Tag: Ravi d Channannavar

  • ಕಳ್ಳರ ಹಾಟ್ ಸ್ಪಾಟ್‍ಗೆ ಬ್ರೇಕ್ ಹಾಕಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ

    ಕಳ್ಳರ ಹಾಟ್ ಸ್ಪಾಟ್‍ಗೆ ಬ್ರೇಕ್ ಹಾಕಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ

    ಬೆಂಗಳೂರು: ಕಳ್ಳರ ಹಾಟ್ ಸ್ಪಾಟ್ ಆಗಿದ್ದ ಅಂಡರ್ ಪಾಸ್ ಮುಂದೆ ಜೆಸಿಬಿ ಮೂಲಕ ಗುಂಡಿ ತೆಗೆಯುವ ಮೂಲಕ ನೆಲಮಂಗಲ ಟೌನ್ ಪೊಲೀಸರು ಎಚ್ಚರಿಕೆ ಗಂಟೆ ರವಾನಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದ ಕುಣಿಗಲ್ ಬೈಪಾಸ್‍ನ ಅಂಡರ್ ಪಾಸ್ ಬಳಿ ಸಂಚಾರಿ ಹಾಗೂ ನೆಲಮಂಗಲ ಟೌನ್ ಪೊಲೀಸರು ಗುಂಡಿ ತೆಗೆಸಿ, ಖಡಕ್ ಎಚ್ಚರಿಕೆ ನೀಡಿದ್ದಾರೆ. ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಖಡಕ್ ಐಪಿಎಸ್ ಅಧಿಕಾರಿ ರವಿ.ಡಿ ಚೆನ್ನಣ್ಣನವರ್ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದ್ದು, ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗುತ್ತಿದೆ ಎನ್ನಲಾಗಿದೆ.

    ಸುಮಾರು 17 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ನೆಲಮಂಗಲ ಮಂಗಳೂರು ಹಾಗೂ ನೆಲಮಂಗಲ ಪುಣೆ ರಾಷ್ಟ್ರೀಯ ಹೆದ್ದಾರಿ ಕಳ್ಳರ ಕೇಂದ್ರ ಬಿಂದುವಾಗಿತ್ತು. ಹೀಗಾಗಿ ಹೆದ್ದಾರಿ ಕಳ್ಳರ ಹಾಟ್ ಸ್ಪಾಟ್‍ಗೆ, ನೆಲಮಂಗಲ ಟೌನ್ ಪೊಲೀಸರು ನೂತನ ತಂತ್ರಗಾರಿಕೆ ಉಪಯೋಗಿಸಿದ್ದಾರೆ.

    ಕುಣಿಗಲ್ ಬೈಪಾಸ್‍ನ ಅಂಡರ್ ಪಾಸ್ ಬಳಿ ಜೆಸಿಬಿ ಮೂಲಕ ಗುಂಡಿ ತೆಗೆದು ಎಚ್ಚರಿಕೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇನ್ನೂ ಈಗಾಗಲೇ ಅಂಡರ್ ಪಾಸ್ ಕೆಳಗೆ ವಾಹನ ನಿಲುಗಡೆ ತಡೆಗೆ ನಿರ್ಬಂಧ ಏರಿದ್ದ ಟೋಲ್ ಕಂಪನಿ, ಇದೀಗ ಪೊಲೀಸರು ಹೊಸ ಕ್ರಮ ಕೈಗೊಂಡಿದ್ದಾರೆ.

    ಅಂಡರ್ ಪಾಸ್ ನಲ್ಲಿ ವಾಹನ ನಿಲುಗಡೆ ಮಾಡಿ ಕಳ್ಳತನ ಕೃತ್ಯ ಎಸಗುತ್ತಿದ್ದ ಖರ್ತನಾಖ್ ಟೀಂಗಳಿಗೆ ಬ್ರೇಕ್ ಹಾಕಿದಂತಾಗಿದೆ. ಈ ಹಿಂದೆ ಕಳ್ಳತನ ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್ಕೇಪ್ ಆಗುತ್ತಿದ್ದ ಕಳ್ಳರ ಟೀಂಗೆ ಪೊಲೀಸರು ಖಡಕ್ ಸಂದೇಶ ರವಾನಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಅನಧಿಕೃತ ಪಾರ್ಕಿಂಗ್ ವ್ಯವಸ್ಥೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಕ್ರಮಕ್ಕೆ ಆಗ್ರಹಿಸಿದ್ದಾರೆ.

    ಕೆಲ ಕಿಡಿಗೇಡಿಗಳು ಈ ಅಂಡರ್ ಪಾಸ್ ಬಳಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದು, ಮಹಿಳೆಯರ ಮಕ್ಕಳ ಮುಜುಗರಕ್ಕೆ ಕಾರಣವಾಗಿತ್ತು. ಜನರ ದೂರಿನ ಹಿನ್ನೆಲೆ ಕೈಗೊಂಡ ಪೊಲೀಸರ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  • ರವಿ ಚನ್ನಣ್ಣನವರ್ ಅಭಿಮಾನಿಗಳಿಂದ ಬೇಸತ್ತ ಐಪಿಎಸ್ ಅಧಿಕಾರಿ

    ರವಿ ಚನ್ನಣ್ಣನವರ್ ಅಭಿಮಾನಿಗಳಿಂದ ಬೇಸತ್ತ ಐಪಿಎಸ್ ಅಧಿಕಾರಿ

    ಬೆಂಗಳೂರು: ಆಶ್ಚರ್ಯ ಅನಿಸಿದರೂ ಇದು ಸತ್ಯ. ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಅಭಿಮಾನಿಗಳಿಂದ ಮತ್ತೊಬ್ಬ ಐಪಿಎಸ್ ಅಧಿಕಾರಿ ರಮೇಶ್ ಬಾನೋತ್ ಬೇಸತ್ತಿದ್ದಾರೆ.

    ಈ ಹಿಂದೆ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ರವಿ ಚನ್ನಣ್ಣನವರ್ ಡಿಸಿಪಿಯಾಗಿ ಕೆಲಸ ಮಾಡಿದ್ದರು. ಅವರು ವರ್ಗಾವಣೆಯಾದ ಬಳಿಕ ಆ ಜಾಗಕ್ಕೆ ರಮೇಶ್ ಬಾನೋತ್ ಡಿಸಿಪಿಯಾಗಿ ಬಂದಿದ್ದಾರೆ. 94808 01701 ಪಶ್ಚಿಮ ವಿಭಾಗದ ಡಿಸಿಪಿ ನಂಬರ್ ಆಗಿತ್ತು.

    ಈ ನಂಬರನ್ನು ಹಿಂದೆ ಸೇವ್ ಮಾಡಿಕೊಂಡಿದ್ದ ರವಿ ಚೆನ್ನಣ್ಣನವರ್ ಅಭಿಮಾನಿಗಳು ಇದು ಚನ್ನಣ್ಣನವರ್ ಅವರ ವೈಯಕ್ತಿಕ ಮೊಬೈಲ್ ಸಂಖ್ಯೆ ಎಂದು ತಿಳಿದು ಕರೆ ಮಾಡುತ್ತಿದ್ದರು. ಮಧ್ಯರಾತ್ರಿ ಕರೆ ಮಾಡಿ,”ಹಲೋ ರವಿ ಸಾರ್” ಅಂತಿದ್ರಂತೆ. ದಿನಕ್ಕೆ ನೂರಾರು ಕರೆಗಳು ಬರುತ್ತಿದ್ದ ಕಾರಣ 94808 01701 ಅಧಿಕೃತ ನಂಬರ್ ಅನ್ನು ಡಿಸಿಪಿ ರಮೇಶ್ ಬದಲಾಯಿಸಿದ್ದರು. ಇದನ್ನೂ ಓದಿ: ರವಿ ಚನ್ನಣ್ಣನವರ್ ಸ್ಫೂರ್ತಿಯಿಂದ ಡಿವೈಎಸ್ಪಿಯಾಗಿ ಆಯ್ಕೆಯಾಗಿದ್ದೇನೆ – ಎಂ.ಸುರೇಶ

    ನಂಬರ್ ಬದಲಾದ ಬಳಿಕವೂ ಕಚೇರಿಗೆ ಬರುವುದು, ಲ್ಯಾಂಡ್ ಲೈನ್ ನಂಬರಿಗೆ ಅಭಿಮಾನಿಗಳು ಕರೆ ಮಾಡುತ್ತಿದ್ದರು. ಹೀಗಾಗಿ ಡಿಸಿಪಿ ವೆಸ್ಟ್ ಬೆಂಗಳೂರು ಎಫ್‍ಬಿ ಪೇಜ್ ನಲ್ಲಿ ಅಧಿಕೃತವಾಗಿ ಚೆನ್ನಣ್ಣನವರ್ ಹುದ್ದೆಯ ಬಗ್ಗೆ ಮಾಹಿತಿ ನೀಡಲಾಗಿದೆ. ರವಿ ಚೆನ್ನಣ್ಣನವರ್ ಕಾರ್ಯ ನಿರ್ವಹಿಸುತ್ತಿರುವ ಕಚೇರಿಯ ನಂಬರ್ ವಿಳಾಸವನ್ನು ಹಾಕಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಮಾಹಿತಿ ನೀಡಲಾಗಿದೆ.

  • ಹೊಸ ವರ್ಷಾಚರಣೆಗೆ ಎಸ್‍ಪಿ ರವಿ ಚನ್ನಣ್ಣನವರ್ ಖಡಕ್ ವಾರ್ನಿಂಗ್

    ಹೊಸ ವರ್ಷಾಚರಣೆಗೆ ಎಸ್‍ಪಿ ರವಿ ಚನ್ನಣ್ಣನವರ್ ಖಡಕ್ ವಾರ್ನಿಂಗ್

    ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಸಂಬಂಧ ನಂದಿಬೆಟ್ಟದ ತಪ್ಪಲಿನ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಸೇರಿದಂತೆ ಅಂಗಡಿ ಮಾಲೀಕರ ಜೊತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿ ರವಿ ಚನ್ನಣ್ಣನವರ್ ಸಭೆ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಕಾರಹಳ್ಳಿ ಕ್ರಾಸ್‍ನ ಹೋಟೆಲಿನಲ್ಲಿ ಮಾಲೀಕರ ಜೊತೆ ಸಭೆ ನಡೆಸಿದ ಎಸ್‍ಪಿ ರವಿ ಚನ್ನಣ್ಣನವರ್, ನಂದಿಬೆಟ್ಟದ ತಪ್ಪಲಿನಲ್ಲಿ ಅಕ್ರಮ ಚಟುವಟಿಕೆಗಳು, ಅಕ್ರಮ ಮದ್ಯ ಮಾರಾಟ ನಡೆಯುತ್ತದೆ. ಇಲ್ಲಿ ಹುಕ್ಕಾ ಬಾರ್ ಗಳಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎನ್ನುವ ಜನಾಭಿಪ್ರಾಯ ಇದೆ. ಈ ಭಾಗದಲ್ಲಿ ವರದಿಯಾದ ಅಪರಾಧ ಪ್ರಕರಣಗಳಿಂದ ನನಗೂ ಕೂಡ ಹಾಗೆ ಅನಿಸಿದೆ. ಹೀಗಾಗಿ ಹೊಸ ವರ್ಷದ ಅಂಗವಾಗಿ ನಂದಿಬೆಟ್ಟದ ತಪ್ಪಲಿನಲ್ಲಿನ ರೆಸಾರ್ಟ್, ರೆಸ್ಟೋರೆಂಟ್, ಹೋಟೆಲ್, ಅಂಗಡಿ ಮಾಲೀಕರು ಕಾನೂನು ರೀತಿ ಹೊಸ ವರ್ಷಾಚರಣೆ ಮಾಡಬೇಕೇ ಹೊರತು ಕಾನೂನು ನಿಯಮಗಳನ್ನ ಮೀರಿ ಹೊಸ ವರ್ಷಾಚರಣೆ ಮಾಡುವಂತಿಲ್ಲ ಅಂತ ಖಡಕ್ ಎಚ್ಚರಿಕೆ ನೀಡಿದರು.

    ಯಾವುದೇ ಕಾರಣಕ್ಕೂ ಅನುಮತಿ ಪಡೆಯದೇ ಮದ್ಯ ಮಾರಾಟ ಮಾಡಿ, ಪಾರ್ಟಿಗಳನ್ನ ಆಯೋಜನೆ ಮಾಡಿ, ಡಿಜೆಗಳನ್ನ ಹಾಕಿ, ಟೆಂಟ್‍ಗಳನ್ನ ಹಾಕಿ ಕುಣಿದು ಕುಪ್ಪಳಿಸಿ ಮೋಜು ಮಸ್ತಿ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಂದಹಾಗೆ ಮದ್ಯ ಮಾರಾಟಕ್ಕೆ ಅನುಮತಿ ಪಡೆದವರಿಗೆ ಅಷ್ಟೇ ಅವಕಾಶವಿದೆ. ಅದು ರಾತ್ರಿ ಪೂರ್ತಿ ಇರೋದಿಲ್ಲ. ಡಿಜೆಗೆ ಅನುಮತಿಯನ್ನ ನೀಡುವುದಿಲ್ಲ. ಡಿಜೆ ಮಾಡುವುದು ಕಾನೂನುಬಾಹಿರ. ಆದರೆ ಕೌಟುಂಬಿಕ ಸಭ್ಯ ಜನರು ಬಂದು ಊಟ ಮಾಡಿ ಮನರಂಜನೆ ಪಡೆಯಲು ನಮ್ಮದೂ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು.

    ಈಗಾಗಲೇ ಸ್ಥಳೀಯ ಹೆಗ್ಗಡಹಳ್ಳಿ ಹಾಗೂ ಕಾರಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರುಗಳಿಂದ ನಂದಿಬೆಟ್ಟದ ತಪ್ಪಲಿನಲ್ಲಿ ಹಾಗೂ ವಿಶೇಷವಾಗಿ ಹ್ಯಾಂಗ್ ಔಟ್ ಕೆಫೆ, ಗ್ರೌಂಡ್ ಜಿರೋ, ಮಿಸ್ಟ್ ಫ್ಯಾಕ್ಟರಿ, ಹಿಲ್ ಡ್ರೈವ್ ಕೆಫೆಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎನ್ನುವ ದೂರುಗಳ ಕೇಳಿಬಂದಿವೆ. ಹೀಗಾಗಿ ಹೊಸ ವರ್ಷಾಚರಣೆ ನೆಪದಲ್ಲಿ ಕಾನೂನು ಬಾಹಿರ ಕೃತ್ಯಗಳನ್ನ ನಡೆಸಿದರೆ ಕೇಸ್ ದಾಖಲಿಸಲಾಗುವುದು ಎಂದು ರವಿ ಚನ್ನಣ್ಣನವರ್ ಎಚ್ಚರಿಕೆ ನೀಡಿದರು.

    ಸಿಎಲ್ 5 ಅನುಮತಿ ಪಡೆದರೆ ನಿಗದಿತ ಸಮಯದವರೆಗೂ ಮದ್ಯ ಮಾರಾಟಕ್ಕೆ ಅವಕಾಶ ಇರುತ್ತೆ ಆದರೆ ಅದರ ಹೆಸರಲ್ಲಿ ದೊಡ್ಡ ಮಟ್ಟದ ಇವೆಂಟ್‍ಗಳನ್ನ ನಡೆಸುವಂತಿಲ್ಲ, ಜಿಲ್ಲಾಡಳಿತದಿಂದ ಅನುವತಿ ಪಡೆದು ನಡೆಸಿದರೂ ಸಹ ಪಾರ್ಟಿಗೆ ಬಂದು ಹೋದವರ ಸಂಪೂರ್ಣ ಮಾಹಿತಿ, ವಿಳಾಸ ಸಮೇತ ಮೊಬೈಲ್ ನಂಬರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕೊಡಬೇಕಾಗುತ್ತದೆ. ಅಲ್ಲದೆ ಕಡ್ಡಾಯವಾಗಿ ಸಿಸಿಟಿವಿ ಆಳವಡಿಕೆ ಮಾಡಬೇಕು. ಹೀಗೆ 21 ನಿಯಮಗಳನ್ನ ಒಪ್ಪಿದರೆ ಮಾತ್ರ ನಿಮಗೆ ಪಾರ್ಟಿ ಇವೆಂಟ್ ಆಯೋಜನೆ ಮಾಡಲು ಅನುಮತಿ ಸಿಗುತ್ತದೆ. ಈಗಾಗಲೇ ಕೆಲವರು ಅನುಮತಿ ಕೇಳಿದ್ದು, ಸದ್ಯ ಯಾರಿಗೂ ಅನುಮತಿ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

  • ಸಹೋದ್ಯೋಗಿಗಳ ಜೊತೆ ಕಬಡ್ಡಿ ಆಡಿದ ಎಸ್‍ಪಿ ರವಿ.ಡಿ ಚೆನ್ನಣ್ಣನವರ್

    ಸಹೋದ್ಯೋಗಿಗಳ ಜೊತೆ ಕಬಡ್ಡಿ ಆಡಿದ ಎಸ್‍ಪಿ ರವಿ.ಡಿ ಚೆನ್ನಣ್ಣನವರ್

    ಬೆಂಗಳೂರು: ಕರ್ನಾಟಕದ ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತರಾಗಿರುವ ಎಸ್‍ಪಿ ರವಿ. ಡಿ ಚನ್ನಣ್ಣನವರ್ ಅವರು ತಮ್ಮ ಸಹೋದ್ಯೋಗಿ ಜೊತೆ ಕಬಡ್ಡಿ ಆಟ ಆಡಿ ತಮ್ಮ ಬಾಂಧವ್ಯವನ್ನು ಮೆರೆದಿದ್ದಾರೆ.

    ಬೆಂಗಳೂರು ಹೊರವಲಯ ಬ್ಯಾಡರಹಳ್ಳಿ ಪೊಲೀಸ್ ಮೈದಾನದಲ್ಲಿ, ವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ಸಿಕ್ಕಿದೆ. ಈ ವೇಳೆ ಕಬಡ್ಡಿ ಆಟ ಆಡಿ ದೇಶಿಯ ಕ್ರೀಡೆಗೆ ಒತ್ತು ನೀಡಿದ್ದಾರೆ. ಸಹೋದ್ಯೋಗಿಗಳ ಜೊತೆ ಆಟಕ್ಕೂ ಸೈ, ಕಾನೂನು ಪಾಲನೆಗೂ ಸೈ ಎನ್ನುವಂತೇ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ.ಡಿ ಚನ್ನಣ್ಣನವರ್ ಅಧಿಕಾರಿಗಳ ಜೊತೆ ಅಂಗಳದಲ್ಲಿ ಕಾದಾಟ ನಡೆಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆಯಲ್ಲಿ ಎಸ್‍ಪಿ ರವಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ

    ಎಸ್‍ಪಿ ರವಿ.ಡಿ ಚೆನ್ನಣ್ಣವರ್ ಅವರಿಗೆ ನೆಲಮಂಗಲ ಉಪವಿಭಾಗದ ಪೊಲೀಸ್ ಸಿಬ್ಬಂದಿಗಳು ಸಾಥ್ ನೀಡಿದ್ದಾರೆ. ಕಬಡ್ಡಿ ಆಟದ ಹಲವಾರು ತಂತ್ರಗಳನ್ನು ಬಳಸಿ ಆಟ ವಾಡುತ್ತಿರುವುದು ಕಂಡು ಬಂದಿದ್ದು, ಕ್ರೀಡಾಪಟುಗಳಿಗೆ ಇನ್ನಷ್ಟು ಹುರುಪು ತಂದಿದೆ.

  • ಸರ್ಕಾರಿ ಶಾಲೆಯಲ್ಲಿ ಎಸ್‍ಪಿ ರವಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ

    ಸರ್ಕಾರಿ ಶಾಲೆಯಲ್ಲಿ ಎಸ್‍ಪಿ ರವಿ ಚನ್ನಣ್ಣನವರ್ ಗ್ರಾಮ ವಾಸ್ತವ್ಯ

    ಬೆಂಗಳೂರು: ರಾಜಕಾರಣಿಗಳಾಯಿತು ಇದೀಗ ಐಪಿಎಸ್ ಅಧಿಕಾರಿಯ ಸರದಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿ ರವಿ ಡಿ ಚನ್ನಣ್ಣನವರ್ ಇದೇ ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಮಾಡಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಅರೇ ಬೊಮ್ಮನಹಳ್ಳಿ ಗ್ರಾಮದಲ್ಲಿ ಎಸ್‍ಪಿ ರವಿ ಡಿ ಚನ್ನಣ್ಣನವರ್ ಗ್ರಾಮ ಸಭೆ ಮಾಡಿ ಅದೇ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಇಲಾಖೆ ಇಂತಹ ಜನಸ್ನೇಹಿ ಪ್ರಯತ್ನ ಮಾಡಿದೆ.

    ಈದ್ ಮಿಲಾದ್ ಹಬ್ಬವಿರುವ ಹಿನ್ನೆಲೆಯಲ್ಲಿ ರವಿ ಚನ್ನಣ್ಣನವರ್ ಅವರು ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಕೋಮು ಗಲಭೆ ತಡೆಯಲು ಈ ಪ್ರಯತ್ನ ಮಾಡಲಾಗಿದ್ದು, ಅವರಿಗಾಗಿ ಶಾಲೆಯಲ್ಲಿ ಬೆಡ್, ಬೆಡ್ ಶೀಟ್, ಇನ್ನಿತರ ವಸ್ತುಗಳ ಸಿದ್ಧತೆ ಮಾಡಲಾಗಿತ್ತು.

    ಪೊಲೀಸ್ ಸೇವೆಗಳು ಜನರಿಗೆ ಹತ್ತಿರವಾಗಲೂ ಹೊಸ ಪ್ರಯೋಗ ಹಾಗೂ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಮೂಡಿಸುವ ಜೊತೆಗೆ ಜನರಿಗೆ ಪೊಲೀಸರ ವ್ಯವಸ್ಥೆ ಹತ್ತಿರವಾಗುವ ನಿಟ್ಟಿನಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ಪೊಲೀಸರೊಂದಿಗೆ ಗ್ರಾಮಸ್ಥರು, ನೆಲಮಂಗಲ ಉಪವಿಭಾಗದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಭಾಗಿಯಾಗಿದ್ದಾರೆ.

  • ರವಿ ಚೆನ್ನಣ್ಣನವರ್ ಅಭಿಮಾನಿಗಳಿಂದ ಬೇಸತ್ತ ಡಿಸಿಪಿ

    ರವಿ ಚೆನ್ನಣ್ಣನವರ್ ಅಭಿಮಾನಿಗಳಿಂದ ಬೇಸತ್ತ ಡಿಸಿಪಿ

    ಬೆಂಗಳೂರು: ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ಅವರು ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಚೆನ್ನಣ್ಣನವರ್ ಅಭಿಮಾನಿಗಳಿಂದ ಬೇಸತ್ತು ಹೋಗಿದ್ದಾರೆ.

    ಈ ಹಿಂದೆ ರವಿ ಚೆನ್ನಣ್ಣನವರ್ ಅವರು ಪಶ್ಚಿಮ ವಿಭಾಗದ ಡಿಸಿಪಿ ಆಗಿದ್ದರು. ಈ ವೇಳೆ ಅವರಿಗೆ ಇಲಾಖೆಯಿಂದ ಫೋನ್ ನಂಬರ್ ನೀಡಲಾಗಿತ್ತು. ಈಗ ಡಿಸಿಪಿ ಆಗಿರುವ ರಮೇಶ್ ಬಾನೋತ್ ಗೆ ರವಿ ಚನ್ನಣ್ಣನವರ್ ವರ್ಗಾವಣೆ ನಂತರ ಆ ನಂಬರ್ ನೀಡಲಾಗಿತ್ತು.

    ರಮೇಶ್ ಬಾನೋತ್ ಅವರಿಗೆ ನೀಡಿದ ಈ ನಂಬರ್ ಗೆ ನಿತ್ಯ ನೂರಾರು ಕರೆಗಳು ಬರುತ್ತಿದ್ದವು. ರವಿ ಚೆನ್ನಣ್ಣನವರ್ ಎಂದು ಕೇಳಿಕೊಂಡು ಅವರ ಅಭಿಮಾನಿಗಳು ನಿತ್ಯ ನೂರಾರು ಕರೆಗಳು ಮಾಡುತ್ತಿದ್ದರು. ಹೀಗಾಗಿ ರಮೇಶ್ ಬಾನೋತ್ ನಂಬರ್ ಚೇಂಜ್ ಮಾಡಿದ್ದಾರೆ.

  • ರವಿ ಚೆನ್ನಣ್ಣನವರ್ ಮಾತಿಗೆ ಅಣ್ಣಾಮಲೈ ಫುಲ್ ಖುಷ್

    ರವಿ ಚೆನ್ನಣ್ಣನವರ್ ಮಾತಿಗೆ ಅಣ್ಣಾಮಲೈ ಫುಲ್ ಖುಷ್

    ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ನನಗಿಂತ ಹತ್ತು ಪಟ್ಟು ಹೆಚ್ಚು ಉತ್ತಮ ಅಧಿಕಾರಿ ಎಂದು ಎಸ್‍ಪಿ ರವಿ ಡಿ ಚೆನ್ನಣ್ಣನವರ್ ಹೇಳಿದ್ದಾರೆ. ಎಸ್‍ಪಿ ಅವರ ಮಾತು ಕೇಳಿ ಅಣ್ಣಾಮಲೈ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

    ಇತ್ತೀಚೆಗೆ ರವಿ ಚೆನ್ನಣ್ಣನವರ್ ಅವರು ಚಿಕ್ಕಬಳ್ಳಾಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವಿದ್ಯಾರ್ಥಿ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ರಾಜೀನಾಮೆ ಕುರಿತು ನಿಮ್ಮ ಅಭಿಪ್ರಾಯ ಏನು ಎಂದು ರವಿ ಅವರ ಬಳಿ ಕೇಳಿದ್ದಾರೆ. ಈ ವೇಳೆ ರವಿ ಅವರು “ಅಣ್ಣಾಮಲೈ ನನಗಿಂತ ಹತ್ತು ಪಟ್ಟು ಉತ್ತಮ ಅಧಿಕಾರಿ” ಎಂದು ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ‘ನಂದು’ ಪರಿಚಯಿಸಿದ ಅಣ್ಣಾಮಲೈ

    ಬಳಿಕ ಮತ್ತೊಬ್ಬ ವಿದ್ಯಾರ್ಥಿ ನಿಮ್ಮಬ್ಬರಲ್ಲಿ ಯಾರು ಗ್ರೇಟ್ ಆಫೀಸರ್ ಎಂದು ರವಿ ಅವರನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ರವಿ ಅವರು, “ಎಂದಿಗೂ ನನ್ನ ಸ್ನೇಹಿತ ಕೆ ಅಣ್ಣಾಮಲೈ ಅದ್ಭುತ ಆಫೀಸರ್” ಎಂದು ಉತ್ತರಿಸಿದ್ದಾರೆ. ರವಿ ಚೆನ್ನಣ್ಣನವರ್ ಅವರ ಈ ಮಾತು ಕೇಳಿ ಅಣ್ಣಾಮಲೈ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವ ಮೂಲಕ ರವಿ ಹೇಳಿಗೆ ಖುಷಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಗೆ ಟ್ರಾಫಿಕ್ ರೂಲ್ ಬಗ್ಗೆ ಚನ್ನಣ್ಣವರ್ ಪಾಠ – ರಾತ್ರಿ ಬೈಕ್ ಏರಿ ರೌಂಡ್ಸ್

    ಅಣ್ಣಾಮಲೈ ಅವರು ತಮ್ಮ ಟ್ವಿಟ್ಟರಿನಲ್ಲಿ, “ಭಾರತ ದೇಶದಲ್ಲಿ ಸಿವಿಲ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಶ್ರೇಷ್ಠರೇ. ಎಲ್ಲಾ ಸರ್ವಶಕ್ತ ನದಿಗಳು ಕೊನೆಗೆ ಒಂದೇ ಜಾಗದಲ್ಲಿ ಸೇರುತ್ತದೆ. ರವಿ ಡಿ ಚನ್ನಣ್ಣನವರ್ ಸರ್ ಹೀಗೆ ಹೇಳಿದ್ದು ಖುಷಿ ತಂದಿದೆ” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನೋಡಿದ ಅಭಿಮಾನಿಗಳು ರವಿ ಚನ್ನಣ್ಣವರ್ ಹಾಗೂ ಅಣ್ಣಾಮಲೈ ಅವರು ಎಲ್ಲರ ಹೆಮ್ಮೆ, ನೀವಿಬ್ಬರೂ ಕರ್ನಾಟಕದ ಸಿಂಗಂಗಳು ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ತಮಿಳುನಾಡಿನವರಾದ ಅಣ್ಣಾಮಲೈ ಮೆಕ್ಯಾನಿಕಲ್ ಎಂಜಿನಿಯರ್ ಹಾಗೂ ಪ್ರತಿಷ್ಠಿತ ಲಕ್ನೋ ಐಐಎಂನಿಂದ ಎಂಬಿಎ ಪದವಿ ಪಡೆದಿದ್ದು, ತಮ್ಮ 9 ವರ್ಷದ ಐಪಿಎಸ್ ಹುದ್ದೆಗೆ ಇದೇ ವರ್ಷ ಜೂನ್ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು. 2011ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ 2013ರಲ್ಲಿ ಕಾರ್ಕಳ ಎಎಸ್‍ಪಿಯಾಗಿ ಅಧಿಕಾರ ಸ್ವೀಕರಿಸಿ ಬಳಿಕ 2015ರಲ್ಲಿ ಉಡುಪಿ ಜಿಲ್ಲಾ ಎಸ್‍ಪಿ, ಚಿಕ್ಕಮಗಳೂರು ಎಸ್‍ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

  • ಪೊಲೀಸ್ ಸಿಬ್ಬಂದಿಗೆ ಟ್ರಾಫಿಕ್ ರೂಲ್ ಬಗ್ಗೆ ಚನ್ನಣ್ಣವರ್ ಪಾಠ – ರಾತ್ರಿ ಬೈಕ್ ಏರಿ ರೌಂಡ್ಸ್

    ಪೊಲೀಸ್ ಸಿಬ್ಬಂದಿಗೆ ಟ್ರಾಫಿಕ್ ರೂಲ್ ಬಗ್ಗೆ ಚನ್ನಣ್ಣವರ್ ಪಾಠ – ರಾತ್ರಿ ಬೈಕ್ ಏರಿ ರೌಂಡ್ಸ್

    ಬೆಂಗಳೂರು: ಎಸ್‍ಪಿ ರವಿ.ಡಿ.ಚನ್ನಣ್ಣವರ್ ಅವರು ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣಕ್ಕೆ ದಿಢೀರ್ ಭೇಟಿ ಕೊಟ್ಟು ರಾತ್ರೋರಾತ್ರಿ ಸಿಟಿ ರೌಂಡ್ಸ್ ಹಾಕಿದ್ದಾರೆ.

    ರವಿ.ಡಿ.ಚನ್ನಣ್ಣವರ್ ಅವರು ನೆಲಮಂಗಲಕ್ಕೆ ರಾತ್ರಿ ಭೇಟಿ ಕೊಟ್ಟಿದ್ದು, ಪೊಲೀಸ್ ಸಿಬ್ಬಂದಿಗಳಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ಪಾಠ ಮಾಡಿದ್ದಾರೆ. ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಒಂದೆಡೆ ನಿಲ್ಲಿಸಿ ಅವರಿಗೆ ಟ್ರಾಫಿಕ್ ರೂಲ್ಸ್ ಬಗ್ಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ಹಾಕಿಸಿ ನೆಲಮಂಗಲ ಪಟ್ಟಣದಲ್ಲಿ ರೌಂಡ್ಸ್ ಹಾಕಿಸಿದ್ದಾರೆ.

    ಚನ್ನಣ್ಣವರ್ ಮೊದಲು ಜೀಪಿನಲ್ಲಿ ಪ್ರಯಾಣ ಮಾಡಿದ್ದರು. ನಂತರ ಜೀಪ್ ಬಿಟ್ಟು ಹೆಲ್ಮೆಟ್ ಹಾಕಿಕೊಂಡು ಸಿಬ್ಬಂದಿ ಜೊತೆ ಬೈಕಿನಲ್ಲಿ ನಗರವನ್ನು ಸುತ್ತಾಡಿದ್ದಾರೆ. ಸುಮಾರು ಒಂದು ಕಿಲೋಮೀಟರ್ ಬೈಕಿನಲ್ಲಿ ಪ್ರಯಾಣ ಮಾಡಿ ನಂತರ ಪೊಲೀಸ್ ಜೀಪ್ ಏರಿದ್ದಾರೆ.

    ರವಿ.ಡಿ.ಚನ್ನಣ್ಣವರ್ ಹೊಸ ಟ್ರಾಫಿಕ್ ನಿಮಯದ ಬಂದ ನಂತರ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಿದ್ದರು ಎಂದು ಪರಿಶೀಲಿಸಲು ಸಿಟಿ ರೌಂಡ್ಸ್ ಹಾಕಿದ್ದಾರೆ. ನೆಲಮಂಗಲ ಪಟ್ಟಣದ ಎಲ್ಲಾ ಬಡಾವಣೆಯಲ್ಲೂ ಎಸ್‍ಪಿ ಚನ್ನಣ್ಣವರ್ ರೌಂಡ್ಸ್ ಹಾಕಿದ್ದಾರೆ.

  • ರೋಡ್ ರೋಮಿಯೋಗಳಿಗೆ ಪೊಲೀಸ್ ವಾರ್ನ್ – ಚನ್ನಣ್ಣನವರ್ ಕಾರ್ಯಾಚರಣೆಗೆ ಮೆಚ್ಚುಗೆ

    ರೋಡ್ ರೋಮಿಯೋಗಳಿಗೆ ಪೊಲೀಸ್ ವಾರ್ನ್ – ಚನ್ನಣ್ಣನವರ್ ಕಾರ್ಯಾಚರಣೆಗೆ ಮೆಚ್ಚುಗೆ

    ಬೆಂಗಳೂರು: ನೂತನವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಎಸ್‍ಪಿ ಆಗಿ ಬಂದ ಮೇಲೆ ರವಿ ಡಿ. ಚನ್ನಣ್ಣನವರ್ ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇದೀಗ ನೆಲಮಂಗಲ ಪಟ್ಟಣದಲ್ಲಿ ಹೆಚ್ಚಾಗಿದ್ದ ಪೋಲಿ ಪುಂಡರ ಹಾವಳಿ ಹಿನ್ನೆಲೆಯಲ್ಲಿ ಹುಡುಗಿಯರ ಜೊತೆ ಅನುಚಿತ ವರ್ತನೆ ಹಾಗೂ ಅನುಮಾನಾಸ್ಪದ ಯುವಕರಿಗೆ ನೆಲಮಂಗಲ ಪಟ್ಟಣ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

    ನೆಲಮಂಗಲ ಪಟ್ಟಣದಲ್ಲಿ ಕೆಲ ತಿಂಗಳುಗಳಿಂದ ಪುಂಡ-ಪೋಕರಿಗಳ, ರೋಡ್ ರೋಮಿಯೋಗಳ ಹಾವಳಿ ಮಿತಿ ಮೀರಿ ಹೋಗಿತ್ತು. ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಅದರಲ್ಲೂ ಕಾಲೇಜು ಶುರುವಾಗುವ ಹಾಗೂ ಬಿಡುವ ಸಮಯಕ್ಕೆ ಹಾಜರಾಗಿ ಕಾಲೇಜ್ ಕ್ಯಾಂಪಸ್, ಬಸ್ ನಿಲ್ದಾಣ, ನಡು ಬೀದಿಗಳಲ್ಲಿ ಕಾಲೇಜು ಹುಡುಗಿಯನ್ನ ಚುಡಾಯಿಸುತ್ತಾ ಕಾಟ ಕೊಡುತ್ತಿದ್ದರು.

    ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದ ಕಾರಣಕ್ಕೆ ನೆಲಮಂಗಲ ಠಾಣೆ ಪಿಎಸ್‍ಐ ಮಂಜುನಾಥ್ ತಂಡ ಮಾಡಿಕೊಂಡು ಸ್ಪೆಷಲ್ ಡ್ರೈವ್ ಮಾಡಿದ್ದಾರೆ. ಈ ವೇಳೆ ರಸ್ತೆಯಲ್ಲಿ ಕಂಡ ಕಂಡಲ್ಲಿ ರೋಡ್ ರೋಮಿಯೋಗಳು, ಪೋಕರಿಗಳಿಗೆ ಫುಲ್ ಅವಾಜ್ ಹಾಕಿದ್ದಾರೆ.

    ಸುಮಾರು 20ಕ್ಕೂ ಹೆಚ್ಚು ಯುವಕರನ್ನು ಸ್ಟೇಷನ್ ಹತ್ತಿರ ಕರೆದುಕೊಂಡು ಬಂದು ವಿಚಾರಣೆ ಮಾಡಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಕಿವಿಗೆ ಓಲೆ, ಕೈ ದಾರ, ಅಸಭ್ಯ ಬಟ್ಟೆ ಧರಿಸಿದವರಿಗೆ ಸ್ಥಳದಲ್ಲೇ ದಂಡನೆ ನೀಡಿದ್ದಾರೆ. ಸಣ್ಣಪುಟ್ಟ ಕೇಸ್‍ಗಳಿದ್ದವರಿಗೆ ಜೋರಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ರವಿ ಡಿ. ಚನ್ನಣ್ಣನವರ್ ಎಸ್‍ಪಿಯಾಗಿ ಬಂದ ಮೇಲೆ ಇಂತಹ ಕಾರ್ಯಾಚರಣೆ ನಡೆಯುತ್ತಿರುವುದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಡಿಸಿಪಿ ಚನ್ನಣ್ಣನವರ್ ರಾಜ್ಯಮಟ್ಟದ ಬಸವ ಭೂಷಣ ಪ್ರಶಸ್ತಿಗೆ ಆಯ್ಕೆ

    ಡಿಸಿಪಿ ಚನ್ನಣ್ಣನವರ್ ರಾಜ್ಯಮಟ್ಟದ ಬಸವ ಭೂಷಣ ಪ್ರಶಸ್ತಿಗೆ ಆಯ್ಕೆ

    ಬೆಂಗಳೂರು: ಕರ್ತವ್ಯ ನಿಷ್ಠೆಯಿಂದ ಹೆಸರುವಾಸಿಯಾಗಿರುವ ಪಶ್ಚಿಮ ವಲಯದ ಡಿಸಿಪಿ ರವಿ ಡಿ.ಚನ್ನಣ್ಣನವರ್ ಅವರು ರಾಜ್ಯಮಟ್ಟದ ಬಸವ ಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    ಬಸವ ಬಳಗದ ಎನ್.ಎಂ.ಶಿವಪ್ರಕಾಶ್ ಅವರು ಮಂಗಳವಾರ ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ಬಸವ ಭವನದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಪ್ರತಿವರ್ಷವು ವಿವಿಧ ಕ್ಷೇತ್ರಗಳಲ್ಲಿ ಬಸವ ತತ್ವದಂತೆ ಜೀವನ ನಡೆಸಿದ ಹಾಗೂ ಸಾಧನೆ ಮಾಡಿರುವ ಸಾಧಕರಿಗೆ ಈ ಬಸವ ಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಬಾರಿ ರವಿ ಡಿ. ಚನ್ನಣ್ಣನವರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಮುಂದಿನ ತಿಂಗಳು ಸೆಪ್ಟೆಂಬರ್ 2ರಂದು ಭಾನುವಾರ ನಗರದ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ವಚನ ಚಿಂತನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಬಸವ ಭೂಷಣ ಪ್ರಶಸ್ತಿಯು 11 ಸಾವಿರ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

    ಈ ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಿರ್ದೇಶಕ, ಚೊಕ್ಕ ಹನುಮಂತಗೌಡ, ಲೆಕ್ಕಪರಿಶೋಧಕ ಕೆ.ನಾಗನಗೌಡ, ಎರ್ರೆಪ್ಪಗೌಡ ಮತ್ತು ದಿವಾಕರನಾರಾಯಣ ಪಾಲ್ಗೊಂಡಿದ್ದರು. ಈ ಬಗ್ಗೆ ತಿಳಿದ ಚನ್ನಣ್ಣನವರ್ ಅಭಿಮಾನಿಗಳು ಟ್ವಿಟ್ಟರ್ ಮೂಲಕ ಅಭಿನಂದನೆಯನ್ನು ತಿಳಿಸುತ್ತಿದ್ದಾರೆ.

    ಚನ್ನಣ್ಣನವರು ಇದೇ ವರ್ಷ ಮಾರ್ಚ್ 15 ರಂದು ಪಶ್ಚಿಮ ವಿಭಾಗದ ಡಿಸಿಪಿ ಆಗಿ ಅಧಿಕಾರ ಸ್ವೀಕರಿಸಿದ್ದರು. ಇದಕ್ಕೂ ಮುನ್ನ ಮೈಸೂರಿನಲ್ಲಿ ನಗರದ ಎಸ್‍ಪಿ ಆಗಿ ಕಾರ್ಯ ನಿರ್ವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv