Tag: Ratan Tata

  • ರತನ್ ಟಾಟಾ ವಿಲ್‌ ಬಹಿರಂಗ – 10,000 ಕೋಟಿ ಆಸ್ತಿಯಲ್ಲಿ ಮುದ್ದಿನ ನಾಯಿಗೂ ದೊಡ್ಡ ಪಾಲು!

    ರತನ್ ಟಾಟಾ ವಿಲ್‌ ಬಹಿರಂಗ – 10,000 ಕೋಟಿ ಆಸ್ತಿಯಲ್ಲಿ ಮುದ್ದಿನ ನಾಯಿಗೂ ದೊಡ್ಡ ಪಾಲು!

    ಮುಂಬೈ: ಈ ದೇಶ ಕಂಡ ಉದ್ಯಮಿ ರತನ್‌ ಟಾಟಾ (Ratan Tata) ಅವರು ಇದೇ ಅಕ್ಟೋಬರ್‌ 9ರಂದು 86ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ರತನ್‌ ಟಾಟಾ ನಿಧನದ ಬಳಿಕ ಅವರ 10,000 ಕೋಟಿ ರೂ. ಮೌಲ್ಯದ ಸಂಪತ್ತಿನ ಬಗ್ಗೆ ಪ್ರಶ್ನೆಗಳು ಬರುತ್ತಲೇ ಇದ್ದವು. ಅಷ್ಟೊಂದು ಆಸ್ತಿ ಯಾರ ಪಾಲಾಗಲಿದೆ ಎಂಬ ಬಗ್ಗೆ ಚರ್ಚೆಗಳು ಕೂಡ ನಡೆಯುತ್ತಿದ್ದವು. ಇದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ರತನ್‌ ಟಾಟಾ ಅವರ ವಿಲ್‌ (Ratan Tata Will) ಬಹಿರಂಗವಾಗಿದೆ ಎಂದು ವರದಿಗಳು ತಿಳಿಸಿವೆ.

    ರತನ್ ಟಾಟಾ ತಮ್ಮ ವಿಲ್ ಪತ್ರದಲ್ಲಿ ಯಾವುದೇ ಗೊಂದಲವಿಲ್ಲದಂತೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ವಿಶೇಷ ಅಂದರೆ ರತನ್ ಟಾಟಾ 10,000 ಕೋಟಿ ರೂ. ಆಸ್ತಿಯಲ್ಲಿ ಅವರ ಮುದ್ದಿನ ಶ್ವಾನಕ್ಕೆ ಅತೀ ದೊಡ್ಡ ಪಾಲನ್ನು ಮೀಸಲಿಟ್ಟಿದ್ದಾರೆ ಎಂಬುದು ಪತ್ರದಲ್ಲಿ ಬಹಿರಂಗವಾಗಿದೆ. ಈ ಮೂಲಕ ತಮ್ಮನ್ನು ನಂಬಿದ ಎಲ್ಲರಿಗೂ ನ್ಯಾಯ ಒದಗಿಸುವ ಪ್ರಯತ್ನವನ್ನು ರತನ್‌ ಟಾಟಾ ಮಾಡಿದ್ದಾರೆ. ಬಹುತೇಕ ಭಾಗವನ್ನು ಸಮಾಜಸೇವೆಗೆ ಮೀಸಲಿಟ್ಟಿರುವ ರತನ್‌ ಟಾಟಾ, ತಮ್ಮ ನಾಯಿಗೂ ದೊಡ್ಡ ಪಾಲನ್ನೇ ನೀಡಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿಗಳಿಗೆ ಟ್ರೂಡೋ ಸರ್ಕಾರದ್ದೇ ಬೆಂಬಲ – ಭಾರತೀಯ ಹೈಕಮೀಷನರ್ ಸಂಜಯ್ ವರ್ಮಾ

    ತಮ್ಮ ಆಸ್ತಿಯನ್ನು ರತನ್‌ ಟಾಟಾ ತಮ್ಮ ಸಹೋದರಿಯರಾದ ಶಿರೀನ್‌ ಮತ್ತು ಡೀನಾ ಜೆಜೀಬೋಯ್‌ಗೆ ಹಂಚಿದ್ದಾರೆ. ಇವರಿಬ್ಬರು ರತನ್‌ ಟಾಟಾ ಅವರ ಮಲತಾಯಿಯ ಮಕ್ಕಳು. ಜೊತೆಗೆ ತಮ್ಮ ಸಹೋದರ ಜಿಮ್ಮಿ ಟಾಟಾ ಹಾಗೂ ಅಚ್ಚುಮೆಚ್ಚಿನ ಸಹಾಯಕ ಶಂತನು ನಾಯ್ಡುಗೂ ಆಸ್ತಿಯಲ್ಲಿ ಪಾಲು ನೀಡಿದ್ದಾರೆ. ವಿಶೇಷ ಏನಂದ್ರೇ ತಮ್ಮ ಅಚ್ಚು ಮೆಚ್ಚಿನ ನಾಯಿ ಟಿಟೋಗೂ ಕೂಡ ತಮ್ಮ ಸಂಪತ್ತಿನ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅದಲ್ಲದೇ ಚಾರಿಟಿ ಟ್ರಸ್ಟ್‌ಗಳಿಗೆ ಷೇರುಗಳನ್ನು ನೀಡುವ ಟಾಟಾ ಗ್ರೂಫ್‌ನ ಪದ್ಧತಿಗೆ ಅನುಗುಣವಾಗಿ ರತನ್‌ ಟಾಟಾ ಎಂಡೋಮೆಂಟ್‌ ಫೌಂಡೇಶನ್‌ ರತನ್‌ ಟಾಟಾ ಅವರ ಷೇರುಗಳ ದೊಡ್ಡ ಭಾಗವನ್ನು ಪಡೆದಿದೆ.

    ವರದಿಗಳ ಪ್ರಕಾರ, ರತನ್ ಅವರು ತಮ್ಮ ಜರ್ಮನ್ ಶೆಫರ್ಡ್ ನಾಯಿ ಟಿಟೊಗೆ ಲೈಫ್‌ಟೈಮ್‌ ಆರೈಕೆಯನ್ನು ತಮ್ಮ ಮರಣ ಇಚ್ಛಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಾಮಾನ್ಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಸಾಕುಪ್ರಾಣಿಗಳನ್ನು ವಿಲ್‌ನಲ್ಲಿ ಸೇರಿಸುವುದು ಸಾಮಾನ್ಯ. ಆದರೆ, ಭಾರತದಲ್ಲಿ ಇದು ಅಪರೂಪದ ಘಟನೆ. ಟಿಟೋ ಎಂಬ ಹೆಸರಿನ ನಾಯಿ ಸತ್ತ ಬಳಿಕ ಅದೇ ಹೆಸರಿನ ಜರ್ಮನ್‌ ಶೆಫರ್ಡ್‌ ನಾಯಿಯನ್ನು ಐದರಿಂದ 6 ವರ್ಷಗಳ ಹಿಂದೆ ರತನ್‌ ಟಾಟಾ ದತ್ತು ಪಡೆದಿದ್ದರು. ಟಿಟೋವನ್ನು ರತನ್‌ ಟಾಟಾ ಮನೆಯ ಅಡುಗೆ ಮಾಡುವ ರಾಜನ್‌ ಶಾ ನೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕೆನಡಾ | ಡಿವೈಡರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು – ನಾಲ್ವರು ಭಾರತೀಯರು ಸಾವು

  • ರತನ್ ಟಾಟಾ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ನಿರ್ಧಾರ

    ರತನ್ ಟಾಟಾ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ನಿರ್ಧಾರ

    ಮುಂಬೈ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ಚಿತಾ ಭಸ್ಮವನ್ನು (Ashes) ಅರಬ್ಬಿ ಸಮುದ್ರದಲ್ಲಿ (Arabian Sea) ವಿಸರ್ಜಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಅನಾರೋಗ್ಯದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ (Breach Candy Hospital) ದಾಖಲಾಗಿದ್ದ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ (86) ಅ.9 ರಂದು ಕೊನೆಯುಸಿರೆಳೆದರು. ಅ.10 ರಂದು ಅಂತಿಮ ವಿಧಿವಿಧಾನಗಳನ್ನು ಮುಂಬೈನ (Mumbai) ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿತ್ತು. ಇದನ್ನೂ ಓದಿ: ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ ಸಹೋದರ ದೀಪಕ್‌ ಅರಸ್‌ ನಿಧನ

    ಇದೀಗ ಅವರ ಆಸೆಯಂತೆ ಅವರ ಚಿತಾ ಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸುವುದಾಗಿ ಟಾಟಾ ಕುಟುಂಬ ನಿರ್ಧಾರ ಕೈಗೊಂಡಿದೆ. ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ (Gate Way Of India) ಹಡಗಿನಲ್ಲಿ ಮೆರವಣಿಗೆಯ ಮೂಲಕ ಚಿತಾ ಭಸ್ಮವನ್ನು ವಿಸರ್ಜಿಸಲಾಗುವುದು. ಈ ಸಂದರ್ಭದಲ್ಲಿ ಅವರ ಕುಟುಂಬ, ಅವರ ಸ್ನೇಹಿತರು ಸೇರಿದಂತೆ ಇನ್ನಿತರರು ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ರತನ್ ಟಾಟಾ ಮುಂಬೈ ನಗರದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದರು. ಜೊತೆಗೆ ತಮ್ಮ ಜೀವನದ ಬಹುಪಾಲು ದಿನಗಳನ್ನು ಅವರು ಅಲ್ಲಿಯೇ ಕಳೆದಿದ್ದು, ಟಾಟಾ ಗ್ರೂಪ್ಸ್ (Tata Groups) ಎಂಬ ವ್ಯವಹಾರ ಸಾಮ್ರಾಜ್ಯಕ್ಕೆ ಮುಂಬೈನಲ್ಲಿ ಅಡಿಪಾಯ ಹಾಕಿದ್ದರು. ಅರಬ್ಬಿ ಸಮುದ್ರದ ನೀರು ಪ್ರಶಾಂತವಾದ ನೀರು. ಒಬ್ಬ ವ್ಯಕ್ತಿಗೆ ಅಂತಿಮ ವಿಶ್ರಾಂತಿಯನ್ನು ನೀಡುತ್ತದೆ ಎಂಬ ಅಭಿಪ್ರಾಯದೊಂದಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.ಇದನ್ನೂ ಓದಿ: ಭಾರತದಲ್ಲಿರುವ ಶೇಖ್ ಹಸೀನಾ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿ

  • ಕೊಡಗಿನಲ್ಲಿದೆ ರತನ್ ಟಾಟಾ ಒಡೆತನದ ಸಾವಿರಾರು ಎಕರೆ ಕಾಫಿ, ಚಹಾ ತೋಟ!

    ಕೊಡಗಿನಲ್ಲಿದೆ ರತನ್ ಟಾಟಾ ಒಡೆತನದ ಸಾವಿರಾರು ಎಕರೆ ಕಾಫಿ, ಚಹಾ ತೋಟ!

    ಮಡಿಕೇರಿ: ಖ್ಯಾತ ಉದ್ಯಮಿ, ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ (Ratan Tata) ನಿಧನರಾಗಿದ್ದಾರೆ. ಕೊಡಗಿನಲ್ಲಿ (Kodagu) ರತನ್ ಟಾಟಾ ಅವರ ಒಡೆತನದಲ್ಲಿ ಸಾವಿರ ಎಕರೆ ಕಾಫಿ ಹಾಗೂ ಚಹಾ ತೋಟವಿದೆ.

    ಪ್ರಸಿದ್ಧ ಟಾಟಾ ಸಂಸ್ಥೆ ಕೊಡಗು ಸೇರಿ ಹಾಸನ, ಚಿಕ್ಕಮಗಳೂರು, ಪಕ್ಕದ ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಸುಮಾರು 33 ಸಾವಿರ ಎಕರೆ ಕೃಷಿ ಭೂಮಿ ಹೊಂದಿದ್ದು, ಇಲ್ಲಿ ಕಾಫಿ ಹಾಗೂ ಚಹಾ ಬೆಳೆಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಇಲ್ಲಿ ಸಾವಿರಾರು ಮಂದಿ ಕೆಲಸ ಮಾಡಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಹತ್ತರ ಬದಲಾವಣೆ: ಜೈಲನ್ನು 3 ವಿಭಾಗ ಮಾಡಲಿರುವ ಗೃಹ ಇಲಾಖೆ

    ಟಾಟಾ ಕಾಫಿ ಸಂಸ್ಥೆ ಟಾಟಾ ಸಮೂಹದ ಒಂದು ಭಾಗ. ಟಾಟಾ ಕಾಫಿ ವಿಶ್ವದ ಅತಿದೊಡ್ಡ ಸಮಗ್ರ ಕಾಫಿ ಕೃಷಿ ಮತ್ತು ಸಂಸ್ಕರಣಾ ಕಂಪನಿಗಳಲ್ಲಿ ಒಂದಾಗಿದೆ. ಭಾರತೀಯ ಮೂಲದ ಕಾಳು ಮೆಣಸು ಉತ್ಪಾದಿಸುವ ಅತಿದೊಡ್ಡ ಸಂಸ್ಥೆಯಾಗಿದೆ. ಕನ್ಸಲ್ಟೆಂಟ್ ಕಾಫಿ ಸಂಸ್ಥೆಯೊಂದಿಗೆ 2000 ಇಸವಿಯಲ್ಲಿ ಕೊಡಗು ಸೇರಿ ಹಲವು ಕಡೆ ಟಾಟಾ ಸಂಸ್ಥೆ ಕಾಫಿ ತೋಟವನ್ನು ಖರೀದಿಸಿತ್ತು.

    ಕೊಡಗಿನಲ್ಲಿ ಸುಮಾರು 13 ಕಾಫಿ ತೋಟಗಳನ್ನು ಹೊಂದಿದ್ದು, 18 ಸಾವಿರ ಎಕರೆ ಜಮೀನನ್ನು ಸಂಸ್ಥೆ ಹೊಂದಿದೆ ಎನ್ನಲಾಗುತ್ತಿದೆ. ಟಾಟಾ ಸಂಸ್ಥೆಯಿಂದ ಜಿಲ್ಲೆಯಲ್ಲಿ ಅರೇಬಿಕಾ ಹಾಗೂ ರೊಬೆಸ್ಟಾ ಕಾಫಿಯನ್ನು ಬೆಳೆಯಲಾಗುತ್ತಿದ್ದು, ಟಾಟಾ ಕಾಫಿಯ ಅರೇಬಿಕಾ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಬೇಡಿಕೆಯಿದೆ.

    ಕುಶಾಲನಗರದಲ್ಲಿ ಕಾಫಿ ಕ್ಯೂರಿಂಗ್ ಮಾಡಲಾಗುತ್ತಿದ್ದು, ಜಿಲ್ಲೆಯ ವಿವಿಧೆಡೆ ಕೊಯ್ಲು ಮಾಡಿದ ಕಾಫಿಯನ್ನು ಇಲ್ಲಿ ಕ್ಯೂರಿಂಗ್ ಮಾಡಲಾಗುತ್ತದೆ. ಟಾಟಾ ಕಾಫಿ ತೋಟದಲ್ಲಿ ಗೆಸ್ಟ್ ಹೌಸ್ ಕೂಡ ಇದೆ. ಇನ್ನೂ ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯಲ್ಲಿರುವ ಟೀ ಎಸ್ಟೇಟ್ ಸರ್ಕಾರದಿಂದ ಲೀಸ್‌ಗೆ ಪಡೆಯಲಾಗಿದೆ. ಟಾಟಾ ಕಾಫಿಯಲ್ಲಿ ಕೂರ್ಗ್ ಫೌಂಡೇಷನ್ ಸ್ಥಾಪನೆ ಮಾಡಲಾಗಿದ್ದು, ಸಿಆರ್‌ಎಸ್ ಫಂಡ್ ಮೂಲಕ ಆರೋಗ್ಯ ಶಿಬಿರ ಸೇರಿ ಹಲವು ಚಟುವಟಿಕೆ ನಡೆಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ರತನ್ ಟಾಟಾ ತಮ್ಮದೇ ಆದ ಪಾಲುದಾರ ಟಾಟಾ ಕಾಫಿ ಸಂಸ್ಥೆಯ ಸಾವಿರಾರು ಎಕರೆ ಕಾಫಿ ತೋಟವನ್ನು ಹೊಂದಿದ್ದರೂ, ತಮ್ಮ ಸಂಸ್ಥೆಗೆ ಯಾವತ್ತೂ ಭೇಟಿ ನೀಡಿರಲಿಲ್ಲ.ಇದನ್ನೂ ಓದಿ: ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಟೀಂ ಇಂಡಿಯಾ ವೇಗಿ ಸಿರಾಜ್‌

  • 2013 ರಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬಂದಿದ್ದ ರತನ್ ಟಾಟಾ

    2013 ರಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬಂದಿದ್ದ ರತನ್ ಟಾಟಾ

    – ಒಂದು ದಿನ ಕೆಎಲ್‌ಇ ಕಾಲೇಜು ಬಿವಿಬಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಜೊತೆ ಕಾಲ ಕಳೆದಿದ್ದ ಉದ್ಯಮಿ
    – ಇಸ್ಕಾನ್ ಅಡುಗೆ ತಯಾರಿಕಾ ಘಟಕಕ್ಕೂ ಭೇಟಿ

    ಹುಬ್ಬಳ್ಳಿ: ಟಾಟಾ ಉದ್ದಿಮೆ ಸಾಮ್ರಾಜ್ಯವನ್ನು ವಿಶ್ವ ಮಟ್ಟಕ್ಕೆ ಒಯ್ದಿದ್ದ ರತನ್ ಟಾಟಾ (Ratan Tata) ಅಸ್ತಂಗತರಾಗಿದ್ದಾರೆ. ಇವರು ನಡೆದು ಬಂದ ದಾರಿ ಇತರರಿಗೂ ಮಾದರಿ. ರತನ್ ಟಾಟಾ ಅವರಿಗೂ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧವಿದೆ.

    2013 ರಲ್ಲಿ ಹುಬ್ಬಳ್ಳಿಗೆ (Hubballi) ಬಂದಿದ್ದ ರತನ್ ಟಾಟಾ ಒಂದು ದಿನ ಇಲ್ಲಿನ‌ ವಿದ್ಯಾರ್ಥಿಗಳ ಜೊತೆಗೆ ಕಾಲ ಕಳೆದು, ಅವರಿಗೆ ಸ್ಪೂರ್ತಿ ತುಂಬಿದ್ದರು. ಇದನ್ನೂ ಓದಿ: ಟಾಟಾ ಟ್ರಸ್ಟ್‌ ಅಧ್ಯಕ್ಷರಾಗಿ ನೋಯೆಲ್ ಟಾಟಾ ಆಯ್ಕೆ

    ಕೆಎಲ್‌ಇ ವಿದ್ಯಾ ಸಂಸ್ಥೆಯ ಬಿವಿಬಿ ಕಾಲೇಜು ಆವರಣದಲ್ಲಿ 2013 ರ ಜನವರಿ 29 ರಂದು ದೇಶಪಾಂಡೆ ಫೌಂಡೇಶನ್ ‘ಟಿಪ್ಪಿಂಗ್ ಪಾಯಿಂಟ್’ ಎಂಬ ವಿಷಯದೊಂದಿಗೆ ಆಯೋಜಿಸಿದ್ದ ಮೂರು ದಿನಗಳ ಅಭಿವೃದ್ಧಿ ಸಂವಾದ-2013 ಅಧಿವೇಶನದಲ್ಲಿ ಒಂದು ದಿನ ಟಾಟಾ ಅವರು ಭಾಗಿಯಾಗಿದ್ದರು.

    ಈ ವೇಳೆ ಇನ್ಫೋಸಿಸ್‌ನ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ, ಸುಧಾ ಮೂರ್ತಿ ಅವರೊಂದಿಗೆ ನವೋದ್ಯಮ ಸೇರಿದಂತೆ ಹಲವು ವಿಚಾರಗಳ ಕುರಿತು ಮುಕ್ತ ಮನಸ್ಸಿನಿಂದ ಸಂವಾದ ನಡೆಸಿದ್ದರು. ಇದನ್ನೂ ಓದಿ: ಸಕಲ ಸರ್ಕಾರಿ ಗೌರವಗಳೊಂದಿಗೆ ಉದ್ಯಮಿ ರತನ್‌ ಟಾಟಾ ಅಂತ್ಯಕ್ರಿಯೆ

    ಇದಾದ ಬಳಿಕ ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿನ ರಾಯಪುರದಲ್ಲಿರುವ ಇಸ್ಕಾನ್ ಕಿಚನ್‌ಗೆ ಭೇಟಿ ನೀಡಿ, ಅಲ್ಲಿನ ಆಹಾರ ತಯಾರಿಕೆ, ಸರಬರಾಜು ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದರು.

  • ಟಾಟಾ ಟ್ರಸ್ಟ್‌ ಅಧ್ಯಕ್ಷರಾಗಿ ನೋಯೆಲ್ ಟಾಟಾ ಆಯ್ಕೆ

    ಟಾಟಾ ಟ್ರಸ್ಟ್‌ ಅಧ್ಯಕ್ಷರಾಗಿ ನೋಯೆಲ್ ಟಾಟಾ ಆಯ್ಕೆ

    ಮುಂಬೈ: ಟಾಟಾ ಟ್ರಸ್ಟ್‌ (Tata Trust) ಅಧ್ಯಕ್ಷ ಸ್ಥಾನಕ್ಕೆ ರತನ್ ಟಾಟಾ (Ratan Tata) ಅವರ ಮಲಸಹೋದರ ಹಾಗೂ ಟ್ರೆಂಟ್ ಅಧ್ಯಕ್ಷ ನೋಯೆಲ್ ಟಾಟಾ (Noel Tata) ಅವರನ್ನು ಆಯ್ಕೆ ಮಾಡಲಾಗಿದೆ.

    67 ವರ್ಷದ ನೋಯೆಲ್ ಈಗಾಗಲೇ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿದ್ದಾರೆ, ಇದು ಟಾಟಾ ಸನ್ಸ್‌ನಲ್ಲಿ 66% ಪಾಲನ್ನು ಹೊಂದಿದೆ. 2019ರಲ್ಲಿ ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿ ಸೇರಿಕೊಂಡಿದ್ದ ಇವರು 2022ರಲ್ಲಿ ಸರ್ ದೊರಾಬ್ಜಿ ಟ್ರಸ್ಟ್ ಮಂಡಳಿಗೂ ನೇಮಕಗೊಂಡಿದ್ದರು.

    ರತನ್‌ ಟಾಟಾ ಅವರ ತಂದೆ ನೇವಲ್ ಎರಡು ಮದುವೆಯಾಗಿದ್ದರು. ಮೊದಲ ಪತ್ನಿ ಸೂನಿ ಕಮಿಶರಿಯಟ್, ಎರಡನೇ ಪತ್ನಿ ಸ್ವಿಟ್ಜರ್ಲೆಂಡ್‌ನ ಉದ್ಯಮಿ ಸಿಮೋನ್ ಡ್ಯುನೊಯರ್‌. ನೇವಲ್ ಮತ್ತು ಸೂನಿ ದಂಪತಿಗೆ ರತನ್‌ ಮತ್ತು ಜಿಮ್ಮಿ ಟಾಟಾ ಜನಿಸಿದರು. 1940 ರದಶಕದಲ್ಲಿ ನೇವಲ್ ಮತ್ತು ಸೂನಿ ದಂಪತಿ ಬೇರ್ಪಟ್ಟಿದ್ದರು. ಬೇರ್ಪಟ್ಟ ನಂತರ ಸಿಮೋನ್ ಡ್ಯುನೊಯರ್‌ ಅವರನ್ನು 1955 ರಲ್ಲಿ ನೇವಲ್ ವಿವಾಹವಾದರು. ಈ ದಂಪತಿಯ ಪುತ್ರನೇ ನೇಯಲ್‌ ಟಾಟಾ.

    ಟಾಟಾ ಟ್ರಸ್ಟ್‌ನ ಉತ್ತರಾಧಿಕಾರಿಯಾಗಿ ನೋಯೆಲ್ ಟಾಟಾ ಅವರನ್ನೇ ಆಯ್ಕೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಈಗ ಅಧಿಕೃತವಾಗಿ ಹೆಸರು ಘೋಷಣೆಯಾಗಿದೆ. ನೋಯೆಲ್ ಅವರನ್ನು ಆಯ್ಕೆ ಮಾಡುವ ಮೂಲಕ ಟಾಟಾ ಕುಟುಂಬದ ಸದಸ್ಯರ ಬಳಿಯೇ ಅಧಿಕಾರ ಉಳಿಸಿದಂತೆ ಆಗುತ್ತದೆ. ಇದನ್ನೂ ಓದಿ: ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್‌ – ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?

    ನೇವಲ್‌ ಸಾಧನೆ ಏನು?
    ನೋಯೆಲ್‌ ಅವರು ಟ್ರೆಂಟ್ ಮತ್ತು ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್‌ನ ಅಧ್ಯಕ್ಷರಾಗಿದ್ದಾರೆ. ನೋಯೆಲ್ ಅವರು ಟಾಟಾ ಇಂಟರ್‌ನ್ಯಾಶನಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಮತ್ತು ಟೈಟಾನ್ ಕಂಪನಿ ಮತ್ತು ಟಾಟಾ ಸ್ಟೀಲ್‌ನ ಉಪಾಧ್ಯಕ್ಷರಾಗಿಯೂ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ.

    ನೋಯೆಲ್ ಅವರು ನೇವಲ್ ಟಾಟಾ ಮತ್ತು ಸಿಮೋನ್ ಟಾಟಾ ಅವರ ಮಗ. ನೋಯೆಲ್ ನೇವಲ್ ಟಾಟಾ ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಹೋದರಿ ಆಲೂ ಮಿಸ್ತ್ರಿ ಅವರನ್ನು ವಿವಾಹವಾಗಿದ್ದಾರೆ. 2016 ರಲ್ಲಿ ಸೈರಸ್ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಯಿತು. ನಂತರ ರತನ್ ಟಾಟಾ ಅವರು ಫೆಬ್ರವರಿ 2017 ರವರೆಗೆ ನಾಲ್ಕು ತಿಂಗಳ ಕಾಲ ಗ್ರೂಪಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಇದನ್ನೂ ಓದಿ: ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

    ನೋಯೆಲ್ ಅವರು ಸಸೆಕ್ಸ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ. 2003 ರಲ್ಲಿ ಟೈಟಾನ್ ಇಂಡಸ್ಟ್ರೀಸ್ ಮತ್ತು ವೋಲ್ಟಾಸ್‌ನ ನಿರ್ದೇಶಕರಾಗಿ ನೋಯೆಲ್‌ ಆಯ್ಕೆ ಆಗಿದ್ದರು.

     

  • ಸಕಲ ಸರ್ಕಾರಿ ಗೌರವಗಳೊಂದಿಗೆ ಉದ್ಯಮಿ ರತನ್‌ ಟಾಟಾ ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವಗಳೊಂದಿಗೆ ಉದ್ಯಮಿ ರತನ್‌ ಟಾಟಾ ಅಂತ್ಯಕ್ರಿಯೆ

    ಮುಂಬೈ: ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ಅಂತಿಮ ವಿಧಿಗಳನ್ನು ಗುರುವಾರ ಮಧ್ಯಾಹ್ನ ಮುಂಬೈನ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

    ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸಲು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಸೇರಿದ್ದರು. ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲು ಲಾವೋಸ್‌ಗೆ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದಾರೆ. ಹೀಗಾಗಿ ಅವರ ಪರವಾಗಿ ಅಮಿತ್‌ ಶಾ ಅವರು ರತನ್ ಟಾಟಾ ಅಂತ್ಯಕ್ರಿಯೆ ವೇಳೆ ಪಾಲ್ಗೊಂಡಿದ್ದರು. ಇದನ್ನೂ ಓದಿ: ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್

    ಕೇಂದ್ರ ಗೃಹ ಸಚಿವರೊಂದಿಗೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಡಿಸಿಎಂ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಕೂಡ ಇದ್ದರು.

    ನಾರಿಮನ್‌ ಪಾಯಿಂಟ್‌ನಲ್ಲಿರುವ ನ್ಯಾಷನಲ್‌ ಸೆಂಟರ್‌ ಫಾರ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ನಲ್ಲಿ ರತನ್‌ ಟಾಟಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪಾರ್ಥಿವ ಶರೀರವನ್ನು 12 ಕಿ.ಮೀ ದೂರದ ವರ್ಲಿಯಲ್ಲಿರುವ ಸ್ಮಶಾನಕ್ಕೆ ಮೆರವಣಿಗೆ ಮೂಲಕ ಸಾಗಿಸಲಾಯಿತು. ಟಾಟಾ ಬ್ರ್ಯಾಂಡ್‌ ಅನ್ನು ಜಾಗತಿಕ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸಿದ ಮುಂಬೈನಲ್ಲಿ ಹುಟ್ಟಿ ಬೆಳೆದ ರತನ್‌ರಿಗೆ ಸಾವಿರಾರು ಜನರು ರಸ್ತೆ ಇಕ್ಕೆಲಗಳಲ್ಲಿ ನಿಂತು ವಿದಾಯ ಹೇಳಿದರು. ಇದನ್ನೂ ಓದಿ: ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

    ಟಾಟಾ ಅವರ ಸರಳತೆ, ಪ್ರಾಮಾಣಿಕತೆ ಮತ್ತು ಮಾನವೀಯತೆಗಾಗಿ ಭಾರತ ಮತ್ತು ವಿದೇಶಗಳಲ್ಲಿ ಮೆಚ್ಚುಗೆ ಪಡೆದ ಉದ್ಯಮಿ ಮತ್ತು ಲೋಕೋಪಕಾರಿಯ ಗೌರವಾರ್ಥವಾಗಿ ಮಹಾರಾಷ್ಟ್ರವು ಶೋಕಾಚರಣೆಯ ದಿನ ಎಂದು ಘೋಷಿಸಿದೆ.

  • ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್

    ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್

    ಭಾರತದ ಖ್ಯಾತ ಉದ್ಯಮಿ, ಕರುಣಾಮಯಿ, ಅಜಾತಶತ್ರು ಎನಿಸಿಕೊಂಡಿದ್ದ ರತನ್ ಟಾಟಾ ನಿಧನ ಸುದ್ದಿ ಎಲ್ಲರಿಗೂ ಶಾಕ್ ನೀಡಿದೆ. ಟಾಟಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ಅವರು ಇಂದು ನಮ್ಮ ಜೊತೆಯಿಲ್ಲ. ಇದಕ್ಕೆ ಚಿತ್ರರಂಗದವರು ಸಂತಾಪ ಸೂಚಿಸಿದ್ದಾರೆ. ಇನ್ನೂ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ರತನ್ ಟಾಟಾ (Ratan Tata) ನಿಧನಕ್ಕೆ ಭಾವುಕವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ವಕೀಲ್ ಸಾಬ್ ಗೆಟಪ್‌ನಲ್ಲಿ ರಾಕಿ ಭಾಯ್- ಇದು ‘ಟಾಕ್ಸಿಕ್‌’ ಚಿತ್ರದಲ್ಲಿನ ಯಶ್‌ ಕ್ಯಾರೆಕ್ಟರ್?

    ತಮ್ಮ ದೂರದೃಷ್ಟಿ ಮತ್ತು ಉತ್ಸಾಹದಿಂದ ಭಾರತವನ್ನು ಜಾಗತಿಕ ಭೂಪಟದಲ್ಲಿ ಇರಿಸಿದ ಮಹಾನ್ ಐತಿಹಾಸಿಕ ಐಕಾನ್. ಸಾವಿರಾರು ಕೈಗಾರಿಕೋದ್ಯಮಿಗಳಿಗೆ ಸ್ಫೂರ್ತಿ ನೀಡಿದ ವ್ಯಕ್ತಿ. ಹಲವು ತಲೆಮಾರುಗಳಿಗೆ ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸಿದ ವ್ಯಕ್ತಿಯಾಗಿದ್ದರು. ಎಲ್ಲರ ಪ್ರೀತಿ ಮತ್ತು ಗೌರವಕ್ಕೆ ಪಾತ್ರರಾಗಿದ್ದರು. ಅವರಿಗೆ ನನ್ನ ನಮಸ್ಥಾರಗಳು. ಈ ಮಹಾನ್ ವ್ಯಕ್ತಿಯೊಂದಿಗೆ ಕಳೆದ ಪ್ರತಿಯೊಂದು ಕ್ಷಣವನ್ನು ಎಂದೆಂದಿಗೂ ಸ್ಮರಿಸುತ್ತೇನೆ. ಭಾರತದ ನಿಜವಾದ ಮಗ ಇನ್ನಿಲ್ಲ. ರೆಸ್ಟ್ ಇನ್ ಪೀಸ್ ಎಂದು ತಲೈವಾ ಭಾವುಕವಾಗಿ ಬರೆದುಕೊಂಡಿದ್ದಾರೆ.

    ಈ ಮೂಲಕ ರತನ್ ಟಾಟಾ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅವರ ನಿಧನ ತಲೈವಾಗೂ ಶಾಕ್ ಕೊಟ್ಟಿದೆ. ಹಾಗಾಗಿ ಉದ್ಯಮಿಯ ನಿಧನಕ್ಕೆ ತಲೈವಾ ಕಂಬನಿ ಮಿಡಿದಿದ್ದಾರೆ.

  • ಟಾಟಾ ಅವರ ಅಂತ್ಯಕ್ರಿಯೆ ವೇಳೆ ಅಂತಿಮ ನಮನ ಸಲ್ಲಿಸಿದ ʻಗೋವಾʼ!

    ಟಾಟಾ ಅವರ ಅಂತ್ಯಕ್ರಿಯೆ ವೇಳೆ ಅಂತಿಮ ನಮನ ಸಲ್ಲಿಸಿದ ʻಗೋವಾʼ!

    ನವದೆಹಲಿ: ಕೈಗಾರಿಕೋದ್ಯಮಿ ರತನ್ ಟಾಟಾರವರ (Ratan Tata, Goa, Dog) ಅಚ್ಚುಮೆಚ್ಚಿನ ನಾಯಿ (Dog) ‘ಗೋವಾ’ (Goa) ಅವರ ಅಂತ್ಯಕ್ರಿಯೆಯಲ್ಲಿ ಅಂತಿಮ ನಮನ ಸಲ್ಲಿಸಿದೆ. ಅವರ ಟಾಟಾ ನಾಯಿಗೆ ‘ಗೋವಾ’ ಎಂದು ಏಕೆ ಹೆಸರಿಟ್ಟರು ಎಂಬುದರ ಹಿಂದೆ ಒಂದು ವಿಶೇಷ ಕಥೆಯಿದೆ.

    ಟಾಟಾ ಅವರು ನಾಯಿಗಳ ಬಗ್ಗೆ ವಿಶೇಷ ಸಹಾನುಭೂತಿ ಹೊಂದಿದ್ದರು. ಬೀದಿ ಪ್ರಾಣಿಗಳ ಕಲ್ಯಾಣಕ್ಕಾಗಿ ಪ್ರತಿಪಾದಿಸಿದ್ದರು. ಒಮ್ಮೆ ಅವರು ಗೋವಾದಲ್ಲಿದ್ದಾಗ ಬೀದಿ ನಾಯಿಯೊಂದು ಅವರ ಜೊತೆಯಲ್ಲಿ ಬರಲು ಆರಂಭಿಸಿತು. ಅವರು ಆ ನಾಯಿಯನ್ನು ಮುಂಬೈಗೆ ತಂದು ಸಾಕಲು ನಿರ್ಧರಿಸಿದರು. ಬಳಿಕ ಅದಕ್ಕೆ ‘ಗೋವಾ’ ಎಂದು ಹೆಸರಿಟ್ಟರು ಮತ್ತು ಮುಂಬೈನ ಬಾಂಬೆ ಹೌಸ್‌ನಲ್ಲಿ ಇತರ ನಾಯಿಗಳೊಂದಿಗೆ ʻಗೋವಾʼ ವಾಸಿಸುತ್ತಿದೆ.

     

    View this post on Instagram

     

    A post shared by Ratan Tata (@ratantata)

    ಕಳೆದ 11 ವರ್ಷಗಳಿಂದ ʻಗೋವಾʼ ನಮ್ಮೊಂದಿಗಿದ್ದಾನೆ. ಗೋವಾದಿಂದ ವಿಹಾರಕ್ಕೆಂದು ಹೋದಾಗ ಅಲ್ಲಿನ ಸೆಕ್ಯೂರಿಟಿ ಗಾರ್ಡ್‌ಗಳು ಈ ನಾಯಿಯನ್ನು ಕರೆತಂದಿದ್ದರು. ರತನ್ ಟಾಟಾ ಅವರು ಇದನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ‘ಗೋವಾ’ ಕೇರ್‌ಟೇಕರ್ ಹೇಳಿದ್ದಾರೆ.

    ಟಾಟಾ ಅವರು ‘ಗೋವಾ’ ಮತ್ತು ಇತರ ನಾಯಿಗಳೊಂದಿಗೆ ತಮ್ಮ ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ನಾಯಿಗಳೊಂದಿಗೆ ಅವರ ಸಂಬಂಧ ಗಾಢವಾಗಿತ್ತು.

    2018 ರಲ್ಲಿ, ಅವರು ಬ್ರಿಟಿಷ್ ರಾಜಮನೆತನದಿಂದ ಪ್ರತಿಷ್ಠಿತ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಬೇಕಿತ್ತು. ಕಿಂಗ್ ಚಾರ್ಲ್ಸ್ III (ಆಗಿನ ಪ್ರಿನ್ಸ್ ಚಾರ್ಲ್ಸ್) ಆಯೋಜಿಸಿದ ಮತ್ತು ಬ್ರಿಟಿಷ್ ಏಷ್ಯನ್ ಟ್ರಸ್ಟ್ ಆಯೋಜಿಸಿದ್ದ ಸಮಾರಂಭವು ಟಾಟಾ ಅವರ ಲೋಕೋಪಕಾರಿ ಕೊಡುಗೆಗಳಿಗಾಗಿ ಅವರನ್ನು ಗೌರವಿಸಲು ನಿರ್ಧರಿಸಲಾಯಿತು.

    ಮೊದಲು ಟಾಟಾ ಅವರು ಸಮಾರಂಭಕ್ಕೆ ಹಾಜರಾಗುವುದಾಗಿ ತಿಳಿಸಿದ್ದರು. ಬಳಿಕ ಅವರು ತಮ್ಮ ಅನಾರೋಗ್ಯದ ನಾಯಿಯನ್ನು ನೋಡಿಕೊಳ್ಳಲು ಮನೆಯಲ್ಲಿಯೇ ಇರಲು ನಿರ್ಧರಿಸಿದರು. ಈ ಕಥೆಯನ್ನು ಉದ್ಯಮಿ ಸುಹೇಲ್ ಸೇಥ್ ಅವರು ಹಂಚಿಕೊಂಡಿದ್ದರು.

    ಟಾಟಾ ಅವರ ಅನೇಕ ಯೋಜನೆಗಳಲ್ಲಿ, ಮುಂಬೈನಲ್ಲಿರುವ ಸಣ್ಣ ಪ್ರಾಣಿ ಆಸ್ಪತ್ರೆ (SAHM) ಸಹ ಹೌದು. ಇದು ಪ್ರಾಣಿಗಳನ್ನು ನೋಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.

  • ನಾವು ರಾಜಕೀಯ ಸಭೆ ಮಾಡಿಲ್ಲ, ನಮ್ಮ ಮೇಲಿನ ಆಪಾದನೆಯಿಂದ ಬೇಜಾರಾಗಿದೆ: ಪರಮೇಶ್ವರ್

    ನಾವು ರಾಜಕೀಯ ಸಭೆ ಮಾಡಿಲ್ಲ, ನಮ್ಮ ಮೇಲಿನ ಆಪಾದನೆಯಿಂದ ಬೇಜಾರಾಗಿದೆ: ಪರಮೇಶ್ವರ್

    ಬೆಂಗಳೂರು: ನಾನಾಗಲಿ, ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಅವರಾಗಲಿ ಮುಖ್ಯಮಂತ್ರಿ ಪದವಿ ಬಗ್ಗೆ ಯಾವತ್ತು ಚರ್ಚೆ ಮಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಸ್ಪಷ್ಟಪಡಿಸಿದರು.

    ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮ ಸ್ನೇಹಿತರು ಕೇಳಿದಾಗ ಐದು ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (CM Siddaramaiah) ಅವರು ಮುಂದುವರೆಯುತ್ತಾರೆ ಎಂದು ಅನೇಕ ಸಲ ಹೇಳಿದ್ದೇನೆ. ನಿನ್ನೆ ಮೈಸೂರಿನಲ್ಲಿಯೂ (Mysuru) ಸಹ ಇದೇ ಮಾತನ್ನು ಹೇಳಿದ್ದೇನೆ. ನಾವು ಯಾರು ಸಹ ಮುಖ್ಯಮಂತ್ರಿಯನ್ನು ಬದಲಾಯಿಸಿ, ಬೇರೆಯವರನ್ನು ಮಾಡಿ ಎಂದು ಮಾತನಾಡಿಲ್ಲ ಎಂದರು. ಇದನ್ನೂ ಓದಿ: ಒಂದು ಯುಗ ಈಗಷ್ಟೇ ಊರುಳಿತು: ರತನ್ ಟಾಟಾ ನಿಧನಕ್ಕೆ ಅಮಿತಾಬ್ ಬಚ್ಚನ್ ಸಂತಾಪ

    ಇನ್ಮುಂದೆ ನಾನು ವೈಯಕ್ತಿಕವಾಗಿ ಮುಖ್ಯಮಂತ್ರಿ ವಿಚಾರದಲ್ಲಿ ನೀವು ಕೇಳಿದರು ಪ್ರತಿಕ್ರಿಯಿಸುವುದಿಲ್ಲ. ಕೆಲವು ವಿಚಾರಗಳಲ್ಲಿ ಅಗತ್ಯ ಇದ್ದರೆ ಭೇಟಿ ಮಾಡುತ್ತೇವೆ. ಅನವಶ್ಯಕವಾಗಿ ಡಿನ್ನರ್ ಮೀಟಿಂಗ್, ರಾಜಕೀಯ ಸಭೆಗಳನ್ನು ನಾವು ಈವರೆಗೂ ಮಾಡಿಲ್ಲ. ಮುಂದೆಯೋ ಮಾಡೋದಿಲ್ಲ. ಇದು ನನ್ನ ಸ್ಪಷ್ಟೀಕರಣ. ಏನೂ ಇಲ್ಲದೇ ಅಪಾದಿತರ ಸ್ಥಾನದಲ್ಲಿ ನಿಲ್ಲಿಸಿದರೆ ನಮಗೆ ಬೇಜಾರಾಗುವುದಿಲ್ಲವೇ? ನಾವು ಜವಾಬ್ದಾರಿ ಇರುವವರು. ಸುಮ್ಮನೇ ಹುಡುಗಾಟಿಕೆ ಮಾಡುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ, ನನಗೂ ಜವಾಬ್ದಾರಿ ಇದೆ ಎಂದು ಹೇಳಿದರು. ಇದನ್ನೂ ಓದಿ: ಉರಿನತ್ತ ಜನ | ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌

    ವಿಪಕ್ಷ ನಾಯಕ ಆರ್.ಅಶೋಕ್ (R Ashok) ಆರೋಪದ ಕುರಿತು ಪ್ರತಿಕ್ರಿಯಿಸಿ, ಸಿದ್ದಗಂಗಾ ಮಠಕ್ಕೂ ನಮಗೂ ಇರುವ ಸಂಬಂಧವೇ ಬೇರೆ. ಇತ್ತೀಚೆಗೆ ನಾನು ಮಠಕ್ಕೆ ಹೋಗೇ ಇಲ್ಲ. ಸಿದ್ದಗಂಗಾ ಮಠಕ್ಕೆ ಹೋದರೆ ಸ್ವಾಮೀಜಿಯವರ ಗದ್ದುಗೆಗೆ ಮತ್ತು ಸಿದ್ದಲಿಂಗ ಸ್ವಾಮೀಜಿಯವರಿಗೆ ನಮಸ್ಕರಿಸಿ ಬರುತ್ತೇನೆ. ನನ್ನ ತಂದೆಯವರ ಕಾಲದಿಂದ ದೊಡ್ಡ ಸ್ವಾಮೀಜಿಯವರು ನಮಗೆಲ್ಲ ಆದರ್ಶ. ಮಠಕ್ಕೆ ಹೋಗಿ ರಾಜಕೀಯ ಮಾತಾಡುವುದಿಲ್ಲ. ಸಿದ್ದಗಂಗಾ ಮಠಕ್ಕೂ ನಮ್ಮ ಕುಟುಂಬಕ್ಕೂ ಅಪಾರವಾದ ಸಂಬಂಧ. ಮಠಕ್ಕೆ ಹೋದಾಗಲೆಲ್ಲ ಮುಖ್ಯಮಂತ್ರಿ ಆಗಬೇಕೆಂದು ಪೂಜೆ ಮಾಡುವುದಿಲ್ಲ ಎಂದು ನುಡಿದರು. ಇದನ್ನೂ ಓದಿ: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಪೂರ್ಣ – ಅ.14 ರಂದು ಆದೇಶ ಪ್ರಕಟ

    ಕೋವಿಡ್ ಸಂದರ್ಭದಲ್ಲಿನ ಹಗರಣದ ತನಿಖೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕಬೇಕು ಎಂದು ಹೇಳುತ್ತಿದ್ದಾರೆ. ಹಿಂದಿನ ಸರ್ಕಾರದಲ್ಲಿ ನಡೆದ ಅಕ್ರಮ ಪ್ರಕರಣಗಳ ತನಿಖೆಯ ಪರಿಶೀಲನೆ ಸಮಿತಿಯ ಸಭೆಯನ್ನು ನಿನ್ನೆ ನಡೆಸಿದ್ದೇನೆ. ಹಲವು ವಿಚಾರಗಳನ್ನು ಚರ್ಚಿಸಲಾಗಿದೆ. ಕೋವಿಡ್ ತನಿಖೆಯ ಪ್ರಕರಣಕ್ಕೆ ಪ್ರತ್ಯೇಕ ಸಮಿತಿ ಮಾಡಿರುವುದರಿಂದ ವಿಷಯ ನಮ್ಮ ಮುಂದೆ ಚರ್ಚೆಗೆ ಬಂದಿಲ್ಲ ಎಂದರು. ಇದನ್ನೂ ಓದಿ: ರಾಜಕೀಯಕ್ಕಾಗಿ ಕಾಂಗ್ರೆಸ್ ಪಕ್ಷ ದಲಿತ ಕಾರ್ಡ್ ಪ್ಲೇ ಮಾಡ್ತಿದೆ – ಛಲವಾದಿ ನಾರಾಯಣಸ್ವಾಮಿ

    ಬಿಜೆಪಿ (BJP) ಆಡಳಿತದಲ್ಲಿ ನಡೆದ ಹಗರಣಗಳ ತನಿಖೆ ಕೆಲವು ಕೊನೆ ಹಂತದಲ್ಲಿವೆ. ಪೂರ್ಣಗೊಂಡ ಬಳಿಕ ವರದಿ ಸಲ್ಲಿಸಬೇಕಾಗುತ್ತದೆ. ಬೇರೆಬೇರೆ ಸಂದರ್ಭದಲ್ಲಿ ಆಗಿರುವ ಪ್ರಕರಣಗಳು ಇವೆ. ಎಲ್ಲ ಪ್ರಕರಣಗಳ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ವಕೀಲ್ ಸಾಬ್ ಗೆಟಪ್‌ನಲ್ಲಿ ರಾಕಿ ಭಾಯ್- ಇದು ‘ಟಾಕ್ಸಿಕ್‌’ ಚಿತ್ರದಲ್ಲಿನ ಯಶ್‌ ಕ್ಯಾರೆಕ್ಟರ್?

    ರತನ್ ಟಾಟಾ ನಿಧನಕ್ಕೆ ಸಂತಾಪ:
    ರತನ್ ಟಾಟಾ ಅವರು ದೇಶಕ್ಕೆ ಅತ್ಯಂತ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರು ತೆಗೆದುಕೊಂಡಂತಹ ಅನೇಕ ನಿರ್ಧಾರಗಳು, ಕೈಗಾರಿಕೆಗಳು ಭಾರತವನ್ನೇ ಪ್ರತಿನಿಧಿಸುವಂತೆ ಕಟ್ಟಿದ್ದಾರೆ. ಅತಿದೊಡ್ಡ ಮಾನವತಾ ವ್ಯಕ್ತಿ. ಅನೇಕ ರೀತಿಯಲ್ಲಿ ಸಮಾಜಕ್ಕೆ ಸೇವೆ ಮಾಡುವುದು, ಅವರಿಗೆ ಬಂದಂತಹ ಲಾಭದಲ್ಲಿ ವಿದ್ಯಾರ್ಥಿಗಳಿಗೆ, ಕಷ್ಟದಲ್ಲಿರುವ ಸಮುದಾಯಗಳಿಗೆ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ 1,500 ಕೋಟಿ ರೂ. ಸಹಾಯ ಮಾಡಿರುವುದನ್ನು ಸ್ಮರಿಸಬೇಕಿದೆ ಎಂದರು. ಇದನ್ನೂ ಓದಿ: ಬೈಕ್ ಮೆಕಾನಿಕ್ ರಾತ್ರೋರಾತ್ರಿ ಕೋಟ್ಯಧಿಪತಿ – 25 ಕೋಟಿ ಬಹುಮಾನ ಗೆದ್ದ ಮಂಡ್ಯದ ಗಂಡು

    ಅವರನ್ನು ದೇಶ, ಸಮಾಜ ಕಳೆದುಕೊಂಡಿದೆ. ಇದು ನಮಗೆ ಆದ ನಷ್ಟ. ಅದನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ರತನ್ ಟಾಟಾ (Ratan Tata) ಸೇವೆಯನ್ನು ಸೂರ್ಯ ಚಂದ್ರ ಇರುವವರೆಗೂ ದೇಶ ಮರೆಯುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನ್ಯಾನೋ ಕಾರು ತಯಾರಿಸಿದ್ದು ಯಾಕೆ? ಪಶ್ಚಿಮ ಬಂಗಾಳದಿಂದ ಗುಜರಾತ್‌ಗೆ ಘಟಕ ಶಿಫ್ಟ್‌ ಆಗಿದ್ದು ಯಾಕೆ?

  • ಒಂದು ಯುಗ ಈಗಷ್ಟೇ ಊರುಳಿತು: ರತನ್ ಟಾಟಾ ನಿಧನಕ್ಕೆ ಅಮಿತಾಬ್ ಬಚ್ಚನ್ ಸಂತಾಪ

    ಒಂದು ಯುಗ ಈಗಷ್ಟೇ ಊರುಳಿತು: ರತನ್ ಟಾಟಾ ನಿಧನಕ್ಕೆ ಅಮಿತಾಬ್ ಬಚ್ಚನ್ ಸಂತಾಪ

    ಮುಂಬೈ: ಭಾರತದ ಖ್ಯಾತ ಉದ್ಯಮಿ, ಟಾಟಾಸನ್ಸ್‌ನ (Tata Sons) ಗೌರವ ಅಧ್ಯಕ್ಷ ರತನ್ ಟಾಟಾ (Ratan Tata) ಅವರ ನಿಧನಕ್ಕೆ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ (Amitabh Bachchan) ಸಂತಾಪ ಸೂಚಿಸಿದ್ದಾರೆ.

    ರತನ್ ಟಾಟಾ ಅವರೊಂದಿಗೆ ಏತ್‌ಬಾರ್ ಎಂಬ ಸಿನಿಮಾದಲ್ಲಿ ಸಹ ನಿರ್ಮಾಪಕನಾಗಿ ಕೆಲಸ ಮಾಡಿದ್ದೆ. ಖ್ಯಾತ ಉದ್ಯಮಿಯೊಂದಿಗಿನ ನೆನಪು ಅಮರವಾದದ್ದು ಎಂದು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರತನ್ ಟಾಟಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

    ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಮಿತಾಬ್ ಬಚ್ಚನ್ ಸಂತಾಪ ಸೂಚಿಸಿದ್ದಾರೆ. ಒಂದು ಯುಗ ಈಗಷ್ಟೇ ಊರುಳಿತು. ಅವರ ನಮ್ರತೆ, ಅವರ ಮಹಾನ್ ಸಂಕಲ್ಪ, ಅವರ ದೂರದೃಷ್ಟಿ ಹಾಗೂ ರಾಷ್ಟ್ರಕ್ಕೆ ಅತ್ಯುತ್ತಮವಾದದ್ದನ್ನು ಸಾಧಿಸುವ ಅವರ ಸಂಕಲ್ಪ, ಎಂದಿಗೂ ಹೆಮ್ಮೆ ತರುವಂತದ್ದು. ಸಾಮಾನ್ಯ ಮಾನವೀಯ ಕಾರಣಗಳಿಗಾಗಿ ರತನ್ ಟಾಟಾ ಅವರೊಂದಿಗೆ ನನಗೆ ಕೆಲಸ ಮಾಡಲು ಅವಕಾಶ ಸಿಕ್ಕದ್ದು ನನಗೆ ಅದೊಂದು ದೊಡ್ಡ ಗೌರವವಾಗಿದೆ. ಈ ದಿನ ತುಂಬಾ ದು:ಖವಾದ ದಿನ. ನನ್ನ ನಮನಗಳು ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ನಿಮ್ಮ ಆತ್ಮ ನಕ್ಷತ್ರಗಳಾಗಿ ಭೂಮಿಗೆ ಬರಲಿ: ರತನ್ ಟಾಟಾ ನಿಧನಕ್ಕೆ ನಿತ್ಯಾ ಮೆನನ್ ಭಾವುಕ

     

    View this post on Instagram

     

    A post shared by Amitabh Bachchan (@amitabhbachchan)

    ಜೊತೆಗೆ ಕಮಲ್ ಹಾಸನ್ ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ರತನ್ ಟಾಟಾ ಜಿ ನನ್ನ ಪರ್ಸನಲ್ ಹೀರೋ. ನನ್ನ ಜೀವನದುದ್ದಕ್ಕೂ ನಾನು ಅವರನ್ನು ಅನುಕರಿಸಲು ಪ್ರಯತ್ನಿಸಿದ್ದೇನೆ. ರಾಷ್ಟ್ರ ನಿರ್ಮಾಣದಲ್ಲಿ ಅವರು ತಮ್ಮ ಕೊಡುಗೆಗಳನ್ನು ಶಾಶ್ವತವಾಗಿ ಕೆತ್ತನೆ ಮಾಡಿದ್ದಾರೆ. ಅವರ ನಿಜವಾದ ಶ್ರೀಮಂತಿಕೆ ಭೌತಿಕ ಸಂಪತ್ತಿನಲ್ಲಿ ಅಲ್ಲ. ಆದರೆ ಅವರ ನೈತಿಕತೆ, ಸಮಗ್ರತೆ, ನಮ್ರತೆ ಮತ್ತು ದೇಶಭಕ್ತಿಯಲ್ಲಿದೆ ಎಂದು ಬರೆದುಕೊಂಡಿದ್ದಾರೆ.

    ಅಮಿತಾಬ್ ಬಚ್ಚನ್ ಸೇರಿದಂತೆ ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ಸಲ್ಮಾನ್ ಖಾನ್, ವರುಣ್ ಧವನ್ ಮುಂತಾದ ನಟ-ನಟಿಯರು ಸಂತಾಪ ಸೂಚಿಸಿದ್ದು, ಕಮಲ್ ಹಾಸನ್, ಜೂನಿಯರ್ ಎನ್‌ಟಿಆರ್, ರಾಣಾ ದಗ್ಗುಬಾಟಿ ಕೂಡ ಪೋಸ್ಟ್‌ನ್ನು  ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಉರಿನತ್ತ ಜನ | ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಮ್‌