Tag: Ravi Basrur

  • ಡೈನಾಮಿಕ್ ಪ್ರಿನ್ಸ್ ‘ಅಬ್ಬರ’ಕ್ಕೆ ಹ್ಯಾಟ್ರಿಕ್ ಹೀರೋ ಸಾಥ್ – ಟೈಟಲ್ ಲಾಂಚ್ ಮಾಡಿದ ಶಿವಣ್ಣ

    ಡೈನಾಮಿಕ್ ಪ್ರಿನ್ಸ್ ‘ಅಬ್ಬರ’ಕ್ಕೆ ಹ್ಯಾಟ್ರಿಕ್ ಹೀರೋ ಸಾಥ್ – ಟೈಟಲ್ ಲಾಂಚ್ ಮಾಡಿದ ಶಿವಣ್ಣ

    ಬೆಂಗಳೂರು: ಚಂದನವನದ ಹ್ಯಾಂಡ್‌ಸಮ್‌ ನಟ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಇನ್ಮುಂದೆ ತಮ್ಮ ‘ಅಬ್ಬರ’ ತೋರಿಸಲು ಸಜ್ಜಾಗಿದ್ದಾರೆ.

    ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಸದಾ ಬ್ಯುಸಿಯಾಗಿರುವ ಪ್ರಜ್ವಲ್ ದೇವರಾಜ್ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಕೆ. ರಾಮ್ ನಾರಾಯಣ್ ನಿರ್ದೇಶನದ ಅಬ್ಬರ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ ನಟಿಸುತ್ತಿದ್ದು, ಮೂರು ಶೇಡ್‌ನಲ್ಲಿ ತಮ್ಮ ಅಭಿಮಾನಿ ಬಳಗಕ್ಕೆ ಕಿಕ್ ಕೊಡಲಿದ್ದಾರೆ

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಅಬ್ಬರ’ ಟೈಟಲ್ ಹಾಗೂ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ರಾಜಾ ಮಾರ್ತಾಂಡ ಸಿನಿಮಾ ನಿರ್ದೇಶಕ ಕೆ.ರಾಮ್ ನಾರಾಯಣ್ ‘ಅಬ್ಬರ’ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಬಸವರಾಜ್ ಮಂಚಯ್ಯ ಹಿತ್ಲಾಪುರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರವಿ ಬಸ್ರೂರು ಪವರ್‌ಫುಲ್‌ ಮ್ಯೂಸಿಕ್, ಜೆ.ಕೆ.ಗಣೇಶ್ ಸಿನಿಮಾಟೋಗ್ರಫಿ, ವಿಕಟ ಕವಿ ಯೋಗರಾಜ್ ಭಟ್ ಸಾಹಿತ್ಯ ಕೃಷಿ ಅಬ್ಬರ ಸಿನಿಮಾಗಿದೆ. ಹೀಗೆ ಪವರ್ ಫುಲ್ ಟಿಂ ಕಟ್ಟಿಕೊಂಡಿರುವ ರಾಮ್‌ ನಾರಾಯಣ್‌ ‘ಅಬ್ಬರ’ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಪ್ರಜ್ವಲ್ ಅಭಿಮಾನಿ ಬಳಗದಲ್ಲಿ ಹುಟ್ಟುಹಾಕಿದ್ದಾರೆ.

    ಸಾಹಸ ದೃಶ್ಯಗಳಲ್ಲಿ ಕಿಕ್ ನೀಡಲು ಡಿಫರೆಂಟ್ ಡ್ಯಾನಿ, ಪಳನಿರಾಜ್, ಮಾಸ್ ಮಾದ ಈ ಮೂವರ ಸಾಹಸ ನಿರ್ದೇಶನ ಅಬ್ಬರ ಚಿತ್ರಕ್ಕಿದೆ. ಸಿ ಅಂಡ್ ಎಂ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಲಾಕ್‌ಡೌನ್‌ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಅರ್ಧದಷ್ಟು ಚಿತ್ರೀಕರಣ ಕಂಪ್ಲೀಟ್ ಮಾಡಿರಬೇಕಿತ್ತು. ಅನ್‌ಲಾಕ್‌ ಬಳಿಕ ಚಿತ್ರೀಕರಣಕ್ಕೆ ಸಜ್ಜಾಗಿರೋ ‘ಅಬ್ಬರ’ ಸಿನಿಮಾ ತಂಡ ಸದ್ಯದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡಲಿದೆ.

  • ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ರಂಗೇರಿಸಿತು 100ರ ಪಾರ್ಟಿಸಾಂಗ್!

    ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ರಂಗೇರಿಸಿತು 100ರ ಪಾರ್ಟಿಸಾಂಗ್!

    ನಟ, ನಿರ್ದೇಶಕರಾಗಿ ಮಾತ್ರವಲ್ಲದೇ ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮದ ಮೂಲಕವೂ ಮನೆ ಮಾತಾಗಿರುವವರು ರಮೇಶ್ ಅರವಿಂದ್. ಇತ್ತೀಚೆಗಷ್ಟೇ ಪತ್ತೇದಾರಿಕೆಯ ಗೆಟಪ್ಪಿನಲ್ಲಿ ಮಿಂಚಿ ಗೆದ್ದಿದ್ದ ರಮೇಶ್, ಇದೀಗ ಮತ್ತೆ 100 ಅನ್ನೋ ಸಿನಿಮಾ ಮೂಲಕ ಮತ್ತೊಂದು ಅವತಾರದಲ್ಲಿ ಪ್ರೇಕ್ಷಕರನ್ನು ತಾಕುವ ಖುಷಿಯಲ್ಲಿದ್ದಾರೆ. ಅದೇ ಖುಷಿಯಲ್ಲಿ ಚಿತ್ರತಂಡ ರಮೇಶ್ ಅರವಿಂದ್ ಅವರ ಬರ್ತ್‍ಡೇ ಸ್ಪೆಷಲ್ ಎಂಬಂತೆ 100 ಚಿತ್ರದ ಚೆಂದದ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿದೆ.

    ಈ ಹಿಂದೆ ಸದಭಿರುಚಿಯ ಸಿನಿಮಾಗಳ ಮೂಲಕ ಹೆಸರಾಗಿದ್ದ ಎಂ.ರಮೇಶ್ ರೆಡ್ಡಿ ನಂಗಲಿ ನಿರ್ಮಾಣದಲ್ಲಿ ‘100’ ಚಿತ್ರ ಮೂಡಿ ಬಂದಿದೆ. ಕೊರೊನಾ ಸಂಕಷ್ಟ ಒಂದಿಲ್ಲದೇ ಹೋಗಿದ್ದರೆ ಖಂಡಿತವಾಗಿಯೂ ಇಷ್ಟು ಹೊತ್ತಿಗೆಲ್ಲ ಈ ಚಿತ್ರ ಪ್ರೇಕ್ಷಕರ ಮುಂದೆ ಬಂದಿರುತ್ತಿತ್ತು. ಆ ಹಿನ್ನಡೆಯನ್ನೂ ಲೆಕ್ಕಿಸದೆ ಚಿತ್ರತಂಡ ಎಲ್ಲ ಕೆಲಸ ಕಾರ್ಯಗಳನ್ನು ಪೂರೈಸಿಕೊಂಡಿದೆ. ಬಿಡುಗಡೆಯ ಹೊಸ್ತಿಲಲ್ಲಿಯೇ ರಮೇಶ್ ಅವರ ಬರ್ತ್‍ಡೇಗಾಗಿ ಈ ಲಿರಿಕಲ್ ವೀಡಿಯೋ ಲಾಂಚ್ ಮಾಡಲಾಗಿದೆ.

    ಇದು ಪಾರ್ಟಿ ಮೂಡಿಗೆ ಜಾರಿಸುವಂಥ ಮಜವಾದ ಹಾಡು. ವಿಶೇಷ ಅಂದ್ರೆ ಈ ಹಾಡಿಗೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕಿನ್ನಲ್ ರಾಜ್, ಪ್ರಮೋದ್ ಮರವಂತೆ ಮತ್ತು ಭಾಸ್ಕರ್ ಬಂಗೇರ ಸೇರಿಕೊಂಡು ಈ ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ರಮೇಶ್ ಅರವಿಂದ್, ಅನನ್ಯಾ ಭಟ್ ಮತ್ತು ನೀತು ಸುಬ್ರಹ್ಮಣ್ಯ ಅಷ್ಟೇ ಮಜವಾಗಿ ಹಾಡಿದ್ದಾರೆ.

    ಈವತ್ತಿಗೆ ಸೋಶಿಯಲ್ ಮೀಡಿಯಾ ಅನ್ನೋದು ಸರ್ವವ್ಯಾಪಿಯಾಗಿದೆ. ಮನಸ್ಥಿತಿ ನೆಟ್ಟಗಿದ್ದರೆ ಇದನ್ನು ಸಕಾರಾತ್ಮಕವಾಗಿಯೇ ಬಳಸಿಕೊಳ್ಳಬಹುದು. ಆದ್ರೆ ಕೆಲ ವಿಕೃತರು ಸಾಮಾಜಿಕ ಜಾಲತಾಣಗಳ ವ್ಯಾಪ್ತಿ, ವಿಸ್ತಾರಗಳನ್ನು ಸಮಾಜ ಬಾಹಿರ ದಂಧೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದುವೇ ಹಲವರ ನೆಮ್ಮದಿಗೆ ಕುತ್ತು ತಂದಿದೆ. ಕೆಲ ಸಂದರ್ಭಗಳಲ್ಲಿ ಜೀವ ಹಾನಿಗಳೂ ಸಂಭವಿಸುತ್ತಿವೆ. ಇದೇ ಕಥಾ ಹಂದರ ಹೊಂದಿರೋ ಚೆಂದದ ಕಥೆಯನ್ನಿಲ್ಲಿ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರಂತೆ.

  • ಕಮ್ಮಾರಿಕೆಗೆ ನಿಂತ ಕೆಜಿಎಫ್ ಸಂಗೀತ ನಿರ್ದೇಶಕ

    ಕಮ್ಮಾರಿಕೆಗೆ ನಿಂತ ಕೆಜಿಎಫ್ ಸಂಗೀತ ನಿರ್ದೇಶಕ

    ಬೆಂಗಳೂರು: ಎಲ್ಲ ನಟ ನಟಿಯರು ಇದೀಗ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದು, ಕೆಲವರು ಕುಟುಂಬದ ಜೊತೆಗೆ ಕಾಲ ಕಳೆಯುತ್ತಿದ್ದರೆ, ಇನ್ನೂ ಕೆಲವರು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹಲವು ನಟ, ನಟಿಯರು ತಮ್ಮ ಮನೆಯಲ್ಲೇ ವಿವಿಧ ಚಟುವಟಿಕೆಗಳನ್ನು ಮಾಡುವ ಮೂಲಕ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಅದರಂತೆ ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಸಹ ತಮ್ಮ ಊರಿಗೆ ತೆರಳಿ ಅಪ್ಪನಿಗೆ ಸಹಾಯ ಮಾಡುತ್ತಿದ್ದಾರೆ.

    ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಗೆ ಸ್ಯಾಂಡಲ್‍ವುಡ್ ಮಾತ್ರವಲ್ಲದೆ ತಮಿಳಿನಿಂದಲೂ ಆಫರ್‍ಗಳು ಬುರತ್ತಿವೆ. ಇಷ್ಟಾದರೂ ರವಿ ಅವರು ಮಾತ್ರ ಇದೆಲ್ಲವನ್ನೂ ಬಿಟ್ಟು ತಮ್ಮ ಊರಿಗೆ ತೆರಳಿ ಕಮ್ಮಾರಿಕೆ ಕೆಲಸದಲ್ಲಿ ನಿರತರಾಗಿದ್ದಾರೆ. ಅರೇ ಇದೇನು ಇವರೇಕೆ ಈ ಕೆಲಸಕ್ಕೆ ಮರಳಿದರು ಎಂದು ಯೋಚಿಸಬೇಡಿ, ಎಲ್ಲ ಕೊರೊನಾ ಮಾಯೆ. ರವಿ ಬಸ್ರೂರು ಅವರು ಶಾಶ್ವತವಾಗಿ ಕಮ್ಮಾರಿಕೆ ಕೆಲಸಕ್ಕೆ ಇಳಿದಿಲ್ಲ. ಬದಲಿಗೆ ಕೊರೊನಾದಿಂದಾಗಿ ಸ್ವಯಂ ದಿಗ್ಬಂಧನ ವಿಧಿಸಿಕೊಂಡು ಊರಲ್ಲಿ ಕೆಲಸದಲ್ಲಿ ತೊಡಗಿದ್ದು, ಈ ಮೂಲಕ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದಾರೆ.

    ಬಹುತೇಕರು ಕೆಲ ದಿನಗಳ ಕಾಲ ಬಿಡುವು ಸಿಕ್ಕಿದೆ ಎಂದು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ ರವಿ ಬಸ್ರೂರು ಅವರು ಮಾತ್ರ ಮನೆಯಲ್ಲಿಯೂ ಸಹ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಕೊರೊನಾದಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವರು ತಮ್ಮ ಊರು ಕುಂದಾಪುರ ಬಳಿಯ ಬಸ್ರೂರಿಗೆ ತೆರಳಿದ್ದು, ಅಲ್ಲಿ ತಮ್ಮ ತಂದೆಗೆ ಸಹಾಯ ಮಾಡುತ್ತಿದ್ದಾರೆ.

    ಕಮ್ಮಾರಿಕೆ ಕೆಲಸದಲ್ಲಿ ತೊಡಗಿರುವ ಕುರಿತು ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದು, ಅಪ್ಪಯ್ಯಂಗೆ ಜೈ, ಇವತ್ 35 ರೂಪಾಯ್ ದುಡಿಮೆ, ತಲೆಬಿಸಿ ಫುಲ್ ಕಮ್ಮಿ ಆಯ್ತು ಎಂದು ಬರೆದುಕೊಂಡಿದ್ದಾರೆ. ಕೈಯಲ್ಲಿ ಸುತ್ತಿಗೆ ಹಿಡಿದು ಹಾರೆಯನ್ನು ಹರಿತಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾರೆಗೆ ಏಟುಗಳ ಮೇಲೆ ಏಟು ಕೊಟ್ಟು ಹರಿತಗೊಳಿಸಿದ್ದಾರೆ. ಈ ಕುರಿತು ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

    ಕಮ್ಮಾರಿಕೆ ರವಿ ಬಸ್ರೂರು ಅವರ ಕುಲ ಕಸುಬು. ಅವರ ತಂದೆಯವರು ಇನ್ನೂ ಸಹ ಅದೇ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ರವಿ ಬಸ್ರೂರು ಅವರು ತಂದೆಗೆ ಸಹಾಯ ಮಾಡಿದ್ದಾರೆ. ಅಲ್ಲದೆ ಕಮ್ಮಾರಿಕೆ ಕೆಲಸ ಮಾಡಿ ದಿನಕ್ಕೆ 35 ರೂ.ಸಂಪಾದಿಸಿದ್ದಾರೆ.