Tag: Raveena Tandon

  • ಅಕ್ಷಯ ಪಾತ್ರೆ ಮೂಲಕ ನಟಿ ರವೀನಾ ಟಂಡನ್ ಸಹಾಯ

    ಅಕ್ಷಯ ಪಾತ್ರೆ ಮೂಲಕ ನಟಿ ರವೀನಾ ಟಂಡನ್ ಸಹಾಯ

    ನವದೆಹಲಿ: ಕೆಜಿಎಫ್-2 ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ರವೀನಾ ಟಂಡನ್, ತಮ್ಮ ವಿವಿಧ ಕೆಲಸಗಳ ಮೂಲಕ ಸಹ ಇತರರಿಗೆ ಮಾದರಿಯಾಗಿದ್ದಾರೆ. ಇದೀಗ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ಸಹಾಯ ಹಸ್ತ ಚಾಚಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ನಟಿ ರವೀನಾ ಟಂಡನ್ ಲಾಕ್‍ಡೌನ್ ದಿನಗಳನ್ನು ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದು, ಮೊಮ್ಮಕ್ಕಳೊಂದಿಗೆ ಆಟವಾಡುವ ಮೂಲಕ ಕಾಲ ಕಳೆಯುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಹಂಚಿಕೊಂಡಿದ್ದಾರೆ. ರವೀನಾ ತಮ್ಮ ಚಟುವಟಿಕೆಗಳ ಕುರಿತು ಆಗಾಗ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ತಾವು ಮೊಮ್ಮಗನೊಂದಿಗೆ ಕಾಲ ಕಳೆಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು.

    ಹೀಗೆ ಕುಟುಂಬದೊಂದಿಗೆ ಕಾಲ ಕಳೆಯುವುದರ ಜೊತೆಗೆ ಸದ್ದಿಲ್ಲದೆ ಸಹಾಯವನ್ನೂ ಮಾಡುತ್ತಿದ್ದು, ಈ ಕುರಿತ ಮಾಹಿತಿ ಇದೀಗ ಬಹಿರಂಗವಾಗಿದೆ. ಹೌದು ರವೀನಾ ಅನ್ನದಾನಕ್ಕೆ ಸಹಾಯ ಮಾಡಿದ್ದು, ಇಸ್ಕಾನ್‍ನ ಅಕ್ಷಯ ಪಾತ್ರೆ ಮೂಲಕ ನೆರವಾಗಿದ್ದಾರೆ. ಅಕ್ಷಯ ಪಾತ್ರೆ ಸಂಸ್ಥೆ ಟ್ವೀಟ್ ಮಾಡಿ ಈ ವಿಷಯವನ್ನು ಬಹಿರಂಗಪಡಿಸಿದೆ.

    ಕೊರೊನಾ ವೈರಸ್ ವಿರುದ್ಧ ಹೋರಾಡುವ ನಮ್ಮ ಪ್ರಯತ್ನಕ್ಕೆ ರವೀನಾ ಟಂಡನ್ ಸಹಾಯ ಮಾಡಿದ್ದಾರೆ, ಅವರ ಈ ಔದಾರ್ಯವು ಅಗತ್ಯವಿರುವ ಜನರಿಗೆ ಊಟ ನೀಡಲು ಸಹಕಾರಿಯಾಗಲಿದೆ. ಥ್ಯಾಂಕ್ಯೂ ರವೀನಾ ಟಂಡನ್, ನಿಮ್ಮ ಈ ಬೆಂಬಲವನ್ನು ನಿಜವಾಗಿಯೂ ನಾವು ಪ್ರೋತ್ಸಾಹಿಸುತ್ತೇವೆ ಎಂದು ಅಕ್ಷಯ ಪಾತ್ರೆ ಸಂಸ್ಥೆಯ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ರವೀನಾ, ಕೇವಲ ನಮಸ್ಕರಿಸಿದ ಎಮೋಜಿಯನ್ನು ಹಾಕಿದ್ದಾರೆ.

    ಕೊರೊನಾ ವಿರುದ್ಧದ ಹೋರಾಟಕ್ಕೆ ಇಡೀ ಭಾರತದ ಚಿತ್ರರಂಗವೇ ಒಂದಾಗಿದ್ದು, ಬಹುತೇಕ ನಟ, ನಟಿಯರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಹಣ, ಆಹಾರ, ಅಗತ್ಯ ವಸ್ತುಗಳು ಸೇರಿದಂತೆ ವಿವಿಧ ರೀತಿಯಲ್ಲಿ ತಮ್ಮದೇಯಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಇದೀಗ ರವೀನಾ ಟಂಡನ್ ಅಕ್ಷಯ ಪಾತ್ರೆ ಸಂಸ್ಥೆ ಮೂಲಕ ಸಹಾಯ ಮಾಡಿದ್ದಾರೆ.

    ಅಕ್ಷಯ ಪಾತ್ರೆ ಸಂಸ್ಥೆ ಇದನ್ನು ಟ್ವೀಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಳ್ಳೆಯ ಬೆಳವಣಿಗೆ ಎಂದು ಹಾಡಿ ಹೊಗಳಿದ್ದಾರೆ. ಸಹಾಯ ಮಾಡುವುದರಲ್ಲಿ ರವೀನಾ ಟಂಡನ್ ಇತರರಿಗಿಂತ ಮುಂದು. ಒಳ್ಳೆಯ ಉದ್ದೇಶಗಳಿಗೆ ಯಾವಾಗಲೂ ಸಹಾಯ ಮಾಡುವ ನಿಮಗೆ, ದೇವರು ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಹಾರೈಸುತ್ತಿದ್ದಾರೆ.

    ರವೀನಾ ಟಂಡನ್ ಅವರು ಕೆಜಿಎಫ್-2 ಚಿತ್ರದ ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಇದೀಗ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಮೊಮ್ಮಕ್ಕಳೊಂದಿಗೆ ಆಡವಾಡುತ್ತಿದ್ದಾರೆ.

  • ಮೊಮ್ಮಗನೊಂದಿಗೆ ಬ್ಯುಸಿಯಾದ ಕೆಜಿಎಫ್-2 ಪ್ರಧಾನಿ

    ಮೊಮ್ಮಗನೊಂದಿಗೆ ಬ್ಯುಸಿಯಾದ ಕೆಜಿಎಫ್-2 ಪ್ರಧಾನಿ

    ನವದೆಹಲಿ: ನಟನೆ ಹಾಗೂ ಇತರೆ ಕೆಲಸಗಳಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದ ನಟ, ನಟಿಯರು ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಕೊರೊನಾ ಭೀತಿಯಿಂದಾಗಿ ಹೋಮ್ ಕ್ವಾರೆಂಟೈನ್ ವಿಧಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೆವಲರು ಅವರ ಮುಂದಿನ ಸಿನಿಮಾದ ಇತರ ಕೆಲಸಗಳ ಕಡೆ ಗಮನಹರಿಸಿದರೆ, ಇನ್ನೂ ಕೆಲವರು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

    ಅದೇ ರೀತಿ ಕೆಜಿಎಫ್-2 ಸಿನಿಮಾದಲ್ಲಿ ಪ್ರಧಾನಿ ಪಾತ್ರ ನಿರ್ವಹಿಸುತ್ತಿರುವ ರವೀನಾ ಟಂಡನ್ ಸಹ ಮನೆಯಲ್ಲಿ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದು, ಮೊಮ್ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ. ಮೊಮ್ಮಗನ ಜೊತೆ ಆಟವಾಡುವುದು, ಹಾಲು ಕುಡಿಸುವುದು, ಡೈಪರ್ ಚೇಂಜ್ ಮಾಡುವುದು ಸೇರಿದಂತೆ ಬಹುತೇಕ ಸಮಯವನ್ನು ಪ್ರೀತಿಯ ಮೊಮ್ಮಗನೊಂದಿಗೆ ಕಳೆಯುತ್ತಿದ್ದಾರೆ.

    ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, 2ನೇ ಸಲ ಅಜ್ಜಿಯಾಗಿರುವ ಖುಷಿಯಲ್ಲಿದ್ದಾರೆ. ತಮ್ಮ ಎರಡನೇ ಮೊಮ್ಮಗುವನ್ನು ಆಡಿಸುತ್ತಿರುವುದಾಗಿ ತಿಳಿಸಿದ್ದಾರೆ. ಬಹುತೇಕ ಸಮಯ ಔಟ್ ಡೋರ್ ಶೂಟಿಂಗ್ ಇರುವ ಕಾರಣ ನಟ, ನಟಿಯರು ತಮ್ಮ ಮನೆಯವರೊಂದಿಗೆ ಕಾಲ ಕಳೆಯಲು ಸಾಧ್ಯವಾಗಿರುವುದಿಲ್ಲ. ಇದೇ ಉತ್ತಮ ಅವಕಾಶ ಎಂದುಕೊಂಡು ಬಹುತೇಕರು ತಮ್ಮ ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದಾರೆ.

    ರವೀನಾ ಟಂಡನ್ ಅವರು ಇದೀಗ ತಮ್ಮ ಮಗಳ ಮಗು ರುದ್ರ್ ನೊಂದಿಗೆ ಕಾಲ ಕಳೆಯುತ್ತಿದ್ದು, ಸಂಪೂರ್ಣ ಸಮಯವನ್ನು ಮಗುವಿನೊಂದಿಗೆ ಕಳೆಯುತ್ತಿದ್ದಾರೆ. ಅಲ್ಲದೆ ಮೊಮ್ಮಗನಿಗೆ ರವೀನಾ ಮುದ್ದಾದ ಅಡ್ಡ ಹೆಸರನ್ನು ಇಟ್ಟಿದ್ದು, ಬಾಂಡ್ ಎಂದು ಕರೆಯುತ್ತಾರೆ. ಅದೇ ರೀತಿ ತಮಗೂ ನಿಕ್ ನೇಮ್ ಇಟ್ಟುಕೊಂಡಿದ್ದು, ಅವನಿಗಾಗಿ ನನ್ನ ಹೆಸರನ್ನು ‘ಗ್ಲಾಮ್ ಮಾ’ ಎಂದು ಬದಲಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

    ಇನ್‍ಟ್ಟಾಗ್ರಾಮ್‍ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವರು ಕಮೆಂಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ‘ಗ್ಲಾಮ್ ಮಾ’ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ರವೀನಾ ಟಂಡನ್ 21 ವರ್ಷಕ್ಕೆ ಎರಡು ಹೆಣ್ಣುಮಕ್ಕಳ ತಾಯಿಯಾದವರು. ಸಿನಿಮಾಗಳಲ್ಲಿ ನಟಿಸುವಾಗಲೇ ರವೀನಾ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದರು. ಈಗ ಅವರಲ್ಲಿ ಎರಡನೇ ಮಗಳಿಗೆ ಮಗುವಾಗಿದೆ. ಅವನ ಹೆಸರೇ ರುದ್ರ್, ಈ ರುದ್ರ್ ನೊಂದಿಗೆ ರವೀನಾ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಕೆಜಿಎಫ್-2 ಚಿತ್ರದ ತಮ್ಮ ಶೂಟಿಂಗ್ ಪೂರ್ಣಗೊಳಿಸಿರುವ ರವೀನಾ ಟಂಡನ್, ಚಿತ್ರ ತಂಡಕ್ಕೆ ಬೈ ಹೇಳಿ ಮನೆ ಸೇರಿಕೊಂಡಿದ್ದಾರೆ.

  • ಕಾರ್ ಸಿಗದಿದ್ದಕ್ಕೆ ಆಟೋ ಹತ್ತಿದ ರವೀನಾ

    ಕಾರ್ ಸಿಗದಿದ್ದಕ್ಕೆ ಆಟೋ ಹತ್ತಿದ ರವೀನಾ

    ಮುಂಬೈ: ಬಾಲಿವುಡ್ ಮಸ್ತ್ ಗರ್ಲ್ ಖ್ಯಾತಿಯ ನಟಿ ರವೀನಾ ಟಂಡನ್, ಸರಿಯಾದ ಸಮಯಕ್ಕೆ ಕಾರ್ ಸಿಗದಿದ್ದಕ್ಕೆ ಆಟೋದಲ್ಲಿ ಮದುವೆ ಮನೆ ತಲುಪಿದ್ದಾರೆ.

    ಮದುವೆ ಸೀಸನ್ ಆರಂಭಗೊಂಡಿದ್ದು, ಸೆಲೆಬ್ರಿಟಿಗಳು ತಮ್ಮ ಆಪ್ತರ ವಿವಾಹ ಕಾರ್ಯಕ್ರಮಗಳಿಗೆ ತೆರಳುತ್ತಾರೆ. ಮದುವೆ ಸೀಸನ್ ಆಗಿದ್ದರಿಂದ ಮೊದಲೇ ವಾಹನಗಳನ್ನು ಬುಕ್ ಮಾಡಿಕೊಳ್ಳಬೇಕು. ಇಲ್ಲವಾದ್ರೆ ಕೊನೆ ಕ್ಷಣದಲ್ಲಿ ತೊಂದರೆ ಆಗುತ್ತದೆ. ಇಂತಹ ಸಮಸ್ಯೆಯಲ್ಲಿಯೇ ಬಾಲಿವುಡ್ ನಟಿ ರವೀನಾ ಟಂಡನ್ ಸಿಲುಕಿದ್ದರು. ಕೊನೆಗೆ ಕಾರ್ ಸಿಗದಿದ್ದರಿಂದ ಮಗಳ ಜೊತೆ ಆಟೋ ಹತ್ತಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    https://www.instagram.com/p/B9KBWFJHyrs/

    ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಂಡಿರುವ ರವೀನಾ, ನಾನು ಬೇಗನೇ ಸಿಕ್ಕ ಆಟೋದಲ್ಲಿ ಕುಳಿತುಕೊಂಡೆ. ಕಾರ್ ಗಾಗಿ ಕಾಯುವ ಸಮಯ ನನ್ನ ಬಳಿ ಇರಲಿಲ್ಲ. ನನ್ನ ಸಂಬಂಧಿ ಮೆಹಂದಿ ಕಾರ್ಯಕ್ರಮಕ್ಕೆ ತಡವಾಗುತ್ತಿತ್ತು. ಬಹುತೇಕರು ತಲುಪಿದ್ದರಿಂದ ಆಟೋದಲ್ಲಿ ಪ್ರಯಾಣ ಬೆಳೆಸಿದೆ. ಮುಂಬೈ ಆಟೋವಾಲಾಗಳು ಯಾವ ಆಪ್ತ ಬಾಂಧವರಿಗಿಂತ ಕಡಿಮೆ ಏನಿಲ್ಲ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/B9KDp_-nRPY/

    ಇನ್ನೊಂದು ವಿಡಿಯೋದಲ್ಲಿ ಹಿರಿಯ ಆಟೋ ಚಾಲಕ, ರವೀನಾರಿಗೆ ನಾನು ನಿಮ್ಮ ಹಲವು ಸಿನಿಮಾಗಳನ್ನು ನೋಡಿದ್ದೇನೆ. ಸದ್ಯ ಸಿನಿಮಾಗಳ ಹೆಸರು ನೆನಪಿಗೆ ಬರುತ್ತಿಲ್ಲ. ಶಾರೂಖ್ ಖಾನ್, ಸಂಜಯ್ ದತ್ ಜೊತೆ ನಟಿಸಿರುವ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ರವೀನಾ ಟಂಡನ್, ನಿಮ್ಮನ್ನು ಭೇಟಿಯಾಗಿದ್ದು ಖುಷಿಯಾಯ್ತು. ಇನ್ನೊಮ್ಮೆ ಸಿಗೋಣ ಎಂದು ಹೇಳಿ ಹೊರಟಿದ್ದಾರೆ.

    https://www.instagram.com/p/B9M40MFHpJS/

    ಮತ್ತೊಂದು ಪೋಸ್ಟ್ ನಲ್ಲಿ ಮದುವೆ ಕಾರ್ಯಕ್ರಮ ಮತ್ತು ಪತಿ ಅನಿಲ್ ಟಡಾನಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಾರ್ ಗಾಗಿ ಕಾಯದೇ ಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣ ಬೆಳೆಸಿ ರವೀನಾ ಟಂಡನ್ ಸರಿಯಾದ ಸಮಯಕ್ಕೆ ಮೆಹಂದಿ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ.

    https://www.instagram.com/p/B9L_ABdnTMA/

  • ಕೆಜಿಎಫ್-2 ಚಿತ್ರತಂಡಕ್ಕೆ ಬಾಯ್ ಹೇಳಿ ಮುಂಬೈ ಸೇರಿದ ‘ಪ್ರಧಾನಿ’

    ಕೆಜಿಎಫ್-2 ಚಿತ್ರತಂಡಕ್ಕೆ ಬಾಯ್ ಹೇಳಿ ಮುಂಬೈ ಸೇರಿದ ‘ಪ್ರಧಾನಿ’

    ಬೆಂಗಳೂರು: ‘ಕೆಜಿಎಫ್’ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಸಿನಿಮಾ. ಈಗ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ‘ಕೆಜಿಎಫ್-2’ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿರುವುದು ಗೊತ್ತಿರುವ ವಿಚಾರ. ಆದ್ರೆ ಸದ್ಯ ‘ಕೆಜಿಎಫ್-2’ನ ಹೊಸ ಸುದ್ದಿ ಏನಪ್ಪಾ ಅಂದ್ರೆ ನಟಿ ರವೀನಾ ಟಂಡನ್ ಚಿತ್ರೀಕರಣ ಮುಗಿಸಿ ಮುಂಬೈಗೆ ವಾಪಾಸ್ ಆಗಿದ್ದಾರೆ.

    ಹೌದು. ಇಡೀ ಭಾರತ ಚಿತ್ರರಂಗವೇ ಕನ್ನಡ ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದ್ದು ‘ಕೆಜಿಎಫ್’ ಸಿನಿಮಾ. ಇನ್ನೂ ಕೆಜಿಎಫ್-2 ಸಿನಿಮಾ ಕೂಡ ಬಿಡುಗಡೆಯ ಮೊದಲೇ ಬಹಳಷ್ಟು ನೀರಿಕ್ಷೆ ಹುಟ್ಟುಹಾಕಿದೆ. ಸದ್ಯ ಹೈದರಾಬಾದ್‍ನಲ್ಲಿ ಕೆಜಿಎಫ್-2 ಚಿತ್ರೀಕರಣ ನಡೆಯುತ್ತಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ನಡುವೆ ಸಿನಿಮಾದಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ರವೀನಾ ತಮ್ಮ ಪಾತ್ರದ ಚಿತ್ರೀಕರಣ ಮುಗಿಸಿ ಮುಂಬೈಗೆ ವಾಪಸ್ ತೆರೆಳಿದ್ದಾರೆ. ಇದನ್ನೂ ಓದಿ: ‘ಪ್ರಧಾನ ಮಂತ್ರಿ’ಯನ್ನ ಊರಿಗೆ ಬರಮಾಡಿಕೊಂಡ ರಾಕಿ ಭಾಯ್

    https://www.instagram.com/p/B88KA2QHzsz/

    ಇತ್ತೀಚೆಗಷ್ಟೆ ಕೆಜಿಎಫ್-2 ತಂಡ ಸೇರಿಕೊಂಡಿದ್ದ ರವೀನಾ ಈಗಾಗಲೇ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದಾರೆ. ಅಷ್ಟೇ ಅಲ್ಲದೇ ಕೆಜಿಎಫ್-2 ಸೆಟ್ಟಿನಲ್ಲಿ ತಮ್ಮ ಕೊನೆಯ ದಿನದ ಚಿತ್ರೀಕರಣದ ವೇಳೆ ತಂಡದ ಜೊತೆಗೆ ಪೋಸ್ ಕೊಟ್ಟ ಫೋಟೋವನ್ನು ರವೀನಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: “ಡೆತ್ ವಾರೆಂಟ್ ಜಾರಿ ಮಾಡಲು ಬಂದ್ರು ರವೀನಾ”

    https://www.instagram.com/p/B9Ek6ppH5jP/

    ರವೀನಾರನ್ನ ಹೇಗೆ ಅದ್ಧೂರಿಯಾಗಿ ಚಿತ್ರತಂಡ ಸ್ವಾಗತ ಮಾಡಿತ್ತೋ, ಅಷ್ಟೇ ಅದ್ಧೂರಿಯಾಗಿ ಬೀಳ್ಕೊಟ್ಟಿದೆ. ಇಡೀ ಕೆಜಿಎಫ್-2 ತಂಡ ರವೀನಾ ಅವರ ಜೊತೆ ನಿಂತು ಫೋಟೋಗೆ ಪೋಸ್ ನೀಡಿ ಖುಷಿಯಿಂದ ರವೀನಾರನ್ನ ಬೀಳ್ಕೊಟ್ಟಿದೆ.

    https://www.instagram.com/p/B8cAOYanL72/

    ಚಿತ್ರದಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ರವೀನಾ ಕಾಣಿಸಿಕೊಂಡಿದ್ದು, ಭಾರಿ ನಿರೀಕ್ಷೆ ಮೂಡಿಸಿರುವ ಚಿತ್ರದಲ್ಲಿ ರವೀನಾ ಪಾತ್ರ ಕೂಡ ಅಷ್ಟೆ ಕುತೂಹಲ ಹುಟ್ಟುಹಾಕಿದೆ. ಕೆಜಿಎಫ್ ಮೊದಲ ಭಾಗಕ್ಕಿಂತ ಎರಡನೇ ಭಾಗ ಮತ್ತಷ್ಟು ರೋಚಕವಾಗಿರಲಿದೆ ಎನ್ನಲಾಗಿದೆ. ಅದರಲ್ಲೂ ರಾಕಿಭಾಯ್ ಕಮಲ್ ನೋಡಲು ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಹಾಗೆಯೇ ಸಂಜಯ್ ದತ್ ಅವರು ಅಭಿನಯಿಸುತ್ತಿರುವ ಅಧೀರ ಪಾತ್ರವೂ ಕೂಡ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದು, ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಿನಿಮಾ ಅಕ್ಟೋಬರ್ ನಲ್ಲಿ ತೆರೆಕಾಣಲಿದೆ ಎನ್ನಲಾಗಿದೆ.

    https://www.instagram.com/p/B8VdchfASCw/

    ಈ ಹಿಂದೆ ರವೀನಾರನ್ನ ಕೆಜಿಎಫ್ ನಿದೇರ್ಶಕ ಪ್ರಶಾಂತ್ ನೀಲ್ ಹಾಗೂ ಯಶ್ ಪ್ರೀತಿಯಿಂದ ಚಿತ್ರತಂಡಕ್ಕೆ ಸ್ವಗತಿಸಿ, ರವೀನಾ ಅವರ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ಎಲ್ಲೆಡೆ ಸಖತ್ ವೈರಲ್ ಆಗಿತ್ತು.

  • ‘ಪ್ರಧಾನ ಮಂತ್ರಿ’ಯನ್ನ ಊರಿಗೆ ಬರಮಾಡಿಕೊಂಡ ರಾಕಿ ಭಾಯ್

    ‘ಪ್ರಧಾನ ಮಂತ್ರಿ’ಯನ್ನ ಊರಿಗೆ ಬರಮಾಡಿಕೊಂಡ ರಾಕಿ ಭಾಯ್

    ಬೆಂಗಳೂರು: ಕೆಜಿಎಫ್-ಚಾಪ್ಟರ್ 2 ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ರಾಕಿಂಗ್ ಸ್ಟಾರ್ ಯಶ್ ರಾಕಿ ಬಾಯ್ ಸ್ಟೈಲ್‍ನಲ್ಲಿ ತಮ್ಮ ಊರಿಗೆ ‘ಪ್ರಧಾನ ಮಂತ್ರಿ’ಯನ್ನು ಬರಮಾಡಿಕೊಂಡಿದ್ದಾರೆ.

    ಹೌದು. ಚಿತ್ರರಂಗದಲ್ಲೇ ಧೂಳೆಬ್ಬಿಸಲು ಸಜ್ಜಾಗುತ್ತಿರುವ ಕೆಜಿಎಫ್-ಚಾಪ್ಟರ್ 2 ಸಿನಿಮಾದ ಮೇಲೆ ಎಲ್ಲರ ಕಣ್ಣಿದೆ. ಸದ್ಯ ಶೂಟಿಂಗ್‍ನಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಈ ನಡುವೆ ಕೆಜಿಎಫ್-ಚಾಪ್ಟರ್ 2ರಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಲಿರುವ ಬಾಲಿವುಡ್ ನಟಿ ರವೀನಾ ಟಂಡನ್ ಅವರನ್ನು ಯಶ್ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಜೊತೆಗೆ ರಾಕಿಭಾಯ್ ಸಾಮ್ರಾಜ್ಯಕ್ಕೆ ರಮಿಕಾ ಸೇನ್‍ರನ್ನ ಸ್ವಾಗತಿಸಲ್ಲ, ಆದ್ರೆ ರವೀನಾ ಅವರಿಗೆ ಯಶ್ ಊರಿಗೆ ಸ್ವಾಗತ ಎಂದು ರಾಕಿಂಗ್ ಸ್ಟಾರ್ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: “ಡೆತ್ ವಾರೆಂಟ್ ಜಾರಿ ಮಾಡಲು ಬಂದ್ರು ರವೀನಾ”

    https://www.instagram.com/p/B8cAOYanL72/

    ಪೋಸ್ಟ್‌ನಲ್ಲಿ ಏನಿದೆ?
    ರಮಿಕಾ ಸೇನ್‍ರನ್ನು ರಾಕಿಭಾಯ್ ಸಾಮ್ರಾಜ್ಯಕ್ಕೆ ಸ್ವಾಗತ ಮಾಡದೆ ಇರಬಹುದು. ಆದ್ರೆ ರವೀನಾ ಅವರನ್ನ ಖಂಡಿತವಾಗಿಯು ಯಶ್ ಊರಿಗೆ ಸ್ವಾಗತಿಸುತ್ತೇನೆ. ನೀವು ಬಂದಿರುವುದು ಸಂತೋಷವಾಗಿದೆ, ಸಂಭ್ರಮಿಸೋಣ ಎಂದು ಬರೆದು ರವೀನಾ ಅವರ ಜೊತೆ ತಾವು ಇರುವ ಫೋಟೋವನ್ನ ಯಶ್ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

    ಕೆಜಿಎಫ್ ಅಂಗಳಕ್ಕೆ ಬಾಲಿವುಡ್ ಚೆಲುವೆ ರವೀನಾ ಟಂಡನ್ ಎಂಟ್ರಿ ನೀಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಜೊತೆಗೆ ರವೀನಾ ಟಂಡನ್ ನಿಂತಿರುವ ಫೋಟೋವನ್ನು ಹಂಚಿಕೊಂಡು ಸ್ವಾಗತ ಕೋರಿದ್ದರು.

    ಮೊದಲು ಎಕ್ಸೆಲ್ ಎಂಟರ್ ಟೈನ್‍ಮೆಂಟ್ ಟ್ವಿಟ್ಟರ್ ನಲ್ಲಿ ರವೀನಾ ಮತ್ತು ಪ್ರಶಾಂತ್ ನೀಲ್ ಜೊತೆಗಿನ ಫೋಟೋ ಹಂಚಿಕೊಂಡು, ಡೆತ್ ವಾರೆಂಟ್ ಜಾರಿ ಮಾಡಲು ಬಂದ ಶಕ್ತಿಶಾಲಿ ಮಹಿಳೆಗೆ ಕೆಜಿಎಫ್ -2 ಸಿನಿಮಾ ಅಂಗಳಕ್ಕೆ ಸ್ವಾಗತ ಎಂದು ಬರೆದು ಚಿತ್ರತಂಡದ ಇತರರಿಗೂ ಟ್ಯಾಗ್ ಮಾಡಿದ್ದರು. ಟ್ವೀಟಿಗೆ ಪ್ರತಿಕ್ರಿಯಿಸಿರುವ ನಟಿ ಶ್ರೀನಿಧಿ ಶೆಟ್ಟಿ, ತುಂಬಾ ಉತ್ಸುಕಳಾಗಿದ್ದೇನೆ ಎಂದು ಬರೆದು ವೆಲ್ ಕಮ್ ಮಾಡಿಕೊಂಡಿದ್ದರು. ನಿರ್ಮಾಪಕ ವಿಜಯ್ ಕಿರಗಂದೂರ್, ರಾಷ್ಟ್ರೀಯ ಪ್ರಶಸ್ತಿ ವಿಜೇತ ರವೀನಾ ಟಂಡನ್ ಅವರಿಗೆ ಆತ್ಮೀಯ ಸ್ವಾಗತ ಎಂದು ಬರೆದುಕೊಂಡಿದ್ದರು.

    ರವೀನಾ ಇಲ್ಲಿ ಎಪ್ಪತ್ತರ ದಶಕದ ಆಚೀಚಿನ ಪ್ರಧಾನ ಮಂತ್ರಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಮೊದಲ ಭಾಗದಲ್ಲಿ ಈ ಪಾತ್ರದ ಬಗ್ಗೆ ಒಂದು ಸಣ್ಣ ಸುಳಿವು ನೀಡಲಾಗಿತ್ತು. ಈ ಪಾತ್ರದ ಬಗ್ಗೆ ರವೀನಾ ಕೂಡಾ ಖುಷಿಗೊಂಡಿದ್ದಾರೆಂಬ ಮಾಹಿತಿ ಇದ್ದು ಈ ವಿಚರವಾಗಿ ಅಧಿಕೃತ ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ. ಈ ಮೂಲಕ ದಶಕಗಳ ನಂತರ ರವೀನಾ ಕನ್ನಡಕ್ಕೆ ಮತ್ತೆ ಮರಳಿದಂತಾಗುತ್ತದೆ. ತೊಂಭತ್ತರ ದಶಕದಲ್ಲಿ ಉಪೇಂದ್ರ ಚಿತ್ರದಲ್ಲಿ ರವೀನಾ ಉಪ್ಪಿಗೆ ಜೋಡಿಯಾಗಿ ನಟಿಸಿದ್ದರು.

    ತಮ್ಮ ಕಂಬ್ಯಾಕ್ ಬಗ್ಗೆ ಮಾತನಾಡಿರುವ ರವೀನಾ ಟಂಡನ್, ನಿರ್ದೇಶಕ ಪ್ರಶಾಂತ್ ನೀಲ್ ಮೊದಲೇ ಕಥೆ ಒನ್‍ಲೈನ್ ಹೇಳಿದ್ದರು. ಬಳಿಕ ಚಿತ್ರಕಥೆ ಮತ್ತು ಪಾತ್ರವನ್ನು ವಿವರಿಸಿದ್ದರು. ಆಗಿನ್ನೂ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿರಲಿಲ್ಲ. ಚಿತ್ರ ನೋಡಿದ ಮೇಲೆ ಇದೊಂದು ಬೇರೆ ಲೆವೆಲ್ಲಿನ ಸಿನಿಮಾ ಎಂಬುದು ಗೊತ್ತಾಯಿತು. ಹಾಗೆಯೇ ಕಥೆ ಮತ್ತು ನಾನು ಮಾಡಬೇಕಾದ ಪಾತ್ರದ ಬಗ್ಗೆ ತಿಳಿಯಿತು. ಅಲ್ಲದೆ ಚಿತ್ರದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಹೀಗಾಗಿ ಕೆಜಿಎಫ್ 2ನಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

    ಅಲ್ಲದೇ ರವೀನಾ ಅವರಿಗೆ ಮಾತ್ರವಲ್ಲ ಅವರ ಪತಿ ಅನಿಲ್ ತಡಾನಿ ಅವರಿಗೂ ಕೆಜಿಎಫ್‍ಗು ಕನೆಕ್ಷನ್ ಇದೆ. ಈ ಹಿಂದೆ ಹಿಂದಿ ಭಾಷೆಯಲ್ಲಿ ಮೂಡಿಬಂದಿದ್ದ ಕೆಜಿಎಫ್ ಚಿತ್ರವನ್ನು ಅನಿಲ್ ತಡಾನಿ ವಿತರಿಸಿದ್ದರು. ಹಾಗೆಯೇ ಹಿಂದಿಯ ಕೆಜಿಎಫ್-ಚಾಪ್ಟರ್ 2 ಸಿನಿಮಾದ ವಿತರಣೆಯನ್ನೂ ಅನಿಲ್ ತಡಾನಿ ಪ್ರೊಡಕ್ಷನ್ ಮೂಲಕವೇ ಮಾಡಲಾಗುತ್ತಿದೆ.

  • ಪ್ರಧಾನ ಮಂತ್ರಿ ಆಗ್ತಾರಾ ರವೀನಾ ಟಂಡನ್?

    ಪ್ರಧಾನ ಮಂತ್ರಿ ಆಗ್ತಾರಾ ರವೀನಾ ಟಂಡನ್?

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರಕ್ಕೀಗ ಚಿತ್ರೀಕರಣ ನಡೆಯುತ್ತಿದೆ. ಈ ಹೊತ್ತಿನಲ್ಲಿಯೇ ಈ ಸಿನಿಮಾದ ತಾರಾಗಣಕ್ಕೆ ಕಲಾವಿದರ ಸೇರ್ಪಡೆ ಕಾರ್ಯವೂ ಸುಸೂತ್ರವಾಗಿಯೇ ನಡೆಯುತ್ತಿದೆ. ಕೆಜಿಎಫ್ ಮೊದಲ ಭಾಗದಲ್ಲಿಯೂ ಪ್ರಧಾನ ಆಕರ್ಷಣೆಯಾಗಿದ್ದದ್ದು ತಾರಾಗಣವೇ. ಈ ಬಾರಿಯೂ ವಿಶೇಷವಾದ ಪಾತ್ರಗಳಿಗೆ ಅದಕ್ಕೆ ತಕ್ಕುದಾದ ಕಲಾವಿದರನ್ನೇ ಆಯ್ಕೆ ಮಾಡಲು ಪ್ರಶಾಂತ್ ನೀಲ್ ನಿರ್ಧರಿಸಿದ್ದಾರೆ.

    ಕೆಜಿಎಫ್ 2 ತಾರಾಗಣ ಸೇರಿಕೊಂಡವರಲ್ಲಿ ಬಾಲಿವುಡ್‍ನ ಖ್ಯಾತ ನಟಿ ರವೀನಾ ಟಂಡನ್ ಕೂಡಾ ಸೇರಿಕೊಂಡಿರೋದು ಗೊತ್ತೇ ಇದೆ. ಈ ಸುದ್ದಿ ಹೊರ ಬಿದ್ದ ಬೆನ್ನಲ್ಲೇ ರವೀನಾ ಪಾತ್ರ ಹೇಗಿರಬಹುದೆಂಬ ಕ್ಯೂರಿಯಾಸಿಟಿಯೂ ಶುರುವಾಗಿತ್ತು. ಇದೀಗ ರವೀನಾ ಪಾತ್ರದ ಬಗ್ಗೆ ಚಿತ್ರತಂಡದ ಕಡೆಯಿಂದ ಒಂದಿಷ್ಟು ಮಾಹಿತಿ ಹೊರ ಬಿದ್ದಿದೆ. ಅವರಿಲ್ಲಿ ಪ್ರಧಾನ ಮಂತ್ರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ!

    ರವೀನಾ ಇಲ್ಲಿ ಎಪ್ಪತ್ತರ ದಶಕದ ಆಚೀಚಿನ ಪ್ರಧಾನ ಮಂತ್ರಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಮೊದಲ ಭಾಗದಲ್ಲಿ ಈ ಪಾತ್ರದ ಬಗ್ಗೆ ಒಂದು ಸುಳಿವು ನೀಡಲಾಗಿತ್ತಷ್ಟೇ. ಈ ಪಾತ್ರದ ಬಗ್ಗೆ ರವೀನಾ ಕೂಡಾ ಖುಷಿಗೊಂಡಿದ್ದಾರೆಂಬ ಮಾಹಿತಿ ಇದ್ದು ಈ ವಿಚರವಾಗಿ ಅಧಿಕೃತ ಮಾಹಿತಿಗಳು ಇನ್ನಷ್ಟೇ ಹೊರ ಬರಬೇಕಿದೆ. ಈ ಮೂಲಕ ದಶಕಗಳ ನಂತರ ರವೀನಾ ಕನ್ನಡಕ್ಕೆ ಮತ್ತೆ ಮರಳಿದಂತಾಗುತ್ತದೆ. ತೊಂಭತ್ತರ ದಶಕದಲ್ಲಿ ಉಪೇಂದ್ರ ಚಿತ್ರದಲ್ಲಿ ರವೀನಾ ಉಪ್ಪಿಗೆ ಜೋಡಿಯಾಗಿ ನಟಿಸಿದ್ದರು.

    ಇನ್ನುಳಿದಂತೆ ಈಗಾಗಲೇ ಭಾರೀ ಗೆಲುವಿನ ರೂವಾರಿಯಾಗಿರೋ ಕೆಜಿಎಫ್ ಚಿತ್ರಕ್ಕೂ ರವೀನಾ ಅವರಿಗೂ ಕನೆಕ್ಷನ್ನುಗಳಿವೆ. ಈ ಚಿತ್ರವನ್ನು ರವೀನಾ ಮೆಚ್ಚಿ ಕೊಂಡಾಡಿದ್ದರು. ಇದಲ್ಲದೇ ಬಾಲಿವುಡ್ಡಿನಲ್ಲಿ ಕೆಜಿಎಫ್ ಚಿತ್ರದ ವಿತರಣಾ ಹಕ್ಕು ಪಡೆದಿದ್ದದ್ದು ರವೀನಾ ಪತಿ ಅನಿಲ್ ತಡಾನಿಯವರೇ. ಇದೀಗ ಅವರು ಕೆಜಿಎಫ್ ಚಾಪ್ಟರ್ 2ನ ಭಾಗವಾಗೋ ಕ್ಷಣಗಳು ಹತ್ತಿರಾದಂತಿದೆ.

  • ಈ ಬಾಲಿವುಡ್ ನಟಿ ಮೇಲೆ ಪ್ರಭಾಸ್‍ಗೆ ಕ್ರಷ್ ಅಂತೆ!

    ಈ ಬಾಲಿವುಡ್ ನಟಿ ಮೇಲೆ ಪ್ರಭಾಸ್‍ಗೆ ಕ್ರಷ್ ಅಂತೆ!

    ಹೈದರಾಬಾದ್: `ಬಾಹುಬಲಿ’ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಬಳಿಕ ಇಡೀ ಭಾರತದಲ್ಲಷ್ಟೇ ಅಲ್ಲ ವಿಶ್ವದಾದ್ಯಂತ ಪ್ರಭಾಸ್ ಸೆನ್ಸೇಷನಲ್ ಸ್ಟಾರ್ ಆಗಿದ್ದಾರೆ.

    ಪ್ರಭಾಸ್ ಕಂಡರೆ ಪ್ರಾಣ ಬಿಡುವ ಹುಡುಗಿಯರಂತೂ ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ. ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಡುವಿನ ಕೆಮಿಸ್ಟ್ರಿ ಬಗ್ಗೆ ಗಾಸಿಪ್ ಕೂಡ ಆಗಾಗ ಕೇಳಿ ಬರುತ್ತಲೇ ಇದೆ. ಆದರೆ ಇಂತಾ ಸೂಪರ್ ಸ್ಟಾರ್ ನ ಹೃದಯ ಕದ್ದಿರೋದು ಬಾಲಿವುಡ್ ನಟಿ.

    90ರ ದಶಕದ ಬಾಲಿವುಡ್ ಬ್ಯೂಟಿ ರವೀನಾ ಟಂಡನ್ ಅಂದರೆ ಪ್ರಭಾಸ್ ಗೆ ತುಂಬಾ ಅಚ್ಚುಮೆಚ್ಚು. ಅಷ್ಟೇ ಅಲ್ಲ ಅವರ ಮೇಲೆ ಪ್ರಭಾಸ್ ಗೆ ಸೀಕ್ರೆಟ್ಟಾಗಿ ಕ್ರಷ್ ಕೂಡ ಆಗಿತ್ತಂತೆ. ಹಾಗಂತ ಸ್ವತಃ ಪ್ರಭಾಸ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ನಾನು ರವೀನಾ ಅವರ ದೊಡ್ಡ ಅಭಿಮಾನಿ. ನಾನು ಅವರ `ಅಂದಾಝ್ ಅಪ್ನಾ ಅಪ್ನಾ’ ಸಿನಿಮಾದಲ್ಲಿ “ಎಲೊ ಜಿ ಸನಮ್” ಹಾಡನ್ನು ನೋಡಿ ತುಂಬಾ ಇಷ್ಟ ಪಟ್ಟೆ ಎಂದು ಪ್ರಭಾಸ್ ಹೇಳಿದ್ದಾರೆ.

    ರವೀನಾ ಪತಿ ಅನಿಲ್ ಥದಾನಿ ಅವರು ಬಾಹುಬಲಿ ಸಿನಿಮಾಗಳ ವಿತರಕರಾಗಿದ್ದರು. ಪ್ರಸ್ತುತ ಬಾಹುಬಲಿ ಸಿನಿಮಾದ ನಟರು ಮತ್ತು ಚಿತ್ರತಂಡದವರು ಸ್ನೇಹಿತರಾಗಿದ್ದು, ಅವರದ್ದೆ ಒಂದು ಗುಂಪು ಇದೆ. ಇವರೆಲ್ಲರೂ ಮುಂಬೈಗೆ ಹೋದರೆ ಅನಿಲ್ ಮತ್ತು ರವೀನಾ ಅವರನ್ನು ಭೇಟಿ ಮಾಡಿ ಬರುತ್ತಾರೆ.

    ಪ್ರಭಾಸ್ ತಮ್ಮ ಮುಂದಿನ ಚಿತ್ರವಾದ ಸುಜೀತ್ ನಿರ್ದೇಶನದ `ಸಾಹೋ’ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ. ಸಾಹೋ ಸಿನಿಮಾ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದ್ದು, ಮುಂದಿನ ವರ್ಷ 2018 ಕ್ಕೆ ತೆರೆಕಾಣುವ ಸಾಧ್ಯತೆ ಇದೆ.

    https://www.instagram.com/p/BZsvmP-Ammk/

    https://www.instagram.com/p/BZtKgD2l12G/

     

  • ರವೀನಾ ಟಂಡನ್‍ರನ್ನು ಸುನಿಲ್ ಗ್ರೊವರ್ ಇಂಪ್ರೆಸ್ ಮಾಡಿದ್ದು ಹೀಗೆ!

    ರವೀನಾ ಟಂಡನ್‍ರನ್ನು ಸುನಿಲ್ ಗ್ರೊವರ್ ಇಂಪ್ರೆಸ್ ಮಾಡಿದ್ದು ಹೀಗೆ!

    ಮುಂಬೈ: ಕಾಮಿಡಿಯನ್, ಡಾ.ಮಶೂರ್ ಗುಲಾಟಿ ಖ್ಯಾತಿಯ ಸುನಿಲ್ ಗ್ರೊವರ್ ಕಿಲಾಡಿ ಅಕ್ಷಯ್ ಕುಮಾರ್ ಗೆಟಪ್ ಹಾಕಿ `ತೂ ಚೀಜ್ ಬಡಿ ಹೈ ಮಸ್ತ್ ಮಸ್ತ್’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಬಾಲಿವುಡ್‍ನ ಮಸ್ತ ಹುಡುಗಿ ರವೀನಾ ಟಂಡನ್ ಅವರನ್ನು ಇಂಪ್ರೆಸ್ ಮಾಡಿದ್ದಾರೆ.

    ಸೋನಿ ಚಾನೆಲ್‍ನ ಸಬಸೇ ಬಡಾ ಕಲಾಕರ್ ಶೋನ ವೇದಿಕೆಯಲ್ಲಿ ಅಕ್ಷಯ್ ಕುಮಾರ್ ಅಭಿನಯದ ಮೊಹ್ರಾ ಫಿಲ್ಮ್ ಡ್ರೆಸ್ ಹಾಕಿ ತೂ ಚೀಜ್ ಬಡಿ ಹಾಡಿಗೆ ಡ್ಯಾನ್ಸ್ ಮಾಡಲಾರಂಭಿಸಿದರು. ಸುನಿಲ್ ಗ್ರೋವರ್ ಡ್ಯಾನ್ಸ್ ಆರಂಭಿಸುತ್ತಿದ್ದಂತೆ ಖುಷಿಯಾಗಿ ರವೀನಾ ಸ್ಟೇಜ್‍ಗೆ ಬಂದು ಡ್ಯಾನ್ಸ್ ಮಾಡಿದ್ದಾರೆ.

    ಸುನಿಲ್ ಗ್ರೋವರ್ ಮತ್ತು ಕಪಿಲ್ ಶರ್ಮಾ ನಡುವಿನ ಜಗಳದ ನಂತರ ಹೆಚ್ಚಾಗಿ ಯಾವುದೇ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಕಪಿಲ್ ಜೊತೆಗಿನ ವೈಮನಸ್ಸಿನ ನಂತರ ಸೋನಿ ಚಾನೆಲ್‍ನ `ಇಂಡಿಯನ್ ಐಡಲ್’ ಪೈನಲ್‍ನಲ್ಲಿ ಸುನಿಲ್ ಗ್ರೋವರ್ ಎಲ್ಲರನ್ನು ನಗಿಸಿದ್ದರು.

    ಆದರೆ ಕಪಿಲ್ ಶರ್ಮಾ ಶೋ ಜೊತೆಗಿನ ಅಗ್ರಿಮೆಂಟ್ ಮುರಿದುಕೊಂಡ ಸುನಿಲ್ ಗ್ರೊವರ್ ಅವರನ್ನು ಸೋನಿ ಮತ್ತೊಮ್ಮೆ ತಮ್ಮ ಚಾನೆಲ್ ಕರೆತಂದಿದೆ. ಸೋನಿಯಲ್ಲಿಯ `ಸಬಸೇ ಬಢಾ ಕಲಾಕರ್’ ರಿಯಾಲಿಟಿ ಶೋಗೆ ಬಂದಿದ್ದಾರೆ. ಸಬಸೇ ಬಡಾ ಕಲಾ ಕಲಾಕರ್ ಶೋದಲ್ಲಿ ಪುಟಾಣಿ ಮಕ್ಕಳು ತಮ್ಮಲ್ಲಿಯ ಕಲೆಯನ್ನು ತೋರಿಸುವ ರಿಯಾಲಿಟಿ ಶೋ ಆಗಿದ್ದು ರವೀನಾ ಟಂಡನ್, ಅರ್ಷದ್ ವಾರ್ಸಿ ಮತ್ತು ಬೊಮನ್ ಇರಾನಿ ಶೋ ಜಡ್ಜ್ ಗಳಾಗಿದ್ದಾರೆ.