Tag: Ravi Basroor

  • ಮೊಬೈಲ್ ಅವಾಂತರದ ಚಿತ್ರಣ ನೀಡಿದ ಕೆಜಿಎಫ್ ಸಂಗೀತ ನಿರ್ದೇಶಕ

    ಮೊಬೈಲ್ ಅವಾಂತರದ ಚಿತ್ರಣ ನೀಡಿದ ಕೆಜಿಎಫ್ ಸಂಗೀತ ನಿರ್ದೇಶಕ

    ಬೆಂಗಳೂರು: ಲಾಕ್‍ಡೌನ್ ದಿನಗಳನ್ನು ಎಲ್ಲ ನಟ, ನಟಿಯರು ವಿಭಿನ್ನವಾಗಿ ಬಳಸಿಕೊಳ್ಳುತ್ತಿದ್ದು, ಕೆಲವರು ತಮ್ಮ ಹವ್ಯಾಸಗಳತ್ತ ತಿರುಗಿದರೆ, ಇನ್ನೂ ಕೆಲವರು ಮನರಂಜನೆ, ಸಾಮಾಜಿಕ ಕಾರ್ಯ, ಸಹಾಯದ ರೀತಿಯ ಕೆಲಸಗಳಲ್ಲಿ ತೊಡಗಿದ್ದಾರೆ. ಬಿಡುವಿದ್ದಾಗಲೆಲ್ಲ ಕಮ್ಮಾರಿಕೆ ಮಾಡುವ ಮೂಲಕ ತಂದೆಗೆ ನೆರವಾಗುತ್ತಿದ್ದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಇಂದು ಮೊಬೈಲ್ ದುರ್ಬಳಕೆಯ ಅವಾಂತರಗಳ ಕುರಿತು ಗಮನ ಸೆಳೆದಿದ್ದಾರೆ.

    ಹೌದು ಯುವಕರಿಗೆ ಅಪ್ಯಾಯಮಾನವಾಗುವ ರೀತಿಯಲ್ಲಿ ಮೊಬೈಲ್ ಕುರಿತು ಜಾಗೃತಿ ಮೂಡಿಸಿರುವ ರವಿ ಬಸ್ರೂರ್, ಸಂಗೀತದ ಮೂಲಕ ಮೋಡಿ ಮಾಡಿದ್ದಾರೆ. ವಿಭಿನ್ನ ಹಾಡು ರಚಿಸುವ ಮೂಲಕ ಮೊಬೈಲ್ ಬಂದ ಮೇಲೆ ಆಗಿರುವ ಅವಾಂತರಗಳ ಕುರಿತು ಗಮನಸೆಳೆದಿದ್ದಾರೆ. ಹಾಡು ಯುವಕರನ್ನು ಸೆಳೆಯುತ್ತಿದೆ. ಈ ಹಾಡನ್ನು ಅವರ ಯೂಟ್ಯೂಬ್ ಚಾನೆಲ್ ರವಿ ಬಸ್ರೂರ್ ಮ್ಯೂಸಿಕ್ ನಲ್ಲಿ ಹಾಕಿಕೊಂಡಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ಹಾಡು ಕುಂದಾಪುರ ಭಾಷೆಯಲ್ಲಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೊಬೈಲ್ ಕೈಗೆ ಸಿಕ್ಕಿ ಮಕ್ಳ ಕೆಟ್ಟೊ, ಹೇಳಿದ್ದ್ ಕೇಂತಿಲ್ಲ, ಉಂಬುದೇ ಬಿಟ್ಟೊ, ರಸ್ತೆಂಗೆ ತಲಿ ಎತ್ತಿ ತಿರ್ಗುದೆ ಬಿಟ್ಟೊ ಎಂಬ ಸಾಲುಗಳ ಮೂಲಕ ಹಾಡು ಪ್ರಾರಂಭವಾಗುತ್ತೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಲಾಕ್‍ಡೌನ್ ಅವಧಿಯಲ್ಲಿ ರವಿ ಬಸ್ರೂರ್ ತಮ್ಮ ಹುಟ್ಟೂರು ಕುಂದಾಪುರಕ್ಕೆ ತೆರಳಿ ಕುಲ ಕಸುಬು ಕಮ್ಮಾರಿಕೆಯ ಕೆಲಸ ಮಾಡುತ್ತಿರುವ ವಿಡಿಯೋ ಇತ್ತೀಚೆಗೆ ಫೇಸ್ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದರು. ತಂದೆಗೆ ಸಹಾಯ ಮಾಡಲು ಕಮ್ಮಾರಿಕೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಲಾಕ್‍ಡೌನ್ ಅವಧಿಯಲ್ಲಿ ಹಾಡೊಂದನ್ನು ರಚಿಸಿ, ಸಂಯೋಜಿಸಿ ಬಿಡುಗಡೆ ಮಾಡಿದ್ದಾರೆ.

    ಕೆಜಿಎಫ್ ಸಿನಿಮಾ ನಂತರ ರವಿ ಬಸ್ರೂರ್ ಅವರಿಗೆ ಹೆಚ್ಚು ಆಫರ್ ಗಳು ಬರುತ್ತಿದ್ದು, ಸ್ಯಾಂಡಲ್‍ವುಡ್ ಮಾತ್ರವಲ್ಲದೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ, ಮಡ್ಡಿ ಸಿನಿಮಾಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಲಾಕ್‍ಡೌನ್ ಹಿನ್ನೆಲೆ ತಮ್ಮ ಹುಟ್ಟೂರು ಕುಂದಾಪುರದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರ ಮಧ್ಯೆಯೇ ಈ ಹಾಡನ್ನು ರಚಿಸಿದ್ದಾರೆ. ಹೀಗೆ ಲಾಕ್‍ಡೌನ್ ಸಮಯವನ್ನು ರವಿ ಬಸ್ರೂರ್ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

  • ರಾಘವೇಂದ್ರ ರಾಜ್‌ಕುಮಾರ್ ಅತ್ಯುತ್ತಮ ನಟ, ಮೇಘನಾ ರಾಜ್ ಅತ್ಯುತ್ತಮ ನಟಿ

    ರಾಘವೇಂದ್ರ ರಾಜ್‌ಕುಮಾರ್ ಅತ್ಯುತ್ತಮ ನಟ, ಮೇಘನಾ ರಾಜ್ ಅತ್ಯುತ್ತಮ ನಟಿ

    – 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
    – ರವಿ ಬಸ್ರೂರ್‌ಗೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ

    ಬೆಂಗಳೂರು: 2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ನಿರ್ದೇಶಕ ಜೋಸೈಮನ್ ನೇತೃತ್ವದ ಆಯ್ಕೆ ಸಮಿತಿ 162 ಚಿತ್ರಗಳನ್ನ ವೀಕ್ಷಿಸಿ ಪ್ರಶಸ್ತಿ ಆಯ್ಕೆ ಮಾಡಿದ್ದಾರೆ. ಜೊತೆಗೆ ನಿರ್ಮಾಪಕ, ನಟ ಬಸಂತಕುಮಾರ್ ಪಾಟೀಲ್ ನೇತೃತ್ವದ ಸಮಿತಿ ಜೀವಮಾನ ಸಾಧನೆಗಳ ಪ್ರಶಸ್ತಿಯನ್ನು ಆಯ್ಕೆ ಮಾಡಿದೆ.

    ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ವಾರ್ತಾ ಸಚಿವರು ಆದ ಸಿಎಂ ಯಡಿಯೂರಪ್ಪ ಪ್ರಶಸ್ತಿ ಪ್ರಕಟಿಸಿದರು. ಅತ್ಯುತ್ತಮ ನಟ ಪ್ರಶಸ್ತಿಗೆ ರಾಘವೇಂದ್ರ ರಾಜ್‌ಕುಮಾರ್, ಅತ್ಯುತ್ತಮ ನಟಿ ಪ್ರಶಸ್ತಿಗೆ ಮೇಘನಾ ರಾಜ್ ಆಯ್ಕೆಯಾಗಿದ್ದಾರೆ. ಆ ಕರಾಳ ರಾತ್ರಿ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ. ರಾಜ್ಯ ಚಲನಚಿತ್ರ ಪ್ರಶಸ್ತಿ ವಿವರ ಕೆಳಕಂಡತೆ ಇವೆ.

    ಯಾರಿಗೆ ಯಾವ ಪ್ರಶಸ್ತಿ?
    ಜೀವಮಾನ ಸಾಧನೆ, ಡಾ.ರಾಜ್‌ಕುಮಾರ್ ಪ್ರಶಸ್ತಿ – ಶ್ರೀನಿವಾಸ್ ಮೂರ್ತಿ
    ಪುಟ್ಟಣ್ಣ ಕಣಗಾಲ್ ಪ್ರಶಸ್ತಿ – ಪಿ. ಶೇಷಾದ್ರಿ, ನಿರ್ದೇಶಕ
    ವಿಷ್ಣುವರ್ಧನ್ ಪ್ರಶಸ್ತಿ – ಬಿ.ಎಸ್. ಬಸವರಾಜು

    ಅತ್ಯುತ್ತಮ ನಟ – ರಾಘವೇಂದ್ರ ರಾಜ್‌ಕುಮಾರ್(ಅಮ್ಮನ ಮನೆ)
    ಅತ್ಯುತ್ತಮ ನಟಿ – ಮೇಘನಾ ರಾಜ್(ಇರುವುದೆಲ್ಲವ ಬಿಟ್ಟು)
    ಅತ್ಯುತ್ತಮ ಸಂಗೀತ ನಿರ್ದೇಶನ – ರವಿ ಬಸ್ರೂರ್ (ಕೆಜಿಎಫ್)

    ಅತ್ಯುತ್ತಮ ಮೊದಲ ಚಿತ್ರ – ಆ ಕರಾಳ ರಾತ್ರಿ
    ಅತ್ಯುತ್ತಮ ಎರಡನೇ ಚಿತ್ರ – ರಾಮನ ಸವಾರಿ
    ಅತ್ಯುತ್ತಮ ಮೂರನೇ ಚಿತ್ರ – ಒಂದಲ್ಲ ಎರಡಲ್ಲ

    ವಿಶೇಷ ಸಾಮಾಜಿಕ ಕಳಕಳಿ ಚಿತ್ರ – ಸಂತಕವಿ ಕನಕದಾಸರ ರಾಮಧಾನ್ಯ
    ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

    ಅತ್ಯುತ್ತಮ ಮಕ್ಕಳ ಚಿತ್ರ – ಹೂವು ಬಳ್ಳಿ
    ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರ – ಬೆಳಕಿನ ಕನ್ನಡಿ
    ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ – ದೇಯಿ ಬೈದೇತಿ(ತುಳು)

    ಅತ್ಯುತ್ತಮ ಪೋಷಕ ನಟ – ಬಾಲಾಜಿ ಮನೋಹರ್(ಚೂರಿಕಟ್ಟೆ)
    ಅತ್ಯುತ್ತಮ ಪೋಷಕ ನಟಿ – ವೀಣಾ ಸುಂದರ್(ಆ ಕರಾಳ ರಾತ್ರಿ)

    ಅತ್ಯುತ್ತಮ ಕತೆ – ನಾಯಿಗೆರೆ(ಹರೀಶ್.ಎಸ್)
    ಅತ್ಯುತ್ತಮ ಚಿತ್ರಕತೆ – ಮೂಕಜ್ಜಿಯ ಕನಸುಗಳು(ಪಿ.ಶೇಷಾದ್ರಿ)
    ಅತ್ಯುತ್ತಮ ಸಂಭಾಷಣೆ – ಶಿರಿಷಾ ಜೋಶಿ(ಸಾವಿತ್ರಿಬಾಯಿ ಫುಲೆ)

    ಅತ್ಯುತ್ತಮ ಛಾಯಾಗ್ರಹಣ – ನವೀನ್ ಕುಮಾರ್(ಅಮ್ಮಚ್ಚಿಯೆಂಬ ನೆನಪು)
    ಅತ್ಯುತ್ತಮ ಸಂಕಲನ – ಸುರೇಶ್ ಆರುಗ್ಮಂ(ತ್ರಾಟಕ)
    ಅತ್ಯುತ್ತಮ ಬಾಲನಟ – ಮಾಸ್ಟರ್ ಆರ್ಯನ್(ರಾಮನ ಸವಾರಿ)

    ಅತ್ಯುತ್ತಮ ಬಾಲನಟಿ – ಬೇಬಿ ಸಿಂಚನ(ಅಂದವಾದ)
    ಅತ್ಯುತ್ತಮ ಕಲಾ ನಿರ್ದೆಶನ – ಶಿವಕುಮಾರ್ ಜೆ(ಕೆಜಿಎಫ್)
    ಅತ್ಯುತ್ತಮ ಗೀತ ರಚನೆ – ಬರಗೂರು ರಾಮಚಂದ್ರಪ್ಪ(ಸಾವೇ.. ಸಾವೇ.. ಗೀತೆ)
    ಅತ್ಯುತ್ತಮ ಹಿನ್ನಲೆ ಗಾಯಕಿ – ಕಲಾವತಿ ದಯಾನಂದ(ದೇಯಿ ಬೈದೇತಿ)
    ಹಿನ್ನಲೆ ಗಾಯಕ – ಸಿದ್ಧಾರ್ಥ