Tag: Ravi Shastri

  • ಭಾರತ ಟಿ20 ವಿಶ್ವಕಪ್‌ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದ ಜಯ್‌ ಶಾ – ವೀಡಿಯೋ ವೈರಲ್‌

    ಭಾರತ ಟಿ20 ವಿಶ್ವಕಪ್‌ ಗೆಲ್ಲುತ್ತೆ ಎಂದು ಭವಿಷ್ಯ ನುಡಿದಿದ್ದ ಜಯ್‌ ಶಾ – ವೀಡಿಯೋ ವೈರಲ್‌

    ಬ್ರಿಡ್ಜ್‌ಟೌನ್: ಟಿ20 ವಿಶ್ವಕಪ್‌ (T20 World Cup 2024) ಟೂರ್ನಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ (South Africa) ತಂಡವನ್ನು ಬಗ್ಗು ಬಡಿದ ಟೀಂ ಇಂಡಿಯಾ ವಿಶ್ವ ಚಾಂಪಿಯನ್‌ ಆಗಿದೆ. ಭಾರತ ಟ್ರೋಫಿ ಗೆಲ್ಲುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ (Jai Shah) ಈ ಹಿಂದೆಯೇ ಭವಿಷ್ಯ ನುಡಿದಿದ್ದರು. ಅವರ ಭವಿಷ್ಯವಾಣಿ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

    ‘ವಿಶ್ವಕಪ್‌ನಲ್ಲಿ ನನ್ನ ಹೇಳಿಕೆಗಾಗಿ ಎಲ್ಲರೂ ಕಾಯುತ್ತಿದ್ದರು. 2023 ರಲ್ಲಿ, ಭಾರತವು ಸತತ 10 ಪಂದ್ಯಗಳನ್ನು ಗೆದ್ದು ಫೈನಲ್‌ ಪ್ರವೇಶಿಸಿ ವಿಶ್ವಕಪ್ ಗೆಲ್ಲಲಿಲ್ಲ. ಆದರೆ ನಾವು ಹೃದಯವನ್ನು ಗೆದ್ದಿದ್ದೇವೆ. ಆದರೆ 2024 ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತವು ಬಾರ್ಬಡೋಸ್‌ನಲ್ಲಿ ಟಿ20 ವಿಶ್ವಕಪ್ ಗೆಲ್ಲುತ್ತದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ’ ಎಂದು ರಾಜ್‌ಕೋಟ್‌ನ ಎಸ್‌ಸಿಎ ಸ್ಟೇಡಿಯಂ ಅನ್ನು ನಿರಂಜನ್ ಶಾ ಸ್ಟೇಡಿಯಂ ಎಂದು ಮರುನಾಮಕರಣ ಮಾಡುವ ಮೊದಲು ಜಯ್‌ ಶಾ ಹಿಂದೆಯೇ ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದಕ್ಕೆ ಧನ್ಯವಾದ: ವಿಶ್ವಕಪ್‌ ಗೆದ್ದ ಭಾರತಕ್ಕೆ ಧೋನಿ ವಿಶ್‌

    ಚೆನ್ನಾಗಿದೆ ಜಯ್‌ ಶಾ. ನಿಮ್ಮ ಹೊಸ ಹೆಸರು ಜಯ್‌ ನಾಸ್ಟ್ರಾಡಾಮಸ್ ಶಾ. ನೀವು 4 ತಿಂಗಳ ಹಿಂದೆ ರೋಹಿತ್‌ ಶರ್ಮಾ ನಾಯಕನನ್ನು ನೇಮಿಸಿದ್ದಿರಿ. ಭಾರತವು ಕಪ್ ಎತ್ತುತ್ತದೆ ಎಂದು ಭವಿಷ್ಯ ನುಡಿದಿದ್ದೀರಿ ಎಂದು ರವಿಶಾಸ್ತ್ರಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಜಯ್‌ ಶಾ ಮಾತುಗಳನ್ನು ನೆನಪಿಸಿಕೊಂಡಿದ್ದಾರೆ.

    ಜಯ್‌ ಶಾ ಅವರು ಮಾತನಾಡಿರುವ ವೀಡಿಯೋವನ್ನು ಮೋಹಿತ್‌ ಬಾಬು ಎಂಬವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವರು ಜಯ್‌ ಶಾ ಅವರ ಗ್ಯಾರಂಟಿ. ದಿ ಅಲ್ಟಿಮೇಟ್ ಸ್ಕ್ರಿಪ್ಟ್ ರೈಟರ್ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಕೊಹ್ಲಿ ಜೊತೆಗೆ ಟಿ20 ವಿಶ್ವಕಪ್‌ಗೆ ವಿದಾಯ ಹೇಳಿದ ಹಿಟ್‌ಮ್ಯಾನ್‌

    ಶನಿವಾರ ನಡೆದ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಐತಿಹಾಸಿಕ ಗೆಲುವು ದಾಖಲಿಸಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 20 ಓವರ್‌ಗಳಿಗೆ 176 ರನ್‌ ಗಳಿಸಿತ್ತು. 177 ರನ್‌ ಗುರಿ ಬೆನ್ನತ್ತಿದ ಆಫ್ರಿಕಾ ಪಡೆ 20 ಓವರ್‌ಗೆ 8 ವಿಕೆಟ್‌ ನಷ್ಟಕ್ಕೆ 168 ರನ್‌ ಗಳಿಸಿ ಸೋತಿತು. ಭಾರತ 7 ರನ್‌ಗಳ ಭರ್ಜರಿ ಜಯ ದಾಖಲಿಸಿತು.

  • ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ಗೆ ತೆರಳಿ ಸಂತೈಸಿದ ಮೋದಿ ನಡೆಗೆ ರವಿಶಾಸ್ತ್ರಿ ಮೆಚ್ಚುಗೆ

    ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ಗೆ ತೆರಳಿ ಸಂತೈಸಿದ ಮೋದಿ ನಡೆಗೆ ರವಿಶಾಸ್ತ್ರಿ ಮೆಚ್ಚುಗೆ

    ನವದೆಹಲಿ: ಏಕದಿನ ವಿಶ್ವಕಪ್  (World Cup) ಫೈನಲ್‍ನಲ್ಲಿ ಟೀಂ ಇಂಡಿಯಾ ಸೋತಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಡ್ರೆಸ್ಸಿಂಗ್ ರೂಮಿಗೆ ತೆರಳಿ ಆಟಗಾರರಿಗೆ ಧೈರ್ಯ ತುಂಬಿದ್ದರ ಬಗ್ಗೆ ಭಾರತ ತಂಡದ (Team India) ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಸಂತಸ ವ್ಯಕ್ತಪಡಿಸಿದ್ದಾರೆ.

    ನಾನು ಕೋಚ್ ಆಗಿ ಏಳು ವರ್ಷಗಳ ಕಾಲ ಇದ್ದೆ. ಒಂದು ತಂಡ ಸರಣಿ ಅಥವಾ ಪ್ರಮುಖ ಟೂರ್ನಿ ಸೋತ ಬಳಿಕ ಪರಿಸ್ಥಿತಿ ಹೇಗಿರಲಿದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಈ ಕಾರಣದಿಂದ ಇದು ಅತ್ಯಂತ ಮಹತ್ವದ ವಿಚಾರ ಎಂದು ನನಗೆ ಅನಿಸುತ್ತದೆ. ಇದನ್ನೂ ಓದಿ: ಹುತಾತ್ಮ ಯೋಧ ಪ್ರಾಂಜಲ್ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮನ

    ಸೋತು ಕಂಗೆಟ್ಟಿರುವಾಗ ಅದೊಂದು ವಿಚಿತ್ರ ಛಾಯೆ ಆವರಿಸಿರುತ್ತದೆ. ಇಂತಹ ಸಯಮದಲ್ಲಿ ಡ್ರೆಸ್ಸಿಂಗ್ ರೂಮ್‍ಗೆ ದೇಶದ ಪ್ರಧಾನಿಯಾದಂತವರು ಭೇಟಿ ನೀಡಿದಾಗ, ಅದು ದೊಡ್ಡ ವಿಚಾರವಾಗುತ್ತದೆ. ಇದು ಆಟಗಾರರ ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ಗೆ ಭೇಟಿ ನೀಡಿದ್ದಕ್ಕೆ ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಟೀಕಿಸಿದ್ದರು. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿರೋ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ವಿಳಂಬ

  • ಇನ್ನೂ ಚಾಂಪಿಯನ್ ಎಂದು ಕರೆದುಕೊಳ್ಳುತ್ತೀರಾ? ಇಂಗ್ಲೆಂಡ್‍ಗೆ ಕುಟುಕಿದ ಶಾಸ್ತ್ರಿ

    ಇನ್ನೂ ಚಾಂಪಿಯನ್ ಎಂದು ಕರೆದುಕೊಳ್ಳುತ್ತೀರಾ? ಇಂಗ್ಲೆಂಡ್‍ಗೆ ಕುಟುಕಿದ ಶಾಸ್ತ್ರಿ

    ಲಕ್ನೋ: ಟೀಂ ಇಂಡಿಯಾ (Team India) ಮತ್ತು ಇಂಗ್ಲೆಂಡ್ (England) ವಿರುದ್ಧದ ಪಂದ್ಯದ ವೇಳೆ ರವಿಶಾಸ್ತ್ರಿ (Ravi Shastri) ಕಾಮೆಂಟರಿ ಮಾಡುವಾಗ ನಿಮ್ಮನ್ನು ಇನ್ನೂ ಮುಂದೆಯೂ ಹಾಲಿ ಚಾಂಪಿಯನ್ ಎಂದು ಕರೆದುಕೊಳ್ಳುತ್ತೀರಾ? ಎಂದು ಕುಟುಕಿದ್ದಾರೆ.

    ಭಾನುವಾರದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಯ ನೆರವಿನಿಂದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ 100 ರನ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಬರೋಬ್ಬರಿ 20 ವರ್ಷಗಳ ಬಳಿಕ ವಿಶ್ವಕಪ್ (World Cup )ಟೂರ್ನಿಯಲ್ಲಿ ಆಂಗ್ಲರನ್ನ ಸೋಲಿಸಿ ಜಯದ ಮಾಲೆ ಧರಿಸಿದೆ. ಇದರೊಂದಿಗೆ 6 ಪಂದ್ಯಗಳಲ್ಲಿ ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದಿದೆ. ನಿರಂತರ ಸೋಲಿನ ಸುಳಿಗೆ ಸುಲುಕಿರುವ ಇಂಗ್ಲೆಂಡ್ ತಂಡದ ವಿರುದ್ಧ ಕಮೆಂಟ್ ಮಾಡಿ ಕಾಲೆಳೆದಿದ್ದಾರೆ. ಇದನ್ನೂ ಓದಿ: ಬಾತುಕೋಳಿ ತಲೆಗೆ ಕೊಹ್ಲಿ ಫೋಟೊ ಹಾಕಿ ತಗ್ಲಾಕ್ಕೊಂಡ ಇಂಗ್ಲೆಂಡ್‌ ಫ್ಯಾನ್ಸ್‌ – ಇಂಗ್ಲೆಂಡ್‌ ಆರ್ಮಿಗೆ ಭಾರತ್‌ ಆರ್ಮಿ ಕೌಂಟರ್‌

    ಬಾಂಗ್ಲಾದೇಶ ವಿರುದ್ಧದ ಗೆಲುವನ್ನು ಹೊರತುಪಡಿಸಿ ಇಂಗ್ಲೆಂಡ್‍ನ ಎಲ್ಲಾ ಐದು ಪಂದ್ಯಗಳಲ್ಲಿ ಸೋಲು ಕಂಡಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ 9 ವಿಕೆಟ್‍ಗಳಿಂದ ಸೋಲಿಸಿತ್ತು. ಅಫ್ಘಾನಿಸ್ತಾನ 69 ರನ್‍ಗಳಿಂದ ಆಂಗ್ಲರಿಗೆ ಶಾಕ್ ಕೊಟ್ಟಿತ್ತು. ಸೌತ್ ಆಫ್ರಿಕಾ ತಂಡ ಅವರನ್ನು 229 ರನ್‍ಗಳಿಂದ ಸೋಲುಣಿಸಿತ್ತು. ಶ್ರೀಲಂಕಾ ವಿರುದ್ಧ ಎಂಟು ವಿಕೆಟ್‍ಗಳಿಂದ ಸೋಲು ಕಂಡಿತ್ತು.

    ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ 2003 ರಲ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಉಳಿದಂತೆ 2007, 2011, 2015 ಮತ್ತು 2019ರಲ್ಲಿ ಭಾರತ, ಇಂಗ್ಲೆಂಡ್ ಎದುರು ಸೋಲು ಅನುಭವಿಸಿತ್ತು. ಹೀಗಾಗಿ ಕಳೆದ 20 ವರ್ಷಗಳಿಂದ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಆಂಗ್ಲರ ವಿರುದ್ಧ ಗೆಲುವು ಸಿಕ್ಕಿರಲಿಲ್ಲ. ಈಗ 100 ರನ್‍ಗಳ ಭರ್ಜರಿ ಜಯದೊಂದಿಗೆ ಸೆಮಿಫೈನಲ್‍ನತ್ತ ಸಾಗುತ್ತಿದೆ. ಇದನ್ನೂ ಓದಿ: ವಿಶ್ವಕಪ್‌ನ ಟಾಪ್‌ 7 ತಂಡಗಳು 2025 ರ ಚಾಂಪಿಯನ್ಸ್‌ ಟ್ರೋಫಿಗೆ – ಪಾಕಿಸ್ತಾನ ಡೈರೆಕ್ಟ್‌ ಎಂಟ್ರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಕದಿನ ವಿಶ್ವಕಪ್‌ನಲ್ಲೂ ಬುಮ್ರಾ ಕಣಕ್ಕಿಳಿಯೋದು ಡೌಟ್‌ – ಟೀಂ ಇಂಡಿಯಾಕ್ಕೆ ಎಚ್ಚರಿಕೆ ಕೊಟ್ಟ ರವಿಶಾಸ್ತ್ರಿ

    ಏಕದಿನ ವಿಶ್ವಕಪ್‌ನಲ್ಲೂ ಬುಮ್ರಾ ಕಣಕ್ಕಿಳಿಯೋದು ಡೌಟ್‌ – ಟೀಂ ಇಂಡಿಯಾಕ್ಕೆ ಎಚ್ಚರಿಕೆ ಕೊಟ್ಟ ರವಿಶಾಸ್ತ್ರಿ

    ಮುಂಬೈ: ಏಕದಿನ ವಿಶ್ವಕಪ್‌ಗೂ (ICC WorldCup) ಮುನ್ನ ಜಸ್ಪ್ರೀತ್‌ ಬುಮ್ರಾ (Jasprit Bumrah) ಕಣಕ್ಕಿಳಿಯಲು ಸಿದ್ಧರಾಗಿರಬೇಕು ಎಂಬ ಕಾರಣಕ್ಕೆ, ಆತುರವಾಗಿ ಬುಮ್ರಾ ಅವರನ್ನ ಆಡಿಸುವ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಟೀಂ ಇಂಡಿಯಾ ಮಾಜಿ ಕೋಚ್‌ ರವಿಶಾಸ್ತ್ರಿ (Ravi Shastri) ಎಚ್ಚರಿಕೆ ಕೊಟ್ಟಿದ್ದಾರೆ.

    ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಳೆದ ವರ್ಷದ ಸಪ್ಟೆಂಬರ್ ತಿಂಗಳ ಬಳಿಕ ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. 2022ರ T20 ಏಷ್ಯಾಕಪ್‌, T20 ವಿಶ್ವಕಪ್‌ ಹಾಗೂ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಫೈನಲ್‌ ಪಂದ್ಯ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾದರು. ಇದನ್ನೂ ಓದಿ: ಕಿತ್ತು ತಿನ್ನುವ ಬಡತನ, ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಯುವಕ ಈಗ ಟೀಂ ಇಂಡಿಯಾ ಆಟಗಾರ

    ಈ ವರ್ಷಾಂತ್ಯಕ್ಕೆ ಭಾರತದಲ್ಲೇ ಏಕದಿನ ವಿಶ್ವಕಪ್‌ ನಡೆಯಲಿದ್ದು, ಬುಮ್ರಾ ಅವರನ್ನು ಕಣಕ್ಕಿಳಿಸಲು ಬಿಸಿಸಿಐ ತಯಾರಿ ನಡೆಸಿದೆ. ಬುಮ್ರಾ ಬಹುತೇಕ ಫಿಟ್ ಆಗಿದ್ದು, ವಿಶ್ವಕಪ್‌ಗೂ ಮುನ್ನ ಐರ್ಲೆಂಡ್‌ ವಿರುದ್ಧದ ಸರಣಿ ಮೂಲಕ ತಂಡಕ್ಕೆ ಕಂಬ್ಯಾಕ್‌ ಮಾಡಿಸುವ ಪ್ರಯತ್ನದಲ್ಲಿದೆ. ಈ ಬೆಳವಣಿಗೆಯ ಬಗ್ಗೆ ರವಿ ಶಾಸ್ತ್ರಿ ಟೀಂ ಇಂಡಿಯಾಗೆ (Team India) ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

    ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರವಿ ಶಾಸ್ತ್ರಿ, ಏಕದಿನ ವಿಶ್ವಕಪ್‌ಗೂ ಮುನ್ನ ಬುಮ್ರಾ ಅವರನ್ನು ಆಡಿಸುವ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ರೆ ನಾವೂ ಹೋಗಲ್ಲ – ಜಾವೆದ್‌ ಮಿಯಾಂದದ್‌

    ಬೂಮ್ರಾ ಬಹಳ ಮುಖ್ಯ ಕ್ರಿಕೆಟಿಗ. ಆದ್ರೆ ವಿಶ್ವಕಪ್‌ನ ಹಿನ್ನೆಲೆಯಲ್ಲಿ ನೀವು ಆತುರಪಟ್ಟರೆ ನೀವು ಮತ್ತೆ 4 ತಿಂಗಳ ಕಾಲ ಅವರನ್ನ ಕಳೆದುಕೊಳ್ಳಬೇಕಾಗಬಹುದು. ಶಾಹಿನ್ ಅಫ್ರಿದಿ ಆದಂತೆಯೇ ಆಗಬಹುದು. ಇದು ಅತ್ಯಂತ ಸೂಕ್ಷ್ಮ ವಿಚಾರ ಎಂದು ಎಚ್ಚರಿಸಿದ್ದಾರೆ.

    ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ಬುಮ್ರಾ ಕಾಣಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ 4 ಓವರ್‌ಗಳಲ್ಲಿ 50 ರನ್‌ ಬಿಟ್ಟುಕೊಟ್ಟು ಟಿ20 ಕ್ರಿಕೆಟ್‌ನಲ್ಲಿ ಕೆಟ್ಟ ಸಾಧನೆ ಮಾಡಿದ್ದರು. ಯಾರ್ಕರ್‌ ಸ್ಪೆಷಲಿಸ್ಟ್‌ ಆಗಿರುವ ಬುಮ್ರಾ ಅಂದು ಯಾವುದೇ ವಿಕೆಟ್‌ ಸಹ ಪಡೆದಿರಲಿಲ್ಲ.

  • ಯಾವ ತಂಡದ ಕೋಚ್ ಆಗ್ತೀರಿ – ಅಭಿಮಾನಿಯ ಪ್ರಶ್ನೆಗೆ ಜಾಣ್ಮೆಯ ಉತ್ತರ ಕೊಟ್ಟ ರವಿ ಶಾಸ್ತ್ರಿ

    ಯಾವ ತಂಡದ ಕೋಚ್ ಆಗ್ತೀರಿ – ಅಭಿಮಾನಿಯ ಪ್ರಶ್ನೆಗೆ ಜಾಣ್ಮೆಯ ಉತ್ತರ ಕೊಟ್ಟ ರವಿ ಶಾಸ್ತ್ರಿ

    ನವದೆಹಲಿ: ಕೋಚ್ (Coach) ಆಗಿ ಆಯ್ದುಕೊಳ್ಳುವುದಾದರೆ ಮುಂಬೈ ಇಂಡಿಯಾ (MI) ಅಥವಾ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ (CSK) ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂಬ ಅಭಿಮಾನಿಗಳ ಪ್ರಶ್ನೆಗೆ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿಯವರು (Ravi Shastri) ಜಾಣ್ಮೆಯ ಉತ್ತರ ನೀಡಿದ್ದಾರೆ.

    ಕೇಳಿದ ಪ್ರಶ್ನೆಗೆ ಉತ್ತರ ಬಹಳ ಸರಳವಾಗಿದೆ. ಎರಡೂ ತಂಡಗಳೂ ನೀಡುವ ಹಣದಲ್ಲಿ ಒಂದು ಕಡೆಯ ಹಣದ ತೂಕ ಹೆಚ್ಚಾಗಿರಬೇಕು ಎಂದು ಶಾಸ್ತ್ರಿ ಹಾಸ್ಯ ಚಟಾಕಿ ಸಿಡಿಸಿದ್ದಾರೆ. ಅಭಿಮಾನಿಯೊಬ್ಬರು ಇತ್ತೀಚೆಗೆ ಚಾಟ್ ಸೆಷನ್‍ನಲ್ಲಿ ಈ ಪ್ರಶ್ನೆ ಕೇಳಿದ್ದರು. ಇದನ್ನೂ ಓದಿ: ಧೋನಿಯ 9 ವರ್ಷದ ಹಿಂದಿನ ಟ್ವೀಟ್ ವೈರಲ್

    ಟೀಂ ಇಂಡಿಯಾ (Team India) ಕೋಚ್ ಆಗಿ ರವಿ ಶಾಸ್ತ್ರಿ ಅವರ ಅಧಿಕಾರಾವಧಿಯಲ್ಲಿ ತಂಡವು ಟೆಸ್ಟ್, ಏಕದಿನ, ಟಿ20ಯಲ್ಲಿ ಉತ್ತಮ ಸಾಧನೆ ಮಾಡಿತ್ತು. ಆಟಗಾರರ ಫಿಟ್‍ನೆಸ್‍ಗೆ ಹೆಚ್ಚಿನ ಗಮನವನ್ನು ಶಾಸ್ತ್ರಿ ನೀಡುತ್ತಿದ್ದರು.

    ಶಾಸ್ತ್ರಿ ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಬ್ಯಾಟರ್ ತಿಲಕ್ ವರ್ಮಾ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬಹಳ ಪ್ರಬುದ್ಧ ಆಟಗಾರ ಎಂದು ಹೊಗಳಿದ್ದಾರೆ. ಮಂಗಳವಾರ ತಿಲಕ್ 29 ಎಸೆತಗಳಲ್ಲಿ 41 ರನ್ ಹೊಡೆದಿದ್ದರು. ಮುಂಬೈ ಇಂಡಿಯನ್ಸ್ ದೆಹಲಿ ಕ್ಯಾಪಿಟಲ್ಸ್‍ನ್ನು ಸೋಲಿಸಿದ ನಂತರ ಈ ಆವೃತ್ತಿಯಲ್ಲಿ ಮೊದಲ ಜಯವನ್ನು ದಾಖಲಿಸಿತ್ತು.

    ಭಾರತ ತಂಡದ ಮುಖ್ಯ ಕೋಚ್ ಹುದ್ದೆ ತೊರೆದ ನಂತರ ಶಾಸ್ತ್ರಿ ಮತ್ತೊಮ್ಮೆ ಕಾಮೆಂಟೇಟರ್ ಟೋಪಿ ಧರಿಸಿದ್ದಾರೆ. ಇದನ್ನೂ ಓದಿ: IPl 2023: ಗುಜರಾತ್‌ ಗುನ್ನಕ್ಕೆ ಪಂಜಾಬ್‌ ಪಂಚರ್‌ – ರೋಚಕ ಪಂದ್ಯದಲ್ಲಿ ಟೈಟಾನ್ಸ್‌ಗೆ 6 ವಿಕೆಟ್‌ಗಳ ಜಯ

  • French Open 2022 ಗಾಯಗೊಂಡ ಅಲೆಕ್ಸಾಂಡರ್ ಜೆರೆವ್ – ಕ್ರೀಡಾ ಸ್ಪೂರ್ತಿ ಮೆರೆದ ನಡಾಲ್ ನಡೆಗೆ ಮೆಚ್ಚುಗೆ

    French Open 2022 ಗಾಯಗೊಂಡ ಅಲೆಕ್ಸಾಂಡರ್ ಜೆರೆವ್ – ಕ್ರೀಡಾ ಸ್ಪೂರ್ತಿ ಮೆರೆದ ನಡಾಲ್ ನಡೆಗೆ ಮೆಚ್ಚುಗೆ

    ಪ್ಯಾರಿಸ್: ಫ್ರೆಂಚ್ ಓಪನ್ 2022 ಪುರುಷರ ಸಿಂಗಲ್ಸ್ ಸೆಮಿಫೈನಲ್‍ನಲ್ಲಿ ಸ್ಪೇನ್‍ನ ರಾಫೆಲ್ ನಡಾಲ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜೆರೆವ್ ನಡುವಿನ ಕಾದಾಟದಲ್ಲಿ ಜೆರೆವ್ ಗಾಯಗೊಂಡು ಹೊರನಡೆದರು. ಈ ವೇಳೆ ರಾಫೆಲ್ ನಡಾಲ್ ತೋರಿದ ಕ್ರೀಡಾ ಸ್ಪೂರ್ತಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಫ್ರೆಂಚ್ ಓಪನ್‍ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಚೊಚ್ಚಲ ಬಾರಿಗೆ ಸೆಮಿಫೈನಲ್‍ಗೆ ಪ್ರವೇಶ ಪಡೆದಿದ್ದ ಜೆರೆವ್ ಸೆಮಿಫೈನಲ್‍ನಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಚೊಚ್ಚಲ ಬಾರಿಗೆ ಫ್ರೆಂಚ್ ಓಪನ್ ಫೈನಲ್‍ಗೇರುವ ಕನಸು ಕಂಡಿದ್ದ ಅಲೆಕ್ಸಾಂಡರ್ ಜೆರೆವ್ ಕನಸು ಭಗ್ನವಾಗಿದೆ. ಈ ನಡುವೆ ನಡಾಲ್ ಜೆರೆವ್ ಗಾಯಗೊಂಡು ಮೈದಾನ ತೊರೆಯುವಾಗ ಅವರೊಂದಿಗೆ ಹೆಜ್ಜೆ ಹಾಕಿ ಧೈರ್ಯ ತುಂಬಿದ ನಡೆಗೆ ಕ್ರೀಡಾ ಪ್ರೇಮಿಗಳಿಂದ ಮೆಚ್ಚುಗೆ ಮಾತು ಕೇಳಿಬರುತ್ತಿದೆ.

    ನಡಾಲ್ ಹಾಗೂ ಜೆರೆವ್ ನಡುವಿನ ಸೆಮಿಫೈನಲ್ ಕಾದಾಟ ಆರಂಭವಾಗದಾಗಿನಿಂದಲೂ ರೋಚಕವಾಗಿ ಕೋಡಿತ್ತು. 91 ನಿಮಿಷಗಳ ಕಾಲ ನಡೆದ ಮೊದಲ ಸೆಟ್‍ನ್ನು ಟೈ ಬ್ರೇಕರ್ ಮೂಲಕ 7-6 (10-8) ಗೆದ್ದಿದ್ದ ನಡಾಲ್‍ಗೆ 2ನೇ ಸೆಟ್‍ನಲ್ಲೂ ಭಾರೀ ಪೈಪೋಟಿ ಎದುರಾಯಿತು. 6-6 ಅಂಕಗಳಿಂದ ತೀವ್ರ ಜಿದ್ದಾಜಿದ್ದಿನ ಆಟದಲ್ಲಿ ಇಬ್ಬರೂ ಆಟಗಾರರು ಸಮಬಲ ಸಾಧಿಸಿದ್ದರು. ಆ ಬಳಿಕ ಕೆಲ ಕ್ಷಣಗಳಲ್ಲಿ ಜೆರೆವ್ ಜಾರಿ ಬಿದ್ದು ತಮ್ಮ ಬಲ ಮೊಣಕಾಲು ಗಾಯಮಾಡಿಕೊಂಡರು. ಕೂಡಲೇ ಅಂಕಣದಲ್ಲಿ ಕುಸಿದು ಬಿದ್ದ ಜೆರೆವ್ ನೋವಿನಿಂದ ಕಣ್ಣೀರಿಟ್ಟರು. ನಂತರ ಜೆರೆವ್‍ರನ್ನು ವಿಲ್‍ಚೇರ್ ಮೂಲಕ ಅಂಕಣದಿಂದ ಹೊರ ಕರೆದುಕೊಂಡುಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಪಂದ್ಯ ಬಿಟ್ಟುಕೊಡಲು ನಿರ್ಧರಿಸಿದರು. ಇದಾದ ಬಳಿಕ ಊರುಗೋಲು ಹಿಡಿದು ಅಂಕಣಕ್ಕೆ ಬಂದ ಜೆರೆವ್ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿ ನಡಾಲ್‍ರನ್ನು ಅಭಿನಂದಿಸಿದರು. ಈ ವೇಳೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಎದ್ದುನಿಂತು ಅಭಿನಂದಿಸಿದರು.

    https://twitter.com/VeroMontes_A/status/1532760372637310977

    ಇತ್ತ ಜೆರೆವ್ ಗಾಯಗೊಂಡ ತಕ್ಷಣ ಬಳಿ ಬಂದು ನಡಾಲ್ ಗಾಯದ ಬಗ್ಗೆ ತಿಳಿದುಕೊಂಡರು. ಆ ಬಳಿಕ ಮೈದಾನ ತೊರೆದು ಚಿಕಿತ್ಸೆ ಪಡೆದು ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯ ಬಿಟ್ಟುಕೊಟ್ಟು ಊರುಗೋಲು ಹಿಡಿದುಕೊಂಡು ಹೊರ ಹೋಗುತ್ತಿದ್ದಂತೆ ನಡಾಲ್ ಅವರೊಂದಿಗೆ ಹೆಜ್ಜೆ ಹಾಕಿದರು.

    ನಡಾಲ್ ಈ ಕ್ರೀಡಾ ಸ್ಪೂರ್ತಿ ಕಂಡು ಭಾರತದ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ ಸೇರಿದಂತೆ ಸಾವಿರಾರು ಕ್ರೀಡಾ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದೀಗ ನಡಾಲ್ ಭಾನುವಾರ ನಡೆಯಲಿರುವ ಫೈನಲ್‍ನಲ್ಲಿ ನಾರ್ವೆಯ ಆಟಗಾರ ಕ್ಯಾಸ್ಪರ್ ರೂಡ್ ಅವರನ್ನು ಎದುರಿಸಲಿದ್ದಾರೆ.

  • 37 ವರ್ಷದ ಹಳೆಯ ಕಾರನ್ನು ರಾಷ್ಟ್ರೀಯ ಆಸ್ತಿಯೆಂದು ಘೋಷಿಸಿದ ರವಿಶಾಸ್ತ್ರಿ

    37 ವರ್ಷದ ಹಳೆಯ ಕಾರನ್ನು ರಾಷ್ಟ್ರೀಯ ಆಸ್ತಿಯೆಂದು ಘೋಷಿಸಿದ ರವಿಶಾಸ್ತ್ರಿ

    ಮುಂಬೈ: 1985ರ ವಿಶ್ವಚಾಂಪಿಯನ್‌ನಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನಕ್ಕೆ ಬಹುಮಾನವಾಗಿ ಸಿಕ್ಕ ಆಡಿ 100 ಸೆಡನ್ ಕಾರನ್ನು ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ ಮರಳಿ ಪಡೆದಿದ್ದಾರೆ.

    ಆಡಿ 100 ಕಾರು ಹಾಳಾಗಿದ್ದರಿಂದ ಅದನ್ನು ರಿಪೇರಿಗಾಗಿ ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ನಿರ್ವಹಿಸುತ್ತಿರುವ ಸೂಪರ್ ಕಾರ್ ಕ್ಲಬ್ ಗ್ಯಾರೇಜ್ (SCCG)ಗೆ ಬಿಡಲಾಗಿತ್ತು. ಆ ಕಾರಿನ ಕೆಲ ಬಿಡಿ ಭಾಗಗಳು ಸಂಗ್ರಹಿಸಲು ಕಷ್ಟಸಾಧ್ಯವಾಗಿದ್ದರಿಂದ ರಿಪೇರಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೂ ಬಿಡದೇ ತನ್ನ ಪ್ರಯತ್ನ ಮುಂದುವರಿಸಿದ ಎಸ್‌ಸಿಸಿ ಗ್ಯಾರೆಜ್ ಸತತ 8 ತಿಂಗಳ ಪ್ರಯತ್ನದಿಂದಾಗಿ ಕಾರನ್ನು ದುರಸ್ತಿ ಮಾಡಿ ರವಿಶಾಸ್ತ್ರೀ ಅವರಿಗೆ ಹಸ್ತಾಂತರಿಸಿದೆ.

    car

    ಈ ಸಂತಸವನ್ನು ಹಂಚಿಕೊಂಡಿರುವ ರವಿಶಾಸ್ತ್ರೀ ಅವರು, ಇದು 37 ವರ್ಷಗಳ ಹಿಂದೆ ನಾನು ಪಡೆದ ಕಾರಿನಂತೆಯೇ ಕಾಣುತ್ತದೆ. ಯಾವುದರಲ್ಲೂ ಬದಲಾವಣೆಯಾಗಿಲ್ಲ. ಅವರು ರಿಪೇರಿ ಮಾಡಿರುವ ರೀತಿ ನಂಬಲಾಗುತ್ತಿಲ್ಲ. ಕಾರಿನ ಕೀಲಿ ನನ್ನ ಕೈ ಸೇರುತ್ತಿದ್ದಂತೆ 37 ವರ್ಷಗಳ ಹಿಂದಿನ ನೆನಪುಗಳು ಮತ್ತೆ ಮರುಕಳಿಸಿದವು ಎಂದು ಹೇಳಿದ್ದಾರೆ.

    ಆ ಸಂದರ್ಭದಲ್ಲಿ ಚಾಲನಾ ಪರವಾನಗಿ ಇಲ್ಲದೆಯೇ ಕಾರು ಚಲಾಯಿಸಿದ್ದೆ. ಟೂರ್ನಿಯ ಪಂದ್ಯವೊಂದರಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾಗ ಮೈದಾನದ ಮಿಡ್ ವಿಕೆಟ್ ಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಆಗಾಗ ಕಣ್ಣು ಹಾಯಿಸುತ್ತಿದ್ದೆ. ಏಕೆಂದರೆ ಕಾರನ್ನು ಗೆಲ್ಲಲು ನಾನು ಮುಂಚೂಣಿಯಲ್ಲಿರುವ ಆಟಗಾರನೆಂಬುದು ತಿಳಿದಿತ್ತು. ಕಾರನ್ನು ಹಡಗಿನಲ್ಲಿ ಭಾರತಕ್ಕೆ ತಂದಾಗ 10 ಸಾವಿರಕ್ಕೂ ಹೆಚ್ಚು ಜನ ಜಮಾಯಿಸಿದ್ದರು ಎಂದು ಶಾಸ್ತ್ರೀ ನೆನಪನ್ನು ಹಂಚಿಕೊಂಡಿದ್ದಾರೆ.

    ರಾಜೀವ್ ಗಾಂಧಿ ಅವರು ಭಾರತದ ಪ್ರಧಾನಿಯಾಗಿದ್ದಾಗ ನಾನು ಈ ಬಗ್ಗೆ ಮಾತನಾಡಿದ್ದೆ. ಅವರು ಈ ಕಾರನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಎಲ್ಲ ತೆರಿಗೆ ಮನ್ನಾ ಮಾಡಿದ್ದರು. ಇಲ್ಲದಿದ್ದರೆ ಹೆಚ್ಚಿನ ತೆರಿಗೆಯಿಂದ ತರಲಾಗುತ್ತಿರಲಿಲ್ಲ ಎಂದು ಹೇಳಿಕೊಂಡರು.

    ಹಿನ್ನೆಲೆ ಏನು?: 1985ರ ವಿಶ್ವಚಾಂಪಿಯನ್ ಶಿಪ್‌ನಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನಕ್ಕೆ ರವಿಶಾಸ್ತ್ರೀ ಅವರಿಗೆ ಆಡಿ 100 ಸೆಡನ್ ಕಾರನ್ನು ಬಹುಮಾನವಾಗಿ ನೀಡಲಾಗಿತ್ತು. 32 ವರ್ಷಗಳ ಹಿಂದೆ ಆಸ್ಪ್ರೇಲಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ ಶಿಪ್ ಟೆಸ್ಟ್ ಸರಣಿಯ 5 ಪಂದ್ಯಗಳಲ್ಲಿ ರವಿಶಾಸ್ತ್ರಿ ಒಟ್ಟು 182 ರನ್ ಮತ್ತು 8 ವಿಕೆಟ್ ಪಡೆದಿದ್ದರು. ಈ ಸಾಧನೆಗಾಗಿ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಪ್ರಶಸ್ತಿಗೆ ಭಾಜನರಾಗಿದ್ದ ಶಾಸ್ತ್ರೀ ಅವರಿಗೆ ಆಡಿ 100 ಸೆಡನ್ ಕಾರನ್ನು ಬಹುಮಾನವಾಗಿ ನೀಡಲಾಗಿತ್ತು.

  • ಐಪಿಎಲ್ 2022ರಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು: ರವಿಶಾಸ್ತ್ರಿ

    ಐಪಿಎಲ್ 2022ರಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು: ರವಿಶಾಸ್ತ್ರಿ

    ಮುಂಬೈ: ಐಪಿಎಲ್ 2022ರಲ್ಲಿ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಬೇಕಿತ್ತು ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಿಎಸ್‍ಕೆ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡಬಾರದಿತ್ತು. ರವೀಂದ್ರ ಜಡೇಜಾ ತಮ್ಮ ಫಾರ್ಮ್‍ನತ್ತ ಗಮನ ಹರಿಸಬೇಕಾಗಿದೆ. ಐಪಿಎಲ್ 2022ರ ಮೊದಲು ಧೋನಿ ಸಿಎಸ್‍ಕೆ ನಾಯಕತ್ವದಿಂದ ಕೆಳಗಿಳಿದಿದ್ದು, ಈ ಋತುವಿನಲ್ಲಿ ಇನ್ನೂ ತಮ್ಮ ಮೊದಲ ಗೆಲುವು ದಾಖಲಿಸದ ರವೀಂದ್ರ ಜಡೇಜಾಗೆ ನಾಯಕತ್ವವನ್ನು ಹಸ್ತಾಂತರಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕಳೆದ ವರ್ಷ ಬೆಂಚ್ ಬಿಸಿ ಮಾಡಿದ ಆಟಗಾರರು ಈ ಬಾರಿ ಮ್ಯಾಚ್ ವಿನ್ನರ್ಸ್‌

    ಪ್ರಸ್ತುತ ಐಪಿಎಲ್ 2022ರಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ತನ್ನ ಆರಂಭಿಕ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿದೆ. ಇದು ಫ್ರಾಂಚೈಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿದೆ. ಚೆನ್ನೈ ಟೂರ್ನಿಯಲ್ಲಿ ನಾಲ್ಕು ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಆದರೆ ಈ ಋತುವಿನಲ್ಲಿ ಜಯದ ಲಯ ಕಂಡುಕೊಳ್ಳಲು ಹೆಣಗಾಡುತ್ತಿದೆ ಎಂದರು. ಇದನ್ನೂ ಓದಿ: ರಾಹುಲ್ ಗೋಲ್ಡನ್ ಡಕ್ – ನಿರಾಸೆಗೊಂಡ ಆಥಿಯಾ ಶೆಟ್ಟಿ

    ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ರೂ. 7 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದ ಫಾಫ್ ಡು ಪ್ಲೆಸಿಸ್ ಅವರು ತಮ್ಮ ಸಂಪೂರ್ಣ ಐಪಿಎಲ್ ವೃತ್ತಿಜೀವನವನ್ನು ಸಿಎಸ್‍ಕೆಯೊಂದಿಗೆ ಕಳೆದಿದ್ದರು. ಅವರು ಈ ಹಿಂದೆ ಚೆನ್ನೈನ 2021 ರ ಐಪಿಎಲ್ ವಿಜಯೋತ್ಸವದಲ್ಲಿ 59 ಎಸೆತಗಳಲ್ಲಿ 86 ರನ್ ಗಳಿಸಿ ಪ್ರಮುಖ ಪಾತ್ರ ವಹಿಸಿದ್ದರು. ಕೆಕೆಆರ್ ವಿರುದ್ಧದ ಫೈನಲ್‍ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಸಹ ಅವರು ತಮ್ಮ ಮುಡಿಗೇರಿಸಿಕೊಂಡಿದ್ದರು.

    ರವೀಂದ್ರ ಜಡೇಜಾ ಅವರ ಮೇಲೆ ಯಾವುದೇ ನಾಯಕತ್ವದ ಒತ್ತಡವನ್ನು ಹೇರದೆ ಆಟಗಾರನಾಗಿಯೇ ಆಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

  • ರವಿಶಾಸ್ತ್ರಿ ಹೇಳಿಕೆ ನನ್ನನ್ನು ಟೀಂ ಇಂಡಿಯಾದ ಬಸ್‍ನಿಂದ ತಳ್ಳಿದಂತಾಗಿತ್ತು: ಅಶ್ವಿನ್

    ರವಿಶಾಸ್ತ್ರಿ ಹೇಳಿಕೆ ನನ್ನನ್ನು ಟೀಂ ಇಂಡಿಯಾದ ಬಸ್‍ನಿಂದ ತಳ್ಳಿದಂತಾಗಿತ್ತು: ಅಶ್ವಿನ್

    ಮುಂಬೈ: ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಬಗ್ಗೆ ಬಹಿರಂಗವಾಗಿಯೇ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು ಈಗ ಎಲ್ಲೆಡೆ ಚರ್ಚೆ ಆಗುತ್ತಿದೆ.

    2019ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ರವಿಶಾಸ್ತ್ರಿ, ಕುಲ್‍ದೀಪ್ ಯಾದವ್ ಟೀಂ ಇಂಡಿಯಾದ ನಂಬರ್ 1 ಬೌಲರ್ ಎಂದಿದ್ದರು. ಈ ಮಾತನ್ನು ಕೇಳಿ ನನಗೆ ಟೀಂ ಇಂಡಿಯಾದ ಬಸ್‍ನಿಂದ ನನ್ನನ್ನು ತಳ್ಳಿದಂತಾಗಿತ್ತು ಮತ್ತು ನಾನು ಕುಗ್ಗಿ ಹೋಗಿದ್ದೆ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾಗೆ ಬೌಲಿಂಗ್ ಮಾಡುವುದು ಕಷ್ಟ – ಪಾಕ್ ಬೌಲರ್

    ಆಸ್ಟ್ರೇಲಿಯಾ ಪ್ರವಾಸದಲ್ಲಿ ಕುಲ್‍ದೀಪ್ ಯಾದವ್ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಕಿತ್ತು ಮಿಂಚಿದ್ದರು. ಈ ವೇಳೆ ನಾನು ಕೂಡ ತಂಡದಲ್ಲಿದ್ದೆ. ಕುಲ್‍ದೀಪ್ ಸಾಧನೆಯನ್ನು ಹೊಗಳಿದ ರವಿಶಾಸ್ತ್ರಿ ಭಾರತ ನಂಬರ್ 1 ಬೌಲರ್ ಕುಲ್‍ದೀಪ್ ಎಂದಿದ್ದರು. ಈ ಮಾತು ಕೇಳಿ ನಾನು ಕುಗ್ಗಿ ಹೋಗಿದ್ದೆ. ಆ ಬಳಿಕ ಹಲವು ಬಾರಿ ಕ್ರಿಕೆಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಲು ತೀರ್ಮಾನಿಸಿದೆ. ನನಗೆ ಶಾಸ್ತ್ರಿ ಮಾತು ತುಂಬಾ ಘಾಸಿಗೊಳಿಸಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಉತ್ತಮ ಆಯ್ಕೆ: ಎಂಎಸ್‌ಕೆ ಪ್ರಸಾದ್

    ನಾನು ಟೀಂ ಇಂಡಿಯಾದ ಯಶಸ್ಸಿಗಾಗಿ ತಂಡದಲ್ಲಿ ಆಡಲು ತುಂಬಾ ಸಂತೋಷ ಪಡುತ್ತೇನೆ. ಅಂದು ಕುಲ್‍ದೀಪ್ ಸಾಧನೆ ಕೂಡ ನನಗೆ ತುಂಬಾ ಹೆಮ್ಮೆ ಅನಿಸಿತ್ತು. ನನಗೆ ಆ ಪಂದ್ಯದಲ್ಲಿ 5 ವಿಕೆಟ್ ಪಡೆಯಲು ಆಗಿರಲಿಲ್ಲ. ಆದರೆ ಕುಲ್‍ದೀಪ್ 5 ವಿಕೆಟ್ ಪಡೆದು ಮಿಂಚಿದ್ದರು. ಆಸ್ಟ್ರೇಲಿಯಾದ ನೆಲದಲ್ಲಿ 5 ವಿಕೆಟ್ ತೆಗೆಯುವುದು ತುಂಬಾ ಕಷ್ಟ ಎಂದು ನನಗೆ ಅರಿವಿತ್ತು. ನಾನು ತಂಡದ ಯಶಸ್ಸಿನಿಂದಾಗಿ ತುಂಬಾ ಸಂತೋಷಗೊಂಡಿದ್ದೆ ಎಂದು ಮನದ ಮಾತು ಹಂಚಿಕೊಂಡಿದ್ದಾರೆ.

    ಟೀಂ ಇಂಡಿಯಾಕ್ಕೆ ಹೊಸ ಆಟಗಾರರ ಆಗಮನವಾಗುತ್ತಿದ್ದಂತೆ ನನ್ನ ಮೇಲೆ ತುಂಬಾ ಒತ್ತಡ ಇತ್ತು. ನಾನು ಪ್ರತಿ ಪಂದ್ಯದಲ್ಲೂ ಬೌಲಿಂಗ್ ಉತ್ತಮವಾಗಿ ಮಾಡಲು ಶ್ರಮಿಸುತ್ತಿದ್ದೆ ಮತ್ತು 6 ಎಸೆತಗಳನ್ನು ವಿವಿಧ ಬಗೆಯಲ್ಲಿ ಎಸೆಯಲು ಪ್ರಯತ್ನಿಸುತ್ತಿದ್ದೆ. ಕೆಲ ಕಾಲ ತಂಡದಿಂದ ಹೊರಗುಳಿದರು ಕೂಡ ಇದೀಗ ಮತ್ತೆ ಕಂಬ್ಯಾಕ್ ಮಾಡಿದ್ದೇನೆ ಎಂದು ಸಂತಸ ಪಟ್ಟರು. ಇದನ್ನೂ ಓದಿ: ಐಪಿಎಲ್ 2022 – ಯಾರು ಯಾವ ತಂಡಕ್ಕೆ ನಾಯಕ? – ಇಲ್ಲಿದೆ ಪೂರ್ಣ ವಿವರ

    ಅಶ್ವಿನ್ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು 427 ವಿಕೆಟ್ ಪಡೆದು ಭಾರತದ ನಂಬರ್ 1 ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಅದಲ್ಲದೆ ಅನಿಲ್ ಕುಂಬ್ಳೆ ಮತ್ತು ಕಪಿಲ್ ದೇವ್ ಬಳಿಕ ಅತಿ ಹೆಚ್ಚು ವಿಕೆಟ್ ಪಡೆದ 3 ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

  • ಅಂತ್ಯವಾಯಿತು ಟೀಂ ಇಂಡಿಯಾದಲ್ಲಿ ಕೊಹ್ಲಿ, ಶಾಸ್ತ್ರಿ ಯುಗ

    ಅಂತ್ಯವಾಯಿತು ಟೀಂ ಇಂಡಿಯಾದಲ್ಲಿ ಕೊಹ್ಲಿ, ಶಾಸ್ತ್ರಿ ಯುಗ

    ಮುಂಬೈ: ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ನಡುವಿನ ಉತ್ತಮವಾದ ಕಾಂಬಿನೇಷನ್ ಇಂದಿಗೆ ಅಂತ್ಯವಾಗಿದೆ.

    ಶಾಸ್ತ್ರಿ 2014ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಡೈರೆಕ್ಟರ್ ಆಗಿ ಆಯ್ಕೆಗೊಂಡರು. 2016ರ ಬಳಿಕ ಒಂದು ವರ್ಷಗಳ ಕಾಲ ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದರು. ನಂತರ 2017ರಲ್ಲಿ ರವಿಶಾಸ್ತ್ರಿ ಮುಖ್ಯ ಕೋಚ್ ಆಗಿ ಟೀಂ ಇಂಡಿಯಾಗೆ ನೇಮಕಗೊಂಡರು. ರವಿಶಾಸ್ತ್ರಿ ಸಾರಥ್ಯದಲ್ಲಿ ಮುನ್ನಡೆದ ಭಾರತ ತಂಡ ಚಾಂಪಿಯನ್ ಟ್ರೋಫಿ, ಆಸ್ಟ್ರೇಲಿಯಾ ಸರಣಿ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸಹಿತ ಹಲವು ಮಹತ್ವದ ಪಂದ್ಯಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಕೋಚ್ ಸ್ಥಾನದಿಂದ ಕೆಳಗಿಳಿಯುವ ಹುಮ್ಮಸ್ಸಿನಲ್ಲಿದ್ದರು. ಆದರೆ ಟೀಂ ಇಂಡಿಯಾ ಸೋಲಿನಿಂದ ಈ ಅವಕಾಶ ಕೈತಪ್ಪಿತು. ಇದನ್ನೂ ಓದಿ: ಐಪಿಎಲ್‍ನ ನೂತನ ತಂಡ ಅಹಮದಾಬಾದ್‍ನ ಕೋಚ್ ಆಗಲಿದ್ದಾರೆ ರವಿಶಾಸ್ತ್ರಿ?

    ಟಿ20 ವಿಶ್ವಕಪ್ ಮುಗಿದ ಕೂಡಲೇ ಭಾರತ ಟಿ20 ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್‍ಬೈ ಹೇಳುದಾಗಿ ವಿಶ್ವಕಪ್ ಆರಂಭಕ್ಕೂ ಮೊದಲೇ ಹೇಳಿಕೊಂಡಿದ್ದರು. ಅದರಂತೆ ಟಿ20 ವಿಶ್ವಕಪ್‍ನ ಕಡೆಯ ಪಂದ್ಯ ನಮೀಬಿಯ ವಿರುದ್ಧ ನಾಯಕನಾಗಿ ಕಡೆಯ ಪಂದ್ಯವನ್ನು ಕೊಹ್ಲಿ ಆಡಿದರು. ವಿರಾಟ್ ಕೊಹ್ಲಿ ಟಿ20 ತಂಡದ ನಾಯಕನಾಗಿ 50 ಪಂದ್ಯವಾಡಿದ್ದು ಅದರಲ್ಲಿ 30 ಪಂದ್ಯಗಳಲ್ಲಿ ಜಯ, 16 ಸೋಲು, 2 ಪಂದ್ಯ ಟೈ ಮತ್ತು 2 ಪಂದ್ಯ ರದ್ದು ಗೊಂಡಿದೆ. ಈ ಮೂಲಕ ಟೀಂ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಿಕ ಯಶಸ್ಸಿಯಾಗಿ ಮುನ್ನಡೆಸಿದ ಗೆಲುವಿನ ರೆಕಾರ್ಡ್ ಕೊಹ್ಲಿ ಹೆಸರಿನಲ್ಲಿದೆ. ಇದನ್ನೂ ಓದಿ: ಪಂದ್ಯಕ್ಕೂ ಮೊದಲು ಅಬುಧಾಬಿ ಪಿಚ್‌ ಕ್ಯೂರೇಟರ್‌ ನಿಗೂಢ ಸಾವು

    ವಿರಾಟ್ ಕೊಹ್ಲಿ 50 ಪಂದ್ಯಗಳಲ್ಲಿ ನಾಯನಾಗಿ ತಂಡವನ್ನು ಮುನ್ನಡೆಸಿ ನಾಯಕತ್ವಕ್ಕೆ ಗುಡ್‍ಬೈ ಹೇಳಿದರೆ, ಟಿ20 ವಿಶ್ವಕಪ್‍ನ ಕಡೆಯ ಪಂದ್ಯದ ಗೆಲುವಿನೊಂದಿಗೆ ಕೋಚ್ ರವಿಶಾಸ್ತ್ರಿ ತಂಡದಿಂದ ಬೇರ್ಪಟ್ಟಿದ್ದಾರೆ. ಈ ಇಬ್ಬರೂ ಕೂಡ ನಾಯಕ ಮತ್ತು ಕೋಚ್ ಆಗಿ ತಂಡವನ್ನು ಉತ್ತಮವಾಗಿ ಬೆಳೆಸಿದ್ದು ಇವರಿಬ್ಬರಲ್ಲಿ ಉತ್ತಮವಾದ ಕಾಂಬಿನೇಷನ್ ಮೂಡಿತ್ತು, ಇಂದಿಗೆ ಆ ಯುಗ ಅಂತ್ಯವಾಗಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗುಡ್ ಬೈ ಹೇಳಲು ಮುಂದಾದ್ರಾ ಕ್ರಿಸ್ ಗೇಲ್?