ಭೋಜಪುರಿ ಖ್ಯಾತನಟ, ಹಾಗೂ ಬಿಜೆಪಿ ಮುಖಂಡ ರವಿ ಕಿಶನ್ (Ravi Kishan) ವಿರುದ್ಧ ಕೆಲವು ದಿನಗಳಿಂದ ತಾಯಿ-ಮಗಳು ನಿರಂತರ ಆರೋಪ ಮಾಡುತ್ತಿದ್ದಾರೆ. ನಟಿ ಶಿನೋವಾ ಮತ್ತು ಅವರ ತಾಯಿ ಇಬ್ಬರೂ ರವಿ ಕಿಶನ್ ಬಗ್ಗೆ ಸಾಕಷ್ಟು ಆರೋಪ ಮಾಡಿದ್ದಾರೆ. ನನಗೆ ಮಗಳನ್ನು ಕೊಟ್ಟು ರವಿ ಕೈ ಕೊಟ್ಟಿದ್ದಾರೆ ಎಂದು ಮೊನ್ನೆಯಷ್ಟೇ ಶಿನೋವಾ ಅಮ್ಮ ಅಪರ್ಣಾ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಭೋಜಪುರಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ಶಿನೋವಾ (Shinova), ಇದೀಗ ಕೋರ್ಟ್ ಮೆಟ್ಟಿಲು ಏರಿದ್ದರು, ರವಿ ಕಿಶನ್ ನನ್ನ ತಂದೆ ಎಂದು ಸಾಬೀತು ಪಡಿಸೋದಕ್ಕಾಗಿ ಡಿಎನ್ಎ (DNA) ಪರೀಕ್ಷೆಗೂ ಸಿದ್ಧ ಎಂದಿದ್ದರು. ಡಿಎನ್ಎ ಚೆಕ್ ಮಾಡಿಸೋಕಾಗಿ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿಯನ್ನೂ ಅವರು ಸಲ್ಲಿಸಿದ್ದರು. ಈ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.
ಈ ಎಲ್ಲ ಆರೋಪವನ್ನೂ ರವಿ ಕಿಶನ್ ನಿರಾಕರಿಸುತ್ತಲೇ ಬಂದಿದ್ದಾರೆ. ದುಡ್ಡಿಗಾಗಿ ತಾಯಿ ಮತ್ತು ಮಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. 20 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ಹಾಕುವುದಾಗಿ ಬೆದರಿಸುತ್ತಿದ್ದಾರೆ ಎಂದು ಕಿಶನ್ ಪರ ವಕೀಲರು ಹೇಳಿದ್ದಾರೆ.
ಚಿತ್ರರಂಗದಲ್ಲಿ ನಟ ರವಿ ಕಿಶನ್ (Ravi Kishan) ಅವರು ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟನೆ ಮಾತ್ರವಲ್ಲ ರಾಜಕಾರಣದಲ್ಲೂ ಸಕ್ರಿಯರಾಗಿದ್ದಾರೆ. ಹೀಗಿರುವಾಗ, ಮಗಳ ನಡೆ ಬಗ್ಗೆ ಹೆಮ್ಮೆಯಿಂದ ‘ಹೆಬ್ಬುಲಿ’ ಖಳನಟ ರವಿ ಕಿಶನ್ ಮಾತನಾಡಿದ್ದಾರೆ. ಭಾರತೀಯ ಸೇನೆಗೆ (Defence Force)ರವಿ ಕಿಶನ್ ಪುತ್ರಿ ಇಶಿತಾ ಶುಕ್ಲಾ (Ishita Shukla) ಸೇರಿದ್ದಾರೆ.
ಬಾಲಿವುಡ್ ನಟ ರವಿ ಕಿಶನ್ ಅವರು ಕನ್ನಡದ ‘ಹೆಬ್ಬುಲಿ’ (Hebbuli Film) ಚಿತ್ರದಲ್ಲಿ ಸುದೀಪ್ (Kiccha Sudeep) ಮುಂದೆ ಅಬ್ಬರಿಸಿ ಗಮನ ಸೆಳೆದಿದ್ದರು. ದ್ರೋಣ, ಶಿವಾರ್ಜುನ, ರಾಬರ್ಟ್ ಚಿತ್ರದಲ್ಲಿಯೂ ರವಿ ಕಿಶನ್ ನಟಿಸಿದ್ದಾರೆ. ಹಿಂದಿ, ಭೋಜಪುರಿ, ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲು ಅರ್ಜುನ್ (Allu Arjun)ಅಭಿನಯದ ಸೂಪರ್ ಹಿಟ್ ಸಿನಿಮಾ ‘ರೇಸ್ ಗುರಂ’ ಚಿತ್ರದಲ್ಲಿ ಅವರು ಮಾಡಿದ ವಿಲನ್ ಪಾತ್ರ ಸಾಕಷ್ಟು ಗಮನ ಸಳೆಯಿತು. 2019ರ ಲೋಕಸಭೆ ಚುನಾವಣೆಯಲ್ಲಿ ಗೋರಖ್‌ಪುರ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಗೆದ್ದು ಸಂಸದರಾಗಿದ್ದಾರೆ. ಪ್ರಸ್ತುತ ರವಿ ಕಿಶನ್ ಮಗಳು ಇಶಿತಾ ಸೇನೆಗೆ ಸೇರಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ:‘ಆದಿಪುರುಷ’ ಸಿನಿಮಾ ತಂಡಕ್ಕೆ ಬಿಸಿ ಮುಟ್ಟಿಸಿದ ಅಲಹಾಬಾದ್ ಹೈಕೋರ್ಟ್
ಕೇಂದ್ರ ಸರ್ಕಾರ ಇತ್ತೀಚೆಗೆ ಅಗ್ನಿಪಥ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಇಶಿತಾ ಭಾರತೀಯ ಸೇನೆ ಸೇರಿದ್ದಾರೆ. ಇದನ್ನು ರವಿ ಕಿಶನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಶಿತಾಗೆ ಈಗ ಕೇವಲ 21 ವರ್ಷ. ದೇಶ ಸೇವೆ ಮಾಡುವ ಅವಕಾಶ ಇಶಿತಾಗೆ ಸಿಕ್ಕಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮಕ್ಕಳು ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ. ಅಥವಾ ಬ್ಯುಸಿನೆಸ್ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಪುತ್ರಿ ಇಶಿತಾ ಕನಸಿಗೆ ರವಿ ಕಿಶನ್ ಬೆಂಬಲಿಸಿದ್ದಾರೆ. ಒಟ್ನಲ್ಲಿ ಇಶಿತಾ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
1993ರಲ್ಲಿ ಪ್ರೀತಿ ಎಂಬುವರ ಜೊತೆ ರವಿ ಕಿಶನ್ ಮದುವೆಯಾದರು. ಒಬ್ಬ ಮಗ ಮತ್ತು ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಅದರಲ್ಲಿ ರಿವಾ ಕಿಶನ್ ಶುಕ್ಲಾ ಎಂಬ ಪುತ್ರಿ 2020ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ‘ಸಬ್ ಕುಶಲ್ ಮಂಗಲ್’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ನವದೆಹಲಿ: ಲೋಕಸಭೆಯಲ್ಲಿ ಜನಸಂಖ್ಯೆ ನಿಯಂತ್ರಣ ಕುರಿತ ಖಾಸಗಿ ಮಸೂದೆಯನ್ನು ಮಂಡಿಸಲಿದ್ದೇನೆ ಎಂದು ನಟ ಹಾಗೂ ಬಿಜೆಪಿ ಸಂಸದ ರವಿ ಕಿಶನ್ ಶುಕ್ರವಾರ ಹೇಳಿದ್ದಾರೆ.
ಉತ್ತರ ಪ್ರದೇಶದ ಗೋರಖ್‌ಪುರ ಕ್ಷೇತ್ರದ ಸಂಸದರಾಗಿರುವ ಕಿಶನ್ ಅವರಿಗೆ ಸ್ವತಃ ನಾಲ್ವರು ಮಕ್ಕಳಿದ್ದಾರೆ. ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಇದನ್ನೂ ಓದಿ: ಬಿಎಸ್‌ವೈಗೆ ಸುಪ್ರೀಂ ಕೋರ್ಟ್‌ನಿಂದ ಬಿಗ್ ರಿಲೀಫ್
ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ತಂದಾಗ ಮಾತ್ರ ನಾವು ವಿಶ್ವಗುರುವಾಗಲು ಸಾಧ್ಯ. ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರುವುದು ಬಹಳ ಮುಖ್ಯ ಎಂದು ಕಿಶನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜನಸಂಖ್ಯೆ ನಿಯಂತ್ರಣಕ್ಕೆ ಯಾವುದೇ ಶಾಸನಾತ್ಮಕ ಕ್ರಮವನ್ನು ಕೇಂದ್ರವು ಪರಿಗಣಿಸುತ್ತಿಲ್ಲ ಎಂದು ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದರು. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ಪರಿಚಯಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
2023ರ ವೇಳೆಗೆ ಭಾರತದ ಜನಸಂಖ್ಯೆಯು ಚೀನಾವನ್ನು ಮೀರಿಸುತ್ತದೆ ಎಂದು ವಿಶ್ವಸಂಸ್ಥೆ ಭವಿಷ್ಯ ನುಡಿದಿದೆ.
Live Tv
[brid partner=56869869 player=32851 video=960834 autoplay=true]