Tag: rat

  • ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟ – ಬೆಕ್ಕು ಸಾಕಿದ ಪೊಲೀಸರು

    ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟ – ಬೆಕ್ಕು ಸಾಕಿದ ಪೊಲೀಸರು

    ಚಿಕ್ಕಬಳ್ಳಾಪುರ: ಇಲಿಗಳ ಕಾಟದಿಂದ ಹೈರಾಣಾದ ಪೊಲೀಸರು ಇಲಿಗಳ ಕಾಟ ತಪ್ಪಿಸಲು ಬೆಕ್ಕಿನ ಮೊರೆ ಹೋದ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ನಗರ ಹೊರವಲಯದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ಪೊಲೀಸ್ ಠಾಣೆಯಲ್ಲಿನ ದಾಖಲೆಗಳನ್ನು ತಿಂದು ತೇಗಿ ಹಾಳು ಮಾಡುತ್ತಿವೆ. ಇದರಿಂದ ಇಲಿಗಳ ಕಾಟಕ್ಕೆ ಹೈರಾಣಾದ ಪೊಲೀಸರು ಈಗ ಬೆಕ್ಕೊಂದನ್ನು ಸಾಕುತ್ತಿದ್ದಾರೆ. ಈ ಮೂಲಕ ಇಲಿಗಳನ್ನು ಮಟ್ಟಹಾಕಲು ಮುಂದಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಅಪಘಾತ- 9 ಮಂದಿ ದುರ್ಮರಣ

    ಪೊಲೀಸ್ ಠಾಣೆಯಲ್ಲಿ ಪೊಲೀಸರ ಜೊತೆ ರಾಜಾರೋಷವಾಗಿ ಒಡಾಡುತ್ತಿರುವ ಬೆಕ್ಕು ಇಲಿಗಳ ಬೇಟೆ ಶುರು ಮಾಡಿದೆ. ಬೆಕ್ಕಿನ ಧ್ವನಿ ಕೇಳಿ ಇಲಿಗಳು ಪರಾರಿಯಾಗ್ತಿದ್ದು, ಪೊಲೀಸರ ಪ್ಲಾನ್ ಸಕ್ಸಸ್ ಆಗಿದೆ. ಪೊಲೀಸರು ಕಳೆದ 1 ತಿಂಗಳ ಹಿಂದೆ ಬೆಕ್ಕಿನ ಮರಿ ಒಂದನ್ನು ತಂದು ಸಾಕಲು ಪ್ರಾರಂಭಿಸಿದರು ಇದೀಗ ಈ ಬೆಕ್ಕಿನ ಮರಿ ದೊಡ್ಡದಾಗಿದ್ದು ಇಲಿಗಳ ಬೇಟೆ ಶುರು ಮಾಡಿದೆ. ಈ ಮೂಲಕ ಪೊಲೀಸರ ತಲೆನೋವು ದೂರ ಆಗಿದೆ. ಇಲಿಗಳ ಕಾಟಕ್ಕೆ ಬೇಸತ್ತು ಹೋಗಿದ್ದ ಪೊಲೀಸರಿಗೆ ಬೆಕ್ಕು ರಿಲೀಫ್ ಕೊಡುತ್ತಿದೆ. ಇದನ್ನೂ ಓದಿ: 4ನೇ ಮಹಡಿಯಿಂದ ತಳ್ಳಿ ಪತ್ನಿಯನ್ನೇ ಕೊಂದ ಪತಿ

    Live Tv

  • ಆಸ್ಪತ್ರೆಯಲ್ಲಿ ರೋಗಿಯ ಕಣ್ಣಿಗೆ ಕಚ್ಚಿದ ಇಲಿ

    ಆಸ್ಪತ್ರೆಯಲ್ಲಿ ರೋಗಿಯ ಕಣ್ಣಿಗೆ ಕಚ್ಚಿದ ಇಲಿ

    ಜೈಪುರ: ಪಾಶ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರ ಬಲಗಣ್ಣಿಗೆ ಇಲಿ ಕಚ್ಚಿರುವ ಘಟನೆ ರಾಜಸ್ಥಾನದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

    ರಾಜಸ್ಥಾನದ ಕೋಟದಲ್ಲಿರುವ ಎಂಬಿಎಸ್ ಆಸ್ಪತ್ರೆಯ ಸ್ಟ್ರೋಕ್ ವಾರ್ಡ್‍ಗೆ ರೂಪಾವತಿ ಬಾಯಿ(55) ದಾಖಲಾಗಿದ್ದರು. ಕಳೆದ 45 ದಿನಗಳಿಂದ ಪಾಶ್ರ್ವವಾಯು ಘಟಕಕ್ಕೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಉಪ ಅಧೀಕ್ಷಿಕ ಡಾ. ಸಮೀರ್ ಟೊಂಡನ್ ಪ್ರಕಾರ, ಮಹಿಳೆ ಗುಯಿಲಿನ್ ಬಾರೆ ಸಿಂಡ್ರೋಮ್‍ನಿಂದ ಬಳಲುತ್ತಿದ್ದಾರೆ. ಇದು ದೇಹದ ನರಗಳ ಮೇಲೆ ದಾಳಿ ಮಾಡುತ್ತದೆ.

    ಆದರೆ ಆಸ್ಪತ್ರೆಯ ವಾರ್ಡ್‍ನಲ್ಲಿ ಕಳೆದ ರಾತ್ರಿ ಇಲಿ ರೂಪಾವತಿ ಬಾಯಿಯ ಬಲಗಣ್ಣಿಗೆ ಕಚ್ಚಿತು. ಈ ಬಗ್ಗೆ ಅಲ್ಲಿನ ವೈದ್ಯರು ಮಾತನಾಡಿ, ಘಟನೆಯ ಕುರಿತು ತನಿಖೆ ನಡೆಸುತ್ತೇವೆ. ನಾವು ಪ್ರತಿ ತಿಂಗಳು ಕೀಟನಾಶಕವನ್ನು ಸಿಂಪಡಿಸುತ್ತೇವೆ. ಅಂತಹದ್ದೇನಾದರೂ ಸಂಭವಿಸಿದರೆ, ಅದರ ಜವಾಬ್ದಾರಿ ಸಿಬ್ಬಂದಿಯಾಗಿರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದ ರೈತರು ಪೊಲೀಸರ ವಶಕ್ಕೆ

    crime

    ಆಸ್ಪತ್ರೆಗಳಲ್ಲಿ ಈ ರೀತಿಯ ಘಟನೆ ಆಗುತ್ತಿರುವುದು ಇದೇ ಮೊದಲಲ್ಲ, ಕಳೆದ ತಿಂಗಳು ತೆಲಂಗಾಣದ ವಾರಂಗಲ್ ಜಿಲ್ಲೆಯ ಸರ್ಕಾರಿ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ 47 ವರ್ಷದ ರೋಗಿಗಳನ್ನು ಇಲಿಯೊಂದು ಕಚ್ಚಿತ್ತು. ನಂತರ ಅವರು ಹೈದರಾಬಾದ್‍ನ ನಿಜಾಮ್‍ನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿಧನರಾದರು. ಇದನ್ನೂ ಓದಿ: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

  • ಇಲಿ ಕಚ್ಚಿದ್ದಕ್ಕೆ ವ್ಯಕ್ತಿಗೆ ಐಸಿಯುವಿನಲ್ಲಿ ಚಿಕಿತ್ಸೆ

    ಇಲಿ ಕಚ್ಚಿದ್ದಕ್ಕೆ ವ್ಯಕ್ತಿಗೆ ಐಸಿಯುವಿನಲ್ಲಿ ಚಿಕಿತ್ಸೆ

    ಹೈದರಾಬಾದ್: ತೆಲಂಗಾಣದ ವಾರಂಗಲ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ಇಲಿಯೊಂದು ರೋಗಿಯೊಬ್ಬರಿಗೆ ಕಚ್ಚಿದ್ದರಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆದರೀಗ ನಾಲ್ಕು ದಿನಗಳ ಹಿಂದೆ ವಾರಂಗಲ್‍ನ ಎಂಜಿಎಂ ಆಸ್ಪತ್ರೆಯ ಐಸಿಯುವಿನಲ್ಲಿ ದಾಖಲಾಗಿದ್ದಾರೆ.

    ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ರೋಗಿಯು ಇಲಿ ಕಚ್ಚಿದಾಗಿಲಿಂದಲೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಅವರಿಗೆ ಉಸಿರಾಡಲು ವೆಂಟಿಲೇಟರ್ ಅಳವಡಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ಘಟನೆಯ ಬಳಿಕ ರಾಜ್ಯ ಸರ್ಕಾರವು ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಐಸಿಯು ವಿಭಾಗದ ಮುಖ್ಯಸ್ಥರನ್ನು ಅಮಾನತುಗೊಳಿಸಿದೆ ಮತ್ತು ಆಸ್ಪತ್ರೆಯ ಅಧೀಕ್ಷಕರನ್ನು ವರ್ಗಾವಣೆ ಮಾಡಿದೆ. ಡ್ರೈನೇಜ್ ವ್ಯವಸ್ಥೆ ದುರಸ್ತಿಯಲ್ಲಿರುವುದರಿಂದ ಐಸಿಯುವಿನಲ್ಲಿ ಇಲಿಗಳ ಕಾಟ ಹೆಚ್ಚಾಗಿದ್ದು, ವಾರ್ಡ್‍ಗಳಲ್ಲಿ ಇಲಿಗಳು ಕಚ್ಚುವುದು ಸರ್ವೇಸಾಮಾನ್ಯವಾಗಿದೆ ಎಂದು ರೋಗಿಗಳು ಹಾಗೂ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ

    POLICE JEEP

    ಇದು ನಮ್ಮ ಹಣೆಬರಹ ಎಂದು ನಾವು ಭಾವಿಸಿದ್ದೇವೆ. ಇದನ್ನು ಅನುಭವಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇಲ್ಲ. ಆದರೆ ಈ ಬಾರಿ ನನ್ನ ಸಂಬಂಧಿಗೆ ಇಲಿಗಳು ಕಚ್ಚಿದಾಗ, ಅವರಿಗೆ ತುಂಬಾ ರಕ್ತಸ್ರಾವವಾಗಿದೆ. ಹಾಸಿಗೆಯು ರಕ್ತದಿಂದ ತುಂಬಿತ್ತು, ಆದ್ದರಿಂದ ನಾನು ದೂರು ನೀಡಿದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

    ಕರ್ತವ್ಯದಲ್ಲಿದ್ದ ನರ್ಸ್, ಡ್ರೈನೇಜ್ ದುರಸ್ತಿಯಲ್ಲಿರುವುದರಿಂದ ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಇದೀಗ ನೈರ್ಮಲ್ಯ ಏಜೆನ್ಸಿಗೂ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ

  • ಇಲಿ ಪಾಷಾಣ ಸೇವಿಸಿ ಮೂರು ವರ್ಷದ ಬಾಲಕ ಸಾವು

    ಇಲಿ ಪಾಷಾಣ ಸೇವಿಸಿ ಮೂರು ವರ್ಷದ ಬಾಲಕ ಸಾವು

    ತಿರುವನಂತಪುರಂ: ಇಲಿ ಪಾಷಾಣ ಸೇವನೆ ಮಾಡಿ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

    ನಡೆದಿದ್ದೇನು?: ಮಕ್ಕಳು ಆಟವಾಡುವಾಡುತ್ತಿದ್ದರು. ಈ ವೇಳೆ ಅಲ್ಲಿ ಎಸೆದಿದ್ದ ಇಲಿ ಪಾಷಾಣದ ಟ್ಯೂಬ್ ಸಿಕ್ಕಿದೆ. ಆಗ ಬಾಲಕ ಅದನ್ನು ಸೇವಿಸಿ ಅಸ್ವಸ್ಥನಾಗಿದ್ದಾನೆ ಬಾಲಕನ ಇಲಿ ಪಾಷಾಣ ಸೇವಿಸಿರುವ ವಿಚಾರ ತಿಳಿದ ಪೋಷಕರು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.  ಇದನ್ನೂ ಓದಿ: ಟೂತ್‌ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಳು

    ಬಾಲಕನಿಗೆ ಹೆಚ್ಚಿನ ತಜ್ಞ ಚಿಕಿತ್ಸೆ ಅಗತ್ಯವಿದ್ದ ಕಾರಣ ಕೊಟ್ಟಾಯಂನಿಂದ ಕೋಝಿಕ್ಕೋಡ್‍ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೂರು ದಿನಗಳ ಕಾಲ ಬಾಲಕನಿಗೆ ಚಿಕಿತ್ಸೆ ನೀಡಲಾಯಿತು.  ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

  • ಸೂಪರ್ ಮಾರ್ಕೆಟ್‍ನಿಂದ ತಂದ ತರಕಾರಿ ಜೊತೆಗೆ ಸತ್ತ ಇಲಿನೂ ತಿಂದ

    ಸೂಪರ್ ಮಾರ್ಕೆಟ್‍ನಿಂದ ತಂದ ತರಕಾರಿ ಜೊತೆಗೆ ಸತ್ತ ಇಲಿನೂ ತಿಂದ

    ಮ್ಯಾಡ್ರಿಡ್: ವ್ಯಕ್ತಿಯೊರ್ವ ಆಕಸ್ಮಿಕವಾಗಿ ತರಕಾರಿ ಹಾಗೂ ಆಲೂಗಡ್ಡೆಯೊಂದಿಗೆ ತಿಳಿಯದೇ ಸತ್ತ ಇಲಿಯನ್ನು ಸೇವಿಸಿರುವ ಘಟನೆ ಸ್ಪೇನ್‍ನಲ್ಲಿ ನಡೆದಿದೆ.

    ಜುವಾನ್ ಜೋಸ್ ಅವರು ಸೂಪರ್ ಮಾರ್ಕೆಟ್‍ನಿಂದ ತರಕಾರಿ ಹಾಗೂ ಆಲೂಗಡ್ಡೆ ಪ್ಯಾಕೆಟ್ ಖರೀದಿಸಿ ಮನೆಗೆ ಬಂದು ಬೇಯಿಸಿ ನಂತರ ಅದನ್ನು ತಟ್ಟೆಗೆ ಬಡಿಸಿಕೊಂಡಿದ್ದಾರೆ. ಈ ವೇಳೆ ಯಾವುದೋ ಭಾರದಂತಿರುವ ವಸ್ತು ತಟ್ಟೆಯೊಳಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಚಮಚದ ಮೂಲಕ ತಿನ್ನಲು ಆರಂಭಿಸಿದಾಗ ಯಾವುದೋ ವಿಚಿತ್ರವಾಗಿರುವ ಕುರುಕುಲಾಗಿರುವ ಪದಾರ್ಥವನ್ನು ಅಗಿಯುತ್ತಿರುವಂತೆ ಫೀಲ್ ಆಗಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಸುಳ್ಳಿನ ದೆವ್ವ ಮೆಟ್ಟಿಕೊಂಡಿದೆ: ಸಿ.ಟಿ ರವಿ ವ್ಯಂಗ್ಯ

    ನಂತರ ತಟ್ಟೆಯನ್ನು ಗಮನಿಸಿದಾಗ ಸತ್ತ ಇಲಿಯ ತಲೆಯನ್ನು ನೋಡಿ ಶಾಕ್ ಆಗಿದ್ದಾರೆ. ತರಕಾರಿಯೊಂದಿಗೆ ಇಲಿಯ ತಲೆಯಲ್ಲಿ ಕಣ್ಣು ಮತ್ತು ಮೀಸೆ ಸಮೇತ ಹಾಕಿರುವುದನ್ನು ಕಂಡಿದ್ದಾರೆ. ನಂತರ ತಾವು ತಿಂದಿದ್ದು, ತರಕಾರಿ ಅಲ್ಲ ಬದಲಿಗೆ ಇಲಿ ಎಂದು ಖಚಿತಪಡಿಸಿಕೊಂಡ ಬಳಿಕ ಸೂಪರ್ ಮಾರ್ಕೆಟ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಅರೆಸ್ಟ್ – ಪ್ರಜಾಪ್ರಭುತ್ವದ ಕೊಲೆ ಎಂದ ಜೆ.ಪಿ.ನಡ್ಡಾ

     

    ಕ್ರಿಸ್‍ಮಸ್ ಹಬ್ಬದಂದು ತರಕಾರಿಯನ್ನು ಜುವಾನ್ ಜೋಸ್ ಖರೀದಿಸಿದ್ದರು. ಸದ್ಯ ಈ ಘಟನೆ ಕುರಿತಂತೆ ಸೂಪರ್ ಮಾರ್ಕೆಟ್, ತಯಾರಕರು ಮತ್ತು ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದು, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗ್ರಾಹಕರಿಗೆ ತಿಳಿಸಿದೆ.

  • ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

    ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

    ಚಿಕ್ಕಮಗಳೂರು: ಗಣಪತಿ ಹಬ್ಬದಂದು ರೈತನೊಬ್ಬ ಜೀವಂತ ಇಲಿಯರ್ಣಣೂ ಗಣೇಶನಿಗೆ ನೀಡಿ, ಬೆಳೆಗಳನ್ನು ಉಳಿಸು ಎಂದು ಬೇಡಿಕೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದಲ್ಲಿ ನಡೆದಿದೆ.

    ಮರ್ಕಲ್ ಗ್ರಾಮದ ರೈತ ನಿತಿನ್ ಅವರ ಹೊಲದಲ್ಲಿ ಇಲಿಗಳ ಕಾಟ ಯತೇಚ್ಛವಾಗಿತ್ತು. ಯಾವುದೇ ಔಷಧಿ ಇಟ್ಟರೂ, ಏನೇ ಮಾಡಿದರೂ ಇಲಿಗಳ ಹಾವಳಿ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಯೂ ಇಲಿ ಹಾಗೂ ಮಣ್ಣು ಪಾಲಾಗುತ್ತಿತ್ತು. ಇದರಿಂದ ಮನನೊಂದ ರೈತ ನಿನ್ನ ವಾಹನದಿಂದ ನಮ್ಮ ಬೆಳೆಗಳು ನಾಶವಾಗುತ್ತವೆ, ಬೆಳೆಗಳನ್ನ ಉಳಿಸಿಕೊಳ್ಳುವುದೇ ಕಷ್ಟವಾಗಿದೆ ಎಂದು ಗಣಪತಿ ಹಬ್ಬವಾದ ಇಂದು, ತಮ್ಮ ಹೊಲದಲ್ಲಿ ಜೀವಂತ ಇಲಿಯನ್ನು ಹಿಡಿದು ಗ್ರಾಮದಲ್ಲಿ ಕೂರಿಸಿದ್ದ ಗಣೇಶನಿಗೆ ನೀಡಿ ಬೆಳೆ ಉಳಿಸು ಎಂದು ಬೇಡಿಕೊಂಡಿದ್ದಾನೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.0.57ಕ್ಕೆ ಇಳಿಕೆ- ರಾಜ್ಯದಲ್ಲಿಂದು 967 ಹೊಸ ಕೊರೊನಾ ಕೇಸ್, 10 ಸಾವು

    ತಮ್ಮ ಹೊಲದಲ್ಲಿ ಹಿಡಿದ ಗಣೇಶನನ್ನ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಕೊಂಡು ಬಂದು ಗಣೇಶನ ಮುಂದೆ ಬಿಟ್ಟಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ಪ್ಲಾಸ್ಟಿಕ್ ಕವರ್ ನಲ್ಲಿ ಬಂಧಿಯಾಗಿದ್ದ ಮೂಷಿಕ ಕೆಳಗೆ ಬಿಡುತ್ತಿದ್ದಂತೆ ಬದುಕಿತು ಬಡ ಜೀವ ಎಂದು ಎದ್ನೋ-ಬಿದ್ನೋ ಅಂತ ಅಲ್ಲಿಂದ ಓಡಿದೆ.

  • ಇಲಿ ಓಡಿಸಲು ನಿರಾಕರಿಸಿದ ಪತಿಯ ಜನನಾಂಗವನ್ನೇ ಕಚ್ಚಿದಳು!

    ಇಲಿ ಓಡಿಸಲು ನಿರಾಕರಿಸಿದ ಪತಿಯ ಜನನಾಂಗವನ್ನೇ ಕಚ್ಚಿದಳು!

    ಲುಸಾಕಾ(ಪೂರ್ವ ಆಫ್ರಿಕಾ): ಮಹಿಳೆಯೊಬ್ಬರು 52 ವರ್ಷದ ತನ್ನ ಪತಿಯ ಜನನಾಂಗವನ್ನೇ ಕಚ್ಚಿದ ಅಚ್ಚರಿಯ ಘಟನೆಯೊಂದು ಜಾಂಬಿಯಾದ ಕಿಟ್ವೆ ಪಟ್ಟಣದಲ್ಲಿ ನಡೆದಿದೆ.

    ಮಹಿಳೆಯನ್ನು ಮುಕುಪಾ(40) ಎಂದು ಗುರುತಿಸಲಾಗಿದೆ. ಈಕೆ ತನ್ನ ಬೆಡ್ ರೂಂನಲ್ಲಿದ್ದ ಇಲಿಯನ್ನು ಓಡಿಸಲು ನಿರಾಕರಿಸಿದ ಪತಿಗೆ ಈ ರೀತಿಯ ಶಿಕ್ಷೆ ನೀಡಿದ್ದಾಳೆ.

    ಮಹಿಳೆ ತನ್ನ ಗೆಳೆಯರ ಜೊತೆ ಪಾರ್ಟಿ ಮಾಡಿ ಮದ್ಯದ ಅಮಲಿನಲ್ಲಿ ಮನೆಗೆ ಹಿಂದಿರುಗಿದ್ದಾಳೆ. ಈ ವೇಳೆ ಬೆಡ್ ರೂಮಿನಲ್ಲಿ ಇಲಿ ಓಡಾಡುತ್ತಿರುವನ್ನು ಕಂಡಿದ್ದಾಳೆ. ಅಲ್ಲದೆ ಇಲಿ ಓಡಾಡುತ್ತಿರುವುದರಿಂದ ನಿದ್ದೆಯೂ ಬರುತ್ತಿರಲಿಲ್ಲ. ಇದರಿಂದ ಕಂಗಾಲಾದ ಆಕೆ ತನ್ನ ಪತಿಯ ಬಳೀ ಹೋಗಿ ಇಲಿ ಓಡಿಸುವಂತೆ ಹೇಳಿದ್ದಾಳೆ.

    ಇತ್ತ ನಿದ್ದೆಯ ಮಂಪರಿನಲ್ಲಿದ್ದ ಪತಿ, ಪತ್ನಿ ಮಾತನ್ನು ನಿರಾಕರಿಸಿದ್ದಾನೆ. ಹೀಗಾಗಿ ಇಲಿ ಓಡಾಡುತ್ತಾ ಮಹಿಳೆಯ ಕ್ವಾಟ್ಲೆ ಕೊಡುವುದನ್ನು ಮುಂದವರಿಸಿತ್ತು. ಇದರಿಂದ ಸಿಟ್ಟಿಗೆದ್ದ ಮಹಿಳೆ ತನ್ನ ಪತಿಯ ಜೊತೆ ವಾಗ್ವಾದಕ್ಕಿಳಿದಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಪತಿಯ ಜನನಾಂಗವನ್ನೇ ಕಚ್ಚುವ ಮೂಲಕ ಶಿಕ್ಷೆ ನೀಡಿದ್ದಾಳೆ.

    ಘಟನೆಯಿಂದ ಗಾಯಗೊಂಡ ಪತಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಒಂದೇ ಮನೆಯಲ್ಲಿದ್ದರೂ ಪತಿ ಹಾಗೂ ಪತ್ನಿ ಬೇರೆ ಬೇರೆ ರೂಮಿನಲ್ಲಿ ಇರುತ್ತಿದ್ದರು ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

  • ಹಬ್ಬಕ್ಕೆ ಗಣೇಶನ ಮೂಲಕ ವೈದ್ಯರಿಗೆ ಗೌರವ ಅರ್ಪಣೆ

    ಹಬ್ಬಕ್ಕೆ ಗಣೇಶನ ಮೂಲಕ ವೈದ್ಯರಿಗೆ ಗೌರವ ಅರ್ಪಣೆ

    – ಗಣೇಶ ಚತುರ್ಥಿಗೆ ವಿಶೇಷ ಮೂರ್ತಿ

    ಬೆಂಗಳೂರು: ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ 19 ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ವೈದ್ಯರು, ಆಶಾ ಕಾರ್ಯಕರ್ತೆಯರು ರಾತ್ರಿ-ಹಗಲು ಎನ್ನದೆ ಶ್ರಮ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಬಾರಿ ಗಣೇಶ ವೈದ್ಯರ ರೂಪ ತಾಳಿದ್ದಾನೆ.

    ಹೌದು. ಕೋವಿಡ್ 19 ಹೋಗಲಾಡಿಸಲು ಆಶಾ ಕಾರ್ಯಕರ್ತರು, ವೈದ್ಯರು ತಮ್ಮ ಜೀವವನ್ನು ಲೆಕ್ಕಿಸದೆ ನಮ್ಮನ್ನು ಸುರಕ್ಷಿತವಾಗಿಡಲು ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಗೌರವ ಸಲ್ಲಿಸುವ ಸಲುವಾಗಿ ಬೆಂಗಳೂರಿನ ಮೂರ್ತಿ ತಯಾರಕರೊಬ್ಬರು ಗಣೇಶ ಚತುರ್ಥಿ ಹಬ್ಬಕ್ಕೆ ಮುಂಚಿತವಾಗಿ ವಿಶೇಷವಾಗಿ ಅವರಿಗೆ ವಂದನೆ ಸಲ್ಲಿಸಿದ್ದಾರೆ.

    ವೈದ್ಯನಾದ ಗಣೇಶ:
    ಮೂರ್ತಿ ತಯಾರಕ ಶ್ರೀಧರ್ ಅವರು ಗಣೇಶನನ್ನು ವೈದ್ಯನನ್ನಾಗಿ ಮಾಡಿದ್ದಾರೆ. ಬೆಡ್‍ನಲ್ಲಿ ಮಲಗಿರುವ ಕೊರೊನಾ ರೋಗಿಯನ್ನು ಗಣೇಶ ಪರೀಕ್ಷೆ ಮಾಡುತ್ತಾನೆ. ಗಣೇಶನ ವಾಹನ ಇಲಿ, ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡುವ ದಾದಿಯಂತೆ ಮಾಡಲಾಗಿದೆ. ಮತ್ತೊಂದು ಮೂರ್ತಿಯು ಕೊರೊನಾ ವೈರಸ್ ಆಕಾರದ ರಾಕ್ಷಸನನ್ನು ತೋರಿಸುತ್ತಿದ್ದು, ಗಣೇಶ ಅದನ್ನು ಕೆಡವುವಂತೆ ಬಿಂಬಿಸಲಾಗಿದೆ.

    ಈ ಬಗ್ಗೆ ಶ್ರೀಧರ್ ಮಾತನಾಡಿ, ಸದ್ಯ ನಾವು ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೇವೆ. ಈ ಹಿನ್ನೆಲೆಯಲ್ಲಿ ಪ್ರಪಂಚದಾದ್ಯಂತ ಪರಿಸ್ಥಿತಿಯ ಸುಧಾರಣೆಗಾಗಿ ಗಣೇಶನನ್ನು ಪ್ರಾರ್ಥಿಸುವಂತೆ ನಾವು ಜನರಿಗೆ ಹೇಳಬೇಕಾಗಿದೆ. ಹೀಗಾಗಿ ಈ ರೀತಿಯ ಐಡಿಯಾ ಬಂತು ಎಂದು ಹೇಳಿದ್ದಾರೆ.

    ಈ ವರ್ಷ ಗಣೇಶ ಹಬ್ಬವನ್ನು ಆಗಸ್ಟ್ 22 ರಂದು ಆಚರಿಸಲಾಗುತ್ತಿದೆ. ಪ್ರತಿವರ್ಷ ಬಹಳ ವಿಜ್ರಂಭಣೆಯಿಂದ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ 19 ನಿಂದಾಗಿ ತುಂಬ ಸರಳವಾಗಿ ಆಚರಿಸುವಂತಹ ಸಂದರ್ಭ ಎದುರಾಗಿದೆ.

  • 24 ಗಂಟೆ ವಿಮಾನ ಹಾರಾಟವನ್ನ ತಡೆದ ಇಲಿ

    24 ಗಂಟೆ ವಿಮಾನ ಹಾರಾಟವನ್ನ ತಡೆದ ಇಲಿ

    -ಪ್ರಯಾಣಿಕರ ಆಕ್ರೋಶ

    ವಾರಾಣಸಿ: ಇಲಿಯೊಂದು ವಿಮಾನ ಹಾರಾಟವನ್ನು 24 ಗಂಟೆ ತಡೆದಿದೆ. ಇಲಿಯಿಂದಾಗಿ ವಾರಾಣಸಿಯ ಲಾಲ್‍ಬಹದ್ದೂರ್ ಶಾಸ್ತ್ರಿ (ಎಲ್‍ಬಿಎಸ್) ಏರ್ ಪೋರ್ಟಿನಿಂದ ಶನಿವಾರ ರಾತ್ರಿ ಟೇಕಾಫ್ ಆಗಬೇಕಿದ್ದ ಸೋಮವಾರ ಬೆಳಗ್ಗೆ ಪ್ರಯಾಣ ಬೆಳೆಸಿದೆ.

    ಶನಿವಾರ ರಾತ್ರಿ ವಿಮಾನದಲ್ಲಿ ಇಲಿಯೊಂದು ಕಾಣಿಸಿಕೊಂಡಿತ್ತು. ಇಲಿ ಕಾಣಿಸಿಕೊಂಡಿದ್ದರಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತಗೊಂಡಿದ್ದರು. ಸಿಬ್ಬಂದಿ ಎಷ್ಟೇ ಹುಡುಕಿದರೂ ಇಲಿ ಸಿಗದ ಕಾರಣ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, ಹೋಟೆಲ್ ವೊಂದಕ್ಕೆ ಸ್ಥಳಾಂತರಿಸಲಾಯ್ತು.

    ಏವಿಯೇಷನ್ ನಿಯಮಗಳ ಪ್ರಕಾರ, ವಿಮಾನದಲ್ಲಿ ಇಲಿ ಕಂಡು ಬಂದ್ರೆ ಟೇಕಾಫ್ ಮಾಡುವಂತಿಲ್ಲ. ಪ್ರಯಾಣ ಮಧ್ಯೆ ಇಲಿ ಯಾವುದಾದರೂ ವೈರ್ ಗಳನ್ನು ಕತ್ತರಿಸುವ ಸಾಧ್ಯತೆಗಳಿರುತ್ತವೆ. ಇದು ಪ್ರಯಾಣಿಕರು ಮತ್ತು ಸಿಬ್ಬಂದಿಯ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಏರ್ ಲೈನ್ ಅಧಿಕಾರಿಗಳು ವಿಮಾನದ ಹಾರಾಟವನ್ನು ತಡೆದು ಶನಿವಾರ ರಾತ್ರಿ ಭಾನುವಾರ ಇಲಿ ಶೋಧನೆ ಕಾರ್ಯಕ್ಕೆ ತಂಡವನ್ನು ರಚಿಸಿತ್ತು. ವಿಮಾನ ಮತ್ತೆ ಟೇಕಾಫ್ ಆಗಲು ಅಧಿಕಾರಿಗಳಿಂದ ಇಲಿ ಮುಕ್ತ (ರೋಡೆಂಟ್ ಫ್ರೀ) ಪ್ರಮಾಣ ಪತ್ರ ಪಡೆಯೋದು ಕಡ್ಡಾಯವಾಗಿತ್ತು. ಇದನ್ನೂ ಓದಿ: ಬೆಂಗ್ಳೂರು ಏರ್‌ಪೋರ್ಟ್‌ ರನ್ ವೇಗೆ ನುಗ್ಗಿ ವಿಮಾನಗಳ ಹಾರಾಟಕ್ಕೆ ಅಡ್ಡಿ ಪಡಿಸಿದ ಪ್ರಯಾಣಿಕರು

    ಇಲಿ ಬಂದಿದ್ದು ಹೇಗೆ? ವಿಮಾನದೊಳಗೆ ಇಲಿ ಹೇಗೆ ಬಂತು ಪ್ರಶ್ನೆಗೆ ಸಿಬ್ಬಂದಿ ಬಳಿ ಉತ್ತರವಿಲ್ಲ. ವಾರಾಣಸಿಯಿಂದ ಟೇಕಾಫ್ ಆಗುವ ವೇಳೆ ವಿಮಾನದಲ್ಲಿ ಇಲಿ ಕಾಣಿಸಿಕೊಂಡಿತ್ತು. ಇದಕ್ಕೂ ಮೊದಲು ವಿಮಾನ ಕೋಲ್ಕತ್ತಾ ನಿಲ್ದಾಣದಿಂದ ಟೇಕಾಫ್ ಆಗಿ 80 ನಿಮಿಷ ಪ್ರಯಾಣ ಬೆಳೆಸಿ ವಾರಾಣಸಿ ತಲುಪಿತ್ತು. ಇಲಿ ಸಿಕ್ತಾ ಇಲ್ಲ ಎಂಬುದರ ಬಗ್ಗೆಯೂ ನಿಖರ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ: ಟೇಕಾಫ್ ಆದ ಕೆಲವೇ ಕ್ಷಣದಲ್ಲಿ 100 ಪ್ರಯಾಣಿಕರಿದ್ದ ವಿಮಾನ ಪತನ

    ಈ ಕುರಿತು ಪ್ರತಿಕ್ರಿಯಿಸಿರುವ ವಾರಾಣಸಿ ಏರ್ ಪೋರ್ಟ್ ನಿರ್ದೇಶಕ ಆಕಾಶದೀಪ್ ಮಾಥುರ್, ರೋ ಡೆಂಟ್ ಫ್ರೀ ಸರ್ಟಿಫಿಕೇಟ್ ಪಡೆಯುವದಕ್ಕಾಗಿ ವಿಮಾನವನ್ನು ಪೂರ್ಣ ಪರಿಶೀಲನೆಗೆ ಒಳಪಡಿಸಲಾಯ್ತು. ಶೋಧ ಕಾರ್ಯದ ಬಳಿಕ ಸೋಮವಾರ ಬೆಳಗ್ಗೆ ವಿಮಾನ ಡೆಹರಾಡೂನ್ ಗೆ ತನ್ನ ಪ್ರಯಾಣ ಬೆಳೆಸಿತು. ಶನಿವಾರ ಮಧ್ಯಾಹ್ನ 3 ಗಂಟೆ 55 ನಿಮಿಷಕ್ಕೆ ಕೋಲ್ಕತ್ತಾದಿಂದ ಟೇಕಾಫ್ ಆಗಿದ್ದ ವಿಮಾನ 80 ನಿಮಿಷದ ಬಳಿಕ ವಾರಾಣಸಿ ತಲುಪಿತ್ತು. ಶನಿವಾರ ಸಂಜೆ 6 ಗಂಟೆ 40 ನಿಮಿಷಕ್ಕೆ ವಾರಾಣಸಿಯಿಂದ ಡೆಹರಾಡೂನ್ ಗೆ ವಿಮಾನ ಟೇಕಾಫ್ ಆಗಬೇಕಿತ್ತು. ಟೇಕಾಫ್ ಕೆಲ ನಿಮಿಷಗಳ ಮುನ್ನ ಕೆಲ ಪ್ರಯಾಣಿಕರಿಗೆ ಇಲಿ ಕಾಣಿಸಿಕೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರನ್ನು ಕೆಳಗಿಳಿಸಿ ಹೋಟೆಲ್ ನಲ್ಲಿರಿಸಿ ತಪಾಸಣೆ ನಡೆಸಲಾಯ್ತು. ರೋಡೆಂಟ್ ಸರ್ಟಿಫಿಕೇಟ್ ಪಡೆದ ಬಳಿಕ ಸೋಮವಾರ ಬೆಳಗ್ಗೆ ವಿಮಾನ ಟೇಕಾಫ್ ಆಯ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಡೋನೇಷ್ಯಾ ವಿಮಾನ ದುರಂತ: ಒಟ್ಟು 190 ಪ್ರಯಾಣಿಕರಲ್ಲಿ ಒಬ್ಬ ಬದುಕುಳಿದ!

    ಪ್ರಯಾಣಿಕರ ಆಕ್ರೋಶ: ಪ್ರಯಾಣ 24 ಗಂಟೆ ವಿಳಂಬವಾಗಿದ್ದಕ್ಕೆ ಪ್ರಯಾಣಿಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿ, ಜನವರಿ 25ರಂದು ಫ್ಲೈಟ್ ನಂಬರ್ ಎಐ691 ಕೋಲ್ಕತ್ತಾದಿಂದ 1 ಗಂಟೆ 15 ನಿಮಿಷ ತಡವಾಗಿ ಟೇಕಾಫ್ ಆಯ್ತು. ಅದೇ ವಿಮಾನದಲ್ಲಿ ಇಲಿ ಕಾಣಿಸಿಕೊಂಡಿದ್ದರಿಂದ ವಾರಾಣಸಿ ಪ್ರಯಾಣಿಕರನ್ನು ಕೆಳಗಿಳಿಸಲಾಯ್ತು. 24 ಗಂಟೆ ಕಳೆದರೂ ನಮಗೆ ಯಾವ ವಿಷಯವೂ ತಿಳಿಯುತ್ತಿಲ್ಲ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ಇಂಡೋನೇಷ್ಯಾ ವಿಮಾನ ಪತನ: 189 ಮಂದಿ ದಾರುಣ ಸಾವು- ವಿಡಿಯೋ ನೋಡಿ

  • ವಿಮಾನಕ್ಕೆ ಬಂದ ವಿಶೇಷ ಅತಿಥಿಯಿಂದ 12 ತಾಸು ಲೇಟಾಯ್ತು ಟೇಕಾಫ್

    ವಿಮಾನಕ್ಕೆ ಬಂದ ವಿಶೇಷ ಅತಿಥಿಯಿಂದ 12 ತಾಸು ಲೇಟಾಯ್ತು ಟೇಕಾಫ್

    ಹೈದರಾಬಾದ್: ಭಾನುವಾರ ಹೈದರಾಬಾದ್‍ನಿಂದ ವಿಶಾಖಪಟ್ಟಣಕ್ಕೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವು ವಿಶೇಷ ಅತಿಥಿ ಫ್ಲೈಟ್‍ನಲ್ಲಿ ಕಾಣಿಸಿಕೊಂಡಿದ್ದಕ್ಕೆ ಬರೋಬ್ಬರಿ 12 ಗಂಟೆ ಲೇಟಾಗಿ ಟೇಕಾಫ್ ಆಗಿದೆ.

    ಆ ವಿಶೇಷ ಅತಿಥಿ ಯಾರು ಎಂದು ತಿಳಿದರೆ ತಮಾಷೆ ಅನಿಸುತ್ತೆ. ಯಾಕೆಂದರೆ ವಿಮಾನ 12 ಗಂಟೆ ವಿಳಂಬವಾಗುವಂತೆ ಮಾಡಿದ್ದು ಕೇವಲ ಒಂದು ಇಲಿ. ಹೌದು. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್‍ನಿಂದ ವಿಶಾಖಪಟ್ಟಣಕ್ಕೆ ತೆರಳಬೇಕಿದ್ದ ವಿಮಾನ ಇನ್ನೇನು ಟೇಕಾಫ್ ಆಗಬೇಕಿತ್ತು. ಆದರೆ ಈ ವೇಳೆ ಮೂಷಿಕರಾಜನ ಎಂಟ್ರಿ ಕಂಡು ಪ್ರಯಾಣಿಕರು ಗಲಿಬಿಲಿಗೊಂಡ ಕಾರಣ ಸಿಬ್ಬಂದಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿದರು. ವಿಮಾನದಲ್ಲಿ ಸೇರಿದ್ದ ಒಂದೇ ಒಂದು ಇಲಿ ಹಿಡಿಯಲು ಸಿಬ್ಬಂದಿ 12 ಗಂಟೆಗಳ ಕಾಲ ಹರಸಾಹಸವನ್ನೇ ಪಟ್ಟಿದ್ದಾರೆ.

    ಬೆಳಗ್ಗೆ 6.10ಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾದ AI-952 ವಿಮಾನ ಸಂಜೆ 5.30ಕ್ಕೆ ಟೇಕಾಫ್ ಆಗಿದೆ. ಇಲಿಯ ಎಂಟ್ರಿಯಿಂದ ಬರೋಬ್ಬರಿ 12 ಗಂಟೆ ತಡವಾಗಿ ವಿಮಾನ ಟೇಕಾಫ್ ಆಗಿದೆ. ಹೀಗಾಗಿ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಲ ಕಳೆದಿದ್ದಾರೆ. ಸಂಜೆಯ ವೇಳೆಗೆ ಕೊನೆಗೂ ಏರ್‌ಲೈನ್ಸ್ ಸಿಬ್ಬಂದಿ ವಿಮಾನದಲ್ಲಿದ್ದ ಇಲಿಯನ್ನು ಹಿಡಿದಿದ್ದೇವೆ ಎಂದು ತಿಳಿಸಿ ಪ್ರಯಾಣಿಕರನ್ನು ವಿಮಾನದಲ್ಲಿ ಹತ್ತಿಸಿಕೊಂಡು ವಿಶಾಖಪಟ್ಟಣಕ್ಕೆ ತೆರಳಿದ್ದಾರೆ. ಅಲ್ಲಿಂದ ಇದೇ ವಿಮಾಣ ದೆಹಲಿಯತ್ತ ಪ್ರಯಾಣ ಬೆಳೆಸಿದೆ.

    ಬೆಳಗ್ಗೆಯಿಂದ ಸಂಜೆಯವರೆಗೆ ಕಾದ ಪ್ರಯಾಣಿಕರು ಘಟನೆಯಿಂದ ಆಕ್ರೋಶಗೊಂಡು, ಬೇಸತ್ತು ಸಾಮಾಜಿಕ ಜಾಲತಾಣದಲ್ಲಿ ಏರ್ ಇಂಡಿಯಾ ಸಂಸ್ಥೆಯ ವಿರುದ್ಧ ಕಮೆಂಟ್, ಟ್ರೋಲ್ ಮಾಡಿಕೊಂಡಿ ಸಿಟ್ಟನ್ನು ಹೊರಹಾಕಿದ್ದಾರೆ.