Tag: ration

  • ಅನ್ನಭಾಗ್ಯದ ಅಕ್ಕಿ ಬೇಕಂದ್ರೆ ಕೊಡ್ಬೇಕು 250 ರೂ. – ಚಿಲ್ಲರೆ ಹಣಕ್ಕೆ ಏನಾದ್ರೂ ತಗೊಂಡರಷ್ಟೇ ಉಚಿತ ಅಕ್ಕಿ

    ಅನ್ನಭಾಗ್ಯದ ಅಕ್ಕಿ ಬೇಕಂದ್ರೆ ಕೊಡ್ಬೇಕು 250 ರೂ. – ಚಿಲ್ಲರೆ ಹಣಕ್ಕೆ ಏನಾದ್ರೂ ತಗೊಂಡರಷ್ಟೇ ಉಚಿತ ಅಕ್ಕಿ

    – ಶಿವಾನಂದನಗರದ ನ್ಯಾಯಬೆಲೆ ಅಂಗಡಿಯಲ್ಲಿ ಘಟನೆ

    ಬೆಂಗಳೂರು: ರಾಜ್ಯ ಸರ್ಕಾರ ಬಡವರಿಗೆ ಉಚಿತವಾಗಿ ನೀಡುವ ಅನ್ನಭಾಗ್ಯ ಅಕ್ಕಿ ತೆಗೆದುಕೊಳ್ಳಲು 250 ರೂ. ಕೊಡಬೇಕು. ಇಲ್ಲ ಅಂದ್ರೆ ಅಕ್ಕಿ ಕೊಡಲ್ಲ ಎಂದು ನ್ಯಾಯಬೆಲೆ ಅಂಗಡಿಯೊಂದರಲ್ಲಿ ಜನರ ಮೇಲೆ ದರ್ಪ ತೋರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರು ಜಿಲ್ಲೆಯ ಉತ್ತರ ತಾಲೂಕಿನ ಶಿವಾನಂದ ನಗರದ ನ್ಯಾಯಬೆಲೆ ಅಂಗಡಿಯಲ್ಲಿ ಅದರ ಸನ್ನದುದಾರರು ತಾವು ಮಾಡಿದ್ದೇ ರೂಲ್ಸ್ ಎಂಬಂತೆ ವರ್ತಿಸಿದ್ದಾರೆ. ಅಕ್ಕಿ ಕೇಳಿದ ಜನರ ಮೇಲೆ ಕೂಗಾಗಿದ್ದಾರೆ. ಇದನ್ನು ಜನರು ವೀಡಿಯೋ ಮಾಡಿಕೊಂಡು ಹರಿಬಿಟ್ಟಿದ್ದಾರೆ.

    ಸರ್ಕಾರ ಉಚಿತವಾಗಿ ನೀಡುವ ಅಕ್ಕಿ ಜೊತೆಗೆ ನ್ಯಾಯಬೆಲೆ ಅಂಗಡಿಯವರು ಕೊಡುವ ಚಿಲ್ಲರೆ ಐಟಂ ತೆಗೆದುಕೊಳ್ಳಲೇಬೇಕು. ಅದಕ್ಕೆ 250 ರೂಪಾಯಿ ನೀಡಬೇಕು. ಇಲ್ಲ ಅಂದರೆ ರೇಷನ್ ಕೊಡಲ್ಲ. ಇದನ್ನು ಯಾರಾದರು ಪ್ರಶ್ನೆ ಮಾಡಿದರೆ ಮುಗೀತು. ಪ್ರಶ್ನಿಸಿದ ಪಡಿತರ ಚೀಟಿದಾರರ ಮೇಲೆ ಸನ್ನದುದಾರ ದರ್ಪ ತೋರಿದ್ದಾರೆ.

    ವೀಡಿಯೋದಲ್ಲಿ ಏನಿದೆ?
    ಪಡಿತರ ಚೀಟಿದಾರ: ನಾವ್ಯಾಕೆ 250 ರೂಪಾಯಿ ಕೊಡಬೇಕು..?
    ರೇಷನ್ ಅಂಗಡಿಯವನು: ಬೇಕಂದ್ರೆ ತಗೊಳ್ಳಿ.. ಬೇಡ ಅಂದ್ರೆ ಹೋಗ್ತಾ ಇರಿ.. ಅವರೆಲ್ಲಾ ಬೆಳಗ್ಗೆಯಿಂದ ನಿಂತಿಲ್ವಾ..?
    ಪಡಿತರ ಚೀಟಿದಾರ: ಈಚೆಗೆ ಹೋಗೋದು ಗೊತ್ತು.
    ರೇಷನ್ ಅಂಗಡಿಯವನು: ಹೇ ಹೋಗೋ… (ಆಡಿಯೋ ಮ್ಯೂಡಿ ಮಾಡಿ) ಏನಕ್ಕೆ ವಿಡಿಯೋ ಮಾಡ್ತಿಯಾ, ಇಳ್ಸೋ..
    ಪಡಿತರ ಚೀಟಿದಾರ: ಏನಕ್ಕೆ ನಿಲ್ಲಿಸಬೇಕು..
    ರೇಷನ್ ಅಂಗಡಿಯವನು: ಅಂಗಡಿ ನಮ್ದೋ.. ತಗೋಳಂಗಿದ್ರೆ ತಗೋ.. ಇಲ್ಲ ಏನ್ ಮಾಡ್ತಿಯಾ ಮಾಡೋ..
    ಪಡಿತರ ಚೀಟಿದಾರ: ನಮಗೆ ಬೇಡ ಅಂತಿಲ್ವಾ, ಗೌರ್ಮೆಂಟ್ ಏನ್ ಕೊಟ್ಟಿದೆಯೋ ಕೊಡಿ…
    ರೇಷನ್ ಅಂಗಡಿಯವ: ಅದು ಎಲ್ಲಿ ಹಾಕ್ತಿಯೋ ಹಾಕ್ಕೋ ಹೋಗು.. 250 ರೂ.ಗೆ ತಗೋ ಅಂದಿದ್ದು.

    ಪೀಣ್ಯ ಅಂದ್ರಳ್ಳಿ ಭಾಗದಲ್ಲಿ ಬರುವ ಶಿವನಾಂದನಗರದ ರೇಷನ್ ಅಂಗಡಿಯ ಮಾಲೀಕ ಕಾಳೇಗೌಡ ಅಂತ. ಮೊದಲು ಐಟಮ್ ತಗೋತ್ತಾರೆ. ಆಮೇಲೆ 200 ಕೊಡಿ ಅಂತಾರೆ. ಇಷ್ಟು ತಿಂಗಳು 200 ರೂಪಾಯಿ ತಗೊಂಡು ಅದಕ್ಕೆ ಬೇಡದೇ ಇರೋ ಸೋಪು, ಉಪ್ಪು, ಗೋಧಿಹಿಟ್ಟು ಕೊಡ್ತಾರೆ. ಹಣ ಕೊಡಲ್ಲ ಅಂದ್ರೆ ಸರ್ಕಾರದ ಉಚಿತ ರೇಷನ್ ಕೂಡ ಇಲ್ಲ ಅಂತಾರೆ. ಈ ತಿಂಗಳಿಂದ 250 ರೂ. ಕೊಡಬೇಕಂತಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ರೆ ಕೈ ಮಾಡಲು ಬರ್ತಾರೆ ಅಂತ ತಮ್ಮ ಅಸಹಾಯಕತೆಯನ್ನು ಪಡಿತರ ಚೀಟಿದಾರ ಹೇಳಿಕೊಂಡಿದ್ದಾರೆ.

  • ಬಿಪಿಎಲ್, ಎಪಿಎಲ್‌ ಕಾರ್ಡ್‌ದಾರರಿಗೆ ಬಿಗ್‌ ಶಾಕ್!

    ಬಿಪಿಎಲ್, ಎಪಿಎಲ್‌ ಕಾರ್ಡ್‌ದಾರರಿಗೆ ಬಿಗ್‌ ಶಾಕ್!

    – 60 ಸಾವಿರ ಬಿಪಿಎಲ್ ಕಾರ್ಡ್‌ಗಳು ಎಪಿಎಲ್‌ಗೆ ಶಿಫ್ಟ್‌

    ಬೆಂಗಳೂರು: ಬಿಪಿಎಲ್‌, ಎಪಿಎಲ್ ಕಾರ್ಡ್‌ದಾರರಿಗೆ ಸರ್ಕಾರ ಬಿಗ್‌ ಶಾಕ್‌ ನೀಡಿದೆ. ಆಧಾರ್‌(ಇ ಕೆವೈಸಿ) ಜೋಡಣೆಯಾಗದ ಬಿಪಿಎಲ್‌, ಎಪಿಎಲ್‌ ಕಾರ್ಡ್‌ಗಳನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಮಾನತು ಮಾಡಿದೆ.

    ಈಗಾಗಲೇ ಲಕ್ಷಾಂತರ ಎಪಿಎಲ್ ಕಾರ್ಡ್‌ಗಳು ರದ್ದಾಗಿದ್ದು 60 ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು (BPL Card) ಎಪಿಎಲ್‌ಗೆ ಶಿಫ್ಟ್‌ ಮಾಡಲಾಗಿದೆ. ರೇಷನ್‌ ಅಂಗಡಿಗೆ (Ration Shop) ತೆರಳಿದಾಗಲೇ ಈ ವಿಚಾರ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್​ಗಳನ್ನು ರದ್ದುಪಡಿಸಿದ ಬೆನ್ನಲ್ಲೇ ಆಹಾರ ಇಲಾಖೆ ಈಗ ಎಪಿಎಲ್ ಕಾರ್ಡ್​ದಾರರಿಗೂ ಬಿಸಿ ಮುಟ್ಟಿಸಿದೆ.

    22 ಲಕ್ಷ ಎಪಿಎಲ್ (APL Card) ಮತ್ತು ಬಿಪಿಎಲ್ ಕಾರ್ಡ್‌ಗಳನ್ನು (BPL Card) ಆಹಾರ ಇಲಾಖೆ ಅಮಾನತು ಮಾಡಿದ್ದು ಸರಿಯಾಗಿ ಕೆವೈಸಿ ಜೋಡಣೆಯಾದ ಬಳಿಕ ಈ ಕಾರ್ಡ್‌ದಾರರಿಗೆ ಅಕ್ಕಿ ಸಿಗಲಿದೆ. ಇದನ್ನೂ ಓದಿ: ನನ್ನನ್ನ ಮುಟ್ಟಿದರೆ ಹುಷಾರ್ – ಸದ್ದಿಲ್ಲದೇ ಅಹಿಂದ ಶಕ್ತಿ ಪ್ರದರ್ಶನಕ್ಕೆ ಮುಂದಾದ ಸಿಎಂ

    ರಾಜ್ಯದಲ್ಲಿ ಪ್ರಸ್ತುತ 25,62,562 ಎಪಿಎಲ್ ಕಾರ್ಡ್​ಗಳಿದ್ದು 87,86,886 ಸದಸ್ಯರಿದ್ದಾರೆ. ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ’ಯಡಿ ಎಪಿಎಲ್ ಹೊಂದಿರುವ ಪ್ರತಿ ಕಾರ್ಡ್​ಗೆ ಕೆಜಿ ಅಕ್ಕಿಗೆ 15 ರೂ.ನಂತೆ 10 ಕೆಜಿ ಅಕ್ಕಿ ನೀಡಲಾಗುತ್ತದೆ.

    ಬಿಪಿಎಲ್‌ ಆಪರೇಷನ್‌:
    ಬಿಪಿಎಲ್ ಕಾರ್ಡಿಗೆ (BPL Card) ಕೆಲವೊಂದು ಷರತ್ತು ಹಾಕುವ ಮೂಲಕ ಉಳಿತಾಯಕ್ಕೆ ಸರ್ಕಾರ ಪ್ಲ್ಯಾನ್‌ ಮಾಡಿಕೊಂಡಿದೆ. ಆಪರೇಷನ್ ಬಿಪಿಎಲ್ ಕಾರ್ಡ್‌ಗೆ (Operation BPL Card) ಸಿಎಂ ಸಿದ್ದರಾಮಯ್ಯ ಸೂಚಿಸಿದ ಬೆನ್ನಲ್ಲೇ ಇಲಾಖೆಯಿಂದ ಬೋಗಸ್ ಕಾರ್ಡ್ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್ ಕಾರ್ಡ್ ಪರಿಶೀಲನೆ ಕಾರ್ಯ ನಡೆದಿತ್ತು. ಇದನ್ನೂ ಓದಿ: ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ – ಶೀ‍ಘ್ರವೇ ಆಪರೇಷನ್ ಬಿಪಿಎಲ್ ಕಾರ್ಡ್‌

    ಅಕ್ರಮ ಫಲಾನುಭವಿಗಳನ್ನು ಪತ್ತೆ ಹಚ್ಚಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಾಲ್ಕು ಬೇರೆ ಇಲಾಖೆಗಳ ಸಹಕಾರ ಪಡೆಯಲಿದೆ ಎಂದು ಹಿಂದೆ ಪಬ್ಲಿಕ್‌ ಟಿವಿ ವರದಿ ಮಾಡಿತ್ತು. ಕಾರ್ಡ್‌ದಾರರ ಹೆಸರಲ್ಲಿ ವಾಹನ ಇವೆಯಾ ಎಂಬುದನ್ನು ಪತ್ತೆ ಹಚ್ಚಲು ಸಾರಿಗೆ ಇಲಾಖೆ, ಜಮೀನು ಎಷ್ಟಿದೆ ಎಂಬುದನ್ನು ತಿಳಿಯಲು ಕಂದಾಯ ಇಲಾಖೆ, ತೆರಿಗೆ ಪಾವತಿದಾರರಾ ಎಂಬುದನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆಯ ನೆರವು ಪಡೆದು ಆಪರೇಷನ್‌ಗೆ ಮಾಡಲಿದೆ ಎಂದು ವರದಿಯಾಗಿತ್ತು.

     

    ಎಪಿಎಲ್ ರದ್ದಾದ್ರೆ ಏನೆಲ್ಲ ಸೌಲಭ್ಯ ಸಿಗಲ್ಲ?
    1. ಎಪಿಎಲ್ ರದ್ದತಿಯಿಂದ ಗೃಹಲಕ್ಷ್ಮೀ ಯೋಜನೆಯಡಿ ಪಡೆಯುತ್ತಿದ್ದ ಹಣ ಸ್ಥಗಿತ
    2. ಕುಟುಂಬದ ಐಡಿ ಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
    3. ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಆಗಲ್ಲ
    4. ವಿವಿಧ ಸರ್ಕಾರಿ ಸೌಲಭ್ಯ ಸಿಗಲ್ಲ
    5. ಆಯುಷ್ಮಾನ್ ಭಾರತ್ ಯೋಜನೆ ಲಾಭ ಪಡೆಯಲು ಸಾಧ್ಯವಿಲ್ಲ.
    6. ರಿಯಾಯಿತಿ ದರದಲ್ಲಿ ಅಕ್ಕಿ ಸಿಗಲ್ಲ

    ರದ್ದು ಯಾಕೆ?
    ಆದಾಯ ತೆರಿಗೆ ಪಾವತಿ, ಸರ್ಕಾರಿ ನೌಕರರಾಗಿದ್ದರೂ ಬಿಪಿಎಲ್‌ ಕಾರ್ಡ್‌ ಬಳಸಿ ಸರ್ಕಾರಿ ಯೋಜನೆಗಳ ಲಾಭ ಪಡೆಯುತ್ತಿದ್ದಕ್ಕೆ ಕಾರ್ಡ್‌ ರದ್ದು ಮಾಡಲಾಗಿದೆ.

     

  • ಪತಿಯ ಮೇಲೆ ಪಡಿತರ ಅಕ್ರಮ ಕೇಸ್‌ ದಾಖಲಾದ್ರೂ ಈಗ ಪತ್ನಿಗೆ ಸಿಕ್ತು ರೇಷನ್‌ ಅಂಗಡಿ ಲೈಸೆನ್ಸ್‌!

    ಪತಿಯ ಮೇಲೆ ಪಡಿತರ ಅಕ್ರಮ ಕೇಸ್‌ ದಾಖಲಾದ್ರೂ ಈಗ ಪತ್ನಿಗೆ ಸಿಕ್ತು ರೇಷನ್‌ ಅಂಗಡಿ ಲೈಸೆನ್ಸ್‌!

    – ಹಲವು ಠಾಣೆಗಳಲ್ಲಿ ತೇಲಿ ಮೇಲೆ ಹಲವು ಎಫ್‌ಐಆರ್‌ ದಾಖಲು
    – ಅಕ್ರಮ ಗೊತ್ತಿದ್ದರೂ ಪತ್ನಿಗೆ ಲೈಸೆನ್ಸ್‌ ಸಿಕ್ಕಿದ್ದು ಹೇಗೆ?

    ಬಾಗಲಕೋಟೆ: ‌ಜಿಲ್ಲೆಯಲ್ಲಿ ಪಡಿತರ (Ration), ಅಕ್ಷರದಾಸೋಹ ಯೋಜನೆ ಹಾಗೂ ಅಂಗನವಾಡಿಗಳಿಗೆ ಬರುವ ಆಹಾರ (Food) ಧಾನ್ಯಗಳ ಅಕ್ರಮ ದಂಧೆ ಎಗ್ಗಿಲ್ಲದೇ ಸಾಗುತ್ತಿದೆ. ಅಕ್ರಮ ದಂಧೆ ನಡೆಯುತ್ತಿದ್ದರೂ ಪೊಲೀಸರು (Police) ಕೇವಲ ಎಫ್‌ಐಆರ್‌ (FIR) ಹಾಕಿ ಬಿಡುತ್ತಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ನಿವಾಸಿ ರಾಘವೇಂದ್ರ ತೇಲಿ ಕಳೆದ ಹಲವು ವರ್ಷಗಳಿಂದ ಆಹಾರಧಾನ್ಯ ಅಕ್ರಮ ದಂಧೆ ಮಾಡುತ್ತಾ ಬಂದಿದ್ದಾನೆ. ಈತನ ಮೇಲೆ ಹಲವು ಎಫ್‌ಐಆರ್‌ ದಾಖಲಾಗಿದ್ದರೂ ತನ್ನ ಪತ್ನಿ ಹೆಸರಲ್ಲಿ ಪುನಃ ರೇಷನ್ ಅಂಗಡಿ ಆರಂಭಿಸಿ ಅಕ್ರಮ ದಂಧೆ ಶುರುವಿಟ್ಟುಕೊಂಡಿದ್ದಾನೆ ಎಂದು ಸ್ಥಳೀಯ ಜನರು ಗಂಭೀರ ಆರೋಪ ಮಾಡಿದ್ದಾರೆ.

    ಏನೇನು ಆರೋಪವಿದೆ?
    ಪಡಿತರ ಅಕ್ಕಿ,  ಅಕ್ಷರದಾಸೋಹ ಯೋಜನೆಯಡಿ ಬರುವ ಆಹಾರ ಧಾನ್ಯ, ಅಂಗನವಾಡಿಗೆ ಬರುವ ಮಕ್ಕಳ ಆಹಾರ ಧಾನ್ಯಗಳನ್ನು  ಅಕ್ರಮವಾಗಿ ಶೇಖರಣೆ ಮಾಡಿ ನೆರೆಯ ಮಹಾರಾಷ್ಟ್ರಕ್ಕೆ ಕಳ್ಳ ಸಾಗಾಣಿಕೆ ಮಾಡಿದ ಆರೋಪ ರಾಘವೇಂದ್ರ ತೇಲಿ ಮೇಲಿದೆ.

    ಈತನ ಮೇಲೆ ವಿವಿಧ ಪೊಲೀಸ್ ಠಾಣೆಯಲ್ಲಿ ಕಳ್ಳ ಸಾಗಾಣಿಕೆ ಮಾಡಿದ ಪ್ರಕರಣ ದಾಖಲಾಗಿದ್ದರೂ ಇಲ್ಲಿಯವರೆಗೆ ಪೊಲೀಸರು ಬಂಧಿಸಿಲ್ಲ ಎಂಬ ಆರೋಪ ಸ್ಥಳೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಮಾತ್ರ ಬರೀ ಅಕ್ರಮ ಸಾಗಣೆ ವಾಹನ ಚಾಲಕರ ಮೇಲೆ ಕೇಸ್ ದಾಖಲಿಸಿ ಸುಮ್ಮನಾಗುತ್ತಿದ್ದಾರೆ. ಇದನ್ನೂ ಓದಿ: ಕಬ್ಬು ಬೆಲೆ ನಿಗದಿಗಾಗಿ ಹೋರಾಟ- ಬಾಗಲಕೋಟೆಯಲ್ಲಿ ಸಿಎಂಗೆ ಘೇರಾವ್ ಹಾಕಲು ನಿರ್ಧರಿಸಿದ ಮುಧೋಳ ರೈತರು

    ರಾಘವೇಂದ್ರ ತೇಲಿ ವಿವಿಧ ಉದ್ದೇಶಗಳ‌ ಸಹಕಾರಿ ಸಂಘದ ಹೆಸರಲ್ಲಿ ಪಡಿತರ ಅಂಗಡಿ ನಡೆಸುತ್ತಿದ್ದ. ಈತನ ಅಕ್ರಮಗಳು ಬೆಳಕಿಗೆ ಬಂದ ನಂತರ ಆತನ ಹೆಸರಿನಲ್ಲಿದ್ದ ರೇಷನ್ ಅಂಗಡಿ ಲೈಸೆನ್ಸ್ ರದ್ದು ಮಾಡಲಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲೂ ತೇಲಿ ವಿರುದ್ಧ ಅಕ್ರಮ ಅಕ್ಕಿ ಸಾಗಾಣಿಕೆ ಕೇಸ್ ದಾಖಲಾಗಿತ್ತು,

    ರಾಘವೇಂದ್ರ ತೇಲಿ ಮೇಲೆ ಕಳ್ಳಸಾಗಣೆ ಮಾಡಿದ ಪ್ರಕರಣ ದಾಖಲಾಗಿದ್ದರೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಯಾಕೆ? ಈತನ ಅಕ್ರಮ ಗೊತ್ತಿದ್ದರೂ ಪತ್ನಿಗೆ ಲೈಸೆನ್ಸ್‌ ಸಿಕ್ಕಿದ್ದು ಹೇಗೆ?  ಅಕ್ರಮದಲ್ಲಿ ಅಧಿಕಾರಿಗಳು, ಪೊಲೀಸರು ಭಾಗಿಯಾಗಿದ್ದಾರಾ ಎಂದು ಪ್ರಶ್ನಿಸಿ ಸ್ಥಳಿಯ ಜನರು ಪೊಲೀಸ್ ಇಲಾಖೆ ವಿರುದ್ಧವೇ ಆಕ್ರೋಶ ಹೊರ ಹಾಕುತ್ತಿದ್ದಾರೆ.

     

  • ಅಕ್ರಮ ಪಡಿತರ ತಡೆಯಲು ಹೋದ ಯುವಕನ ಮೇಲೆ ಹಲ್ಲೆಗೆ ಯತ್ನ

    ಅಕ್ರಮ ಪಡಿತರ ತಡೆಯಲು ಹೋದ ಯುವಕನ ಮೇಲೆ ಹಲ್ಲೆಗೆ ಯತ್ನ

    – ಜಿಲ್ಲಾ ಉಸ್ತುವಾರಿ ಸಚಿವರ ಆಪ್ತರಿಂದಲೇ ದಂಧೆ ಆರೋಪ

    ಯಾದಗಿರಿ: ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಮಾರಾಟದ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಅಕ್ರಮ ಪಡಿತರ ಸಾಗಾಟ ತಡೆಯಲು ಹೋದ ಯುವಕನ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪವೊಂದು ಕೇಳಿಬಂದಿದೆ.

    ಯಾದಗಿರಿ (Yadagiri) ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ. ತನ್ನ ಮೇಲೆ ದಂಧೆಕೋರರು ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಸುರಪುರದ ಸಚಿನ್ ನಾಯಕ್ ಈ ಆರೋಪ ಮಾಡಿದ್ದಾರೆ.

    ಸಚಿವರ ಆಪ್ತರೇ ಅಕ್ಕಿ ದಂಧೆ ನಡೆಸ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ದಂಧೆ ತಡೆಯಲು ಹೋದಾಗ ಓರ್ವ ಸಚಿವರ ಆಪ್ತ ವಿಜಯ್ ರಾಠೋಡ್ ಹಾಗೂ ಮತ್ತೋರ್ವ ಆಪ್ತ ಮಲ್ಲಿಕ್ ಸಾಬ್ ಎಂಬಾತನ ಸಹೋದರ ಅಕ್ಬರ್ ಸಾಬ್ ಎಂಬವರಿಂದ ಹಲ್ಲೆಗೆ ಯತ್ನ ನಡೆದಿದೆ. ಸಚಿವ ಶರಣಬಸಪ್ಪ ದರ್ಶನಾಪೂರ ಆಪ್ತ ನಲ್ಲಿಕ್ ಸಾಬ್ ಎನ್ನುವಾತನೇ ಅಕ್ರಮ ಪಡಿತರ ದಂಧೆಯ ಕಿಂಗ್ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

    ಅಕ್ಕಿ ಸಾಗಾಟದ ಬಗ್ಗೆ ಪೊಲೀಸರಿಗೆ ಕರೆ ಮಾಡಿದ್ರೂ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ಮಾಡಿದ್ದಾರೆ. ಇದಕ್ಕೆಲ್ಲಾ ಪೊಲೀಸ್ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಕುಮ್ಮಕ್ಕಿದೆ ಎಂದು ಯುವಕ ಆರೋಪಿಸಿದ್ದಾನೆ. ಇದನ್ನೂ ಓದಿ: ಪ್ರಶ್ನೆಗಾಗಿ ಹಣ ಪಡೆದ ಆರೋಪ – ಮಹುವಾ ಮೊಯಿತ್ರಾ ಮನೆಯಲ್ಲಿ ಸಿಬಿಐ ಶೋಧ

  • ಪಡಿತರ ಅಕ್ಕಿ ಕಳ್ಳತನ ಪ್ರಕರಣ – ದೂರು ಕೊಟ್ಟ ಅಧಿಕಾರಿಯೇ ಈಗ ಆರೋಪಿ

    ಪಡಿತರ ಅಕ್ಕಿ ಕಳ್ಳತನ ಪ್ರಕರಣ – ದೂರು ಕೊಟ್ಟ ಅಧಿಕಾರಿಯೇ ಈಗ ಆರೋಪಿ

    ಯಾದಗಿರಿ: ಜಿಲ್ಲೆಯ ಶಹಾಪುರದಲ್ಲಿ (Shahapur) 6,077 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಪ್ರಕರಣಕ್ಕೆ (Ration Rice Theft Case) ದೊಡ್ಡ ಟ್ವಿಸ್ಟ್ ಸಿಕ್ಕಿದೆ. ದೂರುದಾರ ಅಧಿಕಾರಿಯೇ ಇದೀಗ ಆರೋಪಿಯಾಗಿದ್ದು, ಪೊಲೀಸರ ತನಿಖೆಯಲ್ಲಿ ಭಯಾನಕ ಸತ್ಯ ಬಟಾಬಯಲಾಗಿದೆ.

    ನವೆಂಬರ್ 22 ರಂದು ಯಾದಗಿರಿ (Yadagiri) ಜಿಲ್ಲೆಯ ಶಹಾಪುರದ ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ 2 ಕೋಟಿ 66 ಲಕ್ಷ ರೂ. ಮೌಲ್ಯದ ಬರೋಬ್ಬರಿ 6,077 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನವಾಗಿತ್ತು. ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯ ಆಹಾರ ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಭೀಮರಾಯ ಮಸಾಲಿ ದೂರನ್ನೂ ನೀಡಿದ್ದ. ಆದರೆ ಇದೀಗ ಇಡೀ ಘಟನೆಯ ಅಸಲಿಯತ್ತು ಬಯಲಾಗಿದ್ದು, ದೂರು ನೀಡಿದ್ದ ಉಪನಿರ್ದೇಶಕ ಭೀಮರಾಯ ಮಸಾಲಿಯೂ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

    ಶಹಾಪುರ ಪೊಲೀಸರು ಬಂಧಿತ ಆರೋಪಿಗಳ ಬೆಂಡೆತ್ತಿದಾಗ ಅಸಲಿ ಸತ್ಯ ಕಕ್ಕಿದ್ದಾರೆ. ಕಳ್ಳತನ ಆಗುತ್ತಿದ್ದ ಅಕ್ಕಿ ಮಾರಾಟದಿಂದ ಬರುವ ಆದಾಯದಲ್ಲಿ ಬಂಧಿತ ಆರೋಪಿಗಳು ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕನಿಗೂ ಭರ್ಜರಿ ಪಾಲು ಕೊಡುತ್ತಿದ್ದರು. ಹಾಲಿ ಇರುವ ಭೀಮರಾಯ ಮಸಾಲಿ ಹಾಗೂ ಈ ಹಿಂದಿನ ಡಿಡಿ ಪ್ರಭು ದೊರೆಗೆ ಪ್ರತಿ ತಿಂಗಳು 50 ಸಾವಿರ ರೂ. ಮಾಮೂಲಿ ತಲುಪುತ್ತಿತ್ತು. ಡಿಡಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಮಲ್ಲೇಶ ಮೂಲಕ ಹಣ ಕೊಡಲಾಗುತ್ತಿತ್ತು ಅನ್ನೋ ಕಟು ಸತ್ಯ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಯಾದಗಿರಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು – ಪಾಕಿಸ್ತಾನಕ್ಕೆ ಕಾಲ್!

    ಸ್ವತಃ ಇಲಾಖೆಯ ಅಧಿಕಾರಿಗಳ ಕಣ್ಗಾವಲಿನಲ್ಲೇ ಅಕ್ರಮ ದಂಧೆ ನಡೆಯುತ್ತಿತ್ತು ಅನ್ನೋದನ್ನು ಮೊದಲ ದಿನವೇ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಅದರಂತೆ ಇದೀಗ ಸತ್ಯ ಹೊರ ಬಿದ್ದಿದ್ದು, ಅಧಿಕಾರಿಗಳಿಗೆ ಪ್ರತಿ ತಿಂಗಳು ಕಪ್ಪ ಕೊಟ್ಟು ದಂಧೆಕೋರರು ದಂಧೆ ನಡೆಸುತ್ತಿದ್ದರು. ಇಲ್ಲಿ ಕೇವಲ ಆಹಾರ ನಾಗರಿಕ ಸರಬರಾಜು ಇಲಾಖೆ ಡಿಡಿ ಮಾತ್ರವಲ್ಲದೇ ಫುಡ್ ಇನ್ಸ್‌ಪೆಕ್ಟರ್‌ಗಳು ಹಾಗೂ ಶಿರಸ್ತೇದಾರರೂ ಇದರಲ್ಲಿ ಪಾಲುದಾರರೇ ಆಗಿದ್ದಾರೆ. ದಂಧೆಗೆ ಸಹಕಾರ ನೀಡಿದ್ದಕ್ಕೆ ಫುಡ್ ಇನ್ಸ್‌ಪೆಕ್ಟರ್‌ಗಳಿಗೆ ಪ್ರತಿ ತಿಂಗಳು 20 ಸಾವಿರ ರೂ. ಕೊಟ್ಟರೆ ಇತ್ತ ಶಿರಸ್ತೆದಾರರಿಗೆ ಪ್ರತಿ ತಿಂಗಳು 10 ಸಾವಿರ ರೂ.ಯನ್ನು ಫೋನ್ ಪೇ ಮೂಲಕ ನೀಡಲಾಗುತ್ತಿತ್ತು. ಪ್ರಕರಣದಲ್ಲಿ ಬಂಧಿತನಾಗಿರೋ ಎ1 ಆರೋಪಿ ಶಿವಯ್ಯನಿಂದಲೇ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಈ ಫಿಡ್ ಇನ್ಸ್‌ಪೆಕ್ಟರ್‌ಗಳು ಹಾಗೂ ಶಿರಸ್ತೆದಾರರಿಗೆ ಹೋಗಬೇಕಿದ್ದ ಹಣ ಗುರುಪಾದಯ್ಯ ಹಿರೇಮಠ ಅನ್ನೋರ ಅಕೌಂಟ್‌ಗೆ ವರ್ಗಾವಣೆ ಮಾಡಲಾಗುತ್ತಿತ್ತು. 2 ವರ್ಷಗಳಲ್ಲಿ ಬರೋಬ್ಬರಿ 12 ಲಕ್ಷ 12 ಸಾವಿರ ರೂ. ಹಣ ವರ್ಗಾವಣೆ ಆಗಿರುವ ಸತ್ಯ ಹೊರಬಿದ್ದಿದೆ.

    ಈಗಾಗಲೇ 6 ಆರೋಪಿಗಳು ಬಂಧನ ಆಗಿರೋ ಅಕ್ಕಿ ಕಳ್ಳತನ ಪ್ರಕರಣದಲ್ಲಿ ಬೇಲಿನೇ ಎದ್ದು ಹೊಲ ಮೇಯ್ದಂತಾಗಿದೆ. ಬಡ ಜನರಿಗೆ ಅನ್ನಭಾಗ್ಯ ಅಕ್ಕಿ ಕೊಡುವಲ್ಲಿ ಲೋಪ ಆದರೆ ಕ್ರಮ ಕೈಗೊಳ್ಳಬೇಕಿದ್ದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೇ ಭಾಗಿಯಾಗಿರೋದು ನೋಡಿದರೆ ವ್ಯವಸ್ಥೆ ಬಗ್ಗೆಯೇ ಅಸಹ್ಯ ಹುಟ್ಟುವಂತೆ ಮಾಡಿದೆ. ಹೀಗಾಗಿ ಕೂಡಲೇ ಪೊಲೀಸರು ತಪ್ಪಿತಸ್ಥ ಆರೋಪಿಗಳನ್ನು ಹೆಡೆಮುರಿ ಕಟ್ಟೋ ಕೆಲಸ ಮಾಡಬೇಕಿದೆ. ಇದನ್ನೂ ಓದಿ: ವಿಶಿಷ್ಟ ರೀತಿಯಲ್ಲಿ ಹಸೆಮಣೆ ಏರಿದ ಯೋಧ – ಹುತಾತ್ಮ ಸೈನಿಕರ ಪತ್ನಿಯರು, ನಿವೃತ್ತ ಯೋಧರಿಗೆ ಮಂಟಪದಲ್ಲೇ ಸನ್ಮಾನ

  • ಹುಬ್ಬಳ್ಳಿ ಪ್ರತಿಷ್ಠಿತ ಉದ್ಯಮಿ ಗಡಿಪಾರು!

    ಹುಬ್ಬಳ್ಳಿ ಪ್ರತಿಷ್ಠಿತ ಉದ್ಯಮಿ ಗಡಿಪಾರು!

    ಹುಬ್ಬಳ್ಳಿ: ಪಡಿತರ (Ration) ಅಕ್ಕಿ ಕಳ್ಳಸಾಗಣೆ ಮಾಡಿ, ಸರ್ಕಾರಿ ಯೋಜನೆಗೆ ಮೋಸ ಮತ್ತು ಬೊಕ್ಕಸದ ನಷ್ಟಕ್ಕೆ ಕಾರಣವಾಗಿದ್ದ, ಹುಬ್ಬಳ್ಳಿ ಪ್ರತಿಷ್ಠಿತ ಉದ್ಯಮಿ ಮೇಲೆ ಧಾರವಾಡ ಜಿಲ್ಲಾ ಪೊಲೀಸ್ ಮತ್ತು ಕಂದಾಯ ಇಲಾಖೆ ದಿಟ್ಟ ಕ್ರಮ ಕೈಗೊಂಡಿದೆ.

    ಬಡವರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಉದ್ಯಮಿ ಮಂಜುನಾ‌ಥ್ ವಿರೂಪಾಕ್ಷಪ್ಪ ಹರ್ಲಾಪುರ ಎಂಬವರನ್ನು ಧಾರವಾಡದಿಂದ ಬೀದರ್‍ಗೆ ಆರು ತಿಂಗಳ ಕಾಲ ಗಡಿಪಾರು ಮಾಡಲಾಗಿದೆ. ಹುಬ್ಬಳಿಯ ಬಿಡನಾಳ ನಿವಾಸಿಯಾಗಿರುವ ಮಂಜುನಾ‌ಥ್ ಹರ್ಲಾಪುರ, ಹಲವಾರು ವರ್ಷಗಳಿಂದ ಬಾಲಾಜಿ ಟ್ರೇಡಿಂಗ್ (balaji Trading) ಹೆಸರಿನಲ್ಲಿ ನಲ್ಲಿ ಬಡವರಿಗೆ ನೀಡುವ ಪಡಿತರ ಅಕ್ಕಿಯನ್ನು ಬೇರೆ ರಾಜ್ಯಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ. ಅಲ್ಲದೆ ಇದರ ವಿರುದ್ಧ ಧ್ವನಿ ಎತ್ತುವ ಸಾಕ್ಷಿಗಳನ್ನು ಕೂಡ ನಾಶ ಮಾಡುತ್ತಿದ್ದ.

    ಇದರಿಂದಾಗಿ ಧಾರವಾಡ ಪೊಲೀಸ್ ಎಸ್‍ಪಿ ಲೋಕೇಶ್ ಅವರು ಆರೋಪಿಸಿ, ಮಂಜುನಾ‌ಥ್ ಗಡಿಪಾರು ಮಾಡುವಂತೆ ಎಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಸಿದ ಎಸಿ ಅಶೋಕ್ ತೆಲಿ ಅವರು, ಆರು ತಿಂಗಳು ಮಂಜುನಾಥ್ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಆರೋಪಿಗೆ ಮುಂದಿನ ವಿಧಾಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ನಾಯಕರ ಹಠಮಾರಿತನ- ಬಿಜೆಪಿ ಕಾರ್ಯಕರ್ತರ ನಡುವೆಯೇ ಡಿಶುಂ ಡಿಶುಂ!

  • ರಾಜ್ಯ ಬಜೆಟ್: ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ 5 ರಿಂದ 6 ಕೆ.ಜಿಗೆ ಹೆಚ್ಚಳ

    ರಾಜ್ಯ ಬಜೆಟ್: ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ 5 ರಿಂದ 6 ಕೆ.ಜಿಗೆ ಹೆಚ್ಚಳ

    ಬೆಂಗಳೂರು: ಬಿಪಿಎಲ್‌ ಕಾರ್ಡುದಾರರಿಗೆ (BPL Card) ಮಾಸಿಕ ಅಕ್ಕಿ (Ration) 5ರಿಂದ 6 ಕೆ.ಜಿಗೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

    2023-24ನೇ ಸಾಲಿನ ರಾಜ್ಯ ಬಜೆಟ್‌ (Karnataka Budget 2023) ಮಂಡಿಸಿದ ಅವರು, ನಮ್ಮ ಸರ್ಕಾರವು ನಾಡಿನ ಪ್ರತಿಯೊಬ್ಬ ನಾಗರಿಕನಿಗೂ ಆಹಾರ ಭದ್ರತೆ ನೀಡಲು ಬದ್ಧವಾಗಿದೆ. ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಯಾರೂ ಹಸಿವಿನಿಂದ ಬಳಲದಂತೆ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆಯಡಿ ಕೇಂದ್ರ ಸರ್ಕಾರವು ಹೆಚ್ಚುವರಿ ಆಹಾರ ಧಾನ್ಯ ವಿತರಿಸಿತ್ತು. ಇದರೊಂದಿಗೆ ರಾಜ್ಯ ಸರ್ಕಾರವು ಅಕ್ಕಿಯೊಂದಿಗೆ ಸ್ಥಳೀಯ ಪ್ರಮುಖ ಆಹಾರ ಧಾನ್ಯಗಳಾದ ರಾಗಿ ಹಾಗೂ ಜೋಳವನ್ನು ಸಹ ಪಡಿತರ ವ್ಯವಸ್ಥೆಯಡಿ ವಿತರಿಸಿ, ರಾಜ್ಯದ ರೈತರಿಗೆ ಹೆಚ್ಚುವರಿ ನೆರವು ನೀಡಿದೆ. ಸ್ಥಳೀಯ ಧಾನ್ಯಗಳ ವಿತರಣೆಯನ್ನು ಈ ವರ್ಷವೂ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಕರ್ನಾಟಕ ಬಜೆಟ್ ಹೊಸ ಯೋಜನೆಗಳು – ಯಾರಿಗೆ ಏನು ಸಿಕ್ಕಿದೆ?

    2013-14ರಿಂದ 2017-18ನೇ ಸಾಲಿನವರೆಗೆ 5 ವರ್ಷಗಳ ಅವಧಿಯಲ್ಲಿ 1.2 ಕೋಟಿ ಮೆಟ್ರಿಕ್‌ ಟನ್‌ಗಳ ಅಕ್ಕಿಯನ್ನು ವಿತರಿಸಲಾಗಿತ್ತು. ನಮ್ಮ ಸರ್ಕಾರವು ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ 1.5 ಕೋಟಿ ಮೆಟ್ರಿಕ್‌ ಟನ್‌ ಅಕ್ಕಿಯನ್ನು ವಿತರಿಸಿದೆ ಎಂದು ಮಾಹಿತಿ ನೀಡಿದರು.

    NFSA ಅಡಿಯಲ್ಲಿ ಪ್ರತಿ ಫಲಾನುಭವಿಗೆ ನೀಡುತ್ತಿರುವ 5 ಕೆ.ಜಿ ಆಹಾರ ಧಾನ್ಯಗಳ ಜೊತೆಯಲ್ಲಿ ಒಂದು ಕೆ.ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಲು 2023-34ನೇ ವರ್ಷದಲ್ಲಿ 4,000 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ ಎಂದರು. ಇದನ್ನೂ ಓದಿ: ರಾಜ್ಯ ಬಜೆಟ್‌ನಲ್ಲಿ ಮಠಗಳಿಗಿಲ್ಲ ನೇರ ಅನುದಾನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • BPL ಪಡಿತರದಾರರಿಗೆ 5 ಕೆಜಿ ಜೊತೆ 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ – ಸರ್ಕಾರ ಆದೇಶ

    BPL ಪಡಿತರದಾರರಿಗೆ 5 ಕೆಜಿ ಜೊತೆ 1 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ – ಸರ್ಕಾರ ಆದೇಶ

    ಬೆಂಗಳೂರು: ಬಿಪಿಎಲ್‌ ಪಡಿತರದಾರರಿಗೆ (BPL Card) ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಫಲಾನುಭವಿಗಳಿಗೆ ಈವರೆಗೆ ವಿತರಿಸುತ್ತಿದ್ದ 5 ಕೆಜಿ ಜೊತೆಗೆ 1 ಕೆಜಿ ಹೆಚ್ಚುವರಿಯಾಗಿ ಅಕ್ಕಿ (Ration) ವಿತರಣೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಆದ್ಯತಾ ಪಡಿತರ ಚೀಟಿಗಳ (ಬಿಪಿಎಲ್‌) ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ತಲಾ 5 ಕೆಜಿ ಅಕ್ಕಿ ವಿತರಿಸಲಾಗುತ್ತಿತ್ತು. ಈಗ 1 ಕೆಜಿ ಹೆಚ್ಚುವರಿ ಸೇರಿದಂತೆ ಒಟ್ಟು 6 ಕೆಜಿ ಅಕ್ಕಿ ವಿತರಿಸಲಾಗುವುದು. ಜನವರಿ 1ರಿಂದಲೇ ಈ ಆದೇಶ ಜಾರಿಗೊಂಡಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ಲಾರಿ ಟೈರ್‌ ಸ್ಫೋಟಿಸಿ ಚಾಲಕ ಸ್ಥಳದಲ್ಲೇ ಸಾವು

    ರಾಜ್ಯದಲ್ಲಿರುವ ಆದ್ಯತಾ ಪಡಿತರ ಚೀತಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲಾಗುತ್ತಿರುವ 5 ಕೆಜಿ ಆಹಾರ ಧಾನ್ಯದೊಂದಿಗೆ ಹೆಚ್ಚುವರಿಯಾಗಿ ಪ್ರತಿ ತಿಂಗಳು 1 ಕೆಜಿ ಅಕ್ಕಿಯನ್ನು ವಿತರಿಸಲು ಸರ್ಕಾರ ಆದೇಶಿಸಿದೆ.

    ಚುನಾವಣೆ ಸಮೀಪದಲ್ಲಿರುವ ಹೊತ್ತಿನಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು‌ ಸಮಾವೇಶವೊಂದರಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಡಿತರದಾರರಿಗೆ 10 ಕೆಜಿ ಅಕ್ಕಿ ವಿತರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ ಸದ್ಯ ನೀಡುತ್ತಿರುವ ಪಡಿತರ ಜೊತೆಗೆ 1 ಕೆಜಿ ಹೆಚ್ಚುವರಿ ಅಕ್ಕಿ ನೀಡುವುದಾಗಿ ತಿಳಿಸಿದೆ. ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ತಂದ ವ್ಯಕ್ತಿ!

    Live Tv
    [brid partner=56869869 player=32851 video=960834 autoplay=true]

  • ರಾಯಚೂರಿನಲ್ಲಿ ಪಡಿತರ ಅಕ್ಕಿ‌ ವಿತರಣೆಗೆ ಲಂಚ – ನ್ಯಾಯಬೆಲೆ ಅಂಗಡಿ ಅಮಾನತು

    ರಾಯಚೂರಿನಲ್ಲಿ ಪಡಿತರ ಅಕ್ಕಿ‌ ವಿತರಣೆಗೆ ಲಂಚ – ನ್ಯಾಯಬೆಲೆ ಅಂಗಡಿ ಅಮಾನತು

    ರಾಯಚೂರು: ಬಡವರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ನ್ಯಾಯಬೆಲೆ ಅಂಗಡಿಯಲ್ಲೇ ಲಂಚ ಪಡೆಯುತ್ತಿರುವ ಆರೋಪ ಕೇಳಿಬಂದಿದ್ದು, ರಾಯಚೂರು (Raichuru) ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಯೊಂದನ್ನು ಅಮಾನತುಗೊಳಿಸಲಾಗಿದೆ.

    ಜಿಲ್ಲೆಯ ಮಾನ್ವಿ ತಾಲೂಕಿನ ಕರಾಬದಿನ್ನಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ (Ration) ವಿತರಣೆಗೆ ಲಂಚ ಪಡೆಯುತ್ತಿದ್ದ ಅಂಗಡಿ ಮಾಲೀಕನ ವಿರುದ್ದ ಆಹಾರ, ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದೆ. ನ್ಯಾಯಬೆಲೆ ಅಂಗಡಿಯನ್ನ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಇಂದು ಬಿಜೆಪಿ ಮುಖಂಡನಿಂದಲೇ ತೆರವು ಕಾರ್ಯಕ್ಕೆ ಅಡ್ಡಿ- ಪಾಲಿಕೆ ಅಧಿಕಾರಿಗಳ ಜೊತೆ ಕಿರಿಕ್

    ಪಡಿತರ ವಿತರಣೆಗೆ ನ್ಯಾಯಬೆಲೆ ಅಂಗಡಿ ಪ್ರಾಧಿಕಾರ ಪಡೆದಿದ್ದ ಮಲ್ಲಪ್ಪ ಲಂಚ ಪಡೆಯುತ್ತಿರುವ ಬಗ್ಗೆ ʻಪಬ್ಲಿಕ್ ಟಿವಿʼ ವರದಿ ಪ್ರಸಾರ ಮಾಡಿತ್ತು.‌ ಪ್ರತಿಯೊಬ್ಬ ಪಡಿತರದಾರರಿಂದ 10-20 ರೂ. ಲಂಚ ಪಡೆಯುತ್ತಿದ್ದ ಮಲ್ಲಪ್ಪ, ಹಣ ಕೊಡದಿದ್ದರೆ ಪಡಿತರ ಹಾಕುವುದಿಲ್ಲ ಅಂತ ಖಡಾಖಂಡಿತವಾಗಿ ಹೇಳುತ್ತಿದ್ದ. ಸರ್ಕಾರ ಹೊಸ ರೂಲ್ಸ್ ಮಾಡಿದೆ. ಎಲ್ಲರೂ ದುಡ್ಡು ಕೊಡಬೇಕು ಅಂತ ಲಂಚ ಪಡೆಯುತ್ತಿದ್ದ. ತೂಕದಲ್ಲೂ ಮೋಸ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

    ಮಲ್ಲಪ್ಪನ ವಸೂಲಿಗೆ ಬೇಸತ್ತ ಗ್ರಾಮಸ್ಥರು ವೀಡಿಯೋ ಸಹಿತ ದೂರನ್ನು ನೀಡಿದ್ದಾರೆ. ಆಹಾರ ಇಲಾಖೆ ನಿರೀಕ್ಷಕರು ಹಾಗೂ ಶಿರಸ್ತೆದಾರ ಗ್ರಾಮದಲ್ಲಿ ಪರಿಶೀಲನೆ ನಡೆಸಿದಾಗ ಮಲ್ಲಪ್ಪ ತಪ್ಪಿತಸ್ಥ ಅನ್ನೋದು ಸಾಬೀತಾದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ಮಲ್ಲಪ್ಪನ ಪ್ರಾಧಿಕಾರದಲ್ಲಿದ್ದ ನ್ಯಾಯಬೆಲೆ ಅಂಗಡಿ ಅಮಾನತುಗೊಳಿಸಿ ಆಹಾರ, ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣಾ ಆದೇಶ ಹೊರಡಿಸಿದ್ದಾರೆ. ಪಡಿತರ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಲು ಮಾನ್ವಿ ತಹಶೀಲ್ದಾರ್‌ಗೆ ಸೂಚನೆ ನೀಡಿಲಾಗಿದೆ. ಇದನ್ನೂ ಓದಿ: ಆಪರೇಷನ್ ಬುಲ್ಡೋಜರ್‌ಗೆ 3ನೇ ದಿನ- ಇಂದೂ ನಡೆಯಲಿದೆ ನಲಪಾಡ್ ಅಕಾಡೆಮಿ ಒತ್ತುವರಿ ತೆರವು!

    Live Tv
    [brid partner=56869869 player=32851 video=960834 autoplay=true]

  • ರೇಷನ್‍ಗಾಗಿ ಇನ್ಮುಂದೆ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ: ಭಗವಂತ್ ಮಾನ್

    ರೇಷನ್‍ಗಾಗಿ ಇನ್ಮುಂದೆ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ: ಭಗವಂತ್ ಮಾನ್

    ಚಂಡೀಗಢ: ಉತ್ತಮ ಗುಣಮಟ್ಟದ ಪಡಿತರವನ್ನು ತಮ್ಮ ಮನೆಯ ಬಾಗಿಲಿಗೆ ತಲುಪಿಸುವುದರಿಂದ ಬಡವರು ಇನ್ನು ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದಾರೆ.

    ಈ ಕುರಿತಂತೆ ಆಮ್ ಆದ್ಮಿ ಪಕ್ಷ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಭಗವಂತ್ ಮಾನ್ ಅವರು, ಪಡಿತರ ಯೋಜನೆಯನ್ನು ಮನೆ ಬಾಗಿಲಿಗೆ ತಲುಪಿಸಲು ಎಎಪಿ ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಡಿ ಉತ್ತಮ ಗುಣಮಟ್ಟದ ಪಡಿತರ ಸಾಮಗ್ರಿಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಾಗುವುದು ಮತ್ತು ಇದಕ್ಕಾಗಿ ಯಾರೂ ಕೆಲಸ ಬಿಟ್ಟು ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ನಮ್ಮ ಅಧಿಕಾರಿಗಳು ಫಲಾನುಭವಿಗಳಿಗೆ ಫೋನ್ ಕರೆ ಮಾಡುತ್ತಾರೆ ಮತ್ತು ಅವರ ಅನುಕೂಲಕ್ಕೆ ಅನುಗುಣವಾಗಿ ಪಡಿತರವನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 32 ವರ್ಷಗಳ ನಂತ್ರ ಕಾಶ್ಮೀರಿ ಪಂಡಿತರಿಗೆ ಸಿಕ್ಕಿದ್ದು ಸಿನಿಮಾ, ನ್ಯಾಯವಲ್ಲ: ಕೇಜ್ರಿವಾಲ್

    ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿಯೂ ಈ ಯೋಜನೆಯನ್ನು ಪ್ರಾರಂಭಿಸಿದ್ದರು, ಆದರೆ ದುರದೃಷ್ಟವಶಾತ್ ದೆಹಲಿಯಲ್ಲಿ ಈ ಯೋಜನೆಯನ್ನು ನಿಲ್ಲಿಸಲಾಯಿತು. ಆದರೆ ಪಂಜಾಬ್‍ನಲ್ಲಿ ನಾವು ಈ ಯೋಜನೆಯನ್ನು ಜಾರಿಗೊಳಿಸಲಿದ್ದೇವೆ ಮತ್ತು ಯಶಸ್ವಿಯಾಗಿ ನಡೆಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅನ್ನೋದೊಂದು ಶಕ್ತಿ: ಬಸವರಾಜ್ ರಾಯರೆಡ್ಡಿ

    ಅರವಿಂದ್ ಕೇಜ್ರಿವಾಲ್ ಅವರು, ಪಂಜಾಬ್ ಸರ್ಕಾರ ಜನರಿಗೆ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ನೀತಿಯನ್ನು ಜಾರಿಗೆ ತಂದರೆ, ಇತರ ರಾಜ್ಯಗಳಲ್ಲಿನ ನಾಗರಿಕರೂ ಬೇಡಿಕೆ ಇಡಲು ಪ್ರಾರಂಭಿಸುತ್ತಾರೆ ಎಂದರು. ಇದೇ ವೇಳೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಈ ನೀತಿಯ ಅನುಷ್ಠಾನಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.