Tag: Rathotsava

  • ಅದ್ದೂರಿಯಾಗಿ ನಡೆಯಿತು ಮುಚಖಂಡಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

    ಅದ್ದೂರಿಯಾಗಿ ನಡೆಯಿತು ಮುಚಖಂಡಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

    ಬಾಗಲಕೋಟೆ: ತಾಲೂಕಿನ ಮುಚಖಂಡಿ ಗ್ರಾಮದಲ್ಲಿ ಸಾವಿರಾರು ಜನರ ಮಧ್ಯೆ ಐತಿಹಾಸಿಕ ವೀರಭದ್ರೇಶ್ವರ (Veerabhadreshwara) ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.

    ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ವೀರಭದ್ರೇಶ್ವರನಿಗೆ ಬೆಳಗಿನ ಜಾವ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಹಾಮೃತ್ಯಂಜಯ ಮಂತ್ರ ಪಠಣ, ಶೀವಾಮೃತ ಪಠಣದೊಂದಿಗೆ ಪುಷ್ಪಾಲಂಕಾರ ಮಹಾ ಮಂಗಳಾರತಿ ನಡೆಯಿತು. ಇದನ್ನೂ ಓದಿ: ʻಒಂದು ದೇಶ, ಒಂದು ಚುನಾವಣೆʼ ಮಸೂದೆ ಲೋಕಸಭೆಯಲ್ಲಿ ಮಂಡನೆ – ಮೊದಲ ಬಾರಿಗೆ ಇ-ವೋಟಿಂಗ್‌ ಸಿಸ್ಟಂ ಬಳಕೆ!

    ಸಂಜೆ 4 ಗಂಟೆಗೆ ಸಣ್ಣ ರಥೋತ್ಸವ (Rathotsava) ನಡೆಯಿತು. ನಂತರ ಸಂಜೆ 5 ಗಂಟೆಗೆ ವೀರಭದ್ರೇಶ್ವರಸ್ವಾಮಿಯ ಮಹಾರಥೋತ್ಸವ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು.

    ಸಹಸ್ರಾರು ಜನರು ದೀಪಗಳನ್ನು ಬೆಳಗುವ ಮೂಲಕ ದೀಪೋತ್ಸವವನ್ನು ಆಚರಿಸಿದರು. ರಾತ್ರಿ ಶ್ರೀಕೃಷ್ಣ ಪಾರಿಜಾತ ಪ್ರದರ್ಶನಗೊಂಡಿತು. ಭಕ್ತಾದಿಗಳು ಅಗ್ನಿ ಪ್ರವೇಶ ಮಾಡಿ, ವೀರಭದ್ರೇಶ್ವರನಿಗೆ ತಮ್ಮ ಹರಕೆಯನ್ನ ತೀರಿಸಿದರು.

    ಜಾತ್ರಾ ಮಹೋತ್ಸವದಲ್ಲಿ ಮುಚಖಂಡಿ ಗ್ರಾಮದ ಗುರು ಹಿರಿಯರು ಸುತ್ತಮುತ್ತಲಿನ ಗ್ರಾಮಸ್ಥರು ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.

     

  • ಬೇಲೂರು ಜಾತ್ರೆಯಲ್ಲಿ ಕುರಾನ್ ಬದಲು ಶ್ಲೋಕ ಪಠಣ – ಹಿಂದೂ ಸಂಘಟನೆಗಳಿಂದ ಜೈ ಶ್ರೀರಾಮ್ ಘೋಷಣೆ

    ಬೇಲೂರು ಜಾತ್ರೆಯಲ್ಲಿ ಕುರಾನ್ ಬದಲು ಶ್ಲೋಕ ಪಠಣ – ಹಿಂದೂ ಸಂಘಟನೆಗಳಿಂದ ಜೈ ಶ್ರೀರಾಮ್ ಘೋಷಣೆ

    ಹಾಸನ: ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದ (Belur Chennakeshava Swamy Temple) ವಾರ್ಷಿಕ ಜಾತ್ರೆ ಮಂಗಳವಾರ ನಡೆದಿದ್ದು, ಈ ಸಂದರ್ಭದಲ್ಲಿ ವಾರ್ಷಿಕವಾಗಿ ನಡೆಯುವ ಗೌರವ ವಂದನೆ ಸ್ವೀಕಾರ ಸಂಪ್ರದಾಯವನ್ನು ಪಾಲನೆ ಮಾಡಲಾಗಿದೆ. ಸಾಮಾನ್ಯವಾಗಿ ಈ ವೇಳೆ ಕುರಾನ್ (Quran) ಪಠಣ ನಡೆಸುತ್ತಿದ್ದರೂ ಈ ಬಾರಿ ಮುಸ್ಲಿಂ ಖಾಜಿಗಳು ಕೇವಲ ಶ್ಲೋಕ (Shloka) ಪಠಣಕ್ಕೆ ಸೀಮಿತಗೊಳಿಸಿದ್ದಾರೆ. ಈ ವೇಳೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜೋರಾಗಿ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ.

    ಬೆಳಗ್ಗೆ ಸುಮಾರು 10:50ಕ್ಕೆ ವಾಡಿಕೆಯಂತೆ ಖಾಜ ಸಾಹೇಬರು ದೇವಸ್ಥಾನದ ಮೂಲೆಯ ಮೆಟ್ಟಿಲ ಮೇಲೆ ಶ್ಲೋಕ ಪಠಿಸಿದ ನಂತರ ತೇರು ಎಳೆಯಲಾಯಿತು. ಈ ವೇಳೆ ಸ್ಥಳೀಯ ಶಾಸಕ ಕೆಎಸ್ ಲಿಂಗೇಶ್, ಮಾಜಿ ಸಚಿವ ಹೆಚ್‌ಡಿ ರೇವಣ್ಣ, ದೇವಸ್ಥಾನದ ಆಡಳಿತಾಧಿಕಾರಿ ವಿದ್ಯುಲ್ಲತಾ, ಸೇರಿದಂತೆ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

    ಕುರಾನ್ ಪಠಣ ವಿವಾದದಿಂದ ಚನ್ನಕೇಶವಸ್ವಾಮಿ ರಥೋತ್ಸವಕ್ಕೆ (Rathotsava) ಹಲವು ಅಡಚಣೆಗಳು ಎದುರಾಗಿದ್ದವು. ಇದರ ನಡುವೆಯೂ ಮಂಗಳವಾರದಿಂದ ಜಾತ್ರಾ ಮಹೋತ್ಸವ ಆರಂಭವಾಗಿದೆ. ರಥೋತ್ಸವದ ವೇಳೆ ಕುರಾನ್ ಪಠಣ ಮಾಡದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜೈ ಶ್ರೀರಾಮ್ ಘೋಷಣೆ ಕೂಗಿದರು.

    ಸೋಮವಾರ ಸಂಜೆ ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಕುರಾನ್ ಪಠಣ ಮಾಡುವ ಸುತ್ತಲೂ ಬ್ಯಾರಿಕೇಡ್ ಹಾಕಿ ಅರೆ ಮಿಲಿಟರಿ ಕಾರ್ಯಪಡೆ ಹಾಗೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿ ವರ್ಷ ರಥದ ಮುಂದೆ ಕುರಾನ್ ಪಠಣ ಮಾಡಲಾಗುತ್ತಿತ್ತು. ಆದರೆ ಈ ಭಾರಿ ವಿರೋಧ ವ್ಯಕ್ತವಾದ್ದರಿಂದ ದೇವಾಲಯದ ಹೊರಭಾಗದ ಮೂಲೆಯಲ್ಲಿ ಮೆಟ್ಟಿಲ ಮೇಲೆ ಬೇಲೂರು ತಾಲೂಕಿನ ದೊಡ್ಡ ಮೇದೂರು ಗ್ರಾಮದ ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಶ್ಲೋಕ ಓದಿದರು.

    ಇದಕ್ಕೂ ಮುನ್ನ ಆಗಸದಲ್ಲಿ ಗರುಡ ರಥದ ಸುತ್ತ ಮೂರು ಬಾರಿ ಸುತ್ತಿತು. ಸಯ್ಯದ್ ಸಜ್ಜಾದ್ ಭಾಷಾ ಖಾದ್ರಿ ಶ್ಲೋಕ ಓದಿದ ಬಳಿಕ ಸಾವಿರಾರು ಭಕ್ತರು ತೇರು ಎಳೆದರು. ಈ ವೇಳೆ ಭಕ್ತರು ತೇರಿಗೆ ಬಾಳೆಹಣ್ಣು ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

    ಈ ವೇಳೆ ಮಾತನಾಡಿದ ಮಾಜಿ ಸಚಿವ ಹೆಚ್‌ಡಿ ರೇವಣ್ಣ, ಬೇಲೂರಿನಲ್ಲಿ ಇದು ಐತಿಹಾಸಿಕ ದಿನ. ರಥೋತ್ಸವಕ್ಕೆ ಬೇಲೂರು ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಅವರ ಕುಟುಂಬಗಳು ಯಾವುದೇ ಸಂಕಷ್ಟಕ್ಕೆ ಸಿಗಬಾರದೆಂದು ಪ್ರಾರ್ಥನೆ ಮಾಡಿ ಹೋಗಿದ್ದಾರೆ. ನಾನು ಪ್ರತಿ ವರ್ಷ ಬೇಲೂರು ಜಾತ್ರೆಗೆ ಬರುತ್ತಿದ್ದೇನೆ. ಈ ಭಾರಿ ಜಾತ್ರೆ ವೇಳೆ ಚುನಾವಣೆ ಬಂದಿದೆ. ಇವೆರಡು ರಾಷ್ಟ್ರೀಯ ಪಕ್ಷಗಳ ಸರ್ಕಾರ ಹೋಗಿ ಕುಮಾರಸ್ವಾಮಿ ಅವರ ಆಡಳಿತ ಬರಬೇಕು ಎಂದರು.

    ಶಾಸಕ ಕೆಎಸ್ ಲಿಂಗೇಶ್ ಮಾತನಾಡಿ ಈ ದಿನ ವಿಶ್ವವಿಖ್ಯಾತ ಚನ್ನಕೇಶವ ರಥೋತ್ಸವ ಬಹಳ ಸಾಂಪ್ರದಾಯಿಕವಾಗಿ ಭಕ್ತರ ಸಮಕ್ಷಮದಲ್ಲಿ ವಿಜೃಂಭಣೆಯಿಂದ ನೆರವೇರಿದೆ. ಶಾಂತಿ ಕಾಪಾಡಲು ಪೊಲೀಸ್, ಕಂದಾಯ, ಜಿಲ್ಲಾಡಳಿತ ಸಹಕಾರ ಕೊಟ್ಟಿದೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಹಿಂದಿನಿಂದಲೂ ಮುಸಲ್ಮಾನ ಗುರುಗಳು ಬಂದು ಇಲ್ಲಿ ಕುರಾನ್ ಪಠಣ ಮಾಡಿ ಗೌರವ ಕೊಡುತ್ತಿದ್ದಾರೆ. 2012 ರಿಂದ ಈಚೆಗೆ ರಥದ ಮುಂದೆ ಕುರಾನ್ ಪಠಣ ಮಾಡುತ್ತಿದ್ದರು. ಈ ವಿಚಾರವನ್ನೆ ದೊಡ್ಡಮಟಕ್ಕೆ ತೆಗೆದುಕೊಂಡು ಹೋಗಿ ಸಮಾಜದಲ್ಲಿ ಶಾಂತಿ ಕದಡಲು ಹೊರಟ್ಟಿದ್ದರು. ಅವರಿಗೆ ಇವತ್ತು ಉತ್ತರ ಸಿಕ್ಕಿದೆ ಎಂದರು. ಇದನ್ನೂ ಓದಿ: ಅಯೋಧ್ಯೆ ದೇವಸ್ಥಾನ ಬಳಿ ವಾಸ್ತವ್ಯ ಹೂಡಿ – ಮನೆಯಿಲ್ಲ ಎಂದಿದ್ದ ರಾಗಾಗೆ ಅರ್ಚಕ ಆಹ್ವಾನ

    ಧಾರ್ಮಿಕ ದತ್ತಿ ಆಯುಕ್ತರ ಆದೇಶದಂತೆ ಈ ದಿನ ನಾನು ದೇವಾಲಯದ ಮೆಟ್ಟಿಲ ಬಳಿ ನಮ್ಮ ರೀತಿಯಂತೆ ದೇವರಿಗೆ ಶ್ಲೋಕ ಹೇಳಿ ವಂದನೆ ಸಮರ್ಪಣೆ ಮಾಡಿದ್ದೇನೆ. ದೇವಾಲಯದ ವತಿಯಿಂದ ನೀಡಿದ ಮರ್ಯಾದೆಯನ್ನು ಸ್ವೀಕರಿಸುತ್ತೇನೆ ಹಾಗೂ ಈ ದಿನ ನಾನು ಕುರಾನ್ ಪಠಣ ಮಾಡಿಲ್ಲ ಎಂದು ತಿಳಿಸಬಯಸುತ್ತೇನೆ. ರಥದ ಎದುರು ಮುಸ್ಲಿಂ ಧಾರ್ಮಿಕ ವಿಧಿಯಂತೆ ನಮಿಸುತ್ತೇನೆ ಎಂದು ಸಜ್ಜದ್ ಬಾಷಾ ಖಾದ್ರಿ ಸಾಹೇಬರು ದೇವಾಲಯದ ಲೆಟರ್ ಹೆಡ್‌ನಲ್ಲಿ ಬರೆದು ಸಹಿಮಾಡಿಕೊಟ್ಟಿದ್ದಾರೆ.

    ಖುರಾನ್ ಪಠಣಕ್ಕೆ ತೀವ್ರ ವಿರೊಧ ವ್ಯಕ್ತವಾಗಿತ್ತು. ಹಾಗಾಗಿ ವಿರೋಧದ ನಡುವೆಯೂ ಕೂಡ ರಥದ ಸಮೀಪ ಪ್ರತ್ಯೇಕ ಜಾಗದಲ್ಲಿ ಕುರಾನ್ ಪಠಣಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕುರಾನ್ ಸಾಲುಗಳನ್ನು ಹೇಳಿದ ಖಾದ್ರಿಯವರಿಂದ ಕುರಾನ್ ಓದಿಲ್ಲ ಎಂದು ಪತ್ರ ಬರೆದು ಕೊಟ್ಟಿದ್ದರು.

    ಒಟ್ಟಿನಲ್ಲಿ ಕುರಾನ್ ಪಠಣ ವಿವಾದ ಜಾತ್ರಾ ಮಹೋತ್ಸವಕ್ಕೆ ಅಡ್ಡಿಯಾಗುತ್ತದೆ ಎಂಬ ಆತಂಕ ಎದುರಾಗಿತ್ತು. ಆದರೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಿಗಿ ಕ್ರಮದಿಂದ ಐತಿಹಾಸಿಕ ಚನ್ನಕೇಶವಸ್ವಾಮಿ ರಥೋತ್ಸವ ಅದ್ದೂರಿಯಿಂದ ನೆರವೇರಿತು. ದೇವಸ್ಥಾನದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ರಥ ಎಳೆದು ನಿಲ್ಲಿಸಲಾಗಿದೆ. ಬುಧವಾರ ದೇವಸ್ಥಾನದ ಸುತ್ತ ಮೂರು ಸುತ್ತು ರಥೋತ್ಸವ ಜರುಗಲಿದೆ. ಇದನ್ನೂ ಓದಿ: ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆ ಜನರಿಗೂ ಹೆಚ್‌ಡಿಕೆ ಭರವಸೆ ಮೇಲೆ ನಂಬಿಕೆಯಿಲ್ಲ – ಚಲುವರಾಯಸ್ವಾಮಿ

  • ಮುರಿದು ಬಿದ್ದ ಪುರಾತನ ವೀರಭದ್ರೇಶ್ವರ ಸ್ವಾಮಿಯ ರಥದ ಚಕ್ರ – ಅದೃಷ್ಟವಶಾತ್ ಭಕ್ತರು ಪಾರು

    ಮುರಿದು ಬಿದ್ದ ಪುರಾತನ ವೀರಭದ್ರೇಶ್ವರ ಸ್ವಾಮಿಯ ರಥದ ಚಕ್ರ – ಅದೃಷ್ಟವಶಾತ್ ಭಕ್ತರು ಪಾರು

    ಚಾಮರಾಜನಗರ: ಶ್ರೀ ವೀರಭದ್ರೇಶ್ವರ (Sri Veerabhadreshwara Rathotsava) ರಥೋತ್ಸವದ ವೇಳೆ ರಥದ ಚಕ್ರ ಮುರಿದು ಬಿದಿದ್ದು, ಅದೃಷ್ಟವಶಾತ್ ಭಕ್ತರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಾಮರಾಜನಗರದಲ್ಲಿ (Chamarajanagara) ನಡೆದಿದೆ.

    ಹೌದು, ಇಂದು ಚಾಮರಾಜನಗರ ತಾಲೂಕಿನ ಚನ್ನಪ್ಪನಪುರದ (Channappapura) ಶ್ರೀ ವೀರಭದ್ರೇಶ್ವರ ರಥೋತ್ಸವ ನಡೆಯುತ್ತಿತ್ತು. ಈ ರಥೋತ್ಸವಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು. ಭಕ್ತರು ತಮ್ಮ ಭಕ್ತಿ ಪರಾಕಾಷ್ಠೆ ಮೆರೆಯುತ್ತಾ ರಥವನ್ನು ಎಳೆಯುತ್ತಿದ್ದರು. ಈ ವೇಳೆ ಏಕಾಏಕಿ ರಥದ ಚಕ್ರ ಮುರಿದಿದೆ. ಇದನ್ನು ನೋಡಿದ ಜನರು ರಥದಿಂದ ದೂರ ಓಡಿದ್ದಾರೆ. ಕೆಲವೇ ಕ್ಷಣಗಳ ಅಂತರದಲ್ಲಿ ರಥ ಕೆಳಗೆ ಬಿದ್ದಿದೆ. ಭಕ್ತರು ರಥ ಬೀಳುವುದನ್ನು ಮೊದಲೇ ಗಮನಿಸಿ ದೂರು ಓಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಇದನ್ನೂ ಓದಿ: 4 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗದ್ದೆಯಲ್ಲಿ ಎಸೆದ – ಆರೋಪಿ ಅರೆಸ್ಟ್

    ರಥದ ಚಕ್ರ ಮುರಿದಾಗ ಕೂಡಲೇ ರಥ ಒಂದೇ ಕಡೆಗೆ ಬಾಗಿದೆ. ಕೂಡಲೇ ಸ್ಥಳದಲ್ಲಿದ್ದವರು ರಥದ ಪಕ್ಕದಲ್ಲಿದ್ದ ಭಕ್ತರನ್ನು ದೂರ ಕಳಿಸಿದ್ದಾರೆ. ಈ ವೇಳೆಗೆ ರಥ ಒಮ್ಮೆಲೆ ನೆಲಕ್ಕಪ್ಪಳಿಸಿದೆ. ಸ್ಥಳದಲ್ಲಿದ್ದ ಭಕ್ತರು ಸ್ವಲ್ಪ ಯಾಮಾರಿದ್ರೂ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು. ಆದರೆ ಭಕ್ತರು ರಥ ಬೀಳುವುದನ್ನು ನೋಡಿ ತಕ್ಷಣವೇ ದೂರ ಹೋಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ನಾವೆಲ್ಲ ದೇವರ ದಯೆಯಿಂದ ಪಾರಾಗಿದ್ದೇವೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

    ರಥೋತ್ಸವಕ್ಕೂ ಮುಂಚೆ ರಥದ ಚಕ್ರವನ್ನು ಪರಿಶೀಲನೆ ಮಾಡಿದರೆ ಈ ಅವಘಡ ಸಂಭವಿಸುತ್ತಿರಲಿಲ್ಲ. ಒಟ್ಟಾರೆ ರಥ ಮುರಿದು ಬಿದ್ದರೂ ಸಹ ಪ್ರಾಣಾಪಾಯವಿಲ್ಲದೇ ಭಕ್ತರು ಪಾವಾಡ ಎಂಬಂತೆ ಪಾರಾಗಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಗೆಲ್ಲಲು ಭಾರತ ಬಂದಿದೆ, ನಾವಲ್ಲ – ಭಾರತವನ್ನು ಸೋಲಿಸುತ್ತೇವೆ ಎಂದ ಹಸನ್

    Live Tv
    [brid partner=56869869 player=32851 video=960834 autoplay=true]

  • ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ – ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ಅಭಿಮಾನಿ

    ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ – ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ಅಭಿಮಾನಿ

    ದಾವಣಗೆರೆ: ಮತ್ತೊಮ್ಮೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಬೇಕೆಂದು ಅಭಿಮಾನಿಯೊಬ್ಬ ಬಾಳೆ ಹಣ್ಣಿನ ಮೇಲೆ ಬರೆದು ದೇವರ ಮೇಲೆ ಎಸೆದಿದ್ದಾನೆ.

    ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜಿತ್ ಎಂಬಾತ ಮತ್ತೊಮ್ಮೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಬೇಕೆಂದು ದೇವರಲ್ಲಿ ಬೇಡಿಕೆ ಇಟ್ಟಿದ್ದಾನೆ. ಹೀಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಿರೇಕಲ್ಮಠ ರಥೋತ್ಸವದ ವೇಳೆ ಬಾಳೆ ಹಣ್ಣಿನ ಮೇಲೆ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಎಂದು ಬರೆದು ದೇವರ ರಥದ ಮೇಲೆ ಎಸೆದಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹಾಲು ಮಾರಾಟಗಾರನ ಹತ್ಯೆ – ಮೋದಿ ಭೇಟಿ ಸಮಯದಲ್ಲೇ ಗುಜರಾತ್‍ನಲ್ಲಿ ಗುಂಪು ಘರ್ಷಣೆ

    ಜಾತ್ರಾಮಹೋತ್ಸವದಲ್ಲಿ ರಥೋತ್ಸವಕ್ಕೆ ಬಯಕೆ ಈಡೇರಲೆಂದು ಹಣ್ಣು ಜವಣೆ ಎಸೆಯುವ ಪದ್ದತಿ ಇದೆ. ಇದೇ ರೀತಿ ಈ ಹಿಂದೆ ಆರ್‌ಸಿಬಿ ಅಭಿಮಾನಿಯೊಬ್ಬರು ಈ ಸಲ ಕಪ್ ನಮ್ದೆ ಎಂದು ಬಾಳೆ ಹಣ್ಣಿನ ಮೇಲೆ ಬರೆದು, ಬಾಳೆ ಹಣ್ಣಿನ ಜೊತೆಗೆ ಹತ್ತು ರೂಪಾಯಿ ಇಟ್ಟು ಪ್ರಾರ್ಥನೆ ಮಾಡಿ ರಥದ ಮೇಲೆ ಎಸೆದಿದ್ದರು. ಇದನ್ನೂ ಓದಿ: ಪಠ್ಯ, ಪುಸ್ತಕ ಪರಿಷ್ಕರಣೆಗೆ ಮುಂದುವರಿದ ವಿರೋಧ- ತಮ್ಮ ಕವಿತೆಯನ್ನು ಬಳಸಬೇಡಿ: ರೂಪಾ ಹಾಸನ

    Live Tv
    [brid partner=56869869 player=32851 video=960834 autoplay=true]

  • ಬೇಲೂರು ದೇವಾಲಯದಲ್ಲಿ ಗಳಿಗೆ ತೇರಿನ ದಿನ ಕುರಾನ್ ಪಠಣೆ ನಡೆಯುತ್ತೆ

    ಬೇಲೂರು ದೇವಾಲಯದಲ್ಲಿ ಗಳಿಗೆ ತೇರಿನ ದಿನ ಕುರಾನ್ ಪಠಣೆ ನಡೆಯುತ್ತೆ

    ಹಾಸನ: ದೇವಾಲಯದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ರೂಢಿ, ಸಂಪ್ರದಾಯ, ಪದ್ಧತಿಗಳನ್ನು ಮೀರಲು ಅಧಿಕಾರವಿರುವುದಿಲ್ಲ ಎಂದು ಧಾರ್ಮಿಕದತ್ತಿ ಇಲಾಖೆ ಸ್ಪಷ್ಟಪಡಿಸಿದೆ.

    ಬೇಲೂರು ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರವಾಗಿ ಎದ್ದಿರುವ ವಿವಾದಕ್ಕೆ ಇಲಾಖೆ ಸ್ಪಷ್ಟನೆ ನೀಡಿದೆ. ಚನ್ನಕೇಶವಸ್ವಾಮಿಗೆ ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರವಾಗಿ ವಿವಾದವಾಗಿತ್ತು. ಈ ವಿಷಯವನ್ನು ರಾಜ್ಯ ಮುಜರಾಯಿ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿ ಅವರ ಗಮನಕ್ಕೆ ತರಲಾಗಿದ್ದು, ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ವಿದ್ಯುಲ್ಲತಾ ತಿಳಿಸಿದ್ದರು. ಇದನ್ನೂ ಓದಿ: ಬೇಲೂರು ಗಳಿಗೆ ತೇರಿನ ದಿನ ಕುರಾನ್ ಪಠಣೆ ನಮ್ಮ ಕೈಪಿಡಿಯಲ್ಲೇ ಇದೆ: ಸಿಇಒ ವಿದ್ಯುಲ್ಲತಾ

    ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರ ನಮ್ಮ ಕೈಪಿಡಿಯಲ್ಲೇ ಇದೆ. ಗಳಿಗೆ ತೇರಿನ ದಿನ ದೇವಾಲಯದ ಬಳಿ ನಿಂತು ಕುರಾನ್ ಪಠಣೆ ಮಾಡಲಾಗುತ್ತದೆ. ಪ್ರತಿ ವರ್ಷವೂ ಅದು ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಸ್ವಲ್ಪ ಚರ್ಚೆಗಳಾಗುತ್ತಿವೆ. ಹೀಗಾಗಿ ಗಳಿಗೆ ತೇರಿನ ದಿನ (ಚಿಕ್ಕತೇರು) ಕುರಾನ್ ಪಠಣೆ ನಡೆಯುವುದರ ಬಗ್ಗೆ ಆಯುಕ್ತರಾದ ರೋಹಿಣಿ ಸಿಂಧೂರಿಯವರ ಗಮನಕ್ಕೆ ತಂದಿದ್ದೇನೆ. ಅವರ ನಿರ್ದೇಶನದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದರು.

    ಇದೀಗ ಈ ಬಗ್ಗೆ ಧಾರ್ಮಿಕದತ್ತಿ ಇಲಾಖೆ ಸ್ಪಷ್ಟನೆ ನೀಡಿದೆ. ದೇವಾಲಯದಲ್ಲಿ ಹಿಂದಿನಿಂದ ಬಂದಿರುವ ರೂಢಿ, ಸಂಪ್ರದಾಯ, ಪದ್ಧತಿಯನ್ನು ಮೀರಲು ಅಧಿಕಾರ ಇರುವುದಿಲ್ಲ. ಈ ಕಾರಣ ಸದರಿ ದೇವಾಲಯದಲ್ಲಿ ವಾರ್ಷಿಕ ಬ್ರಹ್ಮರಥೋತ್ಸವವನ್ನು ಆಗಮಶಾಸ್ತ್ರ ರೀತಿ ಹಾಗೂ ಹಿಂದಿನಿಂದ ನಡೆದುಬರುತ್ತಿರುವ ರೂಢಿಯಲ್ಲಿರುವ ಸಂಪ್ರದಾಯ ಪದ್ಧತಿಯಂತೆ ನಡೆಸಲು ಸೂಚಿಸಬಹುದಾಗಿರುತ್ತದೆ ಎಂದು ಆಯುಕ್ತರ ಪರವಾಗಿ ಧಾರ್ಮಿಕ ದತ್ತಿ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ತಿರುಪತಿ ದೇಗುಲದಲ್ಲಿ ಕಾಲ್ತುಳಿತ – ವೆಂಕಟೇಶ್ವರನ ದರ್ಶನಕ್ಕೆ ಭಕ್ತಾದಿಗಳ ನೂಕುನುಗ್ಗಲು

  • ಆದಿಚುಂಚನಗಿರಿಯಲ್ಲಿ ಅದ್ಧೂರಿ ರಥೋತ್ಸವ – ಸಾವಿರಾರು ಭಕ್ತರಿಂದ ಜೈಕಾರ

    ಆದಿಚುಂಚನಗಿರಿಯಲ್ಲಿ ಅದ್ಧೂರಿ ರಥೋತ್ಸವ – ಸಾವಿರಾರು ಭಕ್ತರಿಂದ ಜೈಕಾರ

    ಮಂಡ್ಯ: ಕೊರೋನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸರಳವಾಗಿ ಜರುಗಿದ್ದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯ ಗಂಗಾಧರೇಶ್ವರಸ್ವಾಮಿಯ ಮಹಾರಥೋತ್ಸವ ಇಂದು ಮುಂಜಾನೆ 4.58ರ ಬ್ರಾಹ್ಮೀ ಮುಹೂರ್ತದಲ್ಲಿ ಅದ್ದೂರಿಯಾಗಿ ಜರುಗಿತು.

    ರಥೋತ್ಸವದಲ್ಲಿ ಲಕ್ಷಾಂತರ ಮಂದಿ ಭಕ್ತರು ಭಾಗಿಯಾಗಿದ್ದು, ಕಾಲಭೈರವೇಶ್ವ ಮತ್ತು ಗಂಗಾಧರೇಶ್ವರಸ್ವಾಮಿಗೆ ಜೈಕಾರ ಕೂಗಿದ್ರು. ರಥೋತ್ಸವದ ವೇಳೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಇದನ್ನೂ ಓದಿ: ಬೊಮ್ಮಾಯಿ ಸಚಿವರ ನಡುವೆ ಟಾಕ್ ಫೈಟ್- ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಕಿತ್ತಾಟ

    ರಥೋತ್ಸವ ಹಿನ್ನೆಲೆ ಇಡೀ ಆದಿಚುಂಚನಗಿರಿ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಇತ್ತ ಬಾನೆತ್ತರಕ್ಕೆ ಬಾಣ ಬಿರುಸುಗಳು ಚಿಮ್ಮುತ್ತಿದ್ದವು. ಒಟ್ಟಿನಲ್ಲಿ ಕೊರೊನಾ ನಂತರ ಮಹಾರಥೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.

  • ನಾಳೆ ನಂಜನಗೂಡಿನಲ್ಲಿ ಅದ್ಧೂರಿ ಪಂಚ ಮಹಾ ರಥೋತ್ಸವ

    ನಾಳೆ ನಂಜನಗೂಡಿನಲ್ಲಿ ಅದ್ಧೂರಿ ಪಂಚ ಮಹಾ ರಥೋತ್ಸವ

    ಮೈಸೂರು: ಕೋವಿಡ್‍ನಿಂದ ಕಳೆದ ಎರಡು ವರ್ಷಗಳಿಂದ ರದ್ದಾಗಿದ್ದ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ಪಂಚ ಮಹಾ ರಥೋತ್ಸವ ನಾಳೆ ನಡೆಯಲಿದೆ.

    ನಾಳೆ ಮುಂಜಾನೆ 3.30 ರಿಂದ 4.30ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. 100 ಅಡಿ ಎತ್ತರ, 110 ಟನ್ ತೂಕದ ಗೌತಮ ರಥ ದೇವಸ್ಥಾನದ ಸುತ್ತಲಿನ 1.5 ಕಿ.ಮೀ ರಥ ಬೀದಿಯಲ್ಲಿ ಸಾಗಲಿದೆ. ಈ ರಥದ ಜೊತೆ ಅಮ್ಮನವರ ರಥ, ಗಣೇಶ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರ ಸ್ವಾಮಿ ರಥ ಸೇರಿದಂತೆ ಐದು ರಥಗಳು ಚಲಿಸಲಿವೆ. ಇದನ್ನೂ ಓದಿ: ಸರ್ಕಾರದ ತೀರ್ಮಾನವನ್ನು ಕೋರ್ಟ್ ಎತ್ತಿಹಿಡಿದಿರುವುದಕ್ಕೆ ಸ್ವಾಗತ: ಈಶ್ವರಪ್ಪ

    ಪಂಚ ರಥಗಳ ಸಿಂಗರ ಮುಗಿದಿದೆ. ಗೌತಮ ರಥದ ಎರಡು ಹಾಗೂ ಪಾರ್ವತಿ ದೇವಿಯ ಒಂದು ಚಕ್ರವನ್ನು ಹೊಸದಾಗಿ ಅಳವಡಿಸಲಾಗಿದೆ. ಗೌತಮ ರಥ ಎಳೆಯಲು ಗೋಕರ್ಣದಿಂದ 3 ಲಕ್ಷ ಬೆಲೆಯ ವಿಶೇಷ ಹಗ್ಗ ತರಿಸಲಾಗಿದೆ. ರಥೋತ್ಸವದ ವೀಕ್ಷಣೆಗೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು ಭದ್ರತೆಗಾಗಿ ಹೆಚ್ಚಿನ ಪೊಲೀಸರ ನಿಯೋಜಿಸಲಾಗಿದೆ. ಇದನ್ನೂ ಓದಿ: ರಸ್ತೆ ಗುಂಡಿಗೆ ಬಲಿಯಾದ ಅಶ್ವಿನ್ ಕುಟುಂಬಕ್ಕೆ ಉಚಿತ ಸೈಟ್: ಎಸ್.ಆರ್ ವಿಶ್ವನಾಥ್

  • ಮಂತ್ರಾಲಯದಲ್ಲಿ ರಾಯರ ಆರಾಧನೆ – ಮಹಾರಥೋತ್ಸವ ಮೂಲಕ ಸಂಭ್ರಮಕ್ಕೆ ತೆರೆ

    ಮಂತ್ರಾಲಯದಲ್ಲಿ ರಾಯರ ಆರಾಧನೆ – ಮಹಾರಥೋತ್ಸವ ಮೂಲಕ ಸಂಭ್ರಮಕ್ಕೆ ತೆರೆ

    ರಾಯಚೂರು: ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಅದ್ಧೂರಿಯಾಗಿ ಮಹಾ ರಥೋತ್ಸವ ನಡೆಯಿತು. ಉತ್ತರಾರಾಧನೆ ಹಿನ್ನೆಲೆ ವಸಂತೋತ್ಸವ ಬಳಿಕ ಮಹಾರಥೋತ್ಸವ ಜರುಗಿಸಲಾಯಿತು.

    ರಥೋತ್ಸವ ವೇಳೆ ಹೆಲಿಕ್ಯಾಪ್ಟರ್ ಮೂಲಕ ರಥಕ್ಕೆ ಪುಷ್ಪವೃಷ್ಠಿ ಮಾಡಲಾಯಿತು. ಮಠದ ಶ್ರೀಗಳು ಹೆಲಿಕಾಪ್ಟರ್‍ನಲ್ಲಿ ಕುಳಿತು ರಥಕ್ಕೆ ಪುಷ್ಪ ವೃಷ್ಠಿ ಮಾಡಿದರು. ರಥೋತ್ಸವ ಹಿನ್ನೆಲೆ ನೆರೆದಿದ್ದ ಸಾವಿರಾರು ಭಕ್ತರಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿದರು.

    Mantralaya 350 Aradhana Mahotsava - Maha Rathotsava (2)

    ಹಿಂದೂ ಧರ್ಮಕ್ಕೆ ಸಮಾನವಾದ ಧರ್ಮ ಜಗತ್ತಿನಲ್ಲಿ ಎಲ್ಲೂ ಇಲ್ಲ. ಹಿಂದೂ ಧರ್ಮ ಪರಮ ಪವಿತ್ರವಾದುದು. ಜಗತ್ತಿಗೆ ಸಮೃದ್ಧಿ ಹಾಗೂ ಶಾಂತಿಯ ಮಂತ್ರ ಕಲಿಸಿದ ಧರ್ಮವಿದು. ರಾಯರು ಅನೇಕ ಉದ್ಘ್ರಂಥ ಗಳನ್ನು ರಚಿಸುವ ಮೂಲಕ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಭಕ್ತಿ ಮಾರ್ಗದಿಂದ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ರಥದಲ್ಲಿ ಕುಳಿತು ಅನುಗ್ರಹ ಸಂದೇಶ ನೀಡಿದರು..

    Mantralaya 350 Aradhana Mahotsava - Maha Rathotsava (2)

    ವಿಶ್ವದ ಮಹಾಗುರುಗಳು ಸರ್ವ ಜಾತಿ ಜನಾಂಗದವರನ್ನು ಅನುಗ್ರಹಿಸುತ್ತಿದ್ದಾರೆ. ರಾಯರ ಸೇವೆ ಸಲ್ಲಿಸುವ ಮೂಲಕ ಅವರ ಅಂತರ್ಯಾಮಿಯಾದ ಪರಮಾತ್ಮನ ಅನುಗ್ರಹಿಸಬೇಕು.ರಾಯರು ಭಕ್ತಿ ಮಾರ್ಗದಿಂದ ದೇವರ ಅನುಗ್ರಹಕ್ಕೆ ಪಾತ್ರರಾಗುವ ಬಗೆಯನ್ನು ತಿಳಿಸಿಕೊಟ್ಟಿದ್ದಾರೆ. ಅಂಥ ಮಾರ್ಗ ಎಲ್ಲರಿಗೂ ದಾರಿದೀಪ ಎಂದರು.

    Mantralaya 350 Aradhana Mahotsava - Maha Rathotsava (4)

    ಶ್ರೀಮಠವು ಕೊರೊನಾ ಹಿನ್ನೆಲೆ ಆರಾಧನೆಯನ್ನು ಅತ್ಯಂತ ಸರಳವಾಗಿ ಆಚರಿಸಲು ಉದ್ದೇಶಿಸಿತ್ತು. ಆದರೆ ರಾಯರ ಭಕ್ತರು ಕೊರೊನಾಕ್ಕೆ ಹೆದರದೇ ಭಾರಿ ಸಂಖ್ಯೆಯಲ್ಲಿ ಆಗಮಿಸಿರುವುದು ಅವರೆಡೆಗೆ ಭಕ್ತರ ನಂಬಿಕೆ ವಿಶ್ವಾಸ ಬಯಲುಗೊಳಿಸಿದೆ. ರಾಯರು ತಮ್ಮ ಭಕ್ತರಿಗೆ ಬದುಕನ್ನು ಸರಿದಾರಿಯಲ್ಲಿ ನಡೆಸುವ ಶಕ್ತಿ ತುಂಬಲಿ. ಮಂತ್ರಾಲಯವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯಲಿದೆ ಎಂದರು.

    Mantralaya 350 Aradhana Mahotsava - Maha Rathotsava (4)

    350ನೇ ವರ್ಷದ ಆರಾಧನೆ ಅಂಗವಾಗಿ ಭಕ್ತರು ಕೊಡಮಾಡಿದ ದೇಣಿಗೆಯಿಂದ ವಜ್ರದ ಹಾರವನ್ನು ರಾಯರಿಗೆ ಸಮರ್ಪಿಸಲಾಗಿದೆ. ಭಕ್ತರ ಹಣದಿಂದಲೇ ಪಾದ ಕಾಣಿಕೆಯಿಂದ ರಾಮದೇವರ ಪೂಜೆ ಹಾಗೂ ಅಭಿಷೇಕಕ್ಕೆ ಬಳಕೆ ಮಾಡಲು 14 ಕೆಜಿ ತೂಕದ 20 ಕೋಟಿ ಮೌಲ್ಯದ ಚಿನ್ನದ ಎರಡು ಪಾತ್ರೆಗಳನ್ನ ರಾಯರಿಗೆ ಸಮರ್ಪಿಸಲಾಗಿದೆ. ಆರಾಧನೆ ಮೂಲಕ ಜಗತ್ತನ್ನು ಕವಿದಿರುವ ಕೊರೊನಾ ಉಪದ್ರವ ಕಳೆದು ಶಾಂತಿ ನೆಮ್ಮದಿ ನೆಲೆಸಲಿ ಅಂತ ಮಂತ್ರಾಲಯ ಶ್ರೀಗಳು ಹಾರೈಸಿದರು. ಇದನ್ನೂ ಓದಿ: ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಉತ್ತರಾರಾಧನೆ

    Mantralaya 350 Aradhana Mahotsava - Maha Rathotsava (4)

    ರಾಯರ ಆರಾಧನಾ ಮಹೋತ್ಸವದ ಸಂಭ್ರಮಕ್ಕೆ ಮಹಾರಥೋತ್ಸವ ಮೂಲಕ ತೆರೆಬಿದ್ದಿದೆ. ಆಗಸ್ಟ್ 27 ರ ವರೆಗೆ ಸಪ್ತರಾತ್ರೋತ್ಸವ ನಡೆಯಲಿದೆ. ಸಪ್ತರಾತ್ರೋತ್ಸವ ಅಂಗವಾಗಿ ಮಠದ ಪ್ರಾಂಗಣ ಹಾಗೂ ಹೊರಗಡೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿಯಲಿವೆ.ಇದನ್ನೂ ಓದಿ: ರಾಯರ ಆರಾಧನೆ- ಪಾದಯಾತ್ರೆ ಮೂಲಕ ಹರಿದು ಬಂತು ಭಕ್ತರ ದಂಡು

  • ನಂದಿ ತಪ್ಪಲಿನಲ್ಲಿ ವಿಜೃಂಭಣೆಯಿಂದ ನೆರವೇರಿದ ಭೋಗನಂದೀಶ್ವರ ರಥೋತ್ಸವ

    ನಂದಿ ತಪ್ಪಲಿನಲ್ಲಿ ವಿಜೃಂಭಣೆಯಿಂದ ನೆರವೇರಿದ ಭೋಗನಂದೀಶ್ವರ ರಥೋತ್ಸವ

    ಚಿಕ್ಕಬಳ್ಳಾಪುರ: ತಾಲೂಕಿನ ವಿಶ್ವವಿಖ್ಯಾತ ನಂದಿ ಗಿರಿಧಾಮದ ತಪ್ಪಲಿನಲ್ಲಿರುವ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ನಂದಿ ಗ್ರಾಮದ ಭೋಗ ನಂದೀಶ್ವರನ ಜೋಡಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

    ಶತಮಾನಗಳ ಇತಿಹಾಸವಿರುವ ನಂದಿಯ ಭೋಗ ನಂದೀಶ್ವರನ ದೇವಾಲಯದ ಜೋಡಿ ಬ್ರಹ್ಮ ರಥೋತ್ಸವ ಮಹಾಶಿವರಾತ್ರಿ ಹಬ್ಬದ ಮಾರನೇ ದಿನ ನಡೆಯುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.

    ದೇಶದ ಬೆರಳೆಣಿಕೆಯಷ್ಟು ಕಲ್ಲಿನ ರಥಗಳಲ್ಲಿ ನಂದಿಯ ಭೋಗನಂದೀಶ್ವರನ ರಥವೂ ಒಂದಾಗಿದ್ದು, ಹರಕೆ ಹೊತ್ತ ಭಕ್ತರು ತೇರು ಏಳೆದು, ಹರಿಕೆಗಳನ್ನ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿ ತೇರು ಎಳೆದರು.

  • ಲಾಕ್‍ಡೌನ್ ಎಫೆಕ್ಟ್ – ದೇವಸ್ಥಾನದ ಆವರಣದಲ್ಲೇ ಚಾಮುಂಡೇಶ್ವರಿ ರಥೋತ್ಸವ

    ಲಾಕ್‍ಡೌನ್ ಎಫೆಕ್ಟ್ – ದೇವಸ್ಥಾನದ ಆವರಣದಲ್ಲೇ ಚಾಮುಂಡೇಶ್ವರಿ ರಥೋತ್ಸವ

    ಮಂಡ್ಯ: ಲಾಕ್‍ಡೌನ್ ಬಿಸಿ ಜನರಿಗೆ ಮಾತ್ರವಲ್ಲ ದೇವಸ್ಥಾನಗಳಿಗೂ ಸಹ ತಟ್ಟಿದೆ. ಇಂದಿನಿಂದ ರಾಜ್ಯ ಸರ್ಕಾರ ಜನರಿಗೆ ಅನುಕೂಲವಾಗಲೆಂದು ಲಾಕ್‍ಡೌನ್‍ನನ್ನು ಸಡಿಲಿಕೆಗೊಳಿಸುವ ಮೂಲಕ ಜನರಿಗೆ ಲಾಕ್‍ಡೌನ್‍ನಿಂದ ರಿಲೀಫ್ ನೀಡಲಾಗಿದೆ. ಆದರೆ ದೇಸ್ಥಾನಗಳಿಗೆ ಮಾತ್ರ ಲಾಕ್‍ಡೌನ್ ರಿಲೀಫ್ ನೀಡಲಾಗಿಲ್ಲ.

    ಈ ಹಿನ್ನೆಲೆಯಲ್ಲಿ ಇಂದು ಮಂಡ್ಯದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಬೇಕಿದ್ದ ರಥೋತ್ಸವ ಸರಳವಾಗಿ ನೆರವೇರುತ್ತಿದೆ. ರಸ್ತೆಗಳಲ್ಲಿ ರಥೋತ್ಸವವನ್ನು ನಡೆಸದೆ ದೇವಸ್ಥಾನದ ಆವರಣದಲ್ಲಿ ರಥೋತ್ಸವ ನಡೆಸಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನ ಮಾಡಿದೆ. ಈಗಾಗಲೇ ರಥೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

    ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ರಥೋತ್ಸವ ನಡೆಯುತ್ತಿತ್ತು. ಈ ವೇಳೆ ಸಾವಿರಾರು ಭಕ್ತರು ಸೇರಿ ಚಾಮುಂಡೇಶ್ವರಿ ತಾಯಿಯ ಕೃಪೆಗೆ ಪಾತ್ರರಾಗುತ್ತಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ಈ ಬಾರಿ ರಥೋತ್ಸವವನ್ನು ಸರಳವಾಗಿ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.

    ಸದ್ಯಕ್ಕೆ ರಥಕ್ಕೆ ಶೃಂಗಾರ ಮಾಡಲಾಗುತ್ತಿದೆ. ನಂತರ ಅದರಲ್ಲಿ ತಾಯಿ ಚಾಮುಂಡಿದೇವಿಯ ವಿಗ್ರಹವನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. ಅಲ್ಲದೇ ರಸ್ತೆಗಳಲ್ಲಿ ರಥೋತ್ಸವ ನಡೆಸದೆ ಕೇವಲ ದೇವಸ್ಥಾನದ ಆವರಣದಲ್ಲಿ ಮಾತ್ರ ನಡೆಸಲಾಗುತ್ತದೆ. ಇದರಿಂದ ಭಕ್ತರು ನಿರಾಶೆಗೊಂಡಿದ್ದಾರೆ.