Tag: Ravana

  • ಪ್ರಧಾನಿ ಮೋದಿ ಆಧುನಿಕ ರಾವಣ, ಶೀಘ್ರವೇ ಅವರ ಲಂಕಾದಲ್ಲಿ ಬೆಂಕಿ ಹೊತ್ತಿ ಉರಿಯುತ್ತೆ: ಕಾಂಗ್ರೆಸ್‌ ನಾಯಕ

    ಪ್ರಧಾನಿ ಮೋದಿ ಆಧುನಿಕ ರಾವಣ, ಶೀಘ್ರವೇ ಅವರ ಲಂಕಾದಲ್ಲಿ ಬೆಂಕಿ ಹೊತ್ತಿ ಉರಿಯುತ್ತೆ: ಕಾಂಗ್ರೆಸ್‌ ನಾಯಕ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಆಧುನಿಕ ರಾವಣನ ಸಂಕೇತ ಎಂದು ಕಾಂಗ್ರೆಸ್‌ ನಾಯಕ ಉದಿತ್‌ ರಾಜ್‌ (Udit Raj ಹೇಳಿಕೆ ನೀಡಿದ್ದಾರೆ.

    ದೆಹಲಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಆಧುನಿಕ ರಾವಣನ ಸಂಕೇತ. ಅವರು ತಮ್ಮ ಚಿನ್ನದ ಅರಮನೆಯನ್ನು ನಿರ್ಮಿಸುತ್ತಿದ್ದಾರೆ. ಒಮ್ಮೆ ಅದನ್ನು ಪ್ರವೇಶಿಸಿದ ನಂತರ ಅದೇ ಚಿನ್ನದ ಅರಮನೆ ಉರಿದು ಹೋಗುವುದನ್ನು ನೋಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅ.9 ರಂದು ಭಾರತಕ್ಕೆ ತಾಲಿಬಾನ್‌ ಸರ್ಕಾರದ ಅಫ್ಘಾನ್‌ ವಿದೇಶಾಂಗ ಸಚಿವ ಭೇಟಿ

    ದೆಹಲಿಯ ರಾವಣನನ್ನು ಸುಡಬೇಕು. ದೆಹಲಿಯ ರಾವಣನನ್ನು ಸುಡುವ ದಿನ ಹತ್ತಿರದಲ್ಲಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಪ್ರಧಾನಿ ಮೋದಿ ಹೆಚ್ಚು ಕಾಲ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಶೀಘ್ರದಲ್ಲೇ ಅವರ ಲಂಕಾದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

    ಕರ್ನಾಟಕದ ಉಪಮುಖ್ಯಮಂತ್ರಿ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದ ಕಾಂಗ್ರೆಸ್ ಶಾಸಕ ಹೆಚ್.ಡಿ.ರಂಗನಾಥ್‌ಗೆ ನೋಟಿಸ್‌ ಕುರಿತು ಮಾತನಾಡಿ, ಯಾವುದೇ ಸಂಘರ್ಷ ನಡೆಯುತ್ತಿಲ್ಲ. ಇದು ಎಲ್ಲಾ ಪಕ್ಷಗಳಲ್ಲೂ ನಡೆಯುತ್ತದೆ. ಕೆಲವರು ತಮ್ಮ ಆಪ್ತರನ್ನು ಹೊಗಳುತ್ತಾರೆ. ಇತರರು ಹಾಗೆಯೇ ಮಾಡುತ್ತಾರೆ. ಹಾಗಾದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಗ್ಗೆ ಕೆಲವು ಒಳ್ಳೆಯ ಮಾತುಗಳನ್ನು ಹೇಳಿದ್ದರೆ, ಅದು ನಿಜವಾಗಿಯೂ ಸಂಘರ್ಷ ಇದೆ ಎಂದರ್ಥವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಾಕ್‌ನ ಪೇಶಾವರದಲ್ಲಿ ಬಾಂಬ್ ಸ್ಫೋಟ – 9 ಮಂದಿ ಸಾವು, ನಾಲ್ವರಿಗೆ ಗಾಯ

  • ರಾಮಾಯಣ ಆಧರಿತ ʻರಾಮಲೀಲಾʼದಲ್ಲಿ ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಆಯ್ಕೆ

    ರಾಮಾಯಣ ಆಧರಿತ ʻರಾಮಲೀಲಾʼದಲ್ಲಿ ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಆಯ್ಕೆ

    – ವಿಹೆಚ್‌ಪಿ, ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ

    ಮಾದಕ ನಟಿ ಪೂನಂ ಪಾಂಡೆಯ (Poonam Pandey) ಟಾಪ್‌ಲೆಸ್‌ ಅವತಾರಗಳು ಹೊಸದೇನಲ್ಲ. ಆಗಾಗ್ಗೆ ತನ್ನ ಮೈಮಾಟವನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶನಕ್ಕೀಡುವ ಮೂಲಕ ಗಮನ ಸೆಳೆಯುತ್ತಿರುವ ನಟಿ ಈಗ ಹೊಸ ವಿಷಯಕ್ಕೆ ಸುದ್ದಿಯಾಗಿದ್ದಾರೆ.

    2013ರಲ್ಲಿ ʻನಶಾʼ ಸಿನಿಮಾ ಮೂಲಕ ಬಾಲಿವುಡ್‌ಗೆ (Bollywood) ಎಂಟ್ರಿಯಾದ ಪೂನಂ ಪಾಂಡೆ 2018ರ ಬಳಿಕ ಸಿನಿಮಾದಲ್ಲಿ ಅವಕಾಶ ಸಿಗದೇ ಹಿರಿತೆರೆಗಳಿಂದ ದೂರ ಉಳಿದಿದ್ದಾರೆ. ಆಗಾಗ್ಗೆ ವೆಬ್‌ಸಿರೀಸ್‌ ಹಾಗೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ತಿದ್ದರೂ, ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಸದಾ ಆಕ್ಟೀವ್‌ ಆಗಿರ್ತಾರೆ. ʻಲವ-ಕುಶʼ ರಾಮಲೀಲಾʼ (Luv Kush Ramlila)‌ ನಾಟಕದಲ್ಲಿ ಮಂಡೋದರಿ ಪಾತ್ರಕ್ಕೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಇದು ಪೂನಂ ಪಾಂಡೆ ಅಭಿಮಾನಿಗಳಿಗೆ ಖುಷಿಯ ವಿಚಾರವೇ ಆದ್ರೂ, ಹಿಂದೂಪರ ಸಂಘಟನೆಗಳು ಹಾಗೂ ವಿಶ್ವಹಿಂದೂ ಪರಿಷತ್‌ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.

    ಈ ವರ್ಷ ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನಡೆಯಲಿರುವ ರಾಮಾಯಣ ಆಧರಿತ ನಾಟಕ ʻರಾಮಲೀಲಾʼದಲ್ಲಿ ರಾವಣನ ಪತ್ನಿಯಾದ ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಅವರನ್ನ ಆಯ್ಕೆ ಮಾಡಲಾಗಿದೆ. ಪೂನಂ ಜೊತೆಗೆ ರಾವಣನ ಪಾತ್ರದಲ್ಲಿ ಬಣ್ಣ ಹಚ್ಚಲು ನಟ ಆರ್ಯ ಬಬ್ಬರ್ (Arya Babbar) ಸಜ್ಜಾಗಿದ್ದಾರೆ. ಇದನ್ನೂ ಓದಿ: ತುಂಡು ಬಟ್ಟೆಯಿಲ್ಲದೇ ಪೇಪರ್‌ನಿಂದ ಮೈಮುಚ್ಚಿಕೊಂಡ ಪೂನಂ ಪಾಂಡೆ – ಓದ್ಬಿಟ್ಟು ಕೊಡ್ತೀನಿ ಕೊಡಿ ಅಂದ್ರು ನೆಟ್ಟಿಗರು

    ರಾವಣನ ಪತ್ನಿ ಮಂಡೋದರಿ ಪಾತ್ರ ನಿರ್ವಹಿಸಲು ಅವಕಾಶ ಸಿಕ್ಕಿದ್ದಕ್ಕೆ ಪೂನಂ ಪಾಂಡೆ ಸಂತಸ ವ್ಯಕ್ತಪಡಿಸಿದ್ದಾರೆ, ರಾಮಲೀಲಾ ಸಮಿತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಐತಿಹಾಸಿಕ ಹಾಗೂ ಭವ್ಯವಾದ ಕಾರ್ಯಕ್ರಮದ ಭಾಗವಾಗೋದಕ್ಕೆ ಅವಕಾಶ ಸಿಕ್ಕಿರುವುದು ನನಗೆ ಸಂತೋಷ ಮತ್ತು ಹೆಮ್ಮೆ ಇದೆ. ರಾಮಲೀಲಾ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಆಚರಣೆಯಾಗಿದೆ. ಈ ಕಾರ್ಯಕ್ರಮದ ಭಾಗವಾಗುತ್ತಿರುವುದು ನಿಜಕ್ಕೂ ನನ್ನ ಅದೃಷ್ಟ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ರಾವಣ ಪಾತ್ರಧಾರಿ ನಟ ಆರ್ಯ ಬಬ್ಬರ್ ಕೂಡ ಧನ್ಯವಾದ ಅರ್ಪಿಸಿದ್ದಾರೆ.

    ಮಂಡೋದರಿ ಯಾರು ..?
    ಮಂಡೋದರಿಯು ಅಸುರ ರಾಜನಾದ ಮಾಯಾಸುರ ಮತ್ತು ಸುಂದರಿ ಅಪ್ಸರೆಯ ಮಗಳು. ಮಂಡೋದರಿ ಕೂಡ ತನ್ನ ತಾಯಿಯಂತೆ ಅತ್ಯಂತ ಸುಂದರಿಯೂ, ಗುಣವಂತಳೂ ಆಗಿದ್ದಳು. ಮಂಡೋದರಿಯ ಸೌಂದರ್ಯಕ್ಕೆ ಮರುಳಾದ ರಾವಣ ಆಕೆಯನ್ನು ವಿವಾಹವಾಗುತ್ತಾನೆ. ರಾವಣ ಮತ್ತು ಮಂಡೋದರಿಗೆ ಜನಿಸಿದ ಮಕ್ಕಳೇ ಮೇಘನಾಥ ಮತ್ತು ಅಕ್ಷಯ ಕುಮಾರ. ಈಕೆಯನ್ನು ರಾಮಾಯಣದಲ್ಲಿ ಮಹಾನ್‌ ಪತಿವ್ರತೆ ಎಂದು ಉಲ್ಲೇಖಿಸಲಾಗಿದೆ. ರಾವಣ ಎಷ್ಟೇ ಹೀನ ಕಾರ್ಯಗಳನ್ನು ಮಾಡಿದರೂ ಆಕೆ ಅವನನ್ನು ಸರಿ ದಾರಿಗೆ ತರಲು ಪ್ರಯತ್ನಿಸಿದವಳೇ ಹೊರತು ಆತನಿಂದ ದೂರಾದವಳಲ್ಲ. ಇದನ್ನೂ ಓದಿ: ನಮ್ಮ ಮೇಲೆ ಅತ್ಯಾಚಾರ ಮಾಡೋದನ್ನ ಈಗಲಾದ್ರೂ ನಿಲ್ಲಿಸಿ; ಟ್ರೈನಿ ವೈದ್ಯೆ ಕೇಸ್‌ ಬಗ್ಗೆ ಪೂನಂ ಪಾಂಡೆ ಪ್ರತಿಕ್ರಿಯೆ

    ವಿರೋಧ ಏಕೆ?
    ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಅವರ ಆಯ್ಕೆಯನ್ನು ವಿಶ್ವ ಹಿಂದೂ ಪರಿಷತ್‌ ಸೇರಿದಂತೆ ಕೆಲ ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಸದಾ ತುಂಡುಡುಗೆಯಲ್ಲಿ ಸುತ್ತುವ ನಟಿಯನ್ನು ಪೌರಾಣಿಕ ಪಾತ್ರಕ್ಕೆ ಆಯ್ಕೆ ಮಾಡಿರುವುದು ಸರಿಯಲ್ಲ ಕೂಡಲೇ ಆಯ್ಕೆಯನ್ನು ಕೈಬಿಡುವಂತೆ ಒತ್ತಾಯಿಸಿವೆ. ಇದನ್ನೂ ಓದಿ: ಬೆತ್ತಲೆ ಫೋಟೋ ಹರಿಬಿಟ್ಟು, ನಾನು ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದ ಪೂನಂ ಪಾಂಡೆ

    2018ರ ಬಳಿಕ ಸಿನಿಮಾ ಅವಕಾಶ ಸಿಗದೇ ವಂಚಿತವಾಗಿರುವ ಪೂನಂ ಪಾಂಡೆ ಕೊನೆಯದ್ದಾಗಿ ʻಹನಿಮೂನ್‌ ಸೂಟ್‌ ರೂಮ್‌ ನಂ.911ʼ ವೆಬ್‌ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ʻಲಾಕಪ್‌ʼ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು.

  • ರಾಮಾಯಣ ಸಿನಿಮಾದ ಯಶ್ ಪಾತ್ರದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿವಿಲ್

    ರಾಮಾಯಣ ಸಿನಿಮಾದ ಯಶ್ ಪಾತ್ರದ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿವಿಲ್

    ಹುನಿರೀಕ್ಷಿತ ರಾಮಾಯಣ (Ramayana) ಸಿನಿಮಾದಲ್ಲಿ ರಾವಣ ಪಾತ್ರದ ಮೂಲಕ ಕಾಣಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್ (Yash) ಅವರ ಮೊದಲ ಆಕ್ಷನ್ ಸೀಕ್ವೆನ್ಸ್ ಲುಕ್ ರಿವಿಲ್ ಆಗಿದೆ.

    ನಿತೇಶ್ ತಿವಾರಿ ನಿರ್ದೇಶನ ಹಾಗೂ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಮಾಯಣ ಸಿನಿಮಾದಲ್ಲಿ ಯಶ್ ನಟನಾಗಿಯೂ ಹಾಗೂ ನಿರ್ಮಾಪಕನಾಗಿಯೂ ಕಾಣಿಸಿಕೊಳ್ಳುತ್ತಿರುವುದು ಬಹು ವಿಶೇಷ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತಾ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಚಿತ್ರದ ಮೊದಲ ಪೋಸ್ಟರ್ ರಿಲೀಸ್

    ಯಶ್ ರಾವಣನಾಗಿ ಅಬ್ಬರಿಸುವುದನ್ನು ಕಣ್ತುಂಬಿಕೊಳ್ಳಲು ಕನ್ನಡಿಗರು ಮಾತ್ರವಲ್ಲದೇ ಭಾರತೀಯ ಸಿನಿಮಾರಂಗ ಕಾತುರದಿಂದ ಕಾಯುತ್ತಿದ್ದು, ಇದೀಗ ಆಕ್ಷನ್ ಸೀಕ್ವೆನ್ಸ್ನ ಮೊದಲ ಲುಕ್ ರಿವಿಲ್ ಆಗಿದೆ. ಸಿನಿಮಾ ಶೂಟಿಂಗ್‌ನಲ್ಲಿ ಬೃಹತ್ ಸೆಟ್‌ಗಳು ತಲೆಯೆತ್ತಿ ನಿಂತಿದ್ದು, ಆಕ್ಷನ್ ಸೀಕ್ವೆನ್ಸ್‌ಗಳನ್ನು ಹಾಲಿವುಡ್‌ನ ಖ್ಯಾತ ಮ್ಯಾಡ್ ಮ್ಯಾಕ್ಸ್ ಸ್ಟಂಟ್ ನಿರ್ದೇಶಕ ಗೈ ನೋರಿಸ್ ನಿರ್ದೇಶನ ಮಾಡುತ್ತಿದ್ದಾರೆ.

    ರಾಮಾಯಣ ಭಾಗ 1ಕ್ಕಾಗಿ ಯಶ್ 60-70 ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ರಾಮಾಯಣ ಸಿನಿಮಾ 2 ಭಾಗಗಳಲ್ಲಿ ಮೂಡಿ ಬರಲಿದ್ದು, ಮೊದಲ ಭಾಗ 2026ರಲ್ಲಿ ರಿಲೀಸ್ ಆಗಲಿದೆ. ಎರಡನೇ ಭಾಗ 2027ರಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಟಾಕ್ಸಿಕ್ ಸಿನಿಮಾ ಜೊತೆಗೆ ರಾವಣನ ಪಾತ್ರದಲ್ಲಿ ಯಶ್‌ರನ್ನು ನೋಡಲು ಅಭಿಮಾನಿಗಳು ಬಹುಉತ್ಸುಕರಾಗಿದ್ದಾರೆ.ಇದನ್ನೂ ಓದಿ: ಯಶ್ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ವಿವೇಕ್ ಒಬೆರಾಯ್?

  • ‘ರಾಮಾಯಣ’ ಚಿತ್ರಕ್ಕೆ ಯಶ್ ನಿಜವಾದ ಹೀರೋ: ಸತ್ಯ ಬಿಚ್ಚಿಟ್ಟ ನಟ

    ‘ರಾಮಾಯಣ’ ಚಿತ್ರಕ್ಕೆ ಯಶ್ ನಿಜವಾದ ಹೀರೋ: ಸತ್ಯ ಬಿಚ್ಚಿಟ್ಟ ನಟ

    ಅಂದುಕೊಂಡಂತೆ ಆಗಿದ್ದರೆ ರಾಮಾಯಣ ಸಿನಿಮಾದಲ್ಲಿ ಬಾಲಿವುಡ್ ನ ಹೆಸರಾಂತ ನಟ ಆದಿತ್ಯಾ ದೇಶಮುಖ ಕೂಡ ನಟಿಸಬೇಕಿತ್ತು. ಡೇಟ್ ಹೊಂದಾಣಿಕೆ ಕಾರಣದಿಂದಾಗಿ ಅವರು ನಟಿಸೋಕೆ ಸಾಧ್ಯವಾಗಿಲ್ಲ. ಆದರೆ, ರಾಮಾಯಣ ಸಿನಿಮಾದ ಸೀಕ್ರೇಟ್ ಒಂದನ್ನು ಬಿಚ್ಚಿಟ್ಟಿದ್ದಾರೆ ಆದಿತ್ಯಾ, ಈ ರಾಮಾಯಣವನ್ನು ರಾವಣನ (, Ravan) ದೃಷ್ಟಿ ಕೋನದಲ್ಲಿ ಹೆಣೆಯಲಾಗುತ್ತಿದೆಯಂತೆ. ಹಾಗಾಗಿ ನಿಜವಾಗಿಯೂ ಈ ಸಿನಿಮಾದ ಹೀರೋ (Hero) ಯಶ್ ಎಂದು ಅವರು ಹೇಳಿದ್ದಾರೆ.

    ಅಲ್ಲದೇ, ಬಹುನಿರೀಕ್ಷಿತ ಸಿನಿಮಾ ರಾಮಾಯಣ ಚಿತ್ರೀಕರಣ ಪ್ರಾರಂಭವಾಗಿದೆ. ಭಾರತೀಯ ಪುರಾಣದ ಕಥೆಯನ್ನು ತೆರೆದಿಡುವ ರಾಮಾಯಣ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಮಿತ್ ಮಲ್ಹೋತ್ರಾ ಕೈ ಜೋಡಿಸಿದ್ದಾರೆ. ರಾಮಾಯಣಕ್ಕೆ ರಾಕಿ (Yash) ಕೂಡ ನಿರ್ಮಾಪಕ ರಾಮಾಯಣ (Ramayana) ಸಿನಿಮಾವನ್ನು ಬಹಳ ಅದ್ಧೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ದಂಗಲ್ ನಿರ್ದೇಶಕ ನಿತೀಶ್ ತಿವಾರಿ ಹೊರಟಿದ್ದಾರೆ. ಅದರಂತೆ ಬಹು ಕೋಟಿ ಬಜೆಟ್ ಹಾಕಿ ಈ ಚಿತ್ರ ನಿರ್ಮಾಣ ಮಾಡೋದಿಕ್ಕೆ ರಾಕಿಭಾಯ್ ಹಾಗೂ ನಮಿತ್ ಮಲ್ಹೋತ್ರಾ ಒಂದಾಗಿದ್ದಾರೆ. ಯಶ್ ಒಡೆತನದ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಹಾಗೂ ನಮಿತ್ ಮಲ್ಹೋತ್ರಾ ಸಾರಥ್ಯದ ಪ್ರೈಮ್ ಫೋಕಸ್ ಸ್ಟುಡಿಯೋ ರಾಮಾಯಣ ಸಿನಿಮಾವನ್ನು ನಿರ್ಮಿಸುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ನಮಿತ್ ಮಲ್ಹೋತ್ರಾ, ರಾಮಾಯಣ ಕಥೆಗೆ ನ್ಯಾಯ ಸಲ್ಲಿಸಲು ನಾನು ಸಿದ್ಧನಾಗಿದ್ದೇನೆ. ನಮ್ಮ ಸಂಸ್ಕ್ರತಿಯನ್ನು ಜಗತ್ತಿಗೆ ಪರಿಚಯಿಸಲು ನಾನು ಉತ್ಸಕನಾಗಿದ್ದು, ನಾನು ಯಶ್ ಅವರಲ್ಲಿಯೂ ಇದನ್ನು ಕಂಡುಕೊಂಡಿದ್ದೇನೆ. ಅವರ ಪಯಣದಿಂದ ನಾನು ಸ್ಪೂರ್ತಿ ಪಡೆದಿದ್ದೇನೆ. ಯಶ್ ಅವರಲ್ಲಿರುವ ಯೋಜನೆಯನ್ನು ಅರಿತುಕೊಂಡಿದ್ದೇನೆ. ರಾಮಾಯಣ ದೃಶ್ಯಕಾವ್ಯವನ್ನು ತೆರೆಗೆ ತರುತ್ತಿದ್ದೇವೆ ಎಂದರು.

    ಯಶ್ ಮಾತನಾಡಿ, ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರರ್ದಶಿಸುವುದು ನನ್ನ ಬಹುದಿನಗಳ ಕನಸು. ಅದರ ಹುಡುಗಾಟದಲ್ಲಿ ನಾನು ಅತ್ಯುತ್ತಮ VFC ಸ್ಟುಡಿಯೋ ಕಂಡುಕೊಂಡಿದ್ದೇನೆ. ಅದರ ಹಿಂದಿನ ಪ್ರೇರಕ ಶಕ್ತಿ ಒಬ್ನ ಭಾರತೀಯ. ನಾವು ಸಿನಿಮಾ ರಂಗದ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸುವಾಗ ರಾಮಾಯಣ ವಿಷಯವು ಬಂದಿತು. ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪ್ರಸ್ತುತಪಡಿಸುವ ಸಿನಿಮಾ ಇದಾಗಿದ್ದು, ಈ ಮಹಾಕಾವ್ಯ ಸಿನಿಮಾ ರೂಪ ತಾಳುತ್ತಿದೆ. ಆ ಅತ್ಯುತ್ತಮ ಅನುಭವನ್ನು ಜಗತ್ತಿಗೆ ನೀಡಲು ನಾವು ಕಾತರರಾಗಿದ್ದೇವೆ ಎಂದರು.

     

    ನಮಿತ್ ಮಲ್ಹೋತ್ರಾ ಒಡೆತನದ ಪ್ರೈಮ್ ಫೋಕಸ್ ಸ್ಟುಡಿಯೋ ಜಾಗತಿಕ ಮಟ್ಟದ ಕಂಟೆಂಟ್ ಹಾಗೂ ವಿಭಿನ್ನ ಬಗೆಯ ಕ್ರಿಯೇಟ್ ಮಾಡುವ ಸ್ವತಂತ್ರ ನಿರ್ಮಾಣ ಕಂಪನಿಯಾಗಿದೆ. ಈ ಸಂಸ್ಥೆ ಸದ್ಯ ಮೂರು ಸಿನಿಮಾಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಆ ಪೈಕಿ ರಾಮಾಯಣ ಕೂಡ ಒಂದು. ಯಶ್ ತಮ್ಮದೇ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಬ್ಯಾನರ್ ನಡಿ ‘ಟಾಕ್ಸಿಕ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ‘ಮಾನ್ಸ್ಟರ್ ಮೈಂಡ್’ ಕ್ರಿಯೇಷನ್ಸ್ ಕೂಡ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಇದೇ ಬ್ಯಾನರ್ ನಡಿ ‘ರಾಮಾಯಣ’ ಸಿನಿಮಾಗೂ  ಯಶ್ ಬಂಡವಾಳ ಹೂಡುತ್ತಿದ್ದಾರೆ.

  • ಇಂದು ರಾವಣನ ಬಗ್ಗೆ ಮಾತನಾಡಬಾರದು- ರಾಹುಲ್‌ ಗಾಂಧಿ ವಿರುದ್ಧ ಅಸ್ಸಾಂ ಸಿಎಂ ವಾಗ್ದಾಳಿ

    ಇಂದು ರಾವಣನ ಬಗ್ಗೆ ಮಾತನಾಡಬಾರದು- ರಾಹುಲ್‌ ಗಾಂಧಿ ವಿರುದ್ಧ ಅಸ್ಸಾಂ ಸಿಎಂ ವಾಗ್ದಾಳಿ

    ಗುವಾಹಟಿ: ಇಂದು ರಾವಣನ (Ravana) ಬಗ್ಗೆ ಯಾಕೆ ಪ್ರಶ್ನೆಗಳನ್ನು ಕೇಳುತ್ತೀರಿ..?. ಇಂದು ನಾವು ರಾವಣನ ಬಗ್ಗೆ ಮಾತನಾಡಬಾರದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ವಾಗ್ದಾಳಿ ನಡೆಸಿದರು.

    ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ರಾಹುಲ್ ಗಾಂಧಿಯನ್ನು (Rahul Gandhi) ಏಕೆ ಆಹ್ವಾನಿಸಲಿಲ್ಲ ಎಂದು ಮಾಧ್ಯಮದವರು ಪ್ರಶ್ನೆ ಮಾಡಿದರು. ಈ ವೇಳೆ ರಾಮಾಯಣ ಉಲ್ಲೇಖದೊಂದಿಗೆ ಪ್ರತಿಕ್ರಿಯಿಸಿದ ಅವರು, ನೀವು ರಾವಣನ ಬಗ್ಗೆ ಏಕೆ ಮಾತನಾಡುತ್ತಿದ್ದೀರಿ?. ಕನಿಷ್ಠ ರಾಮನ ಬಗ್ಗೆ ಇವತ್ತಾದರೂ ಮಾತನಾಡುತ್ತೀರಾ? 500 ವರ್ಷಗಳ ನಂತರ ರಾಮನ ಬಗ್ಗೆ ಮಾತನಾಡಲು ಇಂದು ಒಳ್ಳೆಯ ದಿನ. ಇಂದು ನಾವು ರಾವಣನ ಬಗ್ಗೆ ಮಾತನಾಡಬಾರದು ಎಂದರು.

    ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ರಾಹುಲ್‌ ಗಾಂಧಿಯವರನ್ನು ಆಹ್ವಾನಿಸಿರಲಿಲ್ಲ. ಆದರೆ ಪಕ್ಷದ ಮುಖ್ಯಸ್ಥರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಲೋಕಸಭೆಯ ಕಾಂಗ್ರೆಸ್ (Congress) ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಆಹ್ವಾನ ಹೋಗಿದೆ. ಆದರೆ ಇದು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯಕ್ರಮ ಎಂದು ಕಾಂಗ್ರೆಸ್‌ ಹೇಳಿದ್ದು, ಅಯೋಧ್ಯೆಗೆ ತೆರಳಲು ನಿರಾಕರಿಸಿದೆ.

    ಇತ್ತ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್‌ ನಾಯಕರ ನಡೆಯನ್ನು ಬಿಜೆಪಿ ಖಂಡಿಸಿದೆ. ನಾಯಕರನ್ನು ಹಿಂದೂ ವಿರೋಧಿಗಳು ಎಂದು ಕರೆದಿರುವ ಬಿಜೆಪಿ, ಅವರಿಗೆ ಜನತೆಯಿಂದಲೇ ಶಿಕ್ಷೆಯಾಗಲಿದೆ ಎಂದುಕಿಡಿಕಾರಿದೆ. ಇದನ್ನೂ ಓದಿ: ಮೋದಿಯಂತಹ ಒಳ್ಳೆಯ ಭಕ್ತ ಸಿಕ್ಕ ಮೇಲೆ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಾಗಿದೆ: ಜೋಶಿ

  • ರಾವಣನ ಪ್ರತಿಕೃತಿ ದಹಿಸಿದ ನಟಿ ಕಂಗನಾ ರಣಾವತ್

    ರಾವಣನ ಪ್ರತಿಕೃತಿ ದಹಿಸಿದ ನಟಿ ಕಂಗನಾ ರಣಾವತ್

    ನಿನ್ನೆ ದೆಹಲಿಯಲ್ಲಿ ನಡೆದ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಭಾಗಿಯಾಗಿ ರಾವಣನ ಪ್ರತಿಕೃತಿ ದಹಿಸಿದರು. ಈ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ ಕಂಗನಾ. ಇದೇ ಮೊದಲ ಬಾರಿಗೆ ಐವತ್ತು ವರ್ಷಗಳಿಂದ ಆಗದೇ ಇರುವಂತಹ ಕೆಲಸವೊಂದು ಕಂಗನಾ ಮೂಲಕ ಆಗಿದೆ.

    ದೆಹಲಿಯ (Delhi) ಕೆಂಪು ಕೋಟೆಯಲ್ಲಿ ಸತತವಾಗಿ 50 ವರ್ಷಗಳಿಂದಲೇ ನಡೆದುಕೊಂಡು ಬಂಧಿರುವಂತಹ ರಾವಣನ (Raavan) ಪ್ರತಿಕೃತಿ ದಹನವನ್ನು ಈ ಬಾರಿ ಕಂಗನಾ ರಣಾವತ್ ನಡೆಸಿಕೊಟ್ಟಿದ್ದಾರೆ. ಈವರೆಗೂ ಮಹಿಳೆಯೊಬ್ಬರು ಈ ಕೆಲಸವನ್ನು ಮಾಡಿರಲಿಲ್ಲ ಎನ್ನುವುದು ವಿಶೇಷ. ಲವ್ ಕುಶ ರಾಮಲೀಲಾ ಸಮತಿಯ ಅಧ್ಯಕ್ಷ ಅರ್ಜುನ್ ಸಿಂಗ್ ಈ ಮಾಹಿತಿಯನ್ನು ತಿಳಿಸಿದ್ದರು. ನಿನ್ನೆ ದಿನ ಐತಿಹಾಸಿಕ ದಾಖಲೆಯಾಗಿದೆ.

    ಇದೇ ವಾರದಲ್ಲಿ ಕಂಗನಾ ಸಿನಿಮಾ ರಿಲೀಸ್

    ಚಂದ್ರಮುಖಿ 2 ಸಿನಿಮಾ ರಿಲೀಸ್ ಬೆನ್ನಲ್ಲೇ ಮತ್ತೊಂದು ಸಿನಿಮಾದ ಹೊಸ ಅಪ್ ಡೇಟ್ ನೀಡಿದ್ದಾರೆ ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut). ತುಂಬಾ ನಿರೀಕ್ಷೆ ಮೂಡಿಸಿದ್ದ ಚಂದ್ರಮುಖಿ 2 ಸಿನಿಮಾ ಬಗ್ಗೆ ಅಷ್ಟೇನೂ ಹೇಳಿಕೊಳ್ಳುವಂತಹ ರೆಸ್ಪಾನ್ಸ್ ಸಿಕ್ಕಿಲ್ಲ. ಹಾಗಾಗಿ ಅವರ ಹೊಸ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

    ಈಗಾಗಲೇ ತೇಜಸ್ (Tejas) ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ ಕಂಗನಾ ರಣಾವತ್. ಈ ಸಿನಿಮಾದ ರಿಲೀಸ್ ಡೇಟ್ ಬಹಿರಂಗವಾಗಿದ್ದು, ಇದೇ ಅಕ್ಟೋಬರ್ 27ರಂದು ವಿಶ್ವದಾದ್ಯಂತ ಈ ಚಿತ್ರವನ್ನು ಬಿಡುಗಡೆ (Release) ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.

     

    ಈ ಸಿನಿಮಾದಲ್ಲಿ ತೇಜಸ್ ಗಿಲ್ ಎಂಬ ಏರ್ ಪೋರ್ಸ್ ಪೈಲಟ್ ಆಗಿ ಕಂಗನಾ ರಣಾವತ್ ಕಾಣಿಸಿಕೊಂಡಿದ್ದಾರೆ. ಸರ್ವೇಶ್ ಮೇವಾರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಏರ್ ಪೋರ್ಸ್ ದಿನವಾದ ಅಕ್ಟೋಬರ್ 8 ರಂದು ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಿವುಡ್ ಗೆ ಹಾರಲು ಯಶ್ ಸರ್ವ ಸಿದ್ಧತೆ: ಭರ್ಜರಿ ತಯಾರಿಯಲ್ಲಿ ರಾಕಿಭಾಯ್

    ಬಾಲಿವುಡ್ ಗೆ ಹಾರಲು ಯಶ್ ಸರ್ವ ಸಿದ್ಧತೆ: ಭರ್ಜರಿ ತಯಾರಿಯಲ್ಲಿ ರಾಕಿಭಾಯ್

    ಶ್ ಬಾಲಿವುಡ್ ಗೆ ಹಾರಲು ಸರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ರಾವಣ ಪಾತ್ರಕ್ಕಾಗಿ ಅವರು ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ತಮ್ಮ ಹೊಸ ಸಿನಿಮಾದ ಜೊತೆ ಜೊತೆಗೆ ಈ ಸಿನಿಮಾದಲ್ಲೂ ಅವರು ಭಾಗಿಯಾಗಲಿದ್ದಾರೆ ಎನ್ನುತ್ತಿವೆ ಮೂಲಗಳು.

    ರಾಮಾಯಣ (Ramayana) ಸಿನಿಮಾ ಆಗುತ್ತಿರುವ ವಿಚಾರ ಹಲವಾರು ತಿಂಗಳಿಂದ ಹರಿದಾಡುತ್ತಲೇ ಇದೆ. ಅದರಲ್ಲೂ ಈ ಸಿನಿಮಾದಲ್ಲಿ ರಾವಣನಾಗಿ (Raavan) ಕನ್ನಡದ ನಟ ಯಶ್ (Yash) ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಸಾಕಷ್ಟು ಬಾರಿ ಈ ವಿಚಾರ ಮುನ್ನೆಲೆಗೆ ಬಂದರೂ, ಯಶ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಈ ಸುದ್ದಿ ಹರಿದಾಡುವುದು ತಪ್ಪಿಲ್ಲ.

    ಯಶ್ ಏನೂ ಹೇಳದೇ ಇದ್ದರೂ, ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಮಧು ಮಾಂಟೇನ್ ಅವರು ಯಶ್ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದೂ ಮಾತನಾಡಿದ್ದರು. ಅದು ಈಗ ನಿಜವಾದಂತೆ ಕಾಣುತ್ತಿದೆ. ಈಗಾಗಲೇ ಯಶ್ ಲುಕ್ ಟೆಸ್ಟ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಸಿನಿಮಾಗಾಗಿ ಅವರು 15 ದಿನಗಳ ಕಾಲ ಕಾಲ್ ಶೀಟ್ ಕೂಡ ನೀಡಿದ್ದಾರೆ ಎನ್ನುವುದು ತಾಜಾ ಮಾಹಿತಿ.

    ನಿತಿಶ್ ತಿವಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಸತತ ಮೂರ್ನಾಲ್ಕು ವರ್ಷಗಳಿಂದ ಈ ಚಿತ್ರಕ್ಕಾಗಿ ತಿವಾರಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 2024ರಲ್ಲಿ ಈ ಸಿನಿಮಾ ಸೆಟ್ಟೇರಬಹುದು ಎಂದು ಅಂದಾಜಿಸಲಾಗಿದೆ. ರಾವಣನಾಗಿ ಯಶ್ ನಟಿಸಿದರೆ, ಶ್ರೀರಾಮನ ಪಾತ್ರವನ್ನು ರಣಬೀರ್ ಕಪೂರ್  (Ranbir Kapoor) ನಿರ್ವಹಿಸಲಿದ್ದಾರೆ. ಸೀತೆ ಪಾತ್ರವು ಸಾಯಿ ಪಲ್ಲವಿ (Sai Pallavi)ಅವರ ಪಾಲಾಗಿದೆ.

     

    ಸದ್ಯ ಯಶ್ ಹೊಸ ಸಿನಿಮಾದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಅಲ್ಲದೇ ದೇಶ ವಿದೇಶ ಸುತ್ತುತ್ತಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ. ರಾಮಾಯಣ ಸಿನಿಮಾ ಶುರುವಾಗುವ ಹೊತ್ತಿಗೆ ಹೊಸ ಸಿನಿಮಾದ ಬಹುತೇಕ ಕೆಲಸ ಮುಗಿಯುವ ಸಾಧ್ಯತೆ ಇದ್ದು, ಅದಕ್ಕಾಗಿ ಈ ಸಿನಿಮಾವನ್ನು ಯಶ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಲಿವುಡ್ ಗೆ ಅಲ್ಲ, ನಾನು ಎಲ್ಲಿಯೂ ಹೋಗಲ್ಲ ಎಂದ ನಟ ಯಶ್

    ಬಾಲಿವುಡ್ ಗೆ ಅಲ್ಲ, ನಾನು ಎಲ್ಲಿಯೂ ಹೋಗಲ್ಲ ಎಂದ ನಟ ಯಶ್

    ತ್ತೀಚಿನ ದಿನಗಳಲ್ಲಿ ಯಶ್ (Yash) ಬಾಲಿವುಡ್ ಗೆ ಹೋಗಲಿದ್ದಾರೆ ಎನ್ನುವ ಸುದ್ದಿಯಿತ್ತು. ರಣವೀರ್ ಕಪೂರ್ (Ranveer Kapoor) ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಅದರಲ್ಲೂ ಯಶ್ ಬಾಲಿವುಡ್ (Bollywood) ಚಿತ್ರದಲ್ಲಿ ರಾವಣನಾಗಿ (Ravana) ಕಾಣಿಸಿಕೊಳ್ಳಲಿದ್ದಾರೆ ಎಂದೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಕುರಿತು ಯಶ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಮನೆ ದೇವರು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದ ಯಶ್, ಮಾಧ್ಯಮಗಳ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಬಾಲಿವುಡ್ ಗೆ ಹೋಗುವ ವಿಚಾರ ಕೂಡ ಬಂತು. ಅದಕ್ಕೆ ಪ್ರತಿಕ್ರಿಯೆ ನೀಡಿ ‘ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಂಡಿದ್ದೇನೆ. ನಾನು ಎಲ್ಲೂ ಹೋಗುವುದಿಲ್ಲ. ಡೋಂಟ್ ವರಿ’ ಎಂದರು ಯಶ್. ಇದನ್ನೂ ಓದಿ:ಲೈಂಗಿಕ ಕಿರುಕುಳ ಆರೋಪ: ಧಾರಾವಾಹಿ ನಿರ್ಮಾಪಕನ ಮೇಲೆ ಎಫ್.ಐ.ಆರ್ ದಾಖಲು

    ರಾಕಿಂಗ್ ಸ್ಟಾರ್ (Rocking Star) ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಕುಟುಂಬ ಸಮೇತ ಇಂದು ನಂಜನಗೂಡಿಗೆ ಆಗಮಿಸಿ, ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಕ್ಕಳು ಹಾಗೂ ಅತ್ತೆ ಮಾವ ಸಮೇತ ದೇವಸ್ಥಾನಕ್ಕೆ ಆಗಮಿಸಿದ್ದ ಯಶ್ ಕೆಲ ಹೊತ್ತು ದೇವಸ್ಥಾನದಲ್ಲೇ ಇದ್ದು ನಂಜುಂಡೇಶ್ವರನ ದರ್ಶನ ಪಡೆದರು.

    ಸಿನಿಮಾ ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ಕೊಟ್ಟಿದ್ದಾರೆ ಯಶ್. ಕಳೆದ ಮೂರು ದಿನಗಳಿಂದ ಅವರು ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ ನಡುವೆ ಶ್ರೀಕಂಠೇಶ್ವರ ದೇವರಿಗೆ ಪೂಜೆ ನೆರವೇರಿಸಿದ್ದಾರೆ.

    ಮೈಸೂರು ಯಶ್ ಅವರ ಹುಟ್ಟೂರು. ಅಲ್ಲದೇ, ಮೈಸೂರಿಗೆ ಹೋದಾಗೆಲ್ಲ ಯಶ್ ಹೀಗೆ ಪ್ರವಾಸ ಮಾಡುತ್ತಲೇ ಇರುತ್ತಾರೆ. ಇಷ್ಟದ ಸ್ಥಳಗಳಿಗೆ ಈ ಬಾರಿ ಹೆಂಡತಿ ಮತ್ತು ಹೆಂಡತಿ ಕುಟುಂಬವನ್ನು ಅವರು ಕರೆದುಕೊಂಡು ಹೋಗಿದ್ದಾರೆ. ಈ ಬಾರಿ ಮಕ್ಕಳಿಗೂ ತಮ್ಮ ಹುಟ್ಟೂರು ತೋರಿಸಿದ್ದಾರೆ ರಾಕಿಂಗ್ ಸ್ಟಾರ್.

  • ರಾವಣ ಪಾತ್ರ ಮಾಡಲು ನಿರಾಕರಿಸಿದ್ರಾ ಯಶ್?: ಗಾಸಿಪ್.. ಗಾಸಿಪ್

    ರಾವಣ ಪಾತ್ರ ಮಾಡಲು ನಿರಾಕರಿಸಿದ್ರಾ ಯಶ್?: ಗಾಸಿಪ್.. ಗಾಸಿಪ್

    ನಿತೀಶ್ ತಿವಾರಿ (Nitish Tiwari) ನಿರ್ದೇಶನದಲ್ಲಿ ಮೂಡಿ ಬರಲಿರುವ ರಾಮಾಯಣವನ್ನು ಆಧರಿಸಿದ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಈ ಸಿನಿಮಾದಲ್ಲಿ ಅವರು ರಾವಣನಾಗಿ ಅಬ್ಬರಿಸಲಿದ್ದಾರೆ ಎಂದು ಹೇಳಲಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಈ ಸುದ್ದಿ ಸದ್ದು ಮಾಡಿದ್ದರೂ, ಈ ಕುರಿತಾಗಿ ಯಶ್ ಆಗಲಿ ಅಥವಾ ಸಿನಿಮಾ ತಂಡವಾಗಲಿ ಯಾವುದೇ ಹೇಳಿಕೆ ಕೂಡ ನೀಡಿರಲಿಲ್ಲ. ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು ಆ ಪಾತ್ರವನ್ನು ಮಾಡಲು ಯಶ್ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಯಶ್ ಕುರಿತಾಗಿ ಗಾಸಿಪ್ ಮೇಲೆ ಗಾಸಿಪ್ ಹುಟ್ಟಿಕೊಳ್ಳುತ್ತಿದ್ದರೂ, ಅಧಿಕೃತವಾಗಿ ಯಾರೂ ಅದನ್ನು ಒಪ್ಪಿಕೊಳ್ಳುತ್ತಿಲ್ಲ ಅಥವಾ ಅಲ್ಲಗಳೆಯುತ್ತಿಲ್ಲ. ರಾವಣನ ಪಾತ್ರವನ್ನು ಮಾಡಲ್ಲ ಎಂದು ಯಶ್ ಎಲ್ಲಿ ಅಧಿಕೃತವಾಗಿ ಹೇಳಿದ್ದಾರೋ ಗೊತ್ತಿಲ್ಲ. ಆದರೂ ಈ ಸುದ್ದಿ ಎಲ್ಲೆಡೆ ಪಸರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಯಶ್ ಯಾವುದೇ ವಿಷಯವಿದ್ದರೂ ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಮೂಲಕವೇ ತಿಳಿಸುತ್ತಿದ್ದಾರೆ. ಅಲ್ಲಿಯೂ ಈ ವಿಷಯ ಪ್ರಸ್ತಾಪವಾಗಿಲ್ಲ. ಇದನ್ನೂ ಓದಿ:ಚಿಟ್ಟೆಯಂತೆ ಮಿಂಚಿದ ಸಂತೂರ್‌ ಮಮ್ಮಿ ಪ್ರಣಿತಾ ಸುಭಾಷ್

    ರಾಮಾಯಣ (Ramayana) ಆಧಾರಿತ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹಲವು ತಿಂಗಳಿನಿಂದ ಬಾಲಿವುಡ್ ನಲ್ಲಿ  ಹರಿದಾಡುತ್ತಿದೆ. ಇದೊಂದು ಭಾರೀ ಬಜೆಟ್‍ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಭಾರತೀಯ ಸಿನಿಮಾ ರಂಗದ ಹೆಸರಾಂತ ನಟರು ಇರಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಧಿಕೃತವಾಗಿ ಸಿನಿಮಾ ಕುರಿತು ಯಾವುದೇ ಮಾಹಿತಿ ನೀಡದೇ ಇದ್ದರೂ, ತಾರಾಗಣದ ಯಾದಿ ಮಾತ್ರ ಹೊರಗೆ ಬಿದ್ದಿದೆ.

    ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್ (Ranbir Kapoor) ಕಾಣಿಸಿಕೊಂಡರೆ, ಸೀತೆಯಾಗಿ ಆಲಿಯಾ ಭಟ್ (Alia Bhatt) ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ನಿಜ ಜೀವನದಲ್ಲೂ ಸತಿ-ಪತಿಯಾಗಿರುವ ರಣಬೀರ್ ಮತ್ತು ಆಲಿಯಾ ಭಟ್ ತೆರೆಯ ಮೇಲೂ ಅಂಥಧ್ದೇ ಪಾತ್ರ ಮಾಡಲಿದ್ದಾರೆ ಎಂದು ಬಿಟೌನ್ ಮಾತನಾಡಿಕೊಳ್ಳುತ್ತಿದೆ.

    ಇದರ ಜೊತೆಗೆ ಕನ್ನಡದ ನಟಿ ರಾಕಿಂಗ್ ಸ್ಟಾರ್ ಯಶ್ (Yash) ಅವರು ರಾವಣ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಸ್ಟಾರ್ ಗಳ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಟೀಕೆ ಮಾಡಿದ್ದರು. ಅದರಲ್ಲೂ ಪರೋಕ್ಷವಾಗಿ ರಣಬೀರ್ ಕಪೂರ್ ಟೀಕಿಸಿದ್ದರು. ಮಾದಕ ವ್ಯಸನಿ, ಬಿಳಿ ಇಲಿ ಅಂತೆಲ್ಲ ಕರೆದಿದ್ದರು.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಕಂಗನಾ ರಣಾವತ್ (Kangana Ranaut), ‘ನಾನು ಇತ್ತೀಚಿನ ದಿನಗಳಲ್ಲಿ ರಾಮಾಯಣ ಸಿನಿಮಾ ಬಗ್ಗೆ ಕೇಳುತ್ತಿರುವೆ. ಅದರಲ್ಲಿ ಮಾದಕ ವ್ಯಸನಿಯೊಬ್ಬ ರಾಮನ ಪಾತ್ರ ಮಾಡಲಿದ್ದಾನಂತೆ. ತೆಳ್ಳಗಿನ ಬಿಳಿ ಇಲಿಯು ಕೆಟ್ಟ ರೀತಿಯಲ್ಲಿ ಬೇರೆಯವರ ಬಗ್ಗೆ ಪಿ.ಆರ್ ಮಾಡಿಕೊಂಡು ಓಡಾಡುವಲ್ಲಿ ಕುಖ್ಯಾತಿ ಪಡೆದವನು. ಇವನು ಕೇವಲ ನಟನಲ್ಲ, ಹೆಣ್ಣು ಬಾಕ ಕೂಡ. ಇಂಥವನು ರಾಮನಾಗಲು ಬೆಳೆದು ನಿಂತಿದ್ದಾನೆ’ ಎಂದು ಜರಿದಿದ್ದರು.

     

    ಯಶ್ ಅವರಿಗೆ ರಾವಣನ ಪಾತ್ರ ನೀಡಲಾಗಿದೆ ಎಂದು ಕೇಳಿದ್ದೇನೆ. ರಾವಣ ಪಾತ್ರಕ್ಕಿಂತ ಅವರಿಗೆ ರಾಮನ ಪಾತ್ರ ಹೊಂದುತ್ತದೆ ಎಂದು ಪರೋಕ್ಷವಾಗಿ ರಾಕಿಂಗ್ ಸ್ಟಾರ್ ಬೆಂಬಲಕ್ಕೆ ನಿಂತಿದ್ದರು. ಈ ಎಲ್ಲ ಹೇಳಿಕೆಗಳ ನಡುವೆಯೂ ಅವರು ರಣಬೀರ್ ಕಪೂರ್ ಎಚ್ಚರಿಕೆಯನ್ನೂ ನೀಡಿದ್ದು, ‘ನೀನು ಒಮ್ಮೆ ಹೊಡೆದರೆ ನಾನು ಸಾಯೋತನಕ ಹೊಡೆಯುತ್ತೇನೆ. ಗಲಾಟೆ ಮಾಡದೇ ದೂರ ಇರು’ ಎಂದು ಬರೆದುಕೊಂಡಿದ್ದರು.

  • ರಾಮನಿಗಿಂತ ರಾವಣ ಜ್ಞಾನಿ – ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ: ರಾಜನಾಥ್ ಸಿಂಗ್

    ರಾಮನಿಗಿಂತ ರಾವಣ ಜ್ಞಾನಿ – ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ: ರಾಜನಾಥ್ ಸಿಂಗ್

    ಉಡುಪಿ: ವಿದ್ಯಾರ್ಥಿಗಳಲ್ಲಿ (Students) ಜ್ಞಾನದ ಜೊತೆ ಬುದ್ಧಿವಂತಿಕೆಯೂ ಅಗತ್ಯ. ರಾಮನಿಗಿಂತ (Rama) ರಾವಣ (Ravana) ಜ್ಞಾನಿಯಾಗಿದ್ದ. ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ. ಸಂಸ್ಕೃತಿ ಮತ್ತು ಸಂಪ್ರದಾಯ ಇಲ್ಲದ ನಾಗರಿಕ ಜೀವನಕ್ಕೆ ಅರ್ಥ ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮಣಿಪಾಲ (Manipal) ವಿವಿಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದರು.

    ನೀವು ಜ್ಞಾನವಂತರಾದರೆ ಸಾಲದು. ನಿಮ್ಮಲ್ಲಿ ಸಂಸ್ಕೃತಿ ಜೊತೆ ಬುದ್ಧಿವಂತಿಕೆ ಇರಬೇಕು ಎಂದು ರಾಜಕೀಯ ಜೀವನ ಆರಂಭಕ್ಕೂ ಮೊದಲು ಉತ್ತರಪ್ರದೇಶದಲ್ಲಿ ಉಪನ್ಯಾಸಕ ವೃತ್ತಿ ಮಾಡಿದ್ದ ರಾಜನಾಥ್ ಸಿಂಗ್ ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು. ಇದನ್ನೂ ಓದಿ: ಆ ಕಾಲ ಹೋಯ್ತು.. ಭಾರತದ ತಂಟೆಗೆ ಬಂದ್ರೆ ಮುಖಮೂತಿ ನೋಡಲ್ಲ – ರಾಜನಾಥ್ ಸಿಂಗ್ ಎಚ್ಚರಿಕೆ

    ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಹಲವಾರು ವರ್ಷಗಳಿಂದ ಸಾಧನೆ ಮಾಡಿಕೊಂಡು ಬಂದಿದೆ. ಈ ಬಗೆಗಿನ ನಮ್ಮ ಅಭಿಮಾನವನ್ನು ಕೆಲವರು ಹೆಚ್ಚುಗಾರಿಕೆ ಎಂದು ಟೀಕಿಸುತ್ತಾರೆ. ಇತಿಹಾಸವನ್ನು ತಿಳಿದುಕೊಳ್ಳದ ವ್ಯಕ್ತಿಗಳು ಇಂತಹ ಟೀಕೆಗಳನ್ನು ಮಾಡುತ್ತಾರೆ. ಭಾರತೀಯರು ಕೊಟ್ಟ ಶೂನ್ಯ ಇರದ ಗಣಿತವನ್ನು ಊಹಿಸಲು ಸಾಧ್ಯವಿಲ್ಲ. ಪೈಥಾಗೊರಸ್‌ನ ಪ್ರಮೇಯವನ್ನು ಬೋಧಾಯನ ಋಷಿ 300 ವರ್ಷಗಳ ಹಿಂದೆಯೇ ಹೇಳಿದ್ದರು. ಭಾರತದ ಆರ್ಥಿಕ ಸದೃಢತೆ ಗುಣಮಟ್ಟದ ಮಾನವ ಸಂಪನ್ಮೂಲಗಳಲ್ಲಿ ಇದೆ ಎಂದರು. ಇದನ್ನೂ ಓದಿ: ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಕ – ಹಿಂದೂಗಳ 5 ದಶಕಗಳ ಹೋರಾಟಕ್ಕೆ ಜಯ ಎಂದ ಸಿಟಿ ರವಿ

    Live Tv
    [brid partner=56869869 player=32851 video=960834 autoplay=true]