Tag: Ravi Poojary

  • ಭೂಗತ ಪಾತಕಿ ರವಿ ಪೂಜಾರಿ ಆಸ್ಪತ್ರೆಗೆ ದಾಖಲು!

    ಭೂಗತ ಪಾತಕಿ ರವಿ ಪೂಜಾರಿ ಆಸ್ಪತ್ರೆಗೆ ದಾಖಲು!

    ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ (Ravi Poojary) ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

    ಹರ್ನಿಯಾ ಹಿನ್ನೆಲೆ ಶಸ್ತ್ರಚಿಕಿತ್ಸೆಗಾಗಿ ಸೋಮವಾರ ವಿಕ್ಟೋರಿಯಾ ಆಸ್ಪತ್ರೆಯ ಮಲ್ಟಿಸ್ಪೆಷಾಲಿಟಿ ಘಟಕಕ್ಕೆ ದಾಖಲಾಗಿದ್ದಾನೆ.

    60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿರುವ ರವಿ ಪೂಜಾರಿ ಮೇಲೆ ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿ ಹಲವೆಡೆ ಕೇಸ್ ದಾಖಲಾಗಿದ್ದವು.

    ಭೂಗತವಾಗಿದ್ದುಕೊಂಡೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರವಿ ಪೂಜಾರಿಯನ್ನು ಅರೆಸ್ಟ್ ಮಾಡಲು ಭಾರತದ ತನಿಖಾ ಸಂಸ್ಥೆಗಳು ಸೆನೆಗಲ್ ದೇಶದೊಂದಿಗೆ ಸಂಪರ್ಕದಲ್ಲಿದ್ದವು. ಈ ಹಿನ್ನಲೆಯಲ್ಲಿ 2019 ರಲ್ಲಿ ಸೆನೆಗಲ್ ಪೊಲೀಸರು ರವಿ ಪೂಜಾರಿಯನ್ನು ಬಂಧಿಸಲಾಗಿತ್ತು. ವಿಚಾರಣೆ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ.

  • ತನ್ನ ಹುಡುಗರಿಂದ ಅಮಾಯಕರ ಕೊಲೆ – ಕುಟುಂಬದ ಜೊತೆ ಕ್ಷಮೆ ಕೇಳಿದ್ದ ರವಿ ಪೂಜಾರಿ

    ತನ್ನ ಹುಡುಗರಿಂದ ಅಮಾಯಕರ ಕೊಲೆ – ಕುಟುಂಬದ ಜೊತೆ ಕ್ಷಮೆ ಕೇಳಿದ್ದ ರವಿ ಪೂಜಾರಿ

    ಬೆಂಗಳೂರು: ಭೂಗತ ಪಾತಕಿ ಅಂದರೆ ರಕ್ತ ಪಿಪಾಸು ಎಂದು ಹೇಳುತ್ತಿದ್ದರು. ಆದರೆ ಈ ರವಿ ಪೂಜಾರಿ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚನೆ ಮಾಡಿದ್ದಾನೆ. ಅದು ಕೂಡ ಸತ್ತವರ ಕುಟುಂಬಕ್ಕೆ ಕರೆ ಮಾಡಿ ಕ್ಷಮೆಯಾಚನೆ ಮಾಡಿದ್ದಾನೆ. ಅದನ್ನೇ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಬೆಂಗಳೂರಿನ ತಿಲಕ್‍ನಗರದ ಶಬನಂ ಬಿಲ್ಡರ್ಸ್ ಮಾಲೀಕನ ಬಳಿ ಹಣ ವಸೂಲಿಗೆ ಪ್ರಯತ್ನ ಮಾಡಿದ್ದ ರವಿ ಪೂಜಾರಿ ಆ ಮಾಲೀಕನನ್ನು ಕೊಲೆ ಮಾಡುವುದಕ್ಕೆ ಹುಡುಗರನ್ನು ಕಳುಹಿಸಿದ್ದನು. ಆದರೆ ಬಿಲ್ಡರ್ ಕಚೇರಿಯಲ್ಲಿ ಮಾಲೀಕ ಇಲ್ಲದೆ ಇದ್ದ ಕಾರಣ ರವಿ ಪೂಜಾರಿ ಹುಡುಗರು ಟೈಪಿಸ್ಟ್‍ಗಳಾದ ಶೈಲಜಾ ಮತ್ತು ರವಿಯನ್ನು ಕೊಲೆ ಮಾಡಿ ಬಂದಿದ್ದರು. ಇದನ್ನೂ ಓದಿ: ರವಿ ಪೂಜಾರಿ ಇಲ್ಲಿ ನಟೋರಿಯಸ್- ಅಲ್ಲಿ ಸಮಾಜ ಸೇವಕ!

    ಈ ವಿಚಾರ ತಿಳಿದ ರವಿ ಪೂಜಾರಿ ಮೃತ ವ್ಯಕ್ತಿಗಳ ಮನೆಯವರಿಗೆ ಕರೆ ಮಾಡಿ ಕ್ಷಮೆ ಕೇಳಿದ್ದಾನೆ. ವಿಚಾರಣೆ ಸಮಯದಲ್ಲಿ ಪೊಲೀಸರ ಮುಂದೆ ಹೇಳುವಾಗ,”ನಾನು ನನ್ನ ಹುಡುಗರಿಗೆ ಬಿಲ್ಡರ್ ಇಲ್ಲದಿದ್ದರೆ ಬೆದರಿಸಿ ಬನ್ನಿ ಎಂದು ಹೇಳಿದ್ದೆ. ಆದರೆ ಹುಡುಗರು ಅವರನ್ನು ಕೊಂದು ಬಂದಿದ್ದರು. ಇದನ್ನು ಕೇಳಿ ನನಗೆ ಬೇಜಾರಾಯಿತು. ಅದಕ್ಕೆ ನಾನು ಮೃತರ ಮನೆಯವರ ದೂರವಾಣಿ ಸಂಖ್ಯೆಯನ್ನು ಪಡೆದು ಕ್ಷಮಾಪಣೆ ಕೇಳಿದ್ದೀನಿ. ಈಗಲೂ ನನಗೆ ಈ ವಿಚಾರಕ್ಕೆ ಬೇಸರವಿದೆ” ಎಂದು ಹೇಳಿಕೊಂಡಿದ್ದಾನೆ.

  • ಭೂಗತ ಪಾತಕಿ ರವಿ ಪೂಜಾರಿಗೆ ಮಗಳ ಭವಿಷ್ಯದ್ದೇ ಚಿಂತೆ

    ಭೂಗತ ಪಾತಕಿ ರವಿ ಪೂಜಾರಿಗೆ ಮಗಳ ಭವಿಷ್ಯದ್ದೇ ಚಿಂತೆ

    ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಗೆ ಸಿಸಿಬಿ ಪೊಲೀಸರ ತನಿಖೆಯ ಒತ್ತಡಕ್ಕಿಂತ ತನ್ನ ಮಗಳ ಭವಿಷ್ಯದ ಬಗ್ಗೆಯೇ ಚಿಂತೆ ಹೆಚ್ಚಾಗಿದೆಯಂತೆ.

    ಫೆಬ್ರವರಿ 24ರಂದು ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆ ತರಲಾಗಿದ್ದು, ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರವಿ ಪೂಜಾರಿಗೆ ವಿಚಾರಣೆಯ ಬಗ್ಗೆ ಒತ್ತಡವಿಲ್ಲವಂತೆ. ತನ್ನ ಮಗಳದ್ದೇ ಚಿಂತೆಯಾಗಿದೆಯಂತೆ. ಡಾನ್ ರವಿ ಪೂಜಾರಿ ಮಗಳು ಸೆನೆಗಲ್ ದೇಶದಲ್ಲಿ ಪದವಿ ಓದುತ್ತಿದ್ದು, ಕೊನೆಯ ವರ್ಷದ ಪರೀಕ್ಷೆಯ ಸಿದ್ಧತೆಯಲ್ಲಿದ್ದಾಳೆ. ರವಿ ಪೂಜಾರಿ ಸೆನೆಗಲ್ ಜೈಲಿನಲ್ಲಿದ್ದಾಗ ಮಗಳ ಓದಿಗೆ ಯಾವುದೇ ಅಡ್ಡಿ ಆತಂಕ ಇರಲಿಲ್ಲವಂತೆ. ತಂದೆಯನ್ನು ನೋಡಬೇಕು ಎನ್ನಿಸಿದಾಗಲೆಲ್ಲ ಜೈಲಿಗೆ ಹೋಗಿ ನೋಡಿಕೊಂಡು ಬರುತ್ತಿದ್ದಳಂತೆ. ಆದರೆ ಇದೀಗ ಪಾತಕಿ ರವಿ ಪೂಜಾರಿಯನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆ ತಂದಿರುವುದರಿಂದ ಮಗಳ ಜೊತೆ ಮಾತನಾಡವುದು ಹಾಗೂ ನೋಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಿಂತೆಗೀಡಾಗಿದ್ದಾನೆ.

    ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯನ್ನು ಸಿಸಿಬಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ನಾನು ಬೆಂಗಳೂರಿನಲ್ಲಿರುವ ಚಿಂತೆಯಲ್ಲೇ ಪರೀಕ್ಷೆಗೆ ತಯಾರಾಗದೇ, ನನ್ನ ಕೊರಗಿನಲ್ಲಿ ಓದದೆ, ಪರೀಕ್ಷೆ ಫೇಲ್ ಆಗುತ್ತಾಳೇನೋ ಎಂಬ ಚಿಂತೆಯಲ್ಲಿಯೇ ರವಿ ಪೂಜಾರಿ ಕಾಲ ದೂಡುತ್ತಿದ್ದಾನೆ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ.

    ರವಿ ಪೂಜಾರಿ ಶಾಸಕರಾದ ತನ್ವೀರ್ ಸೇಠ್, ಹೆಚ್‍ಎಂ ರೇವಣ್ಣ, ಮಾಜಿ ಶಾಸಕ ಅನಿಲ್ ಲಾಡ್ ಅವರ ಬಳಿ ಹಣದ ಬೆಡಿಕೆ ಇಟ್ಟು, ಜೀವ ಬೆದರಿಕೆ ಹಾಕಿದ್ದ. ಮಲ್ಪೆ ಮೂಲದ ಈ ಗ್ಯಾಂಗ್‍ಸ್ಟರ್ ವಿರುದ್ಧ ಮಂಗಳೂರಿನಲ್ಲಿ 39, ಬೆಂಗಳೂರಿನಲ್ಲಿ 38 ಕೇಸ್ ದಾಖಲಾಗಿವೆ.

    ಈತನನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿತ್ತು. ಬರೋಬ್ಬರಿ ಆರು ತಿಂಗಳುಗಳ ಕರೆಯ ಜಾಡು ಹಿಡಿದು ಮೂಲಕ್ಕೆ ಕೈ ಹಾಕಿ ರವಿ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದು, ಎರಡು ವರ್ಷದ ನಂತರ ಬೆಂಗಳೂರಿಗೆ ಕರೆತಂದಿದ್ದಾರೆ.

    ಕೊಲೆ, ಸುಲಿಗೆ, ಜೀವ ಬೆದರಿಕೆ ಪ್ರಕರಣಗಳಲ್ಲಿ ಕಳೆದ 30 ವರ್ಷಗಳಿಂದ ಪೊಲೀಸರಿಗೆ ಬೇಕಿದ್ದ ಭೂಗತ ಲೋಕದ ಪಾತಕಿ ರವಿ ಪೂಜಾರಿಯನ್ನು ಫೆಬ್ರವರಿ 24ರಂದು ಬೆಂಗಳೂರಿಗೆ ಕರೆ ತರಲಾಗಿದೆ. ಸೆನೆಗಲ್ ದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದ ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರ ಮಾಡಿಸಲು ಆಗಿನಿಂದಲೇ ಪ್ರಯತ್ನಗಳು ನಡೆದಿತ್ತು. ಆದರೆ ಉಭಯ ದೇಶಗಳ ಮಧ್ಯೆ ಹಸ್ತಾಂತರ ಒಪ್ಪಂದ ಏರ್ಪಡದ ಹಿನ್ನೆಲೆಯಲ್ಲಿ ರವಿ ಪೂಜಾರಿ ಹಸ್ತಾಂತರ ವಿಳಂಬವಾಗಿತ್ತು. ಕಳೆದ ವಾರ ಹಸ್ತಾಂತರ ಪ್ರಕ್ರಿಯೆಗೆ ಇದ್ದ ತೊಡಕುಗಳು ನಿವಾರಣೆ ಆದ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರಿಗೆ ಕರೆ ತರಲಾಗಿದೆ. ಫೆಬ್ರವರಿ 24ರ ರಾತ್ರಿ ವಿಮಾನದಲ್ಲಿ ರವಿ ಪೂಜಾರಿಯನ್ನು ಕರೆ ತರಲಾಗಿದ್ದು, ಮಡಿವಾಳದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

  • ‘ಪವರ್’ಫುಲ್ ವ್ಯಕ್ತಿಗೆ ಒಂದು ಕರೆ – ಡಾನ್ ರವಿ ಪೂಜಾರಿ ಅರೆಸ್ಟ್

    ‘ಪವರ್’ಫುಲ್ ವ್ಯಕ್ತಿಗೆ ಒಂದು ಕರೆ – ಡಾನ್ ರವಿ ಪೂಜಾರಿ ಅರೆಸ್ಟ್

    ಬೆಂಗಳೂರು: ಅಂಡರ್ ವರ್ಲ್ಡ್ ಡಾನ್ ಕುಳಿತಲ್ಲೇ ಎಲ್ಲರಿಗೂ ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ದ ಡಾನ್‍ಗೆ ಅದೊಂದು ಕರೆ ಸಂಕಷ್ಟ ತಂದಿತ್ತು, ಅದು ಬೇರೆ ಯಾರಿಗೂ ಅಲ್ಲ, ಆಗಿನ ಪವರ್‌ಫುಲ್ ಮಿನಿಸ್ಟರ್ ಡಿಕೆ ಶಿವಕುಮಾರ್ ಗೆ ಕರೆ ಮಾಡಲು ಪ್ರಯತ್ನಿಸಿ ಈಗ ರವಿ ಪೂಜಾರಿ ಕಂಬಿ ಎಣಿಸುತ್ತಿದ್ದಾನೆ.

    ಹೌದು. ಡಿಕೆಶಿ ಅವರ ಮನೆಯ ಮೇಲೆ ಐಟಿ ದಾಳಿ ನಡೆಯುವಾಗ ದೂರದ ದೇಶದಲ್ಲಿ ಕುಳಿತ್ತಿದ್ದ ರವಿ ಪೂಜಾರಿ ಶಿವಕುಮಾರ್ ಅವರಿಗೆ ಫೋನ್ ಮಾಡೋದಕ್ಕೆ ಪ್ರಯತ್ನ ಮಾಡಿದ್ದನು. ಆದರೆ ಮನೆ ಮೇಲೆ ಐಟಿ ದಾಳಿ ನಡೆಯುತ್ತಿದ್ದರಿಂದ ಅವರು ಫೋನ್ ಎತ್ತಿರಲಿಲ್ಲ. ಇಷ್ಟಕ್ಕೇ ಸುಮ್ಮನಾಗದ ರವಿಪೂಜಾರಿ ಡಿಕೆಶಿ ಬಿಟ್ಟು ಅವರ ತಮ್ಮ ಡಿ.ಕೆ ಸುರೇಶ್‍ಗೆ ಫೋನ್ ಮಾಡಿ ಹತ್ತು ಕೋಟಿ ಹಣ ಕೊಡಬೇಕು. ಇಲ್ಲ ಅಂದ್ರೆ ಪ್ರಾಣ ಹೋಗುತ್ತೆ ಅಂತ ಬೆದರಿಕೆ ಹಾಕಿದ್ದ. ಈ ವಿಚಾರವಾಗಿ ಪೊಲೀಸರು ಕೂಡ ಪ್ರಕರಣ ದಾಖಲು ಮಾಡಿಕೊಂಡಿದ್ದರು.

    ರವಿ ಪೂಜಾರಿ ಮೇಲೆ ಡಿಕೆಶಿ ಸೇಡು ತೀರಿಸಿಕೊಳ್ಳುವುದಕ್ಕೆ ಕಾಯುತ್ತಾ ಇರಬೇಕಾದರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಕೊನೆಗೆ ರವಿಪೂಜಾರಿ ಬಂಧನ ಮಾಡ್ಬೇಕು ಅಂತ ವಿಶೇಷ ತಂಡವನ್ನ ಕೂಡ ತಯಾರು ಮಾಡಲಾಗಿತ್ತು. ಬರೋಬ್ಬರಿ ಆರು ತಿಂಗಳುಗಳ ಕರೆಯ ಜಾಡು ಹಿಡಿದು ಮೂಲಕ್ಕೆ ಕೈ ಹಾಕಿ ರವಿ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದು, ಎರಡು ವರ್ಷದ ನಂತರ ಬೆಂಗಳೂರಿಗೆ ಕರೆತಂದಿದ್ದಾರೆ.

    ಕೊಲೆ, ಸುಲಿಗೆ, ಜೀವ ಬೆದರಿಕೆ ಪ್ರಕರಣಗಳಲ್ಲಿ ಕಳೆದ 30 ವರ್ಷಗಳಿಂದ ಪೊಲೀಸರಿಗೆ ಬೇಕಿದ್ದ ಭೂಗತ ಲೋಕದ ಪಾತಕಿ ರವಿ ಪೂಜಾರಿಯನ್ನು ಸೋಮವಾರ ಬೆಂಗಳೂರಿಗೆ ಕರೆ ತರಲಾಯಿತು. ಸೆನೆಗಲ್ ದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದ ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರ ಮಾಡಿಸಲು ಆಗಿನಿಂದಲೇ ಪ್ರಯತ್ನಗಳು ನಡೆದಿತ್ತು. ಆದರೆ ಉಭಯ ದೇಶಗಳ ಮಧ್ಯೆ ಹಸ್ತಾಂತರ ಒಪ್ಪಂದ ಏರ್ಪಡದ ಹಿನ್ನೆಲೆಯಲ್ಲಿ ರವಿ ಪೂಜಾರಿ ಹಸ್ತಾಂತರ ವಿಳಂಬವಾಗಿತ್ತು. ಕಳೆದ ವಾರ ಹಸ್ತಾಂತರ ಪ್ರಕ್ರಿಯೆಗೆ ಇದ್ದ ತೊಡಕುಗಳು ನಿವಾರಣೆ ಆದ ಹಿನ್ನೆಲೆಯಲ್ಲಿ ಕೋರ್ಟ್ ಎರಡು ದಿನಗಳ ಹಿಂದಷ್ಟೇ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು. ಭಾನುವಾರ ರಾತ್ರಿ 12.40ರ ವಿಮಾನದಲ್ಲಿ ರವಿ ಪೂಜಾರಿಯನ್ನು ಕರೆ ತರಲಾಗಿದ್ದು, ಮಡಿವಾಳದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

    ಶಾಸಕರಾದ ತನ್ವೀರ್ ಸೇಠ್, ಹೆಚ್‍ಎಂ ರೇವಣ್ಣ, ಮಾಜಿ ಶಾಸಕ ಅನಿಲ್ ಲಾಡ್‍ಗೆ ಹಣಕ್ಕೆ ಬೆದರಿಕೆ ಇಟ್ಟು, ಜೀವ ಬೆದರಿಕೆ ಹಾಕಿದ್ದ. ಮಲ್ಪೆ ಮೂಲದ ಈ ಗ್ಯಾಂಗ್‍ಸ್ಟರ್ ವಿರುದ್ಧ ಮಂಗಳೂರಿನಲ್ಲಿ 39, ಬೆಂಗಳೂರಿನಲ್ಲಿ 38 ಕೇಸ್ ದಾಖಲಾಗಿದೆ.

  • ಬೆಂಗಳೂರಿಗೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ರವಿ ಪೂಜಾರಿ

    ಬೆಂಗಳೂರಿಗೆ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ರವಿ ಪೂಜಾರಿ

    -ಮಡಿವಾಳದಲ್ಲಿ ಸ್ಪೆಷಲ್ ಡ್ರಿಲ್

    ಬೆಂಗಳೂರು: ಕೊಲೆ, ಸುಲಿಗೆ, ಜೀವ ಬೆದರಿಕೆ ಪ್ರಕರಣಗಳಲ್ಲಿ ಕಳೆದ 30 ವರ್ಷಗಳಿಂದ ಪೊಲೀಸರಿಗೆ ಬೇಕಿದ್ದ ಭೂಗತ ಲೋಕದ ಪಾತಕಿ ರವಿ ಪೂಜಾರಿಯನ್ನು ಬೆಂಗಳೂರಿಗೆ ಕರೆ ತರಲಾಗಿದೆ.

    ಸೆನೆಗಲ್ ದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದ ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರ ಮಾಡಿಸಲು ಆಗಿನಿಂದಲೇ ಪ್ರಯತ್ನಗಳು ನಡೆದಿದ್ದವು. ಆದರೆ ಉಭಯ ದೇಶಗಳ ಮಧ್ಯೆ ಹಸ್ತಾಂತರ ಒಪ್ಪಂದ ಏರ್ಪಡದ ಹಿನ್ನೆಲೆಯಲ್ಲಿ ರವಿ ಪೂಜಾರಿ ಹಸ್ತಾಂತರ ವಿಳಂಬವಾಗಿತ್ತು. ಕಳೆದ ವಾರ ಹಸ್ತಾಂತರ ಪ್ರಕ್ರಿಯೆಗೆ ಇದ್ದ ತೊಡಕುಗಳು ನಿವಾರಣೆ ಆದ ಹಿನ್ನೆಲೆಯಲ್ಲಿ ಕೋರ್ಟ್ ಎರಡು ದಿನಗಳ ಹಿಂದಷ್ಟೇ ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು. ರಾತ್ರಿ 12.40ರ ವಿಮಾನದಲ್ಲಿ ರವಿ ಪೂಜಾರಿಯನ್ನು ಕರೆ ತರಲಾಗಿದ್ದು, ಮಡಿವಾಳದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

    ಇಂದು ರವಿ ಪೂಜಾರಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಶಾಸಕರಾದ ತನ್ವೀರ್ ಸೇಠ್, ಹೆಚ್‍ಎಂ ರೇವಣ್ಣ, ಮಾಜಿ ಶಾಸಕ ಅನಿಲ್ ಲಾಡ್‍ಗೆ ಹಣಕ್ಕೆ ಬೆದರಿಕೆ ಇಟ್ಟು, ಜೀವ ಬೆದರಿಕೆ ಹಾಕಿದ್ದ. ಮಲ್ಪೆ ಮೂಲದ ಈ ಗ್ಯಾಂಗ್‍ಸ್ಟರ್ ವಿರುದ್ಧ ಮಂಗಳೂರಿನಲ್ಲಿ 39, ಬೆಂಗಳೂರಿನಲ್ಲಿ 38 ಕೇಸ್ ಇವೆ.

    ಮಲ್ಪೆ ಮೂಲದ ರವಿ ಪೂಜಾರಿ ಮುಂಬೈನಲ್ಲಿಯೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದನು. ಬಾಲಾ ಜ್ವಾಲೆಯನ್ನು ಕೊಲೆ ಮಾಡಿದ್ದ ರವಿ ಪೂಜಾರಿ ಭೂಗತ ಲೋಕದಲ್ಲಿ ಪ್ರವರ್ಧಮಾನಕ್ಕೆ ಬಂದು, ಭೂಗತ ಪಾತಕಿ ಚೋಟಾ ರಾಜನ್ ತಂಡಕ್ಕೆ ಸೇರ್ಪಡೆಯಾಗಿದ್ದನು. 1990ರಲ್ಲಿ ದುಬೈಗೆ ಎಸ್ಕೇಪ್ ಆಗಿದ್ದ ರವಿ ಪೂಜಾರಿ ಅಲ್ಲಿಂದಲೇ ಬಾಲಿವುಡ್ ನಟರಾದ ಶಾರೂಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ನಿರ್ದೇಶಕ ಕರಣ್ ಜೋಹಾರ್, ನಿರ್ಮಾಪಕ ರಾಕೇಶ್ ರೋಷನ್‍ಗೆ ಬೆದರಿಕೆ ಹಾಕಿದ್ದನು. ತನ್ನ ಹಿಂಬಾಲಕರ ಮೂಲಕ ಮುಂಬೈನಲ್ಲಿ ಓಂಪ್ರಕಾಶ್ ಕುಕ್ರೆಜಾ ಕೊಲೆ, ಬಿಲ್ಡರ್ಸ್ ಕೊಲೆಗೆ ಯತ್ನಿಸಿದ್ದನು.

  • ಸೆನಗಲ್‍ನಿಂದ ಭೂಗತ ಪಾತಕಿ ರವಿ ಪೂಜಾರಿ ಎಸ್ಕೇಪ್?

    ಸೆನಗಲ್‍ನಿಂದ ಭೂಗತ ಪಾತಕಿ ರವಿ ಪೂಜಾರಿ ಎಸ್ಕೇಪ್?

    ಬೆಂಗಳೂರು: ನಕಲಿ ಪಾಸ್‍ಪೋರ್ಟ್ ಆರೋಪದಡಿ ಪಶ್ಚಿಮ ಆಫ್ರಿಕಾದ ಸೆನಗಲ್‍ನಲ್ಲಿ 4 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಕರಾವಳಿ ಮೂಲದ ಭೂಗತ ದೊರೆ ರವಿ ಪೂಜಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

    ಹೇಗೆ ಪರಾರಿಯಾಗಿದ್ದಾನೆ ಎನ್ನುವುದಕ್ಕೆ ಸ್ಪಷ್ಟತೆ ಸಿಕ್ಕಿಲ್ಲ. ನ್ಯಾಯಾಲಯದಿಂದ ಬೇಲ್ ಪಡೆದು ರವಿ ಪೂಜಾರಿ ಬಿಡುಗಡೆಹೊಂದಿದ್ದಾನೆ. ಈ ಸಂದರ್ಭವನ್ನೇ ಬಳಸಿಕೊಂಡು ಆತ ಸೆನೆಗಲ್ ನಿಂದ ಪರಾರಿಯಾಗಿದ್ದಾನೋ ಅಥವಾ ಜೈಲಿನಿಂದಲೇ ಪರಾರಿಯಾಗಿದ್ದಾನೋ ಎನ್ನುವುದು ಖಚಿತವಾಗಿಲ್ಲ. ರವಿ ಪೂಜಾರಿ ಪರಾರಿಯಾಗಿದ್ದಾನೆ ಎಂದು ಸೆನೆಗಲ್ ಪತ್ರಿಕೆಗಳು ವರದಿ ಮಾಡಿವೆ.

    ಈ ಕುರಿತು ಪೊಲೀಸ್ ವಲಯದಲ್ಲೂ ಚರ್ಚೆ ಆರಂಭವಾಗಿದೆ. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ರವಿ ಪೂಜಾರಿ ಸೆನೆಗಲ್‍ನಿಂದ ಪರಾರಿಯಾಗಿದ್ದಾನೆ ಎಂದು ಅಧಿಕೃತವಾಗಿ ಯಾರೂ ತಿಳಿಸಿಲ್ಲ.

    ಈ ಸುದ್ದಿ ನಿಜವೇ ಆದರೆ ಹಲವಾರು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದ ರವಿ ಪೂಜಾರಿಯನ್ನು ಕಾನೂನು ಹೋರಾಟದಡಿ ಗಡೀಪಾರು ಮಾಡುವ ಭಾರತದ ಪೊಲೀಸರ ಪ್ರಯತ್ನಕ್ಕೆ ತಣ್ಣೀರು ಬಿದ್ದಿದೆ. ರವಿ ಪೂಜಾರಿಯನ್ನು ಕರೆತರಲು ಬೆಂಗಳೂರು, ಮುಂಬೈ ಪೊಲೀಸರು ಕಳೆದ 3 ತಿಂಗಳಿಂದ ಸೆನಗಲ್‍ನಲ್ಲಿ ಭಾರೀ ಪ್ರಯತ್ನ ನಡೆಸಿದ್ದರು.

    ಆತನ ವಿರುದ್ಧ ದಾಖಲಾಗಿರೋ ಕೇಸ್‍ಗಳು, ಸಾಕ್ಷ್ಯಾಧಾರಗಳನ್ನು ಫ್ರೆಂಚ್ ಭಾಷೆಗೆ ಭಾಷಾಂತರ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ಅಂತಿಮ ಹಂತದಲ್ಲಿದ್ದು, ಹಸ್ತಾಂತರ ಆಗುವ ನಿರೀಕ್ಷೆ ಇತ್ತು. ಈ ಮಧ್ಯೆ, ರವಿ ಪೂಜಾರಿ ಅರೆಸ್ಟ್ ಕ್ರೆಡಿಟ್‍ಗಾಗಿ ಸಿಎಂ ಕುಮಾರಸ್ವಾಮಿ ಮತ್ತು ಬಿಜೆಪಿ ನಡುವೆ ಫೆಬ್ರವರಿ ತಿಂಗಳಲ್ಲಿ ಭಾರೀ ಟ್ವೀಟ್ ಸಮರವೇ ನಡೆದಿತ್ತು.

  • ಮುಂಬೈನ ರೌಡಿ ನೀಡಿದ್ದ ರವಿ ಪೂಜಾರಿಯ ಸುಳಿವು!

    ಮುಂಬೈನ ರೌಡಿ ನೀಡಿದ್ದ ರವಿ ಪೂಜಾರಿಯ ಸುಳಿವು!

    ಬೆಂಗಳೂರು: ಮೋಸ್ಸ್ ವಾಂಟೆಡ್ ಭೂಗತ ಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಕಳೆದ 15 ವರ್ಷಗಳಿಂದ ವಿವಿಧ ದೇಶಗಳಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯ ಸುಳಿವಳನ್ನು ಮುಂಬೈ ರೌಡಿ ನೀಡಿದ್ದ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

    ಭೂಗತ ಪಾತಕಿ ರವಿ ಪೂಜಾರಿ ಬಗ್ಗೆ ಸುಳಿವು ನೀಡಿದ್ದು ಮುಂಬೈನ ರೌಡಿ ಆಕಾಶ್ ಶೆಟ್ಟಿ. ವಾರದ ಹಿಂದೆ ಸಿನಿಮೀಯ ರೀತಿಯಲ್ಲಿ ಮುಂಬೈ ಪೊಲೀಸರಿಂದ ಮಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ರೌಡಿ ಆಕಾಶ್ ಶೆಟ್ಟಿ, ರವಿಪೂಜಾರಿ ಬಗ್ಗೆ ಬಾಯಿಬಿಟ್ಟಿದ್ದನು.

    ಮುಂಬೈನಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾಗ ಆಕಾಶ್ ಶೆಟ್ಟಿಗೆ ರವಿ ಪೂಜಾರಿ ಜೊತೆ ನಂಟಿತ್ತು. 3 ವರ್ಷಗಳ ಹಿಂದೆಯಷ್ಟೇ ಆಕಾಶ್ ಮುಂಬೈ ಬಿಟ್ಟು ಉಡುಪಿಗೆ ಮರಳಿದ್ದ. ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ವೀರಕಂಬ ಎಂಬಲ್ಲಿ ಮದುವೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಆಕಾಶ್‍ನನ್ನು ಪೊಲೀಸರು ಬಂಧಿಸಿ ಮುಂಬೈನ ವಿಶೇಷ ಕೋರ್ಟಿಗೆ ಹಾಜರುಪಡಿಸಿ ಕಸ್ಟಡಿಗೆ ತೆಗೆದುಕೊಂಡಿದ್ದರು. ಈ ವೇಳೆ ಆಕಾಶ್ ಬಾಯಿ ಬಿಡಿಸಿದ್ದ ಪೊಲೀಸರಿಗೆ ರವಿ ಪೂಜಾರಿ ಬಗ್ಗೆ ಸುಳಿವು ಸಿಕ್ಕಿತ್ತು ಎನ್ನಲಾಗಿದೆ.

    ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ರವಿ ಪೂಜಾರಿ ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು, ಬಿಲ್ಡರ್‍ಗಳಿಗೆ ಫೋನ್ ಮೂಲಕ ಧಮ್ಕಿ ಹಾಕ್ತಿದ್ದ. 60ಕ್ಕೂ ಹೆಚ್ಚು ಕೇಸ್‍ಗಳಲ್ಲಿ ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ ಚೋಟಾ ರಾಜನ್ ಜೊತೆ ಸೇರಿಕೊಂಡು ಅಂಡರ್ ವರ್ಲ್ಡ್ ಡಾನ್ ಆಗಿ ದುಬೈ, ಮಲೇಷ್ಯಾ, ಆಸ್ಟ್ರೇಲಿಯಾದಲ್ಲಿ ತಲೆ ಮರೆಸಿಕೊಳ್ತಿದ್ದ. ಸದ್ಯ ಸೆನಗಲ್‍ನ ಸ್ಥಳೀಯ ಪೊಲೀಸರು ಭೂಗತ ಪಾತಕಿ ರವಿಪೂಜಾರಿಯನ್ನು ವಶಕ್ಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಭೂಗತಪಾತಕಿ ರವಿ ಪೂಜಾರಿ ಪೊಲೀಸ್ ವಶಕ್ಕೆ

    ಭೂಗತಪಾತಕಿ ರವಿ ಪೂಜಾರಿ ಪೊಲೀಸ್ ವಶಕ್ಕೆ

    ನವದೆಹಲಿ: ಭಾರತದ ಕುಖ್ಯಾತ ಭೂಗತಪಾತಕಿ ರವಿ ಪೂಜಾರಿಯನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಬರೋಬ್ಬರಿ 15 ವರ್ಷಗಳಿಂದ ಬೇರೆ ಬೇರೆ ದೇಶಗಳಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು ಇಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಭೂಗತವಾಗಿದ್ದುಕೊಂಡೆ ಕ್ರಿಮಿನಲ್ ಚಟುವಟಿಕೆ ನಡೆಸುತ್ತಿದ್ದ ರವಿ ಪೂಜಾರಿ ಮೇಲೆ ದೇಶದ ವಿವಿಧ ರಾಜ್ಯದಲ್ಲಿ ಪ್ರಕರಣಗಳು ದಾಖಲಾಗಿದೆ.

    ರವಿ ಪೂಜಾರಿ ಬಂಧನಕ್ಕೆ ಭಾರತ ಸರ್ಕಾರ ಪಶ್ಚಿಮ ಆಫ್ರಿಕಾ ದೇಶದವಾದ ಸೆನೆಗಲ್ ನೊಂದಿಗೆ ಸಂಪರ್ಕದಲ್ಲಿತ್ತು ಎನ್ನಲಾಗಿದ್ದು, ಸಿಸಿಬಿಯ ಹಿಟ್ ಲಿಸ್ಟ್ ನಲ್ಲಿದ್ದ. ಈ ಕುರಿತು ಭಾರತದ ಸರ್ಕಾರಕ್ಕೆ ಸೆನೆಗಲ್ ಸರ್ಕಾರ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಆದರೆ ಅಧಿಕೃತ ಆಗಬೇಕಿದೆ. ಸದ್ಯ ಪೊಲೀಸ್ ವಶದಲ್ಲಿ ಇರುವ ರವಿ ಪೂಜಾರಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಓದಿ: ‘ನಿನ್ನನ್ನು ಗುಂಡಿಕ್ಕಿ ಕೊಲ್ತೀನಿ’ – ಮಾಜಿ ಶಾಸಕ ಅನಿಲ್ ಲಾಡ್‍ಗೆ ರವಿ ಪೂಜಾರಿ ಬೆದರಿಕೆ

    ರವಿ ಪೂಜಾರಿಯ ಬಂಧನ ಬಗ್ಗೆ ಖಚಿತ ಮಾಹಿತಿ ಲಭಿಸಿದ್ದರು, ಯಾವ ಕಾರಣಕ್ಕಾಗಿ ಬಂಧನ ಮಾಡಲಾಗಿದೆ ಹಾಗೂ ವಿಚಾರಣೆ ಕುರಿತು ಹೆಚ್ಚಿನ ಮಾಹಿತಿ ಲಭಿಸಬೇಕಿದೆ. ಪೊಲೀಸ್ ಬಂಧನ ಮಾಡಿ ವಿಚಾರಣೆ ನಡೆಸಿದ ಬಳಿಕ ಭಾರತಕ್ಕೆ ಹಸ್ತಾಂತರ ಮಾಡಲಿದ್ದರಾ ಎಂಬ ಬಗ್ಗೆಯೂ ಮಾಹಿತಿ ಲಭಿಸಬೇಕಿದೆ. ಈ ಹಿಂದೆ ಕರ್ನಾಟಕದ ಮಾಜಿ ಶಾಸಕ ಅನಿಲ್ ಲಾಡ್ ಹಾಗೂ ಮಾಜಿ ಸಚಿವ ತನ್ವೀರ್ ಸೇಠ್, ಸಂಸದ ಡಿಕೆ ಸುರೇಶ್, ಶಿವಸೇನಾ ಸಂಸದರು ಸೇರಿದಂತೆ ಹಲವು ಉದ್ಯಮಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದನ್ನು ಓದಿ: ಹೌದು, ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಹಾಕಿದ್ದು ನಾನೇ: ರವಿ ಪೂಜಾರಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ನಿನ್ನನ್ನು ಗುಂಡಿಕ್ಕಿ ಕೊಲ್ತೀನಿ’ – ಮಾಜಿ ಶಾಸಕ ಅನಿಲ್ ಲಾಡ್‍ಗೆ ರವಿ ಪೂಜಾರಿ ಬೆದರಿಕೆ

    ‘ನಿನ್ನನ್ನು ಗುಂಡಿಕ್ಕಿ ಕೊಲ್ತೀನಿ’ – ಮಾಜಿ ಶಾಸಕ ಅನಿಲ್ ಲಾಡ್‍ಗೆ ರವಿ ಪೂಜಾರಿ ಬೆದರಿಕೆ

    ಬೆಂಗಳೂರು: ಮಾಜಿ ಶಾಸಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯರು ಆಗಿರುವ ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಅವರಿಗೆ ಜೀವ ಬೆದರಿಕೆ ಸಂದೇಶ ಬಂದಿದ್ದು, ನಿನ್ನನ್ನು ಗುಂಡಿಕ್ಕಿ ಕೊಲ್ಲುವುದಾಗಿ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಬೆದರಿಕೆ ಹಾಕಲಾಗಿದೆ.

    ಡಿಸೆಂಬರ್ 5 ರಂದು ಮಾಜಿ ಶಾಸಕರಿಗೆ ಮೊಬೈಲ್ ಮೂಲಕ ಮೆಸೇಜ್ ಮಾಡಿರುವ ಭೂಗತ ಪಾತಕಿ ಹಣಕಾಸು ವ್ಯವಹಾರದ ಸಂಬಂಧ ಬೆದರಿಕೆ ಹಾಕಿದ್ದಾನೆ. ಅನಿಲ್ ಲಾಡ್ ವ್ಯವಹಾರಿಕ ಸಂಬಂಧದ ಹಿನ್ನೆಲೆಯಲ್ಲಿ ನಗರದ ಶಿವಕುಮಾರ್ ಎಂಬವರ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಈಗ ಜೀವ ಬೆದರಿಕೆ ಹಾಕಿರುವುದರಿಂದ ಶಿವಕುಮಾರ್ ಹಾಗೂ ರವಿ ಪೂಜಾರಿ ನಡುವಿನ ಸಂಬಂಧ ಏನು ಎನ್ನುವುದರ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

    ಗಣಿ ಉದ್ಯಮಿ ಆಗಿರುವ ಅನಿಲ್ ಲಾಡ್ 15 ಕೋಟಿ ರೂ. ಹಣವನ್ನು ಬೆಂಗಳೂರು ಮೂಲದ ಶಿವಕುಮಾರ್‍ಗೆ ನೀಡಿದ್ದು, ಈ ಹಣ ವಾಪಸ್ ಕೇಳಿದ್ದರು. ಆದರೆ ಹಣ ಹಿಂದಿರುಗಿಸುವ ಬದಲಾಗಿ ಅನಿಲ್ ಲಾಡ್ ಅವರಿಗೆ ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಅನಿಲ್ ಲಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ನಡುವೆ ವಿದೇಶದಲ್ಲಿ ಅಡಗಿ ಕುಳಿತಿರುವ ರವಿ ಪೂಜಾರಿ ಡಿಸೆಂಬರ್ 5ರಂದು ಜೀವ ಬೆದರಿಕೆ ಹಾಕಿದ್ದಾನೆ.

    ರವಿ ಪೂಜಾರಿ ಹೆಸರಿನಲ್ಲಿ ಅಂತರಾಷ್ಟ್ರೀಯ ನಂಬರ್‍ನಿಂದ ಬಂದಿರುವ ಮೆಸೇಜ್‍ನಲ್ಲಿ ಶಿವಕುಮಾರ್ ನೀಡಬೇಕಿದ್ದ ಹಣ ಮರೆತು ಬಿಡಿ. ಇಲ್ಲವಾದರೆ ನಿನ್ನನ್ನು ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ರವಿ ಪೂಜಾರಿ ಬೆದರಿಕೆ ಹಾಕಿದ್ದಾನೆ. ಸದ್ಯ ಅನಿಲ್ ಲಾಡ್ ಗೃಹ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಪ್ರಕರಣದ ಕುರಿತು ತನಿಖೆಯನ್ನು ಮಾಡುವಂತೆ ಮನವಿ ಮಾಡಿದ್ದಾರೆ.

    ಗೃಹ ಸಚಿವರು ಪೊಲೀಸ್ ಇಲಾಖೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಬೆದರಿಕೆ ಸಂದೇಶ ಬಂದಿರುವ ನಂಬರ್ ಅಂತರಾರಾಷ್ಟ್ರೀಯ ಸಂಖ್ಯೆ ಆಗಿರುವುದಿರಿಂದ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

    ಈ ಪ್ರಕರಣದಲ್ಲಿ ರವಿಪೂಜಾರಿ ಮಧ್ಯಪ್ರವೇಶ ಮಾಡಿದ್ದು ಯಾಕೆ? ಶಿವಕುಮಾರ್ ಹಾಗೂ ರವಿ ಪೂಜಾರಿ ನಡುವಿನ ಸಂಬಂಧ ಏನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುವ ಸಾಧ್ಯತೆ ಇದೆ. ಅಲ್ಲದೇ ಅನಿಲ್ ಲಾಡ್ ಹಾಗೂ ಶಿವಕುಮಾರ್ ನಡುವೆ ಯಾವ ರೀತಿಯ ವ್ಯವಹಾರ ನಡೆದಿದೆ ಎಬುವುದರ ಬಗ್ಗೆಯೂ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹೌದು, ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಹಾಕಿದ್ದು ನಾನೇ: ರವಿ ಪೂಜಾರಿ

    ಹೌದು, ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಹಾಕಿದ್ದು ನಾನೇ: ರವಿ ಪೂಜಾರಿ

    ಮಂಗಳೂರು: ಸಿದ್ದರಾಮಯ್ಯ ಸರ್ಕಾರದ ಸಚಿವ ತನ್ವೀರ್ ಸೇಠ್ ಅವರಿಗೆ ಬೆದರಿಕೆ ಹಾಕಿದ್ದು ನಾನೇ ಎಂದು ರವಿ ಪೂಜಾರಿ ಹೇಳಿಕೊಂಡಿದ್ದಾನೆ.

    10 ಕೋಟಿ ರೂಪಾಯಿ ಕೊಡು, ಇಲ್ಲಾಂದ್ರೆ ಗುಂಡಿಟ್ಟು ಸಾಯಿಸ್ತೀವಿ. ನಾನು ಕಿಶೋರ್ ಪೂಜಾರಿ, ಆರ್‍ಪಿ ಗ್ರೂಪಿನವನು. 10 ಕೋಟಿ ರೂ. ಕೊಡಬೇಕು. ಇಲ್ಲವಾದ್ರೆ ಗುಂಡಿಟ್ಟು ಸಾಯಿಸ್ತೀವಿ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಸಂದೇಶ ಬಂದಿತ್ತು. ಸದ್ಯ ರವಿ ಪೂಜಾರಿ ತಾನೇ ಸಚಿವರಿಗೆ ಬೆದರಿಕೆ ಹಾಕಿದ್ದು ಅಂತಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾನೆ.

    ಆಡಿಯೋದಲ್ಲಿ ಏನಿದೆ?: ತನ್ವೀರ್ ಸೇಠ್ ಹೆಸರಿಗಸ್ಟೇ ಶಿಕ್ಷಣ ಸಚಿವ. ಅವರಿಂದ ಬಡವರಿಗೆ ತೊಂದರೆಗಳಾಗುತ್ತಿದೆ. ಅವರು ಶ್ರೀಮಂತರ ಪರವಾಗಿಯೇ ಕೆಲಸ ಮಾಡುತ್ತಿದ್ದಾರೆ. ಬಡವರ ಪರವಾದ ಯಾವ ಕೆಲಸಗಳನ್ನೂ ಮಾಡ್ತಿಲ್ಲ. ಈ ಬಗ್ಗೆ ಬಡವರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ಶ್ರೀಮಂತರಿಂದ ಸಂಗ್ರಹಿಸಿದ ಹಣ ಸಚಿವರ ಹತ್ರ ಬೇಕಾದಷ್ಟು ಇದೆ. ಅದರಲ್ಲಿ ಹತ್ತು ಕೋಟಿ ನನಗೆ ಕೊಡಲೇಬೇಕು ಅಂತಾ ಹೇಳಿದ್ದೇನೆ.

    ತನ್ವೀರ್ ಸೇಠ್ ನೀಡಿದ ಪೊಲೀಸ್ ಕೇಸ್‍ಗೆ ತಲೆಕೆಡಿಸಿಕೊಳ್ಳಲ್ಲ. ದೂರು ಕೊಟ್ರೆ ಕೊಡಲಿ, ನಾನೇನು ತಲೆಕೆಡಿಸಿಕೊಳ್ಳಲ್ಲ ಅಂತಾ ರವಿ ಪೂಜಾರಿ ಹೇಳಿದ್ದಾನೆ.

    ಬೆದರಿಕೆ ಕರೆ ಬಂದ ಬಳಿಕ ತನ್ವೀರ್ ಸೇಠ್ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿದ್ದಾರೆ.

    https://youtu.be/CVoLaIKwhk0