Tag: Ratan Tata

  • ರತನ್ ಟಾಟಾ ನಿಧನಕ್ಕೆ ನಿತ್ಯಾ ಮೆನನ್ ಭಾವುಕ ಪೋಸ್ಟ್‌

    ರತನ್ ಟಾಟಾ ನಿಧನಕ್ಕೆ ನಿತ್ಯಾ ಮೆನನ್ ಭಾವುಕ ಪೋಸ್ಟ್‌

    ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ (Ratan Tata) ನಿನ್ನೆ (ಅ.10) ತಡರಾತ್ರಿ ನಿಧನರಾಗಿದ್ದಾರೆ. ಅತ್ಯಂತ ಸರಳವಾಗಿ ಬದುಕಿ ಬಾಳಿದ ರತನ್ ಟಾಟಾ ನಿಧನಕ್ಕೆ ಬಹುಭಾಷಾ ನಟಿ ನಿತ್ಯಾ ಮೆನನ್ (Nithya Menen) ಸಂತಾಪ ಸೂಚಿಸಿದ್ದಾರೆ. ಅವರ ಕುರಿತು ಸುದೀರ್ಘವಾಗಿ ನಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿಯನ್ನು ದೈವದ ಪಾದಕ್ಕೆ ಅರ್ಪಿಸುತ್ತೇನೆ: ರಿಷಬ್‌ ಶೆಟ್ಟಿ

    ನಿಮಗೆ ವಿದಾಯ ಹೇಳಬೇಕಾಗಿ ಬರುವ ದಿನದ ಬಗ್ಗೆ ನಾನು ಯೋಚಿಸಿದ್ದೆ. ನಿಮ್ಮಂತಹ ವ್ಯಕ್ತಿ ನೀವೇ ಕೊನೆ ಎಂದಾಗ ದುಃಖವಾಗುತ್ತದೆ. ನಿಮ್ಮಂತಹ ಪುರುಷರು ಮತ್ತೆ ಬರಲಿದ್ದಾರಾ ಎನ್ನುವುದು ನನಗೆ ಗೊತ್ತಿಲ್ಲ. ಮೊದಲ ಬಾರಿಗೆ ನನಗೆ ನಿಜವಾಗಿಯೂ ನಷ್ಟದ ಅನುಭವಾಗುತ್ತಿದೆ ಎಂದಿದ್ದಾರೆ ನಿತ್ಯಾ. ನಿಮ್ಮ ಅಗಲಿಕೆ ಎಷ್ಟೋ ವಿಚಾರಗಳ ಅಗಲಿಕೆ ಎಂದು ಅನಿಸುತ್ತಿದೆ. ಇಂದಿನ ದಿನದಲ್ಲಿ ಕಾಣಲು ಸಿಗದಂತಹ ಹಲವಾರು ಸಂಗತಿಗಳಿವೆ ನಿಮ್ಮಲ್ಲಿವೆ. ಉದಾತ್ತ, ದಯೆ, ರಾಜ, ಸಹಾನುಭೂತಿ, ಮಾನವೀಯತೆ ಇದೆಲ್ಲವೂ ನಿಮ್ಮ ಅಗಲಿಕೆಯಿಂದ ಅಗಲಿದಂತಾಗುತ್ತಿದೆ. ಅದೆಷ್ಟೋ ಜನರಿಗೆ ಒಳ್ಳೆಯ ಉದಾಹರಣೆಯಾಗುವಂತೆ ನೀವು ಬದುಕಿದ್ದೀರಿ. ಒಳ್ಳೆಯತನ ಮತ್ತು ಯಶಸ್ಸಿನ ಕುರಿತು ಹಲವು ವಿಚಾರಗಳು ನನಗೆ ನೆನಪಿಸುತ್ತದೆ ಎಂದಿದ್ದಾರೆ ನಟಿ.

     

    View this post on Instagram

     

    A post shared by Nithya Menen (@nithyamenen)

    ನಿಮ್ಮ ಬಗ್ಗೆ ಏನೇ ಹೇಳಿದರೂ ಅದು ಕಡಿಮೆಯೇ. ನಾನು ಬದುಕಿರುವಾಗಲೇ ನೀವು ಇಲ್ಲಿ ಬದುಕಿದ್ದಕ್ಕೆ ಧನ್ಯವಾದಗಳು. ನನಗೆ ಭರವಸೆ ಹಾಗೂ ನನಗಾಗಿ ಮತ್ತು ಇತರರಿಗಾಗಿ ನಾನು ಏನು ಬಯಸಬೇಕು ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾಗಳು ಎಂದಿದ್ದಾರೆ ನಟಿ. ‘ಗುಡ್ ಬೈ ಡಿಯರ್ ರತನ್ ಟಾಟಾ’ ಎಂದು ನಟಿ ಭಾವುಕವಾಗಿ ಬರೆದುಕೊಂಡಿದ್ದಾರೆ.

  • ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

    ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

    ತನ್‌ ಟಾಟಾ (Ratan Tata) ಅವರಿಗೆ ನ್ಯಾನೋ ಕಾರನ್ನು (Nano Car) ತಯಾರಿಸುವ ಕಲ್ಪನೆ ಹೊಳೆದಿದ್ದೆ ರೋಚಕ. ಮುಂಬೈನಲ್ಲಿ ಭಾರೀ ಮಳೆಗೆ 4 ಮಂದಿ ಬೈಕಿನಲ್ಲಿ ತೆರಳುತ್ತಿದ್ದರು. ಈ ದೃಶ್ಯವನ್ನು ನೋಡಿದ ರತನ್‌ ಟಾಟಾ ಅವರ ಮನಸ್ಸು ಮಿಡಿಯಿತು.

    ತಂದೆ, ತಾಯಿ ಮಧ್ಯೆ ಕುಳಿತಿದ್ದ ಮಕ್ಕಳು ಬೈಕಿನಿಂದ ರಸ್ತೆಗೆ ಬೀಳುವನ್ನು ಕೇಳಿದ್ದ ರತನ್‌ ಟಾಟಾ ಸಾಮಾನ್ಯ ವರ್ಗದವರಿಗೆ ಕಡಿಮೆ ದರದಲ್ಲಿ ಕಾರು ನಿರ್ಮಿಸಿಕೊಡಬೇಕೆಂದು ಪಣ ತೊಟ್ಟರು. ಈ ಕಲ್ಪನೆಯನ್ನು ಸಾಕಾರಗೊಳಿಸಲು ನ್ಯಾನೋ ಕಾರನ್ನು ಉತ್ಪಾದನೆ ಮಾಡಲು ರತನ್‌ ಟಾಟಾ ಮುಂದಾದರು.

    ಜನವರಿ 10, 2008 ರಂದು ನ್ಯಾನೋ ಕಾರನ್ನು ಬಿಡುಗಡೆ ಮಾಡಲಾಯಿತು. ಈ ಕಾರಿಗೆ 1 ಲಕ್ಷ ರೂ. ದರ ನಿಗದಿ ಪಡಿಸಿದ್ದರಿಂದ ವಿಶ್ವದ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಮೂಲಕ ರತನ್‌ ಟಾಟಾ ಅವರು ಬಡವರು, ಸಾಮಾನ್ಯ ವರ್ಗದವರು ಕಾರು ಖರೀದಿಸಬೇಕೆಂಬ ಕನಸನ್ನು ನನಸು ಮಾಡುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ರತನ್ ಟಾಟಾಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಮಹಾರಾಷ್ಟ್ರ ಸರ್ಕಾರದ ಶಿಫಾರಸು

    ರತನ್‌ ಟಾಟಾ ಅವರು ವಿಶ್ವದ ಅಗ್ಗದ ನ್ಯಾನೋ ಕಾರನ್ನು ಪಶ್ಚಿಮ ಬಂಗಾಳದಲ್ಲಿ (Wet Bengal) ನಿರ್ಮಾಣ ಮಾಡುವ ಕನಸು ಕಂಡಿದ್ದರು. ಆದರೆ ಕಾರು ನಿರ್ಮಾಣದ ವೇಳೆ ಟಾಟಾ ಕಂಪನಿ ಬಹಳ ಸಂಕಷ್ಟ ಎದುರಾಗಿತ್ತು. 2006 ರಲ್ಲಿ ಕಮ್ಯೂನಿಸ್ಟ್‌ ಪಕ್ಷ ಪಶ್ಚಿಮ ಬಂಗಾಳದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ಮುಖ್ಯಮಂತ್ರಿಯಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ ಅವರು ವಿಶ್ವದ ಅತ್ಯಂತ ಅಗ್ಗದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನ್ಯಾನೋ ಉತ್ಪಾದನಾ ಘಟಕ ಸ್ಥಾಪಿಸಲು ಹೂಗ್ಲಿ ಬದಿಯಲ್ಲಿರುವ ಸಿಂಗೂರಿನಲ್ಲಿ ಟಾಟಾಗೆ ಸುಮಾರು 1,000 ಎಕರೆ ಜಾಗ ನೀಡುವುದಾಗಿ ಘೋಷಿಸಿದ್ದರು.

    ಸರ್ಕಾರ ಜಾಗ ನೀಡಲು ಮುಂದಾಗುತ್ತಿದ್ದಂತೆ ಭಾರೀ ಹೋರಾಟ ಆರಂಭವಾಯಿತು. ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ಆರಂಭಿಸಿದರು. ಪ್ರತಿಭಟನೆ ನಡೆದರೂ ಸ್ವಾಧಿನ ಪ್ರಕ್ರಿಯೆ ಪೂರ್ಣಗೊಂಡು ಕಾರು ನಿರ್ಮಾಣದ ಫ್ಯಾಕ್ಟರಿ ಕೆಲಸ ಆರಂಭವಾಯಿತು. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್‌ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?

    ಫ್ಯಾಕ್ಟರಿ ಕೆಲಸ ಆರಂಭವಾಗುತ್ತಿದ್ದಾಗ 2007 ರಲ್ಲಿ ಮಮತಾ ಬ್ಯಾನರ್ಜಿ (Mamata Banerjee) ಪ್ರತಿಭಟನೆಯ ನೇತೃತ್ವ ವಹಿಸಿದರು. ಪೊಲೀಸರು ಮತ್ತು ಟಿಎಂಸಿ ಕಾರ್ಯಕರ್ತರ ಮಧ್ಯೆ ಸಂಘರ್ಷ ನಡೆಯಿತು. ಘಟಕದ ವಿರುದ್ಧ ಮಮತಾ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಪ್ರತಿಭಟನೆಗೆ ಹಲವು ಪರಿಸರ ಸಂಘಟನೆಗಳು ಸಾಥ್‌ ನೀಡಿದವು.

    ಪ್ರತಿಭಟನೆ ತೀವ್ರ ವಿವಾದವಾಗುತ್ತಿದ್ದಂತೆ ಸರ್ಕಾರ, ರಾಜ್ಯಪಾಲರು ನಡೆಸಿದ ಮಾತುಕತೆ ವಿಫಲವಾಯಿತು. ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗುತ್ತಿದ್ದಂತೆ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ (Narendra Modi) ಅವರು ರತನ್‌ ಟಾಟಾ ಅವರಿಗೆ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು. ರತನ್‌ ಟಾಟಾ ಅವರು ಮೋದಿಯ ಆಫರ್‌ ಒಪ್ಪಿದರು. ಅಂತಿಮವಾಗಿ ಅಕ್ಟೋಬರ್‌ 03, 2008 ರಂದು ಘಟಕವನ್ನು ಅಹಮದಾಬಾದ್‌ನಲ್ಲಿರುವ ಸನಂದಕ್ಕೆ ಸ್ಥಳಾಂತರ ಮಾಡುವುದಾಗಿ ಟಾಟಾ ಮೋಟಾರ್ಸ್‌ ಘೋಷಿಸಿತು.

    ಉತ್ಪಾದನಾ ಘಟಕವನ್ನು ಬಂದ್‌ ಮಾಡಿದ ನಂತರ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ರಾಜಕೀಯವಾಗಿ ಶಕ್ತಿಯುತವಾದರು. ಅಂತಿಮವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಆರ್ಥಿಕವಾಗಿ ಪಶ್ಚಿಮ ಬಂಗಾಳ ನಷ್ಟ ಅನುಭವಿಸಿತು. ನಂತರದ ವರ್ಷಗಳಲ್ಲಿ ಬೇರೆ ರಾಜ್ಯಗಳು ಕಂಪನಿಗಳನ್ನು ಆಕರ್ಷಿಸಿದರೆ ಪಶ್ಚಿಮ ಬಂಗಾಳ ಹೂಡಿಕೆದಾರರನ್ನು ಸೆಳೆಯುವಲ್ಲಿ ವಿಫಲವಾಯಿತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ಕಾನೂನು ಸಮರದಲ್ಲಿ ಗೆದ್ದ ಟಾಟಾ ಮೋಟಾರ್ಸ್‌
    ಸಿಂಗೂರಿನಲ್ಲಿ ಟಾಟಾ ಫ್ಯಾಕ್ಟರಿ ಸ್ಥಾಪನೆಗೆ ಜಾಗ ನೀಡಿ ಹೂಡಿಕೆ ಮಾಡಿ ನಷ್ಟ ಉಂಟು ಮಾಡಿದ್ದಕ್ಕೆ ಟಾಟಾ ಕಂಪನಿ ಪಶ್ಚಿಮ ಬಂಗಾಳ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (WBIDC) ವಿರುದ್ಧ ಕೇಸ್‌ ದಾಖಲಿಸಿತ್ತು. ದಶಕಗಳಿಂದ ನಡೆದಿದ್ದ ಕಾನೂನು ಸಮರವನ್ನು ಟಾಟಾ ಮೋಟಾರ್ಸ್‌ ಗೆದ್ದುಕೊಂಡಿತ್ತು. ಟಾಟಾ ಮೋಟಾರ್ಸ್‌ಗೆ ನಷ್ಟ ಉಂಟು ಮಾಡಿದ್ದಕ್ಕೆ WBIDCಗೆ 766 ಕೋಟಿ ರೂ. ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಾಲಯ ಆದೇಶಿಸಿತ್ತು. ಇದನ್ನೂ ಓದಿ: ನ್ಯಾನೋ ಕೇಸ್‌, ಮಮತಾಗೆ ತೀವ್ರ ಮುಖಭಂಗ – ಕೊನೆಗೂ ಗೆದ್ದ ಟಾಟಾ ಮೋಟಾರ್ಸ್‌

     

  • ರತನ್ ಟಾಟಾಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಮಹಾರಾಷ್ಟ್ರ ಸರ್ಕಾರದ ಶಿಫಾರಸು

    ರತನ್ ಟಾಟಾಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಮಹಾರಾಷ್ಟ್ರ ಸರ್ಕಾರದ ಶಿಫಾರಸು

    ನವದೆಹಲಿ: ದೇಶದ ಖ್ಯಾತ ಕೈಗಾರಿಕದ್ಯೋಮಿ ರತನ್ ಟಾಟಾ ನಿಧನವಾಗಿದ್ದು, ಅವರಿಗೆ ಮರಣೋತ್ತರ ಭಾರತ ರತ್ನ (Bharata Ratna) ನೀಡುವಂತೆ ಮಹಾರಾಷ್ಟ್ರ ಸರ್ಕಾರ ಶಿಫಾರಸು ಮಾಡಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ (Ekanath Shindhe) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ಈ ಬಗ್ಗೆ ಏಕನಾಥ್ ಶಿಂಧೆ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದು, ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಾಗೆಯೇ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರುವ ಪ್ರಸ್ತಾವನೆಯನ್ನು ಈ ಸಮಯದಲ್ಲಿ ಅನುಮೋದಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಮಡಿಕೇರಿ-ಗೋಣಿಕೊಪ್ಪ ದಸರಾಗೆ ಬಿಗಿ ಬಂದೋಬಸ್ತ್ – ಭದ್ರತೆಗೆ 2,000 ಸಾವಿರ ಪೊಲೀಸರ ನಿಯೋಜನೆ

    ಹೊಸ ಕೈಗಾರಿಕೆಗಳನ್ನು ನಿರ್ಮಿಸುವುದರ ಜೊತೆಗೆ ದೇಶವನ್ನು ಮುಂದಕ್ಕೆ ಕೊಂಡೊಯ್ಯಬಹುದು. ಆದರೆ ಅದಕ್ಕೆ ನಿಜವಾದ ದೇಶಭಕ್ತಿ ಮತ್ತು ಸಮಾಜದ ಬಗ್ಗೆ ಪ್ರಾಮಾಣಿಕ ಕಾಳಜಿಯ ಅಗತ್ಯವಿರುತ್ತದೆ. ಟಾಟಾ ಈ ಗುಣಗಳನ್ನು ಹೊಂದಿದ್ದರು. ಉದ್ಯಮ ಕ್ಷೇತ್ರ ಮಾತ್ರವಲ್ಲದೆ, ಸಾಮಾಜಿಕ ಅಭಿವೃದ್ಧಿಯ ಕಾರ್ಯದಲ್ಲೂ ಅವರ ಕೊಡುಗೆ ಅಸಾಧಾರಣವಾದುದು. ಅವರು ಮಹಾರಾಷ್ಟ್ರದ ಮಗ ಮತ್ತು ಭಾರತದ ಹೆಮ್ಮೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ – A14 ಆರೋಪಿ ಪ್ರದೋಶ್ ಬೆಳಗಾವಿಯಿಂದ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

    ಟಾಟಾ ಉನ್ನತ ನೈತಿಕ ಮೌಲ್ಯಗಳನ್ನು ಅನುಸರಿಸಿದರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಛಾಪು ಮೂಡಿಸಿದರು. ಅವರ ಸಾವಿನೊಂದಿಗೆ ದೇಶದ ಪ್ರಮುಖ ಸ್ತಂಭ ಕುಸಿದಿದೆ. ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ನಮ್ಮ ಸರ್ಕಾರ ಕೇಂದ್ರಕ್ಕೆ ಮನವಿ ಮಾಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹದಾಯಿ ಯೋಜನೆಗೆ ಅನುಮತಿ ವಿಳಂಬ – ಕೇಂದ್ರದ ಸಭೆಯಲ್ಲಿ ಕರ್ನಾಟಕ ತೀವ್ರ ಆಕ್ಷೇಪ

  • ರತನ್‌ ಟಾಟಾ ಅಂತಿಮ ದರ್ಶನ ಪಡೆದ ಕ್ರಿಕೆಟ್‌ ದೇವರು

    ರತನ್‌ ಟಾಟಾ ಅಂತಿಮ ದರ್ಶನ ಪಡೆದ ಕ್ರಿಕೆಟ್‌ ದೇವರು

    ಮುಂಬೈ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ನಿಧನದ ಆಘಾತಕಾರಿ ಸುದ್ದಿಯನ್ನು ಕೇಳಿ ಇಡೀ ಭಾರತ ಕಂಬನಿ ಮಿಡಿದಿದೆ. ಬುಧವಾರ ತಡರಾತ್ರಿ ರತನ್‌ ಟಾಟಾ (86) ಕೊನೆಯುಸಿರೆಳೆದಿದ್ದಾರೆ. ಭಾರತದ ಲಕ್ಷಾಂತರ ಜನ ಸಂತಾಪ ಸೂಚಿಸುತ್ತಿದ್ದಾರೆ. ಇದಕ್ಕೆ ಕ್ರಿಕೆಟ್‌ ದೇವರು ತೆಂಡೂಲ್ಕರ್ ಸಹ ಕಂಬನಿ ಮಿಡಿದ್ದಾರೆ. ಟಾಟಾ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಟಾಟಾ ನಿವಾಸಕ್ಕೆ ಭೇಟಿ ನೀಡಿದ್ದಾರೆ.

    ಈ ನಡುವೆ ಸಚಿನ್ ( Sachin Tendulkar) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಇತ್ತೀಚೆಗೆ ರತನ್ ಟಾಟಾ ಅವರೊಂದಿಗಿ ಭೇಟಿಯನ್ನು ನೆನಪು ಮಾಡಿಕೊಂಡಿದ್ದಾರೆ. ಅವರ ಜೊತೆಗಿನ ಫೋಟೋದೊಂದಿಗೆ ಭಾವನಾತ್ಮಕ ಸಂದೇಶವೊಂದನ್ನೂ ಬರೆದುಕೊಂಡಿದ್ದಾರೆ. ಅವರೊಂದಿಗೆ ನಾನು ಸಮಯ ಕಳೆಯುವುದಕ್ಕೆ ಅವಕಾಶ ಸಿಕ್ಕಿದೆ. ಇದರಿಂದ ನಾನು ಅದೃಷ್ಟಶಾಲಿಯಾಗಿದ್ದೇನೆ. ಆದರೆ ಅವರನ್ನ ಭೇಟಿಯಾಗದ ಲಕ್ಷಾಂತರ ಜನರು ಅನುಭವಿಸುವ ದುಃಖವನ್ನು ಇಂದು ನಾನೂ ಅನುಭವಿಸುತ್ತಿದ್ದೇನೆ. ಅಂತಹ ಪ್ರಭಾವಿ ವ್ಯಕ್ತಿ ಅವರು. ಟಾಟಾ ನೀವು ನಿರ್ಮಿಸಿದ ಸಂಸ್ಥೆಗಳು ಮತ್ತು ನೀವು ಸ್ವೀಕರಿಸಿದ ಮೌಲ್ಯಗಳ ಮೂಲಕ ನಿಮ್ಮ ಪರಂಪರೆಯು ಮುಂದುವರಿಯುತ್ತದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರ ನಿರ್ಮೂಲನೆ ಮಾಡೋದು ಹೇಗೆ? – ರತನ್ ಟಾಟಾ ನೀಡಿದ ಖಡಕ್‌ ಉತ್ತರ ಇದು

     

    View this post on Instagram

     

    A post shared by Sachin Tendulkar (@sachintendulkar)

    ಭಾರತದ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohith Sharma) ಕೂಡ ರತನ್ ಟಾಟಾ ಅವರ ಅಗಲಿಕೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಕಂಬನಿ ಮಿಡಿದಿದ್ದಾರೆ. ಸರ್ ನೀವು ಚಿನ್ನದಂತ ಹೃದಯ ಹೊಂದಿರುವ ವ್ಯಕ್ತಿ. ನೀವು ನಿಜವಾಗಿಯೂ ಕಾಳಜಿವಹಿಸುವ ಮತ್ತು ಎಲ್ಲರ ಜೀವನ ಉತ್ತಮಗೊಳಿಸಲು ತನ್ನ ಜೀವನ ನಡೆಸಿದ ವ್ಯಕ್ತಿಯಾಗಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತೀರಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಅನೇಕರು ಕೂಡ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ರತನ್‌ ಟಾಟಾರದ್ದು ಸಮಗ್ರ ವ್ಯಕ್ತಿತ್ವ: ಸುಧಾ ಮೂರ್ತಿ

    ಟಾಟಾ ಅವರ ಪಾರ್ಥಿವ ಶರೀರವನ್ನು ದಕ್ಷಿಣ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ (ಎನ್‌ಸಿಪಿಎ) ಅಂತಿಮ ದರ್ಶನಕ್ಕಿಡಲಾಗಿದೆ. ಸಂಜೆ 4ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿದ್ದು, ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ.  ಇದನ್ನೂ ಓದಿ: 10 ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದ ರತನ್‌ ಟಾಟಾ

  • 10 ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದ ರತನ್‌ ಟಾಟಾ

    10 ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದ ರತನ್‌ ಟಾಟಾ

    ಉಡುಪಿ: ಹತ್ತು ವರ್ಷಗಳ ಹಿಂದೆ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ರತನ್‌ ಟಾಟಾ (Ratan Tata) ಉಡುಪಿಗೆ (Udupi) ಆಗಮಿಸಿದ್ದರು.

    ಹಿರಿಯಡ್ಕದಲ್ಲಿರುವ ಪುತ್ತಿಗೆ ಮೂಲ ಮಠಕ್ಕೆ (Puttige Matha) ಆಗಮಿಸಿದ ರತನ್‌ ಟಾಟಾ ಸ್ವಾಗತ ಗೋಪುರವನ್ನು ಲೋಕಾರ್ಪಣೆ ಮಾಡಿದ್ದರು. ಗ್ರಾಮೀಣ ಪರಿಸರದ ಮಠದಲ್ಲಿ ಅಮೂಲ್ಯ ಸಮಯವನ್ನು ಕಳೆದ ಅವರು ಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆದಿದ್ದರು. ಇದನ್ನೂ ಓದಿ: ಅವಕಾಶಕ್ಕಾಗಿ ಕಾಯಬೇಡಿ. ನೀವೇ ಸ್ವಂತ ಅವಕಾಶಗಳನ್ನು ಸೃಷ್ಟಿಸಿ: ರತನ್‌ ಟಾಟಾ ಪ್ರಸಿದ್ದ ಅಣಿಮುತ್ತುಗಳನ್ನು ಓದಿ

    ಪುತ್ತಿಗೆ ಮಠಕ್ಕೆ ಬಂದಿದ್ದ ರತನ್ ಟಾಟಾ ಕರಾವಳಿಯ ಕಲೆ ಸಂಸ್ಕೃತಿ ಆಚರಣೆಗಳ ಬಗ್ಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯಿಂದ ಮಾಹಿತಿಗಳನ್ನು ಪಡೆದಿದ್ದರು. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅಷ್ಟಮಠಾಧೀಶರು ಎರಡು ವರ್ಷಗಳ ಕಾಲ ಸರತಿಯಲ್ಲಿ ಪೂಜೆಗೈವ ಪರ್ಯಾಯ ಮಹೋತ್ಸವದ ಬಗ್ಗೆ ಮಾಹಿತಿಯನ್ನು ಬಹಳ ಆಸಕ್ತಿಯಿಂದ ತಿಳಿದುಕೊಂಡಿದ್ದರು. ಪುತ್ತಿಗೆ ಮೂಲ ಮಠದಲ್ಲಿ ರತನ್ ಟಾಟಾವರಿಗೆ ಈ ಸಂದರ್ಭ ಪುರ ಗೌರವವನ್ನು ಸಲ್ಲಿಕೆ ಮಾಡಲಾಗಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ತಮ್ಮ ಭಾಷಣದಲ್ಲಿ ರತನ್‌ ಟಾಟಾ ಈ ಪವಿತ್ರ ವಾತಾವರಣ ನನಗೆ ಇಷ್ಟವಾಯಿತು,  ನಾನು ಧನ್ಯನಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಭ್ರಷ್ಟಾಚಾರ ನಿರ್ಮೂಲನೆ ಮಾಡೋದು ಹೇಗೆ? – ರತನ್ ಟಾಟಾ ನೀಡಿದ ಖಡಕ್‌ ಉತ್ತರ ಇದು

    ಭೇಟಿ ಸಂದರ್ಭದಲ್ಲಿ ಭಗವದ್ಗೀತೆ (Bhagavad Gita) ಬಗ್ಗೆ ತಮಗಿರುವ ಆಸಕ್ತಿ ವ್ಯಕ್ತಪಡಿಸಿದ್ದರು. ಶ್ರೀ ಕೃಷ್ಣ ಮುಖ್ಯಪ್ರಾಣ ದೇವರು ರತನ್ ಟಾಟಾ ಅವರ ಆತ್ಮಕ್ಕೆ ಸದ್ಗತಿ ಕೊಡಲಿ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ.

     

  • ರತನ್‌ ಟಾಟಾರದ್ದು ಸಮಗ್ರ ವ್ಯಕ್ತಿತ್ವ: ಸುಧಾ ಮೂರ್ತಿ

    ರತನ್‌ ಟಾಟಾರದ್ದು ಸಮಗ್ರ ವ್ಯಕ್ತಿತ್ವ: ಸುಧಾ ಮೂರ್ತಿ

    ಬೆಂಗಳೂರು: ರತನ್‌ ಟಾಟಾ ಅವರದ್ದು ಸಮಗ್ರ ವ್ಯಕ್ತಿತ್ವ, ನಾನು ಅವರ ಮನೆಯಿಂದ ಮಾತ್ರ ಪರೋಪಕಾರವನ್ನು ಕಲಿಯುತ್ತೇನೆ. ಅವರ ನಿಧನ ನನಗೆ ವೈಯಕ್ತಿಕ ನಷ್ಟ ಎಂದು ಲೇಖಕಿ ಹಾಗೂ ಸಂಸದೆ ಸುಧಾ ಮೂರ್ತಿಯವರು ಹೇಳಿದ್ದಾರೆ.

    ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರತನ್ ಟಾಟಾ ಅವರನ್ನು ಭೇಟಿಯಾಗಿದ್ದೆ. ಅವರು ಪ್ರಾಮಾಣಿಕತೆ, ಸರಳತೆ, ಯಾವಾಗಲೂ ಇತರರ ಕಾಳಜಿ ವಹಿಸುವ ಮತ್ತು ಸಹಾನುಭೂತಿ ಹೊಂದಿರುವ ವ್ಯಕ್ತಿಯಾಗಿದ್ದರು. ಅಪಾರ ತಾಳ್ಮೆ, ಅಪರೂಪದ ವ್ಯಕ್ತಿತ್ವದ ಮೂಲಕ ಅವರು ದಂತಕಥೆಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

    ಈ ಹಿಂದೆ ರತನ್ ಟಾಟಾ (Ratan Tata), ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಕೆಟಿ ಥಾಮಸ್(KT Thomas) ಮತ್ತು ಲೋಕಸಭೆಯ ಮಾಜಿ ಉಪ ಸ್ಪೀಕರ್ ಕರಿಯಾ ಮುಂಡಾ(Kariya Munda) ಅವರನ್ನು ಪಿಎಂ-ಕೇರ್ಸ್ ಫಂಡ್(PM CARES Fund ) ಟ್ರಸ್ಟಿಗಳಾಗಿ ನಾಮನಿರ್ದೇಶನ ಮಾಡಲಾಗಿತ್ತು. ಇದೇ ವೇಳೆ ಭಾರತದ ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ರಾಜೀವ್ ಮೆಹ್ರಿಷಿ, ಇನ್ಫೋಸಿಸ್(Infosys) ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ(Sudha Murthy) ಮತ್ತು ಇಂಡಿಕಾರ್ಪ್ಸ್ ಮತ್ತು ಪಿರಮಲ್ ಫೌಂಡೇಶನ್‌ನ ಮಾಜಿ ಸಿಇಒ ಆನಂದ್ ಶಾ ಅವರನ್ನು ಪಿಎಂ ಕೇರ್ಸ್ ನಿಧಿಯ ಸಲಹಾ ಮಂಡಳಿಗೆ ನಾಮನಿರ್ದೇಶನ ಮಾಡಲಾಗಿತ್ತು.

    ಉದ್ಯಮಿಯಾಗಿ ಸಾರ್ಥಕ ಬದುಕು ನಡೆಸಿದ ರತನ್‌ ಟಾಟಾ (Ratan Tata) ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ಅಂತ್ಯಕ್ರಿಯೆಯನ್ನು (Funeral) ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಹೇಳಿದ್ದಾರೆ.

    ಅನಾರೋಗ್ಯ ಹಿನ್ನೆಲೆ ಮುಂಬೈನ (Mumbai) ಬ್ರೀಚ್ ಕಾಂಡಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಬುಧವಾರ ಕೊನೆಯುಸಿರೆಳೆದಿದ್ದಾರೆ.

  • ಅವಕಾಶಕ್ಕಾಗಿ ಕಾಯಬೇಡಿ. ನೀವೇ ಸ್ವಂತ ಅವಕಾಶಗಳನ್ನು ಸೃಷ್ಟಿಸಿ: ರತನ್‌ ಟಾಟಾ ಪ್ರಸಿದ್ದ ಅಣಿಮುತ್ತುಗಳನ್ನು ಓದಿ

    ಅವಕಾಶಕ್ಕಾಗಿ ಕಾಯಬೇಡಿ. ನೀವೇ ಸ್ವಂತ ಅವಕಾಶಗಳನ್ನು ಸೃಷ್ಟಿಸಿ: ರತನ್‌ ಟಾಟಾ ಪ್ರಸಿದ್ದ ಅಣಿಮುತ್ತುಗಳನ್ನು ಓದಿ

    ನಿಮ್ಮ ಬೇರುಗಳನ್ನು ಎಂದಿಗೂ ಮರೆಯಬೇಡಿ, ಮತ್ತು ನೀವು ಎಲ್ಲಿಂದ ಬಂದಿದ್ದೀರಿ ಎಂಬುದರ ಬಗ್ಗೆ ಯಾವಾಗಲೂ ಹೆಮ್ಮೆಪಡಬೇಕು. ಅವಕಾಶ ಬರಬೇಕೆಂದು ಕಾಯಬೇಡಿ. ನೀವೇ ಸ್ವಂತ ಅವಕಾಶಗಳನ್ನು ಸೃಷ್ಟಿಸಿ – ಇದು ರತನ್‌ ಟಾಟಾ (Ratan Tata) ಹೇಳಿದ ಮಾತುಗಳು.

    ಭಾರತದ (India) ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ರತನ್‌ ಟಾಟಾ ಮನಸ್ಸು ದೇಶದ ಅಭಿವೃದ್ಧಿಗೆ ಮಿಡಿಯುತ್ತಿತ್ತು. ಈ ಕಾರಣಕ್ಕೆ ತಮ್ಮ ಶೇ.60 ರಷ್ಟು ಸಂಪತ್ತನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದರು. ಪ್ರಚಾರದಿಂದ ದೂರ ಇದ್ದ ರತನ್‌ ಟಾಟಾ ಕೆಲಸದಲ್ಲಿ ಶ್ರದ್ಧೆ ಹೊಂದಿದ್ದರು.

    ರತನ್‌ ಟಾಟಾ ಅವರಿಗೆ ಭಾರತ ರತ್ನ ನೀಡಬೇಕೆಂದು ಅಭಿಯಾನ ನಡೆಯುತ್ತಿದ್ದಾಗ ದಯವಿಟ್ಟು ಅಭಿಯಾನ ನಿಲ್ಲಿಸಿ ಎಂದು ಮನವಿ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗ ವ್ಯಕ್ತಪಡಿಸುತ್ತಿರುವ ಭಾವನೆಯನ್ನು ನಾನು ಗೌರವಿಸುತ್ತೇನೆ. ಹೀಗಿದ್ದರೂ ಪ್ರಶಸ್ತಿ ವಿಚಾರವಾಗಿ ನಡೆಸುತ್ತಿರುವ ಅಭಿಯಾನವನ್ನು ನಿಲ್ಲಿಸಬೇಕೆಂದು ನಾನು ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ನಾನು ಭಾರತೀಯನಾಗಿರುವುದು ಅದೃಷ್ಟ ಮತ್ತು ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ ಎಂದು ರತನ್‌ ಟಾಟಾ ಹೇಳಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ರತನ್‌ ಟಾಟಾ ಅವರ ಪ್ರಸಿದ್ಧ ನುಡಿ ಮುತ್ತುಗಳು
    ನಾನು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನಂಬುವುದಿಲ್ಲ. ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನಂತರ ಆ ನಿರ್ಧಾರವನ್ನು ಸರಿಯಾಗುವಂತೆ ಮಾಡುತ್ತೇನೆ.

    ಯಾರೂ ಕಬ್ಬಿಣವನ್ನು ನಾಶಮಾಡಲು ಸಾಧ್ಯವಿಲ್ಲ. ಆದರೆ ಅದರ ಅದರ ತುಕ್ಕು ಅದನ್ನೇ ನಾಶ ಮಾಡಬಹುದು. ಹಾಗೆಯೇ ಯಾರೂ ಒಬ್ಬ ವ್ಯಕ್ತಿಯನ್ನು ನಾಶಮಾಡಲು ಸಾಧ್ಯವಿಲ್ಲ, ಆದರೆ ಅವರ ಸ್ವಂತ ಮನಸ್ಸೇ ಅವರ  ನಾಶಕ್ಕೆ ಕಾರಣವಾಗಬಹುದು. ಇದನ್ನೂ ಓದಿ: ಭ್ರಷ್ಟಾಚಾರ ನಿರ್ಮೂಲನೆ ಮಾಡೋದು ಹೇಗೆ? – ರತನ್ ಟಾಟಾ ನೀಡಿದ ಖಡಕ್‌ ಉತ್ತರ ಇದು

    ನೀವು ವೇಗವಾಗಿ ನಡೆಯಲು ಬಯಸಿದರೆ ಏಕಾಂಗಿಯಾಗಿ ನಡೆಯಿರಿ. ಆದರೆ ನೀವು ದೂರ ನಡೆಯಲು ಬಯಸಿದರೆ ಒಟ್ಟಿಗೆ ನಡೆಯಿರಿ.

    ಯಾವುದೇ ಅಪಾಯವನ್ನು ತೆಗೆದುಕೊಳ್ಳದಿರುವುದು ದೊಡ್ಡ ಅಪಾಯ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಸೋಲಾಗದೇ ಇರವ ಏಕೈಕ ತಂತ್ರವೆಂದರೆ ಅಪಾಯಗಳನ್ನು ತೆಗೆದುಕೊಳ್ಳದಿರುವುದು.

    ಇತರರೊಂದಿಗೆ ನಿಮ್ಮ ಸಂವಹನದಲ್ಲಿ ದಯೆ, ಸಹಾನುಭೂತಿ ಮತ್ತು ಸಹಾನುಭೂತಿಯ ಶಕ್ತಿಯನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ.

    ನಾಯಕನಾಗುವುದು ಎಂದರೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು, ಮನ್ನಿಸುವಿಕೆಯಲ್ಲ.

    ಜನರು ನಿಮ್ಮ ಮೇಲೆ ಎಸೆಯುವ ಕಲ್ಲುಗಳನ್ನು ತೆಗೆದುಕೊಳ್ಳಿ ಮತ್ತು ಆ ಕಲ್ಲುಗಳ ಬಳಸಿ ಸ್ಮಾರಕವನ್ನು ನಿರ್ಮಿಸಿ.

    ಜೀವನದಲ್ಲಿ ಏರಿಳಿತಗಳು ಇದ್ದಾಗ ಮಾತ್ರ ನಾವು ಮುಂದುವರಿಯಬಹುದು. ಏಕೆಂದರೆ ಇಸಿಜಿಯಲ್ಲಿ ಸರಳ ರೇಖೆ ಇದ್ದರೆ ನಾವು ಜೀವಂತವಾಗಿಲ್ಲ ಎಂದರ್ಥ.

    ಗೆಲುವಿನ ಏಕೈಕ ಮಾರ್ಗವೆಂದರೆ ಸೋಲಿಗೆ ಹೆದರದಿರುವುದು.

    ನಿಮ್ಮ ಬೇರುಗಳನ್ನು ಎಂದಿಗೂ ಮರೆಯಬೇಡಿ, ಮತ್ತು ನೀವು ಎಲ್ಲಿಂದ ಬಂದಿದ್ದೀರಿ ಎಂಬುದರ ಬಗ್ಗೆ ಯಾವಾಗಲೂ ಹೆಮ್ಮೆಪಡಬೇಕು.

     ಕಠಿಣ ಮಾರ್ಗವಾಗಿದ್ದರೂ ಸಹ ನಿಮ್ಮ ಮೌಲ್ಯಗಳು ಮತ್ತು ತತ್ವಗಳ ಮೇಲೆ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ.

    ನಾಯಕತ್ವವು ಉಸ್ತುವಾರಿಯಲ್ಲಿರುವುದು ಅಲ್ಲ, ಅದು ನಿಮ್ಮ ಉಸ್ತುವಾರಿಯಲ್ಲಿರುವವರನ್ನು ನೋಡಿಕೊಳ್ಳುವುದು.

    ನಾನು ಯಾವಾಗಲೂ ಭಾರತದ ಭವಿಷ್ಯದ ಬಗ್ಗೆ ತುಂಬಾ ಆತ್ಮವಿಶ್ವಾಸ ಮತ್ತು ಲವಲವಿಕೆಯಿಂದ ಇದ್ದೇನೆ.

    ಅಲ್ಪಾವಧಿಯ ಗುರಿಗಳನ್ನು ನಂಬುವುದಿಲ್ಲ. ನಾನು ದೀರ್ಘಾವಧಿಯ ದೃಷ್ಟಿಯನ್ನು ನಂಬುತ್ತೇನೆ.

    ಯಶಸ್ಸನ್ನು ನೀವು ಹೊಂದಿರುವ ಸ್ಥಾನದಿಂದ ಅಳೆಯಲಾಗುವುದಿಲ್ಲ. ಆದರೆ ನೀವು ಇತರರ ಮೇಲೆ ಬೀರುವ ಪ್ರಭಾವದಿಂದ ಅಳೆಯಬಹುದು.

  • ಭ್ರಷ್ಟಾಚಾರ ನಿರ್ಮೂಲನೆ ಮಾಡೋದು ಹೇಗೆ? – ರತನ್ ಟಾಟಾ ನೀಡಿದ ಖಡಕ್‌ ಉತ್ತರ ಇದು

    ಭ್ರಷ್ಟಾಚಾರ ನಿರ್ಮೂಲನೆ ಮಾಡೋದು ಹೇಗೆ? – ರತನ್ ಟಾಟಾ ನೀಡಿದ ಖಡಕ್‌ ಉತ್ತರ ಇದು

    ತನ್‌ ಟಾಟಾ (Ratan Tata) ರಾಜಕೀಯ ಮತ್ತು ಭ್ರಷ್ಟಾಚಾರದಿಂದ (Corruption) ದೂರ ಉಳಿದಿದ್ದರು. ಕೈಗಾರಿಕೋದ್ಯಮಿ ರತನ್ ಟಾಟಾ ಅವರು 2010 ರಲ್ಲಿ ಮಾಧ್ಯಮ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದರು.

    ವ್ಯವಹಾರ ಒಪ್ಪಂದಕ್ಕಾಗಿ ಉದ್ಯಮಿಯೊಬ್ಬರು ಸಚಿವರ ಬಳಿ ಮಾತನಾಡಲು 15 ಕೋಟಿ ರೂ. ನೀಡುವುದಾಗಿ ಹೇಳಿದ್ದರು. ಆದರೆ ಉದ್ಯಮಿಯ ಬೇಡಿಕೆಯನ್ನು ನಾನು ನಿರಾಕರಿಸಿದ್ದೆ ಎಂದು ತಿಳಿಸಿದ್ದರು.

    ಈ ವೇಳೆ ನಿಮ್ಮ ಪ್ರಕಾರ ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ, ಸ್ವಯಂ-ನಿಯಂತ್ರಣ ಒಂದೇ ಮಾರ್ಗ ಎಂದು ರತನ್‌ ಟಾಟಾ ಉತ್ತರಿಸಿದ್ದರು. ಅಷ್ಟೇ ಅಲ್ಲದೇ ನಾನು ಭ್ರಷ್ಟಾಚಾರ ಮಾಡಿಲ್ಲ ಎಂದು ಭಾವಿಸಿ ರಾತ್ರಿ ನೆಮ್ಮದಿಯಿಂದ ಮಲಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದರು.

    ಅನಾರೋಗ್ಯದಿಂದ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಟಾಟಾ ಸಮೂಹದ ಮುಖ್ಯಸ್ಥ ರತನ್‌ ಟಾಟಾ (86) ನಿಧನರಾಗಿದ್ದಾರೆ.

    ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ಅಂತ್ಯಕ್ರಿಯೆಯನ್ನು (Funeral) ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ತಿಳಿಸಿದ್ದಾರೆ.

    ಟಾಟಾ ಅವರ ನಿಧನಕ್ಕೆ ಅನೇಕ ಗಣ್ಯರು, ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.

  • ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ಸಾಹಸ ಪ್ರೇಮಿಯಾಗಿದ್ದ ರತನ್‌ ಟಾಟಾ (Ratan Tata) ಅವರು ಬೆಂಗಳೂರಿನಲ್ಲಿ (Bengaluru) ಅಮೆರಿಕದ ಎಫ್‌ 16 ಫಾಲ್ಕನ್‌ (F-16 Fighting Falcon) ಯುದ್ಧ ವಿಮಾನವನ್ನು ಹಾರಿಸಿದ್ದರು. ಅದು 69ರ ವಯಸ್ಸಿನಲ್ಲಿ ಎನ್ನುವುದು ವಿಶೇಷ.

    2007ರಲ್ಲಿ ನಡೆದ ಏರೋ ಇಂಡಿಯಾ (Aero India) ವೈಮಾನಿಕ ಪ್ರದರ್ಶನಲ್ಲಿ ಅಮೆರಿಕದ ಲಾಕ್‌ಹಿಡ್‌ ಮಾರ್ಟಿನ್‌ ಕಂಪನಿ ನಿರ್ಮಿಸಿದ 400 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಎಫ್‌-16 ಯುದ್ಧ ವಿಮಾನ ಭಾಗಿಯಾಗಿತ್ತು. ಈ ಯುದ್ಧ ವಿಮಾನವನ್ನು ರತನ್‌ ಟಾಟಾ ಹಾರಿಸಿದ್ದರು. ಈ ಮೂಲಕ ಎಫ್‌-16 ಹಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇದನ್ನೂ ಓದಿ: ಹೋಗಿ ಬಾ ನನ್ನ ಗೆಳೆಯ – ರತನ್ ಟಾಟಾ ನಿಧನಕ್ಕೆ ಸ್ನೇಹಿತೆ ಸಿಮಿ ಭಾವುಕ ಪೋಸ್ಟ್​


    ರತನ್‌ ಟಾಟಾ ಅವರು ಜೆಟ್‌, ಹೆಲಿಕಾಪ್ಟರ್‌ ಹಾರಿಸಲು ಪರವಾನಗಿ ಹೊಂದಿದ್ದರು. ಸಹ ಪೈಲೆಟ್‌ ಮಾರ್ಗದರ್ಶನದಲ್ಲಿ ಟಾಟಾ ಅವರು ಸುಮಾರು 40 ನಿಮಿಷ ವಿಮಾನ ಹಾರಿಸಿದರು. ಹಾರಾಟದ ಅವಧಿಯಲ್ಲಿ ಎಫ್‌16 ವಿಮಾನ ಪ್ರತಿ ಗಂಟೆಗೆ 2000 ಕಿ.ಮೀ ವೇಗದಲ್ಲಿ ಸಂಚರಿಸಿತ್ತು. ಇದನ್ನೂ ಓದಿ: ಭಾರತೀಯನಾಗಿರುವುದೇ ಅದೃಷ್ಟ, ಭಾರತ ರತ್ನ ಅಭಿಯಾನವನ್ನು ನಿಲ್ಲಿಸಿ ಎಂದಿದ್ದ ರತನ್‌ ಟಾಟಾ

    ಲ್ಯಾಂಡಿಂಗ್‌ ನಂತರ ಟಾಟಾ ಅವರನ್ನು ಲಾಕ್‌ಹೀಡ್ ಮಾರ್ಟಿನ್ ಅಧಿಕಾರಿಗಳು ರತನ್‌ ಟಾಟಾ ಅವರನ್ನು ಸ್ವಾಗತಿಸಿ F-16 ನ ಚಿಕ್ಕ ಪ್ರತಿಕೃತಿಯನ್ನು ನೀಡಿದರು. ಈ ಸಮಯದಲ್ಲಿ ಅಮೆರಿಕದ ರಕ್ಷಣಾ ದೈತ್ಯ ಲಾಕ್‌ಹಿಡ್‌ ಮಾರ್ಟಿನ್‌ ಭಾರತದೊಂದಿಗೆ ಶತಕೋಟಿ ಡಾಲರ್‌ಗಳ ಪ್ರಮುಖ ರಕ್ಷಣಾ ಒಪ್ಪಂದಕ್ಕಾಗಿ ಸ್ಪರ್ಧಿಸುತ್ತಿತ್ತು.

    ಈ ಪ್ರಯಾಣದ ನಂತರ ಇದೊಂದು ಅದ್ಭುತ ಅನುಭವ ಎಂದು ರತನ್‌ ಟಾಟಾ ಬಣ್ಣಿಸಿದ್ದರು. ಫೈಟರ್‌ ಜೆಟ್‌ ಹಾರಿಸಿದ ಸುಮಾರು 10 ವರ್ಷದ ನಂತರ ಲಾಕ್‌ಹಿಟ್‌ ಮಾರ್ಟಿನ್‌ ಕಂಪನಿಯ ಜೊತೆ ಭಾರತದಲ್ಲಿ F-16 ಬ್ಲಾಕ್ 70 ಅನ್ನು ಉತ್ಪಾದಿಸಲು ಮಹತ್ವದ ಒಪ್ಪಂದಕ್ಕೆ ರತನ್‌ ಟಾಟಾ ಸಹಿ ಹಾಕಿದರು.

     

  • ಹೋಗಿ ಬಾ ನನ್ನ ಗೆಳೆಯ – ರತನ್ ಟಾಟಾ ನಿಧನಕ್ಕೆ ಸ್ನೇಹಿತೆ ಸಿಮಿ ಭಾವುಕ ಪೋಸ್ಟ್​

    ಹೋಗಿ ಬಾ ನನ್ನ ಗೆಳೆಯ – ರತನ್ ಟಾಟಾ ನಿಧನಕ್ಕೆ ಸ್ನೇಹಿತೆ ಸಿಮಿ ಭಾವುಕ ಪೋಸ್ಟ್​

    ಪ್ರತಿಷ್ಠಿತ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ನಿಧನಕ್ಕೆ ಗೆಳತಿ ಬಾಲಿವುಡ್‌ನ ಹಿರಿಯ ನಟಿ ಸಿಮಿ ಗರೆವಾಲ್​ (Simi Garewal) ಎಕ್ಸ್‌ನಲ್ಲಿ ಫೋಟೋ ಒಂದನ್ನು ಹಂಚಿಕೊಂಡು ಭಾವುಕ ಪೋಸ್ಟ್​ ಮಾಡಿದ್ದಾರೆ.

    ನೀವು ಹೋಗಿದ್ದೀರಿ ಎಂದು ಎಲ್ಲರೂ ಹೇಳುತ್ತಿದ್ದಾರೆ, ನೀವು ನಮ್ಮ ಜೊತೆಗೆ ಇಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ಹೋಗಿ ಬನ್ನಿ ನನ್ನ ಗೆಳೆಯ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರೊಂದಿಗಿನ ಸಂಬಂಧದ ಬಗ್ಗೆ 2011 ರಲ್ಲಿ ನೀಡಿದ ಸಂದರ್ಶನದಲ್ಲಿ ಖ್ಯಾತ ಹಿಂದಿ ಸಿನಿಮಾ ನಟಿ ಸಿಮಿ ಸ್ವತಃ ಬಹಿರಂಗಪಡಿಸಿದ್ದರು. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್‌ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?

    ಸಿಮಿ ಅವರು ಪರಿಪೂರ್ಣ ವ್ಯಕ್ತಿ, ಹಾಸ್ಯ ಪ್ರಜ್ಞೆ ಕೂಡ ಚೆನ್ನಾಗಿತ್ತು, ಸಭ್ಯರು, ಯಾವಾಗಲೂ ಅವರು ಶ್ರೀಮಂತಿಕೆ ತೋರಿಸಿಕೊಂಡವರಲ್ಲ ಎಂದು ಹೇಳಿದ್ದರು. ಇಷ್ಟು ಆತ್ಮೀಯವಾಗಿದ್ದರೂ ರತನ್ ಹಾಗೂ ಸಿಮಿಯ ಗೆಳೆತನ ಹೆಚ್ಚು ದಿನ ಉಳಿಯಲಿಲ್ಲ, ಸಿಮಿ ಬೇರೊಬ್ಬರನ್ನು ಮದುವೆಯಾದರು, ಸಾಕಷ್ಟು ವರ್ಷಗಳ ಕಾಲ ಸಿಮಿ ಹಾಗೂ ರತನ್ ಒಳ್ಳೆಯ ಸ್ನೇಹಿತರಾಗಿದ್ದರು.

    ಸಂದರ್ಶನವೊಂದರಲ್ಲಿ ಸ್ವತಃ ರತನ್ ಟಾಟಾ ಅವರು ನಾಲ್ಕು ಬಾರಿ ಪ್ರೀತಿಯಲ್ಲಿ ಬಿದ್ದಿದ್ದರೂ ಅದು ಮದುವೆಯ ಹಂತವನ್ನು ತಲುಪಲಿಲ್ಲ ಎಂದು ಬಹಿರಂಗಪಡಿಸಿದ್ದರು. 1960 ರ ದಶಕದಲ್ಲಿ ಅಮೆರಿಕದಲ್ಲಿ ಕೆಲಸ ಮಾಡುವಾಗ ರತನ್ ಟಾಟಾ ಬೇರೊಬ್ಬ ಹುಡುಗಿಯನ್ನು ಇಷ್ಟಪಟ್ಟಿದ್ದರು. 1962ರ ಭಾರತ-ಚೀನಾ ಯುದ್ಧ ಸಮಯದಲ್ಲಿ ಅದು ಕೊನೆಗೊಂಡಿತ್ತು. ಏಕೆಂದರೆ ಯುದ್ಧದ ಸಮಯದಲ್ಲಿ ಆಕೆಗೆ ಅಮೆರಿಕವನ್ನು ಬಿಟ್ಟು ಭಾರತಕ್ಕೆ ಹೋಗಲು ಪೋಷಕರು ಅನುಮತಿ ನೀಡಿರಲಿಲ್ಲ. ಇದನ್ನೂ ಓದಿ: ಮೊದಲ ಉದ್ಯಮದಲ್ಲೇ ಯಶಸ್ಸು ಕಂಡಿದ್ದ ಉದ್ಯಮ ಸಾಮ್ರಾಟ