Tag: Rave Party

  • ರೇವ್ ಪಾರ್ಟಿ ಪ್ರಕರಣ- ಹೆಬ್ಬಗೋಡಿ ಠಾಣೆಯ ASI ಸೇರಿ ಮೂವರ ಅಮಾನತು

    ರೇವ್ ಪಾರ್ಟಿ ಪ್ರಕರಣ- ಹೆಬ್ಬಗೋಡಿ ಠಾಣೆಯ ASI ಸೇರಿ ಮೂವರ ಅಮಾನತು

    ಬೆಂಗಳೂರು: ನಗರದ ಹೊರವಲಯದಲ್ಲಿ ನಡೆದಿರುವ ರೇವ್ ಪಾರ್ಟಿ (Rave Party) ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಹೆಬ್ಬಗೋಡಿ ಪೆÇಲೀಸ್ ಠಾಣೆ ಸಿಬ್ಬಂದಿಗೆ ತಲೆ ತಂಡ ಫಿಕ್ಸ್ ಆಗಿದೆ. ಹೆಬ್ಬಗೋಡಿ ಠಾಣೆಯ (Hebbagodi Police Station) ಮೂವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

    ಇಬ್ಬರು ಕಾನ್ಸ್ ಟೇಬಲ್ ಹಾಗೂ ಓರ್ವ ಎಎಸ್‍ಐ ಸೇರಿ ಮೂವರನ್ನು ಸಂಸ್ಪೆಂಡ್ ಮಾಡಲಾಗಿದೆ. ರೇವ್ ಪಾರ್ಟಿ ಬಗ್ಗೆ ಮಾಹಿತಿ ಕಲೆ ಹಾಕಲು ವಿಫಲವಾಗಿರೋ ಆರೋಪದ ಮೇಲೆ ಎಎಸ್‍ಐ ನಾರಾಯಣಸ್ವಾಮಿ, ಬೀಟ್ ಪೊಲೀಸ್ ದೇವರಾಜ್ ಹಾಗೂ ಎಸ್‍ಐ ಗಿರೀಶ್ ಅಮಾನತಾಗಿದ್ದಾರೆ. ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಈ ಆದೇಶ ಹೊರಡಿಸಿದ್ದಾರೆ.

    ರೇವ್ ಪಾರ್ಟಿ ಪ್ರಕರಣ: ನಗರದ ಹೊರವಲಯದಲ್ಲಿ ಬರ್ತ್‍ಡೇ ಪಾರ್ಟಿ ಹೆಸರಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಆದರೆ ಈ ಪಾರ್ಟಿ ಒಂದು ದಿನದ್ದಲ್ಲ, ಮೂರು ದಿನಗಳದ್ದು ಅನ್ನೋದು ತಡವಾಗಿ ಬೆಳಕಿಗೆ ಬಂದಿದೆ. ಶುಕ್ರವಾರ ಸಂಜೆಯಿಂದ ಆರಂಭವಾದ ಪಾರ್ಟಿ ಸೋಮವಾರ ಬೆಳಗ್ಗೆ ತನಕ ಫಿಕ್ಸ್ ಆಗಿತ್ತು. ಶುಕ್ರವಾರ, ಶನಿವಾರ ಬಿಂದಾಸ್ ಆಗಿ ಪಾರ್ಟಿ ಮಾಡಿದ್ದವರು, ಭಾನುವಾರ ರಾತ್ರಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತನಿಖೆ ವೇಳೆ 3 ದಿನ ಆಯೋಜಿಸಿದ್ದ ರೇವ್ ಪಾರ್ಟಿ ಅನ್ನೋ ರಹಸ್ಯ ಹೊರಬಿದ್ದಿದೆ.

    ಶ್ರೀಮಂತರ ರೇವ್ ಪಾರ್ಟಿಯಲ್ಲಿ ಸೆಲೆಬ್ರಿಟಿಗಳು, ಟೆಕ್ಕಿಗಳು, ಹಣವಂತರೆಲ್ಲ ಭಾಗಿಯಾಗಿರೋದು ಕೂಡ ಬೆಳಕಿಗೆ ಬಂದಿದೆ. ರೇವ್ ಪಾರ್ಟಿ ಮಾಡಿದ್ದವರ ವಿರುದ್ಧ ಎಫ್ ಐಆರ್ ಮಾಡಿಕೊಂಡು ಈಗಾಗ್ಲೇ ಐದು ಮಂದಿಯನ್ನ ಅರೆಸ್ಟ್ ಮಾಡಿ, ಜೈಲಿಗೆ ಕಳಿಸಿದ್ದಾರೆ. ಜೈಲಿನಲ್ಲಿರೋ , ವಾಸು, ಅರುಣ್ ಕುಮಾರ್, ನಾಗಬಾಬ, ಗೋಪಾಲ್ ರೆಡ್ಡಿ ಸೇರಿ 6 ಮಂದಿಯನ್ನ ಸಿಸಿಬಿ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಒಳಪಡಿಸಿದ್ದಾರೆ. ತನಿಖೆಯಿಂದ ರೇವ್ ಪಾರ್ಟಿ ರಹಸ್ಯ ಮತ್ತಷ್ಟು ಬಯಲಾಗುವ ಸಾದ್ಯತೆಗಳು ಹೆಚ್ಚಾಗಿವೆ.

  • ರೇವ್ ಪಾರ್ಟಿ ಪ್ರಕರಣ: 86 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್!

    ರೇವ್ ಪಾರ್ಟಿ ಪ್ರಕರಣ: 86 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್!

    – ನಟಿ ಹೇಮಾ ಪಾರ್ಟಿಯಲ್ಲಿ ಭಾಗಿಯಾಗಿರೋದು ದೃಢ

    ಬೆಂಗಳೂರು: ಇಲ್ಲಿನ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಫಾರ್ಮ್ ಹೌಸ್‌ನಲ್ಲಿ ನಡೆದಿದ್ದ ರೇವ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಭಾಗವಹಿಸಿದ್ದ 103 ಮಂದಿಯ ಪೈಕಿ 86 ಮಂದಿಯ ಬ್ಲಡ್‌ ರಿಪೋರ್ಟ್ ಪಾಸಿಟಿವ್ ಬಂದಿದೆ.

    73 ಮಂದಿ ಪುರುಷರಲ್ಲಿ 59 ಮಂದಿ ಹಾಗೂ 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಎಂದು ಬಂದಿದೆ. ಈ ಮೂಲಕ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ತೆಲುಗು ಕಿರುತೆರೆ ನಟಿ ಹೇಮ(ಕೃಷ್ಣವೇಣಿ) ಪಾಲ್ಗೊಂಡಿರುವುದು ಬಯಲಾಗಿದೆ. ಯಾಕೆಂದರೆ ಈಕೆಯ ಬ್ಲಡ್‌ ರಿಪೋರ್ಟ್‌ನಲ್ಲಿ ಮಾದಕ ವಸ್ತು ತೆಗೆದುಕೊಂಡಿರುವುದು ಸಾಬೀತಾಗಿದೆ.

    ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆ ಮಾಡಿರುವ ಸುಳಿವು ಸಿಕ್ಕಿದೆ. ಎಂಡಿಎಂಎ, ಕೊಕೇನ್, ಹೈಡೋಗಾಂಜಾ ಪತ್ತೆಯಾಗಿದೆ. ಸದ್ಯ ಬ್ಲಡ್ ರಿಪೋರ್ಟ್ ನಲ್ಲಿ ಪಾಸಿಟಿವ್ ಬಂದವರಿಗೆ ಸಿಸಿಬಿ ನೋಟೀಸ್ ನೀಡಲು ಮುಂದಾಗಿದೆ. ಇದನ್ನೂ ಓದಿ: ರೇವ್ ಪಾರ್ಟಿ ಸಂಕಷ್ಟ- ಹೇಮಾ ಕೂದಲು ಸ್ಯಾಂಪಲ್ ಟೆಸ್ಟ್‌ಗೆ ಮುಂದಾದ ಪೊಲೀಸ್ರು

    ವಾಸು ಎಂಬಾತನ ಹುಟ್ಟುಹಬ್ಬದ ಅಂಗವಾಗಿ Sunset To Sun Rise victory ಶೀರ್ಷಿಕೆಯಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ನೂರರಿಂದ ನೂರೈವತ್ತು ಮಂದಿ ಜಮಾವಣೆಗೊಂಡಿದ್ದರು ಎನ್ನಲಾಗಿದೆ.

  • ರೇವ್ ಪಾರ್ಟಿ ಸಂಕಷ್ಟ- ಹೇಮಾ ಕೂದಲು ಸ್ಯಾಂಪಲ್ ಟೆಸ್ಟ್‌ಗೆ ಮುಂದಾದ ಪೊಲೀಸ್ರು

    ರೇವ್ ಪಾರ್ಟಿ ಸಂಕಷ್ಟ- ಹೇಮಾ ಕೂದಲು ಸ್ಯಾಂಪಲ್ ಟೆಸ್ಟ್‌ಗೆ ಮುಂದಾದ ಪೊಲೀಸ್ರು

    ಬೆಂಗಳೂರು: ಇಲ್ಲಿನ ಸಿಂಗೇನ ಅಗ್ರಹಾರ ಬಳಿಯ ಜಿಆರ್ ಫಾರ್ಮ್‍ಹೌಸ್‍ನಲ್ಲಿ ನಡೀತಿದ್ದ ರೇವ್‍ಪಾರ್ಟಿ (Rave Party) ಇದೀಗ ತೆಲುಗು ನಟಿ ಹೇಮಾಗೆ ಸಂಕಷ್ಟ ತಂದೊಡ್ಡಿದೆ.

    ತೆಲುಗು ನಟಿ ಹೇಮಾ (Telugu Actress Hema) ಪಾರ್ಟಿಯಲ್ಲಿ ಇದ್ದದ್ದು ಈಗ ಜಗಜ್ಜಾಹೀರವಾಗಿದೆ. ಈ ಕುರಿತು ಖುದ್ದು ಪೊಲೀಸ್ ಆಯುಕ್ತ ದಯಾನಂದ್, ತೆಲುಗಿನ ಖ್ಯಾತ ನಟಿ ಪಾರ್ಟಿಯಲ್ಲಿ ಇದ್ದಿದ್ದನ್ನು ಬಹಿರಂಗಗೊಳಿಸಿದ್ದಾರೆ. ಇನ್ನೂ ಪಾರ್ಟಿಯಲ್ಲಿ ಇದ್ದರೂ ಕೂಡ, ನಾನು ಹೈದ್ರಾಬಾದ್‍ನಲ್ಲಿದ್ದೇನೆ ಅಂತ ನಾಟಕವಾಡಿದ್ದ ನಟಿ ಹೇಮಾಗೆ ಈಗ ಸಂಕಷ್ಟ ಎದುಗುವ ಸಾಧ್ಯತೆ ಇದೆ.

    ಸ್ಟೇಷನ್ ಬೇಲ್ ಮೇಲೆ ರಕ್ತದ ಮಾದತಿ ಕೊಟ್ಟು ಹೋಗಿರೋ ನಟಿಗೆ ಪೊಲೀಸರು ಮಾಸ್ಟರ್ ಸ್ಟ್ರೋಕ್ ಕೊಡಲು ಮುಂದಾಗಿದ್ದಾರೆ ಅನ್ನೋದು ಗೊತ್ತಾಗಿದೆ. ರೇವ್ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದ ತೆಲುಗು ನಟಿ ಹೇಮಾಗೆ ಪೊಲೀಸರು ಬ್ಲಡ್ ಸ್ಯಾಂಪಲ್ ಪಡೆದು ಕಳಿಸಿದ್ದಾರೆ. ಬ್ಲಡ್ ಸ್ಯಾಂಪಲ್ ನಲ್ಲಿ ಪಾಸಿಟಿವ್ ಬಂದರೆ ಹೇರ್ ಪಾಲಿಕಲ್ ಟೆಸ್ಟ್ ಮಾಡಿಸಲು ಪೊಲೀಸರು ಮುಂದಾಗಿದ್ದಾರೆ. ಡ್ರಗ್ಸ್ ಸೇವನೆ ಮಾಡಿರೋದು ಹೇರ್ ಪಾಲಿಕಲ್ ಟೆಸ್ಟ್ ನಲ್ಲಿ ಗೊತ್ತಾಗಾಲಿದೆ. ಹಾಗಾಗಿ ಪೊಲೀಸ್ ಹೇರ್ ಪಾಲಿಕ್ ಟೆಸ್ಟ್ ಮೊರೆ ಹೋಗಲು ಮುಂದಾಗಿದ್ದಾರೆ. ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿಯಾಗಿದ್ದು ನಿಜ: ಪೊಲೀಸ್ ಕಮಿಷನರ್ ಸ್ಪಷ್ಟನೆ

  • ರೇವ್ ಪಾರ್ಟಿಯಲ್ಲಿ ಗಾಂಜಾ, ಡ್ರಗ್ಸ್ ಸಿಕ್ಕಿದೆ – ಪಾಲ್ಗೊಂಡವರ ಹೆಸರು ಪೊಲೀಸರ ಬಳಿ ಇದೆ: ಪರಮೇಶ್ವರ್

    ರೇವ್ ಪಾರ್ಟಿಯಲ್ಲಿ ಗಾಂಜಾ, ಡ್ರಗ್ಸ್ ಸಿಕ್ಕಿದೆ – ಪಾಲ್ಗೊಂಡವರ ಹೆಸರು ಪೊಲೀಸರ ಬಳಿ ಇದೆ: ಪರಮೇಶ್ವರ್

    ಬೆಂಗಳೂರು: ಸೋಮವಾರ ನಡೆದ ರೇವ್ ಪಾರ್ಟಿ (Rev Party) ಮೇಲಿನ ಸಿಸಿಬಿ ದಾಳಿಯಲ್ಲಿ (CCB Raid) ಗಾಂಜಾ, ಡ್ರಗ್ಸ್ ಹಾಗೂ ಸಿಂಥೆಟಿಕ್ ಡ್ರಗ್ಸ್ ಸಿಕ್ಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸೋಮವಾರ ಬೆಂಗಳೂರಿನಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು ಎಂದು ಸಿಸಿಬಿಯವರು ದಾಳಿ ಮಾಡಿದ್ದಾರೆ. ಯಾರ‍್ಯಾರು ಬಂದಿದ್ದರು ಎಂದು ಪೊಲೀಸರು ಮಾಹಿತಿ ತೆಗೆದುಕೊಂಡಿದ್ದಾರೆ. ದಾಳಿ ವೇಳೆ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಪತ್ತೆ ಆಗಿದೆ. ಕಾನೂನು ಪ್ರಕಾರ ಕ್ರಮ ಆಗಲಿದೆ. ಡ್ರಗ್ಸ್ ಫ್ರೀ ರಾಜ್ಯ ಮಾಡಬೇಕು ಎಂದು ಇದ್ದೇವೆ. ಸಾವಿರಾರು ಕೋಟಿ ಡ್ರಗ್ಸ್ ದಂಧೆ ಹಿಡಿದಿದ್ದೇವೆ. ಡ್ರಗ್ಸ್ ಪೂರೈಕೆ, ಸಾಗಣೆ ಹತ್ತಿಕ್ಕುವ ಕೆಲಸ ಆಗುತ್ತಿದೆ. ಗಾಂಜಾ ಎಲ್ಲಿಂದ ಬರುತ್ತೆ ಎಂದು ಮಾಹಿತಿ ಮೇಲೆ ಹಿಡಿಯುತ್ತೇವೆ. ಪೆಡ್ಲರ್ಸ್ ಯಾರಿದ್ದಾರೆ ಅವರನ್ನು ಹಿಡಿಯವುದು ಬಹಳ ಮುಖ್ಯ. ಸ್ಟೂಡೆಂಟ್ಸ್ ಎಂದು ಹೇಳಿಕೊಂಡು ಇಲ್ಲಿ ಬಂದು ಕೃತ್ಯ ಮಾಡುತ್ತಾರೆ. ಅವರ ಮೇಲೆ ನಿಗಾ ಇಟ್ಟಿದ್ದೇವೆ ಎಂದರು. ಇದನ್ನೂ ಓದಿ: ನಮ್ಮ ಆಡಳಿತಾವಧಿಯಲ್ಲಿ ಎನ್‌ಕೌಂಟರ್‌ಗಳಾಗಿದ್ದರೆ ಇವತ್ತು ಇಂತಹ‌ ಕೃತ್ಯಗಳಾಗುತ್ತಿರಲಿಲ್ಲ: ಯತ್ನಾಳ್‌

    ವಿದೇಶಾಂಗ ಇಲಾಖೆ ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ (Diplomatic Passport) ರದ್ದು ಮಾಡಿದರೆ, ಪ್ರಜ್ವಲ್ (Prajwal Revanna) ವಿದೇಶದಲ್ಲಿ ಇರಲು ಆಗಲ್ಲ. ವಾಪಸ್ ಬರಲೇಬೇಕಾಗುತ್ತದೆ. ಪ್ರಜ್ವಲ್ ಅರೆಸ್ಟ್ ವಾರಂಟ್ ಆಧಾರದಲ್ಲಿ ಡಿಪ್ಲೋಮ್ಯಾಟಿಕ್ ಪಾಸ್‌ಪೋರ್ಟ್ ರದ್ದತಿಗೆ ಎಸ್‌ಐಟಿ ಪತ್ರ ಬರೆದಿದೆ. ಈಗಾಗಲೇ ಪ್ರಧಾನಿಯವರಿಗೆ ಸಿಎಂ ಸಹ ಪತ್ರ ಬರೆದಿದ್ದರು. ಇದರಲ್ಲಿ ವಿದೇಶಾಂಗ ಇಲಾಖೆಯ ಸಹಕಾರ ಅಗತ್ಯವಿದೆ. ಇನ್ನು ಎಲ್ ಆರ್ ಶಿವರಾಮೇಗೌಡ ಮತ್ತು ವಕೀಲ ದೇವರಾಜೇಗೌಡ ಆಡಿಯೋ ಕುರಿತ ತನಿಖೆಯನ್ನು ನಡೆಸಬೇಕಾ ಬೇಡವಾ ಎಂದು ಎಸ್‌ಐಟಿ (SIT) ನಿರ್ಧಾರ ಮಾಡಲಿದೆ. ಎಸ್‌ಐಟಿಗೆ ಸರ್ಕಾರ ಫ್ರೀ ಹ್ಯಾಂಡ್ ಕೊಟ್ಟಿದೆ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ CWMA ಸೂಚನೆ

    ಕುಮಾರಸ್ವಾಮಿ ಪ್ರಜ್ವಲ್ ವಾಪಸ್ ಬರಲಿ ಎಂದು ಕರೆದಿದ್ದು ಅವರ ಕುಟುಂಬದ ವಿಚಾರ. ಪ್ರಜ್ವಲ್ ವಾಪಸ್ ಬಂದು ಕೇಸ್ ಎದುರಿಸಲಿ. ಸರ್ಕಾರ ಯಾರ ಫೋನ್ ಟ್ಯಾಪ್ ಮಾಡಿಲ್ಲ ಎಂದು ನಿನ್ನೆಯೇ (ಸೋಮವಾರ) ಹೇಳಿದ್ದೇನೆ. ಟ್ಯಾಪಿಂಗ್ ಬಗ್ಗೆ ಹೆಚ್‌ಡಿಕೆ ಬಳಿ ನಿಖರ ಮಾಹಿತಿ ಇದ್ದರೆ ಕೊಡಲಿ, ತನಿಖೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಲಂಡನ್‌-ಸಿಂಗಾಪುರ ವಿಮಾನದಲ್ಲಿ ಪ್ರಕ್ಷುಬ್ಧತೆ; ಓರ್ವ ಸಾವು, 30 ಪ್ರಯಾಣಿಕರಿಗೆ ಗಾಯ

  • ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿಯಾಗಿದ್ದು ನಿಜ: ಪೊಲೀಸ್ ಕಮಿಷನರ್ ಸ್ಪಷ್ಟನೆ

    ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿಯಾಗಿದ್ದು ನಿಜ: ಪೊಲೀಸ್ ಕಮಿಷನರ್ ಸ್ಪಷ್ಟನೆ

    ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿ (Rave Party) ಪ್ರಕರಣದಲ್ಲಿ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ತಿದೆ. ಈ ಪ್ರಕರಣದಲ್ಲಿ ಹೇಮಾ (Telugu Actress Hema) ಹೆಸರು ಕೇಳಿ ಬಂದಿತ್ತು. ನಟಿ ತಾವು ಹೈದರಾಬಾದ್‌ನಲ್ಲಿರೋದಾಗಿ ಹೈಡ್ರಾಮಾ ಮಾಡಿದ್ದರು. ಇದೀಗ ಅಸಲಿ ಹೊರಬಿದ್ದಿದೆ. ಹೇಮಾ ಕೂಡ ರೇವ್ ಪಾರ್ಟಿಯಲ್ಲಿ ಇದ್ದರು ಎಂಬುದನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಬೆತ್ತಲೆ ಫೋಟೋ ಹರಿಬಿಟ್ಟು, ನಾನು ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದ ಪೂನಂ ಪಾಂಡೆ

    ‘ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗಿಯಾಗಿದ್ದು ಸತ್ಯ’ ಎಂದು ಪೊಲೀಸ್ ಆಯುಕ್ತ ದಯಾನಂದ್ ಕ್ಲ್ಯಾರಿಟಿ ನೀಡಿದ್ದಾರೆ. ಇದೇ ವೇಳೆ ಫಾರ್ಮ್‌ ಹೌಸ್‌ನಲ್ಲೇ ನಟಿ ವಿಡಿಯೋ ಮಾಡಿ ಹೇಳಿಕೆ ಬಿಡುಗಡೆ ಮಾಡಿರುವ ಪ್ರಕರಣದ ಕುರಿತು ದಯಾನಂದ್ ಮಾತನಾಡಿದ್ದಾರೆ. ಯಾವ ಸಂದರ್ಭದಲ್ಲಿ ವಿಡಿಯೋ ಮಾಡಿದ್ದಾರೆಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ದಯಾನಂದ್ ಹೇಳಿದ್ದಾರೆ. ಸದ್ಯ ಹೇಮಾ ಅವರ ರಕ್ತದ ಮಾದರಿ ತೆಗೆದುಕೊಂಡು ಅವರನ್ನು ಕಳುಹಿಸಲಾಗಿದೆ. ಮೆಡಿಕಲ್ ಟೆಸ್ಟ್ ಬಳಿಕ ಸ್ಟೇಷನ್ ಬೇಲ್ ಮೇಲೆ ಹೇಮಾರನ್ನು ಬಿಡುಗಡೆ ಮಾಡಲಾಗಿದೆ ಎಂದು ದಯಾನಂದ್ ಮಾತನಾಡಿದ್ದಾರೆ.

    ಎಲೆಕ್ಟ್ರಾನಿಕ್ ಸಿಟಿ ಹೊರಭಾಗದ ಸಿಂಗೇನಾ ಅಗ್ರಹಾರದ ಫಾರಂ ಹೌಸ್‌ನಲ್ಲಿ ಮೇ 19ರ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿತ್ತು. ಪಾರ್ಟಿಯಲ್ಲಿ ತೆಲುಗು ನಟ-ನಟಿಯರು, ಮಾಡೆಲ್‌ಗಳು ಹಾಗೂ ಟೆಕ್ಕಿಗಳು ಭಾಗಿಯಾಗಿದ್ದರು. ಈ ರೇವ್ ಪಾರ್ಟಿಯಲ್ಲಿ ನಾನು ಇರಲಿಲ್ಲ ಎಂದು ಸುಳ್ಳು ಹೇಳಿದ್ದ ನಟಿ ಹೇಮಾ ಬಗ್ಗೆ ಅಸಲಿ ವಿಚಾರ ಇದೀಗ ಹೊರಬಿದ್ದಿದೆ.

    ಹೇಮಾ ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಖಾಯಂ ಪೋಷಕ ನಟಿಯಾಗಿ ಹೇಮಾ ಕೆಲಸ ಮಾಡಿದ್ದಾಳೆ. ಕನ್ನಡದಲ್ಲೂ ಆಕ್ಟ್ ಮಾಡಿದ್ದ ಹೇಮಾ 2014ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ‘ಪವರ್’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ವಿನಯ ವಿಧೇಯ ರಾಮ, ಸನ್ ಆಫ್ ಸತ್ಯಮೂರ್ತಿ, ಡಿಕ್ಟೇಟರ್, ಅತ್ತಾರಿಂಟಿಕಿ ದಾರೇದಿ, ಮಿರ್ಚಿ, ರಭಸ, ಬೃಂದಾವನಂ, ರೆಬೆಲ್, ಜುಲಾಯ್, ಮಗಧೀರ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ರೇವ್ ಪಾರ್ಟಿಗೆ ಹೋಗುವ ಅಭ್ಯಾಸ ನನಗಿಲ್ಲ ಎಂದು ಸ್ಟಷ್ಟನೆ ನೀಡಿದ ನಟ ಶ್ರೀಕಾಂತ್

    ರೇವ್ ಪಾರ್ಟಿಗೆ ಹೋಗುವ ಅಭ್ಯಾಸ ನನಗಿಲ್ಲ ಎಂದು ಸ್ಟಷ್ಟನೆ ನೀಡಿದ ನಟ ಶ್ರೀಕಾಂತ್

    ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ (Rave Party) ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ, ಮಾದಕ ವಸ್ತುಗಳು ಲಭ್ಯವಾಗಿದೆ. ಈ ರೇವ್ ಪಾರ್ಟಿಯಲ್ಲಿ ತೆಲುಗು ನಟಿ-ನಟಿಯರ ಹೆಸರು ಕೇಳಿ ಬಂದಿದೆ. ಜೊತೆಗೆ ತೆಲುಗಿನ ನಟ ಶ್ರೀಕಾಂತ್ (Srikanth) ಹೆಸರು ಕೇಳಿ ಬಂದ ಬೆನ್ನಲ್ಲೇ, ನಾನು ಯಾವ ರೇವ್ ಪಾರ್ಟಿಗೂ ಹೋಗಿಲ್ಲ ಎಂದು ವಿಡಿಯೋ ಮೂಲಕ ಸ್ಟಷ್ಟನೆ ನೀಡಿದ್ದಾರೆ.

    ನಾನು ನನ್ನ ಹೈದರಾಬಾದ್ ಮನೆಯಲ್ಲಿ ನಿಂತಿದ್ದೇನೆ. ಜನರು ಇದನ್ನು ಪರಿಶೀಲಿಸಬಹುದು. ಬೆಂಗಳೂರಿನಲ್ಲಿ ಪೊಲೀಸರು ದಾಳಿ ನಡೆಸಿದ ರೇವ್ ಪಾರ್ಟಿಯಲ್ಲಿ ನನ್ನ ಹೆಸರು ಕೇಳಿ ಬಂದಿದ್ದು ನೋಡಿ ನನಗೆ ಆಶ್ಚರ್ಯ ಆಯಿತು. ನನ್ನ ಸ್ನೇಹಿತರು ಈ ಬಗ್ಗೆ ವಿಚಾರಿಸಲು ಕರೆ ಮಾಡಿದ್ದರು. ಈ ಸುದ್ದಿ ಕೇಳಿ ಮೊದಲಿಗೆ ನನ್ನ ಕುಟುಂಬಸ್ಥರು ನಕ್ಕರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅನೇಕ ಸುದ್ದಿಗಳು ಹರಿದಾಡಲು ಆರಂಭಿಸಿದಾದ ನಾನು ಸ್ಪಷ್ಟನೆ ನೀಡಲು ನಿರ್ಧರಿಸಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.

    ಸುದ್ದಿ ಪ್ರಸಾರ ಮಾಡುವುದಕ್ಕೂ ಮುನ್ನ ಮಾಧ್ಯಮದ ಅನೇಕ ಸ್ನೇಹಿತರು ನನಗೆ ಕರೆ ಮಾಡಿ ವಿಷಯವನ್ನು ಸ್ಪಷ್ಟಪಡಿಸಿಕೊಂಡರು. ಆದರೆ ಕೆಲವು ವಾಹಿನಿಯವರು ಅಸಲಿ ವಿಚಾರ ಅರಿಯದೇ ಸುದ್ದಿ ಪ್ರಸಾರ ಮಾಡಿದರು. ಅದು ಅವರ ತಪ್ಪಲ್ಲ. ಯಾಕೆಂದರೆ, ಮೊದಲ ಬಾರಿಗೆ ನಾನು ವಿಡಿಯೋಗಳಲ್ಲಿ ಗಡ್ಡ ಇರುವ ವ್ಯಕ್ತಿ ಮುಖ ಮುಚ್ಚಿಕೊಂಡಿದ್ದನ್ನು ನೋಡಿದಾಗ ನನ್ನ ರೀತಿ ಕಾಣಿಸಿದ್ದಾನೆ ಎಂದಿದ್ದಾರೆ. ಇದನ್ನೂ ಓದಿ:‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದ ಪೋಸ್ಟರ್ ಔಟ್- ತ್ರಿಬಲ್ ರೋಲ್‌ನಲ್ಲಿ ಅಜಿತ್?

    ನಾನು ಮತ್ತೆ ಸ್ಪಷ್ಟನೆ ನೀಡುತ್ತೇನೆ. ರೇವ್ ಪಾರ್ಟಿಗಳಿಗೆ ಹೋಗುವ ಅಭ್ಯಾಸ ನನಗೆ ಇಲ್ಲ. ರೇವ್ ಪಾರ್ಟಿ, ಪಬ್ ಕಲ್ಚರ್ ಅನ್ನು ನಾನು ಫಾಲೋ ಮಾಡಲ್ಲ. ಕೆಲವೊಮ್ಮೆ ನಾನು ಬರ್ತ್‌ಡೇ ಪಾರ್ಟಿಗಳಿಗೆ ಹೋಗುತ್ತೇನೆ. ಆದರೆ ಅರ್ಧ ಗಂಟೆಯೊಳಗೆ ವಾಪಸ್ ಬರುತ್ತೇನೆ. ಸುದ್ದಿ ಪ್ರಸಾರ ಮಾಡುವುದಕ್ಕೂ ಮುನ್ನ ಅದರ ಸತ್ಯ ಸಂಗತಿಯನ್ನು ಖಚಿತಪಡಿಸಿಕೊಳ್ಳಿ ಎಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಶ್ರೀಕಾಂತ್ ಮಾತನಾಡಿದ್ದಾರೆ.

  • ಬೆಂಗ್ಳೂರಲ್ಲಿ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ- ಅಪಾರ ಪ್ರಮಾಣದ ಡ್ರಗ್ಸ್ ಪತ್ತೆ

    ಬೆಂಗ್ಳೂರಲ್ಲಿ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ- ಅಪಾರ ಪ್ರಮಾಣದ ಡ್ರಗ್ಸ್ ಪತ್ತೆ

    – ತೆಲುಗು ನಟಿಯರು, ಮಾಡೆಲ್‍ಗಳು ಭಾಗಿ

    ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ (Electronic City) ಹೊರಭಾಗದ ಸಿಂಗೇನಾ ಅಗ್ರಹಾರದ ಫಾರಂ ಹೌಸ್‍ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ (Rave Party) ಮೇಲೆ ಸಿಸಿಬಿ (CCB) ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿವೆ. ಪಾರ್ಟಿಯಲ್ಲಿ ತೆಲುಗು ನಟ-ನಟಿಯರು, ಮಾಡೆಲ್‍ಗಳು ಹಾಗೂ ಟೆಕ್ಕಿಗಳು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

    ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬವರಿಗೆ ಸೇರಿದ ಜಿ.ಆರ್‌ ಫಾರಂ ಹೌಸ್‍ನಲ್ಲಿ ಹೈದರಾಬಾದ್ ಮೂಲದ ವಾಸು ಎಂಬಾತ ರೇವ್ ಪಾರ್ಟಿ ಆಯೋಜಿಸಿದ್ದ. ಪಾರ್ಟಿಯಲ್ಲಿ ಆಂಧ್ರಪ್ರದೇಶ ಹಾಗೂ ಬೆಂಗಳೂರು (Bengaluru) ಮೂಲದ 100ಕ್ಕೂ ಅಧಿಕ ಮಂದಿ ಯುವಕ ಯುವತಿಯರಿದ್ದರು. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವಧಿ ಮೀರಿ ಪಾರ್ಟಿ ನಡೆದಿದ್ದಲ್ಲದೇ ಪಾರ್ಟಿಯಲ್ಲಿ ಎಂಡಿಎಂಎ, ಕೋಕೆನ್ ಸೇರಿ ಹಲವು ಮಾದರಿಯ ಮಾದಕ ವಸ್ತುಗಳು ಪತ್ತೆಯಾಗಿವೆ. ಇದನ್ನೂ ಓದಿ: ಇರಾನ್‌ ಅಧ್ಯಕ್ಷರಿದ್ದ ಹೆಲಿಕಾಪ್ಟರ್‌ ಪತನ- ಸುರಕ್ಷಿತವಾಗಿ ವಾಪಸ್‌ ಆಗಲು ಮೋದಿ ಪ್ರಾರ್ಥನೆ

    ಸ್ಥಳದಲ್ಲಿದ್ದ ಬೆಂಜ್ ಕಾರಿನಲ್ಲಿ ಆಂಧ್ರದ ಎಂಎಲ್‍ಎ ಕಾಕನಿ ಗೋವರ್ಧನ ರೆಡ್ಡಿ ಎಂಬವರ ಹೆಸರಿನ ಪಾಸ್ ಪತ್ತೆಯಾಗಿದೆ. ಪಾರ್ಟಿಗೆ ಯುವಕರು ಜಾಗ್ವಾರ್ ಹಾಗೂ ಆಡಿ ಕಾರುಗಳಲ್ಲಿ ಬಂದಿದ್ದು, ಕೆಲವರನ್ನು ಹೈದರಾಬಾದ್‍ನಿಂದ ಕರೆಸಿಕೊಳ್ಳಲಾಗಿತ್ತು. ಸನ್ ಸೆಟ್ ಟು ಸನ್ ರೈಸ್ ಪಾರ್ಟಿ ಎಂಬ ಹೆಸರಿನಲ್ಲಿ ಪಾರ್ಟಿ ಆಯೋಜಿಸಲಾಗಿದ್ದು, ಭಾನುವಾರ ಸಂಜೆ 5 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೂ ಪಾರ್ಟಿ ನಡೆಸಲು ಮುಂದಾಗಿದ್ದರು. ಪಾರ್ಟಿಗೆ ಸುಮಾರು 30 ರಿಂದ 50 ಲಕ್ಷ ರೂ. ಹಣ ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಸಿಸಿಬಿ ಅಧಿಕಾರಿಗಳು ನಾರ್ಕೊಟಿಕ್ಸ್ ಸ್ನಿಫರ್ ಡಾಗ್‍ಗಳಿಂದ ಸ್ಥಳ ಪರಿಶೀಲನೆ ನಡೆಯತ್ತಿದೆ. ಕಾರುಗಳ ಮಾಲೀಕರ ಸಮಕ್ಷಮದಲ್ಲಿ ಕಾರುಗಳನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ಎಸೆತ- ಪೊಲೀಸರಿಂದ ಬಿಗಿಭದ್ರತೆ

  • ನಟಿ ಆತ್ಮಹತ್ಯೆಗೆ ಕಾರಣರಾದ ಇಬ್ಬರು ನಕಲಿ ಎನ್‍ಸಿಬಿ ಅಧಿಕಾರಿಗಳು ಅರೆಸ್ಟ್

    ನಟಿ ಆತ್ಮಹತ್ಯೆಗೆ ಕಾರಣರಾದ ಇಬ್ಬರು ನಕಲಿ ಎನ್‍ಸಿಬಿ ಅಧಿಕಾರಿಗಳು ಅರೆಸ್ಟ್

    ಮುಂಬೈ: ಭೋಜ್‍ಪುರಿ ನಟಿ ಆತ್ಮಹತ್ಯೆಗೆ ಕಾರಣರಾದ ಇಬ್ಬರು ನಕಲಿ ಎನ್‍ಸಿಬಿ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ರೇವ್ ಪಾರ್ಟಿ ಹೆಸರಿನಲ್ಲಿ ನಕಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‍ಸಿಬಿ) ಅಧಿಕಾರಿಗಳು ದಾಳಿ ಮಾಡಿದ ಪರಿಣಾಮ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಏನಿದು ಘಟನೆ?
    ಮುಂಬೈ ಜೋಗೇಶ್ವರಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ 28 ವರ್ಷದ ಭೋಜ್‍ಪುರಿ ನಟಿ ಮತ್ತು ಆಕೆಯ ಸ್ನೇಹಿತರ ಮೇಲೆ ಎನ್‍ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ನಮಗೆ 20 ಲಕ್ಷ ರೂ. ಕೊಡಲಿಲ್ಲವೆಂದರೆ ನಿಮ್ಮನ್ನು ರೇವ್ ಪಾರ್ಟಿಯಲ್ಲಿ ಸಿಕ್ಕಿಸುತ್ತೇವೆ ಎಂದು ಬೆದರಿಕೆಯನ್ನು ಹಾಕಿದ್ದಾರೆ. ಇದನ್ನೂ ಓದಿ: ವೈರಲ್ ಜ್ವರದ ನಂತರ ಮತ್ತೆ ವರ್ಕೌಟ್‍ಗೆ ಮರಳಿದ ಸಮಂತಾ

    ಈ ಪರಿಣಾಮ ಖಿನ್ನತೆಗೆ ಬಳಗಾದ ಭೋಜ್‍ಪುರಿ ನಟಿ ಡಿಸೆಂಬರ್ 23 ರಂದು ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ಆಕೆಯ ಸ್ನೇಹಿತರು ಪೊಲೀಸರಿಗೆ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ.

    ಈ ಸಂಬಂಧ ಅಂಬೋಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟಿಯು ಇತ್ತೀಚೆಗೆ ಹೋಟೆಲ್‍ನಲ್ಲಿ ಮೂವರು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದಳು ಎಂದು ಪೊಲೀಸರು ತಿಳಿದುಕೊಂಡಿದ್ದು, ಅಲ್ಲಿ ಇಬ್ಬರು ಪುರುಷರು ಎನ್‍ಸಿಬಿ ಅಧಿಕಾರಿಗಳಂತೆ ನಟಿಸಿದ್ದಾರೆ. ನಂತರ ಅವರ ಬಳಿಗೆ ಹೋಗಿ ಡ್ರಗ್ಸ್ ಸೇವಿಸಿದ್ದಕ್ಕಾಗಿ ನಿಮ್ಮನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

    POLICE JEEP

    ನಟಿ ಮತ್ತು ಆಕೆಯ ಸ್ನೇಹಿತರು ಇದರಿಂದ ಹೆದರಿಕೊಂಡ ಈ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದ್ದು, ಆರೋಪಿಗಳು 40 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಆದರೆ ಕೊನೆಯಲ್ಲಿ 20 ಲಕ್ಷ ರೂ. ನೀಡುವಂತೆ ಬೆದರಿಕೆಯನ್ನು ಹಾಕಿದ್ದಾರೆ.

    ಆಗ ನಟಿ ಈ ದೊಡ್ಡ ಮೊತ್ತವನ್ನು ಹೇಗೆ ಹೊಂದಿಸುವುದು ಎಂದು ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾಳೆ ಎಂದು ಆಕೆಯ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು

    ನಂತರ ಈ ಕುರಿತು ಪೊಲೀಸರು ತನಿಖೆ ಮಾಡಿ ನಕಲಿ ಅಧಿಕಾರಿಗಳಾದ ಸೂರಜ್ ಪರದೇಸಿ(32) ಮತ್ತು ಪ್ರವೀಣ್ ವಾಲಿಂಬೆ(28) ಯನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಜಿ ಮತ್ತು ಇನ್ನೊಬ್ಬ ಆರೋಪಿ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 306(ಆತ್ಮಹತ್ಯೆ ಪ್ರಚೋದನೆ), 170(ಸರ್ಕಾರಿ ನೌಕರನಂತೆ ನಟಿಸುವುದು) 420 (ವಂಚನೆ), 384, 388 ಮತ್ತು 389 (ಸುಲಿಗೆ), 506 (ಕ್ರಿಮಿನಲ್ ಬೆದರಿಕೆ), 120 ಬಿ(ಅಪರಾಧ ಸಂಚು) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

  • ರೇವ್ ಪಾರ್ಟಿ ಜಾಗದಲ್ಲಿ ಗೋಶಾಲೆ ನಿರ್ಮಾಣ – ಮಾಲೀಕರಿಗಾಗಿ ಪೊಲೀಸರ ಹುಡುಕಾಟ

    ರೇವ್ ಪಾರ್ಟಿ ಜಾಗದಲ್ಲಿ ಗೋಶಾಲೆ ನಿರ್ಮಾಣ – ಮಾಲೀಕರಿಗಾಗಿ ಪೊಲೀಸರ ಹುಡುಕಾಟ

    – ಸ್ಥಳಕ್ಕೆ ಭೇಟಿ ನೀಡಿದ ಎಸ್‍ಪಿ ವಂಶಿಕೃಷ್ಣ

    ಆನೇಕಲ್: ಕಳೆದ ಶನಿವಾರ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿಯ ಹಸಿರು ವ್ಯಾಲಿ ರೆಸಾರ್ಟ್ ನಲ್ಲಿ ಅಕ್ರಮವಾಗಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರು ಗ್ರಾಮಾಂತರ ಎಸ್‍ಪಿ ವಂಶಿಕೃಷ್ಣ ಹಸಿರು ವ್ಯಾಲಿ ರೆಸಾರ್ಟ್ ಗೆ ಭೇಟಿ ಕೊಟ್ಟಿದ್ದಾರೆ.

    ಪಾರ್ಟಿ ನಡೆದಿದ್ದ ಜಾಗದಲ್ಲಿ ರಾತ್ರೋರಾತ್ರಿ ಗೋಶಾಲೆ ನಿರ್ಮಾಣವಾಗಿದ್ದು, ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದ್ಯಾ? ಎಂಬ ಅನುಮಾನ ವ್ಯಕ್ತವಾಗಿದೆ. ನಿನ್ನೆ ಪಾರ್ಟಿ ನಡೆದ ಸುತ್ತಮುತ್ತಲ ಜಾಗದಲ್ಲಿದ್ದ ಟೆಂಟ್ ಹೌಸ್, ಊಟದ ಟೇಬಲ್‍ಗಳು ಇಂದು ಮಾಯವಾಗಿದ್ದವು. ಇದನ್ನೂ ಓದಿ:  ವಿಸರ್ಜನೆ ಸಂಬಂಧ ಜಿಲ್ಲಾಡಳಿತ, ಗಣಪತಿ ಮಂಡಳಿ ನಡುವೆ ಜಟಾಪಟಿ

    ಬಿದಿರಿನ ಒಳಭಾಗದಲ್ಲಿ ಪಾರ್ಟಿ ನಡೆದಿದ್ದ ಜಾಗ ಸಂಪೂರ್ಣ ಸ್ವಚ್ಛವಾಗಿತ್ತು. ಹೀಗಾಗಿ ಪಾರ್ಟಿ ವೇಳೆ ಅನೈತಿಕ ಚಟುವಟಿಕೆಗಳು ನಡೆದಿದ್ಯಾ? ಎಂಬ ಅನುಮಾನ ಪೊಲೀಸರಿಗೆ ಕಾಡತೊಡಗಿದೆ. ಅಲ್ಲದೇ ಪಾರ್ಟಿ ವೇಳೆ ವಶಕ್ಕೆ ಪಡೆದಿರುವ 37 ಜನರನ್ನು ಮಾಜಿಸ್ಟ್ರೆಟ್ ಮುಂದೆ ಹಾಜರುಪಡಿಸಿದ್ದು, ಅವರ ರಕ್ತ ಹಾಗೂ ಮೂತ್ರದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಅಲ್ಲದೇ ಅದರ ವರದಿಗಾಗಿ ಕಾಯಲಾಗುತ್ತಿದೆ ಎಂದು ವಂಶಿಕೃಷ್ಣ ತಿಳಿಸಿದ್ದಾರೆ.

    ಅಕ್ರಮ ರೇವ್ ಪಾರ್ಟಿ ಆಯೋಜನೆ ಮಾಡಿದ್ದ ಆಶಿಶ್ ಗೌಡ ಹಾಗೂ ಅಶುತೋಶ್ ಉಗ್ರ ಎಂಬುವವರನ್ನು ತಮ್ಮ ವಶಕ್ಕೆ ಪಡೆದಿರುವ ಆನೇಕಲ್ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರೆಸಾರ್ಟ್ ಮಾಲೀಕ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ. ಇದನ್ನೂ ಓದಿ:  ಪ್ರಚಾರದ ಹುಚ್ಚಿಗೆ ಬಿದ್ದು ಯಡವಟ್ಟು ಮಾಡಿಕೊಂಡ್ವಿ -ಪೊಲೀಸರ ಮುಂದೆ ಕಣ್ಣೀರಿಟ್ಟ ಯುವಕರು

    ಪಾರ್ಟಿ ಆಯೋಜನೆ ಮಾಡಿದ್ದು ಹೇಗೆ? ಯುವಕ-ಯುವತಿಯರನ್ನು ಹೇಗೆ ಸಂಪರ್ಕ ಮಾಡಿದ್ದಿರಾ? ಪಾರ್ಟಿಗೆ ಒಬ್ಬರಿಗೆ ಎಷ್ಟು ಶುಲ್ಕ ನಿಗದಿ ಮಾಡಿದ್ರಿ? ಇದೇ ಮೊದಲ ಪಾರ್ಟಿಯಾ? ಈ ಹಿಂದೆ ಬೇರೆ ಎಲ್ಲಾದರೂ ಇದೇ ರೀತಿಯ ಪಾರ್ಟಿ ಆಯೋಜನೆ ಮಾಡಿದ್ದಿರಾ? ಎಂಬ ಪ್ರಶ್ನೆಗಳನ್ನು ಆಯೋಜಕರನ್ನು ಕೇಳಲಾಗುತ್ತಿದೆ. ಈ ನಡುವೆ ಹಸಿರು ವ್ಯಾಲಿ ರೆಸಾರ್ಟ್ ನಡೆಸಲು ಅನುಮತಿ ಇದೆಯೇ? ಇಲ್ಲ ಅಕ್ರಮವಾಗಿ ಹಸಿರು ವ್ಯಾಲಿ ರೆಸಾರ್ಟ್ ನಡೆಸಲಾಗುತ್ತಿದೆಯೇ ಎಂಬ ಬಗ್ಗೆ ಮಾಹಿತಿಗಾಗಿ ಆನೇಕಲ್ ತಹಶೀಲ್ದಾರ್ ಅವರಿಗೆ ಪತ್ರವನ್ನು ಬರೆದಿರುವುದಾಗಿ ಎಸ್‍ಪಿ ತಿಳಿಸಿದ್ದಾರೆ.

    ಪಾರ್ಟಿ ನಡೆದು ಆರೋಪಿಗಳನ್ನು ಬಂಧಿಸಿದ ಎರಡು ದಿನಗಳ ಬಳಿಕ ಬೆಂಗಳೂರು ಗ್ರಾಮಾಂತರ ಎಸ್‍ಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಸಿರು ವ್ಯಾಲಿ ರೆಸಾರ್ಟ್ ಸಿಬ್ಬಂದಿಯ ಕಳ್ಳಾಟವೂ ಕೂಡ ಬಯಲಾಗಿದ್ದು, ಹೆಸರಾಂತ ಪ್ರವಾಸಿತಾಣ ಮುತ್ಯಾಲಮಡುವಿಗೆ ಹೋಗುವ ಗೂಗಲ್ ಮ್ಯಾಪ್ ಅನ್ನು ಹಸಿರು ವ್ಯಾಲಿಗೆ ಬದಲಾವಣೆ ಮಾಡುವ ಮೂಲಕ ತಮ್ಮ ಕಳ್ಳಾಟವನ್ನು ತೋರಿದ್ದಾರೆ. ಇದನ್ನೂ ಓದಿ:  ಕೊನೆಗೂ ತನ್ನ ಆಸೆ ನೆರವೇರಿಸಿಕೊಂಡ ವಿಜಯ್ ದೇವರಕೊಂಡ

  • ಆನೇಕಲ್ ರೇವ್ ಪಾರ್ಟಿ ಪ್ರಕರಣ- 35 ಜನರ ಬಂಧನ

    ಆನೇಕಲ್ ರೇವ್ ಪಾರ್ಟಿ ಪ್ರಕರಣ- 35 ಜನರ ಬಂಧನ

    – ಕಾಡಿನಲ್ಲೇ ಅವಿತಿದ್ದ 30ಕ್ಕೂ ಹೆಚ್ಚು ಜನ

    ಬೆಂಗಳೂರು: ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬರೋಬ್ಬರಿ 35 ಜನರನ್ನು ಬಂಧಿಸಿದ್ದಾರೆ.

    ನಗರದ ಹೊರವಲಯದ ಆನೇಕಲ್ ಬಳಿ ನಡೆದ ರೇವ್ ಪಾರ್ಟಿ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ತಪ್ಪಿಸಿಕೊಳ್ಳುತ್ತಿದ್ದ ಯುವಕರನ್ನು ಅಟ್ಟಾಡಿಸಿ ಹಿಡಿದಿದ್ದಾರೆ. ಬರೋಬ್ಬರಿ 35 ಜನರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ ಪೊಲೀಸರು ಪಾರ್ಟಿ ನಡೆಯುತ್ತಿದ್ದ ಹೋಟೆಲ್ ಮೇಲೆ ದಾಳಿ ನಡೆಯುತ್ತಿದ್ದಂತೆ ಇವರೆಲ್ಲರೂ ಕಾಡಿನಲ್ಲಿಯೇ ಅವಿತಿದ್ದರು. ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಹುತೇಕರನ್ನು ಹೆಡೆಮುರಿ ಕಟ್ಟಿದ್ದಾರೆ.

    ಆಶಿಸ್ ಗೌಡ ಪ್ರಕರಣದ ಕಿಂಗ್ ಪಿನ್ ಆಗಿದ್ದು, ಸರ್ವೇಶ್ ಕುಮಾರ್ ಅಲಿಯಾಸ್ ಉಗ್ರ ಪಾರ್ಟಿಯ ಪ್ರಮುಖ ಆಯೋಜಕನಾಗಿದ್ದಾನೆ. ಸರ್ವೇಶ್ ಕುಮಾರ್ ಪಾರ್ಟಿ ಆಯೋಜನೆ ಮಾಡುತ್ತಿದ್ದ. ಸರ್ವೇಶ್ ಅಣತಿಯಂತೆ ಆಶಿಸ್ ಗೌಡ ಪಾರ್ಟಿಗೆ ಜನರನ್ನು ಕರೆತರುತ್ತಿದ್ದ. ಇದೀಗ ಇವರಿಬ್ಬರು ಸೇರಿದಂತೆ ಒಟ್ಟು 35 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರೇವ್ ಪಾರ್ಟಿ- ಆ್ಯಪ್‍ನಲ್ಲಿ ಬುಕ್ಕಿಂಗ್ , ಇಬ್ಬರು ಅರೆಸ್ಟ್, 30 ಜನ ವಶಕ್ಕೆ

    ಇದರಲ್ಲಿ ಬಹುತೇಕರು ಕೇರಳ ಮೂಲದವರು. ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ಎಂದು ತಿಳಿದು ಬಂದಿದೆ. 30ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಪೊಲೀಸರು ದಾಳಿ ಮಾಡುತ್ತಿದ್ದಂತೆ ಬಹುತೇಕ ಜನ ತಪ್ಪಿಸಿಕೊಂಡಿದ್ದರು. ಅಲ್ಲರಿಗೂ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತಿದೆ. ಬ್ಲಡ್, ಯೂರಿನ್ ಹಾಗೂ ಹೇರ್ ಫಾಲಿಕಲ್ ಟೆಸ್ಟ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರೆಸ್ಟ್ ಆದವರಲ್ಲಿ ಬಹುತೇಕರು ಕೇರಳದವರು ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ- ಅರೆನಗ್ನ ಸ್ಥಿತಿಯಲ್ಲಿ ಯುವತಿಯರ ಡ್ಯಾನ್ಸ್

    ಪೊಲೀಸರು ಈಗಾಗಲೇ ಯುವಕ, ಯುವತಿಯರ 6 ಕಾರು ಸೇರಿದಂತೆ 15ಕ್ಕೂ ಹೆಚ್ಚು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ರೆಸಾರ್ಟ್ ನ ನಿರ್ಜನ ಪ್ರದೇಶದಲ್ಲಿ ರೇವ್ ಪಾರ್ಟಿ ನಡೆಸಿ, ಗಾಂಜಾ ಸೇರಿದಂತೆ ವಿವಿಧ ಡ್ರಗ್ಸ್ ಸೇವಿಸಿ ಹುಚ್ಚೆದ್ದು ಕುಣಿದಿದ್ದಾರೆ. ಅರ್ಧಂಬಂರ್ಧ ಬಟ್ಟೆ ಹಾಕಿದ್ದ ಯುವಕ, ಯುವತಿಯರು ಡ್ರಗ್ಸ್ ನಶೆಯಲ್ಲಿ ತೇಲಿದ್ದರು. ಇದೀಗ ಪೊಲೀಸರು ಎಲ್ಲರ ಹೆಡೆಮುರಿ ಕಟ್ಟಿದ್ದಾರೆ.