Tag: ravi belagare

  • ರವಿ ಬೆಳಗೆರೆಗೆ ಸಂಕಷ್ಟ ತಂದಿಟ್ಟ ಕ್ಯಾಬ್ ಡ್ರೈವರ್ ಹೇಳಿಕೆ

    ರವಿ ಬೆಳಗೆರೆಗೆ ಸಂಕಷ್ಟ ತಂದಿಟ್ಟ ಕ್ಯಾಬ್ ಡ್ರೈವರ್ ಹೇಳಿಕೆ

    ಬೆಂಗಳೂರು: ಪತ್ರಕರ್ತ ರವಿ ಬೆಳಗೆರೆ ಅವರು ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಬ್ ಡ್ರೈವರ್ ಹೇಳಿಕೆ ನೀಡಿದ್ದು, ಇದೀಗ ರವಿ ಬೆಳಗೆರೆಗೆ ಸಂಕಷ್ಟ ತಂದಿದೆ.

    ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದ ಪ್ರಮುಖ ಆರೋಪಿ ಶಶಿಧರ ಮುಂಡೇವಾಡಿಯನ್ನು ಕಾರಿನಲ್ಲಿ ಸುತ್ತಾಡಿಸಿದ ಚಾಲಕ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ. ಅಂದು ನನಗೆ ಹಾಯ್ ಬೆಂಗಳೂರು ಕಚೇರಿಯಿಂದ ಕರೆ ಬಂದಿತ್ತು. ವ್ಯಕ್ತಿಯೋರ್ವನನ್ನು ಪಿಕ್ ಅಪ್ ಮಾಡುವಂತೆ ಸೂಚಿಸಲಾಗಿತ್ತು ಎಂದು ಹೇಳಿಕೆ ನೀಡಿದ್ದಾರೆ.

    ಆ ವ್ಯಕ್ತಿ (ಶಶಿಧರ ಮುಂಡೇವಾಡಿ)ಯನ್ನು ಕತ್ರಿಗುಪ್ಪೆಯಲ್ಲಿ ಪಿಕ್ ಮಾಡಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಉತ್ತರಹಳ್ಳಿಯಲ್ಲಿ ತಿರುಗಾಡಿದರು. ಯಾಕಾಗಿ ಸುತ್ತಾಡಿದ್ರು? ಸುತ್ತಾಡಿದ ವಿಚಾರ ಏನಕ್ಕೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ ಆತ ಅಲ್ಲೇ ಇದ್ದ ಶಶಿಧರ್ ಮುಂಡೇವಾಡಿಯ ಮುಖ ನೋಡಿ ಇವರನ್ನೇ ತನ್ನ ಕಾರಿನಲ್ಲಿ ಸುತ್ತಾಡಿಸಿರುವುದಾಗಿ ಕಾರ್ ಡ್ರೈವರ್ ನ್ಯಾಯಾಧೀಶರ ಮುಂದೆ ಹೇಳಿದ್ದಾನೆ.

    ಕ್ಯಾಬ್ ಡ್ರೈವರ್ ಹೇಳಿಕೆ ಪ್ರಕರಣದ ತನಿಖೆಗೆ ರೋಚಕ ಟ್ವಿಸ್ಟ್ ಸಿಕ್ಕಂತಾಗಿದೆ. ಪೊಲೀಸರು ಡ್ರೈವರ್ ಹೇಳಿಕೆಯನ್ನಾಧರಿಸಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಿದ್ದಾರೆ.

  • ಸಿಸಿಬಿ ಕಚೇರಿಯಲ್ಲೇ ರವಿ ಬೆಳಗೆರೆ 2ನೇ ದಿನದ ವಾಸ್ತವ್ಯ- ಕಾಲು ನೋವಿನಿಂದ ನಿದ್ದೆಬಾರದೆ ಪರದಾಟ

    ಸಿಸಿಬಿ ಕಚೇರಿಯಲ್ಲೇ ರವಿ ಬೆಳಗೆರೆ 2ನೇ ದಿನದ ವಾಸ್ತವ್ಯ- ಕಾಲು ನೋವಿನಿಂದ ನಿದ್ದೆಬಾರದೆ ಪರದಾಟ

    ಬೆಂಗಳೂರು: ತನ್ನ ಸಹೋದ್ಯೋಗಿಯ ಹತ್ಯೆಗೆ ಸುಪಾರಿ ನೀಡಿದ್ದ ಆರೋಪದ ಮೇಲೆ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆಯವರನ್ನು ಬಂಧಿಸಲಾಗಿದ್ದು, ಎರಡನೆಯ ದಿನವನ್ನೂ ಕೂಡ ಅವರು ಸಿಸಿಬಿ ಕಚೇರಿಯಲ್ಲೇ ಕಳೆದಿದ್ದಾರೆ.

    ಶನಿವಾರ ರಾತ್ರಿ 8:30ರ ಸುಮಾರಿಗೆ ರವಿ ಬೆಳೆಗೆರೆ ವಿಚಾರಣೆ ಮುಕ್ತಾಯವಾಗಿದೆ. ನಂತರ ಮನೆಯಿಂದ ತಂದ ಊಟ ಮಾಡಿ, ಕಚೇರಿಯಲ್ಲಿದ್ದ ಬೆಡ್‍ನಲ್ಲಿ ಮಲಗಿದ್ದಾರೆ. ಮಲಗುವ ಮುನ್ನ ಪೆನ್ನು, ಪೇಪರ್ ಪಡೆದು ಇಡೀ ದಿನ ಏನೇನು ನಡೆಯಿತ್ತು ಎಂಬುದರ ಬಗ್ಗೆ ಬರೆದಿದ್ದಾರೆ.

    ಇದನ್ನೂ ಓದಿ: ಸಿಸಿಬಿ ಕಸ್ಟಡಿಯಲ್ಲಿ ನಿದ್ದೆ ಬಾರದೇ ಮೊದಲ ರಾತ್ರಿ ಕಳೆದ ರವಿ ಬೆಳಗೆರೆ- ಪೇಪರ್ ನಲ್ಲಿ ಏನೇನೋ ಗೀಚಿದ್ರು

    ಕಾಲುನೋವಿನಿಂದ ನಿದ್ದೆ ಬಾರದೆ ಪರದಾಡಿದ ಬೆಳಗೆರೆ ಆಗಾಗ ಎದ್ದು ಸಿಗರೇಟ್ ಸೇದಿದ್ದರು. ಅಂತೆಯೇ ನಸುಕಿನ ಜಾವ ಸುಮಾರು 3 ಗಂಟೆ ಸುಮಾರಿಗೆ ನಿದ್ದೆಗೆ ಜಾರಿದ್ರು ಎಂದು ತಿಳಿದುಬಂದಿದೆ.  ಇದನ್ನೂ ಓದಿ: ಸಿಸಿಬಿ ಪೊಲೀಸರ ಮೊದಲ ಪ್ರಶ್ನೆ ಕೇಳಿ ಮಧ್ಯರಾತ್ರಿ ಬೆಚ್ಚಿಬಿದ್ದ ರವಿ ಬೆಳಗೆರೆ

    ಇಂದು 9 ಗಂಟೆಯ ಬಳಿಕ ಎಸಿಪಿ ಸುಬ್ರಮಣ್ಯ ನೇತೃತ್ವದಲ್ಲಿ ರವಿಬೆಳಗೆರೆ ವಿಚಾರಣೆ ನಡೆಯಲಿದೆ. ವಿಚಾರಣೆ ಬಳಿಕ ಸ್ಥಳ ಮಹಜರ್ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ರವಿ ಬೆಳೆಗೆರೆ ಆರೋಗ್ಯದ ಸ್ಥಿತಿ ನೋಡಿಕೊಂಡು ಮಹಜರ್ ಮಾಡಲು ನಿರ್ಧಾರ ಮಾಡಿದ್ದಾರೆ. ರವಿ ಕಚೇರಿ, ಮನೆ ಮತ್ತು ಸುನೀಲ್ ಹೆಗ್ಗರವಳ್ಳಿ ಮನೆ ಬಳಿ ಮಹಜರ್ ಸಾಧ್ಯತೆ ಇದೆ ಎನ್ನಲಾಗಿದೆ.   ಇದನ್ನೂ ಓದಿ: ರವಿ ಬೆಳಗೆರೆಗೆ ಸಿಗರೇಟ್ ಕೊರತೆಯಂತೆ!

    ಇತ್ತ ಪತ್ರಿಕರ್ತ ಸುನೀಲ್ ಹೆಗ್ಗರವಳ್ಳಿ ಕೂಡ ಇಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಲಿದ್ದು, ಪ್ರಕರಣ ಸಂಬಂಧ ಸಿಸಿಬಿ ಅಧಿಕಾರಿಗಳಿಗೆ ಹೇಳಿಕೆ ನೀಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.