Tag: rat poison

  • ಪತಿಗೆ ತಿಳಿಸದೇ ಮಾಡಿದ್ದ 8 ಲಕ್ಷ ಸಾಲ ತೀರಿಸಲು ತಂದೆ-ತಾಯಿಗೆ ಟೀಯಲ್ಲಿ ಇಲಿ ಪಾಷಾಣ ಹಾಕಿದ್ಲು

    ಪತಿಗೆ ತಿಳಿಸದೇ ಮಾಡಿದ್ದ 8 ಲಕ್ಷ ಸಾಲ ತೀರಿಸಲು ತಂದೆ-ತಾಯಿಗೆ ಟೀಯಲ್ಲಿ ಇಲಿ ಪಾಷಾಣ ಹಾಕಿದ್ಲು

    ತಿರುವನಂತಪುರಂ: ಪತಿಗೆ ತಿಳಿಸದೇ ಮಾಡಿದ್ದ ಸಾಲ ತೀರಿಸಲು ಮಹಿಳೆಯೊಬ್ಬರು ತನ್ನ ತಂದೆ-ತಾಯಿಗೆ ವಿಷ ಹಾಕಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ.

    ತ್ರಿಶೂರ್‌ ಜಿಲ್ಲೆಯ ಕುನ್ನಂಕುಲಂನಲ್ಲಿ ಈ ಘಟನೆ ನಡೆದಿದ್ದು, ಇಂದುಲೇಖಾ (39) ತನ್ನ ತಂದೆ-ತಾಯಿಗೆ ವಿಷ ಹಾಕಿದ ಮಹಿಳೆ. ಈಕೆ ತನ್ನ ತಂದೆ ಚಂದ್ರನ್‌ ಹಾಗೂ ತಾಯಿ ರುಕ್ಮಿಣಿ ಅವರಿಗೆ ಕುಡಿಯಲು ಕೊಟ್ಟಿದ್ದ ಟೀನಲ್ಲಿ ಇಲಿ ಪಾಷಾಣ ಹಾಕಿದ್ದಳು. ಟೀ ಕುಡಿದು ತಾಯಿ ಮೃತಪಟ್ಟರೆ, ರುಚಿಯಲ್ಲಿ ವ್ಯತ್ಯಾಸ ಕಂಡ ತಂದೆ ಅದನ್ನು ಕುಡಿಯದೇ ಪ್ರಾಣ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಒಪ್ಪಿಗೆಯಿಲ್ಲದೇ ಅಪ್ರಾಪ್ತೆಯೊಂದಿಗೆ ಸೆಕ್ಸ್ ನಡೆಸಿದ ವ್ಯಕ್ತಿಗೆ 100 ವರ್ಷ ಜೈಲು!

    ಏನಿದು ಪ್ರಕರಣ?
    ದುಬೈನಲ್ಲಿ ಕೆಲಸ ಮಾಡುತ್ತಿರುವ ಪತಿಗೆ ತಿಳಿಸದೆಯೇ ಇಂದುಲೇಖಾ ಆಭರಣಗಳನ್ನು ಒತ್ತೆ ಇಟ್ಟು 8 ಲಕ್ಷ ರೂ. ಸಾಲ ಪಡೆದಿದ್ದರು. ಪತಿ ರಜೆ ಮೇಲೆ ಊರಿಗೆ ಬರುತ್ತಿದ್ದುದನ್ನು ತಿಳಿದು, ಸಾಲ ತೀರಿಸಲು ದಿಕ್ಕು ತೋಚಿಲ್ಲ. ಪತಿ ಬರುವಷ್ಟರಲ್ಲಿ ಹೇಗಾದರೂ ಸಾಲ ತೀರಿಸಬೇಕೆಂದು ನಿರ್ಧರಿಸಿದ ಇಂದುಲೇಖಾ ಕಣ್ಣಿಗೆ ಬಿದ್ದಿದ್ದು ಆಕೆಯ ತಂದೆ-ತಾಯಿ. ಪೋಷಕರ ಆಸ್ತಿಯನ್ನು ಮಾರಿ ಸಾಲ ತೀರಿಸಲು ಮುಂದಾಗಿದ್ದಳು.

    ಪೋಷಕರಿಗೆ ಟೀಯಲ್ಲಿ ಇಲಿ ಪಾಷಾಣ
    ತನ್ನ ಪೋಷಕರನ್ನು ಕೊಲ್ಲಲು ಇಂದುಲೇಖಾ ನಿರ್ಧರಿಸಿದ್ದಾಳೆ. ನಂತರ ಅವರಿಗೆ ಕುಡಿಯಲು ಕೊಟ್ಟಿದ್ದ ಟೀಯಲ್ಲಿ ಇಲಿ ಪಾಷಾಣ ಬೆರೆಸಿದ್ದಾಳೆ. ಟೀಯನ್ನು ತಾಯಿ ಕುಡಿದಿದ್ದಾರೆ. ಆದರೆ ಟೀ ರುಚಿಯಲ್ಲಿ ಕಹಿ ಅನುಭವವಾಗಿ ಆಕೆ ತಂದೆ ಒಂದು ಗುಟುಕನ್ನಷ್ಟೇ ಕುಡಿದು ಸುಮ್ಮನಾಗಿದ್ದಾರೆ.

    ಟೀ ಕುಡಿದ ಇಂದುಲೇಖಾ ತಾಯಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಾವಿನ ಕಾರಣದ ಬಗ್ಗೆ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿದ್ದು, ಪೊಲೀಸರು ಬುಧವಾರ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಕುಟುಂಬ ಸದಸ್ಯರ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಉರಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ವಿಚಾರಣೆ ವೇಳೆ ಚಂದ್ರನ್ ಅವರು ತಮ್ಮ ಮಗಳು ನೀಡಿದ ಚಹಾವನ್ನು ಕುಡಿದು ಪತ್ನಿ ಕುಸಿದು ಬಿದ್ದಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ರುಚಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಅನುಭವಿಸಿದ ಅವರು ಚಹಾವನ್ನು ಕುಡಿಯಲಿಲ್ಲ. ಚಂದ್ರನ್ ಅವರು ತಮ್ಮ ಪತ್ನಿಯ ಸಾವಿನಲ್ಲಿ ಅವರ ಹಿರಿಯ ಮಗಳು ಇಂದುಲೇಖಾ ಪಾತ್ರದ ಬಗ್ಗೆ ಕೆಲವು ಅನುಮಾನಗಳನ್ನು ವ್ಯಕ್ತಪಡಿಸಿದರು.

    ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ?
    ವಿಚಾರಣೆ ವೇಳೆ ಇಂದುಲೇಖಾ ಮೊಬೈಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಗೂಗಲ್‌ ಸರ್ಚಿಂಗ್‌ ಹಿಸ್ಟರಿ ಪರಿಶೀಲಿಸುವಾಗ, ʼಜನರಿಗೆ ವಿಷ ಹಾಕಿ ಸಾಯಿಸುವುದು ಹೇಗೆʼ ಎಂದು ಸರ್ಚ್‌ ಆಗಿರುವುದು ತಿಳಿದುಬಂದಿದೆ. ಈ ಸಂಬಂಧ ವಿಚಾರಣೆ ನಡೆಸಿದಾಗ, ಆಕೆ ತನ್ನ ಪೋಷಕರಿಗೆ ನೀಡಿದ ಚಹಾದಲ್ಲಿ ಇಲಿ ಪಾಷಾಣ ಹಾಕಿದ್ದನ್ನು ಒಪ್ಪಿಕೊಂಡಿದ್ದಾಳೆ. ಚಹಾ ಕುಡಿದು ಕುಸಿದು ಬಿದ್ದ ರುಕ್ಮಿಣಿಯನ್ನು ಇಂದುಲೇಖಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಆಸ್ತಿ ಪಡೆಯಲು ಪೋಷಕರನ್ನು ಕೊಂದು ಹಾಕಲು ಯತ್ನಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ಮ್ಯಾಗಿಯಲ್ಲಿದ್ದ ಟೊಮೆಟೊ ಸೇವಿಸಿ ಮಹಿಳೆ ಸಾವು

    ಮ್ಯಾಗಿಯಲ್ಲಿದ್ದ ಟೊಮೆಟೊ ಸೇವಿಸಿ ಮಹಿಳೆ ಸಾವು

    ಮುಂಬೈ: ಮ್ಯಾಗಿಯಲ್ಲಿದ್ದ ಇಲಿ ಪಾಷಾಣ ಬೆರೆಸಿದ ಟೊಮೆಟೊವನ್ನು ತಿಂದು ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ನಡೆದಿದೆ.

    ರೇಖಾ ನಿಶಾದ್(27) ಮೃತ ಮಹಿಳೆ. ಮುಂಬೈನ ಮಲಾಡ್‍ನ ಪಾಸ್ಕಲ್ ವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.  ಮನೆಯಲ್ಲಿರುವ ಇಲಿಗಳನ್ನು ಕೊಲ್ಲಲು ರೇಖಾ ಟೊಮೆಟೊಗೆ ಇಲಿ ಪಾಷಾಣವನ್ನು ಬೆರೆಸಿದ್ದಳು. ಆದರೆ ಮ್ಯಾಗಿ ತಯಾರಿಸುತ್ತಿದ್ದಾಗ ಟಿವಿ ನೋಡುತ್ತಾ ಆಕಸ್ಮಿಕವಾಗಿ ಇಲಿ ಪಾಷಾಣ ಬೆರೆಸಿದ್ದ ಟೊಮೆಟೊವನ್ನು ಹಾಕಿದ್ದಾಳೆ. ಇದನ್ನೂ ಓದಿ: ವರದಕ್ಷಿಣೆ ಕೊಡಲಿಲ್ಲವೆಂದು ಸ್ನೇಹಿತರ ಜೊತೆ ಸೇರಿ ಪತ್ನಿಯನ್ನೆ ಅತ್ಯಾಚಾರ ಮಾಡಿದ

    crime

    ನಂತರ ಮ್ಯಾಗಿಯನ್ನು ತಿಂದ ಕೆಲವೇ ಗಂಟೆಗಳಲ್ಲಿ ಅನಾರೋಗ್ಯದಿಂದ ಬಳಲು ಪ್ರಾರಂಭಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ಪತಿ ಹಾಗೂ ಸೋದರ ಮಾವ ಅವಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಆರಗ ಮನೆಗೆ ನುಗ್ಗಿದ ABVP ಕಾರ್ಯಕರ್ತರಿಗೆ ಲಾಠಿ ಏಟು

    Live Tv
    [brid partner=56869869 player=32851 video=960834 autoplay=true]

  • ಪತ್ನಿ ಜೊತೆಗೆ ಜಗಳವಾಡಿ ಪೊಲೀಸ್ ಠಾಣೆಯಲ್ಲಿ ಇಲಿ ಪಾಷಾಣ ಸೇವಿಸಿದ

    ಪತ್ನಿ ಜೊತೆಗೆ ಜಗಳವಾಡಿ ಪೊಲೀಸ್ ಠಾಣೆಯಲ್ಲಿ ಇಲಿ ಪಾಷಾಣ ಸೇವಿಸಿದ

    ಜೈಪುರ: ಪತ್ನಿಯೊಂದಿಗೆ ಜಗಳವಾಡಿದ ವ್ಯಕ್ತಿಯೋರ್ವ ಪೊಲೀಸ್ ಠಾಣೆಗೆ ತೆರಳಿ ಇಲಿ ಪಾಷಾಣ ಸೇವಿಸಿರುವ ಘಟನೆ ಭರತ್‍ಪುರದಲ್ಲಿ ನಡೆದಿದೆ.

    ಯೋಗೇಶ್ ಮತ್ತು ಅವರ ಹಿರಿಯ ಸಹೋದರ ಲೋಕೇಶ್ ಆಗ್ರಾ ಮೂಲದ ಇಬ್ಬರು ಸಹೋದರಿಯರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ಹೆಂಡತಿಯರು ಜಗಳವಾಡಲು ಪ್ರಾರಂಭಿಸಿದರು.

    ಗುರುವಾರ ರಾತ್ರಿ ಲೋಕೇಶ್ ಪತ್ನಿಯೊಂದಿಗೆ ಜಗಳವಾಡಿದ್ದರಿಂದ ಪೊಲೀಸರಿಗೆ ಕರೆ ಮಾಡಿ ಆತನನ್ನು ಪತ್ನಿ ಅರೆಸ್ಟ್ ಮಾಡಿಸಿದ್ದರು. ತನಗೂ ಇದೇ ಪರಿಸ್ಥಿತಿ ಬರಬಹುದೆಂಬ ಭಯದಿಂದ ಕೊತ್ವಾಲಿ ಪೊಲೀಸ್ ಠಾಣೆಗೆ ತೆರಳಿದ ಯೋಗೇಶ್ ತನ್ನ ಸಹೋದರನ ಪತ್ನಿಯಂತೆ ತನ್ನ ಪತ್ನಿ ಕೂಡ ಯಾವಾಗಲೂ ಜಗಳವಾಡುತ್ತಿರುತ್ತಾಳೆ ಎಂದು ಆರೋಪಿಸಿ ಇಲಿ ಪಾಷಾಣ ಸೇವಿಸಿದ್ದಾನೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜೆಡಿಎಸ್‌ಗೆ ಬಿಗ್ ಶಾಕ್ ಕೊಟ್ಟ ಗುಬ್ಬಿ ಶ್ರೀನಿವಾಸ್

    ಈ ಕುರಿತಂತೆ ಮಾತನಾಡಿದ ರೈಲ್ವೆ ಹೊರಠಾಣೆ ಪ್ರಭಾರಿ ರಾಕೇಶ್ ಮಾನ್ ಅವರು, ಪೊಲೀಸ್ ಠಾಣೆಗೆ ಬಂದ ಯೋಗೇಶ್, ತನ್ನ ಪತ್ನಿ ಮತ್ತು ಆಕೆಯ ಸಹೋದರಿ ಮಾನಸಿಕ ಕಿರುಕುಳ ಮತ್ತು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಹೇಳುತ್ತಾ ಇಲಿ ಪಾಷಾಣ ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದರು. ಈ ವೇಳೆ ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಇಬ್ಬರೂ ಸಹೋದರಿಯರು ತವರಿನಿಂದ ಬಂದಾಗಿನಿಂದಲೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಇಬ್ಬರು ಸಹೋದರರು ಹಾಗೂ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ

    POLICE JEEP

     

    ಕ್ಷುಲ್ಲಕ ವಿಷಯಗಳಿಗೆ ಸಹೋದರಿಯರಿಬ್ಬರು ಪ್ರತಿನಿತ್ಯ ಜಗಳವಾಡುತ್ತಿದ್ದರು ಮತ್ತು ಪೊಲೀಸರಿಗೆ ಕರೆ ಮಾಡಿ ಬಂಧಿಸಿಸುವಂತೆ ಬೆದರಿಕೆಯೊಡ್ಡುತ್ತಿದ್ದರು. ಅಲ್ಲದೇ ಇಬ್ಬರು ಸೊಸೆಯಂದಿರು ಪರಪುರುಷರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಪತಿಯ ಆಸ್ತಿಯನ್ನು ಕಬಳಿಸಲು ಕುಟುಂಬಸ್ಥರೊಂದಿಗೆ ಸಂಚು ರೂಪಿಸುತ್ತಿದ್ದಾರೆ ಎಂದು ಅತ್ತೆ ಆರೋಪಿಸಿದ್ದಾರೆ.

  • ಇಲಿ ಪಾಷಾಣ ಸೇವಿಸಿ ಮೂರು ವರ್ಷದ ಬಾಲಕ ಸಾವು

    ಇಲಿ ಪಾಷಾಣ ಸೇವಿಸಿ ಮೂರು ವರ್ಷದ ಬಾಲಕ ಸಾವು

    ತಿರುವನಂತಪುರಂ: ಇಲಿ ಪಾಷಾಣ ಸೇವನೆ ಮಾಡಿ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

    ನಡೆದಿದ್ದೇನು?: ಮಕ್ಕಳು ಆಟವಾಡುವಾಡುತ್ತಿದ್ದರು. ಈ ವೇಳೆ ಅಲ್ಲಿ ಎಸೆದಿದ್ದ ಇಲಿ ಪಾಷಾಣದ ಟ್ಯೂಬ್ ಸಿಕ್ಕಿದೆ. ಆಗ ಬಾಲಕ ಅದನ್ನು ಸೇವಿಸಿ ಅಸ್ವಸ್ಥನಾಗಿದ್ದಾನೆ ಬಾಲಕನ ಇಲಿ ಪಾಷಾಣ ಸೇವಿಸಿರುವ ವಿಚಾರ ತಿಳಿದ ಪೋಷಕರು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.  ಇದನ್ನೂ ಓದಿ: ಟೂತ್‌ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿ ಪ್ರಾಣ ಬಿಟ್ಟಳು

    ಬಾಲಕನಿಗೆ ಹೆಚ್ಚಿನ ತಜ್ಞ ಚಿಕಿತ್ಸೆ ಅಗತ್ಯವಿದ್ದ ಕಾರಣ ಕೊಟ್ಟಾಯಂನಿಂದ ಕೋಝಿಕ್ಕೋಡ್‍ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೂರು ದಿನಗಳ ಕಾಲ ಬಾಲಕನಿಗೆ ಚಿಕಿತ್ಸೆ ನೀಡಲಾಯಿತು.  ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಬಾಲಿವುಡ್ ಮೇಲೆ ಕಿಡಿಕಾರಿದ ಕಂಗನಾ ರಣಾವತ್

  • ಐಸ್‍ಕ್ರೀಮ್‍ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕೊಟ್ಟ ತಂದೆ

    ಐಸ್‍ಕ್ರೀಮ್‍ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕೊಟ್ಟ ತಂದೆ

    ಮುಂಬೈ: ಐಸ್‍ಕ್ರೀಮ್‍ನಲ್ಲಿ ವಿಷ ಬೆರೆಸಿ ತಂದೆಯೊಬ್ಬ ಮಕ್ಕಳಿಗೆ ಕೊಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಇದನ್ನೂ ಓದಿ:  ಜೋಕಾಲಿ ತಂದ ಆಪತ್ತು- ಎರಡು ಎಳೆಯ ಜೀವಗಳಿಗೆ ಕುತ್ತು

    ಅಲಿಷನ್ ಅಲಿ(5) ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಮಕ್ಕಳಾದ ಅಲಿನ(7), ಅರ್ಮಾನ್(2) ಸಾವು ಬದುಕಿನ ಮಧ್ಯೆ ಹೋರಟ ಮಾಡುತ್ತಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂವರು ಮಕ್ಕಳಿಗೆ ಐಸ್‍ಕ್ರೀಮ್‍ನಲ್ಲಿ ವಿಷಬೇರಸಿ ಕೊಡಲಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ.

    ಮನ್‍ಖುರ್ದ್ ಪ್ರಾಂತ್ಯದ ನಿವಾಸಿ ಮೊಹಮ್ಮದ್ ಅಲಿ ನೌಶಾದ್ ಜೂನ್ 25ರಂದು ತನ್ನ ಪತ್ನಿಯ ಜೊತೆಗೆ ಜಗಳವಾಡಿದ್ದಾನೆ. ಪತ್ನಿಯ ಮೇಲೆ ಇರುವ ಸಿಟ್ಟನ್ನು ಮಕ್ಕಳಿಗೆ ವಿಷ ಹಾಕುವ ಮೂಲಕವಾಗಿ ತಿರಿಸಿಕೊಂಡಿದ್ದಾನೆ. ನಂತರ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳಿಗೆ ಐಸ್‍ಕ್ರೀಮ್‍ನಲ್ಲಿ ಇಲಿ ಪಾಷಾಣವನ್ನು ಬೇರೆಸಿ ಕೊಟ್ಟಿದ್ದಾನೆ. ಮಕ್ಕಳು ತಂದೆ ಕೊಟ್ಟಿದ್ದಾರೆ ಎಂದು ತಿಂದು ಬಿಟ್ಟಿದ್ದಾರೆ. ನಂತರ ಆರೋಗ್ಯದಲ್ಲಿ ಏರುಪೇರಾಗಿದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.

    ಈ ಆಘಾತಕಾರಿ ಕೃತ್ಯದ ಬಗ್ಗೆ ಆರೋಪಿಯ ಹೆಂಡತಿ ದೂರು ನೀಡಿದ್ದೂ, ಮುಹಮ್ಮದ್ ಅಲಿ ನೌಶಾದ್‍ನನ್ನು ಮುಂಬೈ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಐಸ್‍ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ – ಮಗ, ಸಹೋದರಿ ಸಾವು

    ಐಸ್‍ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ – ಮಗ, ಸಹೋದರಿ ಸಾವು

    ತಿರುವನಂತಪುರ: ಆತ್ಮಹತ್ಯೆ ಮಾಡಿಕೊಳ್ಳಲೆಂದು ತಾಯಿ ತಂದಿಟ್ಟಿದ್ದ ಐಸ್‍ಕ್ರೀಂ ಸೇವಿಸಿ ಆಕೆಯ ಮಗ ಹಾಗೂ ಸಹೋದರಿ ಮೃತಪಟ್ಟ ವಿಲಕ್ಷಣ ಘಟನೆ ಕಾಸರಗೋಡಿನ ಕಾಂಞಗಾಡ್ ನಲ್ಲಿ ನಡೆದಿದೆ.

    ಮೃತ ದುರ್ದೈವಿಗಳನ್ನು ಅದ್ವೈತ್(5) ಹಾಗೂ ದೃಶ್ಯ(19) ಎಂದು ಗುರುತಿಸಲಾಗಿದೆ. ಫೆ.11 ರಂದು ವರ್ಷಾ(25) ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಅಂತೆಯೇ ಅದಕ್ಕಾಗಿಯೇ ತಂದಿದ್ದ ಐಸ್‍ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿ ಸ್ವಲ್ಪ ತಿಂದು ಉಳಿದಿದ್ದನ್ನು ಅಲ್ಲಿಯೇ ಟೇಬಲ್ ಮೇಲಿಟ್ಟು ಸ್ನಾನಕ್ಕೆ ತೆರಳಿದ್ದಳು. ಈ ವೇಳೆ ಅದನ್ನು ನೋಡಿದ ಅದ್ವೈತ್ ಹಾಗೂ ದೃಶ್ಯ ತಮಗಾಗಿ ಇಟ್ಟಿದ್ದೆಂದು ಐಸ್‍ಕ್ರೀಂ ಸೇವಿಸಿದ್ದಾರೆ. ಬಳಿಕ ಎಲ್ಲರೂ ಒಟ್ಟಿಗೆ ಕೂತು ಬಿರಿಯಾನಿ ತಿಂದು ಮಲಗಿದ್ದರು.

    ಇತ್ತ ಮಲಗಿದ ಸ್ವಲ್ಪ ಸಮಯದ ನಂತರ ಅದ್ವೈತ್ ಹಾಗೂ ದೃಶ್ಯ ವಾಂತಿ ಮಾಡಲು ಶುರು ಮಾಡಿದ್ದರು. ಕೂಡಲೇ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಫೆ.12ರಂದು ಮುಂಜಾನೆ ಅದ್ವೈತ್ ಮೃತಪಟ್ಟರೆ, ಫೆ.24ರಂದು ದೃಶ್ಯ ಸಾವನ್ನಪ್ಪಿದ್ದಳು. ಮೊದಲು ಬಿರಿಯಾನಿ ತಿಂದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಅಂದುಕೊಂಡಿದ್ದರು. ಆಧರೆ ಮರಣೋತ್ತರ ಪರೀಕ್ಷೆಯ ವೇಳೆ ಇಲಿ ಪಾಷಾಣ ತಿಂದಿರುವ ವಿಚಾರ ಬೆಳಕಿಗೆ ಬಂದಿದೆ.

    ವಿಷಮಿಶ್ರಿತ ಐಸ್ ಕ್ರೀಂ ಅನ್ನು ವರ್ಷಾ ಹೆಚ್ಚು ತಿಂದಿರಲಿಲ್ಲ. ಹೀಗಾಗಿ ಆಕೆಗೆ ಏನೂ ಅಪಾಯ ಸಂಭವಿಸಿಲ್ಲ. ಇತ್ತ ಮಗ ಹಾಗೂ ಸಹೋದರಿ ಅನಾರೋಗ್ಯಕ್ಕೀಡಾದರೂ ವರ್ಷಾ ಈ ವಿಚಾರ ಬಹಿರಂಗಪಡಿಸಿರಲಿಲ್ಲ. ಆದರೆ ಸಹೋದರಿಯ ಮರಣೋತ್ತರ ಪರೀಕ್ಷೆಯ ವೇಳೆ ಇಲಿ ಪಾಷಾಣ ವಿಚಾರ ಬೆಳಕಿಗೆ ಬಂದ ನಂತರ ತಾನು ಐಸ್ ಕ್ರೀಂ ನಲ್ಲಿ ಇಲಿಪಾಷಾಣ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.

    ಒಟ್ಟಿನಲ್ಲಿ ತಾನು ಆತ್ಮಹತ್ಯೆಗೆ ಮಾಡಿಕೊಳ್ಳಲು ನಿರ್ಧರಿಸಿ ಮಗ ಹಾಗೀ ಸಹೋದರಿ ಪ್ರಾಣ ಬಿಟ್ಟಿದ್ದಾರೆ. ಆದರೆ ವರ್ಷಾ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸದ್ಯ ವರ್ಷಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.