Tag: Raveena Tondon

  • ಕೆಜಿಎಫ್2ಗೆ ಧ್ವನಿ ನೀಡಿದ ಮಸ್ತ್ ಮಸ್ತ್ ಹುಡುಗಿ

    ಕೆಜಿಎಫ್2ಗೆ ಧ್ವನಿ ನೀಡಿದ ಮಸ್ತ್ ಮಸ್ತ್ ಹುಡುಗಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಹುನೀರಿಕ್ಷೆಯನ್ನು ಹುಟ್ಟು ಹಾಕಿದೆ. ಕೆಜಿಎಫ್ ಸಿನಿಮಾ ತಂಡ ಪೋಸ್ಟ್ ಪ್ರೋಡೆಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಅವರು ತಮ್ಮ ಪಾತ್ರಕ್ಕೆ ಧ್ವನಿ ಕೊಟ್ಟಿದ್ದಾರೆ.

    ಕೆಜಿಎಫ್ ನಿರ್ದೆಶಕ ಪ್ರಶಾಂತ್ ನೀಲ್ ಅವರು ಸಿನಿಮಾ ಕುರಿತಾಗಿ ಕೆಲವು ಅಪ್ಡೇಟ್‍ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ರವೀನಾ ಟಂಡನ್ ಅವರು ಡಬ್ಬಿಂಗ್‍ನಲ್ಲಿ ಪಾಲ್ಗೊಂಡಿರುವುದನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ.

    ಕೆಜಿಎಫ್ 2 ಸಿನಿಮಾದಲ್ಲಿ ರವೀನಾ ಟಂಡನ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರಕ್ಕೆ ಸಾಮಾನ್ಯವಾಗಿ ಶೂಟಿಂಗ್ ವೇಳೆ ತುಟಿ ಚಲನೆಯನ್ನು ಎಲ್ಲರೂ ಮಾಡುತ್ತಾರೆ. ಆದರೆ ಪಾತ್ರಗಳಿಗೆ ಮತ್ತೊಮ್ಮೆ ಸ್ಟೂಡಿಯೋದಲ್ಲಿ ಧ್ವನಿ ಕೊಡುತ್ತಾರೆ. ಅದನ್ನೇ ಡಬ್ಬಿಂಗ್ ಎನ್ನುತ್ತಾರೆ. ಈಗ ಸ್ವತಃ ರವೀನಾ ಟಂಡನ್ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಕೇವಲ ಹಿಂದಿಯಲ್ಲಿ ಮಾತ್ರ ಡಬ್ಬಿಂಗ್ ಮಾಡಿದ್ದಾರಾ? ಅಥವಾ ಕನ್ನಡಕ್ಕೂ ಅವರೇ ಧ್ವನಿ ಕೊಟ್ಟಿದ್ದಾರಾ? ಎನ್ನುವ ಪ್ರಶ್ನೆಗೆ ಪ್ರಶಾಂತ್ ನೀಲ್ ಅವರು ಉತ್ತರ ಕೊಡಬೇಕಾಗಿದೆ. ಇದನ್ನೂ ಓದಿ:  ಕೆಜಿಎಫ್ ಟೀಮ್​ ಜೊತೆ ಕ್ರಿಕೆಟ್ ಆಡಿದ ಯಶ್: ವೀಡಿಯೋ ವೈರಲ್

    ಏಪ್ರಿಲ್ 14 ರಂದು ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಸಿನಿಮಾ ತಂಡ ಭರ್ಜರಿಸಿದ್ಧತೆ ಮಾಡಿಕೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಕುಂದಾಪುರದ ಸ್ಟುಡಿಯೋಗೆ ಯಶ್ ಹೋಗಿದ್ದರು. ಅಲ್ಲಿ ಸುತ್ತಮುತ್ತಲಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿಕೊಟ್ಟಿದ್ದರು. ಸಿನಿಮಾ ಬಿಡುಗಡೆಗೆ ಚಿತ್ರ ತಂಡ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರೆ, ಇತ್ತ ಅಭಿಮಾನಿಗಳು ಪರದೆ ಮೇಲೆ ನೋಡಿ ವಿಶಿಲ್ ಹಾಕಲು ಕಾಯುತ್ತಿದ್ದಾರೆ. ಇದನ್ನೂ ಓದಿ:  ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ್ದ ಅರ್ಜುನ್‍ಗೆ ಚೋರ್ ಎಂದ ಮಲೈಕಾ

  • ಕೆಜಿಎಫ್ ರಾಕಿಗೆ ಡೆತ್ ನೋಟ್ ನೀಡಲು ಬಂದ ರಮಿಕಾ ಸೇನ್ ಫಸ್ಟ್ ಲುಕ್

    ಕೆಜಿಎಫ್ ರಾಕಿಗೆ ಡೆತ್ ನೋಟ್ ನೀಡಲು ಬಂದ ರಮಿಕಾ ಸೇನ್ ಫಸ್ಟ್ ಲುಕ್

    ಬೆಂಗಳೂರು: ಕೆಜಿಎಫ್ ದುನಿಯಾದ ರಾಕಿಗೆ ಡೆತ್ ನೋಟ್ ನೀಡಲು ಬಂದ ರಾಜಕಾರಣಿ ರಮೀಕಾ ಸೇನ್ ಫಸ್ಟ್ ಲುಕ್ ಔಟ್ ಆಗಿದೆ. ರಮೀಕಾ ಸೇನ್ ಪಾತ್ರದಲ್ಲಿ ನಟಿಸುತ್ತಿರುವ ರವೀನಾ ಟಂಡನ್ ಹುಟ್ಟುಹಬ್ಬದ ಹಿನ್ನೆಲೆ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆಗೊಳಿಸುವ ಮೂಲಕ ಬರ್ತ್ ಡೇ ಗಿಫ್ಟ್ ನೀಡಿದೆ.

    ಕನ್ನಡಕ್ಕೆ ಮೊದಲ ಬಾರಿಗೆ ಬಂದಿರುವ ರವೀನಾ ಟಂಡನ್ ಕೆಜಿಎಫ್ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಮಹಿಳಾ ರಾಜಕಾರಣಿಯಾಗಿ ರವೀನಾ ನಟಿಸುತ್ತಿದ್ದಾರೆ. ಕೆಜಿಎಫ್ ಲೋಕದಲ್ಲಿಯ ನಾಯಕ ರಾಕಿಗೆ ರಮೀಕಾ ಸೇನ್ ಡೆತ್ ನೀಡಲಿರುವ ವಿಷಯವನ್ನ ಚಿತ್ರತಂಡ ಈ ಹಿಂದೆ ಹೇಳಿಕೊಂಡಿತ್ತು. ಅಧಿವೇಶನದಲ್ಲಿ ಕೆಂಪು ಸೀರೆ ತೊಟ್ಟ ಆದೇಶಕ್ಕಾಗಿ ಕಾಯುತ್ತಿರುವ ರವೀನಾರ ಗಾಂಭೀರ್ಯದ ನೇರ ನೋಟ ನೋಡುಗರನ್ನ ಸೆಳೆಯುತ್ತಿದೆ.

    ರವೀನಾ ಟಂಡನ್ ಚಿತ್ರೀಕರಣಕ್ಕೆ ಆಗಮಿಸಿದ ವೇಳೆ ಚಿತ್ರತಂಡ ವಿಶೇಷವಾಗಿ ಬರಮಾಡಿಕೊಂಡಿತ್ತು. ರವೀನಾ ಮತ್ತು ಯಶ್ ಜೊತೆಗಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಕೆಲ ದಿನಗಳ ಹಿಂದೆ ಚಿತ್ರದ ರಾಕಿಯ ನಾಯಕಿ ರೀನಾ ಹುಟ್ಟುಹಬ್ಬದ ದಿನವೂ ಶ್ರೀನಿಧಿ ಶೆಟ್ಟಿಯವರ ಫಸ್ಟ್ ಲುಕ್ ಬಿಡುಗಡೆಗೊಳಿಸಲಾಗಿತ್ತು.

  • “ಡೆತ್ ವಾರೆಂಟ್ ಜಾರಿ ಮಾಡಲು ಬಂದ್ರು ರವೀನಾ”

    “ಡೆತ್ ವಾರೆಂಟ್ ಜಾರಿ ಮಾಡಲು ಬಂದ್ರು ರವೀನಾ”

    -ಕೆಜಿಎಫ್ 2ಗೆ ರವೀನಾ ಎಂಟ್ರಿ

    ಬೆಂಗಳೂರು: ನಟ ಯಶ್ ನಟನೆಯ ಕೆಜಿಎಫ್ ಚಿತ್ರ ಇಡೀ ಚಿತ್ರರಂಗದಲ್ಲೇ ಧೂಳೆಬ್ಬಿಸಿತ್ತು. ಇದೀಗ ಕೆಜಿಎಫ್-ಚಾಪ್ಟರ್ 2 ಮೇಲೆ ಸಿನಿರಸಿಕರ ಚಿತ್ತ ನೆಟ್ಟಿದೆ. ಸದ್ಯ ಕೆಜಿಎಫ್ ಅಂಗಳಕ್ಕೆ ಬಾಲಿವುಡ್ ಚೆಲುವೆ ರವೀನಾ ಟಂಡನ್ ಎಂಟ್ರಿ ನೀಡಿದ್ದಾರೆ. ಚಿತ್ರತಂಡ ಟ್ವಿಟ್ಟರ್‍ನಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ರವೀನಾ ಟಂಡನ್ ನಿಂತಿರುವ ಫೋಟೋವನ್ನು ಹಂಚಿಕೊಂಡು ಸ್ವಾಗತ ಕೋರಿದ್ದಾರೆ.

    ಮೊದಲು ಎಕ್ಸೆಲ್ ಎಂಟರ್ ಟೈನ್‍ಮೆಂಟ್ ಟ್ವಿಟ್ಟರ್ ನಲ್ಲಿ ರವೀನಾ ಮತ್ತು ಪ್ರಶಾಂತ್ ನೀಲ್ ಜೊತೆಗಿನ ಫೋಟೋ ಹಂಚಿಕೊಂಡು, ಡೆತ್ ವಾರೆಂಟ್ ಜಾರಿ ಮಾಡಲು ಬಂದ ಶಕ್ತಿಶಾಲಿ ಮಹಿಳೆಗೆ ಕೆಜಿಎಫ್ -2 ಸಿನಿಮಾ ಅಂಗಳಕ್ಕೆ ಸ್ವಾಗತ ಎಂದು ಬರೆದು ಚಿತ್ರತಂಡದ ಇತರರಿಗೂ ಟ್ಯಾಗ್ ಮಾಡಿದ್ದಾರೆ. ಟ್ವೀಟಿಗೆ ಪ್ರತಿಕ್ರಿಯಿಸಿರುವ ನಟಿ ಶ್ರೀನಿಧಿ ಶೆಟ್ಟಿ, ತುಂಬಾ ಉತ್ಸುಕಳಾಗಿದ್ದೇನೆ ಎಂದು ಬರೆದು ವೆಲ್ ಕಮ್ ಮಾಡಿಕೊಂಡಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರ್, ರಾಷ್ಟ್ರೀಯ ಪ್ರಶಸ್ತಿ ವಿಜೇತ ರವೀನಾ ಟಂಡನ್ ಅವರಿಗೆ ಆತ್ಮೀಯ ಸ್ವಾಗತ ಎಂದು ಬರೆದುಕೊಂಡಿದ್ದಾರೆ.

    https://twitter.com/VKiragandur/status/1226386677884579840

    ಕೆಜಿಎಫ್-2 ಸಿನಿಮಾದಲ್ಲಿ ಬಾಲಿವುಡ್ ಖಳನಾಯಕ್ ಸಂಜಯ್ ದತ್ ಸಹ ಅಧೀರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸಂಜಯ್ ದತ್ ಅವರ ಹುಟ್ಟುಹಬ್ಬದಂದು ಅಧೀರನ ಫಸ್ಟ್ ಲುಕ್ ಬಿಡುಗಡೆಗೊಳಿಸಲಾಗಿತ್ತು. ಕೆಜಿಎಫ್ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದ್ದು, ರವೀನಾ ಟಂಡನ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜಕಾರಣಿಯಾಗಿ ರವೀನಾ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ ಚಿತ್ರತಂಡ ಈ ಬಗ್ಗೆ ಯಾವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. .

    ರವೀನಾ ಟಂಡನ್ ಸಿನಿಮಾದಲ್ಲಿ ಪ್ರಧಾನಿ ಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾದ ಟರ್ನಿಂಗ್ ಪಾಯಿಂಟ್ ನಲ್ಲಿ ರವೀನಾ ಎಂಟ್ರಿ ನೋಡುಗರಿಗೆ ಇಷ್ಟವಾಗುತ್ತೆ ಅಂತೆ. ಕೆಜಿಎಫ್ ಮೊದಲ ಭಾಗದಲ್ಲಿಯೂ ಪ್ರಧಾನ ಆಕರ್ಷಣೆಯಾಗಿದ್ದದ್ದು ತಾರಾಗಣವೇ. ಈ ಬಾರಿಯೂ ವಿಶೇಷವಾದ ಪಾತ್ರಗಳಿಗೆ ಅದಕ್ಕೆ ತಕ್ಕುದಾದ ಕಲಾವಿದರನ್ನೇ ಪ್ರಶಾಂತ್ ನೀಲ್ ಆಯ್ಕೆ ಮಾಡಿಕೊಂಡಿದ್ದಾರೆ.

    ರವೀನಾ ಇಲ್ಲಿ ಎಪ್ಪತ್ತರ ದಶಕದ ಆಚೀಚಿನ ಪ್ರಧಾನ ಮಂತ್ರಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಮೊದಲ ಭಾಗದಲ್ಲಿ ಈ ಪಾತ್ರದ ಬಗ್ಗೆ ಒಂದು ಸುಳಿವು ನೀಡಲಾಗಿತ್ತಷ್ಟೇ. ಈ ಪಾತ್ರದ ಬಗ್ಗೆ ರವೀನಾ ಕೂಡಾ ಖುಷಿಗೊಂಡಿದ್ದಾರೆಂಬ ಮಾಹಿತಿ ಇದ್ದು ಈ ವಿಚರವಾಗಿ ಅಧಿಕೃತ ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ. ಈ ಮೂಲಕ ದಶಕಗಳ ನಂತರ ರವೀನಾ ಕನ್ನಡಕ್ಕೆ ಮತ್ತೆ ಮರಳಿದಂತಾಗುತ್ತದೆ. ತೊಂಭತ್ತರ ದಶಕದಲ್ಲಿ ಉಪೇಂದ್ರ ಚಿತ್ರದಲ್ಲಿ ರವೀನಾ ಉಪ್ಪಿಗೆ ಜೋಡಿಯಾಗಿ ನಟಿಸಿದ್ದರು.

  • ಬಾಲಿವುಡ್ ನಟಿಯರು ಒಟ್ಟಿಗೆ ಸೇರಿ ಕರ್ವಾ ಚೌತ್ ಆಚರಿಸಿದ್ರು!

    ಬಾಲಿವುಡ್ ನಟಿಯರು ಒಟ್ಟಿಗೆ ಸೇರಿ ಕರ್ವಾ ಚೌತ್ ಆಚರಿಸಿದ್ರು!

    ಮುಂಬೈ: ಉತ್ತರ ಭಾರತದಲ್ಲಿ ಮಹಿಳೆಯರು ಕರ್ವಾಚೌತ್ ಎಂಬ ಉಪವಾಸ ವ್ರತವನ್ನು ಬಹಳ ವಿಜೃಂಭನೆಯಿಂದ ಆಚರಿಸುತ್ತಾರೆ. ಈ ಬಾರಿ ಬಾಲಿವುಡ್ ಹಲವಾರು ನಟಿಯರು ಒಟ್ಟಿಗೆ ಸೇರಿ ಕರ್ವಾ ಚೌತ್ ಆಚರಿಸಿದ್ದಾರೆ. ಶ್ರೀ ದೇವಿ, ಶಿಲ್ಪಾ ಶೆಟ್ಟಿ, ರವೀನಾ ಟಂಡನ್, ಸೆಲೀನಾ ಜೇಟ್ಲಿ ಸೇರಿದಂತೆ ಹಲವು ನಟಿಯರು ಕರ್ವಾಚೌತ್ ವ್ರತದಲ್ಲಿ ಭಾಗಿಯಾಗಿದ್ದರು.

    ಭಾನುವಾರ ಸಂಜೆ ಬಾಲಿವುಡ್‍ನ ನಟಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ತಯಾರಾಗಿ ಕರ್ವಾಚೌತ್ ಆಚರಿಸಿದ್ದಾರೆ. ಇದರ ಫೋಟೋಗಳನ್ನು ನಟಿಯರು ಇನ್ಸ್ ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಸದ್ಯ ಈ ಎಲ್ಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

    ಶಿಲ್ಪಾ ಶೆಟ್ಟಿ ಸಾಕಷ್ಟು ಫೋಟೋಗಳನ್ನು ತಮ್ಮ ಇನ್ಸ್ ಟಾಗ್ರಾಂನಲ್ಲಿ ಹಾಕಿದ್ದು, “ರಾಜ್ ಕುಂದ್ರಾ ನೀವು ನನ್ನ ಜಗತ್ತು. ಚಂದ್ರನ ಚಿತ್ರವನ್ನ ಅಮೃತಸರ್‍ನಲ್ಲಿ ನೋಡಿದೆ (ಫೋನಿನಲ್ಲಿ ಯಾರೋ ಕಳಿಸಿದ್ದು) ಮುಂಬೈನಲ್ಲಿ ಚಂದ್ರನನ್ನು ನೋಡಲು ಯಾರಿಗೂ ಸಾಧ್ಯವಾಗಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    Karva chauth Ready..????????#karvachauth #fasting #traditional #culturallybound #halfpunjabi

    A post shared by Shilpa Shetty Kundra (@theshilpashetty) on

    ರವೀನಾ ಟಂಡನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋವನ್ನ ಪೋಸ್ಟ್ ಮಾಡಿದ್ದಾರೆ. ಶ್ರೀದೇವಿ ಕೂಡ ಫೊಟೋವನ್ನು ತಮ್ಮ ಇನ್ಸ್ ಟಾಗ್ರಾಂನಲ್ಲಿ ಹಾಕಿ “ಕರ್ವಾಚೌತ್ ಶುಭಾಶಯ” ಎಂದು ತಿಳಿಸಿದ್ದಾರೆ.

    Happy Karva Chauth! ❤️????????

    A post shared by Sridevi Kapoor (@sridevi.kapoor) on