್ರಿಕೆಟ್ ಟೂರ್ನಿಗಳಿಗಿಂತ ಅಂತರರಾಷ್ಟ್ರೀಯ ಟೂರ್ನಿಗಳನ್ನು ಆಯೋಜಿಸುವುದು ಸದ್ಯದ ಸ್ಥಿತಿಯಲ್ಲಿ ಕಷ್ಟಸಾಧ್ಯ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

    ದ್ವಿಪಕ್ಷೀಯ ಟೂರ್ನಿಗಳಲ್ಲಿ ಒಂದು ತಂಡದ ಮಾತ್ರ ಪ್ರವಾಸ ಕೈಗೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ನಾವು ಹೆಚ್ಚಿನ ಜಾಗೃತಿ ವಹಿಸಿಕೊಳ್ಳಬಹುದು. ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಿದರೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಅಲ್ಲದೇ ಐಪಿಎಲ್, ದೇಶೀಯ ಕ್ರಿಕೆಟ್ ಟೂರ್ನಿಗಳನ್ನು ಒಂದು ಅಥವಾ ಎರಡು ಸ್ಥಳಗಳಲ್ಲಿ ಆಯೋಜಿಸಬಹುದು. ಇದು ವಿಶ್ವಕಪ್ ದೃಷ್ಟಿಯಿಂದ ಸಾಧ್ಯವಲ್ಲ. ಈ ಎಲ್ಲಾ ಅಂಶಗಳನ್ನು ಐಸಿಸಿ ಗಮನಿಸಿ ನಿರ್ಣಯ ಕೈಗೊಳ್ಳಬೇಕಿದೆ ಎಂದು ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ 2 ತಿಂಗಳು ಕ್ರೀಡಾಪಟುಗಳ ಜೀವನದಲ್ಲಿ ಬಹುಮುಖ್ಯವಾಗುತ್ತದೆ. ಏಕೆಂದರೆ ಆಟಗಾರರಿಗೆ ನಿರಂತರ ತರಬೇತಿ ಅಗತ್ಯ. ಕ್ರಿಕೆಟ್ ಮಾತ್ರವಲ್ಲದೇ ಯಾವುದೇ ಕ್ರೀಡಾಪಟುಗಳನ್ನು ತೆಗೆದುಕೊಂಡರು ಇದು ಬಹುಮುಖ್ಯ ಸವಾಲು. ಲಾಕ್‍ಡೌನ್ ಮುಗಿದ ಬಳಿಕ ಟೀಂ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರಗಳನ್ನು ಆರಂಭಿಸಲಾಗುವುದು ಎಂದು ರವಿಶಾಸ್ತ್ರಿ ಮಾಹಿತಿ ನೀಡಿದ್ದಾರೆ.

  • ನೀವು ದಂತಕಥೆ- ಯುವಿಯನ್ನ ಹೊಗಳಿದ ರವಿಶಾಸ್ತ್ರಿ

    ನೀವು ದಂತಕಥೆ- ಯುವಿಯನ್ನ ಹೊಗಳಿದ ರವಿಶಾಸ್ತ್ರಿ

    ನವದೆಹಲಿ: 1983ರ ಬಳಿಕ ಟೀಂ ಇಂಡಿಯಾ 2011ರಲ್ಲಿ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿತ್ತು. 2020ರ ಏಪ್ರಿಲ್ 2ರಂದು 9 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಹಾಲಿ ತಂಡದ ಭಾರತದ ಕೋಚ್ ರವಿಶಾಸ್ತ್ರಿ ಗೆಲುವಿನ ಕ್ಷಣವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.

    ರವಿಶಾಸ್ತ್ರಿ ಅವರು, ‘ಎಲ್ಲರಿಗೂ ಅಭಿನಂದನೆಗಳು. ಈ ನೆನಪುಗಳು ನಿಮ್ಮ ಜೀವನದಲ್ಲಿ ಸಂತೋಷವನ್ನು ತರುತ್ತವೆ. ನಮ್ಮ 1983ರ ತಂಡ ಜೀವನದಂತೆಯೇ ಎಂದು ಟ್ವೀಟ್ ಮಾಡಿದ್ದರು. ಜೊತೆಗೆ ಟ್ವಿಟ್ ಅನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಿಗೆ ಟ್ಯಾಗ್ ಮಾಡಿದ್ದರು.

    ಈ ಕುರಿತು ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರು ರವಿಶಾಸ್ತ್ರಿ ಅವರನ್ನು ಟ್ರೋಲ್ ಮಾಡಿದ್ದಾರೆ. ಯುವಿ ಟ್ವೀಟ್‍ಗೆ ಪ್ರತಿಕ್ರಿಯಿಸಿ, ‘ಹಿರಿಯರಿಗೆ ಧನ್ಯವಾದಗಳು. ನೀವು ನನ್ನನ್ನು ಮತ್ತು ಮಹೇಂದ್ರ ಸಿಂಗ್ ಧೋನಿ ಅವರನ್ನು ಟ್ಯಾಗ್ ಮಾಡಬಹುದಿತ್ತು. ನಾವಿಬ್ಬರೂ 2011ರ ವಿಶ್ವಕಪ್‍ನ ಚಾಂಪಿಯನ್ ತಂಡದ ಭಾಗವಾಗಿದ್ದೆವು ಎಂದು ನಗುವ ಎಮೋಜಿ ಹಾಕಿ ಕಾಳೆದಿದ್ದಾರೆ.

    ಯುವಿ ಕಾಮೆಂಟ್‍ಗೆ ಪ್ರತಿಕ್ರಿಯೆ ನೀಡಿದ ರವಿಶಾಸ್ತ್ರಿ, ವಿಶ್ವಕಪ್ ವಿಚಾರಕ್ಕೆ ಬಂದಾಗ ನಿಮ್ಮನ್ನು ಕಿರಿಯರೆಂದು ಪರಿಗಣಿಸಲು ಆಗುವುದಿಲ್ಲ. ನೀವು ದಂತಕಥೆ ಎಂದು ಹೊಗಳಿದ್ದಾರೆ.

    2011ರ ಐಸಿಸಿ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯವು ಮುಂಬೈನಲ್ಲಿ ಭಾರತ, ಶ್ರೀಲಂಕಾ ನಡೆದಿತ್ತು. ಟಾಸ್ ಗೆದ್ದಿದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್‍ಗೆ 274 ರನ್ ಗಳಿಸಿತ್ತು. ಮಹೇಲಾ ಜಯವರ್ಧನೆ ಅಜೇಯ 103 ರನ್ ಗಳಿಸಿದ್ದರು. ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 4 ವಿಕೆಟ್‍ಗೆ 277 ರನ್ ಗಳಿಸಿತ್ತು. ಭಾರತದ ಪರ ಗೌತಮ್ ಗಂಭೀರ್ 97 ರನ್ ಮತ್ತು ಅಂದಿನ ನಾಯಕ ಎಂ.ಎಸ್.ಧೋನಿ ಅಜೇಯ 91 ರನ್ ಗಳಿಸಿದ್ದರು. ಉತ್ತಮ ಬ್ಯಾಟಿಂಗ್ ಪ್ರದರ್ಶ ನೀಡಿದ್ದ ಧೋನಿ ಅವರನ್ನು ಪಂದ್ಯ ಶ್ರೇಷ್ಠರಾಗಿ ಆಯ್ಕೆ ಮಾಡಿದರೆ, ಯುವರಾಜ್ ಸಿಂಗ್ ಅವರನ್ನು ಸರಣಿ ಶ್ರೇಷ್ಠ ಆಗಿದ್ದರು. ಇದಕ್ಕೂ ಮೊದಲು ಕಪಿಲ್ ದೇವ್ ನಾಯಕತ್ವದಲ್ಲಿ ಭಾರತೀಯ ತಂಡ 1983 ರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

  • ಕೊಹ್ಲಿ ಭಾರತೀಯ ಕ್ರಿಕೆಟ್‍ನ ಬಾಸ್: ರವಿಶಾಸ್ತ್ರಿ

    ಕೊಹ್ಲಿ ಭಾರತೀಯ ಕ್ರಿಕೆಟ್‍ನ ಬಾಸ್: ರವಿಶಾಸ್ತ್ರಿ

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟಿನ ಬಾಸ್ ಎಂದು ಟೀಂ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.

    ಸ್ಕೈ ಕ್ರಿಕೆಟ್ ಪಾಡ್‍ಕ್ಯಾಸ್ಟ್ ಕಾರ್ಯಕ್ರಮದಲ್ಲಿ ಶಾಸ್ತ್ರಿ ಇಂಗ್ಲೆಂಡ್‍ನ ಮಾಜಿ ನಾಯಕ ನಾಸರ್ ಹುಸೇನ್ ಮತ್ತು ಮೈಕೆಲ್ ಅಥರ್ಟನ್ ಮತ್ತು ರಾಬ್ ಕೀ ಅವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿ ಭಾರತೀಯ ಕ್ರಿಕೆಟಿನ ಬಾಸ್, ಜೊತೆಗೆ ನಾಯಕನ ಹೊರೆಯನ್ನು ಹೊರಹಾಕಲು ಅವರಿಗೆ ಸಹಾಯ ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದ್ದಾರೆ.

    ವಿರಾಟ್ ಕೊಹ್ಲಿ ಅವರು ತವರು ನೆಲದಲ್ಲಿ 12 ಟೆಸ್ಟ್ ಅನ್ನು ಗೆಲ್ಲುವ ಮೂಲಕ ವಿಶ್ವದಾಖಲೆ ನಿರ್ಮಿಸಿ ಭಾರತೀಯರ ಹೃದಯದಲ್ಲಿದ್ದಾರೆ. ಒಂದು ತಂಡದಲ್ಲಿ ನಾಯಕ ಯಾವಗಲೂ ಬಾಸ್ ಆಗಿ ಇರುತ್ತಾರೆ. ಕೋಚಿಂಗ್ ಸಿಬ್ಬಂದಿಯ ಕೆಲಸ ನನ್ನ ಪ್ರಕಾರ ಕ್ರಿಕೆಟ್ ಮೈದಾನದಲ್ಲಿ ಹುಡುಗರನ್ನು ಧೈರ್ಯಶಾಲಿಯಾಗಿ, ಸಕಾರತ್ಮಕವಾಗಿ ಮತ್ತು ಭಯಪಡದೇ ಆಡುವಂತೆ ಸಿದ್ಧ ಮಾಡುವುದು ಎಂದು ನಾನು ನಂಬುತ್ತೇನೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

    ತಂಡದ ನಾಯಕ ತಂಡವನ್ನು ಮುನ್ನೆಡೆಸುತ್ತಿರುತ್ತಾನೆ. ತಂಡದ ಜವಾಬ್ದಾರಿ ನಮಗೂ ಇರುತ್ತದೆ. ಆದರೆ ಮೈದಾನದ ಮಧ್ಯೆದಲ್ಲಿ ಅವರ ಆಟವನ್ನು ಅವರಿಗೆ ಆಡಲು ಬಿಡಬೇಕು. ತಂಡದ ನಾಯಕ ಮೈದಾನದ ಮಧ್ಯೆದಲ್ಲಿ ನಿಂತು ಎಲ್ಲವನ್ನು ಮಾಡುತ್ತಿರುತ್ತಾನೆ. ಅವನಿಗೆ ಎಲ್ಲವನ್ನು ಎದುರಿಸಲು ನಾವು ಪ್ರೋತ್ಸಾಹಿಸಬೇಕು. ಆಗ ನಾಯಕ ತಂಡವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಪಂದ್ಯವನ್ನು ಮುನ್ನೆಡೆಸುತ್ತಾನೆ ಎಂದು ಶಾಸ್ತ್ರಿ ಕೋಚ್ ಅನುಭವವನ್ನು ವಿವರಿಸಿದ್ದಾರೆ.

    ಇದೇ ವೇಳೆ ಕೊಹ್ಲಿ ಅವರು ಫಿಟ್ನೆಸ್ ಮತ್ತು ಅವರು ತಂಡದ ಇತರ ಆಟಗಾರನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ಫಿಟ್ನೆಸ್ ಬಗ್ಗೆ ಮಾತನಾಡುವುದಾದರೆ ಕೊಹ್ಲಿ ನಾಯಕತ್ವದ ಮುಂಚೂಣಿಗೆ ಬರುತ್ತಾರೆ. ಫಿಟ್ನೆಸ್ ವಿಚಾರದಲ್ಲಿ ಅವರು ಗೊಂದಲ ಮಾಡಿಕೊಳ್ಳುವುದಿಲ್ಲ. ಕೊಹ್ಲಿ ಬೆಳಗ್ಗೆ ಎದ್ದು ಇತರ ಆಟಗಾರರಿಗೆ ನೀವು ಈ ಪಂದ್ಯ ಆಡಬೇಕು ಎಂದರೆ ಫಿಟ್ ಆಗಿ ಇರಬೇಕು. ಯಾವುದೇ ಪರಿಸ್ಥಿತಿಯಲ್ಲೂ ತಂಡಕ್ಕೆ ನೆರವಾಗಬೇಕು ಎಂದು ಎಚ್ಚರಿಕೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

    ಸದ್ಯ ಭಾರತ ತಂಡದಲ್ಲಿ ವಿಶ್ರಾಂತಿ ಪಡೆಯದೇ ನಿರಂತರವಾಗಿ ಆಟವಾಡುತ್ತಿರುವ ಕೆಲ ಆಟಗಾರಲ್ಲಿ ಕೊಹ್ಲಿ ಅವರು ಒಬ್ಬರು. ನಾನು ಕೇವಲ ತರಬೇತಿ ನೀಡಬಹುದು. ಆದರೆ ಕೊಹ್ಲಿ ತನ್ನ ಆಹಾರ ಕ್ರಮದಲ್ಲಿ ಫಿಟ್ ಆಗಿ ಇರಲು ಬಹಳ ತ್ಯಾಗ ಮಾಡಿದ್ದಾರೆ. ಈ ಕಟ್ಟು ನಿಟ್ಟಿನ ಅವರ ನಿಯಮಗಳು ಬೇರೆ ಆಟಗಾರರನ್ನು ಹುರಿದುಂಬಿಸುತ್ತದೆ ಎಂದು ರವಿಶಾಸ್ತ್ರಿ ಕೊಹ್ಲಿ ಅವರನ್ನು ಹಾಡಿಹೊಗಳಿದ್ದಾರೆ.