Tag: rashok

  • ರಾಜ್ಯದ ಅಭಿವೃದ್ಧಿಗಾಗಿ ತೈಲ ದರ ಹೆಚ್ಚಳ: ಪರಮೇಶ್ವರ್

    ರಾಜ್ಯದ ಅಭಿವೃದ್ಧಿಗಾಗಿ ತೈಲ ದರ ಹೆಚ್ಚಳ: ಪರಮೇಶ್ವರ್

    ಬೆಂಗಳೂರು: ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕು ಎಂಬ ಕಾರಣಕ್ಕೆ ತೈಲ ದರ ಹೆಚ್ಚಳ (Petrol price hike) ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (G.Parameshwar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಎಷ್ಟು ಬಾರಿ ತೈಲ ಬೆಲೆ ಏರಿಕೆ ಮಾಡಿತ್ತು ಎಂದು ಅವರು ಯೋಚನೆ ಮಾಡಬೇಕು. ಬಿಜೆಪಿ 14 ಬಾರಿ ಬೆಲೆ ಏರಿಕೆ ಮಾಡಿತ್ತು. ಪಕ್ಕದ ರಾಜ್ಯಗಳಿಗೆ ಹೊಲಿಕೆ ಮಾಡಿದ್ರೆ, ಈಗಲೂ ಕರ್ನಾಟಕದಲ್ಲಿ ಬೆಲೆ ಕಡಿಮೆಯೇ ಇದೆ. ಬೇರೆ ರಾಜ್ಯದಲ್ಲಿ ಬೆಲೆ ಇನ್ನೂ ಹೆಚ್ಚಿದೆ. ಗ್ಯಾರಂಟಿಯಿಂದಾಗಿ ಬೆಲೆ ಏರಿಕೆ ಮಾಡಿಲ್ಲ. ಸಮಯಕ್ಕೆ ತಕ್ಕನಾಗಿ ಬೆಲೆ ಏರಿಕೆ ಮಾಡಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: ದರ್ಶನ್ ಕೇಸ್‍ನಲ್ಲಿ ಯಾವುದೇ ಮೃದು ಧೋರಣೆ ಇಲ್ಲ: ಪರಮೇಶ್ವರ್

    ನಮ್ಮ ರಾಜ್ಯದಲ್ಲಿ ಸಂಪನ್ಮೂಲಗಳ ಕ್ರೂಢೀಕರಣ ಆಗಬೇಕಿದೆ. ಅದಕ್ಕಾಗಿ ಬೆಲೆ ಏರಿಕೆ ಮಾಡಲಾಗಿದೆ. ಗ್ಯಾರಂಟಿಗೊಸ್ಕರ ಬೆಲೆ ಏರಿಕೆ ಮಾಡಿದ್ದಾರೆ ಎಂದು ಹೇಳುವುದು ಸರಿಯಲ್ಲ. ನಾವು ಇಷ್ಟ ಬಂದ ಹಾಗೆ ತೈಲ ಬೆಲೆ ಏರಿಸಿಲ್ಲ. ಅಭಿವೃದ್ಧಿ ಮಾಡಲು ಹೆಚ್ಚು ಹಣ ಬೇಕು. ಅದಕ್ಕಾಗಿ ಮಾತ್ರ ಬೆಲೆ ಏರಿಕೆ ಮಾಡಿದ್ದೇವೆ ಎಂದಿದ್ದಾರೆ.

    ಇವತ್ತು ನಾನು ಒಂದು ಮಾತು ಹೇಳಿದ್ರೆ, ಶಾಶ್ವತವಾಗಿ ಅದೇ ಮಾತು ಉಳಿದು ಹೋಗುತ್ತಾ? ಸಮಯಕ್ಕೆ ತಕ್ಕನಾಗಿ ಮಾತುಗಳು ಬದಲಾಗುತ್ತವೆ. ನಾವು ಸಹ ಆಡಳಿತ ಮಾಡಬೇಕಲ್ವಾ? ಎಂದು ಅವರು ವಿಪಕ್ಷಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ರಾಜಧಾನಿಗೆ ಅಮರಾವತಿಯನ್ನೇ ಚಂದ್ರಬಾಬು ನಾಯ್ಡು ಆಯ್ದುಕೊಂಡಿದ್ದು ಏಕೆ..?

  • ಅಮಿತ್ ಶಾ ಚುನಾವಣೆ ಇದ್ದಾಗ ರಾಜ್ಯಕ್ಕೆ ಬಂದೇ ಬರ್ತಾರೆ: ಜಿ.ಪರಮೇಶ್ವರ್

    ಅಮಿತ್ ಶಾ ಚುನಾವಣೆ ಇದ್ದಾಗ ರಾಜ್ಯಕ್ಕೆ ಬಂದೇ ಬರ್ತಾರೆ: ಜಿ.ಪರಮೇಶ್ವರ್

    ಬೆಂಗಳೂರು: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ (Amit shah) ಅವರು ಚುನಾವಣೆ ಇದ್ದಾಗ ರಾಜ್ಯಕ್ಕೆ ಬಂದೇ ಬರುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (Parameshwara) ವ್ಯಂಗ್ಯವಾಡಿದ್ದಾರೆ.

    ಅಮಿತ್ ಶಾ ಅವರ ಮೈಸೂರು (Mysuru) ಪ್ರವಾಸ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಮಿತ್ ಶಾ ಚುನಾವಣೆ ಇದ್ದಾಗ ಬಂದೇ ಬರ್ತಾರೆ. ಪ್ರಧಾನಿಯದ್ದು ಇಷ್ಟರಲ್ಲೇ ಟಿಪಿ ಬರುತ್ತೆ. ಅವರು ಏನ್ ಮಾಡಬೇಕೋ ಮಾಡಲಿ, ನಾವೇನ್ ಮಾಡಬೇಕೋ ಮಾಡ್ತೀವಿ. ಸಂದರ್ಭ ಬಂದಾಗ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡ್ತೀವಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಯೂ ಟರ್ನ್ ಹೊಡೆಯುವ ಗಿರಾಕಿ ಅಲ್ಲ: ನಿಖಿಲ್ ಕುಮಾರಸ್ವಾಮಿ

    ನೂರು ನೋಟಿಸ್ ಕೊಟ್ಟರೂ ಹೆದರುವುದಿಲ್ಲ ಎಂಬ ಈಶ್ವರಪ್ಪ (Eshwarappa) ಹೇಳಿಕೆಗೆ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರನ್ನು ಹೆದರಿಸಲು ಯಾರೂ ಹೋಗಿಲ್ಲ. ಕಾನೂನಿನ ಪ್ರಕಾರ, ನೋಟೀಸ್ ಕೊಟ್ಟಿದ್ದೀವಿ. ಮೊದಲು ಅದಕ್ಕೆ ಸಮಜಾಯಿಷಿ ಕೊಡಲಿ. ಈಶ್ವರಪ್ಪ ಅವರು ಬಹಳ ದೊಡ್ಡವರು, ಹೆದರಿಸೋಕೆ ಆಗುತ್ತಾ? ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಅಳಿಯ-ಮಗಳ ಜಗಳದಲ್ಲಿ ಹತ್ಯೆಯಾದ ಅತ್ತೆ

    ಕಾರ್ಯಕರ್ತರಿಗೆ ನಿಗಮ ಮಂಡಳಿ ಹಂಚಿಕೆ ವಿಳಂಬ ವಿಚಾರದ ಬಗ್ಗೆ ಮಾತನಾಡಿ, ಆದಷ್ಟು ಬೇಗ ಮಾಡ್ತೀವಿ ಅಂತಾ ಹೇಳಿದ್ದಾರೆ. ನಾವು ಬೇಸರ ಪಟ್ಟಿದ್ದೆಲ್ಲ ಮುಗಿದು ಹೋಯ್ತು. ಸಿಎಂ ಮತ್ತು ಡಿಸಿಎಂ ಚರ್ಚೆ ಮಾಡಿದ್ದಾರೆ. ಅಂತಿಮಗೊಳಿಸಿದ್ದೀವಿ ಅಂತಾ ಸಹ ಹೇಳಿದ್ದಾರೆ. ನಾವು ಯಾರದ್ದೋ ಮನೆಯಲ್ಲಿ ತಿಂಡಿ ತಿನ್ನೋದೇ ತಪ್ಪಾ? ನಾವೆಲ್ಲ ಮುನಿಯಪ್ಪ ಮನೆಗೆ ಹೋಗಿ ತಿಂಡಿ ತಿಂದಿದ್ದೀವಿ. ಅವರ ಮನೆಗೆ ಹೋಗಿ ಲಗ್ನ, ಸಂಬಂಧ ಮಾಡೋಕೆ ಮಾತಾಡ್ತೀವಾ? ನಾಲ್ಕು ಜನ ಸೇರಿದ ಮೇಲೆ ರಾಜಕೀಯ ಮಾತಾಡ್ತೀವಿ. ಹೆಚ್ಚು ಸೀಟು ಗೆಲ್ಲೋಕೆ ನಾವು ಏನ್ ಮಾಡಬಹುದು ಅಂತಾ ಚರ್ಚೆ ಮಾಡಿದ್ದೀವಿ. ಅದಕ್ಕೆ ಬೇರೆ ಬಣ್ಣ ಬಳಿಯೋದು ಬೇಡ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಆಚಾರ್ಯ ಪ್ರಮೋದ್ ಕೃಷ್ಣಂ ಉಚ್ಛಾಟನೆ- ಕೈ ನಾಯಕ ಹೇಳಿದ್ದೇನು?

    ಇದೇ ವೇಳೆ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ರಾಜೀನಾಮೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ರಾಜೀನಾಮೆ ಕೊಟ್ಟಿರೋದು ವೈಯಕ್ತಿಕ ಎಂದು ಅವರು ಹೇಳಿದ್ದಾರೆ. ರಾಜೀನಾಮೆಯಲ್ಲಿ ಯಾವ ಆರೋಪ ಮಾಡಿಲ್ಲ. ಹೀಗಾಗಿ ರಾಜೀನಾಮೆ ಸ್ವೀಕರಿಸಬೇಕಲ್ವಾ?. ಪ್ರತಾಪ್ ಅವರ ರಾಜೀನಾಮೆ ಸ್ವೀಕಾರ ಆಗಿದೆ ಎಂದು ತಿಳಿಸಿದ್ದಾರೆ. ಕಮಿಷನ್ ಆರೋಪಕ್ಕೆ ಸಿಬಿಐ ತನಿಖೆಗೆ ಆರ್.ಅಶೋಕ್  (R.Ashok) ಆಗ್ರಹ ವಿಚಾರಕ್ಕೆ, ಅವರು ಇದ್ದಾಗ ನಾವು ಕೇಳಿದ್ದೀವಿ, ಅವರು ಕೊಟ್ಟಿರಲಿಲ್ಲ. ಅವರ ಕಾಲದಲ್ಲಿ ಪ್ರಧಾನಿಗೇ ಪತ್ರ ಬರೆದಿದ್ರು. ಆದರೂ ಸಿಬಿಐ ತನಿಖೆಗೆ ನೀಡಲಿಲ್ಲ. ಈಗ ಆಗ್ರಹ ಮಾಡುತ್ತಿದ್ದಾರೆ ಎಂದು ಆರ್. ಆಶೋಕ್‌ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ- ಮೈತ್ರಿ ನಾಯಕರ ಭೇಟಿ ಇಂದೇ ನಡೆಯುತ್ತಾ?

  • ಟ್ಯಾಕ್ಸ್ ವಿಚಾರದಲ್ಲಿ ನಿರಂತರವಾಗಿ ಕನ್ನಡಿಗರಿಗೆ ಅನ್ಯಾಯ: ಡಿ.ಕೆ.ಸುರೇಶ್

    ಟ್ಯಾಕ್ಸ್ ವಿಚಾರದಲ್ಲಿ ನಿರಂತರವಾಗಿ ಕನ್ನಡಿಗರಿಗೆ ಅನ್ಯಾಯ: ಡಿ.ಕೆ.ಸುರೇಶ್

    ಬೆಂಗಳೂರು: ತೆರಿಗೆ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯ ಅಗುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ (D.K.Suresh) ಹೇಳಿದ್ದಾರೆ.

    ಹಿಂದೂಗಳ ಟ್ಯಾಕ್ಸ್ ಹಿಂದೂಗಳಿಗೆ ಕೊಡಬೇಕು ಎಂಬ ಹರೀಶ್ ಪೂಂಜಾ (Harish Poonja) ಹೇಳಿಕೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಒಳ್ಳೆಯದು, ಒಬೊಬ್ಬರು ಒಂದೊಂದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರೂ ಮೌನವಾಗಿದ್ರು. ಇಂದು ಚರ್ಚೆ ವ್ಯಾಖ್ಯಾನ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿದೆ. ನಿರಂತರವಾಗಿ ಕರ್ನಾಟಕದ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಇದನ್ನೂ ಓದಿ:  ನಮ್ಮದು ಹೆದರುವ ಬ್ಲಡ್ ಅಲ್ಲ, ತಂಟೆಗೆ ಬಂದವರಿಗೆ ಸೆಟ್ಲ್ಮೆಂಟ್ ಆಗುತ್ತಿದೆ: ಡಿಕೆಶಿ

    ನಮ್ಮ ತೆರಿಗೆ ಪಾಲು ಎಷ್ಟಿದೆ ಎಂದು ವರದಿ ಮಾಡ್ತೀದ್ದೀರಾ. ಬೇರೆ ರಾಜ್ಯಕ್ಕೆ ಎಷ್ಟು ಟ್ಯಾಕ್ಸ್ ಕೊಡ್ತೀರಾ? ಕರ್ನಾಟಕ ರಾಜ್ಯಕ್ಕೆ ಎಷ್ಟು ತೆರಿಗೆ ಪಾಲು ಬರುತಿದೆ? ಯಾವೆಲ್ಲ ಯೋಜನೆಗಳು ಕರ್ನಾಟಕಕ್ಕೆ ಸಿಕ್ಕಿದೆ. ಎಷ್ಟು ವರ್ಷಗಳಿಂದ ಯೋಜನೆಗಳು ರಾಜ್ಯಕ್ಕೆ ಸಿಗುತ್ತಿದೆ? ಎಲ್ಲದರಲ್ಲೂ ತಡೆದುಕೊಳ್ಳಬೇಕಾ ನಾವು? ನ್ಯಾಷನಲ್ ಹೈವೇ ಜಾಸ್ತಿ ಆಗಿದೆ. ಯೋಜನೆ ತಡೆದಿದ್ದಾರೆ ಅಂದರೆ ಯಾರನ್ನು ಕೇಳಬೇಕು ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಮೋದಿಯವರ 10 ವರ್ಷ ರಾಜ್ಯಕ್ಕೆ ಅನ್ಯಾಯದ ಕಾಲ: ಸಿದ್ದರಾಮಯ್ಯ

    ನಾನೇನು ಭಾರತದ ವಿರೋಧಿ ಅಲ್ಲ. ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇನೆ. ನಾನು ಸಂವಿಧಾನ ಆಶಯದ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ದೇಶದ್ರೋಹಿ ಎಂದು ಕೊಲ್ಲುವ ಇಚ್ಛಾಶಕ್ತಿ ಇದ್ದರೆ ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ. ಈಶ್ವರಪ್ಪ  (Eshwarappa) ಅವರೇ ಖಂಡಿತ ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ ರೆಡಿಯಾಗಿ ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರ: ಸಿದ್ದರಾಮಯ್ಯ

    ನಮಗೆ 13 ಪೈಸೆ ಸಾಕು ಅಂದರೆ ಅದನ್ನೇ ಹೇಳಲಿ. ನಾವೂ ಉದ್ಯೋಗ ಕೊಡ್ತಿದ್ದೇವೆ, ಬದುಕು ಕೊಡ್ತಿದ್ದೇವೆ, ನೀರು ಕೊಡ್ತಿದ್ದೇವೆ. ತೆರಿಗೆಯಲ್ಲಿ ಆಗುತ್ತಿರುವ ವಂಚನೆ ಎಷ್ಟು ದಿನ ಸಹಿಸಲಿ. ಬೇಕಾದರೆ ಆರ್.ಅಶೋಕ್ (R.Ashok)  ಚರ್ಚೆಗೆ ಬರಲಿ ಮಾತಾಡೋಣ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:  ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಜಾರಿ: ಅಮಿತ್‌ ಶಾ ಘೋಷಣೆ

  • ರೌಡಿಶೀಟರ್ ಬೆತ್ತನಗೆರೆ ಶಂಕರ ಹೆಸರು ಬದಲಾಯಿಸಿಕೊಂಡು ಬಿಜೆಪಿ ಸೇರ್ಪಡೆ

    ರೌಡಿಶೀಟರ್ ಬೆತ್ತನಗೆರೆ ಶಂಕರ ಹೆಸರು ಬದಲಾಯಿಸಿಕೊಂಡು ಬಿಜೆಪಿ ಸೇರ್ಪಡೆ

    ಮೈಸೂರು: ರೌಡಿಶೀಟರ್ (Rowdy Sheeter) ಬೆತ್ತನಗೆರೆ ಸೀನನ ಸಹೋದರನಾದ ಬೆತ್ತನಗೆರೆ ಶಂಕರ ಹೆಸರು ಬದಲಾಯಿಸಿಕೊಂಡು ಬಿಜೆಪಿ ಸೇರ್ಪಡೆಯಾಗಿದ್ದಾನೆ ಅನ್ನೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

    ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಹಾಗೂ ಬಿಜೆಪಿ (BJP) ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ನೇತೃತ್ವದಲ್ಲಿ 2022ರ ಮೇ ತಿಂಗಳಲ್ಲಿ ಬೆತ್ತನಗೆರೆ ಶಂಕರ (Bettanagere Shankar), ನೆಲ್ಲೂರು ಶಂಕರೇಗೌಡ ಎಂದು ಬದಲಾಯಿಸಿಕೊಂಡು ಬಿಜೆಪಿ ಸೇರ್ಪಡೆಯಾಗಿದ್ದಾನೆ. ಇದನ್ನೂ ಓದಿ: ತನ್ನಿಂದಲೇ ವಂಶ ಬೆಳೆಯಲೆಂದು ಸೊಸೆಯ ಮೇಲೆ ಕಣ್ಣಿಟ್ಟ ಮಾವನ ಕೊಲೆʼ

    ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆಯ ಜಿಲ್ಲಾ ಪಂಚಾಯತಿ ಕ್ಷೇತ್ರದ ಆಕಾಂಕ್ಷಿಯಾಗಿದ್ದನು. ಇತ್ತೀಚೆಗೆ ಸಚಿವ ಆರ್.ಅಶೋಕ್ (R Ashok), ಹೆಚ್.ಡಿ ಕೋಟೆ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದಾಗಲೂ ಸ್ವಾಗತದ ಬೋರ್ಡ್ ಹಾಕಿದ್ದರು ಎಂದು ತಿಳಿದುಬಂದಿದೆ. ಇದನ್ನೂಓದಿ: ಸ್ಕ್ಯಾನಿಂಗ್ ಎಡವಟ್ಟು – ಮಗುವಿನ ಬುದ್ಧಿಮಾಂದ್ಯತೆಗೆ ಕಾರಣವಾದ ಡಯಾಗ್ನೋಸ್ಟಿಕ್ ಸೆಂಟರ್‌ಗೆ 15 ಲಕ್ಷ ರೂ. ದಂಡ

    ಇತ್ತೀಚೆಗೆ 30ಕ್ಕೂ ಹೆಚ್ಚು ಕೇಸ್‌ಗಳಲ್ಲಿ ರೌಡಿಶೀಟರ್ (Rowdy Sheeter) ಆಗಿದ್ದ ಸೈಲೆಂಟ್ ಸುನೀಲ್ ಬಿಜೆಪಿ ಪ್ರಮುಖರೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಅವರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಇದರಿಂದ ಬಿಜೆಪಿ ವಿರುದ್ಧ ಪ್ರತಿ ಪಕ್ಷಗಳು ಮುಗಿಬಿದ್ದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ್ದ ಬಿಜೆಪಿ ನಾಯಕರು ರೌಡಿಶೀಟರ್‌ಗಳಿಗೆ ಹಾಗೂ ಸಮಾಜಘಾತುಕ ಹಿನ್ನೆಲೆಯುಳ್ಳವರಿಗೆ ಪಕ್ಷ ಸೇರ್ಪಡೆಗೆ ಅವಕಾಶವಿಲ್ಲ ಎಂದು ಹೇಳಿದ್ದರು. ಈ ಬೆನ್ನಲ್ಲೇ ರೌಡಿಶೀಟರ್ ಹೆಸರು ಬದಲಾವಣೆ ಮಾಡಿಕೊಂಡು ಪಕ್ಷ ಸೇರಿಕೊಂಡಿರುವುದು ಪ್ರತಿಪಕ್ಷಗಳ ಟೀಕೆಗೆ ಆಹಾರವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯಸಭೆ ಚುನಾವಣೆ: 3 ಸ್ಥಾನ ಗೆಲ್ಲಲು ಬಿಜೆಪಿ ರಣತಂತ್ರ

    ರಾಜ್ಯಸಭೆ ಚುನಾವಣೆ: 3 ಸ್ಥಾನ ಗೆಲ್ಲಲು ಬಿಜೆಪಿ ರಣತಂತ್ರ

    ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ 3 ಸ್ಥಾನ ಗೆಲ್ಲಲು ಬಿಜೆಪಿ – ಕಾಂಗ್ರೆಸ್ ಕಸರತ್ತು ನಡೆಸುತ್ತಿವೆ. ಈ ಸಂಬಂಧ ಇಂದು ಸರಣಿ ಸಭೆ ನಡೆಸಿದ ಬಿಜೆಪಿ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಕಿಶನ್ ರೆಡ್ಡಿ, 3ನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ರಣತಂತ್ರ ರೂಪಿಸಿದ್ದಾರೆ.

    ಸಚಿವ ಆರ್.ಆಶೋಕ್ ಮೂಲಕ ಜೆಡಿಎಸ್, ಕಾಂಗ್ರೆಸ್ ಪಕ್ಷದ ಅಸಮಾಧಾನಿತರ ಮತ ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಸಚಿವ ಅಶೋಕ್ ಜೊತೆಗೆ ಕಿಶನ್ ರೆಡ್ಡಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ ಮನೆಯಲ್ಲೂ ಲಂಚ್ ಮೀಟಿಂಗ್ ನಡೆದಿದೆ. ಇದನ್ನೂ ಓದಿ: ಅಂಬೇಡ್ಕರ್ `ಸಂವಿಧಾನ ಶಿಲ್ಪಿ’ ಬಿರುದು ಕೈಬಿಟ್ಟ ರೋಹಿತ್ ಚಕ್ರತೀರ್ಥ ಸಮಿತಿ – ಎಲ್ಲೆಡೆ ಆಕ್ರೋಶ

    ಇನ್ನೂ ಕೆಪಿಸಿಸಿ ಅಧ್ಯಕ್ಷರು, ನಮ್ಮ ಪಕ್ಷಕ್ಕೆ ಆತ್ಮಸಾಕ್ಷಿಯ ಮತಗಳು ದಕ್ಕಲಿವೆ. ನಾವೇ ಗೆಲ್ಲೋದು ಎಂದಿದ್ದಾರೆ. ಇದೇ ಮಾತನ್ನು ಸಿದ್ದರಾಮಯ್ಯ ಕೂಡ ಹೇಳಿದ್ರು. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ಕೂಡ ನೀಡಿದ್ದಾರೆ.

    ಈ ಕುರಿತಂತೆ ಮಾತನಾಡಿರುವ ಸಚಿವ ಆರ್.ಅಶೋಕ್, 2-3ನೇ ಪ್ರಾಶಸ್ತ್ಯದ ಮತಗಳ ಆಧಾರದಲ್ಲಿ ಬಿಜೆಪಿ 3ನೇ ಸ್ಥಾನವನ್ನು ಸುಲಭವಾಗಿ ಗೆಲ್ಲಲಿದೆ. ಸಿಎಂ ಬೊಮ್ಮಾಯಿ ಕೂಡ ಕ್ರಾಸ್‌ವೋಟ್ ಸುಳಿವು ನೀಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಸಪೇಟೆಯಲ್ಲಿ 7.4 ಅಡಿ ಎತ್ತರದ ಪುನೀತ್ ಪ್ರತಿಮೆ ಅನಾವರಣ

    nirmala sithraman

    ನಮ್ಮ ಬಳಿ ಅಗತ್ಯ ಮತಗಳು ಇರೋದಕ್ಕಾಗಿಯೇ 3ನೇ ಅಭ್ಯರ್ಥಿ ಹಾಕಿದ್ದೇವೆ. ನೂರಕ್ಕೆ ನೂರರಷ್ಟು ನಮ್ಮ ಮೂರು ಅಭ್ಯರ್ಥಿಗಳು ಆಯ್ಕೆ ಆಗುತ್ತಾರೆ. ಈಗಾಗಲೇ ಅಭ್ಯರ್ಥಿಗಳನ್ನು ಗೆಲ್ಲಿಸಲು ನಮ್ಮ ನಾಯಕರೆಲ್ಲರೂ ಸೇರಿ ಫೀಲ್ಡಿಗೆ ಇಳಿದಿದ್ದೇವೆ. ನಿಜವಾಗಿಯೂ ಮತದಾನ ನಡೆಯೋದು ಓಟ್ ವ್ಯಾಲ್ಯೂ ಮೇಲೆ. 2ನೇ ಪ್ರಾಶಸ್ತ್ಯದ ಮತ, 3ನೇ ಪ್ರಾಶಸ್ತ್ಯ ಮತ ಮೌಲ್ಯಗಳ ಮೇಲೆ ಚುನಾವಣೆ ನಡೆಯೋದು. ನಮಗೆ 122 ಮತಗಳು ಇವೆ. ಸುಲಭವಾಗಿ ಗೆಲ್ಲುವ ವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಸಿದ್ದರಾಮಯ್ಯ ರಾಜೀನಾಮೆ ಕೊಡಲಿ: ಆರ್ ಅಶೋಕ್ ಆಗ್ರಹ

    ಸಿದ್ದರಾಮಯ್ಯ ರಾಜೀನಾಮೆ ಕೊಡಲಿ: ಆರ್ ಅಶೋಕ್ ಆಗ್ರಹ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕಂದಾಯ ಸಚಿವ ಆರ್ ಅಶೋಕ್ ಆಗ್ರಹಿಸಿದ್ದಾರೆ.

    ಇಂದು ರಾಜ್ಯ ಉಪಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಬಿಜೆಪಿಗೆ 12 ಸೀಟುಗಳು ಲಭಿಸಿವೆ. ಕಾಂಗ್ರೆಸ್ಸಿಗೆ 2 ಸೀಟು ಅಂತ ಹೇಳಲಾಗುತ್ತಿದ್ದು, ಅದೂ ಸಿಗೋದು ಡೌಟು. ಇದೇ ವೇಳೆ ಜೆಡಿಎಸ್ ಕರ್ನಾಟಕ ಭೂಪಟದಲ್ಲಿ ಕಾಣೆಯಾಗುತ್ತಿದೆ ಎಂದು ಹೇಳಿದರು.

    ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ. ಹೀಗಾಗಿ ಅವರು ಕೂಡಲೇ ರಾಜೀನಾಮೆ ಕೊಡಬೇಕು. ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಅವರನ್ನು ಕೆಳಗಿಳಿಸುವ ದೊಡ್ಡ ಪರ್ವವೇ ಆರಂಭವಾಗುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

  • ಟಿಪ್ಪು ಕಾಲದಲ್ಲಿರುತ್ತಿದ್ದರೆ ಅಬ್ದುಲ್ ಸಿದ್ದರಾಮಯ್ಯ ಆಗ್ತಿದ್ರು- ಅಶೋಕ್

    ಟಿಪ್ಪು ಕಾಲದಲ್ಲಿರುತ್ತಿದ್ದರೆ ಅಬ್ದುಲ್ ಸಿದ್ದರಾಮಯ್ಯ ಆಗ್ತಿದ್ರು- ಅಶೋಕ್

    ಬೆಂಗಳೂರು: ಟಿಪ್ಪು ಕಾಲದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಅವರನ್ನೂ ಮತಾಂತರ ಮಾಡುತ್ತಿದ್ದರು. ಈ ಮೂಲಕ ಸಿದ್ದರಾಮಯ್ಯ ಎಂಬ ಹೆಸರಿನ ಬದಲು ಅಬ್ದುಲ್ ಸಿದ್ದರಾಮಯ್ಯ ಆಗುತ್ತಿದ್ದರು ಎಂದು ಕಂದಾಯ ಸಚಿವ ಆರ್ ಅಶೋಕ್  ವಾಗ್ದಾಳಿ ನಡೆಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿನಲ್ಲಿ 1 ಲಕ್ಷ ಜನರನ್ನು ಮತಾಂತರ ಮಾಡಿದ್ದಾರೆ. ಹಾಗೆಯೇ ಮೇಲುಕೋಟೆಯಲ್ಲಿ ಈಗಲೂ ದೀಪಾವಳಿ ಆಚರಣೆ ಮಾಡಲ್ಲ. ಅಲ್ಲಿಯ ಜನರಿಗೆ ದೀಪಾವಳಿ ಕರಾಳ ದಿನವಾಗಿರುತ್ತದೆ. ಹಿಂದೂ ಅನ್ನೋದಕ್ಕೋಸ್ಕರ ಕೊಚ್ಚಿ ಚೆಂಡಾಡಿದ್ದಾರೆ. ಚಿತ್ರದುರ್ಗದಲ್ಲಿ ಒನಕೆ ಓಬವ್ವ ಇಂತಹ ನೂರಾರು ಹೆಸರುಗಳು ಇದೆ. ಅವರು ದೌರ್ಜನ್ಯ, ಅಕ್ರಮ ಎಸಗಿದ್ದಾರೆ ಎಂದರು.

    ಬಹಳಷ್ಟು ಮಹಾಪುರುಷರ ಇತಿಹಾಸವನ್ನು ಪಠ್ಯದಲ್ಲಿ ತಂದೇ ಇಲ್ಲ. ಪಠ್ಯದಲ್ಲಿ ಬೇಡದೇ ಇರೋರು ಸೇರಿಕೊಂಡಿದ್ದಾರೆ. ಟಿಪ್ಪು ಒಬ್ಬ ಮತಾಂಧ, ಆಕ್ರಮಣಕಾರಿಯಾಗಿದ್ದವನು ಹಾಗೂ ಹಿಂದೂ ದ್ವೇಷಿ. ಹೀಗಾಗಿ ಅವನ ಕುರಿತು ಪಠ್ಯ ಅಗತ್ಯ ಇಲ್ಲ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

    ಟಿಪ್ಪು ಪಠ್ಯ ಕುರಿತು ಸಮಿತಿ ರಚನೆ ಆಗಿದೆ. ಸಮಿತಿ ವರದಿ ಕೊಟ್ಟ ಬಳಿಕ ಶಿಕ್ಷಣ ಸಚಿವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪಠ್ಯದಲ್ಲಿ ಕಲಾಂ, ಶಿಶುನಾಳ ಶರೀಫ್, ಗಡಿನಾಡ ಗಾಂಧಿ ಖಾನ್ ಅಬ್ದುಲ್ ಗಫಾರ್ ಖಾನ್ ನಂತವರು ಬೇಕು. ಟಿಪ್ಪುವಿನಂತಹ ಮತಾಂಧರ ಬಗ್ಗೆ ನಮ್ಮ ಮಕ್ಕಳು ಕಲಿಯುವ ಅಗತ್ಯ ಇಲ್ಲ ಎಂದು ತಿಳಿಸಿದರು.

    ಇದೇ ವೇಳೆ ಮೆಡಿಕಲ್ ಕಾಲೇಜು ಜಟಾಪಟಿ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಮೆಡಿಕಲ್ ಕಾಲೇಜು ಕುರಿತು ವಾದ-ವಿವಾದ ಆಗಬಾರದಿತ್ತು. ಪ್ರತೀ ಜಿಲ್ಲಾ ಕೇಂದ್ರಕ್ಕೆ ಮೆಡಿಕಲ್ ಕಾಲೇಜು ಕೊಡುವ ಘೋಷಣೆಯನ್ನು ಮಾಡಿದ್ದೆವು. ನಂತರ ತಾಲೂಕು, ಹೋಬಳಿ ಕೇಂದ್ರಕ್ಕೆ ಕೊಡಬೇಕು. ಮೊದಲು ಜಿಲ್ಲೆಗೆ ಒಂದು ಕಾಲೇಜು ಕೊಡುವ ಪ್ರಕ್ರಿಯೆ ಮುಗಿಯಲಿ ಎಂದು ಹೇಳಿದರು.

    ಮೆಡಿಕಲ್ ಕಾಲೇಜಿಗೆ ಬಿಜೆಪಿಯಿಂದ ದ್ವೇಷದ ರಾಜಕಾರಣ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಅಶೋಕ್, ದ್ವೇಷ ಮಾಡೋದು ಒಳ್ಳೆಯದಲ್ಲ. ದ್ವೇಷ ಮಾಡಿ ಕೋಟೆ ಕಟ್ಟಿದವರು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ. ದ್ವೇಷ ಮಾಡೋದು ನಮ್ಮ ಪದ್ಧತಿ ಅಲ್ಲ. ಕಾಲೇಜು ನ್ಯಾಯವಾಗಿ ಎಲ್ಲಿ ಸೇರಬೇಕೋ ಅಲ್ಲಿಗೆ ಸೇರುತ್ತದೆ. ಜಿಲ್ಲಾ ಕೇಂದ್ರಕ್ಕೆ ಸೇರುವುದು ನ್ಯಾಯಯುತ ಎಂದರು.