Tag: rate

  • ಐತಿಹಾಸಿಕ ದಾಖಲೆ ಬರೆದ ಚಿನ್ನದ ಬೆಲೆ- 67 ಸಾವಿರಕ್ಕೆ ಏರಿದ ಬಂಗಾರದ ರೇಟ್

    ಐತಿಹಾಸಿಕ ದಾಖಲೆ ಬರೆದ ಚಿನ್ನದ ಬೆಲೆ- 67 ಸಾವಿರಕ್ಕೆ ಏರಿದ ಬಂಗಾರದ ರೇಟ್

    ಬೆಂಗಳೂರು: ಚಿನ್ನ ಅಂದ್ರೇ ಯಾರಿಗೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಮುಂದಿನ ತಿಂಗಳು ಮದುವೆ ಸೀಜನ್ ಆರಂಭವಾಗಿದ್ದು, ಸಾಕಷ್ಟು ಮದುವೆ, ಶುಭ ಸಮಾರಂಭಗಳು ನಡೆತ್ತವೆ. ಈ ಟೈಮ್ ನಲ್ಲೇ ಜನರಿಗೆ ಗೋಲ್ಡ್ ಶಾಕ್ ಎದುರಾಗಿದ್ದು, ಎಲ್ಲಾ ರೆರ್ಕಾಡ್‍ಗಳನ್ನ ಬ್ರೇಕ್ ಮಾಡಿದೆ.

    ಬಡವರು ಹಾಗೂ ಮಧ್ಯಮ ಪಾಲಿನ ಜನರಿಗೆ ಗಗನ ಕುಸುಮವಾಗಿದೆ. ಭಾನುವಾರ ಬಂಗಾರದ ರೇಟ್ (Gold & Silver Rate) ಚಿನಿವಾರಪೇಟೆಯ ಇತಿಹಾಸದಲ್ಲೇ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಚಿನ್ನದ ಬೆಲೆ 67 ಸಾವಿರದ ಗಡಿ ದಾಟಿದ್ದು, ಬೆಳ್ಳಿ 75 ಸಾವಿರವನ್ನು ಕ್ರಾಸ್ ಮಾಡಿದೆ.

    ನಿನ್ನೆ ಚಿನ್ನ, ಬೆಳ್ಳಿಯ ರೇಟ್ ಎಷ್ಟಿತ್ತು?
    * 24 ಕ್ಯಾರೆಟ್ 10 ಗ್ರಾಂ ಚಿನ್ನ- 67,800 ರೂ.
    * 22 ಕ್ಯಾರೆಟ್ 10 ಗ್ರಾಂ ಚಿನ್ನ- 61,100 ರೂ.
    * 1 ಕೆ.ಜಿ ಬೆಳ್ಳಿ- 75,000 ರೂ.

    ಇದೊಂದು ಆಲ್ ಟೈಮ್ ಹೈಯೆಸ್ಟ್ ರೆರ್ಕಾಡ್ ಆಗಿದೆ. ಬಂಗಾರ ಯಾವತ್ತೂ ಈ ರೇಟ್‍ಗೆ ತಲುಪಿರಲಿಲ್ಲ. ಮುಂದಿನ ತಿಂಗಳಿನಿಂದ ಮದುವೆ ಸೀಜನ್ ಇದ್ದು, ಅಕ್ಷಯ ತೃತೀಯಕ್ಕೂ ಚಿನ್ನಕ್ಕೆ ಡಿಮ್ಯಾಂಡ್ ಇರೋದ್ರಿಂದ ಈ ರೇಟ್ ಇದೇ ತರಹ ಮುಂದುವರಿಯಬಹುದು ಎಂದು ಜ್ಯುವೆಲ್ಲರಿ ಅಸೋಸಿಯೇಷನ್ ಖಜಾಂಚಿ ರವಿಕುಮಾರ್ ಹೇಳುತ್ತಾರೆ.

    ದರ ಏರಿಕೆಗೆ ಕಾರಣಗಳೇನು?: ಅಮೆರಿಕದ ಡಾಲರ್ ದುರ್ಬಲವಾಗಿರೋದು. ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಬಂಗಾರದ ಮೇಲೆ ಇನ್ವೆಸ್ಟ್ ಮಾಡ್ತಾ ಇರೋದು ಚಿನ್ನದ ಪೂರೈಕೆಗಿಂತ ಡಿಮ್ಯಾಂಡ್ ಹೆಚ್ಚಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ: ಹೆಚ್‍ಡಿಕೆ ಗರಂ

    ಶುಭ ಸಮಾರಂಭಗಳ ಹೊತ್ತಲ್ಲಿ ಬಂಗಾರದ ಬೆಲೆ ಏರಿಕೆಯಾಗಿರೋದು ಗ್ರಾಹಕರಲ್ಲಿ ಆತಂಕ ತಂದಿದೆ. ಮದುವೆಗೆ ಆಭರಣಗಳನ್ನು ಮಾಡಿಸೋದು ಹೇಗೆ ಅಂತಾ ಚಿಂತಿತರಾಗಿದ್ದಾರೆ. ಒಟ್ಟಿನಲ್ಲಿ ಚಿನ್ನದ ರೇಟ್ ಮತ್ತಷ್ಟು ಗಗನಕ್ಕೆ ಏರುವ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟದ ಮಧ್ಯೆ ಗ್ರಾಹಕರಿಗೆ ಮತ್ತೊಂದು ಬರೆ ಬಿದ್ದಿದೆ.

  • ಕೆ.ಜಿ ಬೆಳ್ಳುಳ್ಳಿಗೆ 500ರ ಗಡಿದಾಟಿದ ದರ!

    ಕೆ.ಜಿ ಬೆಳ್ಳುಳ್ಳಿಗೆ 500ರ ಗಡಿದಾಟಿದ ದರ!

    ಬೆಂಗಳೂರು: ಕೆಲ ದಿನಗಳ ಹಿಂದೆ ಟೊಮೆಟೋ, ಈರುಳ್ಳಿ ಶತಕ ಬಾರಿಸಿದ್ದವು. ಆದರೆ ಇದೀಗ ಗ್ರಾಹಕರಿಗೆ ಬೆಳ್ಳುಳ್ಳಿ ಶಾಕ್ ಎದುರಾಗಿದೆ. ಬೆಳ್ಳುಳ್ಳಿ ಕೆ.ಜಿಗೆ ನೂರಲ್ಲ, ಇನ್ನೂರಲ್ಲ ಬರೋಬ್ಬರಿ ಅರ್ಧ ಸಾವಿರವಾಗಿದೆ.

    ರಸಂ, ಸಾಂಬರ್, ಗೋಬಿ, ನಾನ್‍ವೆಜ್ ಹೀಗೆ ಟೇಸ್ಟಿ ಟೇಸ್ಟಿಯಾದ ಅಡುಗೆ ಮಾಡಬೇಕಾದ್ರೂ ಬೆಳ್ಳುಳ್ಳಿ ಬೇಕೇ ಬೇಕು. ಬೆಳ್ಳುಳ್ಳಿ ಹಾಕೋದ್ರಿಂದ ಈ ಅಡುಗೆಗಳ ಟೇಸ್ಟ್ ಹೆಚ್ಚಾಗುತ್ತೆ. ಮಾರ್ಕೆಟ್‍ನಲ್ಲಿ ಬೆಳ್ಳುಳ್ಳಿ ಸೌಂಡ್ ಮಾಡುತ್ತಿದೆ. ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಬೆಳ್ಳುಳ್ಳಿ (Garlic Rate) ಬೆಲೆ ಸರಿಯಾಗಿ ಬಂದಿಲ್ಲ. ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಬೆಳ್ಳುಳ್ಳಿ ಕೆ.ಜಿಗೆ ಹಾಪ್ ಕಾಮ್ಸ್‍ನಲ್ಲಿ 500ರ ಗಡಿ ದಾಟಿದೆ. ಬಿಡಿಸಿದ ಬೆಳ್ಳುಳ್ಳಿ 540 ರೂ. ಆಗಿದ್ರೆ, ಉಂಡೆ ಬೆಳ್ಳುಳ್ಳಿಗೆ ಕೆ.ಜಿಗೆ 492 ರೂ. ಇದೆ.

    ಬೆಳ್ಳುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ಈ ವರ್ಷ ಸರಿಯಾದ ಮಳೆಯಾಗಿಲ್ಲ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯ ಹಿನ್ನೆಲೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇಷ್ಟು ದಿನಗಳ ಕಾಲ ನಾಸಿಕ್, ಪೂನಾದಿಂದ ಬರುತ್ತಿದ್ದ ಬೆಳ್ಳುಳ್ಳಿಯ ರಫ್ತು ಕಡಿಮೆಯಾಗಿದೆ. ರಾಜ್ಯದಲ್ಲಿ ಬೆಳಗಾವಿ ಭಾಗಗಳಿಂದ ಬರೋ ಬೆಳ್ಳುಳ್ಳಿ ಸಹ ಕಡಿಮೆಯಾಗಿದೆ. ಹೀಗಾಗಿ ಬೆಳ್ಳುಳ್ಳಿ ಒಗ್ಗರಣೆ ಘಾಟು ಜೋರಾಗಿದೆ. ಬೆಳ್ಳುಳ್ಳಿ ಹೊಸ ಬೆಳೆ ಬರೋವರೆಗೂ ರೇಟ್ ಕಡಿಮೆಯಾಗೋ ಸಾಧ್ಯತೆಯಿಲ್ಲ. ಇದ್ರಿಂದಾಗಿ ಗೃಹಿಣಿಯರು ಅರ್ಧ ಕೆ.ಜಿ, ಒಂದು ಕೆಜಿ ಕೊಳ್ಳೋ ಕಡೆ 100 ಗ್ರಾಂ, 200 ಗ್ರಾಂ ಕೊಳ್ಳೋ ಹಾಗೆ ಆಗಿದೆ. ಇದನ್ನೂ ಓದಿ: ಗಂಡನ ಮೇಲೆ ಜಪಾನ್ ಮಹಿಳೆ ಕೋಪ – ಗೋಕರ್ಣ ಪೊಲೀಸರಿಗೆ ಪಜೀತಿ!

  • ಆಭರಣ ಪ್ರಿಯರಿಗೆ ದುಬಾರಿ ಶಾಕ್..!

    ಆಭರಣ ಪ್ರಿಯರಿಗೆ ದುಬಾರಿ ಶಾಕ್..!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಬ್ಧಕ್ಕಿಂತಲೂ ಜೋರಾಗಿದೆ ಪಟಾಕಿ ದರ- ಹಬ್ಬದ ಸಂಭ್ರಮದಲ್ಲಿದ್ದವರು ಬೆಲೆ ಕೇಳಿ ಫುಲ್ ಸುಸ್ತು!

    ಶಬ್ಧಕ್ಕಿಂತಲೂ ಜೋರಾಗಿದೆ ಪಟಾಕಿ ದರ- ಹಬ್ಬದ ಸಂಭ್ರಮದಲ್ಲಿದ್ದವರು ಬೆಲೆ ಕೇಳಿ ಫುಲ್ ಸುಸ್ತು!

    ಬೆಂಗಳೂರು: ಕೊರೋನಾ (Corona Virus) ಬಳಿಕ ಅದ್ಧೂರಿ ದೀಪಾವಳಿಯ ಮೂಡ್‍ನಲ್ಲಿದ್ದ ಜನರಿಗೆ ಪಟಾಕಿ (Crackers) ದರ ಭರ್ಜರಿ ಶಾಕ್ ನೀಡಿದೆ. ಪಟಾಕಿ ಕೊಳ್ಳೋಕೆ ಅಂತಾ ಅಂಗಡಿಗೆ ಹೋದರೆ ಜೇಬಿಗೆ ಬೆಂಕಿ ಕಿಡಿ ಬಿದ್ದಂತಾಗಿದೆ.

    ದೇಶದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕಳೆದ 2 ವರ್ಷದಿಂದ ಕಳೆಗುಂದಿದ್ದ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಇದರ ನಡುವೆ ಈ ಬಾರಿಯಾದರೂ ಅದ್ಧೂರಿ ಹಬ್ಬದ ಜೊತೆಗೆ ಪಟಾಕಿ ಹೊಡೆಯಬಹುದೆಂಬ ಖುಷಿಯಲ್ಲಿ ತಯಾರಿ ನಡೆಸಿದ್ದವರಿಗೆ ದರ ಏರಿಕೆ ಶಾಕ್ ಎದುರಾಗಿದೆ. ಇದನ್ನೂ ಓದಿ: ಊರಿಗೆ ಹೋಗಲಾರದೇ ಮೂಡಿತ್ತು ಬೇಸರ- ಕಾಲೇಜು ಕ್ಯಾಂಪಸ್‍ನಲ್ಲೇ ದೀಪಾವಳಿ ಸಡಗರ

    ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಪಟಾಕಿ ದರ (Crackers Price) ತುಂಬಾನೇ ಕಾಸ್ಟ್ಲಿಯಾಗಿದೆ. ಕಾರಣ ಕಚ್ಚಾ ವಸ್ತುಗಳ ಬೆಲೆ ಏರಿಕೆ. ಇದರ ಜೊತೆಗೆ ಟ್ರಾನ್ಸ್ ಪೋರ್ಟ್ ಚಾರ್ಜ್ ಹೆಚ್ಚಳ, ಜಿಎಸ್‍ಟಿ ಸೇರಿದಂತೆ ಹಲವು ಕಾರಣಗಳು ದರ ಹೆಚ್ಚಳಕ್ಕೆ ಕಾರಣವಾಗಿದೆ. ಸದ್ಯ ಈ ಬಾರಿ ಹಬ್ಬದ ಮೇಲೆ ಪ್ರಭಾವ ಬೀರಿದ್ದು ಕಳೆದ ವರ್ಷದ ದರ ಮತ್ತು ಈ ವರ್ಷದ ದರಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಕಳೆದ ಬಾರಿಗಿಂತ ಈ ಬಾರಿ ಬರೊಬ್ಬರಿ 40 ಶೇಕಡಾದಷ್ಟು ದರ ಏರಿಕೆಯಾಗಿದೆ.

    ಪಟಾಕಿ ದರ ಕೈ ಸುಡುತ್ತಿದ್ದರೂ ಕೆಲವರು ಬಿಂದಾಸ್ ಆಗಿ ಹಬ್ಬ ಆಚರಿಸಲು ಪ್ಲಾನ್ ಮಾಡಿದ್ದಾರೆ. 2 ವರ್ಷದ ಬಳಿಕ ಹಬ್ಬ ಮಾಡುತ್ತಿರುವ ಹಿನ್ನೆಲೆ ಬೆಲೆ ಬಗ್ಗೆ ಹೆಚ್ಚು ಗಮನ ಕೊಡ್ತಿಲ್ಲ. ಸದ್ಯ ಸ್ವಲ್ಪ ಹಣ ಹೆಚ್ಚಾದರೂ ಪರವಾಗಿಲ್ಲ ಸಂಭ್ರಮದಿಂದ ಹಬ್ಬ ಮಾಡೋಣ ಎಂದು ಕೆಲ ಗ್ರಾಹಕರು ಹೇಳುತ್ತಾರೆ.

    ಒಟ್ಟಾರೆ ಎಲ್ಲಾ ವಸ್ತುಗಳಂತೆ ಪಟಾಕಿ ದರ ಕಳೆದ ಬಾರಿಗಿಂತ ಹೆಚ್ಚಾಗೇ ಇದೆ. ಇದರ ಜೊತೆಗೆ ಜನ ಕೂಡ ಹಬ್ಬದ ಕಾರಣ ದರ ಏರಿಕೆಗೆ ಅಡ್ಜೆಸ್ಟ್ ಆದಂತೆ ಕಾಣುತ್ತಿದೆ.

  • ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ- ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

    ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ- ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

    ಬಾಗಲಕೋಟೆ: ಸಲೂನ್‍ವೊಂದರಲ್ಲಿ ತಲೆಗೆ ಕಲರ್ ಹಾಕೋದರ ರೇಟ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದ್ದು, ನಗರದ ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಸಾಗರ್ ಅವಟಿ (22) ಕೊಲೆಗೀಡಾದ ಯುವಕ. ಸದಾಶಿವ ನಾವಿ ಕೊಲೆ ಮಾಡಿದ ಕ್ಷೌರಿಕ. ಸಾಗರ್ ತಲೆಗೆ ಕಲರ್ ಹಚ್ಚಿಸೋಕೆ ಬಂದಿದ್ದನು. ಈ ವೇಳೆ ಸಲೂನ್ ಮಾಲೀಕ ಲಕ್ಷ್ಮಣ ಕಲರ್ ಹಚ್ಚೋದಕ್ಕೆ ಮುಂದಾಗಿದ್ದನು. ಇನ್ನೊಂದು ಟೇಬಲ್‍ನಲ್ಲಿ ಸದಾಶಿವ ನಾವಿ ಬೇರೊಬ್ಬನ ಕಟಿಂಗ್ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಸಲೂನ್ ಮಾಲೀಕನು ಸಾಗರ್‌ಗೆ ಕಲರ್ ಹಚ್ಚೋದಕ್ಕೆ 20 ರೂ. ಕೊಡೋದಾಗಿ ಹೇಳಿದ್ದನು. ನಂತರದಲ್ಲಿ ಸದಾಶಿವ ನಾವಿ ಇದಕ್ಕೆ ತಕರಾರು ತೆಗೆದು ಜಗಳಕ್ಕೆ ಇಳಿದಿದ್ದಾನೆ. ಇದನ್ನೂ ಓದಿ: ವೇಶ್ಯಾವಾಟಿಕೆ ಅಕ್ರಮವಲ್ಲ – ಸುಪ್ರೀಂಕೋರ್ಟ್ ಮಹತ್ವದ ತೀರ್ಪು

    ಈ ವೇಳೆ ಜಗಳವು ತಾರಕಕ್ಕೇರಿದ್ದು ಸದಾಶಿವ ಅಲ್ಲೇ ಇದ್ದ ಕತ್ತರಿಯಿಂದ ಆತನಿಗೆ ಎದೆಯ ಎಡಭಾಗಕ್ಕೆ ಚುಚ್ಚಿದ್ದಾನೆ. ಈ ಮೊದಲು ಸಾಗರ, ಸದಾಶಿವ ನಾವಿಯನ್ನು ಅವಮಾನ ಮಾಡಿ ಕಾಡಿಸುತ್ತಿದ್ದನಂತೆ. ನಿನ್ನೆ ಕೂಡ ಕೆಲ ಹೊತ್ತು ಕ್ಷೌರಿಕನಿಗೆ ಆತ ಕಾಡಿಸಿದ್ದನಂತೆ. ನಂತರ ತಲೆಗೆ ಕಲರ್ ಹಚ್ಚುವಾಗ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಅಸ್ಸಾಂ ಪ್ರವಾಹ: ಸಾವಿನ ಸಂಖ್ಯೆ 30ಕ್ಕೆ ಏರಿಕೆ

    ಈ ವೇಳೆ ಕೂಡಲೇ ಸಾಗರನನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

  • ರಷ್ಯಾ-ಉಕ್ರೇನ್ ಯುದ್ಧ – ಬಂಗಾರದ ಬೆಲೆ ಭಾರೀ  ಏರಿಕೆ

    ರಷ್ಯಾ-ಉಕ್ರೇನ್ ಯುದ್ಧ – ಬಂಗಾರದ ಬೆಲೆ ಭಾರೀ ಏರಿಕೆ

    ನವದೆಹಲಿ: ರಷ್ಯಾ ಹಾಗೂ ಉಕ್ರೇನ್ ಯುದ್ಧದ ಪರಿಣಾಮ ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಏರಿಕೆಯಾಗಿದೆ.

    ಇಂದಿನ ಮಾರುಕಟ್ಟೆಯ ಮಾಹಿತಿ ಪ್ರಕಾರ ಹತ್ತು ಗ್ರಾಂ ಚಿನ್ನಕ್ಕೆ ಒಂದೇ ದಿನದಲ್ಲಿ ಒಂದು ಸಾವಿರ ರೂಪಾಯಿ ಏರಿಕೆಯಾಗಿದೆ. ಅಲ್ಲದೇ ಬೆಳ್ಳಿ ಕೂಡ ಕೆಜಿಗೆ 1,800 ರೂಪಾಯಿ ಏರಿಕೆ ಕಂಡಿದೆ. ಇದನ್ನೂ ಓದಿ: NSE ವಂಚನೆ ಪ್ರಕರಣ – ಮಾಜಿ CEO ಚಿತ್ರಾ ರಾಮಕೃಷ್ಣ ಬಂಧನ

    ಮುಂದಿನ ದಿನದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಇನ್ನಷ್ಟು ಏರಿಕೆಯಾಗಲಿದೆ. ಒಂದು ಗ್ರಾಂ ಚಿನ್ನ ಆರು ಸಾವಿರ ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದ್ದು, ಹತ್ತು ಗ್ರಾಂಗೆ ಆರವತ್ತು ಸಾವಿರ ಆಗುವ ಸಾಧ್ಯತೆ ಇದೆ. ಸದ್ಯ ಬೆಳ್ಳಿ ಕೂಡ ಕೆಜಿಗೆ 75 ಸಾವಿರ ರೂಪಾಯಿ ಇದ್ದು, ಮುಂದೆ 90 ಸಾವಿರ ರೂಪಾಯಿಗೆ ಏರಿಕೆ ಕಾಣುವ ಸಾಧ್ಯತೆ ಇದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ

    ನಿನ್ನೆ 22 ಕ್ಯಾರೆಟ್‍ನ 1 ಗ್ರಾಂ ಚಿನ್ನದ ಬೆಲೆ 4,840 ರೂಪಾಯಿಯಷ್ಟಿತ್ತು, ಇಂದು 22 ಕ್ಯಾರೆಟ್‍ನ 1 ಗ್ರಾಂ ಚಿನ್ನದ ಬೆಲೆ 4,950 ರೂಪಾಯಿ ಆಗಿದೆ ಮತ್ತು 24 ಕ್ಯಾರೆಟ್‍ನ 1 ಗ್ರಾಂ ಚಿನ್ನದ ಬೆಲೆ ನಿನ್ನೆ 5,300 ರೂಪಾಯಿಯಷ್ಟಿತ್ತು. ಆದರೆ ಇಂದು 24 ಕ್ಯಾರೆಟ್‍ನ 1 ಗ್ರಾಂ ಚಿನ್ನದ ಬೆಲೆ 5,400 ರೂಪಾಯಿ ಆಗಿದೆ. ಇದಲ್ಲದೇ ಒಂದು ಕೆಜಿ ಬೆಳ್ಳಿಗೆ ನಿನ್ನೆಗಿಂತ 1,800 ರೂಪಾಯಿ ಏರಿಕೆಯಾಗಿದ್ದು, ಇಂದು ಒಟ್ಟಾರೆ ಬೆಳ್ಳಿ ಬೆಲೆ 75,200 ರೂಪಾಯಿ ಆಗಿದೆ.

  • ರಷ್ಯಾ-ಉಕ್ರೇನ್ ಯುದ್ಧ: ಗಗನಕ್ಕೇರಿದ ಅಡುಗೆ ಎಣ್ಣೆ ದರ

    ರಷ್ಯಾ-ಉಕ್ರೇನ್ ಯುದ್ಧ: ಗಗನಕ್ಕೇರಿದ ಅಡುಗೆ ಎಣ್ಣೆ ದರ

    ನವದೆಹಲಿ: ಉಕ್ರೇನ್ ವಿರುದ್ಧ ರಷ್ಯಾ ದಾಳಿ ನಡೆಸುತ್ತಿರುವ ಹಿನ್ನೆಲೆ ಭಾರತೀಯ ಶೇರು ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ದರ ಗಗನಕ್ಕೇರಿದೆ.

    ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಅಡುಗೆ ತೈಲ ದರ ಏರಿಕೆಯಾಗುತ್ತಿದ್ದು, ಕೆಲ ಪ್ರಾವಿಷನ್ ಸ್ಟೋರ್‌ಗಳಿಗೆ ಸ್ಟಾಕ್ ಕೂಡ ಕಡಿಮೆ ಬರುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದಿಂದ ಒಂದು ಲೀಟರ್ ಅಡುಗೆ ಎಣ್ಣೆ ದರ ಬರೋಬ್ಬರಿ 30-45 ರೂ ಏರಿಕೆಯಾಗಿದೆ. ಇದನ್ನೂ ಓದಿ: ಸುಳ್ಳು ಸುದ್ದಿ ಹಬ್ಬಿಸುವ ಫೇಸ್‍ಬುಕ್, ಟ್ವಿಟ್ಟರ್‌ ಖಾತೆ ಮೇಲೆ ರಷ್ಯಾ ನಿಷೇಧ ಹೇರಿದೆ

    ಅಡುಗೆ ಎಣ್ಣೆಗಾಗಿ ರಷ್ಯಾದ ಮೇಲೆ ಹೆಚ್ಚಾಗಿ ಅವಲಂಬನೆಯಾಗಿರುವುದರಿಂದ ಈ ಯುದ್ಧದ ಪರಿಣಾಮವಾಗಿ ಎಲ್ಲಾ ವೆರೈಟಿ ಅಡುಗೆ ಎಣ್ಣೆಗಳ ದರ ಏರಿಕೆಯಾಗಿದೆ. ಮತ್ತೊಂದೆಡೆ ಚಿನ್ನ ಬೆಳ್ಳಿಯ ಬೆಲೆ ಕೂಡ ಏರಿಕೆಯಾಗಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಯುದ್ಧ; ಗಗನಕ್ಕೇರಿದ ತೈಲ, ಚಿನ್ನದ ಬೆಲೆ – ಭಾರತದ ಶೇರು ಮಾರುಕಟ್ಟೆಯಲ್ಲಿ ತಲ್ಲಣ

    ಅಡುಗೆ ಎಣ್ಣೆ ದರ:
    ಸನ್ ಫ್ಯೂರ್ ಎಣ್ಣೆ – 140- 180
    ಗೋಲ್ಡ್ ವಿನ್ನರ್ – 145- 166
    ಪಾಮ್ ಆಯಿಲ್ – 140- 160
    ಶೇಂಗಾ ಎಣ್ಣೆ – 150- 185

  • ಬೆಲೆ ಏರಿಕೆ ನಡುವೆ ಒಂದೇ ದಿನ 30 ಬೈಕ್‍ನಿಂದ ಪೆಟ್ರೋಲ್ ಕದ್ದ ಕಳ್ಳರು

    ಬೆಲೆ ಏರಿಕೆ ನಡುವೆ ಒಂದೇ ದಿನ 30 ಬೈಕ್‍ನಿಂದ ಪೆಟ್ರೋಲ್ ಕದ್ದ ಕಳ್ಳರು

    ಶಿವಮೊಗ್ಗ: ಪೆಟ್ರೋಲ್, ಡೀಸೆಲ್ ದರ ದಿನೇ ದಿನೇ ಏರಿಕೆಯಾಗುತ್ತಿದ್ದು, ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರ ನಡುವೆ ಪೆಟ್ರೋಲ್ ಕಳ್ಳರ ಹಾವಳಿ ಸಹ ಹೆಚ್ಚಾಗುತ್ತಿದ್ದು, ನಗರದ ಪುರ್ಲೆ ಬಡಾವಣೆಯಲ್ಲಿ ಒಂದೇ ದಿನ 30ಕ್ಕೂ ಹೆಚ್ಚು ಬೈಕುಗಳ ಪೈಪ್ ಕತ್ತರಿಸಿ ಪೆಟ್ರೋಲ್ ಕಳ್ಳತನವಾಗಿದೆ.

    ಶಿವಮೊಗ್ಗ ನಗರದ ಪುರ್ಲೆ ಬಡಾವಣೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಪೆಟ್ರೋಲ್ ಕಳ್ಳತನ ನಡೆದಿದೆ. ಈ ಬಡಾವಣೆಯ ಎರಡ್ಮೂರು ಬೀದಿಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸುಮಾರು 30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳ ಪೆಟ್ರೋಲ್ ಪೈಪ್ ಕತ್ತರಿಸಿರುವ ಖದೀಮರು ಪೆಟ್ರೋಲ್ ಕಳ್ಳತನ ನಡೆಸಿದ್ದಾರೆ.

    ಮೊದಲೇ ಕೋವಿಡ್ ಸಂಕಷ್ಟದಲ್ಲಿ ಜನ ಪರದಾಡುತ್ತಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆಯಾಗಿ ವಾಹನಗಳಲ್ಲಿ ಸಂಚಾರ ನಡೆಸುವುದೇ ದುಸ್ತರವಾಗಿದೆ. ಇಂತಹದರಲ್ಲಿ ಪೆಟ್ರೋಲ್ ಕಳ್ಳತನ ನಡೆಯುತ್ತಿದೆ. ಪೊಲೀಸರು ಈ ಕೂಡಲೇ ದುಷ್ಕರ್ಮಿಗಳ ಪತ್ತೆ ಹಚ್ಚುವಂತೆ ಹಾಗೂ ರಾತ್ರಿ ವೇಳೆ ಬೀಟ್ ಪೊಲೀಸರ ಗಸ್ತು ಹೆಚ್ಚಿಸುವಂತೆ ಬಡಾವಣೆ ನಿವಾಸಿಗಳು ಮನವಿ ಮಾಡಿದ್ದಾರೆ.

    ಘಟನೆ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ವಾಟಾಳ್ ಪ್ರತಿಭಟನೆ

    ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ವಾಟಾಳ್ ಪ್ರತಿಭಟನೆ

    ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್‍ರವರು ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

    ಒಂದು ಕಡೆ ಕೊರೊನಾ ಎರಡನೇಯ ಅಲೆ ಅಬ್ಬರ, ಮತ್ತೊಂದೆಡೆ ಲಾಕ್ ಡೌನ್‍ನಿಂದ ಕೆಲಸ ಕಾರ್ಯವಿಲ್ಲದೆ ಜನ ಹೊಟ್ಟೆ ತುಂಬಿಸಿಕೊಳ್ಳುವುದು ಹೇಗಪ್ಪ ಎಂದು ಯೋಚಿಸುತ್ತಿದ್ದಾರೆ. ಇತಂಹ ಸಮಯದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೇರಿದೆ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಲು ಮುಂದಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಪ್ರತಿನಿತ್ಯ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಆಗುತ್ತಿದೆ. ಇದನ್ನು ಓದಿ: ಜಿಲ್ಲಾ ಪ್ರವಾಸಕ್ಕೂ ಮುನ್ನವೇ ಸಿಎಂ ಅನ್‍ಲಾಕ್ ಘೋಷಣೆ?

    ಬೆಲೆ ಏರುತ್ತಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಬೆಲೆ ಏರಿಕೆಯ ಬಗ್ಗೆ ಜನರಿಗೆ ಆಗುತ್ತಿರುವ ಕಷ್ಟದ ಅರಿವೇ ಇಲ್ಲದಂತೆ ವರ್ತಿಸುತ್ತಿದೆ. ಇದನ್ನ ಖಂಡಿಸಿ ಇಂದು ಲಾಕ್ ಡೌನ್ ಇದ್ದರು ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಿದ್ದಾರೆ.

    ದೇಶದಲ್ಲಿ ಪೆಟ್ರೋಲ್ ಡಿಸೇಲ್ ಅನಿಲ ಬೆಲೆ ಏರಿಕೆಯ ವಿರುದ್ದ ವಾಟಾಳ್ ನಾಗರಾಜ್‍ರವರು ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡುರಸ್ತೆ ಮಧ್ಯೆ ಕುಳಿತು ಬೆಲೆ ಏರಿಕೆ ಖಂಡಿಸಿದ್ದಾರೆ. ಬೆಲೆ ಏರಿಕೆಯ ಬಿಸಿ ಸಾರ್ವಜನಿಕರ ಮೇಲೆ ಹೊರಯಾಗಲಿದೆ. ಇತಂಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರು ರಾಜ್ಯ ಮತ್ತು ಕೇಂದ್ರ ಸರ್ಕಾರ ಜನರ ಹಿತ ಕಾಪಾಡುವ ಯಾವ ಲಕ್ಷಣಗಳು ಕಾಣ್ತಿಲ್ಲ ಅಂತಾ ಏಕಾಂಗಿಯಾಗಿ ವಾಟಾಳ್ ನಾಗರಾಜ್ ರಸ್ತೆಯ ಮಧ್ಯೆ ಕುಳಿತು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ:ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಶರಣು ಸಲಗಾರ್, ಬಸವನಗೌಡ ತುರುವಿಹಾಳ್

  • ಅಸ್ಸಾಂನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 5 ರೂ. ಇಳಿಕೆ

    ಅಸ್ಸಾಂನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 5 ರೂ. ಇಳಿಕೆ

    ಗುವಾಹಟಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 5 ರೂ. ಕಡಿತಗೊಳಿಸಿ ಅಸ್ಸಾಂ ಸರ್ಕಾರ ಕ್ರಮ ಕೈಗೊಂಡಿದೆ. ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.

    ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು 5 ರೂ. ಕಡಿಮೆ ಮಾಡಿದ್ದಕ್ಕೆ ಜನ ಸಂತಸಗೊಂಡಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕಡಿತಗೊಳಿಸಿರುವುದು ಮಾತ್ರವಲ್ಲದೆ ಮದ್ಯದ ಮೇಲಿನ ಹೆಚ್ಚುವರಿ ಶೇ.25ರಷ್ಟು ಸೆಸ್‍ನ್ನು ಸಹ ಸರ್ಕಾರ ಕಡಿತಗೊಳಿಸಿದೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

    ಇಂದು ನಡೆದ ವಿಧಾನಸಭೆ ಅಧಿವೇಶನದಲ್ಲಿ ಅಸ್ಸಾಂ ಹಣಕಾಸು ಸಚಿವ ಹಿಮಾಂತ ವಿಶ್ವಾಸ್ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ.

    ಕೊರೊನಾ ಕಾರಣದಿಂದಾಗಿ ಪೆಟ್ರೋಲ್, ಡೀಸೆಲ್ ಹಾಗೂ ಮದ್ಯದ ಮೇಲೆ ಹೆಚ್ಚುವರಿ ಸೆಸ್ ವಿಧಿಸಲಾಗಿತ್ತು. ಇದೀಗ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಹೀಗಾಗಿ ಈ ಹೆಚ್ಚುವರಿ ಸೆಸ್ ಕಡಿತಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. ಈ ಮನವಿಗೆ ಒಪ್ಪಿದ್ದಕ್ಕೆ ನಾನು ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಇದರಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ 5 ರೂ. ಕಡಿಮೆಯಾಗಲಿದೆ. ಈ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಇದರಿಂದಾಗಿ ಅಸ್ಸಾಂನ ಲಕ್ಷಾಂತರ ಜನರಿಗೆ ಸಹಾಯವಾಗಲಿದೆ ಎಂದು ಶರ್ಮಾ ತಮ್ಮ ವಿಧಾನಸಭೆ ಭಾಷಣದಲ್ಲಿ ಹೇಳಿದ್ದಾರೆ.

    ಜನವರಿ 6ರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದ್ದು, ಕೆಲವೆಡೆ 100ರೂ. ಸನಿಹಕ್ಕೆ ತಲುಪುತ್ತಿದೆ. ಅಲ್ಲದೆ ಕಳೆದ ಕೆಲ ತಿಂಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುತ್ತಿಲ್ಲ. ವಿಶ್ವ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಡೀಸೆಲ್ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

    ಮಾರ್ಚ್, ಏಪ್ರಿಲ್‍ನಲ್ಲಿ ಅಸ್ಸಾಂ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಹೀಗಾಗಿ ಸರ್ವಾನಂದ ಸೋನೊವಾಲ್ ನೇತೃತ್ವದ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ದರವನ್ನು ಕಡಿತಗೊಳಿಸಿದೆ.