Tag: rat

  • ಸ್ವಚ್ಛ ದೇಶವೆಂದು ಕರೆಯಲ್ಪಟ್ಟ ಬ್ರಿಟನ್‌ನಲ್ಲಿ ಇಲಿಗಳ ಕಾಟ

    ಸ್ವಚ್ಛ ದೇಶವೆಂದು ಕರೆಯಲ್ಪಟ್ಟ ಬ್ರಿಟನ್‌ನಲ್ಲಿ ಇಲಿಗಳ ಕಾಟ

    ಲಂಡನ್:‌ ಯುರೋಪಿಯನ್ ದೇಶಗಳನ್ನು ಸ್ವಚ್ಛ ದೇಶಗಳೆಂದು ಪರಿಗಣಿಸಲಾಗಿದೆ. ಅದರಲ್ಲಿ ಬ್ರಿಟನ್ (Britain) ಕೂಡ ಒಂದಾಗಿದೆ. ಆದರೆ ಇಲಿಗಳ ಸಂಖ್ಯೆ ಹೆಚ್ಚಾಗಿದ್ದು, ಸದ್ಯ ಇಲ್ಲಿನ ಸ್ವಚ್ಛತೆಯನ್ನೇ ಪ್ರಶ್ನಿಸುವಂತಾಗಿದೆ.

    ಹೌದು. ಬ್ರಿಟನ್ ತನ್ನ ದೇಶದಲ್ಲಿನ ಹೊಲಸುಗಳಿಂದ ತೊಂದರೆಗೀಡಾಗಿದೆ. ಇದರಿಂದಾಗಿ ಇಲ್ಲಿ ಇಲಿಗಳ (Rat) ಕಾಟ ಜಾಸ್ತಿಯಾಗಿದೆ. ಈ ಇಲಿಗಳು ಸಾಮಾನ್ಯ ಇಲಿಗಳಂತಿಲ್ಲ, ಬದಲಾಗಿ ಗಾತ್ರದಲ್ಲಿ ಅವುಗಳು ದೊಡ್ಡದಾಗಿವೆ. ಏಕಾಏಕಿ ಇಲಿಗಳ ಕಾಟ ಹೆಚ್ಚಾದ ಕಾರಣ ಬ್ರಿಟಿಷರು ಕಂಗಾಲಾಗಿದ್ದಾರೆ. ಇಲ್ಲಿನ ಜನರ ಸಂಖ್ಯೆಗಿಂತ ಇಲಿಗಳ ಸಂಖ್ಯೆ 25 ಕೋಟಿಗೆ ತಲುಪಿದೆ. ಏಕಾಏಕಿ ಇಷ್ಟೊಂದು ಇಲಿಗಳು ಬಂದಿರುವುದು ಜನರಲ್ಲಿ ಆತಂಕ ಮೂಡಿಸಿದೆ.

    ಇಲಿಗಳ ಹೆಚ್ಚಳಕ್ಕೆ ಕಾರಣವೇನು?: ಸಮಯಕ್ಕೆ ಸರಿಯಾಗಿ ಕಸದ ತೊಟ್ಟಿಗಳ ಸಂಗ್ರಹ ವಿಳಂಬವೇ ಇಲಿಗಳ ಸಂಖ್ಯೆ ಏಕಾಏಕಿ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದೆ. ಸ್ವಚ್ಛತೆಯ ಕೊರತೆಯಿಂದ ಇಲಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಇಲಿಗಳು ಈಗ ಬ್ರಿಟನ್‌ನ ಮನೆಗಳ ಮೇಲೆ ದಾಳಿ ಮಾಡುತ್ತಿವೆ. ಬ್ರಿಟಿಷ್ ಪೆಸ್ಟ್ ಕಂಟ್ರೋಲ್ ಅಸೋಸಿಯೇಷನ್ ​​(BPCA) ಪ್ರಕಾರ, ಕಳೆದ 90 ದಿನಗಳಲ್ಲಿ ಈ ಸಮಸ್ಯೆಗಳನ್ನು ಎದುರಿಸಲು ಸಹಾಯ ಪಡೆಯುವವರ ಸಂಖ್ಯೆಯು ಹೆಚ್ಚಾಗಿದೆ.

    ಬ್ರಿಟನ್‌ನಲ್ಲಿ ಸುಮಾರು 25 ಕೋಟಿ ಇಲಿಗಳು ವಾಸಿಸುತ್ತವೆ ಎಂದು ನಂಬಲಾಗಿದೆ. ಇದೀಗ ಚಳಿಯಿಂದಾಗಿ ಇಲಿಗಳು ಮನೆಗಳ ಒಳಗೆ ನುಗ್ಗಲು ಆರಂಭಿಸಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇದನ್ನೂ ಓದಿ: ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಾಯಕರ ಕೆಲಸವಲ್ಲ: ಮೋದಿ ವಿರುದ್ಧ ದೀದಿ ವಾಗ್ದಾಳಿ

    ಈ ಸಂಬಂಧ BPCA ಯ ತಾಂತ್ರಿಕ ವ್ಯವಸ್ಥಾಪಕಿ ನಟಾಲಿ ಬಂಗಯ್ ಪ್ರತಿಕ್ರಿಯಿಸಿ,  ಚಳಿಗಾಲದಲ್ಲಿ ಇಲಿಗಳ ಹಾವಳಿ ಹೆಚ್ಚಾಗುವುದು ಸಾಮಾನ್ಯ, ಇಲಿಗಳು ಆಹಾರ ಪದಾರ್ಥಗಳನ್ನು ಹುಡುಕಿಕೊಂಡು ಬೆಚ್ಚಗಿನ ಮತ್ತು ಶುಷ್ಕ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತವೆ. ಹಬ್ಬ ಹರಿದಿನಗಳಲ್ಲಿ ಕಸದ ತೊಟ್ಟಿಗಳನ್ನು ಸಂಗ್ರಹಿಸದಿರುವುದು. ಹಾಗೂ ಕೆಲವೊಮ್ಮೆ ಡಸ್ಟ್‌ಬಿನ್‌ಗಳು ಸಂಪೂರ್ಣ ಭರ್ತಿಯಾದ ಬಳಿಕ ಜನರು ತಮ್ಮ ಕಸವನ್ನು ಅದರ ಬದಿಯಲ್ಲಿ ಇಡುತ್ತಾರೆ ಇದು ಕೂಡ ಕಾರಣವಾಗುತ್ತದೆ ಎಂದು ಹೇಳಿದರು.

  • ಸತ್ತ ಇಲಿ ಬಾಯಲ್ಲಿಟ್ಟುಕೊಂಡು ಕಾವೇರಿ ನೀರು ಹರಿಸುವಂತೆ ತಮಿಳುನಾಡಿನ ರೈತರು ಪ್ರತಿಭಟನೆ

    ಸತ್ತ ಇಲಿ ಬಾಯಲ್ಲಿಟ್ಟುಕೊಂಡು ಕಾವೇರಿ ನೀರು ಹರಿಸುವಂತೆ ತಮಿಳುನಾಡಿನ ರೈತರು ಪ್ರತಿಭಟನೆ

    ಚೆನ್ನೈ: ಕಾವೇರಿ ನೀರಿಗಾಗಿ (Cauvery Water) ಕರ್ನಾಟಕ (Karnataka) ಮತ್ತು ತಮಿಳುನಾಡು (Tamilnadu) ಎರಡೂ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಕರ್ನಾಟಕ ಸರ್ಕಾರದ ವಿರುದ್ಧ ಹಾಗೂ ಕಾವೇರಿ ನೀರು ಹರಿಸುವಂತೆ ಒತ್ತಾಯಿಸಿ ತಮಿಳುನಾಡು ರೈತರು ವಿನೂತನವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಸತ್ತ ಇಲಿಯನ್ನು ಬಾಯಲ್ಲಿಟ್ಟುಕೊಂಡು ರೈತರು ಈ ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಆದರೂ ಪಟ್ಟು ಬಿಡದ ತಮಿಳನ್ನರು ಮತ್ತೆ ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ.

    ಇತ್ತ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಇಂದು ಬೆಂಗಳೂರು ಬಂದ್‍ಗೆ ಕರೆ ನೀಡಲಾಗಿದೆ. ವಿವಿಧ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿದ್ದು, ಪ್ರತಿಭಟನೆಯಲ್ಲಿ ತೊಡಗಿವೆ. ನಮಗೇ ಕುಡಿಯಲು ನೀರಿಲ್ಲದಿದ್ದು, ತಮಿಳುನಾಡಿಗೆ ಯಾಕೆ ಹರಿಸುತ್ತೀರಿ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bengaluru Bandh: ಬಂದೋಬಸ್ತ್‌ನಲ್ಲಿದ್ದ ಪೊಲೀಸರಿಗೆ ಕೊಟ್ಟ ಟಿಫನ್‍ನಲ್ಲಿ ಇಲಿ!

    Bengaluru Bandh: ಬಂದೋಬಸ್ತ್‌ನಲ್ಲಿದ್ದ ಪೊಲೀಸರಿಗೆ ಕೊಟ್ಟ ಟಿಫನ್‍ನಲ್ಲಿ ಇಲಿ!

    ಬೆಂಗಳೂರು: ತಮಿಳುನಾಡಿಗೆ (Tamilnadu) ಕಾವೇರಿ ನೀರು (Cauvery Water Dispute) ಹರಿಸುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಇಂದು ಬಂದ್‍ಗೆ ಕರೆ ನೀಡಿವೆ. ಹೀಗಾಗಿ ಪೊಲೀಸ್ ಬಂದೋಬಸ್ತ್‍ಗೆ ನಿಯೋಜಿಸಿದ ಪೊಲೀಸರಿಗೆ ಅಸಮರ್ಪಕ ಆಹಾರವನ್ನು ಪೂರೈಕೆ ಮಾಡಿರುವುದು ಬಯಲಾಗಿದೆ.

    ಹೌದು. ಯಶವಂತಪುರ ಸಂಚಾರಿ ಪೊಲೀಸರಿಗೆ ನೀಡಿದ ಬೆಳಗ್ಗಿನ ಉಪಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಉಪಹಾರವೆಂದು ರೈಸ್ ಬಾತ್ (Rice Bath) ನೀಡಲಾಗಿದೆ. ಈ ವೇಳೆ ಪೊಲೀಸ್ ಆ ಪೊಟ್ಟಣವನ್ನು ಓಪನ್ ಮಾಡಿದಾಗ ಇಲಿ ಕಂಡು ಗಾಬರಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರು ಬಂದ್ ಎಫೆಕ್ಟ್- ಕೊನೆ ಕ್ಷಣದಲ್ಲಿ 13 ವಿಮಾನಗಳ ಹಾರಾಟ ರದ್ದು

    ಒಟ್ಟಿನಲ್ಲಿ ಬಂದೋಬಸ್ತ್ ನಲ್ಲಿ ನಿರತರಾಗಿದ್ದ ಪೊಲೀಸರಿಗೆ ‘ಇಲಿ’ ಉಪಹಾರ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಕ್ನೋದಲ್ಲಿ ಇಲಿ ಹಿಡಿಯೋದಕ್ಕೆ 69 ಲಕ್ಷ ರೂ. ಖರ್ಚು ಮಾಡಿದ ರೈಲ್ವೆ

    ಲಕ್ನೋದಲ್ಲಿ ಇಲಿ ಹಿಡಿಯೋದಕ್ಕೆ 69 ಲಕ್ಷ ರೂ. ಖರ್ಚು ಮಾಡಿದ ರೈಲ್ವೆ

    ಲಕ್ನೋ: ಉತ್ತರ ರೈಲ್ವೆಯ ಲಕ್ನೋ (Lucknow) ವಿಭಾಗವು ಇಲಿಗಳನ್ನ ಹಿಡಿಯಲು ಬರೋಬ್ಬರಿ 69.5 ಲಕ್ಷ ರೂ. ಖರ್ಚು ಮಾಡಿರುವ ಸುದ್ದಿ ಬೆಳಕಿಗೆ ಬಂದಿದೆ. ಈ ಸಂಬಂಧ ಆರ್‌ಟಿಐಗೆ ರೈಲ್ವೆ (Railway) ವಿಭಾಗ ಮಾಹಿತಿ ನೀಡಿದೆ.

    2020 ಮತ್ತು 2022 ರ ಅವಧಿಯಲ್ಲಿ 69 ಲಕ್ಷ ರೂ. ಮೊತ್ತವನ್ನು ಇಲಿ ಹಿಡಿಯುವುದಕ್ಕೆ ರೈಲ್ವೆ ಖರ್ಚು ಮಾಡಿದೆ. ಸುದ್ದಿ ಬಹಿರಂಗವಾಗುತ್ತಿದ್ದಂತೆ ಭಾರತೀಯ ರೈಲ್ವೆ ವಿರುದ್ಧ ಕಾಂಗ್ರೆಸ್‌ ಹೇಳಿಕೆ ನೀಡಿದೆ. ಭಾರತೀಯ ರೈಲ್ವೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: ಪ್ರಧಾನಿ ಜನ್ಮದಿನದಂದು ದೇಶದ ಮೊದಲ ಲಿಂಗತ್ವ ಅಲ್ಪಸಂಖ್ಯಾತರ ವಾರ್ಡ್ ತೆರೆದ  ಆರ್‌ಎಂಎಲ್ ಆಸ್ಪತ್ರೆ

    ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಲಕ್ನೋ ವಿಭಾಗವು, ಎರಡು ವರ್ಷಗಳಲ್ಲಿ ಇಲಿಗಳನ್ನು ಹಿಡಿಯುವುದಕ್ಕೆ ಸುಮಾರು 69 ಲಕ್ಷ ರೂ. ಖರ್ಚು ಮಾಡಲಾಗಿದೆ. ಈ ಅವಧಿಯಲ್ಲಿ 168 ಇಲಿಗಳನ್ನು ಹಿಡಿಯಲಾಗಿದೆ. ಒಂದು ಇಲಿ ಹಿಡಿಯುವುದಕ್ಕೆ ಸರಿಸುಮಾರು 41,000 ರೂ. ವೆಚ್ಚವಾಗಿದೆ ಎಂದು ಮಾಹಿತಿ ನೀಡಿದೆ.

    ಈ ಕುರಿತು ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಅವರು, ದೇಶದೆಲ್ಲೆಡೆ ‘ಭ್ರಷ್ಟಾಚಾರದ ಇಲಿಗಳು’ ಪ್ರತಿದಿನ ಜನರ ಜೇಬನ್ನು ಕಿತ್ತೊಗೆಯುತ್ತಿವೆ. ಬಿಜೆಪಿ ಆಡಳಿತದಲ್ಲಿ ಜನರು ಪ್ರತಿದಿನ ವಿಪರೀತ ಹಣದುಬ್ಬರದಿಂದ ಬಳಲುತ್ತಿದ್ದಾರೆ. ರೈಲು ಪ್ರಯಾಣ ದರದಲ್ಲಿ ವೃದ್ಧರಿಗೆ ನೀಡುತ್ತಿದ್ದ ರಿಯಾಯಿತಿಯನ್ನೂ ಕಬಳಿಸಿದೆ. ಹೀಗಿದ್ದೂ, ನಾನು ತಿನ್ನುವುದಿಲ್ಲ.. ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಾರೆಂದು ಬಿಜೆಪಿ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಖ್ಯಾತ ಲೇಖಕಿ, ನವೀನ್ ಪಟ್ನಾಯಕ್ ಸಹೋದರಿ ವಿಧಿವಶ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಲಿಗಳು ಅಕ್ಕಿ ತಿನ್ನಲಿ ಅಂತಾ ಬಿಜೆಪಿಯವರು ಗೋದಾಮುಗಳಲ್ಲಿ ಮುಚ್ಚಿಟ್ಟಿದ್ದಾರೆ: ಈಶ್ವರ್ ಖಂಡ್ರೆ

    ಇಲಿಗಳು ಅಕ್ಕಿ ತಿನ್ನಲಿ ಅಂತಾ ಬಿಜೆಪಿಯವರು ಗೋದಾಮುಗಳಲ್ಲಿ ಮುಚ್ಚಿಟ್ಟಿದ್ದಾರೆ: ಈಶ್ವರ್ ಖಂಡ್ರೆ

    ಬೀದರ್: ಇರುವ ಅಕ್ಕಿಯನ್ನು ಇಲಿಗಳು ತಿನ್ನಲಿ ಎಂದು ಬಿಜೆಪಿಯವರು (BJP) ಗೋದಾಮುಗಳಲ್ಲಿ ಮುಚ್ಚಿ ಇಟ್ಟಿದ್ದಾರೆ. ಇದು ಬಿಜೆಪಿಯ ಅಕ್ಕಿ (Rice) ರಾಜಕಾರಣವಲ್ಲದೆ ಮತ್ತೇನು ಎಂದು ಸಚಿವ ಈಶ್ವರ್ ಖಂಡ್ರೆ (Eshwar Khandre) ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಬಿದರ್‍ನಲ್ಲಿ ಮಾತನಾಡಿದ ಅವರು, ನಾವು ಅಕ್ಕಿ ಕೊಡುತ್ತೇವೆ. ಆದರೆ ಬಿಜೆಪಿಗೆ ಯಾಕೆ ಹೊಟ್ಟೆ ಕಿಚ್ಚು, ಸೋತ ಹತಾಶಾ ಭಾವನೆಯಲ್ಲಿ ಕಾಂಗ್ರೆಸ್ (Congress) ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಟಾಂಗ್ ನೀಡಿದ್ರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ, ಅದರ ಬುದ್ಧಿ ಎರಡೂ ಹ್ಯಾಕ್: ಪ್ರಲ್ಹಾದ್ ಜೋಶಿ

    ರಾಜ್ಯದಲ್ಲೇ 7 ಲಕ್ಷ ಟನ್ ಅಕ್ಕಿ ದಾಸ್ತಾನು ಇದ್ದು, ಈ ಅಕ್ಕಿಯನ್ನು ಏನು ಮಾಡುತ್ತಾರೆ?. ಅಕ್ಕಿ ಇದ್ದರೂ ನೀಡದೆ ನಮ್ಮ ಅನ್ನಭಾಗ್ಯಕ್ಕೆ ಬಿಜೆಪಿ ನಾಯಕರು ಅಡೆತಡೆ ಮಾಡುತ್ತಿದ್ದಾರೆ. ಮೂರು ತಿಂಗಳಿನಲ್ಲಿ ಓಪನ್ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡಿ ಜನರಿಗೆ ಅಕ್ಕಿ ಕೊಡುತ್ತೇವೆ. ಎಲ್ಲಿವರೆಗೆ ಅಕ್ಕಿ ವ್ಯವಸ್ಥೆ ಆಗಲ್ವೋ ಅಲ್ಲಿವರೆಗೆ ನಾವು ಜನರಿಗೆ ಹಣ ನೀಡುತ್ತೇವೆ ಎಂದರು.

    ಅಕ್ಕಿ ವಿಷಯದಲ್ಲಿ ಬಿಜೆಪಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು ಬಿಜೆಪಿ ಒಂದೇ ಬಂದು ಭರವಸೆಗಳನ್ನು ಈಡೇರಿಸಿಲ್ಲ. 15 ಲಕ್ಷ ಅಕೌಂಟಿಗೆ ಹಾಕಿದ್ರಾ..?, 2 ಕೋಟಿ ಉದ್ಯೋಗ ಕೋಟ್ರಾ..?, ಮನೆ ಇಲ್ಲದವರಿಗೆ ಸೂರು ಕೊಟ್ರಾ ಎಂದು ಖಂಡ್ರೆ ಬಿಜೆಪಿಯನ್ನು ಪ್ರಶ್ನಿಸಿದರು.

    ಬಿಜೆಪಿ ನಾಯಕರು ಒಳ ಒಳಗೆ ಅವರೇ ಕಿತ್ತಾಟ, ಕಚ್ಚಾಟ ಮಾಡಿಕೊಳ್ಳುತ್ತಿದ್ದು, 100 ಬಣಗಳು ಇದೆಯಾ ಎಂದು ನೀವೇ ಹೇಳಬೇಕು ಎಂದು ಖಂಡ್ರೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈ ಇಲಿಗೆ ತಾಯಿ ಇಲ್ಲ.. ಇಬ್ಬರು ತಂದೆಯಂದಿರಂತೆ – ಸಲಿಂಗಿಗಳಿಂದ ಜನಿಸುತ್ತವೆ ಜೈವಿಕ ಮಕ್ಕಳು!

    ಈ ಇಲಿಗೆ ತಾಯಿ ಇಲ್ಲ.. ಇಬ್ಬರು ತಂದೆಯಂದಿರಂತೆ – ಸಲಿಂಗಿಗಳಿಂದ ಜನಿಸುತ್ತವೆ ಜೈವಿಕ ಮಕ್ಕಳು!

    ಟೋಕಿಯೋ: ಜೀವಿಗಳ ಸಂತಾನೋತ್ಪತ್ತಿ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮೊದಲ ಬಾರಿಗೆ ಎರಡು ಗಂಡು ಇಲಿಗಳನ್ನು (Rat) ಉಪಯೋಗಿಸಿ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸಲಾಗಿದೆ.

    ಭವಿಷ್ಯದಲ್ಲಿ ಇಬ್ಬರು ಪುರುಷರು ಸೇರಿ ಮಕ್ಕಳನ್ನು ಹೇರಲು ಈ ವಿಧಾನ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದನ್ನೂ ಓದಿ: ಮಹಿಳಾ ಮಾಡೆಲ್‌ಗಳಿಗೆ ನಿಷೇಧ – ಒಳ ಉಡುಪು ಜಾಹೀರಾತಿಗೆ ಎಂಟ್ರಿ ಕೊಟ್ಟ ಪುರುಷರು

    ಪ್ರಕ್ರಿಯೆ ಹೇಗೆ?
    ಜಪಾನ್‌ನ ಕ್ಯುಷು, ಒಸಾಕಾ ವಿವಿಯ (Kyushu University) ತಜ್ಞರು ಮೊದಲು ಇಲಿಯ ಚರ್ಮ ಕಣಗಳನ್ನು ಸಂಗ್ರಹಿಸಿ, ಇಂಡ್ಯೂಸ್ಡ್ ಫ್ಲೋರಿಪೋಟೆಂಟ್ ಸ್ಟೆಮ್ ಕಣಗಳನ್ನು ಸೃಷ್ಟಿಸಲು ಈ ಚರ್ಮಕಣಗಳನ್ನು ಮೂಲ ಕಣಗಳ ಸ್ಥಿತಿಗೆ ಸೇರಿಸಿದ್ದರು. ನಂತರ ಅವುಗಳಿಂದ ವೈ ಕ್ರೋಮೋಸೋಮ್ಸ್ ಬೇರ್ಪಡಿಸಿ ಆ ಸ್ಥಾನದಲ್ಲಿ ಮತ್ತೊಂದು ಎಕ್ಸ್ ಕ್ರೋಮೋಸೋಮ್ಸ್ ಇರಿಸಿದರು.

    ಈ ಕಣಗಳನ್ನು ಅಂಡಾಣುಗಳನ್ನಾಗಿ ಪರಿವರ್ತಿಸಿ, ನಂತರ ಈ ಅಂಡಾಣುಗಳನ್ನು ಮತ್ತೊಂದು ಇಲಿಯ ವೀರ್ಯದಲ್ಲಿ ಸೇರಿಸಿದರು. ಈ ವಿಧಾನದಲ್ಲಿ 600 ಪಿಂಡಗಳು ಸೃಷ್ಟಿಯಾದವು. ಇವನ್ನು ಸರೋಗೇಟ್ ಇಲಿಗಳಲ್ಲಿ ಇರಿಸಿದ ನಂತ್ರ ಏಳು ಇಲಿ ಮರಿಗಳು ಹುಟ್ಟಿದ್ದು, ಅವು ಆರೋಗ್ಯವಾಗಿವೆ. ಈ ಇಲಿಗಳಿಗೆ ಜೀವಶಾಸ್ತ್ರದ ಲೆಕ್ಕದಲ್ಲಿ ಹೇಳೋದಾದ್ರೆ ಇಬ್ಬರು ತಂದೆ (ಬಯಾಲಾಜಿಕಲ್ ಫಾದರ್) (Biological Fathers) ಇಲಿಗಳಿವೆ ಎಂದು ಹೇಳಲಾಗಿದೆ.

    ಮಾನವ ಕಣಗಳ ಮೇಲೆಯೂ ಈ ವಿಧಾನವನ್ನು ಪ್ರಯೋಗ ಮಾಡುವ ಬಗ್ಗೆ ಇದೀಗ ಪರಿಶೀಲಿಸಲಾಗುತ್ತಿದೆ. ಭವಿಷ್ಯದಲ್ಲಿ ಇಬ್ಬರು ಪುರುಷರು ಸೇರಿಕೊಂಡು ಸಂತಾನೋತ್ಪತ್ತಿ ಮಾಡುವುದಕ್ಕೆ ಈ ವಿಧಾನ ಅವಕಾಶ ಮಾಡಿಕೊಡುವ ಸಂಭವ ಇದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪಾಕ್ ಇತಿಹಾಸ ಪುಸ್ತಕಗಳಲ್ಲಿ ಭಾರತ, ಹಿಂದೂ ವಿರೋಧಿ ನಿಲುವು – ಪಠ್ಯದಲ್ಲಿ ಗಾಂಧಿ ಹಿಂದೂ ನಾಯಕ ಎಂದು ಪರಿಚಯ

  • ಇಲ್ಲಿ ಇಲಿ ಕೊಲ್ಲುವವರಿಗೆ ತಿಂಗಳಿಗೆ 1.31 ಕೋಟಿ ರೂ. ಸಂಬಳ

    ಇಲ್ಲಿ ಇಲಿ ಕೊಲ್ಲುವವರಿಗೆ ತಿಂಗಳಿಗೆ 1.31 ಕೋಟಿ ರೂ. ಸಂಬಳ

    ನ್ಯೂಯಾರ್ಕ್: ಇಲಿ (Rat) ಕಾಟವನ್ನು ತಾಳಲಾರದೇ ನ್ಯೂಯಾರ್ಕ್ ಸಿಟಿ ಮೇಯರ್‌ರೊಬ್ಬರು ಇಲಿ ಕೊಲ್ಲಲು ಜನರನ್ನು ನೇಮಿಸುವುದಾಗಿ ಆಹ್ವಾನಿಸಿರುವ ಜಾಹಿರಾತನ್ನು ಹಾಕಿರುವ ವಿಚಿತ್ರ ಘಟನೆ ನಡೆದಿದೆ.

    ನ್ಯೂಯಾರ್ಕ್ (New York) ನಗರದಲ್ಲಿ ಸುಮಾರು 1.8 ಕೋಟಿ ಇಲಿಗಳು ಇವೆ ಎಂದು ವರದಿಯಾಗಿತ್ತು. ಇದಾದ ಬಳಿಕ, ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಇಲಿಯನ್ನು ಕೊಲ್ಲಲು ಜನರನ್ನು ನೇಮಿಸುವುದಾಗಿ ಜಾಹೀರಾತು ನೀಡಿದ್ದಾರೆ. ಅಷ್ಟೇ ಅಲ್ಲದೆ ಇವರಿಗೆ ಸಂಬಳವನ್ನು ನಿಗದಿ ಪಡಿಸಿದ್ದಾರೆ.

    ಜಾಹಿರಾತಿನಲ್ಲಿ ಏನಿದೆ?: ಇಲಿಯನ್ನು ಸಾಯಿಸಲು ಚಾಣಾಕ್ಷ್ಯತನವನ್ನು ಹೊಂದಿರಬೇಕು. ಆಯ್ಕೆಯಾದ ಸಿಬ್ಬಂದಿಯೂ ವಾರದ 7 ದಿನವೂ ಕೆಲಸ ಮಾಡಬೇಕು. ಜೊತೆಗೆ ದಿನದ 24 ಗಂಟೆಗಳ ಕೆಲಸ ಮಾಡಬೇಕು. ನಗರದ ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸಿ ಉತ್ಸಾಹದಿಂದ ಸಮಾಜದ ಕಡೆಗೆ ಸಕಾರಾತ್ಮಕ ದೃಷ್ಟಿಕೋನದಿಂದ ಕೆಲಸ ಮಾಡಬೇಕು. ಇದರಿಂದ 80 ಲಕ್ಷ ನಿವಾಸಿಗಳು ಇಲಿಗಳ ಸಮಸ್ಯೆಯಿಂದ ಪಾರಾಗಬಹುದು. ಒಂದು ವೇಳೆ ಇಲಿಯನ್ನು ಸಾಯಿಸಲು ಯಶಸ್ವಿಯಾದರೆ 1,70,000 ಡಾಲರ್‌ನ್ನು ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಅಂದರೆ ಬರೋಬ್ಬರಿ 1,38,41,663 ರೂ. ಹಣವಾಗಿದೆ. ಇದನ್ನೂ ಓದಿ: ಅಪಘಾತವಾದ್ರೂ ಆಸ್ಪತ್ರೆಗೆ ಸೇರಿಸಲು ಹಿಂದೇಟು – ನಿನ್ಯಾವ ಸೀಮೆ MLC ಎಂದು ರವಿಕುಮಾರ್‌ಗೆ ಕ್ಲಾಸ್

    ಎರಡು ವರ್ಷಗಳ ಹಿಂದಿನದಕ್ಕೆ ಹೋಲಿಸಿದರೆ ಈ ವರ್ಷ ನ್ಯೂಯಾರ್ಕ್‍ನಲ್ಲಿ ಇಲಿಗಳ ಕಾಟದ ಕುರಿತಾದ ದೂರುಗಳ ಸಂಖ್ಯೆ ಶೇ. 70ರಷ್ಟು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹೊಸ ಕಾನೂನನ್ನು ಪರಿಚಯಿಸಿದ್ದು, ನ್ಯೂಯಾರ್ಕ್ ನಿವಾಸಿಗಳು ರಾತ್ರಿ 8 ಗಂಟೆಯ ನಂತರ ಕಸವನ್ನು ತೆಗೆಯುವುದನ್ನು ನಿಷೇಧಿಸಲಾಗಿದೆ. ಸಂಜೆ 4 ಗಂಟೆಯ ನಂತರ ಯಾವುದೇ ಸಮಯದಲ್ಲಿ ಮನೆಗಳ ಹೊರಗೆ ಕಸ ಸುರಿಯಬಹುದು. ಇದನ್ನೂ ಓದಿ: ಪೊಲೀಸ್‌ ಕಾನ್‌ಸ್ಟೇಬಲ್‌ಗೆ ಕಪಾಳಮೋಕ್ಷ – ಬಿಜೆಪಿ ಮಾಜಿ ಸಂಸದೆ ವಿರುದ್ಧ ಎಫ್‌ಐಆರ್‌

    Live Tv
    [brid partner=56869869 player=32851 video=960834 autoplay=true]

  • 581 ಕೆಜಿ ಗಾಂಜಾ ತಿಂದ ಇಲಿಗಳು – ಮಥುರಾ ಪೊಲೀಸರಿಂದ ಮಾಹಿತಿ

    581 ಕೆಜಿ ಗಾಂಜಾ ತಿಂದ ಇಲಿಗಳು – ಮಥುರಾ ಪೊಲೀಸರಿಂದ ಮಾಹಿತಿ

    ಲಕ್ನೋ: ಮುಟ್ಟುಗೋಲು ಹಾಕಿಕೊಂಡು ಶೇರ್‌ಗಢ್ ಮತ್ತು ಹೈವೇ ಪೊಲೀಸ್ ಠಾಣೆಗಳ ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗಿದ್ದ ಸುಮಾರು 581 ಕಿಲೋಗ್ರಾಂಗಳಷ್ಟು ಗಾಂಜಾವನ್ನು ಇಲಿಗಳು (Rat) ತಿಂದಿವೆ ಎಂದು ಉತ್ತರ ಪ್ರದೇಶದ (Uttar Pradesh) ಮಥುರಾ ಪೊಲೀಸರು (Mathura Police) ವಿಶೇಷ ನಾರ್ಕೋಟಿಕ್ ಡ್ರಗ್ಸ್ ಮತ್ತಿ ಸೈಕೋಟ್ರೋಪಿಕ್ ಸಬ್‍ಸ್ಟೆನ್ಸ್ ಆಕ್ಟ್ (1985) (Psychotropic Substances Act) ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

    ಪ್ರಕರಣವೊಂದರಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು. ಈ ಆದೇಶಕ್ಕೆ ಪ್ರತಿಯಾಗಿ ಪೊಲೀಸರು ಈ ವರದಿ ಸಲ್ಲಿಸಿದ್ದಾರೆ. ಶೇರ್‌ಗಢ್ (Shergarh) ಪೊಲೀಸ್ ಠಾಣೆಯಲ್ಲಿ ಸುಮಾರು 386 ಕೆಜಿ ಗಾಂಜಾವನ್ನು ಸಂಗ್ರಹಿಸಲಾಗಿತ್ತು, ಹೈವೇ ಪೊಲೀಸ್ ಠಾಣೆಯಲ್ಲಿ (Highway police stations) 195 ಕೆಜಿ ಗಾಂಜಾವನ್ನು ಇಡಲಾಗಿತ್ತು. ಇದೀಗ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ನವೆಂಬರ್ 26 ರೊಳಗೆ ಸಾಕ್ಷ್ಯಗಳನ್ನು ಹಾಜರುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    court order law

     

    ಈ ಸಂಬಂಧ ಹೈವೇ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಛೋಟೆ ಲಾಲ್ ಪ್ರತಿಕ್ರಿಯಿಸಿ, ಅಕ್ಟೋಬರ್‌ನಲ್ಲಿ ಸುರಿದ ಮಳೆ ವೇಳೆ ಗೋದಾಮಿಗೆ ನೀರು ನುಗ್ಗಿದ್ದು, ಅಲ್ಲಿ ಸಂಗ್ರಹಿಸಲಾಗಿದ್ದ ಗಾಂಜಾ ಹಾಳಾಗಿದೆ ಎಂದು ತಿಳಿಸಿದ್ದಾರೆ. ಇದೇ ರೀತಿ ಶೇರ್‌ಗಢ್ ಠಾಣೆಯ ಇನ್ಸ್‌ಪೆಕ್ಟರ್ ಸೋನು ಕುಮಾರ್ ಅವರು ಕೂಡ ಕಾರಣ ನೀಡಿದ್ದಾರೆ. ಇದನ್ನೂ ಓದಿ: ಕದ್ರಿ ದೇವಸ್ಥಾನ ಮಾತ್ರವಲ್ಲ 6 ಸ್ಥಳಗಳು ಟಾರ್ಗೆಟ್‌ – ಮೊಬೈಲ್‌ನಲ್ಲಿ 6 ಜಾಗ ಸರ್ಚ್‌ ಮಾಡಿದ್ದ ಬಾಂಬರ್‌

    ಏತನ್ಮಧ್ಯೆ, ಹೆದ್ದಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಛೋಟೆ ಲಾಲ್ ಮಾತನಾಡಿ, ಅಕ್ಟೋಬರ್‍ನಲ್ಲಿ ಸುರಿದ ಮಳೆಯ ಸಮಯದಲ್ಲಿ ಗೋದಾಮಿಗೆ ನೀರು ನುಗ್ಗಿತ್ತು ಮತ್ತು ಅಲ್ಲಿ ಸಂಗ್ರಹಿಸಲಾಗಿದ್ದ ಗಾಂಜಾ ಹಾಳಾಗಿದೆ. ಇದೇ ರೀತಿಯ ಖಾತೆಯನ್ನು ಶೇರ್‌ಗಢ್ ಠಾಣೆಯ ಇನ್ಸ್‌ಪೆಕ್ಟರ್ ಸೋನು ಕುಮಾರ್ ಅವರು ಗಾಂಜಾ ಹಾಳಾಗಲು ಇದೇ ರೀತಿಯ ಕಾರಣಗಳನ್ನು ನೀಡಿದ್ದಾರೆ. ಇದನ್ನೂ ಓದಿ: ದೆವ್ವವಿಲ್ಲ ಎಂದು ಸಾರಲು ಸ್ಮಶಾನದಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ

    ಸದ್ಯ ಈ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿರುವ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮಥುರಾ ಎಸ್‍ಎಸ್‍ಪಿ ಅಭಿಷೇಕ್ ಅವರಿಗೆ ಇಲಿ ಕಾಟ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, 60 ಲಕ್ಷ ರೂಪಾಯಿ ಮೌಲ್ಯದ 581 ಕೆಜಿ ಗಾಂಜಾವನ್ನು ವಾಸ್ತವವಾಗಿ ಇಲಿಗಳೇ ಸೇವಿಸಿಸುವುದಕ್ಕೆ ಸೂಕ್ತ ಪುರಾವೆ ನೀಡುವಂತೆ ಆದೇಶಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾರ್ಸೆಲ್ ಆಹಾರದಲ್ಲಿ ಇಲಿಯ ತಲೆಬುರುಡೆ ಪತ್ತೆ- ಸಸ್ಯಾಹಾರಿ ರೆಸ್ಟೋರೆಂಟ್‍ಗೆ ಬೀಗ

    ಪಾರ್ಸೆಲ್ ಆಹಾರದಲ್ಲಿ ಇಲಿಯ ತಲೆಬುರುಡೆ ಪತ್ತೆ- ಸಸ್ಯಾಹಾರಿ ರೆಸ್ಟೋರೆಂಟ್‍ಗೆ ಬೀಗ

    ಚೆನ್ನೈ: ಪಾರ್ಸೆಲ್(Parcel) ತೆಗೆದುಕೊಂಡಿದ್ದ ಆಹಾರದಲ್ಲಿ ಇಲಿಯ(Rat) ತಲೆಬುರುಡೆ ಪತ್ತೆಯಾದ ಹಿನ್ನೆಲೆಯಲ್ಲಿ ಸಸ್ಯಾಹಾರಿ ರೆಸ್ಟೋರೆಂಟ್ ಅನ್ನು ಸೀಲ್ ಮಾಡಿರುವ ಘಟನೆ ತಮಿಳುನಾಡಿನಲ್ಲಿ(Tamil Nadu) ನಡೆದಿದೆ.

    ತಮಿಳುನಾಡಿನ ತಿರುವಣ್ಣಾ ಮಲೈನ ಅರಣಿ ಪ್ರದೇಶದಲ್ಲಿರುವ ಸಸ್ಯಾಹಾರಿ ರೆಸ್ಟೋರೆಂಟ್‍ನಲ್ಲಿ(Vegetarian Restaurant) ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಆಹಾರ ಸುರಕ್ಷತಾ ಇಲಾಖೆಯವರು ರೆಸ್ಟೋರೆಂಟ್‍ನ ಪರವಾನಗಿಯನ್ನು(License) ರದ್ದುಗೊಳಿಸಲಾಗಿದೆ.

    ಆರ್. ಮುರುಳಿ ಎಂಬುವರು ಸಸ್ಯಾಹಾರಿ ರೆಸ್ಟೋರೆಂಟ್‍ನಿಂದ 100ಕ್ಕೂ ಹೆಚ್ಚು ಜನರಿಗೆ ಆಹಾರವನ್ನು(Food) ಆರ್ಡರ್ ಮಾಡಿದ್ದರು. ಇದನ್ನು ಆ ರೆಸ್ಟೋರೆಂಟ್ ಅವರ ಮನೆಗೆ ತಲುಪಿಸಿತ್ತು. ಇದಾದ ನಂತರ ಅಲ್ಲಿದ್ದ ಅತಿಥಿಗಳಲ್ಲಿ ಒಬ್ಬಾತನಿಗೆ, ಬೀಟ್‍ರೂಟ್‍ನಿಂದ ಮಾಡಿದ್ದ ತಿಂಡಿಯಲ್ಲಿ ಇಲಿಯ ತಲೆ ಬುರುಡೆ ಸಿಕ್ಕಿದೆ.

    ಇದರಿಂದಾಗಿ ಆ ಅಡುಗೆಯನ್ನು ಹೋಟೆಲ್‍ಗೆ ತೆಗೆದುಕೊಂಡು ಬಂದು ದೂರು ನೀಡಿದ್ದಾರೆ. ಆದರೆ ಆಡಳಿತ ಮಂಡಳಿ ಈ ದೂರನ್ನು ಸ್ವೀಕರಿಸಲು ನಿರಾಕರಿಸಿದೆ. ಅಷ್ಟೇ ಅಲ್ಲದೇ ಕೆಲಕಾಲ ವಾಗ್ವಾದ ನಡೆದಿದೆ. ಈ ಹಿನ್ನೆಲೆಯಲ್ಲಿ ಮುರುಳಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ- ಸದನದಲ್ಲಿ ಮಾಧುಸ್ವಾಮಿ ಗರಂ

    ಘಟನೆಗೆ ಸಂಬಂಧಿಸಿ ಆಹಾರ ಸುರಕ್ಷತಾ ಅಧಿಕಾರಿಯು ದೂರಿನ ಮೇರೆಗೆ ಪರಿಶೀಲನೆ ನಡೆಸಲು ಹೋಟೆಲ್‍ಗೆ ತೆರಳಿದ್ದಾರೆ. ಆದರೆ ಅಲ್ಲಿ ಇಲಿಗಳು ಓಡಾಡುತ್ತಿರುವುದು ಕಂಡುಬಂದಿದೆ. ಹೋಟೆಲ್‍ನವರು ಅಡುಗೆ ಮಾಡುವ ಮುನ್ನ ಯಾವುದೇ ಸುರಕ್ಷತಾ ಕ್ರಮವನ್ನು ಮುಂಜಾಗ್ರತೆಯಾಗಿ ತೆಗೆದುಕೊಂಡಿಲ್ಲ ಎಂಬ ವಿಷಯ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಪರವಾನಗಿಯನ್ನು ರದ್ದು ಮಾಡಲಾಗಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ವೈದ್ಯೆ ದುರ್ಮರಣ

    Live Tv
    [brid partner=56869869 player=32851 video=960834 autoplay=true]

  • ಗಣೇಶನ ಜೊತೆಗೆ ಈ ಊರಿನಲ್ಲಿ ನಡೆಯುತ್ತೆ ಮೂಷಿಕನಿಗೂ ವಿಶೇಷ ಪೂಜೆ

    ಗಣೇಶನ ಜೊತೆಗೆ ಈ ಊರಿನಲ್ಲಿ ನಡೆಯುತ್ತೆ ಮೂಷಿಕನಿಗೂ ವಿಶೇಷ ಪೂಜೆ

    ಕೊಪ್ಪಳ: ನಮ್ಮ ಜೀವನದಲ್ಲಿ ಯಾವುದೇ ವಿಘ್ನಗಳು ಬಾರದಿರಲಿ ಎಂದು ಜನರು ಗಣಪನನ್ನು ಪೂಜಿಸುತ್ತಾರೆ. ಆದರೆ ಕೊಪ್ಪಳದ ಊರೊಂದರಲ್ಲಿ ವಿಘ್ನೇಶನ ವಾಹನವಾಗಿರುವ ಇಲಿಗೂ ಒಂದು ದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

    ಹೌದು, ನೇಕಾರಿಕೆಯನ್ನೇ ಜೀವಾಳವಾಗಿಸಿಕೊಂಡಿರುವ ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಇಲಿರಾಯನ ಪೂಜೆ ಬಲು ಸಂಭ್ರಮದಿಂದ ನಡೆಸಲಾಗಿದೆ. ಗಣೇಶ ಪ್ರತಿಷ್ಠಾಪನೆಯ ಮರುದಿನ ಪ್ರತಿ ವರ್ಷ ಇಲಿಗೆ ಪೂಜೆ ಸಲ್ಲಿಸಲಾಗುತ್ತದೆ. ನೇಕಾರರು ಸೇರಿದಂತೆ ಬೇರೆ, ಬೇರೆ ಸಮುದಾಯದ ಜನರ ಮನೆಗಳಲ್ಲಿ ಮಗ್ಗಗಳು ಇರುವುದರಿಂದ ಎಲ್ಲರೂ ಇಲಿಗೆ ಪೂಜೆ ಸಲ್ಲಿಸುತ್ತಾರೆ. ಗಣೇಶ ಹಬ್ಬಕ್ಕಿಂತ ಹೆಚ್ಚು ಶ್ರದ್ಧಾಭಕ್ತಿಯಿಂದ ಇಲಿರಾಯನನ್ನು ಆರಾಧಿಸುತ್ತಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಅಪಘಾತ – ಇನ್ಸ್‌ಪೆಕ್ಟರ್ ದಂಪತಿಯಿಂದ ಕಿರಿಕ್

    ಚಿತ್ರಗಾರರ ಮನೆಯಲ್ಲಿ ತಯಾರಿಸಿದ ಮಣ್ಣಿನ ಇಲಿ ಮೂರ್ತಿಗಳನ್ನು ತಂದು ಪೂಜೆ ಮಾಡಲಾಗುತ್ತದೆ. ಮನೆಯಲ್ಲಿ ಓಡಾಡುವ ಇಲಿಗಳು ಮಗ್ಗಗಳ ನೂಲನ್ನು ಹಾಗೂ ಸೀರೆಗಳಿಗೆ ಹಾನಿ ಮಾಡದಿರಲಿ ಎಂಬ ಉದ್ದೇಶದೊಂದಿಗೆ ಈ ಪೂಜೆ ಮಾಡಲಾಗುತ್ತದೆ. ಅಲ್ಲದೇ ಹೀಗೆ ಪೂಜೆ ಮಾಡಿದರೆ ಇಲಿಗಳು ಕಾಟ ಕೊಡುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ಕಡುಬು, ಚಕ್ಕುಲಿ, ಉಂಡೆ, ಕರ್ಜಿಕಾಯಿ, ಸಂಡಿಗೆ, ಹಪ್ಪಳ ಸೇರಿ ವಿವಿಧ ಅಡುಗೆ ಮಾಡಿ ನೈವೇದ್ಯ ಅರ್ಪಿಸಲಾಗುತ್ತದೆ. ಇದನ್ನೂ ಓದಿ: ಪೋಕ್ಸೋ ಕೇಸ್‌ – ಸಾಕ್ಷ್ಯ ನಾಶ ಮಾಡಿದ್ರಾ ಮುರುಘಾ ಶ್ರೀ?

    ಗಣೇಶ ಹಬ್ಬ ಬಂತು ಅಂದರೆ ಭಾಗ್ಯನಗರದಲ್ಲಿ ಆಚರಣೆಗಳು ಹಲವು ರೂಪಗಳಲ್ಲಿ ಕಂಡು ಬರುತ್ತವೆ. ಒಂದೊಂದು ಆಚರಣೆಯ ಹಿಂದೆಯೂ ಒಂದೊಂದು ಅರ್ಥವಿರುತ್ತದೆ ಎಂಬುದಕ್ಕೆ ಇಲಿಗೂ ಪೂಜೆ ಸಲ್ಲಿಸುವ ಪದ್ಧತಿ ಉದಾಹರಣೆಯಾಗಿದೆ.

    Live Tv
    [brid partner=56869869 player=32851 video=960834 autoplay=true]