Tag: Rave Party

  • ರೇವ್ ಪಾರ್ಟಿ- ಆ್ಯಪ್‍ನಲ್ಲಿ ಬುಕ್ಕಿಂಗ್ , ಇಬ್ಬರು ಅರೆಸ್ಟ್, 30 ಜನ ವಶಕ್ಕೆ

    ರೇವ್ ಪಾರ್ಟಿ- ಆ್ಯಪ್‍ನಲ್ಲಿ ಬುಕ್ಕಿಂಗ್ , ಇಬ್ಬರು ಅರೆಸ್ಟ್, 30 ಜನ ವಶಕ್ಕೆ

    – ಪೊಲೀಸ್ ದಾಳಿಗೆ ಹೆದರಿ ಕಾಡಿನಲ್ಲೇ ಅವಿತ 30ಕ್ಕೂ ಹೆಚ್ಚು ಜನ
    – ಬಂಧಿತರಿಗೆ ಮೆಡಿಕಲ್, ಹೇರ್ ಫಾಲಿಕಲ್ ಟೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿ ಹೊರವಲಯದ ಆನೇಕಲ್ ಬಳಿ ನಡೆದ ರೇವ್ ಪಾರ್ಟಿ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಈಗಗಲೇ ಇಬ್ಬರನ್ನು ಬಂಧಿಸಿದ್ದಾರೆ. 30 ಜನರನ್ನು ವಶಕ್ಕೆ ಪಡೆದಿದ್ದಾರೆ. ಇವರೆಲ್ಲರೂ ರೆಸಾರ್ಟ್ ಪಕ್ಕದ ಕಾಡಿನಲ್ಲೇ ಉಳಿದುಕೊಂಡಿದ್ದರು. ಇದರಲ್ಲಿ ಬಹುತೇಕರು ಕೇರಳ ಮೂಲದವರು. ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ಎಂದು ತಿಳಿದು ಬಂದಿದೆ.

    30ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ದಾಳಿ ರೇಡ್ ಮಾಡುತ್ತಿದ್ದಂತೆ ಬಹುತೇಕ ಜನ ತಪ್ಪಿಸಿಕೊಂಡಿದ್ದಾರೆ. ರೇಡ್ ವೇಳೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಶಕ್ಕೆ ಪಡೆದ 30 ಜನರಿಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತಿದೆ. ಬ್ಲಡ್, ಯೂರಿನ್ ಹಾಗೂ ಹೇರ್ ಫಾಲಿಕಲ್ ಟೆಸ್ಟ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್

    ಹಿಮಾಚಲ ಪ್ರದೇಶ ಮೂಲದ ಉಗ್ರ ಆ್ಯಪ್ ಕ್ರಿಯೇಟ್ ಮಾಡಿ ಬುಕ್ ಮಾಡಿಸಿಕೊಳ್ಳುತ್ತಿದ್ದ. ಬೆಂಗಳೂರಿನ ಅಭಿಲಾಷ್ ಎಂಬಾತ ಪಾರ್ಟಿ ಆಯೋಜನೆ ಮಾಡುತ್ತಿದ್ದ. ಹೈ.ಏಪ್ ಡಾಟ್ ಕಾಮ್ ಆ್ಯಪ್ ಮೂಲಕ ಬುಕ್ ಮಾಡಿ, ಯುವಕ, ಯುವತಿಯರು ಬಂದಿದ್ದರು. ಅಲ್ಲದೆ ಐಸಿಕೆ ಲುಕ್ ಎನ್ನುವ ಆ್ಯಪ್ ಬಳಸಿ ಮಾಡೆಲ್ ಹಾಗೂ ಡಿಜೆಗಳನ್ನು  ಬುಕ್ ಮಾಡಲಾಗುತ್ತಿತ್ತು.

    ಅದೇ ರೀತಿ ನಿನ್ನೆ ರಾತ್ರಿ 8 ಗಂಟೆಗೆ ಪಾರ್ಟಿ ಪ್ರಾರಂಭವಾಗಿತ್ತು. ಆಯೋಜಕ ತಡರಾತ್ರಿ ಡಿಜೆ ಪ್ರಾರಂಭಮಾಡಿದ್ದ. ಈ ಪಾರ್ಟಿಗೆ ಗೋವಾ ಮೂಲದ ಡಿಜೆ ಬರಬೇಕಿತ್ತು. ತಡರಾತ್ರಿ ಪಾರ್ಟಿಗೆ ಬರಲು ಮಾತುಕತೆ ನಡೆದಿತ್ತು. ಕೊನೆ ಹಂತದಲ್ಲಿ ಆಯೋಜಕರಿಗೆ ಹಾಗೂ ಮಹಿಳೆಗೆ ಕಿರಿಕ್ ಆಗಿತ್ತು ಎನ್ನುವ ಮಾಹಿತಿ ಇದೆ. ಜಂಗಲ್ ಕ್ವೀನ್ ಎಂಬ ಮಾಡೆಲ್ ಪಾರ್ಟಿಗೆ ಬರಬೇಕಿತ್ತು. ಕೊನೆಗೆ ಈಕೆಯೇ ಪಾರ್ಟಿ ನಡೆಯುತ್ತಿರುವುದನ್ನು ಲೀಕ್ ಮಾಡಿರುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

    ಈ ಆಪ್ ಮೂಲಕ ಬುಕ್ ಮಾಡಿ ಪಾರ್ಟಿಗೆ ಬಂದಿದ್ದರು. ನಿಷೇಧಿತ ಪ್ರದೇಶದಲ್ಲಿ ಪಾರ್ಟಿ ನಡೆಯುತ್ತಿತ್ತು. ವೀಕೆಂಡ್ ಮಸ್ತಿಗೆ ಈ ಪ್ರದೇಶ ಹೇಳಿಮಾಡಿಸಿದಂತಿತ್ತು. ಕಾಡಿನ ಮಧ್ಯದಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಕಾಡಿನ ಮಧ್ಯದಲ್ಲಿ ಸುತ್ತಮುತ್ತ ಬಿದಿರು ಬೆಳೆದಿದ್ದು, ರೆಸಾರ್ಟ್ ಸುತ್ತಮುತ್ತ ಯಾರು ಬಂದರು ಗೊತ್ತಾಗಲ್ಲ. ಕಳೆದ ರಾತ್ರಿ ಸಹ ಬಿದಿರಿನ ಮಧ್ಯದಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು.

    ಪಾರ್ಟಿ ಆಯೋಜನೆ ಮಾಡಿದ ಜಾಗದಲ್ಲಿ ಮದ್ಯದ ಬಾಟಲಿಗಳು, ಬಟ್ಟೆಗಳು ಪತ್ತೆಯಾಗಿವೆ. ರೆಸಾರ್ಟ್ ಗೆ ಯಾವುದೇ ಅನುಮತಿ ಇರಲಿಲ್ಲ. ಇಂತಹ ಜಾಗದಲ್ಲಿ ಹಸಿರು ವ್ಯಾಲಿ ಮಾಲೀಕ ಪಾರ್ಟಿಗೆ ಅವಕಾಶ ನೀಡಿದ್ದ. ಪಾರ್ಟಿ ಆಯೋಜನೆ ಮಾಡಲು ಹಿಮಾಚಲ ಪ್ರದೇಶ ಮೂಲದ ಉಗ್ರ ಎಂಬಾತನಿಗೆ ನೇತೃತ್ವ ನೀಡಲಾಗಿತ್ತು. ಪಾರ್ಟಿಗೆ ಬಂದಿದ್ದವರು ಬಹುತೇಕ ಕೇರಳ ಹಾಗೂ ಕರ್ನಾಟಕ ಮೂಲದವರು. ನಿಷೇಧಿತ ಪ್ರದೇಶ ಬನ್ನೇರುಘಟ್ಟ ಕಾಡಂಚಿನಲ್ಲಿ ಭರ್ಜರಿ ಪಾರ್ಟಿ ಮಾಡಲಾಗಿದೆ. ಪೊಲೀಸರು ರೈಡ್ ಮಾಡುವಾಗ ಡಿಜೆ ಹಾಕಿ ಕುಣಿದು ಕುಪ್ಪಳಿಸುತ್ತಿದ್ದರು. ಪಾರ್ಟಿಯಲ್ಲಿ ಭಾಗಿಯಾಗಿದ್ದ ಯುವಕ, ಯುವತಿಯರು, ವಾಹನಗಳು, ಡಿಜೆಗೆ ಬಳಸಿದ್ದ ಸೌಂಡ್ ಸಿಸ್ಟಮ್ ವಶಕ್ಕೆ ಪಡೆಯಲಾಗಿದೆ. ಮೂವತ್ತಕ್ಕೂ ಹೆಚ್ಚು ಯುವಕ, ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.


    ರಾತ್ರಿ ಪೊಲೀಸರು ದಾಳಿ ಮಾಡಿದ ವೇಳೆ ತಪ್ಪಿಸಿಕೊಂಡು ರೆಸಾರ್ಟ್ ಪಕ್ಕದ ಕಾಡಿನಲ್ಲೇ 30ಕ್ಕೂ ಹೆಚ್ಚು ಜನ ಉಳಿದಿದ್ದರು. ಆನೇಕಲ್ ಪೊಲೀಸರು ಬೆಳಗ್ಗೆ ಕಾರ್ಯಾಚರಣೆಗಿಳಿದಾಗ ಯುವಕರು ಗುಡ್ಡ ಹಾಗೂ ಕಾಡಿನಲ್ಲಿ ನಡೆದು ಬರುತ್ತಿದ್ದರು. ಬಹುತೇಕ ಯುವಕರು ಬೆಂಗಳೂರಿನ ಖಾಸಗಿ ಕಂಪನಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಎಂಬ ಮಾಹಿತಿ ಲಭ್ಯವಾಗಿದೆ.

  • ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್

    ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್

    – ವಿದ್ಯಾರ್ಥಿಗಳು ಸೇರಿ 20 ಜನ ವಶಕ್ಕೆ

    ಬೆಂಗಳೂರು: ನಗರದ ಹೊರ ವಲಯದಲ್ಲಿ ರೇವ್ ಪಾರ್ಟಿ ನಡೆದಿರುವುದು ಮತ್ತೆ ಬೆಳಕಿಗೆ ಬಂದಿದ್ದು, ಒಟ್ಟು 20 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ರೆಸಾರ್ಟ್‍ಗೆ ಎಂಟ್ರಿ ಕೊಡುತ್ತಿದ್ದಂತೆ ಯುವಕ, ಯುವತಿಯರು ಎದ್ನೋ ಬಿದ್ನೋ ಎಂದು ಓಡಿದ್ದಾರೆ. ಡ್ರಗ್ಸ್ ಸೇವಿಸಿ ಅರೆ ನಗ್ನ ಸ್ಥಿತಿಯಲ್ಲಿದ್ದ ಕೆಲವರನ್ನು ಖಾಕಿ ಪಡೆ ಹಿಡಿದಿದೆ. ರೇವ್ ಪಾರ್ಟಿಯ ಡ್ರಗ್ಸ್ ಜಾಲದಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ನಗರದ ಹೊರ ವಲಯದ ಆನೇಕಲ್ ಬಳಿಯ ತಮ್ಮನಾಯಕನಹಳ್ಳಿ ಸಮೀಪವಿರುವ ಹಸಿರು ವ್ಯಾಲ್ಯೂ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ ಎಗ್ಗಿಲದೇ ನಡೆಯುತ್ತಿದ್ದು, ಗಾಂಜಾ ಸೇರಿದಂತೆ ವಿವಿಧ ಡ್ರಗ್ಸ್ ಸೇವಿಸಿ, ತುಂಡುಡುಗೆ ತೊಟ್ಟು ಮಹಿಳೆಯರು ಹುಚ್ಚೆದ್ದು ಕುಣಿದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಆನೇಕಲ್ ಪೊಲೀಸರು 20 ಜನರನ್ನು ವಶಕ್ಕೆ ಪಡೆದಿದ್ದಾರೆ. 6 ಕಾರು ಸೇರಿದಂತೆ 15ಕ್ಕೂ ಹೆಚ್ಚು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ವಿದ್ಯಾಪೀಠಕ್ಕೆ ಉತ್ತಮ ಪ್ರತಿಕ್ರಿಯೆ – ಎರಡನೇ ದಿನದ ಕಾರ್ಯಕ್ರಮಗಳು ಏನು?

    ರೆಸಾರ್ಟ್ ನ ನಿರ್ಜನ ಪ್ರದೇಶದಲ್ಲಿ ಹುಡುಗ, ಹುಡಿಗಿಯರು ರೇವ್ ಪಾರ್ಟಿ ನಡೆಸಿದ್ದು, ಗಾಂಜಾ ಸೇರಿದಂತೆ ವಿವಿಧ ಡ್ರಗ್ಸ್ ಸೇವಿಸಿ ಹುಚ್ಚೆದ್ದು ಕುಣಿದಿದ್ದಾರೆ. ಅರ್ಧಂಬಂರ್ಧ ಬಟ್ಟೆ ಹಾಕಿರುವ ಯುವಕ, ಯುವತಿಯರು ಡ್ರಗ್ಸ್ ನಶೆಯಲ್ಲಿ ತೇಲಿದ್ದಾರೆ.

    ಮಧ್ಯ ರಾತ್ರಿ ನಡೆದ ಡ್ರಗ್ಸ್ ಪೆಡ್ಲರ್ ಗಳನ್ನು ಹಿಡಿಯೋ ಆಪರೇಷನ್ ಇದಾಗಿದ್ದು, ಪೊಲೀಸರು ರೆಸಾರ್ಟ್‍ಗೆ ಎಂಟ್ರಿ ಕೊಡುತ್ತಿದ್ದಂತೆ ಯುವಕ, ಯುವತಿಯರು ಎದ್ನೋ ಬಿದ್ನೋ ಎಂದು ಓಡಿದ್ದಾರೆ. ಡ್ರಗ್ಸ್ ಸೇವಿಸಿ ಅರೆ ನಗ್ನ ಸ್ಥಿತಿಯಲ್ಲಿದ್ದ ಕೆಲವರನ್ನು ಖಾಕಿ ಪಡೆ ಹಿಡಿದು ಹಾಕಿದೆ. ರೇವ್ ಪಾರ್ಟಿಯ ಡ್ರಗ್ಸ್ ಜಾಲದಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಡ್ರಗ್ಸ್ ಸೇವಿಸಿ ಅರೆನಗ್ನ ಸ್ಥಿತಿಯಲ್ಲಿ ಕುಣಿದಿದ್ದಲ್ಲದೆ ನಾವು ತಪ್ಪೇ ಮಾಡಿಲ್ಲ ಎಂದು ಪೋಸ್ ನೀಡಿದ್ದಾರೆ.

  • ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ – ಸುಮಾರು 500 ಯುವಕ-ಯುವತಿಯರಿಂದ ಪಾರ್ಟಿ

    ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ – ಸುಮಾರು 500 ಯುವಕ-ಯುವತಿಯರಿಂದ ಪಾರ್ಟಿ

    ರಾಮನಗರ: ಜಿಲ್ಲೆಯ ಗ್ರಾಮಾಂತರ ಪೊಲೀಸರು ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ ನಡೆಸಿ 10 ಜನರನ್ನು ವಶಕ್ಕೆ ಪಡೆದಿರುವ ಘಟನೆ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ.

    ವಿಭೂತಿಕೆರೆ ಗ್ರಾಮದಲ್ಲಿನ ಬೆಂಗಳೂರು ಮೂಲದ ವೆಂಕಟೇಶ್ ಅವರ ಜಮೀನಿನಲ್ಲಿ ತಡರಾತ್ರಿ ಅಬ್ಬರದ ರೇವ್ ಪಾರ್ಟಿಯನ್ನ ನಡೆಸಲಾಗುತ್ತಿತ್ತು. ಸುಮಾರು 500 ಜನ ಕೇರಳ, ತಮಿಳುನಾಡು ಹಾಗೂ ಬೆಂಗಳೂರಿನ ಯುವಕ ಮತ್ತು ಯುವತಿಯರು ಸೇರಿ ಪಾರ್ಟಿ ಮಾಡುತ್ತಿದ್ದರು. ತಡರಾತ್ರಿಯಲ್ಲೂ ಸಹ ಪಾರ್ಟಿ, ಡಿಜೆ ಸೌಂಡ್ ಕೇಳಿದ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಒಂದು ಆಪ್ ಮೂಲಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಬೆಂಗಳೂರಿನ ಮಧುಮಿತ, ಪೌರಾಣಿಕ್ ಪುರೋಹಿತ್, ನಬಿರಾ, ರಿಚು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಗ್ರಾಮಸ್ಥರು ನೀಡಿದ ಮಾಹಿತಿಯ ಆಧಾರದ ಮೇರೆಗೆ ಪೊಲೀಸರು ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ.

    ಈ ವೇಳೆ ಮದ್ಯ, ಡಿಜೆ ಬಾಕ್ಸ್ ಗಳು, ಶಾಮಿಯಾನ, ಕ್ಯಾಮೆರಾ ಸೇರಿದಂತೆ ಹಲವು ವಸ್ತುಗಳು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸುಮಾರು 10 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಅಕ್ರಮ ರೇವ್ ಪಾರ್ಟಿಗಳಿಗೆ ಸಿಸಿಬಿ ಶಾಕ್- 150 ಮಂದಿ ಅರೆಸ್ಟ್

    ಅಕ್ರಮ ರೇವ್ ಪಾರ್ಟಿಗಳಿಗೆ ಸಿಸಿಬಿ ಶಾಕ್- 150 ಮಂದಿ ಅರೆಸ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ರೇವ್ ಪಾರ್ಟಿ ಮೇಲೆ ಶನಿವಾರ ತಡರಾತ್ರಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

    ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಮಂದಿ ಪೊಲೀಸರು ನಗರದ ಮಹಾಲಕ್ಷ್ಮೀ ಲೇಔಟ್ ಬಳಿಯ ಆರ್.ಜೆ ರಾಯಲ್ಸ್ ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 50 ಮಂದಿ ವಿದೇಶೀಯರು ಸೇರಿ 150 ಜನರನ್ನು ಬಂಧಿಸಲಾಗಿದೆ.

    ಬೆಳಗ್ಗಿನ ಜಾವ 4 ಗಂಟೆಯವರೆಗೂ ರೇವ್ ಪಾರ್ಟಿ ನಡೆಯುತ್ತಿತ್ತು. ಪಾರ್ಟಿ ವೇಳೆ ಮಾದಕ ದ್ರವ್ಯಗಳ ಬಳಕೆ ಬಗ್ಗೆ ಸಿಸಿಬಿ ಅಧಿಕಾರಿಗಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಹಾಡುಗಳನ್ನ ಹಾಕಿ ಗ್ರಾಹಕರಿಗೆ ನೃತ್ಯ ಮಾಡಲು ಅವಕಾಶ ನೀಡಿದ ಆರೋಪ ಸಂಬಂಧ ಅಶೋಕ ನಗರದ ಬೈಚಾನ್ಸ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೂ ದಾಳಿ ಮಾಡಲಾಗಿದೆ. ಧ್ವನಿವರ್ಧಕ ಬಳಸಿ ಮಿತಿ ಮೀರಿದ ಸದ್ದಿನಲ್ಲಿ ಕುಣಿತಕ್ಕೆ ಅವಕಾಶ ನೀಡಲಾಗುತ್ತಿತ್ತು. ಹೋಟೆಲ್ ಮಾಲೀಕ, ಮ್ಯಾನೇಜರ್ ಸೇರಿ 25ಕ್ಕೂ ಹೆಚ್ಚು ಮಂದಿ ಗ್ರಾಹಕರನ್ನು ಬಂಧಿಸಲಾಗಿದೆ. ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗೋಕರ್ಣದಲ್ಲಿ ರೇವ್ ಪಾರ್ಟಿ- ವಿದೇಶಿಗರು ಸೇರಿ ಮೂವರ ಬಂಧನ!

    ಗೋಕರ್ಣದಲ್ಲಿ ರೇವ್ ಪಾರ್ಟಿ- ವಿದೇಶಿಗರು ಸೇರಿ ಮೂವರ ಬಂಧನ!

    ಕಾರವಾರ: ರೇವ್ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ವಿದೇಶಿಗರು ಸೇರಿ ಮೂವರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಕಡಲ ತೀರದ ಬಳಿ ನಡೆದಿದೆ.

    ಅರಣ್ಯದಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಮಾದಕವಸ್ತುಗಳಾದ ಚರಸ್ ಹಾಗೂ ಕೆಟೋಮಿನ್ ಇಟ್ಟುಕೊಂಡಿದ್ದ ಇಸ್ರೇಲ್ ಮೂಲದ ಗೆಲ್‍ಸೆಲ್ ಮನ್(30), ಪಿಂಟೋ(30) ಹಾಗೂ ಕಾಸರಗೋಡು ಮೂಲದ ಗೋಕರ್ಣದ ರೆಗ್ಯುಲರ್ ರೆಸಾರ್ಟ್ ನಲ್ಲಿ ಕೆಲಸ ಮಾಡುವ ಇರ್ಫಾನ್ ಎಂಬವರನ್ನು ಬಂಧನ ಮಾಡಲಾಗಿದೆ.

    ಕುಡ್ಲೆ ಕಡಲ ತೀರದ ರೆಗ್ಯೂಲಸ್ ರೆಸಾರ್ಟ್ ಹಾಗೂ ಅರಣ್ಯವೊಂದರಲ್ಲಿ ಪಾರ್ಟಿ ನಡೆಸಲಾಗುತಿತ್ತು. ರಾತ್ರಿ ವೇಳೆ ನಡೆಸುತ್ತಿದ್ದ ಪಾರ್ಟಿಯ ಮೇಲೆ ದಾಳಿ ನಡೆಸಲಾಗಿದೆ. ಈ ಪಾರ್ಟಿಯಲ್ಲಿ ಮಾದಕದ್ರವ್ಯ ಹಾಗೂ ಮಾದಕ ವಸ್ತುಗಳನ್ನ ಬಳಸಲಾಗುತ್ತಿದೆ ಎನ್ನುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.

    ಎರಡು ಕಡೆ ಪಾರ್ಟಿಯಲ್ಲಿ ಬಳಸಿದ್ದ ಮದ್ಯ, ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಸೌಂಡ್ ಸಿಸ್ಟಮ್ ಗಳನ್ನ ವಶಕ್ಕೆ ಸಹ ಪಡೆಯಲಾಗಿದೆ. ಗೋಕರ್ಣದ ಸಿಪಿಐ ಸಂತೋಷ್ ಶಟ್ಟಿ, ಪಿ.ಎಸ್,ಐ ಸಂತೋಷ್, ಅಂಕೋಲದ ಪಿಎಸ್‍ಐ ನೇತೃತ್ವದಲ್ಲಿ ದಾಳಿ ನಡೆದಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೇವ್ ಪಾರ್ಟಿ ಅಡ್ಡೆಗೆ ಪೊಲೀಸರ ದಾಳಿ- ಆರೋಪಿಗಳ ಬಂಧನ

    ರೇವ್ ಪಾರ್ಟಿ ಅಡ್ಡೆಗೆ ಪೊಲೀಸರ ದಾಳಿ- ಆರೋಪಿಗಳ ಬಂಧನ

    ಮಡಿಕೇರಿ: ರೇವ್ ಪಾರ್ಟಿ ಅಡ್ಡೆಗೆ ಕೊಡಗು ಜಿಲ್ಲಾ ಪೊಲೀಸರು ದಾಳಿ ನಡೆಸಿದ್ದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಹಾರಾಷ್ಟ್ರ ಮೂಲದ ಜೂಡ್ ಪರೇರ, ಶಂಕರ್ ಶಾಂತನು, ಬೆಂಗಳೂರು ಮೂಲದ ಸಾಯಿರಾಮ್, ಈಶ್ವರ್ ಸೇರಿದಂತೆ ಹೋಂ ಸ್ಟೇ ಮಾಲೀಕ ಮಾಳೆಯಂಡ ಅಪ್ಪಣ್ಣನನ್ನು ಪೊಲೀಸರು ಬಂಧಿಸಿದ್ದಾರೆ. ಮಡಿಕೇರಿ ತಾಲೂಕಿನ ನಾಪೊಕ್ಲುನ ನೆಲಜಿ ಎ1 ಗ್ಲಾಂಪಿಂಗ್ ಹೋಂ ಸ್ಟೇಯೊಂದರಲ್ಲಿ ರೇವ್ ಪಾರ್ಟಿ ಆಯೋಜನೆಯಾಗಿತ್ತು.

    ಪೊಲೀಸರು ಈ ಹೋಂ ಸ್ಟೇ ಮೇಲೆ ದಾಳಿ ನಡೆಸಿ ಆರೋಪಿಗಳಿಂದ 205.15 ಗ್ರಾಂ ಗಾಂಜಾ ಸೊಪು, 29 ಗ್ರಾಂ ಚರಸ್ ಸೇರಿದಂತೆ ಗಾಂಜಾ, ಹುಕ್ಕಾ ಸಾಧನಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಮಾದಕ ವಸ್ತು ಮಾರಾಟ ಮಾಡಿ ಇಟ್ಟುಕೊಂಡಿದ್ದ 1,75, 500ರೂ. ಹಣವನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಕೊಡಗು ಜಿಲ್ಲಾ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv