Tag: Ravi D Chenannanavar

  • ಪೊಲೀಸರ ಅಭಿಯಾನಕ್ಕೆ ಯಶ್ ಸಾಥ್ – “Do Not Entertain False Rumors” ಅಂದ್ರು ರವಿಚೆನ್ನಣ್ಣವರ್

    ಪೊಲೀಸರ ಅಭಿಯಾನಕ್ಕೆ ಯಶ್ ಸಾಥ್ – “Do Not Entertain False Rumors” ಅಂದ್ರು ರವಿಚೆನ್ನಣ್ಣವರ್

    ಬೆಂಗಳೂರು: ಇತ್ತೀಚೆಗೆ ರಾಜ್ಯಾದ್ಯಂತ ಮಕ್ಕಳ ಕಳ್ಳರ ವದಂತಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೆ ಈ ಸುಳ್ಳು ವದಂತಿಗೆ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ.

    ಮಕ್ಕಳ ಕಳ್ಳರು ಎಂದು ಶಂಕಿಸಿ ಜನರು ಇಬ್ಬರನ್ನು ಥಳಿಸಿ ಕೊಲೆ ಮಾಡಿದ್ದಾರೆ. ಆದ್ದರಿಂದ ಈ ರೀತಿಯ ಸುಳ್ಳು ವದಂತಿಗೆ ಜನರು ಗಾಬರಿಯಾಗಬಾರದೆಂದು ಪೊಲೀಸರು ಜನಜಾಗೃತಿ ಅಭಿಯಾನವನ್ನು ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಪೊಲೀಸರ ಜನಜಾಗೃತಿ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.

    ಬೆಂಗಳೂರು ನಗರ ಪೊಲೀಸರು ಮಕ್ಕಳ ಕಳ್ಳರಿದ್ದಾರೆ ಎಂದು ಸುಳ್ಳು ವದಂತಿ ಬಗ್ಗೆ ಒಂದು ಪಾಂಪ್ಲೆಟ್ ಮಾಡಿಸಿ ನಗರದಲ್ಲಿ ಹಂಚುತ್ತಿದ್ದು, ಜನರಲ್ಲಿ ಮನವಿ ಮಾಡುತ್ತಿದ್ದಾರೆ. ಈ ಅಭಿಯಾನದಲ್ಲಿ ಯಶ್ ಪಾಲ್ಗೊಂಡಿದ್ದು, ಪಾಂಪ್ಲೆಟ್ ಹಿಡಿದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

    ಮಕ್ಕಳ ಕಳ್ಳರ ಗುಂಪು ಇದೆ ಎಂದು ನಂಬಬಾರದು. ಒಂದು ವೇಳೆ ಯಾವುದೇ ರೀತಿ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ನಮ್ಮ 100 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಿ, ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ಮನವಿ ಮಾಡಿದ್ದಾರೆ.

    ಪೊಲೀಸರ ಮತ್ತು ನಟ ಯಶ್ ಅವರ ಜಾಗೃತಿ ಮೂಡಿಸುತ್ತಿರುವ ಫೋಟೋ ಹಾಕಿ, “ಜನಜಾಗೃತಿ ಅಭಿಯಾನದಲ್ಲಿ ಯಶಸ್ಸು ಕಂಡ ಪೊಲೀಸರು, ಮಕ್ಕಳ ಕಳ್ಳರಿದ್ದಾರೆಂಬ ಸುಳ್ಳು ವದಂತಿಗಳನ್ನು ನಂಬದಂತೆ ಮತ್ತು ಪ್ರೋತ್ಸಾಹಿಸದಂತೆ ಸಾರ್ವಜನಿಕರಿಗೆ ಮನವಿ ಮಾಡುವುದನ್ನು ಮುಂದುವರೆಸಿರುತ್ತಾರೆ” ಎಂದು ಬರೆದು ಡಿಸಿಪಿ ರವಿ.ಡಿ ಚೆನ್ನಣ್ಣನವರ್ ಟ್ವೀಟ್ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ಕೊನೆಯಲ್ಲಿ “ಸುಳ್ಳು ವದಂತಿಯನ್ನು ಮನರಂಜನೆ ಮಾಡಬೇಡಿ (Do Not Entertain False Rumors)” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

  • ಬೆಂಗ್ಳೂರು ಪಶ್ಚಿಮ ಡಿಸಿಪಿಯಾಗಿ ರವಿ ಚೆನ್ನಣ್ಣನವರ್ ಅಧಿಕಾರ ಸ್ವೀಕಾರ

    ಬೆಂಗ್ಳೂರು ಪಶ್ಚಿಮ ಡಿಸಿಪಿಯಾಗಿ ರವಿ ಚೆನ್ನಣ್ಣನವರ್ ಅಧಿಕಾರ ಸ್ವೀಕಾರ

    ಬೆಂಗಳೂರು: ಮೈಸೂರಿನಿಂದ ಬೆಂಗಳೂರಿಗೆ ವರ್ಗಾವಣೆಯಾಗಿ ಬಂದ ರವಿ ಡಿ ಚೆನ್ನಣ್ಣನವರ್ ಇಂದು ಪಶ್ಚಿಮ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಕಳೆದ ಒಂದೂವರೆ ವರ್ಷದಿಂದ ಮೈಸೂರು ಎಸ್‍ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರವಿ ಡಿ ಚೆನ್ನಣ್ಣವನರ್ ಬೆಂಗಳೂರಿಗೆ ವರ್ಗಾವಣೆಯಾಗಿದ್ದು ಇಂದು ಪಶ್ಚಿಮ ವಿಭಾಗದ ಡಿಸಿಪಿ ಎಮ್.ಎನ್ ಅನುಚೇತ್ ಅವರಿಂದ ಅಧಿಕಾರ ಸ್ವೀಕರಿಸಿದರು.

    ಅಧಿಕಾರ ಸ್ವೀಕರಿಸಿದ ರವಿ ಡಿ ಚೆನ್ನಣ್ಣನವರ್ ಮಾತನಾಡಿ, ಬೆಂಗಳೂರು ನನಗೆ ತುಂಬಾ ಪರಿಚಯವಿದ್ದು, ನಾನೂ ಜ್ಞಾನಭಾರತಿ ಯೂನಿವರ್ಸಿಟಿಯಲ್ಲಿ ಓದಿದ್ದೆ ಎಂದು ಹೇಳಿದರು. ಸಿಐಡಿಯಲ್ಲಿ ಕೆಲಸ ಮಾಡಿದ್ದು, ಬಿ.ಕೆ ಸಿಂಗ್. ಸುನೀಲ್ ಕುಮಾರ್ ನಂತವರ ಜೊತೆ ಕೆಲಸ ಮಾಡಿದ್ದೇನೆ ಎಂದರು.

    ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿ ಬೇಸಿಕ್ ಪೊಲೀಸಿಂಗ್ ಆಡಳಿತ ನಡೆಸುತ್ತೇನೆ ಎಂದು ತಿಳಿಸಿದರು.