Tag: ratna prabha

  • ಬಿಎಸ್‍ವೈ ಮನೆಗೆ ರತ್ನಪ್ರಭಾ ಆಗಮನ!

    ಬಿಎಸ್‍ವೈ ಮನೆಗೆ ರತ್ನಪ್ರಭಾ ಆಗಮನ!

    ಬೆಂಗಳೂರು: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದ್ದು, ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಮನೆಗೆ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಆಗಮಿಸಿದ್ದು, ಕುತೂಹಲ ಮೂಡಿಸಿದೆ.

    ಹೌದು. ಸುಮಾರು ಎರಡು ತಿಂಗಳ ಮಹಾಭಾರತ ಕುರುಕ್ಷೇತ್ರದ ಫಲಿತಾಂಶ ಬೆಳಗ್ಗೆ 8 ಗಂಟೆಯಿಂದ ಶುರುವಾಗಿದ್ದು, ಜನರ ಚಿತ್ರ ದೇಶದ ಫಲಿತಾಂಶದತ್ತ ನೆಟ್ಟಿದೆ. ಇತ್ತ ರಾಜಕೀಯ ನಾಯಕರುಗಳು ತಮ್ಮ ತಮ್ಮ ರಾಜಕೀಯ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಯಡಿಯೂರಪ್ಪ ಅವರ ಮನೆಗೆ ರತ್ನಪ್ರಭಾ ಆಗಮಿಸಿದ್ದಾರೆ.

    ಡಾಲರ್ಸ್ ಕಾಲೋನಿಯಲ್ಲಿರೋ ಬಿಎಸ್‍ವೈ ಮನೆಗೆ ಆಗಮಿಸಿರುವ ರತ್ನಪ್ರಭಾ ಅವರು ರಾಜಕೀಯ ಬೆಳವಣಿಗೆಗಳ ಕುರಿತಂತೆ ಚರ್ಚೆ ನಡೆಸೋ ಸಾಧ್ಯತೆಗಳಿವೆ ಎನ್ನಲಾಗಿದೆ.

    ಇತ್ತ ಬಿಜೆಪಿ ಕಚೇರಿ ಮುಂಭಾಗ ದೊಡ್ಡ ಎಲ್ ಇಡಿ ಸ್ಕ್ರೀನ್ ಪರದೆಯ ಮೂಲಕ ಚುನಾವಣಾ ಫಲಿತಾಂಶ ವೀಕ್ಷಣೆಗೆ ಸಜ್ಜು ಮಾಡಲಾಗುತ್ತಿದೆ. ಅಲ್ಲದೆ ಸಾಕಷ್ಟು ಕಾರ್ಯಕರ್ತ ರು ಆಗಮಿಸುವ ನಿರೀಕ್ಷೆ ಇರೋದ್ರಿಂದ ಪೊಲೀಸ್ ಭದ್ರತೆ ಒದಗಿಸಲಾಗಿದೆ.

  • ನಾನು ತಪ್ಪು ಮಾಡಿದ್ರೆ, ಆಗ ಪ್ರಿಯಾಂಕಾ ಖರ್ಗೆ ನಿದ್ದೆ ಮಾಡುತ್ತಿದ್ರಾ: ರತ್ನಪ್ರಭಾ ಪ್ರಶ್ನೆ

    ನಾನು ತಪ್ಪು ಮಾಡಿದ್ರೆ, ಆಗ ಪ್ರಿಯಾಂಕಾ ಖರ್ಗೆ ನಿದ್ದೆ ಮಾಡುತ್ತಿದ್ರಾ: ರತ್ನಪ್ರಭಾ ಪ್ರಶ್ನೆ

    ರಾಯಚೂರು: ಅಧಿಕಾರದಲ್ಲಿದ್ದಾಗ ನಾನು ತಪ್ಪು ಮಾಡಿದ್ರೆ ಆಗ ಪ್ರಿಯಾಂಕಾ ಖರ್ಗೆ ಅವರು ನಿದ್ದೆ ಮಾಡುತ್ತಿದ್ದರಾ? ನಾನು ತಪ್ಪು ಮಾಡಿದ್ದರೆ ಈ ಬಗ್ಗೆ ಬಯಲು ಮಾಡಲಿ ಎಂದು ನಿವೃತ್ತ ಐಎಎಸ್ ಅಧಿಕಾರಿ, ಬಿಜೆಪಿ ನಾಯಕಿ ರತ್ನಪ್ರಭಾ ಸವಾಲು ಹಾಕಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹೇಳಿಕೊಟ್ಟ ಹಾಗೆ ಹೇಳಿಕೆ ನೀಡಿದರೆ ಅಧಿಕಾರದಲ್ಲಿದ್ದಾಗ ಮಾಡಿದ್ದ ತಪ್ಪುಗಳನ್ನ ಹೊರಹಾಕುತ್ತೇವೆ ಎಂದಿದ್ದ ಪ್ರಿಯಾಂಕಾ ಖರ್ಗೆ ಅವರಿಗೆ ತಿರುಗೇಟು ನೀಡಿದರು.

    ನಿವೃತ್ತಿ ಆದ ಮೇಲೆ ಅಭಿವೃದ್ಧಿಗಾಗಿ ಚುನಾವಣೆಯಲ್ಲಿ ಮತ ನೀಡಿ ಎಂದು ಜನರಲ್ಲಿ ಬೇಡಿಕೊಳ್ಳುತ್ತಿದ್ದೇವೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ವೇಗವಾಗಿ ಅಭಿವೃದ್ಧಿ ಆಗಬೇಕು, ಹಾಗಾಗಿ ಬಿಜೆಪಿ ಮೂಲಕ ರಾಜಕೀಯಕ್ಕೆ ಬಂದಿದ್ದೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಈ ಭಾಗದಲ್ಲಿ ಅಭಿವೃದ್ಧಿ ವೇಗ ಕಡಿಮೆ ಇದೆ. ನಾನು ಅಧಿಕಾರದಲ್ಲಿದ್ದಾಗ ಸಾಕಷ್ಟು ಕೆಲಸಗಳನ್ನ ಮಾಡಲು ಆಗಲಿಲ್ಲ. ಈಗ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯಾದ್ಯಂತ ಓಡಾಡುತ್ತೇನೆ. ಸದಾಶಿವ ಆಯೋಗ ವರದಿ ವಿಚಾರದಲ್ಲಿ ರಾಜಕೀಯ ನಿರ್ಣಯ ತೆಗೆದುಕೊಳ್ಳಬೇಕು. ನನ್ನ ಅವಧಿ ವೇಳೆ ಸದನದಲ್ಲಿ ಈ ಬಗ್ಗೆ ಚರ್ಚೆ ಆಗಿತ್ತು. ಆದರೆ ಆ ವೇಳೆಗೆ ಚುನಾವಣಾ ದಿನಾಂಕ ಘೋಷಣೆ ಆಗಿ ನೀತಿ ಸಂಹಿತೆ ಜಾರಿ ಆಗಿತ್ತು. ಅದ್ದರಿಂದ ಅದನ್ನು ಕೈ ಬಿಡಲಾಯಿತು. ಸದ್ಯ ಈ ಬಗ್ಗೆ ಚರ್ಚೆ ನಡೆಸಬೇಕು. ಸದಾಶಿವ ಆಯೋಗ ವರದಿ ಜಾರಿ ಆಗಲೇಬೇಕು ಎಂದು ಹೇಳಿದರು.

  • ಶಿಕ್ಷಣ ವ್ಯವಸ್ಥೆ ಬಗ್ಗೆ ಪ್ರಧಾನ ಕಾರ್ಯದರ್ಶಿ ರತ್ನ ಪ್ರಭಾರಿಂದ ಅಚ್ಚರಿಯ ಟ್ವೀಟ್

    ಶಿಕ್ಷಣ ವ್ಯವಸ್ಥೆ ಬಗ್ಗೆ ಪ್ರಧಾನ ಕಾರ್ಯದರ್ಶಿ ರತ್ನ ಪ್ರಭಾರಿಂದ ಅಚ್ಚರಿಯ ಟ್ವೀಟ್

    ಬೆಂಗಳೂರು: ಸರ್ಕಾರದ ಪ್ರಧಾನ ಕಾರ್ಯದರ್ಶಿ ರತ್ನ ಪ್ರಭಾ ಅವರು ಅಚ್ಚರಿಯ ಟ್ವೀಟ್ ಮಾಡಿದ್ದಾರೆ.

    ಶಿಕ್ಷಣ ವ್ಯವಸ್ಥೆಯಲ್ಲಿ ಮಾಫಿಯಾ ಬಗ್ಗೆ ಟ್ವೀಟ್‍ನಲ್ಲಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ಅವರು, ಶಿಕ್ಷಣ ವ್ಯವಸ್ಥೆಯ ಮಾಫಿಯಾ ಹೆಚ್ಚಾಗಲು ಅಧಿಕಾರಿಗಳೇ ಕಾರಣ. ಲೋಪದೋಷಗಳನ್ನು ಸರಿಪಡಿಸುವಲ್ಲಿ ಸರಿಯಾದ ಸಮಯದಲ್ಲಿ ಅಧಿಕಾರಿಗಳು ಕೆಲಸ ಮಾಡಲ್ಲ. ಇದ್ರಿಂದಲೇ ಶಿಕ್ಷಣ ಕ್ಷೇತ್ರದಲ್ಲಿ ಮಾಫಿಯಾ ಹೆಚ್ಚಾಗಿದೆ ಅಂತಾ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನು ಮುಂದೆ ಮಕ್ಕಳು ಪುಸ್ತಕ ನೋಡಿ ಪರೀಕ್ಷೆ ಬರೆಯಬೇಕು: ಎನ್.ಮಹೇಶ್

    ಪ್ರಧಾನ ಕಾರ್ಯದರ್ಶಿಯವರ ಬಹಿರಂಗ ಟ್ವೀಟ್ ಇದೀಗ ಅಚ್ಚರಿ ಮೂಡಿಸಿದೆ. ಉನ್ನತ ಹುದ್ದೆಯಲ್ಲಿದ್ದವರೇ ಹೀಗೆ ಅಸಹಾಯಕರಾದ್ರೇ ಹೇಗೆ ಎಂಬ ಪ್ರಶ್ನೆಯೊಂದು ಮೂಡಿಬಂದಿದೆ. ಇದನ್ನೂ ಓದಿ: ಐಎಎಸ್ ಅಧಿಕಾರಿಗಳಾದ ಶಾಲಿನಿ ರಜನೀಶ್, ಶಿಖಾಗೆ ಸಿಎಂ ಬುದ್ಧಿವಾದ