Tag: Ravenna

  • ಬಿಜೆಪಿ ಯುವ ಮೋರ್ಚಾದಿಂದ ರೇವಣ್ಣಗೆ ಕ್ಯಾಂಡಲ್ ರವಾನೆ

    ಬಿಜೆಪಿ ಯುವ ಮೋರ್ಚಾದಿಂದ ರೇವಣ್ಣಗೆ ಕ್ಯಾಂಡಲ್ ರವಾನೆ

    – ಹೊಳೆನರಸೀಪುರ ವಿಳಾಸಕ್ಕೆ ಸ್ಪೀಡ್ ಪೋಸ್ಟ್

    ದಾವಣಗೆರೆ: ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಗಡಿಯಾರ ಕಂಬದ ಬಳಿಯಿರುವ ಪ್ರಧಾನ ಅಂಚೆ ಕಚೇರಿಯಿಂದ ಶಾಸಕರಾದ ಹೆಚ್.ಡಿ ರೇವಣ್ಣ ಅವರ ವಿಳಾಸಕ್ಕೆ ಕ್ಯಾಂಡಲ್ ಬಾಕ್ಸನ್ನು ಸ್ಪೀಡ್ ಪೋಸ್ಟ್ ಮಾಡಿದ್ದಾರೆ.

    ಈ ವೇಳೆ ಮಾತನಾಡಿದ ಯುವಮೋರ್ಚಾ ಅಧ್ಯಕ್ಷ ಶಿವನಗೌಡ ಪಾಟೀಲ್, ಪ್ರಧಾನಿ ಮೋದಿ ಅವರ ದೀಪದ ಕರೆಗೆ ಪರೋಕ್ಷವಾಗಿ ಓಗೊಟ್ಟಿರುವ ರೇವಣ್ಣ ಅವರಿಗೆ ನಮ್ಮ ಧನ್ಯವಾದಗಳು. ದೇಶ ವ್ಯಾಪ್ತಿ ಲಾಕ್‍ಡೌನ್ ಇರುವುದರಿಂದ ಮೇಣದ ಬತ್ತಿ ತರಲು ಹೊರಗೆ ಹೋದರೆ ಲಾಠಿ ಚಾರ್ಜ್ ಮಾಡುತ್ತಾರೆ ಎಂದು ಅಸಹಾಯಕತೆ ತೋರಿರುವುದು ನಮಗೆ ಗೊತ್ತಾಯಿತು ಎಂದು ಹೇಳಿದರು.

    ಇಲ್ಲಿಯ ಮಣ್ಣಿನ ಕಣಕಣದಲ್ಲೂ ದೈವ ಸಾಕ್ಷಾತ್ಕಾರದ ಶಕ್ತಿ ಇದೆ. ಇಂತಹ ಪಾವನ ಮಣ್ಣಿನಲ್ಲಿ ಮನಃಪೂರ್ವಕವಾಗಿ ದೀಪ ಬೆಳಗುವ ಪ್ರಕ್ರಿಯೇ ನಿಜಕ್ಕೂ ದೈವ ಸಾಕ್ಷಾತ್ಕಾರದ ಸಮಾನ. ಸ್ವಾತಂತ್ರ್ಯ ಭಾರತದ ನಂತರ ಭಾರತೀಯರೆಲ್ಲರೂ ದೇಶದ ಒಳತಿಗಾಗಿ, ದೇಶದ ಜನರ ಪ್ರಾಣ ರಕ್ಷಣೆಗಾಗಿ ಪ್ರಧಾನಿಯವರ ಕರೆ ಯಶಸ್ವಿಯಾಗಬೇಕಾದರೆ ರೇವಣ್ಣರ ದೈವ ಭಕ್ತರ ಸಹಕಾರವೂ ಅತ್ಯವಶ್ಯಕ. ಆದ್ದರಿಂದ ಅವರ ಅಸಾಹಯಕತೆಯನ್ನು ಮನಗಂಡು ಹೊಳೆನರಸೀಪುರ ಮನೆಯ ವಿಳಾಸಕ್ಕೆ ಮೇಣದ ಬತ್ತಿ ಪ್ಯಾಕೆಟ್‍ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುತ್ತಿದ್ದೇವೆ ಎಂದಿದ್ದಾರೆ.

    ತಾವು ಕುಟುಂಬ ಪರಿವಾರ ಸಮೇತರಾಗಿ ನಿರ್ಮಲ ಮನಸ್ಸಿನಿಂದ ದೇಶಕ್ಕೆ ಬಂದ ಕೊರೊನಾ ಕಂಟಕ ಹೊಡೆದೊಡಿಸಲು ನಮ್ಮ ಪ್ರಧಾನಿ ಅವರ ದೀಪ ಪ್ರಜ್ವಲನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಅಲ್ಲದೇ ತಮ್ಮ ಪಕ್ಷದ ಯಾವುದಾದರೂ ಶಾಸಕರುಗಳು ಈ ಅಸಹಾಯಕತೆಯ ಅಳಲನ್ನು ತಮ್ಮ ಮುಂದೆ ತೋಡಿಕೊಂಡಿದ್ದರೆ ನಮಗೆ ತಿಳಿಸಿ. ನಾವು ಅವರಿಗೂ ಕಳುಹಿಸಿ ಕೊಡಲು ಸಿದ್ಧರಿದ್ದೇವೆ ಎಂದು ಯುವಮೋರ್ಚಾ ಕಾರ್ಯಕರ್ತರು ತಿಳಿಸಿದ್ದಾರೆ.

  • ಅಂದು ಬಿಸ್ಕೆಟ್, ಇಂದು ಬೆಲ್ – ಅಳಲು ತೋಡಿಕೊಂಡ ಸಂತ್ರಸ್ತರನ್ನು ನಿರ್ಲಕ್ಷಿಸಿದ ರೇವಣ್ಣ

    ಅಂದು ಬಿಸ್ಕೆಟ್, ಇಂದು ಬೆಲ್ – ಅಳಲು ತೋಡಿಕೊಂಡ ಸಂತ್ರಸ್ತರನ್ನು ನಿರ್ಲಕ್ಷಿಸಿದ ರೇವಣ್ಣ

    ಬೆಳಗಾವಿ: ಅತ್ತ ಪ್ರವಾಹದಿಂದ ತತ್ತರಿಸಿರುವ ನಿರಾಶ್ರಿತರು ಅಳಲು ತೋಡಿಕೊಳ್ಳುತ್ತಿದ್ದರೆ, ಇತ್ತ ಮೇಜಿನ ಮೇಲೆ ಇರುವ ಬೆಲ್ ಹಿಡಿದು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಆಟವಾಡುತ್ತಾ ಸಂತ್ರಸ್ತರನ್ನು ನಿರ್ಲಕ್ಷಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ಪರಿಹಾರ ಕೇಂದ್ರದಲ್ಲಿ ರೇವಣ್ಣ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ. ಕಳೆದ ಎರಡು ದಿನದಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ರೇವಣ್ಣ ಅವರು ಇಂದು ಗೋಕಾಕ್ ಪಟ್ಟಣಕ್ಕೆ ಬಂದಿದ್ದರು. ಈ ವೇಳೆ ನಿರಾಶ್ರಿತರ ಕೇಂದ್ರದಲ್ಲಿ ಸಂತ್ರಸ್ತ ಮಹಿಳೆಯೊಬ್ಬರು ತಮ್ಮ ಸಂಕಷ್ಟವನ್ನು ಹೇಳುತ್ತಿದ್ದರೆ ಇತ್ತ ರೇವಣ್ಣ ಅವರು ಮೇಜಿನ ಮೇಲೆ ಇದ್ದ ಬೆಲ್ ಹಿಡಿದು ಆಟ ಆಡುತ್ತಾ ನಿರ್ಲಕ್ಷ್ಯ ತೋರಿದ್ದಾರೆ. ಆಗ ಅನಿವಾರ್ಯವಾಗಿ ಶಾಸಕ ಕೋನರೆಡ್ಡಿ ಮುಂದೆ ಮಹಿಳೆ ಅಳಲು ತೋಡಿಕ್ಕೊಂಡಿದ್ದಾರೆ.

    ಈ ಹಿಂದೆ ಕೊಡಗಿನಲ್ಲಿ ಪ್ರವಾಹ ಉಂಟಾದಾಗ ಸಾಕಷ್ಟು ಮಂದಿ ನಿರಾಶ್ರಿತ ಕೇಂದ್ರಗಳಲ್ಲಿ ಆಸರೆ ಪಡೆದಿದ್ದರು. ಆಗ ನಿರಾಶ್ರಿತ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದ ರೇವಣ್ಣ ಅವರು ಜನರಿಗೆ ಆಹಾರವನ್ನು ಕೈಗೆ ನೀಡುವ ಬದಲು ಬೇಕಾಬಿಟ್ಟಿ ಬಿಸ್ಕೆಟ್ ಎಸೆದು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಕೂಡ ರಾಜ್ಯದಲ್ಲಿ ಉಂಟಾದ ಪ್ರವಾಹಕ್ಕೆ ಸಾಕಷ್ಟು ಮಂದಿ ಮನೆಮಠ ಕಳೆದುಕೊಂಡು ಕಂಗಾಲಾಗಿದ್ದಾರೆ. ಹೀಗಿರುವಾಗ ರೇವಣ್ಣ ಅವರ ಈ ವರ್ತನೆ ಭಾರೀ ವಿರೋಧಕ್ಕೆ ಕಾರಣವಾಗಿದೆ.