Tag: Raveena Tandon

  • ರಾಮ್ ಚರಣ್‌ಗೆ ನಾಯಕಿಯಾದ ರವೀನಾ ಟಂಡನ್ ಪುತ್ರಿ ರಾಶಾ

    ರಾಮ್ ಚರಣ್‌ಗೆ ನಾಯಕಿಯಾದ ರವೀನಾ ಟಂಡನ್ ಪುತ್ರಿ ರಾಶಾ

    ‘ಆರ್‌ಆರ್‌ಆರ್’ (RRR) ಚಿತ್ರದ ಸ್ಟಾರ್ ರಾಮ್ ಚರಣ್ (Ram Charan) ಇದೀಗ ‘ಉಪ್ಪೇನ’ ನಿರ್ದೇಶಕನ ಜೊತೆ ಕೈಜೋಡಿಸಿದ್ದಾರೆ. ಹೊಸ ಪ್ರಾಜೆಕ್ಟ್‌ಗೆ ರಾಮ್ ಚರಣ್‌ಗೆ ಜೋಡಿಯಾಗಿ ಸ್ಟಾರ್ ನಟಿಯ ಪುತ್ರಿ ಟಾಲಿವುಡ್‌ಗೆ ಪರಿಚಿತರಾಗುತ್ತಿದ್ದಾರೆ. ಇದನ್ನೂ ಓದಿ:ದೊಡ್ಮನೆ ಆಟಕ್ಕೆ ಜೊತೆಯಾಗ್ತಾರಾ ಮೇಘಾ ಶೆಟ್ಟಿ? ಕೊನೆಗೂ ಸಿಕ್ತು ಉತ್ತರ

    ಗೇಮ್ ಜೇಂಜರ್ ಸಿನಿಮಾದಲ್ಲಿ ರಾಮ್ ಚರಣ್ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಉಪ್ಪೇನ ಡೈರೆಕ್ಟರ್ ಬುಚ್ಚಿಬಾಬು ಹೊಸ ಚಿತ್ರದ ಕಥೆ ಕೇಳಿ, ಚರಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಪುತ್ರಿ ರಾಶಾ (Rasha) ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ರಾಮ್ ಚರಣ್‌ಗೆ ನಾಯಕಿಯಾಗುವ ಮೂಲಕ ರಾಶಾ ತೆಲುಗಿಗೆ (Tollywood) ಎಂಟ್ರಿ ಕೊಡುತ್ತಿದ್ದಾರೆ. ಚಿತ್ರತಂಡದಿಂದ ಯಾವುದೇ ಅಧಿಕೃತ ಅಪ್‌ಡೇಟ್ ಹೊರಬಿದ್ದಿಲ್ಲ. ಆದರೆ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರವೀನಾರಂತೆಯೇ ರಾಶಾ ಕೂಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳುತ್ತಾರಾ? ಕಾಯಬೇಕಿದೆ.

    ಒಂದು ಕಾಲದಲ್ಲಿ ಸೌತ್ ಸಿನಿಮಾ ಅಂದರೆ ಕಡೆಗಣಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಲು ಬಾಲಿವುಡ್ ನಟಿಯರು ಆಸಕ್ತಿ ತೋರುತ್ತಿದ್ದಾರೆ. ಹಿಂದಿ ಸಿನಿಮಾಗಿಂತ ಸೌತ್ ಸಿನಿಮಾಗಳೇ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಕ್ಷಯ್ ನಟನೆಯ ‘ವೆಲ್‌ಕಮ್ 3’ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡು

    ಅಕ್ಷಯ್ ನಟನೆಯ ‘ವೆಲ್‌ಕಮ್ 3’ ಸಿನಿಮಾದಲ್ಲಿ ಸ್ಟಾರ್ ಕಲಾವಿದರ ದಂಡು

    ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಬ್ಯಾಕ್ ಟು ಬ್ಯಾಕ್ ಹೊಸ ಪ್ರಾಜೆಕ್ಟ್‌ಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ. ವೆಲ್‌ಕಮ್ ಪಾರ್ಟ್ 1 & 2 ಬಳಿಕ ವೆಲ್‌ಕಮ್ -3 (Welcome 3) ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    ‘ವೆಲ್‌ಕಮ್ ಟು ದಿ ಜಂಗಲ್’ ಎಂದು ಟೈಟಲ್ ಅನಾವರಣಗೊಂಡಿದೆ. ಅಕ್ಷಯ್ ಕುಮಾರ್, ದಿಶಾ ಪಟಾಣಿ, ಸುನೀಲ್ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್(Raveena Tandon), ಲಾರಾ ದತ್, ಜಾಕ್ವೆಲಿನ್, ಸೇರಿದಂತೆ ಹಲವು ಸ್ಟಾರ್ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಇದನ್ನೂ ಓದಿ:‘ಬೇಡರ ಕಣ್ಣಪ್ಪ’ ತೆಲುಗು ರಿಮೇಕ್‌ನಲ್ಲಿ ಪ್ರಭಾಸ್

    ‘ವೆಲ್‌ಕಮ್ 3’ ಸಿನಿಮಾದ ಕಥೆ ವಿಭಿನ್ನವಾಗಿದ್ದು, ಅಹ್ಮದ್ ಖಾನ್ ನಿರ್ದೇಶನ ಮಾಡಿದ್ದಾರೆ. ಹಲವು ಸ್ಟಾರ್ ಕಲಾವಿದರ ದಂಡೇ ಇರುವ ಈ ಚಿತ್ರವು ಈ ವರ್ಷ ಡಿಸೆಂಬರ್ 20ಕ್ಕೆ ರಿಲೀಸ್ ಆಗಲಿದೆ.

    ಅಕ್ಷಯ್ ನಟನೆಯ ಈ ಹಿಂದಿನ ‘ವೆಲ್‌ಕಮ್’ ಚಿತ್ರ, ಅವರ ಕೆರಿಯರ್‌ಗೆ ಬಿಗ್ ಬ್ರೇಕ್ ಕೊಟ್ಟಿತ್ತು. ಮತ್ತೊಮ್ಮೆ ಅದೇ ಟೈಟಲ್ ಮೂಲಕ ಹೊಸ ಕಥೆಯೊಂದಿಗೆ ಮೋಡಿ ಮಾಡಲು ರೆಡಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಜಿ ಬಾಯ್ ಫ್ರೆಂಡ್ ಜೊತೆ ಸಿನಿಮಾ ಮಾಡಲು ಓಕೆ ಎಂದ ‘ಕೆಜಿಎಫ್ 2’ ನಟಿ

    ಮಾಜಿ ಬಾಯ್ ಫ್ರೆಂಡ್ ಜೊತೆ ಸಿನಿಮಾ ಮಾಡಲು ಓಕೆ ಎಂದ ‘ಕೆಜಿಎಫ್ 2’ ನಟಿ

    ಬಾಲಿವುಡ್ ಬ್ಯೂಟಿ ರವೀನಾ ಟಂಡನ್ (Raveena Tandon)- ಅಕ್ಷಯ್ ಕುಮಾರ್ (Akshay Kumar) ಒಂದು ಕಾಲದಲ್ಲಿ ಜೋಡಿ ಹಕ್ಕಿಗಳಾಗಿದ್ದರು ಎಂಬ ವಿಚಾರ ಎಲ್ಲರಿಗೂ ಗೊತ್ತೆಯಿದೆ. ಬ್ರೇಕಪ್ ಬಳಿಕ ಹೊಸ ಸಂಗಾತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ 20 ವರ್ಷಗಳ ನಂತರ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. ಹೊಸ ಚಿತ್ರಕ್ಕೆ ರವೀನಾ- ಅಕ್ಷಯ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ವೆಲಕಮ್ ಪಾರ್ಟ್ 1 ಮತ್ತು 2 ಸಿನಿಮಾ, ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಇದೀಗ ವೆಲಕಮ್ ಪಾರ್ಟ್ 3 (Welcome 3) ಸಿನಿಮಾ ಬರುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರಗಳಾಗಿ ಅಕ್ಷಯ್ ಕುಮಾರ್- ರವೀನಾ ಟಂಡನ್ ನಟಿಸಲು ಓಕೆ ಎಂದಿದ್ದಾರೆ. ಬಾಲಿವುಡ್ ಬೆಸ್ಟ್ ಜೋಡಿ ಇದೀಗ 20 ವರ್ಷಗಳ ಬಳಿಕ ಈ ಚಿತ್ರಕ್ಕಾಗಿ ಒಂದಾಗುತ್ತಿದೆ.

    ಹೊಸ ಬಗೆಯ ಕಥೆಯಲ್ಲಿ ಅಕ್ಷಯ್- ರವೀನಾ ಡ್ಯುಯೇಟ್ ಹಾಡಲಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಚಿತ್ರತಂಡಕ್ಕೆ ಯಾರೆಲ್ಲಾ ಕಲಾವಿದರು ಸಾಥ್ ಕೊಡುತ್ತಾರೆ ಎಂಬುದರ ಅಪ್‌ಡೇಟ್ ಕೂಡ ಸಿಗಲಿದೆ. ಇದನ್ನೂ ಓದಿ:ತಾನ್ಯ ಹೋಪ್-ಸಂತಾನಂ ನಟನೆಯ ‘ಕಿಕ್’ ಚಿತ್ರದ ಗಿಲ್ಮಾ ಸಾಂಗ್ ರಿಲೀಸ್

    ತೆರೆ ಮೇಲೆ ಬೆಸ್ಟ್ ಜೋಡಿಗಳಾಗಿ ರವೀನಾ ಟಂಡನ್- ಅಕ್ಷಯ್ ಕುಮಾರ್ ಮಿಂಚಿದ್ದರು. ರಿಯಲ್ ಲೈಫ್‌ನಲ್ಲೂ ದಾಂಪತ್ಯ ಜೀವನಕ್ಕೆ ಕಾಲಿಡುವ ಕನಸು ಕಂಡಿದ್ದರು. ಇಬ್ಬರ ನಿಶ್ಚಿತಾರ್ಥದ ಬಳಿಕ ವೈಯಕ್ತಿಕ ಕಾರಣಗಳಿಂದ ಬ್ರೇಕಪ್ ಮಾಡಿಕೊಂಡಿದ್ದರು. ರವೀನಾ ಜೊತೆಗಿನ ಬ್ರೇಕಪ್ ನಂತರ ಶಿಲ್ಪಾ ಶೆಟ್ಟಿ ಜೊತೆ ಅಕ್ಷಯ್ ಎಂಗೇಜ್ ಆಗಿದ್ರು. ಅದ್ಯಾಕೋ ಈ ಸಂಬಂಧ ಕೂಡ ಕೂಡಿ ಬರಲಿಲ್ಲ. ನಂತರ ಟ್ವಿಂಕಲ್ ಖನ್ನಾ(Twinkle Khanna) ಜೊತೆ ಅಕ್ಷಯ್ ಮದುವೆಯಾದರು. ನಿರ್ಮಾಪಕ ಅನಿಲ್ ಜೊತೆ ರವೀನಾ ಹೊಸ ಬಾಳಿಗೆ ಕಾಲಿಟ್ಟರು.

    ಆದರೆ‌ ಈಗ 20 ವರ್ಷಗಳ ಹಿಂದಿನ ಮುನಿಸು ಮರೆತು ಅಕ್ಷಯ್- ರವೀನಾ ಫ್ರೆಂಡ್ಸ್ ಆಗಿದ್ದಾರೆ. ತೆರೆಯ ಮೇಲೆ ಈ ಜೋಡಿ ಮತ್ತೆ ಯಾವ ರೀತಿ ಮೋಡಿ ಮಾಡಲಿದೆ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 18 ವಯಸ್ಸಿಗೆ ನಾಯಕಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ರವೀನಾ ಟಂಡನ್ ಪುತ್ರಿ

    18 ವಯಸ್ಸಿಗೆ ನಾಯಕಿಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ ರವೀನಾ ಟಂಡನ್ ಪುತ್ರಿ

    ಬಾಲಿವುಡ್‌ನ (Bollywood) ಸ್ಟಾರ್ ಕಲಾವಿದರ ಮಕ್ಕಳು ಒಬ್ಬಬ್ಬರೇ ಸಿನಿರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇದೀಗ ಈ ಸಾಲಿಗೆ ‘ಕೆಜಿಎಫ್ 2ʼ (KGF 2) ಖ್ಯಾತಿಯ ರವೀನಾ ಟಂಡನ್ ಮುದ್ದಿನ ಮಗಳು ರಾಶಾ ಬಿಟೌನ್‌ಗೆ ಲಗ್ಗೆ ಇಡ್ತಿದ್ದಾರೆ. ಸಾಕಷ್ಟು ದಿನಗಳಿಂದ ರವೀನಾ(Raveena Tandon) ಪುತ್ರಿ ನಟಿಸುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಯಾರು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಈಗ ನಾಯಕಿಯಾಗಿ ಮಿಂಚಲು ರಾಶಾಗೆ (Rasha) ವೇದಿಕೆ ಸಿದ್ಧವಾಗಿದೆ.

    ಚಿತ್ರರಂಗದಲ್ಲಿ ನಟ- ನಟಿಯರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ಇದೀಗ ಮತ್ತೊಬ್ಬ ಸ್ಟಾರ್‌ಕಿಡ್ ನಟನೆಗೆ ಪದಾರ್ಪಣೆ ಮಾಡುವ ಸುದ್ದಿ ಕೇಳಿ ಬರುತ್ತಿದೆ. ಬಾಲಿವುಡ್‌ನ ಜನಪ್ರಿಯ ನಟಿ ರವೀನಾ ಟಂಡನ್ ಮತ್ತು ಅನಿಲ್ ಥಡಾನಿ ಅವರ ಪುತ್ರಿ ರಾಶಾ ಬಾಲಿವುಡ್‌ಗೆ ಎಂಟ್ರಿ ಕೊಡಲು ಸಕಲ ತಯಾರಿ ಮಾಡಿಕೊಂಡೇ ಬರುತ್ತಿದ್ದಾರೆ. ಇದೆಲ್ಲಕ್ಕೂ ಉತ್ತರ ಇಲ್ಲಿದೆ. ಇದನ್ನೂ ಓದಿ:ರಣಬೀರ್- ರಶ್ಮಿಕಾ ನಟನೆಯ ‘ಅನಿಮಲ್’ ಸಿನಿಮಾದ ನ್ಯೂ ರಿಲೀಸ್ ಡೇಟ್ ಅನೌನ್ಸ್

    ರಾಶಾಗೆ ಈಗ 18ರ ಹರೆಯ. ಈಕೆ ಈಗ ತಾಯಿ ರವೀನಾ ಅವರಂತೆಯೇ ಸಾಗಲು ಸಿದ್ಧತೆ ನಡೆಸಿದ್ದಾಳೆ. ರವೀನಾ ಅವರ ಮಗಳು ಸದ್ಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ನಿರ್ದೇಶಕ ಅಭಿಷೇಕ್ ಕಪೂರ್ ತಮ್ಮ ಮುಂದಿನ ಚಿತ್ರದಲ್ಲಿ, ರವೀನಾ ಟಂಡನ್ ಮತ್ತು ಅನಿಲ್ ಥಡಾನಿ ಅವರ ಪುತ್ರಿ ರಾಶಾ ಅವರನ್ನು ಪರಿಚಯಿಸಲಿದ್ದಾರೆ. ಇದೊಂದು ಅಡ್ವೆಂಚರ್- ಆ್ಯಕ್ಷನ್ ಓರಿಯೆಂಟೆಡ್ ಚಿತ್ರವಾಗಿದ್ದು, ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಇನ್ನೂ ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ ಕೂಡ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಅಜಯ್ ದೇವಗನ್ ಅವರು ಹಿಂದೆಂದೂ ಮಾಡಿರದಂಥ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

    ಅಮನ್ ದೇವಗನ್- ರಾಶಾ ಅವರು ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಮುಂದಿನ ವರ್ಷ ಫೆ.9ರಂದು ಸಿನಿಮಾ ರಿಲೀಸ್ ತೆರೆಗೆ ಬರುವ ಬಗ್ಗೆ ಚಿತ್ರತಂಡ ತಿಳಿಸಿದೆ. ರೋನಿ ಸ್ಕ್ರೀವ್‌ವಾಲಾ ಮತ್ತು ಪ್ರಾಗ್ಯಾ ಕಪೂರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಒಟ್ನಲ್ಲಿ ಮಗಳ ಸಿನಿಮಾ ಲಾಂಚ್ ಬಗ್ಗೆ ರವೀನಾ ದಂಪತಿಗೆ ಖುಷಿಕೊಟ್ಟಿದೆ. ಸದ್ಯದಲ್ಲೇ ಈ ಬಗ್ಗೆ ಮತ್ತಷ್ಟು ಮಾಹಿತಿ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಧಾಮೂರ್ತಿ ಎದುರೇ ಕಪಿಲ್ ಶರ್ಮಾಗೆ ಮುತ್ತಿಟ್ಟ ರವೀನಾ ಟಂಡನ್

    ಸುಧಾಮೂರ್ತಿ ಎದುರೇ ಕಪಿಲ್ ಶರ್ಮಾಗೆ ಮುತ್ತಿಟ್ಟ ರವೀನಾ ಟಂಡನ್

    ಸಾಮಾನ್ಯವಾಗಿ ಟಿವಿ ಶೋ ಮತ್ತು ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ (Sudha Murthy) ಕಾಣಿಸಿಕೊಳ್ಳುವುದಿಲ್ಲ. ಸಾಹಿತ್ಯದ ಕಾರ್ಯಕ್ರಮಗಳ ಹೊರತಾಗಿ ಮನರಂಜನಾ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲು ಇಚ್ಚಿಸುವುದೂ ಇಲ್ಲ. ಆದರೆ, ಹಿಂದಿಯ ಸುಪ್ರಸಿದ್ಧ ರಿಯಾಲಿಟಿ ಶೋ ಕಪಿಲ್ ಶರ್ಮಾ ಶೋನಲ್ಲಿ (The Kapil Sharma Show) ಅವರು ಭಾಗಿಯಾಗಿದ್ದಾರೆ. ಆ ಪ್ರೋಮೋವನ್ನು ವಾಹಿನಿಯೇ ರಿಲೀಸ್ ಮಾಡಿದೆ.

    ಸುಧಾ ಮೂರ್ತಿ ಅವರ ಜೊತೆಗೆ ಬಾಲಿವುಡ್ ನ ಖ್ಯಾತ ನಟಿ, ಕೆಜಿಎಫ್ 2 ಚಿತ್ರದ ರಮೀಕಾ ಶೇನ್  ಹಾಗೂ ಆಸ್ಕರ್ ಪ್ರಶಸ್ತಿ ವಿಜೇತೆ ನಿರ್ಮಾಪಕಿ ಗುನೀತ್ ಮೋಂಗಾ (Guneet Monga) ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರವೀನಾ ಟಂಡನ್ (Raveena Tandon) ಸಡನ್ನಾಗಿ ಎದ್ದು ಕಪಿಲ್ ಶರ್ಮಾಗೆ ಮುತ್ತು (Kiss) ಕೊಡುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಯಾದಲ್ಲಿ ಭಾರೀ ವೈರಲ್ ಆಗಿದೆ.

    ಕಪಿಲ್ ಶರ್ಮಾ ಮತ್ತು ರವೀನಾ ಟಂಡನ್ ಇಬ್ಬರೂ ಆತ್ಮೀಯ ಸ್ನೇಹಿತರು. ಎಷ್ಟೋ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ಕಪಿಲ್ ಶರ್ಮಾ ಶೋನಲ್ಲಿ ರವೀನ್ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ. ಈ ಸಲುಗೆಯೇ ಮುತ್ತಿನವರೆಗೂ ಎಳೆದುಕೊಂಡು ಹೋಗಿದೆಯಷ್ಟೇ. ಇದರಾಚೆ ಯಾವುದೇ ಗಾಸಿಪ್ ಗಳು ಇಲ್ಲ ಎಂದಿದ್ದಾರೆ ರವೀನಾ ಅಭಿಮಾನಿಗಳು. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್

    ಈ ಶೋ ಯಾವಾಗಿಂದ ಪ್ರಸಾರವಾಗಲಿದೆ ಎನ್ನುವ ಮಾಹಿತಿಯನ್ನು ವಾಹಿನಿ ನೀಡದೇ ಇದ್ದರೂ, ಕಪಿಲ್ ಶರ್ಮಾಗೆ ರವೀನಾ ಮುತ್ತಿಡುವ ಪ್ರೋಮೋ ರಿಲೀಸ್ ಮಾಡಿ ಕುತೂಹಲ ಮೂಡಿಸಿದೆ. ರವೀನಾಗೆ ಕಪಿಲ್ ಕಾಲೆಳೆಯುವ ದೃಶ್ಯವಂತೂ ಸಖತ್ ಮಜವಾಗಿದೆ. ಅಲ್ಲದೇ, ನಿರೀಕ್ಷೆಯನ್ನೂ ಹುಟ್ಟಿಸಿದೆ.

  • ಪತ್ನಿಯ ನಿರೀಕ್ಷೆ-‌ ವಾಸ್ತವದ ಬಗ್ಗೆ ಕಾಲೆಳೆದ ರಾಕಿಂಗ್‌ ಸ್ಟಾರ್ ಯಶ್

    ಪತ್ನಿಯ ನಿರೀಕ್ಷೆ-‌ ವಾಸ್ತವದ ಬಗ್ಗೆ ಕಾಲೆಳೆದ ರಾಕಿಂಗ್‌ ಸ್ಟಾರ್ ಯಶ್

    ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ (Yash) ಅವರು ಸದ್ಯ ತಮ್ಮ ಪತ್ನಿ ಜೊತೆಗಿನ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಪತ್ನಿ ನಿರೀಕ್ಷೆ, ವಾಸ್ತವವೇನು ಎಂಬುದನ್ನ ಫೋಟೋ ಶೇರ್ ಮಾಡಿ, ರಾಧಿಕಾ (Radhika Pandit) ಕಾಲೆಳೆದಿದ್ದಾರೆ.

    ಕೆಜಿಎಫ್, ಕೆಜಿಎಫ್ 2 (KGF 2) ಸಕ್ಸಸ್ ನಂತರ ಯಶ್ ಹೊಸ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ‘ಕೆಜಿಎಫ್ 3’ (KGF 3) ಸಿನಿಮಾ ಅನೌನ್ಸ್ ಕೂಡ ಮಾಡಿದ್ದಾರೆ. ಯಶ್ ಮುಂದಿನ ಸಿನಿಮಾ ನಿರೀಕ್ಷೆಯಲ್ಲಿರುವ ಅಭಿಮಾನಿಗಳ ರಾಕಿಭಾಯ್ ಹೊಸ ಫೋಟೋ ನೋಡಿ ಫಿದಾ ಆಗಿದ್ದಾರೆ. ಪತ್ನಿ – ಮಕ್ಕಳ ಜೊತೆಗಿರುವ ಯಶ್ (Yash) ಸುಂದರ ಫೋಟೋವನ್ನು ಶೇರ್ ಮಾಡಿದ್ದಾರೆ.

    ಯಶ್ ಶೇರ್ ಮಾಡಿರುವ ಎರಡು ಫೋಟೋಗಳಲ್ಲಿ ಮೊದಲ ಫೋಟೋ, ಸುಂದರ ಪ್ರಕೃತಿ ನಡುವೆ ಕೈ ಕೈ ಹಿಡಿದು ಯಶ್ ಮತ್ತು ರಾಧಿಕಾ ನಡೆದುಕೊಂಡು ಬರುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಯಶ್ ಮತ್ತು ರಾಧಿಕಾ ಇಬ್ಬರೂ ಮುದ್ದಾದ ಇಬ್ಬರು ಮಕ್ಕಳನ್ನು ಎತ್ತಿಕೊಂಡಿದ್ದಾರೆ. ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆಗಿನ ಫೋಟೋ ಶೇರ್ ಮಾಡಿ ನನ್ನ ಪತ್ನಿಯ ನಿರೀಕ್ಷೆ ಮತ್ತು ವಾಸ್ತವ ಎಂದು ಕ್ಯಾಪ್ಷನ್ ನೀಡಿದ್ದಾರೆ. ಮಕ್ಕಳಾದ ಮೇಲೆ ಅವರೇ ನಮ್ಮ ಪ್ರಪಂಚ ಎಂದಿದ್ದಾರೆ. ಯಶ್ ಮತ್ತು ರಾಧಿಕಾ ಸುಂದರ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಚಿತ್ರೀಕರಣದ ಸಮಯದಲ್ಲಿ ಎದುರಿದ ಸಂಕಷ್ಟಗಳನ್ನ ಬಿಚ್ಚಿಟ್ಟ ಕೀರ್ತಿ ಸುರೇಶ್

     

    View this post on Instagram

     

    A post shared by Yash (@thenameisyash)

    ‘ಕೆಜಿಎಫ್ 2’ ನಟಿ ರವೀನಾ ಟಂಡನ್ (Raveena Tandon) ಕೂಡ ಯಶ್‌ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಅಂದರೆ ಇದೇ ಅಲ್ವಾ ನಮ್ಮ ಮಕ್ಕಳಿಂದ ನಮ್ಮ ಕುಟುಂಬ ಪರಿಪೂರ್ಣ ಎಂಬರ್ಥದಲ್ಲಿ ನಟಿ ಹೇಳಿದ್ದಾರೆ.

  • ಯಶ್ ಕಾಲ್ ಮಾಡಿ ಕೆಜಿಎಫ್- 3ಗೆ ರೆಡಿಯಾಗಿ ಅಂದ್ರು- ನಟಿ ರವೀನಾ ಟಂಡನ್

    ಯಶ್ ಕಾಲ್ ಮಾಡಿ ಕೆಜಿಎಫ್- 3ಗೆ ರೆಡಿಯಾಗಿ ಅಂದ್ರು- ನಟಿ ರವೀನಾ ಟಂಡನ್

    ಕೆಜಿಎಫ್, ಕೆಜಿಎಫ್ 2 (KGF 2) ಸಿನಿಮಾಗಳು ಗಲ್ಲಾಪೆಟ್ಟಿಗೆಯನ್ನ ಶೇಕ್ ಮಾಡಿತ್ತು. ಸಾವಿರಾರು ಕೋಟಿ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೆಟ್ ಮಾಡಿತ್ತು. ಇತ್ತೀಚಿಗಷ್ಟೇ ಹೊಂಬಾಳೆ ಫಿಲ್ಮ್ಸ್(Hombale Films) ‘ಕೆಜಿಎಫ್ 3’ (KGF 3) ಮಾಡುವ ಬಗ್ಗೆ ಸುಳಿವು ನೀಡಿತ್ತು. ಈ ಬೆನ್ನಲ್ಲೇ ‘ಕೆಜಿಎಫ್ 3’ಗೆ ರೆಡಿಯಾಗಿ ಎಂದು ಯಶ್ ಹೇಳಿರುವುದನ್ನು ರವೀನಾ ಟಂಡನ್ (Raveena Tandon) ರಿವೀಲ್ ಮಾಡಿದ್ದಾರೆ.

    ‘ಕೆಜಿಎಫ್’ ಪಾರ್ಟ್ 2 ಸಿನಿಮಾ ಏ.14ಕ್ಕೆ ರಿಲೀಸ್ ಆಗಿ ಒಂದು ವರ್ಷವಾಗಿದೆ. ಇದೇ ಖುಷಿಯಲ್ಲಿ ಕೆಜಿಎಫ್ 3 ಬರುವ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಮತ್ತೆ ರಾಕಿ ಭಾಯ್ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಈಗ ಕೆಜಿಎಫ್-3 ಚರ್ಚೆಯ ನಡುವೆಯೇ ನಟಿ ರಮಿಕಾ ಸೇನ್ ಖ್ಯಾತಿಯ ರವೀನಾ ಟಂಡನ್ ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್- ಪ್ರಶಾಂತ್ ನೀಲ್ ಕರೆ ಮಾಡಿ ಹೇಳಿದ್ದೇನು ಎನ್ನುವುದನ್ನು ರವೀನಾ ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ:ಹಾಲಿವುಡ್ ‘ಸಿಟಾಡೆಲ್’ ಪ್ರೀಮಿಯರ್‌ನಲ್ಲಿ ಸಮಂತಾ

    ಸಂದರ್ಶನದಲ್ಲಿ ಮಾತನಾಡಿದ ರವೀನಾ, ಕೆಜಿಎಫ್ 2 ಮೊದಲ ವಾರ್ಷಿಕೋತ್ಸವದ ದಿನ ಮೊದಲು ವಿಶ್ ಮಾಡಿದ್ದು, ಯಶ್ ಪತ್ನಿ ರಾಧಿಕಾ ಪಂಡಿತ್ ಎಂದು ಹೇಳಿದ್ದಾರೆ. ಏಪ್ರಿಲ್ 14ರ ಬೆಳಗ್ಗೆಯೇ ಯಶ್ ಪತ್ನಿ ರಾಧಿಕಾ ಪಂಡಿತ್ (Radhika Pandit) ವಿಶ್ ಮಾಡಿದ್ದರು ಎಂದು ಬಹಿರಂಗ ಪಡಿಸಿದ್ದಾರೆ. ಅದೇ ದಿನ ಸಂಜೆ ಯಶ್ ಫೋನ್ ಮಾಡಿದ ವಿಚಾರವನ್ನು ಹಂಚಿಕೊಂಡಿದ್ದಾರೆ.

    ಆ ದಿನ ಸಂಜೆ (ಏ.14) ಯಶ್ ನನಗೆ ಫೋನ್ ಮಾಡಿದ್ದರು. ನಾವಿಬ್ಬರೂ ವಾರ್ಷಿಕೋತ್ಸವಕ್ಕೆ ಒಬ್ಬರಿಗೊಬ್ಬರು ವಿಶ್ ಮಾಡಿಕೊಂಡೆವು. ಆಗ ಯಶ್ ಕೆಜಿಎಫ್ 3ಗೆ ರೆಡಿಯಾಗಬೇಕು ಅಂತ ಹೇಳಿದರು. ಆಗ ಮೊದಲ ಸೀನ್‌ನಲ್ಲೇ ನನ್ನನ್ನು ಸಾಯಿಸಬೇಡಿ ಅಂತ ಹೇಳಿದೆ. ಹೀಗೆ ಜೋಕ್ ಮಾಡಿಕೊಂಡೆ ನಕ್ಕೆವು. ಹಾಗೇ ಪ್ರಶಾಂತ್ ಕೂಡ ಫೋನ್ ಮಾಡಿದ್ದರು. ಆದರೆ, ಕೆಜಿಎಫ್ -3 ಯಾವಾಗ ಬರುತ್ತೆ ಅನ್ನೋದು ನಮಗೆ ಗೊತ್ತಿಲ್ಲ. ನಾವೆಲ್ಲರೂ ಬೇಗ ಬರಲಿ ಅಂತ ಕಾಯುತ್ತಿದ್ದೇವೆ. ಪ್ರಶಾಂತ್ ನೀಲ್ (Prashanth Neel) ಫೋನ್ ಮಾಡಿ ಪ್ರತಿ ದೃಶ್ಯದಲ್ಲೂ ಅದ್ಭುತವಾಗಿ ಮಾಡಿದ್ದೀರಿ ಎಂದು ಹೇಳಿದ್ದರು. ಪ್ರಶಾಂತ್ ನೀಲ್ ಕೂಡ ಆದಷ್ಟು ಬೇಗ ಮಾಡೋಣ ಅಂತ ಹೇಳಿದರು ಎಂದು ರವೀನಾ ಟಂಡನ್ ಹೇಳಿದ್ದಾರೆ.

  • `ಕೆಜಿಎಫ್ 2′ ನಟಿ ರವೀನಾ ಟಂಡನ್ ಪುತ್ರಿ ರಾಶಾ ಬಾಲಿವುಡ್‌ಗೆ ಎಂಟ್ರಿ

    `ಕೆಜಿಎಫ್ 2′ ನಟಿ ರವೀನಾ ಟಂಡನ್ ಪುತ್ರಿ ರಾಶಾ ಬಾಲಿವುಡ್‌ಗೆ ಎಂಟ್ರಿ

    ಬಾಲಿವುಡ್‌ನ (Bollywood) ಸ್ಟಾರ್ ಕಲಾವಿದರ ಮಕ್ಕಳು ಒಬ್ಬಬ್ಬರೇ ಸಿನಿರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಇದೀಗ ಈ ಸಾಲಿಗೆ ʻಕೆಜಿಎಫ್‌ 2ʼ ಖ್ಯಾತಿಯ ರವೀನಾ ಟಂಡನ್ (Raveena Tandon) ಮುದ್ದಿನ ಮಗಳು ರಾಶಾ (Rasha) ಬಿಟೌನ್‌ಗೆ ಲಗ್ಗೆ ಇಡ್ತಿದ್ದಾರೆ.

    ಚಿತ್ರರಂಗದಲ್ಲಿ ನಟ- ನಟಿಯರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿವೆ. ಇದೀಗ ಮತ್ತೊಬ್ಬ ಸ್ಟಾರ್‌ಕಿಡ್ ನಟನೆಗೆ ಪದಾರ್ಪಣೆ ಮಾಡುವ ಸುದ್ದಿ ಕೇಳಿ ಬರುತ್ತಿದೆ. ಬಾಲಿವುಡ್‌ನ ಜನಪ್ರಿಯ ನಟಿ ರವೀನಾ ಟಂಡನ್ (Raveena Tandon) ಮತ್ತು ಅನಿಲ್ ಥಡಾನಿ (Anil Thadani) ಅವರ ಪುತ್ರಿ ರಾಶಾ ಶೀಘ್ರದಲ್ಲಿಯೇ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ.

     

    View this post on Instagram

     

    A post shared by Rasha (@rashathadani)

    ರಾಶಾಗೆ ಈಗ 17ರ ಹರೆಯ. ಈಕೆ ಈಗ ತಾಯಿ ರವೀನಾ ಅವರಂತೆಯೇ ಸಾಗಲು ಸಿದ್ಧತೆ ನಡೆಸಿದ್ದಾಳೆ. ರವೀನಾ ಅವರ ಮಗಳು ಸದ್ಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಈಕೆಗೆ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳು ಇದ್ದಾರೆ. ಇದನ್ನೂ ಓದಿ: ಬಳ್ಳಾರಿ ಉತ್ಸವದಲ್ಲಿ ಮಂಗ್ಲಿ ಕಾರು ಒಡೆದ ಕಿಡಿಗೇಡಿಗಳು- ಮೇಕಪ್‌ ರೂಂಗೆ ನುಗ್ಗಿ ದಾಂಧಲೆ

    ನಿರ್ದೇಶಕ ಅಭಿಷೇಕ್ ಕಪೂರ್ (Abhishek Kapoor) ತಮ್ಮ ಮುಂದಿನ ಚಿತ್ರದಲ್ಲಿ, ರವೀನಾ ಟಂಡನ್ ಮತ್ತು ಅನಿಲ್ ಥಡಾನಿ ಅವರ ಪುತ್ರಿ ರಾಶಾ ಅವರನ್ನು ಪರಿಚಯಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕೆ ಇನ್ನೂ ಹೆಸರಿಡಲಿಲ್ಲ. ಆದರೆ ಇದೊಂದು ಆ್ಯಕ್ಷನ್ ಓರಿಯೆಂಟೆಡ್ ಚಿತ್ರವಾಗಿದ್ದು, ಅಜಯ್ ದೇವಗನ್ (Ajay Devgan) ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ (Aman Devgan) ಕೂಡ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಅಜಯ್ ದೇವಗನ್ ಅವರು ಹಿಂದೆಂದೂ ಮಾಡಿರದಂಥ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

    ರಾಶಾ ಮತ್ತು ಅಮನ್ ದೇವಗನ್ ಸಿನಿಮಾ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದ ಮೂಲಕ  ಬಾಲಿವುಡ್‌ಗೆ ಪಾದಾರ್ಪಾಣೆ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹುಲಿ ಫೋಟೋ ಕ್ಲಿಕ್ಕಿಸಿ ಎಡವಟ್ಟು ಮಾಡಿಕೊಂಡ `ಕೆಜಿಎಫ್ 2′ ನಟಿ ರವೀನಾಗೆ ಸಂಕಷ್ಟ

    ಹುಲಿ ಫೋಟೋ ಕ್ಲಿಕ್ಕಿಸಿ ಎಡವಟ್ಟು ಮಾಡಿಕೊಂಡ `ಕೆಜಿಎಫ್ 2′ ನಟಿ ರವೀನಾಗೆ ಸಂಕಷ್ಟ

    `ಕೆಜಿಎಫ್ 2′ ನಟಿ ರವೀನಾ ಟಂಡನ್ ಮತ್ತೆ ಸುದ್ದಿಯಲ್ಲಿದ್ದಾರೆ. ಹುಲಿಯ ಫೋಟೋ ಕ್ಲಿಕ್ಕಿಸಿದ್ದಕ್ಕೆ ಎಡವಟ್ಟು ಮಾಡಿಕೊಂಡಿದ್ದಾರೆ. ಹೊಸ ಸಂಕಷ್ಟವೊಂದು ನಟಿಗೆ ಎದುರಾಗಿದೆ. ನಟಿಯ ವಿಚಾರಣೆಗೆ ಆದೇಶ ನೀಡಲಾಗಿದೆ.

    ಬಾಲಿವುಡ್ ನಟಿ ರವೀನಾ ಟಂಡನ್ ಹುಲಿಯ ಫೋಟೋ ಕ್ಲಿಕ್ಕಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ನಟಿ ರವೀನಾ ಇತ್ತೀಚಿಗಷ್ಟೆ ಸಫಾರಿಗೆ ತೆರಳಿದ್ದರು. ಸತ್ಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ್ದ ರವೀನಾ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟಿ ರವೀನಾ ಹುಲಿ ಸಮೀಪ ಹೋಗಿ ವಿಡಿಯೋ ಮಾಡಿದ್ದಾರೆ, ತೊಂದರೆ ನೀಡಿದ್ದಾರೆ ಎಂದು ಮೀಸಲು ಅಧಿಕಾರಿಗಳು ತನಿಖೆ ಆದೇಶಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ವಾಹನ ಚಾಲಕ ಮತ್ತು ಕರ್ತವ್ಯದಲ್ಲಿರುವ ಅಧಿಕಾರಿಗಳು ಹಾಗೂ ರವೀನಾ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಅರಣ್ಯ ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ ಎನ್ನಲಾಗಿದೆ.

    ಈ ಬೆನ್ನಲ್ಲೇ ನಟಿ ರವೀನಾ ಟಂಡನ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅರಣ್ಯ ಇಲಾಖೆಯಿಂದ ಪರವಾನಗಿ ಪಡೆದ ಜೀಪ್‌ನಲ್ಲಿಯೇ ತಾನು ಪ್ರಯಾಣಿಸಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಇಲಾಖೆ ಗೊತ್ತುಪಡಿಸಿದ ಪ್ರವಾಸೋದ್ಯಮ ಮಾರ್ಗದಿಂದ ಹೊರಹೋಗಿಲ್ಲ ಎಂದು ಹೇಳಿದ್ದಾರೆ. ಇಲಾಖೆಯಿಂದ ಒದಗಿಸಲಾದ ತರಬೇತಿ ಪಡೆದ ಮಾರ್ಗದರ್ಶಿಗಳು ಮತ್ತು ಚಾಲಕರು ಸಫಾರಿಯಲ್ಲಿ ಜೊತೆಗಿದ್ದರು ಎಂದು ಹೇಳಿದ್ದಾರೆ. ರವೀನಾ ನವೆಂಬರ್ 22ರಂದು ಸತ್ಪುರ ಮೀಸಲು ಪ್ರದೇಶಕ್ಕೆ ಭೇಟಿ ನೀಡಿದ್ದರು.

    ರವೀನಾ ಇದ್ದ ಸಫಾರಿ ಜೀಪ್ ಹುಲಿಯ ಸಮೀಪ ತಲುಪುತ್ತಿರುವುದನ್ನು ಗಮನಿಸಬಹುದು. ಹುಲಿ ಘರ್ಜಿಸುತ್ತಿರುವುದನ್ನು ಕೇಳಬಹುದು. ಹುಲಿ ಕಾಣಿಸುವುದೇ ಅಪರೂಪ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ರವೀನಾ ಟಂಡನ್ ಅವರು ಕ್ಯಾಮೆರಾ ಹಿಡಿದು ಫೋಟೋ ಮತ್ತು ವಿಡಿಯೋ ಚಿತ್ರಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾಶ್ಮೀರ್‌ ಫೈಲ್ಸ್‌ ಕಾಲ್ಪನಿಕ ಅಂತಾ ಸಾಬೀತುಪಡಿಸಿದ್ರೆ, ಸಿನಿಮಾ ಮಾಡೋದನ್ನೇ ಬಿಡ್ತೀನಿ- ವಿವೇಕ್ ಅಗ್ನಿಹೋತ್ರಿ

    ಅವರ ವರ್ತನೆಯಿಂದ ಹುಲಿಗೂ ಕಿರಿಕಿರಿ ಆಗಿದ್ದು, ಅದು ಘರ್ಜಿಸಿ ಮುಂದೆ ಸಾಗಿದೆ. ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವಿಡಿಯೋ ವೈರಲ್ ಆದ ಬಳಿಕ ಅರಣ್ಯದ ಉಪ ವಿಭಾಗಾಧಿಕಾರಿ ಧೀರಜ್ ಸಿಂಗ್ ಚೌಹಾಣ್ ಹಿರಿಯ ಅಧಿಕಾರಿಗಳ ನಿರ್ದೇಶನದ ನಂತರ, ಈ ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಅಕ್ಟೋಬರ್ 22ಕ್ಕೆ  ಜೀ ಪಿಚ್ಚರ್‌ನಲ್ಲಿ ಯಶ್ ನಟನೆಯ ‘ಕೆಜಿಎಫ್ 2’ ಪ್ರೀಮಿಯರ್

    ಅಕ್ಟೋಬರ್ 22ಕ್ಕೆ ಜೀ ಪಿಚ್ಚರ್‌ನಲ್ಲಿ ಯಶ್ ನಟನೆಯ ‘ಕೆಜಿಎಫ್ 2’ ಪ್ರೀಮಿಯರ್

    ಕೆಜಿಎಫ್ ಚಾಪ್ಟರ್ 2 , ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಸಿನಿಮಾ ಇಡೀ ವಿಶ್ವವೇ ಒಮ್ಮೆ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡದ ಹೆಮ್ಮೆ. ಅತ್ಯದ್ಭುತ ಮೇಕಿಂಗ್, ರಣರೋಚಕ ಕಥೆಯ ಮೂಲಕ ಚಿತ್ರ ಪ್ರೇಮಿಗಳ ಗಮನ ಸೆಳೆದು ಮನ ಗೆದ್ದಿದ್ದ ಸಿನಿಮಾ ಇದೇ ಅಕ್ಟೋಬರ್ 22 ಶನಿವಾರದಂದು ಮಧ್ಯಾಹ್ನ 1 ಗಂಟೆ ಮತ್ತು ಸಂಜೆ 7 ಗಂಟೆಗೆ ಕನ್ನಡಿಗರ ನೆಚ್ಚಿನ ಸಿನಿ ವಾಹಿನಿ ಜೀ ಪಿಚ್ಚರ್‌ನಲ್ಲಿ ಪ್ರಸಾರವಾಗಲಿದೆ.

    ಕೆಜಿಎಫ್ ಚಾಪ್ಟರ್ 1 ರ ಯಶಸ್ಸಿನ ನಂತರ ಸೃಷ್ಟಿಯಾದ ಕೆಜಿಎಫ್ ಚಾಪ್ಟರ್ 2 ಪ್ರೇಕ್ಷಕರ ನೀರಿಕ್ಷೆಗೂ ಮೀರಿ ಯಶಸ್ಸುಗಳಿಸಿದ ಚಿತ್ರ. ಬಿಡುಗಡೆಗೊಂಡ ಎಲ್ಲಾ ಭಾಷೆಗಳಲ್ಲೂ ಅದ್ಧೂರಿ ಪ್ರದರ್ಶನ ಕಂಡು ಎಲ್ಲರ ಮೆಚ್ಚುಗೆ ಗಳಿಸಿದ್ದು ಇದರ  ವಿಶೇಷವಾಗಿದೆ. ಅಷ್ಟೇ ಅಲ್ಲದೆ OTT ವೇದಿಕೆಯಲ್ಲೂ ಅತಿ ಹೆಚ್ಚು ವೀಕ್ಷಣೆ ಪಡೆದ ಚಲನಚಿತ್ರ ಇದಾಗಿದೆ. ಇದನ್ನೂ ಓದಿ:ಆಮದು ಮಾಡಿಕೊಂಡ ಧರ್ಮಗಳು ಎಂದು ಚೇತನ್ ಮತ್ತೆ ಕಿಡಿ

    ಸಾಂದರ್ಭಿಕ ಚಿತ್ರ

    ಬಾಕ್ಸ್ ಆಫೀಸ್‌ನ್ನು ಕೊಳ್ಳೆ ಹೊಡೆದು ದಾಖಲೆ ನಿರ್ಮಿಸಿರುವ ಈ ಚಿತ್ರ 1000 ಕೋಟಿ ಕ್ಲಬ್ ಸೇರಿದ ಕನ್ನಡದ ಮೊದಲ ಸಿನಿಮಾವಾಗಿದೆ.  ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಅರ್ಚನ ಜೋಯಿಸ್, ರಾಮಚಂದ್ರ ರಾಜು, ಶರಣ್ ಶೆಟ್ಟಿ ,ಅಯ್ಯಪ್ಪ ಶರ್ಮಾ, ಮಾಳವಿಕ ವಿನಾಶ್, ಮೋಹನ್ ಜುನೇಜಾ, ಪ್ರಕಾಶ್ ರಾಜ್, ಅಚ್ಯುತ್ ಕುಮಾರ್ ಸೇರಿದಂತೆ ಬಹುಭಾಷಾ ತಾರೆಯರೇ ಇದರಲ್ಲಿ ನಟಿಸಿದ್ದಾರೆ. ಹೊಂಬಾಳೆ ಫಿಲಂಸ್ ಅಡಿಯಲ್ಲಿ ನಿರ್ಮಾಣಗೊಂಡ ಈ ಸಿನಿಮಾಕ್ಕೆ ಪ್ರಶಾಂತ್ ನೀಲ್ ಅವರ ನಿರ್ದೇಶನವಿದೆ. ರವಿ ಬಸ್ರೂರ್ ಅವರು ಸಂಗೀತ ಸಂಯೋಜಿಸಿದ್ದರೆ ಭುವನ್ ಗೌಡ ಛಾಯಾಗ್ರಹಣ ಮಾಡಿದ್ದಾರೆ.

    ಇದೀಗ ನಮ್ಮ ಕನ್ನಡದ ಹೆಮ್ಮೆಯ ಕೆಜಿಎಫ್ ಚಾಪ್ಟರ್ 2 ಈಗಾಗಲೇ ನಿಮ್ಮ ನೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಉತ್ತಮ ರೇಟಿಂಗ್ ಪಡೆದಿದೆ. ಇದೀಗ ಇದೇ ಶನಿವಾರ ಮಧ್ಯಾಹ್ನ 1ಗಂಟೆಗೆ ಹಾಗೂ ಸಂಜೆ 7ಗಂಟೆಗೆ ನಿಮ್ಮ ನೆಚ್ಚಿನ ಜೀ ಪಿಚ್ಚರ್‌ನಲ್ಲಿ ಪಿಚ್ಚರ್ ಪ್ರೀಮಿಯರ್ ಆಗಲಿದೆ. ಮತ್ತೊಂದು ವಿಶೇಷ ವಿಷಯವೆಂದರೆ 7ಗಂಟೆಗೆ ಸಿನಿಮಾ ಪ್ರಸಾರವಾಗುವ ವೇಳೆ ವಾಹಿನಿ ಒಂದು ಕಾಂಟೆಸ್ಟ್ ಹಮ್ಮಿಕೊಂಡಿದ್ದು ಅವರು ಕೇಳುವ ಪ್ರಶ್ನೆಗಳಿಗೆ ನೀವು ಸರಿಯಾದ ಉತ್ತರ ನೀಡಿ ಆಕರ್ಷಕ ಬಹುಮಾನ ಗೆಲ್ಲಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]