Tag: Ravi Rana

  • ಎನ್‌ಡಿಎ ಸರ್ಕಾರ ರಚನೆಯಾದ 15 ದಿನಗಳಲ್ಲಿ ಮೋದಿ ಜೊತೆ ಉದ್ಧವ್‌ ಠಾಕ್ರೆ ಕಾಣಿಸಿಕೊಳ್ಳಲಿದ್ದಾರೆ: ಶಾಸಕ ರವಿ ರಾಣಾ

    ಎನ್‌ಡಿಎ ಸರ್ಕಾರ ರಚನೆಯಾದ 15 ದಿನಗಳಲ್ಲಿ ಮೋದಿ ಜೊತೆ ಉದ್ಧವ್‌ ಠಾಕ್ರೆ ಕಾಣಿಸಿಕೊಳ್ಳಲಿದ್ದಾರೆ: ಶಾಸಕ ರವಿ ರಾಣಾ

    ಮುಂಬೈ: ಎನ್‌ಡಿಎ ಸಖ್ಯ ತೊರೆದಿರುವ ಉದ್ಧವ್‌ ಠಾಕ್ರೆ (Uddhav Thackeray) ಮರಳಿ ಎನ್‌ಡಿಎ (NDA) ಸೇರುತ್ತಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಅಮರಾವತಿಯ ಹಾಲಿ ಸಂಸದೆ ನವನೀತ್ ರಾಣಾ (Navneet Rana) ಅವರ ಪತಿ ಮತ್ತು ಮಹಾರಾಷ್ಟ್ರ ಶಾಸಕ ರವಿ ರಾಣಾ (Ravi Rana) ಸಿಡಿಸಿದ ಬಾಂಬ್‌ನಿಂದ ಈ ಪ್ರಶ್ನೆ ಎದ್ದಿದೆ.

    ಸರ್ಕಾರ ರಚನೆಯಾದ 15-20 ದಿನದ ಒಳಗಡೆ ಉದ್ಧವ್‌ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದು ಖಚಿತ ಎಂದು ರವಿ ರಾಣಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿಯವರು ಈ ಹಿಂದೆ ಸಂದರ್ಶನದಲ್ಲಿ ಉದ್ಧವ್ ಠಾಕ್ರೆ ಅವರು ಬಾಳಾಸಾಹೇಬ್ ಠಾಕ್ರೆಯವರ ಮಗನಾಗಿರುವುದರಿಂದ ಅವರಿಗೆ ಯಾವಾಗಲೂ ಬಾಗಿಲು ತೆರೆದಿರುತ್ತದೆ ಎಂದು ಹೇಳಿದ್ದರು. ಉದ್ಧವ್‌ ಈ ಬಾಗಿಲನ್ನು ಬಳಸುತ್ತಾರೆ ಎ ಎಂಬ ವಿಶ್ವಾಸವಿದೆ ಎಂದು ರವಿ ರಾಣಾ ತಿಳಿಸಿದರು.   ಇದನ್ನೂ ಓದಿ: ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್‌ ಡೌನ್‌, ಹೂಡಿಕೆದಾರರ ಆಕ್ರೋಶ

    ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ನಡೆದ ಬಿಜೆಪಿ ಸಮಾವೇಶದದಲ್ಲಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಮೋದಿ, ಕಾಂಗ್ರೆಸ್‌ನಲ್ಲಿ ಸಾಯುವ ಬದಲು ನಿಮ್ಮ ಕನಸುಗಳನ್ನು ಗೌರವಯುತವಾಗಿ ನನಸಾಗಿಸಲು ನಮ್ಮ ಅಜಿತ್ ದಾದಾ (ಪವಾರ್) ಮತ್ತು ಶಿಂಧೆ ಜಿ ಅವರೊಂದಿಗೆ ಸೇರಿಕೊಳ್ಳಿ ಎಂದು ಸಲಹೆ ನೀಡಿದ್ದರು.

    ಅಮರಾವತಿಯ ಹಾಲಿ ಸಂಸದ ರವಿ ರಾಣಾ ಅವರ ಪತ್ನಿ ನವನೀತ್ ರಾಣಾ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಟಿಕೆಟ್‌ನಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 2019 ರಲ್ಲಿ ನವನೀತ್ ರಾಣಾ ಅವರು ಅಮರಾವತಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.

    ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಎರಡನೇ ರಾಜ್ಯ ಮಹಾರಾಷ್ಟ್ರ ಆಗಿದ್ದು ಒಟ್ಟು 48 ಕ್ಷೇತ್ರಗಳನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ, ಬಿಜೆಪಿ, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವು ಮಹಾಯುತಿ ಮೈತ್ರಿ ಮಾಡಿಕೊಂಡಿದೆ. ಇನ್ನೊಂದು ಕಡೆ ಕಾಂಗ್ರೆಸ್, ಉದ್ಧವ್ ಠಾಕ್ರೆ ಅವರ ಶಿವಸೇನೆ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಮಹಾ ವಿಕಾಸ್ ಅಘಾಡಿ ಮೈತ್ರಿಯ ಅಡಿಯಲ್ಲಿ ಚುನಾವಣೆ ಎದುರಿಸಿದ್ದವು.

     

  • 12 ದಿನಗಳ ಜೈಲುವಾಸದ ನಂತರ ಪತಿಯನ್ನು ನೋಡಿ ಕಣ್ಣೀರಿಟ್ಟ ನವನೀತ್ ರಾಣಾ

    12 ದಿನಗಳ ಜೈಲುವಾಸದ ನಂತರ ಪತಿಯನ್ನು ನೋಡಿ ಕಣ್ಣೀರಿಟ್ಟ ನವನೀತ್ ರಾಣಾ

    ಮುಂಬೈ: 12 ದಿನಗಳ ಜೈಲುವಾಸದ ನಂತರ ಮತ್ತೆ ಶಾಸಕ ಪತಿ ರವಿ ರಾಣಾ ಮತ್ತು ಅಮರಾವತಿ ಸಂಸದೆ ನವನೀತ್ ರಾಣಾ ಒಂದಾಗಿದ್ದು, ಕಣ್ಣೀರಿಟ್ಟಿದ್ದಾರೆ.

    ಗುರುವಾರ ನವನೀತ್ ರಾಣಾ ಬೈಕುಲ್ಲಾ ಜೈಲಿನಿಂದ ಬಿಡುಗಡೆಯಾಗಿದ್ದು, ಆಕೆಯ ಪತಿ ರವಿ ರಾಣಾ ತಲೋಜಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ವೇಳೆ ನವನೀತ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿನ್ನೆಲೆ ರವಿ, ಆಸ್ಪತ್ರೆಗೆ ಮಡದಿಯನ್ನು ನೋಡಲು ಬಂದಿದ್ದಾರೆ. ಪತಿಯನ್ನು ನೋಡಿದ ತಕ್ಷಣ ನವನೀತ್ ಅಳಲು ಪ್ರಾರಂಭ ಮಾಡಿದ್ದಾರೆ. ದಂಪತಿ ಭಾವನಾತ್ಮಕವಾಗಿ ಒಬ್ಬರನ್ನೊಬ್ಬರು ನೋಡಿಕೊಂಡಿದ್ದು, ನಂತರ ರವಿ ಅವರು ಸಾಂತ್ವನ ಮಾಡಿದರು. ಇದನ್ನೂ ಓದಿ: ಬಂಧನದಲ್ಲಿರುವ ರಾಣಾ ದಂಪತಿ ನಿವಾಸದಲ್ಲಿ ಅಕ್ರಮ ಕಟ್ಟಡ – ಬಿಎಂಸಿ ನೋಟೀಸ್

    ನವನೀತ್ ರಾಣಾ ಅವರ ವಕೀಲರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸಂಸದರು ಅಸ್ವಸ್ಥರಾಗಿದ್ದರು. ಅವರ ರಕ್ತದೊತ್ತಡ ಹೆಚ್ಚಾಗಿದೆ. ಅವರಿಗೆ ದೇಹದಲ್ಲಿ ನೋವು ಮತ್ತು ಸ್ಪಾಂಡಿಲೈಟಿಸ್ ಇತ್ತು. ನಂತರ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದರು.

    Navneet Rana Ravi Rana 2

    ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124(ಎ) (ದೇಶದ್ರೋಹ) ಮತ್ತು 153 (ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ರಾಣಾ ದಂಪತಿಯನ್ನು ಏಪ್ರಿಲ್ 23 ರಂದು ಖಾರ್ ಪೊಲೀಸರು ಬಂಧಿಸಿದ್ದರು.

  • 10 ದಿನಗಳ ಬಂಧನದ ಬಳಿಕ ರಾಣಾ ದಂಪತಿಗೆ ಜಾಮೀನು

    10 ದಿನಗಳ ಬಂಧನದ ಬಳಿಕ ರಾಣಾ ದಂಪತಿಗೆ ಜಾಮೀನು

    ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿಷಯದಲ್ಲಿ ಟೀಕೆ ಹಾಗೂ ದ್ವೇಷ ಪ್ರಚೋದನಾ ಕೃತ್ಯಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಬಂಧನಕ್ಕೊಳಗಾಗಿದ್ದ ನವನೀತ್ ರಾಣಾ ಹಾಗೂ ಅವರ ಪತಿ ಶಾಸಕ ರವಿ ರಾಣಾ ಅವರಿಗೆ 10 ದಿನಗಳ ಬಳಿಕ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

    ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ ಆರೋಪದ ಮೇಲೆ ಅಮರಾವತಿಯ ಸಂಸದ ಬದ್ನೇರಾ ಶಾಸಕ ರವಿ ರಾಣಾ ಹಾಗೂ ಅವರ ಪತ್ನಿ ನವನೀತ್ ರಾಣಾ ಅವರನ್ನು ಏಪ್ರಿಲ್ 23ರಂದು ಬಂಧಿಸಲಾಗಿತ್ತು. ದಂಪತಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಖಾಸಗಿ ನಿವಾಸದ ಬಳಿ ಹನುಮಾನ್ ಚಾಲೀಸ ಪಠಿಸುವ ಯೋಜನೆ ಹಮ್ಮಿಕೊಂಡಿದ್ದರು. ಆದರೆ ಅವರನ್ನು ಬಂಧಿಸಿದ್ದರಿಂದ ಆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಇದನ್ನೂ ಓದಿ: ಧನುಷ್ ತಮ್ಮ ಮಗ ಅಂತ ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ: ನಟನಿಗೆ ಮದ್ರಾಸ್ ಕೋರ್ಟ್ ಸಮನ್ಸ್

    ದಂಪತಿ ವಿರುದ್ಧ ಸೆಕ್ಷನ್ 153(ಎ)(ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಹಾಗೂ 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ತನ್ನ ಗಂಡನನ್ನು ಬೇರೊಬ್ಬರ ಜೊತೆ ಹಂಚಿಕೊಳ್ಳಲು ಮಹಿಳೆ ಇಷ್ಟಪಡಲ್ಲ: ಅಲಹಾಬಾದ್‌ ಹೈಕೋರ್ಟ್‌

    ರಾಣಾ ದಂಪತಿ ಸರ್ಕಾರ ಯಂತ್ರಕ್ಕೆ ಸವಾಲು ಹಾಕಿದ ಹಾಗೂ ಉದ್ಧವ್ ಠಾಕ್ರೆ ವಿರುದ್ಧ ಟೀಕೆ ಮಾಡಿದ್ದರಿಂದ ಅವರ ವಿರುದ್ಧ ಐಪಿಸಿ ಸೆಕ್ಷನ್ 124(ಎ)(ದೇಶದ್ರೋಹ) ಅಡಿಯಲ್ಲಿ ಆರೋಪ ಮಾಡಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ತಿಳಿಸಿದ್ದರು. ಇದೀಗ ಬಂಧನದ 10 ದಿನಗಳ ಬಳಿಕ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

  • ಬಂಧನದಲ್ಲಿರುವ ರಾಣಾ ದಂಪತಿ ನಿವಾಸದಲ್ಲಿ ಅಕ್ರಮ ಕಟ್ಟಡ – ಬಿಎಂಸಿ ನೋಟೀಸ್

    ಬಂಧನದಲ್ಲಿರುವ ರಾಣಾ ದಂಪತಿ ನಿವಾಸದಲ್ಲಿ ಅಕ್ರಮ ಕಟ್ಟಡ – ಬಿಎಂಸಿ ನೋಟೀಸ್

    ಮುಂಬೈ: ಬಂಧನದಲ್ಲಿರುವ ಸ್ವತಂತ್ರ ಸಂಸದೆ ನವನೀತ್ ರಾಣಾ ಮತ್ತು ಶಾಸಕ ಪತಿ ರವಿ ರಾಣಾ ದಂಪತಿಗೆ ಒಂದಾದಂತೆ ಒಂದು ಅಂಕಷ್ಟಗಳು ಎದುರಾಗುತ್ತಿದ್ದು, ಇದೀಗ ಮುಂಬೈ ನಲ್ಲಿರುವ ತಮ್ಮ ನಿವಾಸದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವುದಾಗಿ ಬೃಹತ್ ಮುಂಬೈ ಮಹಾನಗರಪಾಲಿಕೆ (BMC) ನೋಟಿಸ್ ಜಾರಿಗೊಳಿಸಿದೆ.

    navneet kaur 2

    ನೋಟೀಸ್ ಪ್ರಕಾರ ಅಧಿಕಾರಿಗಳು ಮೇ 4ರಂದು ಯಾವುದೇ ಸಮಯದಲ್ಲಿ, ಯಾವುದೇ ಕಟ್ಟಡಕ್ಕೆ ಭೇಟಿ ನೀಡಿ ತಪಾಸಣೆ ನಡೆಸಬಹುದು. ಅಕ್ರಮ ಆಗಿದ್ದರೆ ಬದಲಾವಣೆ ಮಾಡುವುದಕ್ಕೂ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗಿದೆ. ಇದನ್ನೂ ಓದಿ: ಸೊಪೋರ್‌ನಲ್ಲಿ ಮೂವರು ಲಷ್ಕರ್ ಉಗ್ರರು ಅರೆಸ್ಟ್

    ಹಿನ್ನೆಲೆ ಏನು?: ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ್ದಾಗಿ ಮಹಾರಾಷ್ಟ್ರದ ಅಮರಾವತಿಯ ಸಂಸದ ಬದ್ನೇರಾ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ ನವನೀತ್ ರಾಣಾ ಅವರನ್ನು ಏಪ್ರಿಲ್ 23ರಂದು ಬಂಧಿಸಲಾಗಿದೆ. 

    HANUMAN CHALISA PROTEST

    ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುವ ಯೋಜನೆಯನ್ನು ಈ ದಂಪತಿ ಹಾಕಿಕೊಂಡಿದ್ದರು. ಆದರೆ ಅವರನ್ನು ಬಂಧಿಸಿದ ಮೇಲೆ ಕಾರ್ಯಕ್ರಮವನ್ನು ರದ್ದುಗೊಳಿಸಿಲಾಯಿತು. ಇದನ್ನೂ ಓದಿ: ದೇಶದ ಪರಿಸ್ಥಿತಿ ಚೆನ್ನಾಗಿಲ್ಲ, ಭಯಪಡಬೇಡಿ, ಹೋರಾಟ ಮುಂದುವರೆಸಿ: ಮಮತಾ ಬ್ಯಾನರ್ಜಿ

    ಪ್ರಸ್ತುತ ದಂಪತಿ ವಿರುದ್ಧ ಸೆಕ್ಷನ್ 153(A) (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 353 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರಿಬ್ಬರನ್ನೂ ಭಾನುವಾರ ಬಾಂದ್ರಾದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇಬ್ಬರನ್ನೂ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

    Navneet Rana Ravi Rana 2

    ಸರ್ಕಾರಿ ಯಂತ್ರಕ್ಕೆ ಸವಾಲು ಹಾಕಿದ ಮತ್ತು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಟೀಕೆಗಳನ್ನು ಮಾಡಿದ್ದರಿಂದ ಅವರ ವಿರುದ್ಧ ಐಪಿಸಿ ಸೆಕ್ಷನ್ 124-A (ದೇಶದ್ರೋಹ) ಅಡಿಯಲ್ಲಿ ಆರೋಪಗಳನ್ನು ಮಾಡಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ತಿಳಿಸಿದ್ದರು.

  • ಬಂಧನದಲ್ಲಿರುವ ರಾಣಾ ದಂಪತಿಗೆ ಪೊಲೀಸ್ ಠಾಣೆಯಲ್ಲಿ ಟೀ ಟ್ರೀಟ್‍ಮೆಂಟ್

    ಬಂಧನದಲ್ಲಿರುವ ರಾಣಾ ದಂಪತಿಗೆ ಪೊಲೀಸ್ ಠಾಣೆಯಲ್ಲಿ ಟೀ ಟ್ರೀಟ್‍ಮೆಂಟ್

    ನವದೆಹಲಿ: ಹನುಮಾನ್ ಚಾಲೀಸಾ ಪಠಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸಂಸದೆ ನವನೀತ್ ರಾಣಾ ಮತ್ತು ಪತಿ ಶಾಸಕ ರವಿ ರಾಣಾ ಪೊಲೀಸ್ ಠಾಣೆಯಲ್ಲಿ ಚಹಾ ಕುಡಿಯುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ದಂಪತಿ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 153(ಎ)(ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 353 ಅಡಿಯಲ್ಲಿ ಪ್ರಕರಣ ದಾಖಲಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

    ಸೋಮವಾರ, ನವನೀತ್ ರಾಣಾ ಅವರು ಉದ್ಧವ್ ಠಾಕ್ರೆ ಅವರ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಬಂಧನದ ನಂತರ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ತನ್ನ ಜಾತಿಯ ಕಾರಣಕ್ಕಾಗಿ ತನ್ನನ್ನು ನಿಂದಿಸಲಾಗಿದೆ ಎಂದು ಆರೋಪಿಸಿದ್ದಾರೆ. ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ

    mumbai - cuple

    ಸೋಮವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಬೆದರಿಕೆಯೊಡ್ಡಿದ್ದರಿಂದ ಅವರನ್ನು ಬಂಧಿಸಲಾಯಿತು. ಆದರೆ ಜೈಲಿನೊಳಗೆ ತಮ್ಮ ವಿರುದ್ಧ ಜಾತಿ ನಿಂದನೆ ಮಾಡುತ್ತಿದ್ದಾರೆ, ಕುಡಿಯಲು ನೀರು ಸಹ ನೀಡದೇ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು.

    v

    ಪತ್ರದಲ್ಲಿ ರಾಣಾ ಅವರು, ನಾನು ರಾತ್ರಿಯಿಡೀ ಕುಡಿಯುವ ನೀರಿಗಾಗಿ ಪದೇ, ಪದೇ ಬೇಡಿಕೆ ಇಟ್ಟಿದ್ದೇನೆ. ಆದರೆ ಕುಡಿಯುವ ನೀರು ನೀಡಲಿಲ್ಲ, ಪೊಲೀಸ್ ಸಿಬ್ಬಂದಿ ನಾನು ಪರಿಶಿಷ್ಟ ಜಾತಿಗೆ ಸೇರಿದವಳು ಎಂದು ನನಗೆ ಒಂದೇ ಲೋಟದಲ್ಲಿ ನೀರು ಕೊಡುವುದಿಲ್ಲ ಎಂದು ಹೇಳಿದರು. ಹೀಗಾಗಿ, ನನ್ನ ಜಾತಿಯ ಆಧಾರದ ಮೇಲೆ ನನ್ನನ್ನು ನೇರವಾಗಿ ನಿಂದಿಸಲಾಗಿದೆ. ಕುಡಿಯುವ ನೀರನ್ನು ಒದಗಿಸದ ಕಾರಣ ಪತ್ರ ಬರೆಯುತ್ತಿದ್ದೇನೆ. ಇದರಿಂದಾಗಿ ನನಗೆ ಬಹಳ ಆಘಾತವಾಗಿದೆ. ಖಾರ್ ಪೊಲೀಸ್ ಠಾಣೆಯ ಲಾಕ್‍ಅಪ್‍ನಲ್ಲಿ ನನಗೆ ನೀಡಿದ ಔಪಚಾರಿಕತೆ ಪ್ರಾಣಿಗಳಿಗೆ ನೀಡುವುದಕ್ಕಿಂತ ಕೆಟ್ಟದಾಗಿದೆ ಎಂದು ತಿಳಿಸಿದ್ದರು. ಆದರೀಗ ಇದೇ ದಂಪತಿ ಪೊಲೀಸ್ ಠಾನೆಯಲ್ಲಿ ಚಹಾ ಸೇವಿಸುತ್ತಿರುವ ವೀಡಿಯೋವನ್ನು ಪೊಲೀಸ್ ಅಧಿಕಾರಿ ಹಂಚಿಕೊಂಡಿದ್ದಾರೆ.

  • ಹಿಂದುತ್ವ ಸಿದ್ಧಾಂತವು ಸಂ‌ಸ್ಕೃತಿಯೇ ಹೊರತು ಅವ್ಯವಸ್ಥೆಯಲ್ಲ: ಶಿವಸೇನೆ

    ಹಿಂದುತ್ವ ಸಿದ್ಧಾಂತವು ಸಂ‌ಸ್ಕೃತಿಯೇ ಹೊರತು ಅವ್ಯವಸ್ಥೆಯಲ್ಲ: ಶಿವಸೇನೆ

    ಮುಂಬೈ: ಹಿಂದುತ್ವ ಸಿದ್ಧಾಂತವು ಸಂ‌ಸ್ಕೃತಿಯೇ ಹೊರತು ಅವ್ಯವಸ್ಥೆಯಲ್ಲ ಎಂದು ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ.

    ಹನುಮಾನ್ ಚಾಲೀಸಾ ಪಠಣದ ಕುರಿತು ಮಹಾರಾಷ್ಟ್ರದಲ್ಲಿ ಎದ್ದಿರುವ ರಾಜಕೀಯ ಗದ್ದಲದ ಕುರಿತು ಶಿವಸೇನೆ ಪ್ರತಿಕ್ರಿಯಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಿದ ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ಅವರು ಈ ಹಿಂದೆ ಮಾಡಿದ ಕರೆ ಹಿಂದೆ ಬಿಜೆಪಿಯ ಕೊಳೆತ ಮೆದುಳು ಎಂದು ಶಿವಸೇನೆ ಆರೋಪಿಸಿದೆ.

    v

    ರಾಣಾ ದಂಪತಿಗಳು ನಗರದ ವಾತಾವರಣವನ್ನು ಹಾಳು ಮಾಡಲು ಬಯಸಿದ್ದಾರೆ. ಅವರು ಈ ಕಾರ್ಯಕ್ರಮವನ್ನು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯ ಲಾಬಿಯಲ್ಲಿ ನಡೆಸಬೇಕು ಎಂದು ಹೇಳಿದೆ. ಇದನ್ನೂ ಓದಿ: FDA ನೇಮಕಾತಿಯಲ್ಲೂ ಅಕ್ರಮ- ಒಂದೇ ತಾಲೂಕಿನ 202 ಮಂದಿ ಆಯ್ಕೆ

    ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಹಿಂದುತ್ವ ಉತ್ತಮವಾಗಿದೆ. ರಾಜ್ಯದಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ, ಆದರೆ ಸಿಎಂ ನಿವಾಸದ ಹೊರಗೆ ಪಠಿಸಬೇಕೆಂಬ ಒತ್ತಾಯ ಏಕೆ? ಎಂದಿದೆ.

    ಬಿಜೆಪಿ ನಡೆಸುತ್ತಿರುವ ಅವ್ಯವಸ್ಥೆಯನ್ನು ಬೆಂಬಲಿಸಲು ಸಾಧ್ಯವಿಲ್ಲ. ಹಿಂದುತ್ವ ಎಂಬುದು ಒಂದು ಸಂಸ್ಕೃತಿಯೇ ಹೊರತು ಅವ್ಯವಸ್ಥೆಯಲ್ಲ ಎಂದು ಹೇಳಿದೆ. ಇದನ್ನೂ ಓದಿ: ಸರ್ಕಾರ ಕತ್ತೆ ಕಾಯ್ತಿದ್ಯಾ? ಕಡ್ಲೆಪುರಿ ತಿಂತಿದ್ಯಾ? ಆರೋಪಿ ವಿರುದ್ಧ FIR ದಾಖಲಿಸಿಲ್ಲ ಯಾಕೆ – ಪ್ರಿಯಾಂಕ್ ಖರ್ಗೆ ಪ್ರಶ್ನೆ

  • ಹನುಮಾನ್ ಚಾಲೀಸಾ ವಿಚಾರಕ್ಕೆ ಗದ್ದಲ ಸೃಷ್ಟಿ- 6 ಮಂದಿ ಶಿವಸೇನಾ ಕಾರ್ಯಕರ್ತರು ಅರೆಸ್ಟ್

    ಹನುಮಾನ್ ಚಾಲೀಸಾ ವಿಚಾರಕ್ಕೆ ಗದ್ದಲ ಸೃಷ್ಟಿ- 6 ಮಂದಿ ಶಿವಸೇನಾ ಕಾರ್ಯಕರ್ತರು ಅರೆಸ್ಟ್

    ಮುಂಬೈ: ಹನುಮಾನ್ ಚಾಲೀಸಾ ಪಠಿಸುವ ವಿಚಾರಕ್ಕಾಗಿ ಮುಂಬೈನಲ್ಲಿರುವ ಸಂಸದ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ಅವರ ನಿವಾಸದ ಹೊರಗೆ ಗದ್ದಲ ಸೃಷ್ಟಿಸಿದ ಆರೋಪದ ಮೇಲೆ 6 ಮಂದಿ ಶಿವಸೇನಾ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಇನ್ನಷ್ಟು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

    v

    ಮುಂಬೈನಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ ನಂತರ ಮಹಾರಾಷ್ಟ್ರದ ಅಮರಾವತಿಯಲ್ಲಿರುವ ಸಂಸದ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ಅವರ ನಿವಾಸದ ಹೊರಗೆ ಶಿವಸೇನೆಯ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಇದನ್ನೂ ಓದಿ: ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ

    blg shivasena
    ಸಾಂದರ್ಭಿಕ ಚಿತ್ರ

    ನವನೀತ್ ಹಾಗೂ ರವಿ ರಾಣಾ ಅವರ ನಿವಾಸದ ಹೊರಗೆ ಗಲಾಟೆ ಸೃಷ್ಟಿಸಿದ ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರು ನಿನ್ನೆ (ಏಪ್ರಿಲ್ 23) ಪ್ರಕರಣ ದಾಖಲಿಸಿದ ನಂತರ, ಇಲ್ಲಿನ ಖಾರ್ ಪೊಲೀಸರು 6 ಶಿವಸೇನಾ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಸುದ್ದಿಸಂಸ್ಥೆಯೊಂದು ವರದಿಮಾಡಿದೆ.