Tag: Rate Hike

  • ಆಗಸ್ಟ್ 1ರಿಂದ ಆಟೋ ಪ್ರಯಾಣ ದರ ಏರಿಕೆ

    ಆಗಸ್ಟ್ 1ರಿಂದ ಆಟೋ ಪ್ರಯಾಣ ದರ ಏರಿಕೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಳೆಯಿಂದ (ಆ.1) ಆಟೋ ದರ ಏರಿಕೆಯಾಗಲಿದೆ. ಬೆಂಗಳೂರು ನಗರ ಡಿಸಿ ಆಟೋ ದರ ಏರಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

    ಈ ಮೊದಲು ಆಟೋ ಚಾಲಕರು ಜಿಲ್ಲಾಧಿಕಾರಿಯವರಿಗೆ ಪ್ರಯಾಣ ದರ ಏರಿಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಆಲಿಸಿದ ಡಿಸಿಯವರು ಅಸ್ತು ಎಂದಿದ್ದಾರೆ.ಇದನ್ನೂ ಓದಿ: ಪತಿ ಜೊತೆ ಜಗಳ| ಚಹಾಗೆ ಇಲಿ ಪಾಷಾಣ ಬೆರೆಸಿ ಮಗು ಜೊತೆ ಕುಡಿದ್ಳು – ಪುತ್ರಿ ಸಾವು, ತಾಯಿ ಗಂಭೀರ

    ಆ.1ರಿಂದ ಆಟೋ ದರ ಏರಿಕೆಯಾಗಲಿದ್ದು, ಕೆಲವು ಸೂಚನೆಗಳನ್ನು ನೀಡಿದ್ದಾರೆ. ಈ ಪೈಕಿ ಆಟೋ ದರ ಏರಿಕೆ ಬಳಿಕ ಹೆಚ್ಚುವರಿ ಹಣವನ್ನು ಪಡೆಯುವಂತಿಲ್ಲ. ಒಂದು ವೇಳೆ ಹೆಚ್ಚುವರಿ ಹಣ ಪಡೆದರೆ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಆಟೋ ಪ್ರಯಾಣ ಎಷ್ಟು ದುಬಾರಿ?
    – ಕನಿಷ್ಟ ಮೊದಲ 2 ಕಿ.ಮೀಗೆ 36ರೂ.
    – ನಂತರದ ಪ್ರತಿ ಕಿ.ಮೀಗೆ 18 ರೂ.
    – ಮೊದಲ ಐದು ನಿಮಿಷ ಕಾಯುವಿಕೆ ಉಚಿತ.
    – ಪ್ರತಿ ಹದಿನೈದು ನಿಮಿಷ ಕಾಯುವಿಕೆ ದರ 10 ರೂ.
    – 20 ಕೆ.ಜಿ ಲಗೇಜಿಗೆ ಉಚಿತ
    – 20 ಕೆ.ಜಿ ಗಿಂತ ಹೆಚ್ಚಿದ್ದರೇ 10ರೂ. ಲಗೇಜ್ ಶುಲ್ಕ
    – ರಾತ್ರಿ ವೇಳೆಯ ಪ್ರಯಾಣಕ್ಕೆ ಒಂದೂವರೆ ಪಟ್ಟು ದರ
    – ರಾತ್ರಿ 10ರಿಂದ ಬೆಳಗಿನ ಜಾವ 5ಗಂಟೆಯವರೆಗೆ ಒಂದೂವರೆ ಪಟ್ಟು ದರ
    – ಹೊಸ ದರ ಪಟ್ಟಿ ಆಟೋದ ಮೇಲೆ ಕಡ್ಡಾಯ ಹಾಕಬೇಕು
    – ಪರಿಷ್ಕೃತ ದರದ ಹೊಸ ಮೀಟರ್ ಆ.31ರೊಳಗೆ ಹಾಕಿಸಬೇಕು.ಇದನ್ನೂ ಓದಿ: Malegaon Blast Case | ಪ್ರಜ್ಞಾ ಠಾಕೂರ್ ಸೇರಿ 7 ಆರೋಪಿಗಳು ಖುಲಾಸೆ

  • ಬಿಬಿಎಂಪಿ ವ್ಯಾಪ್ತಿಯ ಈಜುಕೊಳಗಳಲ್ಲಿ ದರ ಏರಿಕೆ – ಬೇಕಾಬಿಟ್ಟಿ ದರ ನಿಗದಿಗೆ ಬೆಂಗಳೂರಿಗರ ಆಕ್ರೋಶ

    ಬಿಬಿಎಂಪಿ ವ್ಯಾಪ್ತಿಯ ಈಜುಕೊಳಗಳಲ್ಲಿ ದರ ಏರಿಕೆ – ಬೇಕಾಬಿಟ್ಟಿ ದರ ನಿಗದಿಗೆ ಬೆಂಗಳೂರಿಗರ ಆಕ್ರೋಶ

    – ದರ ಕಡಿಮೆ ಮಾಡುವಂತೆ ಪೋಷಕರ ಒತ್ತಾಯ

    ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯ ಈಜುಕೊಳಗಳಲ್ಲಿ (Swimming Pool) ದರ ಏರಿಕೆ ಆಗಿದೆ. ಚಿಕ್ಕ ಮಕ್ಕಳಿಗೂ ಒಂದೇ ದರ, ದೊಡ್ಡವರಿಗೆ ಒಂದೇ ದರ, ಹೇಳೋರಿಲ್ಲ ಕೇಳೋರಿಲ್ಲ. ಬೇಕಾಬಿಟ್ಟಿ ದರ ನಿಗದಿಗೆ ಇದೀಗ ಪೋಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಒಂದು ಕಡೆ ಬಿರು ಬಿಸಿಲು ಬೇಸಿಗೆ ಮತ್ತೊಂದು ಕಡೆ ಶಾಲಾ ಮಕ್ಕಳಿಗೆ ರಜೆ. ಇದನ್ನೇ ಗುರಿಯಾಗಿಸಿಕೊಂಡಿರುವ ಬಿಬಿಎಂಪಿ ಈಜುಕೊಳಗಳಲ್ಲೂ ಬೇಕಾ ಬಿಟ್ಟಿ ದರ ನಿಗದಿ ಮಾಡಿದೆ. ಮೊದಲೆಲ್ಲಾ ಚಿಕ್ಕಮಕ್ಕಳಿಗೆ 25 ರೂ. ದೊಡ್ಡವರಿಗೆ 30 ರೂ. ಇತ್ತು. ಈಗ ವಯಸ್ಕರಿಗೂ, ಚಿಕ್ಕಮಕ್ಕಳಿಗೂ 50 ರೂ. ನಿಗದಿಯಾಗಿದೆ ಬಿಬಿಎಂಪಿ ದರ ನಿಗದಿ ಮಾಡಿರುವುದು ಒಂದಾದರೆ, ಈಜುಕೊಳಗಳಲ್ಲಿ ಉಸ್ತುವಾರಿಗಳು ಮತ್ತೊಂದು ದರದಲ್ಲಿ ವಸೂಲಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಓಂ ಪ್ರಕಾಶ್‌ ಹತ್ಯೆಗೆ 1 ವಾರದಿಂದ ಸ್ಕೆಚ್‌ ಹಾಕಿದ್ದ ಪತ್ನಿ, ಪುತ್ರಿ!

    ಮಹಾಲಕ್ಷ್ಮೀ ಲೇಔಟ್‌ನ ಬಿಬಿಎಂಪಿ ಈಜುಕೊಳದಲ್ಲಿ 40 ನಿಮಿಷಕ್ಕೆ 50 ರೂ. ನಿಗದಿ ಮಾಡಿದ್ದಾರೆ. ಚಿಕ್ಕಮಕ್ಕಳಿಗೂ 50 ರೂ. ದೊಡ್ಡವರಿಗೂ 50 ರೂ. ಇದಕ್ಕೆ ಪೋಷಕರು ಮಕ್ಕಳಿಗೆ ದರ ಕಡಿಮೆ ಮಾಡಿ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದನ್ನೂ ಓದಿ: ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ ಫೇಕಾ?

    ಮಹಾಲಕ್ಷ್ಮೀ ಲೇಔಟ್‌ನಲ್ಲಿ ಎಲ್ಲರಿಗೂ 50 ರೂ. ನಿಗದಿ ಮಾಡಿದ್ದರು. ಆದರೆ ವಿಜಯನಗರದಲ್ಲಿ ಮಕ್ಕಳಿಗೆ 40 ರೂ. ದೊಡ್ಡವರಿಗೆ 50 ರೂ. ನಿಗದಿ ಮಾಡಿದ್ದಾರೆ. ಅಂದರೆ ಒಂದೊಂದು ಕಡೆ ಒಂದೊಂದು ರೀತಿ ದರ ನಿಗದಿ ಮಾಡಿರುವುದು ಕಂಡುಬರುತ್ತಿದೆ. ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭೇಟಿಯಾದ ಪ್ರಧಾನಿ ಮೋದಿ – ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚೆ

    ಬೇಕಾಬಿಟ್ಟಿ ದರ ವಸೂಲಿ ಮಾಡೋದು, ಸಮ್ಮರ್ ಕ್ಯಾಂಪ್‌ಗಳಿಗೆ ಹಣ ವಸೂಲಿ ಮಾಡೋದು ಮಾಡಿದರೆ ಖಂಡಿತಾ ಕ್ರಮ ಆಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ನಿವೃತ್ತ ಡಿಜಿಪಿ ಕೊಲೆ ಕೇಸ್‌ – ಆರೋಪಿ ಪತ್ನಿಗೆ 14 ದಿನ ನ್ಯಾಯಾಂಗ ಬಂಧನ

    ಈಜುಕೊಳದಲ್ಲಿ ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿರುವುದರಿಂದ ದರ ಇಳಿಕೆಗೆ ಪೋಷಕರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಆಗುತ್ತಾ ಎಂದು ಕಾದು ನೋಡಬೇಕಿದೆ.

  • ಜನರಿಗೆ ಮತ್ತೆ ದರ ಏರಿಕೆಯ ಬರೆ – ಬೆಂಗಳೂರಿನಲ್ಲಿ ಕಾಫಿ, ಟೀ ಬೆಲೆ ಏರಿಕೆ

    ಜನರಿಗೆ ಮತ್ತೆ ದರ ಏರಿಕೆಯ ಬರೆ – ಬೆಂಗಳೂರಿನಲ್ಲಿ ಕಾಫಿ, ಟೀ ಬೆಲೆ ಏರಿಕೆ

    ಬೆಂಗಳೂರು: ಬಸ್ ಟಿಕೆಟ್, ಮೆಟ್ರೋ, ಹಾಲು, ವಿದ್ಯುತ್ ಬಳಿಕ ಡಿಸೇಲ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆನ್ನಲ್ಲೇ ಈಗ ಕಾಫಿ, ಟೀ ದರ ಸಹ ಏರಿಕೆಯಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ನಂದಿನಿ ಹಾಲಿನ ದರ ಬೆಲೆ ಪ್ರತಿ ಲೀ.ಗೆ 4 ರೂ. ಏರಿಕೆ ಮಾಡಿದ ಬೆನ್ನಲ್ಲೇ ಈಗ ಹೋಟೆಲ್‌ಗಳಲ್ಲಿ ಕಾಫಿ(Coffee), ಟೀ(Tea) ಬೆಲೆಯೂ ಏರಿಕೆಯಾಗಿದೆ. ಒಂದು ಕಡೆ ವಿಪಕ್ಷಗಳು ದರ ಏರಿಕೆ ವಿರುದ್ಧ ಮಾತಿನ ಸಮರ ನಡೆಸಿದ್ರೇ ಇನ್ನೊಂದು ಕಡೆ ಸರ್ಕಾರ ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಕೊಲ್ಲೂರಲ್ಲಿ ಚಂಡಿಕಾ ಹೋಮದಿಂದ ಸಂಗ್ರಹವಾಯ್ತು 1.77 ಕೋಟಿ ರೂ.

    ಈಗ ಹಾಲಿನ ದರ ಲೀಟರ್‌ಗೆ 4 ರೂ. ಏರಿಕೆಯಾದ ಬೆನ್ನಲ್ಲೇ ಈಗ ಹೋಟೆಲ್‌ಗಳಲ್ಲಿ ಕಾಫಿ, ಟೀ ಬೆಲೆಯೂ ಏರಿಕೆಯಾಗಿದೆ. 2-3 ರೂ. ಏರಿಕೆ ಕಂಡಿದೆ. ಬೆಂಗಳೂರಿನ ಹೋಟೆಲ್‌ಗಳಲ್ಲಿ ಕಾಫಿ ಟೀ ದರದ ಜೊತೆಗೆ ಶೀಘ್ರವೇ ಬೆಣ್ಣೆ, ತುಪ್ಪದ ದೋಸೆ ದರವೂ ಏರಿಕೆಯಾಗಲಿದೆ ಎಂದು ಹೋಟೆಲ್ ಅಸೋಸಿಯೇಷನ್(Hotel Association) ಹೇಳಿದೆ. ಇದನ್ನೂ ಓದಿ: ನನಗೆ ಶುಗರ್ ಇದೆ, ಅನ್ನ ಬಿಟ್ಟು ಚಪಾತಿ ತಿಂತಾ ಇದೀನಿ: ಸಿದ್ದರಾಮಯ್ಯ

    ಇನ್ನೂ ದರ ಏರಿಕೆ ವಿಚಾರದಲ್ಲಿ ಸರ್ಕಾರವನ್ನು ಕಟುವಾಗಿ ಟೀಕಿಸಿರುವ ಹೆಚ್.ಡಿ.ಕುಮಾರಸ್ವಾಮಿ(H D Kumaraswamy) ಹಾಲಿನ ದುಡ್ಡು ರೈತರಿಗೆ ಮೊಸರಿನ ದುಡ್ಡು ಏನು ಮಾಡ್ತೀರಾ ಎಂದು ಕಿಡಿಕಾರಿದ್ದಾರೆ. ಆದರೆ ಸಚಿವ ಡಿ.ಕೆ.ಶಿವಕುಮಾರ್(D K Shivakumar) ದರ ಏರಿಕೆಯನ್ನು ಸಮರ್ಥಿಸಿದ್ದಾರೆ. ರಾಜಕೀಯ ಪಕ್ಷಗಳ ಕೆಸೆರೆರೆಚಾಟದ ಮಧ್ಯೆ ಜನರು ನಿತ್ಯ ದರ ಏರಿಕೆ ಬರೆಯಿಂದ ಹೈರಾಣಾಗಿದ್ದಾರೆ.

  • ಹಾಲಿನ ದರ ಏರಿಕೆ – ಇಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ, 2-3 ರೂ. ಹೆಚ್ಚಳ ಸಾಧ್ಯತೆ?

    ಹಾಲಿನ ದರ ಏರಿಕೆ – ಇಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ, 2-3 ರೂ. ಹೆಚ್ಚಳ ಸಾಧ್ಯತೆ?

    ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆ ಬಳಿಕ ಇದೀಗ ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ (Milk Rate Hike) ಪ್ರಸ್ತಾಪಿಸಿದ್ದು, ಇಂದು ಕ್ಯಾಬಿನೆಟ್‌ನಲ್ಲಿ (Cabinet) ನಿರ್ಧಾರವಾಗಲಿದೆ.ಇದನ್ನೂ ಓದಿ:ಹಾಲಿನ ದರ ಏರಿಕೆ – ಇಂದು ಸಿಎಂ ಸಭೆಯಲ್ಲಿ ನಿರ್ಧಾರ ಸಾಧ್ಯತೆ!

    ನಡೆದ ಸಭೆಯಲ್ಲಿ ಸಿಎಂ (CM Siddaramaiah) ಈ ದರಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಹಾಲಿನ ದರ ಹೆಚ್ಚಳ ಹಣ ಕೇವಲ ರೈತರಿಗಷ್ಟೇ ಇರಲಿ ಎಂದಿದ್ದರು. ಆದರೆ ಸಭೆಯ ಬಳಿಕ 5 ರೂ.ಯಾದರೂ ಹೆಚ್ಚಳ ಮಾಡಿ, ಅದರಲ್ಲಿ 3 ರೂ. ರೈತರಿಗೆ, 2 ರೂ. ಒಕ್ಕೂಟಗಳಿಗೆ ಇರಲಿ ಎಂದು ಪ್ರಸ್ತಾಪಿಸಿದ್ದರು.

    ಒಕ್ಕೂಟಗಳ ಪ್ರಸ್ತಾಪವನ್ನು ಒಪ್ಪದೇ ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸುವಾಗಿ ಸಿಎಂ ತಿಳಿಸಿದ್ದರು. ಈ ಹಿನ್ನೆಲೆ ಇವತ್ತು ಕ್ಯಾಬಿನೆಟ್ ಸಭೆಯಲ್ಲಿ ಹಾಲಿನ ದರ ಏರಿಕೆ ಪ್ರಸ್ತಾಪಿಸುವ ಸಾಧ್ಯತೆಯಿದ್ದು, 2 ಅಥವಾ 3 ರೂ. ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಾ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು ಇಬ್ಬರು ವ್ಯಕ್ತಿಗಳ ಸಾವು – ಚಾಲಕ, ನಿರ್ವಾಹಕ ಎಸ್ಕೇಪ್

  • ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ: ಡಿಕೆಶಿ

    ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ: ಡಿಕೆಶಿ

    ಬೆಂಗಳೂರು: ಮೊದಲು ಜನರಿಗೆ ಆದಾಯ ಬರುವಂತೆ ಸರ್ಕಾರ ಮಾಡಿ ಕೊಡಲಿ. ಆಮೇಲೆ ದರ ಏರಿಕೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಸರ್ಕಾರ ದರ ಏರಿಕೆ ಮಾಡುತ್ತಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಲು, ವಿದ್ಯುತ್, ಸಾರಿಗೆ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಿದೆ. ಮೊದಲು ಜನರಿಗೆ ಆದಾಯ ಬರುವಂತೆ ಸರ್ಕಾರ ಮಾಡಿ ಕೊಡಲಿ. ಆಮೇಲೆ ದರ ಏರಿಕೆ ಮಾಡಲಿ. ಕೇಸ್‍ಗಳ ಸಂಖ್ಯೆ ಕಡಿಮೆ ಇದ್ದಾಗ, ಲಾಕ್‍ಡೌನ್, ಸೀಲ್‍ಡೌನ್, ಬ್ರೇಕ್‍ಡೌನ್ ಅಂತಾರೆ. ಅವೈಜ್ಞಾನಿಕ ರೂಲ್ಸ್‌ಗಳನ್ನು ಸರ್ಕಾರ ತರುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ನೋಡಬೇಕು. ಆಂಧ್ರ, ತೆಲಂಗಾಣಗಳಲ್ಲಿ ಕರ್ಫ್ಯೂ ಎಲ್ಲ ಮಾಡಿಲ್ಲ. ಇಲ್ಲಿ ಮಾತ್ರ ಯಾಕೆ? ನೈಟ್ ಕರ್ಫ್ಯೂ ಕೂಡಾ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್‌ ಯಾರನ್ನೂ ಬಿಟ್ಟಿಲ್ಲ, ದೇವೇಗೌಡರಿಗೆ ಕೊರೊನಾ ತೀವ್ರತೆ ಇಲ್ಲ: ಬೊಮ್ಮಾಯಿ

    MONEY

    ಕಡಿಮೆ ಕೇಸ್ ಇದ್ದಾಗ ಕರ್ಫ್ಯೂ ಮಾಡಿದ್ದರು. ಕೇಸ್ ಹೆಚ್ಚಿದಾಗ ಕರ್ಫ್ಯೂ ತೆಗೆದಿದ್ದಾರೆ. ರೈತರು ನಷ್ಟ ಅನುಭವಿಸುತ್ತಿದ್ದರೂ, ಏನಾದರೂ ಕಾರ್ಯಕ್ರಮ ಕೊಟ್ರಾ? ಅವರ ರಕ್ಷಣೆಗೆ ಯಾಕೆ ಬರಲಿಲ್ಲ? ಸಿಮೆಂಟ್ ಕಬ್ಬಿಣ ರೇಟ್ ಕಡಿಮೆ ಮಾಡುವುದಕ್ಕೆ ಪ್ರಯತ್ನ ಮಾಡಿದ್ರಾ? ವಿದ್ಯುತ್ ಕಂಪನಿಗಳ ಪರಿಸ್ಥಿತಿ ಗೊತ್ತಿದೆ. ಆದರೆ ಜನರನ್ನು ರಕ್ಷಿಸುವ ಕೆಲಸ ಮೊದಲು ಮಾಡಲಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆ- ಜಗದೀಶ್ ಶೆಟ್ಟರ್ ಪ್ರಚಾರ, ಮತಯಾಚನೆ

    ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ ಕರ್ಫ್ಯೂ ಜಾರಿಗೆ ತಂದರು. ಜನರಿಗೆ ಬಹಳ ನಷ್ಟ ಆಗುವ ರೀತಿ ನಡೆದುಕೊಂಡರು. ಸರ್ಕಾರ ಪ್ರಾಕ್ಟಿಕಲ್ ಆಗಿ ಯೋಜನೆ ಜಾರಿ ಮಾಡಲಿ. ಅವೈಜ್ಞಾನಿಕ ರೂಲ್ಸ್ ಬೇಡ. ಲಂಡನ್‍ನಲ್ಲಿ ಎಲ್ಲರನ್ನು ಫ್ರೀ ಬಿಟ್ಟಿಲ್ಲವಾ. ಆಂಧ್ರ, ತೆಲಂಗಾಣದಲ್ಲಿ ಯಾವುದೇ ಕರ್ಫ್ಯೂ ಇಲ್ಲ. ಇಲ್ಲಿ ಯಾಕೆ ಕರ್ಫ್ಯೂ ಜಾರಿ ಮಾಡಿದ್ದರು. ಜನರಿಗೆ ತೊಂದರೆ ಕೊಡುವುದನ್ನು ಮೊದಲು ನಿಲ್ಲಿಸಿ. 50-50 ರೂಲ್ಸ್ ಯಾಕೆ? ಅದರಿಂದ ಎಷ್ಟು ಜನರಿಗೆ ಅನಾನುಕೂಲ ಆಗುತ್ತಿದೆ. ಬಸ್ಸಲ್ಲಿ, ಮೆಟ್ರೋದಲ್ಲಿ, ವಿಮಾನದಲ್ಲಿ ಎಲ್ಲೂ 50-50 ರೂಲ್ಸ್ ಇಲ್ಲ. ದೊಡ್ಡವರಿಗೆ ಒಂದು, ಬಡವರಿಗೆ ಒಂದು ರೂಲ್ಸಾ? ಮೊದಲು ಜನರಿಗೆ ಆದಾಯ ಬರುವಂತೆ ಮಾಡಿ ಬಳಿಕ ದರ ಏರಿಕೆ ಮಾಡಲಿ ಎಂದಿದ್ದಾರೆ.

  • ಗ್ರಾಹಕರಿಗೆ ಮತ್ತೊಮ್ಮೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆ

    ಗ್ರಾಹಕರಿಗೆ ಮತ್ತೊಮ್ಮೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆ

    ನವದೆಹಲಿ : ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 100.50 ರೂ. ಏರಿಕೆಯಾಗಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಕಳೆದ ನವೆಂಬರ್‌ನಲ್ಲಿ 266.50 ರೂಪಾಯಿ ಏರಿಸಿದ್ದ ಸರ್ಕಾರ ಒಂದು ತಿಂಗಳ ಬಳಿಕ ಮತ್ತೆ ನೂರು ರೂಪಾಯಿ ಐವತ್ತು ಪೈಸೆ ಏರಿಸಿದೆ.

    ಇದರಿಂದಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರ್ಮಷಿಯಲ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗಿದೆ. ಸದ್ಯ ದೆಹಲಿಯಲ್ಲಿ 19-ಕೆಜಿ ವಾಣಿಜ್ಯ ಸಿಲಿಂಡರ್ ದರ 2,101 ರೂ. ಆಗಿದೆ. ಮುಂಬೈನಲ್ಲಿ, 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‍ನ ಬೆಲೆ 1,950 ರಿಂದ 2,051 ರೂ. ಆದರೆ, ಕೋಲ್ಕತ್ತಾದಲ್ಲಿ, ವಾಣಿಜ್ಯ ಎಲ್‍ಪಿಜಿ ದರ 2,177 ರೂ. ಆಗಿದೆ. ಇನ್ನು ಚೆನ್ನೈನಲ್ಲಿ 19 ಕೆಜಿ ಸಿಲಿಂಡರ್ 2,234.50 ಗೆ ಏರಿಕೆಯಾಗಿದೆ. ಇದನ್ನೂ ಓದಿ: ಇಸ್ರೋ ಖಾಸಗೀಕರಣ – ಬೆಂಗಳೂರಿನ ಕಛೇರಿ ಗುಜರಾತ್‍ಗೆ ವರ್ಗಾವಣೆ ಖಂಡಿಸಿ ಪ್ರತಿಭಟನೆ

    ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರೆಸಲಾಗಿದೆ. ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ ದರ 899.50 ರೂ. ಇದೆ. ಸಬ್ಸಿಡಿ ಗ್ಯಾಸ್ ಸೇರಿದಂತೆ ಎಲ್ಲಾ ವರ್ಗಗಳ ಎಲ್‍ಪಿಜಿ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಅಕ್ಟೋಬರ್ 6 ರಂದು 15 ರೂ.ಗಳಷ್ಟು ಹೆಚ್ಚಿಸಲಾಗಿದೆ. ಅದಕ್ಕೂ ಮೊದಲು, ಅಕ್ಟೋಬರ್ 1 ರಂದು ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್‍ಪಿಜಿ ದರಗಳನ್ನು 25 ರೂಗಳಷ್ಟು ಹೆಚ್ಚಿಸಲಾಗಿತ್ತು. ಇದನ್ನೂ ಓದಿ: ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಸ್ಯಾಂಪಲ್‌ ಕಳುಹಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

    ಪ್ರತಿ ಕುಟುಂಬಕ್ಕೆ ಸರ್ಕಾರ ಗೃಹ ಬಳಕೆಯ 12 ಸಿಲಿಂಡರ್‌ಗಳನ್ನು ಸಬ್ಸಿಡಿಯಲ್ಲಿ ನೀಡುತ್ತಿದೆ. ಈಗ ಎಲ್‍ಪಿಜಿ ಗ್ಯಾಸ್ ಗ್ರಾಹಕರಿಗೆ ಪ್ರತಿ ಸಿಲಿಂಡರ್‌ಗೆ 79.26 ರೂ.ಗಳನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ. ಆದರೆ, ಕೆಲವು ಗ್ರಾಹಕರು 158.52 ಅಥವಾ 237.78 ಸಬ್ಸಿಡಿ ಪಡೆಯುತ್ತಿದ್ದಾರೆ.

  • ಕನಿಷ್ಠ ದರ ಏರಿಕೆಗೆ ಆಟೋ ಚಾಲಕರ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ

    ಕನಿಷ್ಠ ದರ ಏರಿಕೆಗೆ ಆಟೋ ಚಾಲಕರ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ

    ಬೆಂಗಳೂರು: ಆಟೋ ಕನಿಷ್ಠ ದರವನ್ನು 30 ರೂ.ಗೆ ಏರಿಕೆ ಮಾಡುವಂತೆ ಆಟೋ ಚಾಲಕರ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಮಾಡಿದೆ.

    ದಿನೇ ದಿನೇ ಆಟೋ ಗ್ಯಾಸ್ ದರ ಏರಿಕೆಯಾಗುತ್ತಿರುವ ಹಿನ್ನೆಲೆ ಆಟೋ ಚಾಲಕರು ಆಕ್ರೋಶಗೊಂಡಿದ್ದಾರೆ. ಕೊರೊನಾದಿಂದ ಜೀವನ ನಡೆಸಲು ಕಷ್ಟಕರವಾಗಿರುವ ಸಮಯದಲ್ಲಿ ಆಟೋ ಗ್ಯಾಸ್ ದರ ಏರಿಕೆಯಾಗುತ್ತಿರುವುದರಿಂದ ಆಟೋ ಚಾಲಕರಿಗೆ ನಷ್ಟವಾಗಿದೆ ಎಂದು ಆಟೋ ಚಾಲಕರ ಸಂಘಟನೆಗಳು ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪ್ರತಿ ಲೀಟರ್ ಆಟೋ ಗ್ಯಾಸ್ ದರ 56 ರೂಪಾಯಿಗೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 5.50 ರೂಪಾಯಿ ಏರಿಕೆಯಾಗಿದೆ. ಆಟೋ ಪ್ರಯಾಣದ ಕನಿಷ್ಠ ದರವನ್ನು ಏರಿಕೆ ಮಾಡುವಂತೆ ಆಟೋ ಚಾಲಕರ ಸಂಘಟನೆ ಸರ್ಕಾರಕ್ಕೆ ಮನವಿ ಮಾಡಿದೆ.

    ಆಟೋ ಕನಿಷ್ಠ ದರ 25 ರೂಪಾಯಿಯಿಂದ 30 ರೂಪಾಯಿಗೆ ಏರಿಕೆ ಮಾಡುವಂತೆ ಆಟೋ ಸಂಘಟನೆಗಳು ಬೇಡಿಕೆ ಮಾಡಿಕೊಂಡಿದೆ. ಕಳೆದ ಒಂಬತ್ತು ವರ್ಷಗಳ ಹಿಂದೆ ಆಟೋ ಕನಿಷ್ಠ ಮೀಟರ್ ದರ ಏರಿಕೆಯಾಗಿತ್ತು. ಪ್ರತಿ ಮೂರು ವರ್ಷಕ್ಕೊಮ್ಮೆ ಆಟೋ ಮಿನಿಮಮ್ ದರ ಏರಿಕೆ ಮಾಡುವ ಅವಕಾಶವಿದ್ದು, ಸಾರಿಗೆ ಇಲಾಖೆ ಏರಿಕೆಗೆ ಅವಕಾಶ ನೀಡಿಲ್ಲವೆಂದು ಆದರ್ಶ ಆಟೋ ಚಾಲಕರ ಸಂಘಟನೆಯ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.

    ಎಲ್‍ಪಿಜಿ ದರ ಏರಿಕೆ ಆದಾ ಹಿನ್ನೆಲೆಯಲ್ಲಿ ಆಟೋ ಮಿನಿಮಲ್ ದರವನ್ನು 30 ರೂಪಾಯಿಗೆ ಏರಿಕೆ ಮಾಡಲು ಅವಕಾಶ ನೀಡುವಂತೆ ಜೊತೆಗೆ ಪ್ರತಿ ಕಿಲೋಮೀಟರ್ ಗೆ 16 ರೂಪಾಯಿ ದರ ನಿಗದಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.  ಇದನ್ನೂ ಓದಿ:ಆಗಸ್ಟ್ 10 ರಂದು ದೇಶಾದ್ಯಂತ ವಿದ್ಯುತ್ ನೌಕರರ ಮುಷ್ಕರ

  • ಪೆಟ್ರೋಲ್, ಡೀಸೆಲ್ ದರ ಹೆಚ್ಚಳ- ಬೈಕ್ ಹೊತ್ತು ಸಾಗಿದ ಕೈ ಕಾರ್ಯಕರ್ತರು

    ಪೆಟ್ರೋಲ್, ಡೀಸೆಲ್ ದರ ಹೆಚ್ಚಳ- ಬೈಕ್ ಹೊತ್ತು ಸಾಗಿದ ಕೈ ಕಾರ್ಯಕರ್ತರು

    ಧಾರವಾಡ: ದಿನೇ ದಿನೇ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವಾಗುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹೆಗಲ ಮೇಲೆ ಬೈಕ್ ಹೊತ್ತುಕೊಂಡು ಬರುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

    ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಬೈಕ್ ಹೊತ್ತು ತಂದ ಕೈ ಕಾರ್ಯಕರ್ತರು, ಕೇಂದ್ರ ಸರ್ಕಾರ ಸತತ 19 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹೆಚ್ಚಳ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ಆಡಳಿತ ನಡೆಸುತ್ತಿವೆ. ಬೆಲೆ ಹೆಚ್ಚಳ ಮಾಡುವ ಮುಖಾಂತರ ಕೇಂದ್ರ ಸರ್ಕಾರ ಬಡವರ ಹಾಗೂ ಮಧ್ಯಮ ವರ್ಗದ ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಇದನ್ನು ಓದಿ: 19ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ!

    ಜಿಲ್ಲಾಧಿಕಾರಿ ಕಚೇರಿಗೆ ಬೈಕ್ ಗಳನ್ನು ಹೊತ್ತುಕೊಂಡು ಬರುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಕೂಡಲೇ ತೈಲ ಬೆಲೆ ಇಳಿಕೆ ಮಾಡುವಂತೆ ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.

  • ದೇಶದ ಏಳಿಗೆಗಾಗಿ ಜನ ಎಲ್‍ಪಿಜಿ ದರ ಏರಿಕೆ ಸ್ವೀಕರಿಸಬೇಕು: ಅಶ್ವಥ್ ನಾರಾಯಣ್

    ದೇಶದ ಏಳಿಗೆಗಾಗಿ ಜನ ಎಲ್‍ಪಿಜಿ ದರ ಏರಿಕೆ ಸ್ವೀಕರಿಸಬೇಕು: ಅಶ್ವಥ್ ನಾರಾಯಣ್

    ಚಿಕ್ಕಬಳ್ಳಾಪುರ: ದೇಶದ ಏಳಿಗೆಗಾಗಿ ಜನರು ಎಲ್‍ಪಿಜಿ ದರ ಏರಿಕೆ ಸ್ವೀಕರಿಸಬೇಕು ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.

    ಹೊಸ ವರ್ಷದ ಅಂಗವಾಗಿ ಅಶ್ವಥ್ ನಾರಾಯಣ್ ಅವರು ಕುಟುಂಬ ಸಮೇತರಾಗಿ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ಪುರಾತನ ಪ್ರಸಿದ್ಧ ಶ್ರೀ ಭೋಗನಂದೀಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಹೊಸ ವರ್ಷದ ಶುಭಾಶಯ ಕೋರಿದರು.

    ಈ ವೇಳೆ ಸಬ್ಸಿಡಿ ರಹಿತ ಎಲ್‍ಪಿಜಿ ದರ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆ ಆದ ಕಾರಣ ದೇಶದಲ್ಲೂ ಎಲ್‍ಪಿಜಿ ದರ ಏರಿಕೆ ಆಗಿದೆ. ದರ ಏರಿಕೆ ಆದಾಗ ವಿರೋಧ ಇದ್ದೇ ಇರುತ್ತೆ. ಆದರೆ ದೇಶದ ಏಳಿಗೆಗಾಗಿ ಗ್ರಾಹಕರು ಎಲ್‍ಪಿಜಿ ದರ ಏರಿಕೆ ಸ್ವೀಕರಿಸಬೇಕು ಎಂದು ತಿಳಿಸಿದರು.

    ಇದೇ ವೇಳೆ ನೂತನ ಬಿಜೆಪಿ ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನೂತನ ಬಿಜೆಪಿ ಶಾಸಕರಿಗೆ ಮಂತ್ರಿ ಸ್ಥಾನ ಕೊಡೋದು ಬಹಿರಂಗವಾಗಿಯೇ ಘೋಷಣೆ ಮಾಡಿರುವಂತಹ ವಿಚಾರ. ಹೈಕಮಾಂಡ್ ಗಮನಕ್ಕೆ ತಂದು ಈ ತಿಂಗಳೊಳಗೆ ಮಂತ್ರಿ ಸ್ಥಾನ ಕೊಡುವ ಕೆಲಸ ಆಗಲಿದೆ. ಇದರಲ್ಲಿ ಯಾವುದೇ ವಿಳಂಬವಿಲ್ಲ ಎಂದರು.